ರಾಮಮಜನ್ಮಭೂಮಿಯ ಉತ್ಖನನದಲ್ಲಿ ಸಿಕ್ಕಿದ ಕೆಲವು ಐತಿಹಾಸಿಕ ಹಾಗೂ ವಾಸ್ತವಿಕ ಸತ್ಯಗಳು !

ಕರಿಂಗಮನ್ನು ಕುಝಿಯಲ್ ಮಹಮ್ಮದ

ಕರಿಂಗಮನ್ನು ಕುಝಿಯಲ್ ಮಹಮ್ಮದ ಇವರ ಪರಿಚಯ

ಸುಪ್ರಸಿದ್ಧ ಪುರಾತತ್ತ್ವಶಾಸ್ತ್ರಜ್ಞ ಕರಿಂಗಮನ್ನು ಕುಝಿಯಲ್ ಮಹಮ್ಮದರ ಜನ್ಮ ೧ ಜುಲೈ ೧೯೫೨ ರಂದು ಕಲ್ಲಿಕೋಟೆಯಲ್ಲಾಯಿತು. ಅವರು ಭಾರತೀಯ ಪುರಾತತ್ತ್ವ ಇಲಾಖೆಯ ಉತ್ತರ ವಿಭಾಗದ ವಿಭಾಗೀಯ ಸಂಚಾಲಕರಾಗಿದ್ದರು. ಅವರು ಆಗಾ ಖಾನ್ ಸಂಸ್ಥೆಯ ವಿವಿಧ ಪ್ರಕಲ್ಪಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅಲೀಗಡ ಮುಸ್ಲಿಮ್ ವಿದ್ಯಾಪೀಠದಿಂದ ಅವರು ೧೯೭೫ ರಲ್ಲಿ ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರರಾದರು. ನಂತರ ಪುರಾತತ್ತ್ವ ವಿಷಯದಲ್ಲಿ ಪದವಿಯನ್ನು ಪಡೆದರು. ದೆಹಲಿಯಲ್ಲಿ ಅವರು ಪುರಾತತ್ತ್ವ ವಿಷಯದಲ್ಲಿ ತರಬೇತಿ ಪಡೆದರು. ಅವರು ಅಕ್ಬರನು ‘ದೀನ್-ಎ-ಇಲಾಹೀ’ ಎಂಬ ಧರ್ಮವನ್ನು ಸ್ಥಾಪಿಸಿದ ಸ್ಥಳದಲ್ಲಿ ಸಂಶೋಧನೆಯ ಕಾರ್ಯ ಮಾಡಿದರು. ಅದೇ ರೀತಿ ಅಕ್ಬರನು ನಿರ್ಮಿಸಿದ ಕ್ರೈಸ್ತ ಧರ್ಮಸ್ಥಳ, ಸಾಮ್ರಾಟ ಅಶೋಕನು ನಿರ್ಮಿಸಿದ ಕೆಸರಿಯಾ ಸ್ತೂಪ, ವೈಶಾಲಿಯಲ್ಲಿನ ಬೌದ್ಧ ವಾಸ್ತು ಹಾಗೂ ಕಲಿಕತ್ ಮತ್ತು ಮಲ್ಲಪ್ಪುರಮ್‌ನಲ್ಲಿನ ಅನೇಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಅಯೋಧ್ಯೆಯಲ್ಲಿ ಉತ್ಖನನ ಕಾರ್ಯವನ್ನು ನಿಃಷ್ಪಕ್ಷಪಾತವಾಗಿಡಲು ೧೩೪ ಕಾರ್ಮಿಕರಲ್ಲಿ ೫೨ ಮಂದಿ ಮುಸಲ್ಮಾನರಿದ್ದರು. ಉತ್ಖನನ ಮಾಡುವಾಗ ಸಿಕ್ಕಿದ ೨೬೩ ಅವಶೇಷಗಳು ಅಯೋಧ್ಯೆಯಲ್ಲಿ ಮಸೀದಿಯ ಮೊದಲು ಮಂದಿರವಿತ್ತು ಎಂಬುದಕ್ಕೆ ಸಾಕ್ಷಿಗಳಾಗಿದ್ದವು. – ಕೆ.ಕೆ. ಮಹಮ್ಮದ, ಮಾಜಿ ಸಂಚಾಲಕರು, ಭಾರತೀಯ ಪುರಾತತ್ತ್ವ ವಿಭಾಗ

ಸಾಮ್ಯವಾದಿ ಇತಿಹಾಸಕಾರರು ಜನರ ದಾರಿ ತಪ್ಪಿಸಿದರು ! – ಕೆ.ಕೆ. ಮಹಮ್ಮದ, ಮಾಜಿ ಸಂಚಾಲಕರು, ಭಾರತೀಯ ಪುರಾತತ್ತ್ವ ವಿಭಾಗ

ರಾಮಜನ್ಮಭೂಮಿ ಪ್ರಕರಣದಲ್ಲಿ ಪುರಾತತ್ತ್ವ ಹಾಗೂ ಐತಿಹಾಸಿಕ ಪುರಾವೆಗಳು ಸಂಪೂರ್ಣ ಹಿಂದೂಗಳ ಪರವಾಗಿದ್ದವು. ೧೯೭೬-೧೯೭೭ ರಲ್ಲಿ ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ ಬಿ.ಬಿ. ಲಾಲ ಇವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ಮಾಡಿ ಪುರಾವೆಗಳನ್ನು ಸಂಗ್ರಹಿಸುವ ತಂಡದಲ್ಲಿ ಪುರಾತತ್ತ್ವ ಇಲಾಖೆಯ ಮಾಜಿ ಸಂಚಾಲಕರಾದ ಪದ್ಮಶ್ರೀ ಕೆ.ಕೆ. ಮಹಮ್ಮದ ಇವರು ಕೂಡ ಇದ್ದರು. ಇವರು ರಾಮಜನ್ಮ ಭೂಮಿಯ ನಿರ್ಣಯದ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿದ ವಿಚಾರಗಳು !

೧. ವಿವಿಧ ಕಾಲಘಟ್ಟದ ಗ್ರಂಥಗಳಲ್ಲಿ ರಾಮಜನ್ಮಭೂಮಿಯ ವಿಷಯದ ಉಲ್ಲೇಖಗಳು ವಿವಿಧ ಕಾಲಘಟ್ಟಗಳಲ್ಲಿ ಬರೆದಿರುವ ಗ್ರಂಥಗಳು ನಮಗೆ ತೀರ್ಪಿನವರೆಗೆ ತಲುಪಲು ಸಹಾಯ ಮಾಡುತ್ತವೆ.

೧ ಅ. ೧೫೫೬ ರಿಂದ ೧೬೦೫ ನೇ ಇಸ್ವಿಯಲ್ಲಿ ಅಕ್ಬರನ ಕಾಲದಲ್ಲಿ ಅಬುಲ ಫಝಲನು ‘ಆಯಿನೆ ಅಕಬರಿ’ ಈ ಪುಸ್ತಕವನ್ನು ಬರೆದಾಗ ಮಸೀದಿಯು ನಿರ್ಮಾಣವಾಗಿತ್ತು. ಅಬುಲ ಫಝಲನು ಆಯಿನೆ ಅಕಬರಿಯಲ್ಲಿ ಜನ್ಮಭೂಮಿಯಲ್ಲಿ ಚೈತ್ರ ಮಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂ ಭಕ್ತರು ಪೂಜೆಯನ್ನು ಮಾಡಲು ಬರುತ್ತಾರೆ ಎಂದು ಬರೆದಿದ್ದಾನೆ

೧ ಆ. ೧೬೦೫ ರಿಂದ ೧೬೨೮ ಈ ಜಹಾಂಗೀರನ ಆಡಳಿತಾವಧಿಯಲ್ಲಿ ಅಯೋಧ್ಯೆಗೆ ಬಂದಿದ್ದ ಬ್ರಿಟೀಶ ಪ್ರವಾಸಿ ವಿಲಿಯಮ್ ಫಿನ್ಸ್ ಇವರು ಕೂಡ ತಮ್ಮ ಪ್ರವಾಸದ ವರ್ಣನೆಯಲ್ಲಿ ಬರೆಯುತ್ತಾರೆ, ಇಲ್ಲಿ (ರಾಮಜನ್ಮಭೂಮಿಯಲ್ಲಿ) ವಿಷ್ಣುವಿನ ಉಪಾಸಕರು ಪೂಜೆ ಮಾಡಲು ಬರುತ್ತಿದ್ದರು, ಎಂದು ಬರೆದಿದ್ದಾನೆ. ವಿಶೇಷವೆಂದರೆ ಈ ಬರಹದಲ್ಲಿ ಮಸೀದಿಯ ವಿಷಯದಲ್ಲಿ ಯಾವುದೇ ಉಲ್ಲೇಖವಿಲ್ಲ.

೧ ಇ. ಇದರ ತುಂಬಾ ಸಮಯದ ನಂತರ ೧೭೬೬ ರಲ್ಲಿ ಪಾದ್ರಿ ಟೇಲರ್ ಇವರು ಕೂಡ ಈ ಸ್ಥಳದಲ್ಲಿ ಹಿಂದೂಗಳ ಪೂಜೆ-ಪುನಸ್ಕಾರ ಆಗುತ್ತಿದೆಯೆಂದು ಉಲ್ಲೇಖಿಸಿದ್ದಾರೆ ಹಾಗೂ ನಮಾಜು ಪಠಣದ ವಿಷಯದಲ್ಲಿ ಏನೂ ಬರೆದಿಲ್ಲ.

೨. ಅಯೋಧ್ಯೆಯೊಂದಿಗೆ ಪೈಗಂಬರ ಅಥವಾ ಖಲೀಫಾ ಇವರ ಸಂಬಂಧವಿಲ್ಲ !
ಪೈಗಂಬರರು ಮತ್ತು ಅಯೋಧ್ಯೆಯ ನಡುವೆ ಯಾವುದೇ ಸಂಬಂಧವಿರುವುದು ಕಂಡುಬಂದಿಲ್ಲ. ಅವರ ನಂತರ ಆಗಿರುವ ನಾಲ್ಕು ಮಂದಿ ಖಲೀಫಾಗಳಾದ ಅಬೂ ಬಕರ, ಹಜರತ ಉಮರ, ಹಜರತ ಉಸ್ಮಾನ ಮತ್ತು ಹಜರತ ಅಲೀ ಇವರಿಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ. ಖ್ವಾಜಾ ಮೊಯಿನುದ್ದೀನ ಚಿಶ್ತಿ ಮತ್ತು ನಿಜಾಮುದ್ದೀನ ಅವಲಿಯಾ ಅಥವಾ ಇತರ ಯಾವುದೇ ಅವಲಿಯಾರ ಸಂಬಂಧವೂ ಸಿಕ್ಕಿಲ್ಲ. ಕೇವಲ ಒಬ್ಬ ಮೊಗಲ ರಾಜನ ಹೆಸರು ಮಾತ್ರ ಅಯೋಧ್ಯೆಗೆ ಜೋಡಿಸಲ್ಪಟ್ಟಿದೆ. ಆದರೆ ಅದು ಹಿಂದೂಗಳಿಗೆಷ್ಟು ಪ್ರಭು ಶ್ರೀರಾಮಚಂದ್ರರ ಬಗ್ಗೆ ಶ್ರದ್ಧೆಯಿದೆಯೋ, ಅಷ್ಟು ಮುಸಲ್ಮಾನರಿಗೆ ಅದರ ಬಗ್ಗೆ ಶ್ರದ್ಧೆಯ ವಿಷಯವಾಗಲು ಸಾಧ್ಯವಿಲ್ಲ. ಮುಸಲ್ಮಾನರಿಗೆ ಹೇಗೆ ಮಕ್ಕಾ ಮತ್ತು ಮದೀನಾದ ಈ ಸ್ಥಳಗಳ ಮಹತ್ವವಿದೆಯೋ, ಅದೇ ರೀತಿ ಹಿಂದೂಗಳಿಗೆ ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮ ಭೂಮಿಯ ಮಹತ್ವವಿದೆ.

೩. ಸಾಮ್ಯವಾದಿ ಇತಿಹಾಸಕಾರರಿಂದಾಗಿ ರಾಮಜನ್ಮಭೂಮಿಯ ವಿವಾದವು ಭುಗಿಲೆದ್ದಿತು !
ರಾಮಜನ್ಮಭೂಮಿಯ ವಿವಾದವು ಬೆಳೆಯಲು ಸಾಮ್ಯವಾದಿ ಇತಿಹಾಸಕಾರರಾದ ಅಲೀಗಡ ಮುಸ್ಲಿಮ್ ವಿದ್ಯಾಪೀಠದ ಇರ್ಫಾನ್ ಹವೀನ, ಜವಾಹರಲಾಲ ನೆಹರು ವಿದ್ಯಾಪೀಠದ ರೋಮಿಲಾ ಥಾಪರ ಮತ್ತು ದೆಹಲಿ ವಿಶ್ವವಿದ್ಯಾಲಯದ ಆರ್.ಎಸ್. ಶರ್ಮಾ ಇವರೇ ಹೊಣೆಯಾಗಿದ್ದಾರೆ, ಎಂದು ಕೆ. ಕೆ. ಮಹಮ್ಮದ ಹೇಳುತ್ತಾರೆ. ಅಯೋಧ್ಯೆಯಲ್ಲಿನ ಉತ್ಖನನದಲ್ಲಿ ಅಲ್ಲಿನ ಮಾನವರ ಸಹಭಾಗದ ಕಾರ್ಯಕಾಲವು ೧೨೦೦-೧೩೦೦ ವರ್ಷಗಳ ಹಿಂದೆ ಇರುವ ಪುರಾವೆಗಳು ಸಿಕ್ಕಿವೆ. ಬಹುಶಃ ಇತರ ಸ್ಥಳಗಳಲ್ಲಿ ಉತ್ಖನನ ಮಾಡುವಾಗ ಮಾನವ ಕಾಲವು ಇನ್ನೂ ಹೆಚ್ಚು ಹಿಂದೆ ಹೋಗುವ ಸಾಧ್ಯತೆಯಿದೆ. ಅದಕ್ಕಾಗಿಯೆ ಸಾಮ್ಯವಾದಿ ಇತಿಹಾಸಕಾರರು ಅಯೋಧ್ಯೆಯಲ್ಲಿ ಮಾನವ ಹಸ್ತಕ್ಷೇಪದ ಪುರಾವೆ ಸಿಕ್ಕಿಲ್ಲವೆಂದು ಸಿದ್ಧಪಡಿಸಲು ಪ್ರಯತ್ನಿಸಿದ್ದರು. ಸಾಮ್ಯವಾದಿ ಇತಿಹಾಸಕಾರರು ಜನರ ದಾರಿ ತಪ್ಪಿಸಿದ್ದಾರೆ. ಆದ್ದರಿಂದ ಪ್ರಕರಣವು ಜಟಿಲವಾಗುತ್ತಾ ಹೋಯಿತು. ೭೦ ನೇ ಶತಮಾನದಲ್ಲಿ ಮತ್ತು ಅದರ ನಂತರವೂ ಅಲಾಹಾಬಾದ ಉಚ್ಚ ನ್ಯಾಯಾಲಯದ ಆದೇಶಕ್ಕನುಸಾರ ಮಾಡಿದ ಉತ್ಖನನದಲ್ಲಿ ಅಯೋಧ್ಯೆಯಲ್ಲಿ ಮಂದಿರದ ಅವಶೇಷಗಳು ಸಿಕ್ಕಿವೆ. ಈ ಅವಶೇಷಗಳೆ ಹೇಳುತ್ತವೆ, ಇಲ್ಲಿ ಈ ಹಿಂದೆ ಶ್ರೀವಿಷ್ಣುವಿನ ಭವ್ಯ ಮಂದಿರವಿತ್ತು ಎಂದು ಹೇಳುತ್ತವೆ.

೪. ಉತ್ಖನನದಲ್ಲಿ ಸಿಕ್ಕಿದ ಮಂದಿರದ ಅವಶೇಷಗಳು !
ನಮಗೆ ಉತ್ಖನನದಲ್ಲಿ ಮಂದಿರದ ಸ್ತಂಭಗಳ ಕೆಳಗೆ ಇಟ್ಟಿಗೆಯ ಒಂದು ಆಧಾರ ಕಾಣಿಸಿತು. ನಂತರ ನಾನು ಅಲ್ಲಿಗೆ ಹೋದಾಗ ನನಗೆ ಮಸೀದಿಯ ಗೋಡೆಯಲ್ಲಿ ಮಂದಿರದ ಸ್ತಂಭ ಕಾಣಿಸಿತು. ಸ್ತಂಭದ ಕೆಳಭಾಗದಲ್ಲಿ ೧೧ – ೧೨ ನೇ ಶತಮಾನದ ಮಂದಿರಗಳಲ್ಲಿ ಕಾಣಿಸುವ ಸಂಪೂರ್ಣ ಕಲಶ ಕಾಣಿಸಿತು. ಮಂದಿರ ಕಲೆಯಲ್ಲಿ ಕಲಶವು ಎಂಟು ಐಶ್ವರ್ಯ ಪ್ರತೀಕಗಳಲ್ಲಿ ಒಂದಾಗಿದೆ. ಮಸೀದಿಯನ್ನು ಕೆಡಹುವ ಮೊದಲು ನಾವು ಇಂತಹ ೧೪ ಸ್ತಂಭಗಳನ್ನು ನೋಡಿದ್ದೆವು. ಬಾಬರನ ಸೇನಾಪತಿ ಮೀರ ಬಾಂಕೀ ಇವನು ಕೆಡವಿದ ಅಥವಾ ಮೊದಲೇ ಕೆಡವಿದ ಅವಶೇಷಗಳನ್ನು ಉಪಯೋಗಿಸಿಯೆ ಮಸೀದಿಯನ್ನು ಕಟ್ಟಿಸಿದ್ದನು. ನಾನು ಮೊದಲು ಹೇಳಿದ ಕಲ್ಲಿನ ಸ್ತಂಭಗಳಂತಹ ಸ್ತಂಭಗಳು, ಇಟ್ಟಿಗೆಯ ಕಟ್ಟೆ ಮಸೀದಿಯ ಪಕ್ಕದಲ್ಲಿ ಮತ್ತು ಮಸೀದಿಯ ಹಿಂದೆ ಕೂಡ ಕಾಣಿಸಿತ್ತು. ಅದರ ಆಧಾರದಲ್ಲಿ ನಾನು ಮಸೀದಿಯ ಕೆಳಗೆ ಮಂದಿರವಿತ್ತು, ಎಂದು ಹೇಳಿದ್ದೆನು. ಮಸೀದಿಯ ಮಣ್ಣಿನ ರಾಶಿಯಲ್ಲಿ ವಿಷ್ಣು ಹರಿಶಿಲೆಯ ಮೇಜು ಸಿಕ್ಕಿದೆ. ಅದರಲ್ಲಿ ೧೧-೧೨ ನೇ ಶತಕದ ನಾಗರಿಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿ ಈ ಮಂದಿರ ವಿಷ್ಣುವಿಗೆ ಸಮರ್ಪಿತವಾಗಿದೆ, ಎಂದು ಬರೆಯಲಾಗಿತ್ತು. ಇಲ್ಲಿ ಶಿವ-ಪಾರ್ವತಿಯರ ಮಣ್ಣಿನ ಮೂರ್ತಿಗಳು ಸಿಕ್ಕಿವೆ ಎಂದು ಬರೆಯಲಾಗಿತ್ತು.

ಜಗತ್ಪ್ರಸಿದ್ಧ ಪುರಾತತ್ತ್ವ ಶಾಸ್ತ್ರಜ್ಞ ಬ್ರಿಜ್ ಬಾಸೀ ಲಾಲ ಇವರ ರಾಮಜನ್ಮಭೂಮಿಯ ಖಟ್ಲೆಯಲ್ಲಿನ ಯೋಗದಾನ !

ಬ್ರಿಜ್ ಬಾಸೀ ಲಾಲ

೨ ಮೇ ೧೯೨೧ ರಂದು ಝಾನ್ಸಿಯಲ್ಲಿ ಜನಿಸಿದ ಬ್ರಿಜ್ ಬಾಸೀ ಲಾಲ (ಬಿ.ಬಿ.ಲಾಲ) ಇವರು ದೇಶದ ಹೆಸರಾಂತ ಪುರಾತತ್ತ್ವ ಶಾಸ್ತ್ರಜ್ಞರಾಗಿದ್ದಾರೆ. ಅವರು ೧೯೬೮ ರಿಂದ ೧೯೭೨ ಈ ಅವಧಿಯಲ್ಲಿ ಭಾರತೀಯ ಪುರಾತತ್ತ್ವ ವಾಸ್ತು ವಿಭಾಗದ ಮುಖ್ಯ ಸಂಚಾಲಕರಾಗಿದ್ದರು. ಅವರು ಯುನೆಸ್ಕೋ ಸಹಿತ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಸಂಸ್ಕೃತ ಭಾಷೆ ಮತ್ತು ವೇದಗಳಲ್ಲಿಯೂ ಪಾರಂಗತರಾಗಿದ್ದಾರೆ. ಸುಪ್ರಸಿದ್ಧ ಬ್ರಿಟೀಶ ಪ್ರಾಚೀನವಾಸ್ತುತಜ್ಞ ಮಾರ್ಟಿಮರ್ ವ್ಹಿಲರ್ ಇವರ ಮಾರ್ಗದರ್ಶನದಲ್ಲಿ ಅವರು ಈ ವಿಷಯಗಳ ಅಧ್ಯಯನ ಆರಂಭಿಸಿದರು. ಬಿ.ಬಿ.ಲಾಲ ಇವರು ಆಫ್ರಿಕಾದಲ್ಲಿಯೂ ಪ್ರಾಚೀನ ವಾಸ್ತು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ನೈಲ್ ಕಣಿವೆ, ನುಬಿಯಾ ಇತ್ಯಾದಿ ಪ್ರದೇಶಗಳಲ್ಲಿ ಅವರು ಮಧ್ಯಯುಗದ ಸಂಸ್ಕೃತಿಯ ಅಸ್ತಿತ್ವಗಳ ಮಹತ್ವದ ಪುರಾವೆಗಳನ್ನು ಹುಡುಕಿ ದೊಡ್ಡ ಯೋಗದಾನ ನೀಡಿದ್ದಾರೆ. ೧೯೫೫ ರಲ್ಲಿ ಬಿ.ಬಿ. ಲಾಲ ಇವರು ಮಹಾಭಾರತದಲ್ಲಿ ವರ್ಣಿಸಿರುವ ನಗರಗಳ ವಿಷಯದಲ್ಲಿ ಉತ್ಖನನ ಕಾರ್ಯ ಮಾಡಿದರು. ಹಸ್ತಿನಾಪುರ, ಇಂದ್ರಪ್ರಸ್ತ, ಸೋನಪತ, ಪಾನಿಪತ, ತಿಲಪತ, ಬಘಪತ ಇತ್ಯಾದಿ ಅನೇಕ ಸ್ಥಳಗಳಲ್ಲಿ ಸಂಶೋಧನೆ ಮಾಡಿ ಅವರು ಕ್ರಿ.ಪೂ. ೧೩೦೦ ರಲ್ಲಿನ ಮಾನವರ ಕುರುಹುಗಳನ್ನು ಶೋಧಿಸಿದರು. ೧೯೭೫ ರಿಂದ ೧೯೮೦ ಈ ಅವಧಿಯಲ್ಲಿ ರಾಮಜನ್ಮಭೂಮಿಯ ಪರಿಸರದಲ್ಲಿನ ೧೪ ಸ್ಥಳಗಳ ಸಂಶೋಧನೆಯನ್ನು ಅವರಿಗೆ ಒಪ್ಪಿಸಲಾಯಿತು. ಅದೇ ಸಮಯದಲ್ಲಿ ಅವರು ಬಾಬರಿಯ ಕಟ್ಟಡದ ಅಡಿಯಲ್ಲಿ ಹಾಗೂ ಆ ಪರಿಸರದಲ್ಲಿ ವ್ಯಾಪಕ ಉತ್ಖನನವನ್ನು ಮಾಡಿದರು. ಅದರಿಂದ ಅವರು ಬಾಬರಿಯ ಹಿಂದಿನ ಕಾಲದಲ್ಲಿ ಅದೇ ಸ್ಥಾನದಲ್ಲಿ ಹಿಂದೂಗಳ ಮಂದಿರವಿತ್ತು, ಎಂಬುದು ಪುರಾವೆಸಹಿತ ಸಿದ್ಧಗೊಳಿಸಿದ್ದಾರೆ. ಅವರು ಈ ವಿಷಯದಲ್ಲಿ ನೀಡಿದ ವರದಿಯನ್ನು ರಾಮಜನ್ಮಭೂಮಿ ಪ್ರಕರಣದಲ್ಲಿ ನ್ಯಾಯಾಲಯ ಪುರಾವೆಯೆಂದು ಸ್ವೀಕರಿಸಿದೆ. ಈ ಉತ್ಖನನ ದಿಂದ ಲಾಲ ಇವರಿಗೆ ಜಗತ್ತಿನಾದ್ಯಂತ ಪ್ರಸಿದ್ಧಿ ಸಿಕ್ಕಿತು. ೨೦೦೮ ರಲ್ಲಿ ‘ರಾಮ, ಅವನ ಐತಿಹಾಸಿಕತೆ, ಮಂದಿರ ಹಾಗೂ ಸೇತುವೆ : ಸಾಹಿತ್ಯ, ಪುರಾತತ್ತ್ವ ಹಾಗೂ ಇತರ ಶಾಸ್ತ್ರೀಯ ಪುರಾವೆಗಳು ಈ ಹೆಸರಿನ ಪುಸ್ತಕ ಪ್ರಕಾಶನವಾಯಿತು. ಅದರಲ್ಲಿಯೂ ಅವರು ಬಾಬರಿಯ ಸ್ಥಳದಲ್ಲಿ ಈ ಹಿಂದೆ ಹಿಂದೂ ಮಂದಿರ ಹೇಗಿತ್ತು, ಎಂಬುದರ ಪುರಾವೆಯನ್ನು ನೀಡಿದ್ದಾರೆ. ಅವರಿಗೆ ೨೦೦೦ ದಲ್ಲಿ ‘ಪದ್ಮಭೂಷಣ ಪುರಸ್ಕಾರದಿಂದ ಸನ್ಮಾನಿಸಲಾಯಿತು.

ರಾಮಮಂದಿರದ ಪುರಾತನ ಅವಶೇಷಗಳು ಹೊಸತಾದ ಭವ್ಯವಾದ ಮಂದಿರದ ನಿರೀಕ್ಷೆಯಲ್ಲಿವೆ !

ರಾಮಜನ್ಮಭೂಮಿಯ ಖಟ್ಲೆಯು ಭಾರತದ ಇತಿಹಾಸದಲ್ಲಿನ ಒಂದು ಮೈಲುಗಲ್ಲಾಗಿದೆ. ಅನೇಕ ತಜ್ಞರು ಅನೇಕ ವರ್ಷಗಳು ಕಾಲ ಪ್ರಯತ್ನಿಸಿ ರಾಮ ಜನ್ಮಭೂಮಿಗೆ ನ್ಯಾಯವನ್ನು ದೊರಕಿಸಿ ಕೊಟ್ಟಿದ್ದಾರೆ. ಹೀಗಿದ್ದರೂ ಇಷ್ಟಕ್ಕೆ ನಿಲ್ಲದೆ, ಅನೇಕ ವರ್ಷಗಳಿಂದ ಪಾಳು ಬಿದ್ದಿರುವ ರಾಮಜನ್ಮಭೂಮಿಯನ್ನು ಪುನಃ ಒಮ್ಮೆ ಪ್ರಭು ಶ್ರೀರಾಮನ ಭಕ್ತಿಯಿಂದ ಪಾವನಗೊಳಿಸುವುದು ಪ್ರತಿಯೊಬ್ಬ ರಾಮಭಕ್ತನ ಹೊಣೆಯಾಗಿದೆ. ಹಿಂದಿನ ಪೀಳಿಗೆಯು ರಾಮಮಂದಿರವನ್ನು ನಿರ್ಮಿಸುವ ಮಾರ್ಗವನ್ನು ಮುಕ್ತಗೊಳಿಸಿತು. ಈಗ ಇಲ್ಲಿ ರಾಮಲಲ್ಲಾನನ್ನು ಸನ್ಮಾನಪೂರ್ವಕ ಹಾಗೂ ಭಕ್ತಿಭಾವದಿಂದ ಸ್ಥಾಪಿಸುವ ಕಾರ್ಯವು ಮುಂದಿನ ಪೀಳಿಗೆಯ ದ್ದಾಗಿದೆ. ಕೇವಲ ಭವ್ಯಮಂದಿರವಲ್ಲ, ರಾಮಭಕ್ತಿಯ ಕೇಂದ್ರವನ್ನಾಗಿ ಮಾಡುವುದು, ಪ್ರಭುಶ್ರೀರಾಮನ ಆದರ್ಶದ ಶಿಕ್ಷಣವನ್ನು ನೀಡುವುದು ಹಾಗೂ ರಾಮರಾಜ್ಯದ ಅನುಭೂತಿಯನ್ನು ನೀಡುವ ಸಾಮಾಜಿಕ ವಾತಾವರಣ ವನ್ನು ನಿರ್ಮಾಣ ಮಾಡುವುದು, ಇದೇ ನಿಜವಾದ ಅರ್ಥದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿದೆ.

ಅಯೋಧ್ಯೆಯ ರೋಮರೋಮಗಳಲ್ಲಿ ಪ್ರಭು ಶ್ರೀರಾಮನ ಅಸ್ತಿತ್ವದ ಗುರುತುಗಳಾಗಿವೆ !

ಈ ಸ್ಥಳಕ್ಕೆ ಸಂಬಂಧಿಸಿ ವಿವಾದ ನಿರ್ಮಾಣವಾದಾಗ ಎರಡೂ ಪಕ್ಷಗಳು ನ್ಯಾಯಾಲಯಕ್ಕೆ ಹೋದವು, ಆಗ ೧೯೮೬ ರಲ್ಲಿ ಉತ್ತರಪ್ರದೇಶದ ಜಿಲ್ಲಾನ್ಯಾಯಾಧೀಶರು ಅಯೋಧ್ಯೆಯಲ್ಲಿನ ಸ್ಥಳಕ್ಕೆ ಹಾಕಿದ ಬೀಗವನ್ನು ತೆರೆಯಲು ಹೇಳಿದರು. ಪುರಾತತ್ತ್ವ ವಿಭಾಗದ ಉತ್ಖನನವೊಂದೇ ಕೇವಲ ಪುರಾವೆಯೆಂದು ಉಪಲಬ್ಧವಿಲ್ಲದೇ, ಇಂತಹ ಉತ್ಖನನವು ೧೯೭೦, ೧೯೯೨ ಮತ್ತು ೨೦೦೩ ಹೀಗೆ ಮೂರು ಸಲ ಆಗಿದೆ ಹಾಗೂ ಮೂರೂ ಬಾರಿ ‘ಅಲ್ಲಿ ಮಂದಿರವೇ ಇತ್ತು, ಎಂದು ನಿರ್ಣಯ ನೀಡಲಾಗಿದೆ. ಹಿಂದೂ ಧರ್ಮಗ್ರಂಥ, ವಿದೇಶಿ ಪ್ರವಾಸಿಗಳ ವರ್ಣನೆಗಳು ಹೀಗೆ ಎಲ್ಲೆಡೆ ರಾಮಜನ್ಮಭೂಮಿಯ ಉಲ್ಲೇಖವಿದೆ. ಅಯೋಧ್ಯೆಯ ಮಣ್ಣು, ಕಲ್ಲು, ಭೂಗರ್ಭ, ಸ್ವತಃ ಶರಯೂ ಮಾತೆ ಹೀಗೆ ಅಯೋಧ್ಯೆಯ ಕಣಕಣಗಳು ಸಾಕ್ಷಿಯನ್ನು ನೀಡುತ್ತಿವೆಯೆಂದರೆ, ಇದು ಪ್ರಭು ಶ್ರೀರಾಮಚಂದ್ರರ ಭೂಮಿಯಾಗಿದೆ ಎಂಬ ಸಾಕ್ಷಿಯನ್ನು ನೀಡುತ್ತಿವೆ ! ಭವ್ಯ ರಾಮಮಂದಿರವೇ ಅಯೋಧ್ಯೆಯ ಶತಮಾನಗಳಿಂದ ಬಂದಿರುವ ಭೂಷಣವಾಗಿದೆ !

Leave a Comment