ಹಿಂದೂಗಳ ಹಲವಾರು ವರ್ಷಗಳ ಪ್ರಾರ್ಥನೆಯು ಫಲಿಸಿತು | ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ರಾಮಜನ್ಮಭೂಮಿ ಮುಕ್ತವಾಯಿತು

ಪ.ಪೂ. ದಾಸ ಮಹಾರಾಜ

ತ್ರೇತಾಯುಗದಲ್ಲಿ ರಾವಣನು ೩೩ ಕೋಟಿ ದೇವತೆಗಳನ್ನು ಬಂಧನದಲ್ಲಿಟ್ಟಿದ್ದನು, ಅದೇ ರೀತಿ ಇಂದು ಕಲಿಯುಗದಲ್ಲಿ ಕಳೆದ ೭೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ರಾಮ ಜನ್ಮಭೂಮಿಯು ಬಂಧನದಲ್ಲಿತ್ತು. ಅಯೋಧ್ಯಾಭೂಮಿ ಅಂದರೆ ಪೃಥ್ವಿಯ ಮೇಲಿನ ವೈಕುಂಠಧಾಮವಾಗಿದೆ. ‘ಈ ರಾಮಜನ್ಮ ಭೂಮಿಯು ಮುಕ್ತವಾಗಬೇಕು, ಎಂದು ಇಡೀ ಹಿಂದೂ ಸಮಾಜ ಮತ್ತು ಸಂತರು ೭೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಈ ಪ್ರಾರ್ಥನೆಯನ್ನು ಕೇಳಿ ಪ್ರಭು ರಾಮನೇ ೫ ನ್ಯಾಯಮೂರ್ತಿಗಳ ವಿಭಗೀಯ ಪೀಠದ ಮುಖಾಂತರ ೯.೧೧. ೨೦೧೯ ರಂದು ಈ ರಾಮಜನ್ಮ ಭೂಮಿಯನ್ನು ಮುಕ್ತಗೊಳಿಸಿದನು. ಇದಕ್ಕಾಗಿ ಎಲ್ಲ ಹಿಂದೂ ಬಾಂಧವರು, ಸಂತರು ಮತ್ತು ಸನಾತನ ಪರಿವಾರ ಇವರೆಲ್ಲರಿಂದ ಶ್ರೀರಾಮನ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !

೧. ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮ !

ರಾಮಜನ್ಮಭೂಮಿಯು ಹಿಂದೂ ಧರ್ಮದ ಆದ್ಯ ಧರ್ಮಪೀಠವಾಗಿದೆ. ಆದಿನಾರಾಯಣ ತ್ರೈಲೋಕ್ಯಾಧೀಶ ಪ್ರಭು ರಾಮಚಂದ್ರನೇ ಇದನ್ನು  ಮುಕ್ತಗೊಳಿಸಿದನು. ರಾಮಾವತಾರದಲ್ಲಿ ಭಗವಂತನು ಮರ್ಯಾದಾ ಪುರುಷೋತ್ತಮನ ‘ಏಕಪತ್ನಿ, ಏಕಬಾಣಿ, ಏಕವಚನಿ’ ಮುಂತಾದ ಆದರ್ಶವನ್ನು ಎಲ್ಲರೆದುರು ಇಟ್ಟಿದ್ದಾನೆ.

೨. ಶ್ರೀರಾಮನ ಅವತಾರಿ ಕಾರ್ಯ

ದಶರಥನು ಪುತ್ರಕಾಮೇಷ್ಠಿ ಯಜ್ಞವನ್ನು ಮಾಡಿದನು. ಅದರಿಂದಲೇ ರಾಮನ ಅವತಾರವಾಯಿತು. ರಾಮನು ೧೪ ವರ್ಷಗಳ ವನವಾಸವನ್ನು ಭೋಗಿಸಿದನು. ಅನೇಕ ಋಷಿಮುನಿಗಳು ಭಗವಂತನ ದಾರಿ ಕಾಯುತ್ತಿದ್ದರು. ರಾಮನು ವನವಾಸದ ಸಮಯದಲ್ಲಿ ಅನೇಕ ಋಷಿಮುನಿಗಳನ್ನು ಉದ್ಧರಿಸಿದನು. ಅನಂತರ ರಾಮನು ಲವ ಮತ್ತು ಕುಶರನ್ನು ಶೋಧಿಸಲು ಅಶ್ವಮೇಧ ಯಜ್ಞವನ್ನು ಮಾಡಿದನು. (ಅಂತಹುದೇ ಅಶ್ವಮೇಧ ಯಜ್ಞವನ್ನು ಗುರುದೇವರು ಅಶ್ವಮೇಧಯಾಜೀ ಪ.ಪೂ. ನಾರಾಯಣ (ನಾನಾ) ಕಾಳೆಗುರೂಜೀಯವರ ಮಾಧ್ಯಮದಿಂದ ರಾಮನಾಥಿ ಆಶ್ರಮದಲ್ಲಿ ಮಾಡಿಸಿಕೊಂಡರು. ಇಂತಹ ಅಶ್ವಮೇಧ ಯಜ್ಞವು ಕೇವಲ ರಾಮನಾಥಿ ಆಶ್ರಮದಲ್ಲಿ ಆಗಿದೆ.) ಭಗವಂತನು ರಾಮಾವತಾರದಲ್ಲಿ ಅಯೋಧ್ಯೆಯ ಭೂಮಿಯಲ್ಲಿ, ಅದೇ ರೀತಿ ದ್ವಾಪರಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಕಾರ್ಯವನ್ನು ಮಾಡಿದನು. ಭಗವಂತನ ೧೦ ಅವತಾರಗಳ ಪೈಕಿ ಅವನು ರಾಮಾವತಾರದಲ್ಲಿ ದೊಡ್ಡ ಕಾರ್ಯಗಳನ್ನು ಮಾಡಿದನು. ಮೊದಲು ರಾಮನ ಅವತಾರ ಮತ್ತು ಅನಂತರ ಶ್ರೀಕೃಷ್ಣನ ಅವತಾರವಾಯಿತು. ರಾಮಾವತಾರವು ಶ್ರೇಷ್ಠವಾಗಿದೆಯೆಂದು ಪ್ರಭು ಶ್ರೀರಾಮನ ಆಶೀರ್ವಾದದಿಂದ ಸಮರ್ಥರು ಧರ್ಮಕಾರ್ಯವನ್ನು ಮಾಡಿದರು. ಹಿಂದೂ ಧರ್ಮದ ಆದ್ಯ ಪ್ರತೀಕ ಶ್ರೀರಾಮನಾಗಿದ್ದಾನೆ.

೩. ಬೇಡನನ್ನು ವಾಲ್ಮೀಕಿ ಋಷಿಯನ್ನಾಗಿಸುವ ಸಾಮರ್ಥ್ಯವಿರುವ ಶ್ರೀರಾಮನಾಮ !

ದೇವರ್ಷಿ ನಾರದಮುನಿಗಳು ಬೇಡನಿಗೆ ‘ರಾಮ’ನಾಮದ ಮಂತ್ರವನ್ನು ನೀಡಿದರು. ಅವನು ‘ಮರಾ, ಮರಾ’, ಎಂದು ಹೇಳುತ್ತಿದ್ದನು. ಆ ಬೇಡನು ವಾಲ್ಮೀಕಿಯಾದನು ಮತ್ತು ಅವನು ರಾಮಾಯಣವನ್ನು ಬರೆದನು. ಇದರ ವರ್ಣನೆಯನ್ನು ಸಮರ್ಥ ರಾಮದಾಸಸ್ವಾಮಿಗಳು ಶ್ಲೋಕದಲ್ಲಿ ಮಾಡುತ್ತಾರೆ, ‘ಉಪರಾ ತ್ಯಾ ನಾಮಸಾಠಿ ವಾಲ್ಮೀಕ ತರಲಾ | ಉಠಾಉಠೀ ಭವಿಷ್ಯ ವದಲಾ ಶತಕೋಟಿ ಶ್ರೀರಾಮಾಚೆ ||’ ಉಲ್ಟಾ ನಾಮವನ್ನು ಜಪಿಸಿ ವಾಲ್ಮೀಕಿಯ ಉದ್ಧಾರವಾಯಿತು | ಭವಿಷ್ಯದಲ್ಲಿ ವಾಲ್ಮೀಕಿ ಋಷಿಗಳು ಶ್ರೀರಾಮಚರಿತೆಯನ್ನು ರಚಿಸಿದರು ||’ (ವಾಲ್ಮೀಕಿ ಋಷಿಗಳು ಪ್ರಭು ರಾಮಚಂದ್ರನ ನೂರುಕೋಟಿ ರಾಮಾಯಣವನ್ನು ರಚಿಸಿದರು.) ಶ್ರೀರಾಮನ ಮತ್ತು ಅವನ ನಾಮದಲ್ಲಿ ಎಷ್ಟು ಸಾಮರ್ಥ್ಯವಿದೆ !

೪. ಸಮರ್ಥ ರಾಮದಾಸಸ್ವಾಮಿ ಮತ್ತು ಪರಾತ್ಪರ ಗುರುದೇವರ ಕಾರ್ಯದಲ್ಲಿನ ಸಾಮ್ಯತೆ

ನಮ್ಮ ಹಿಂದೂ ಧರ್ಮದಲ್ಲಿ ಗುರುಶಿಷ್ಯ ಪರಂಪರೆಯಿದೆ. ಸಮರ್ಥ ರಾಮದಾಸಸ್ವಾಮಿಗಳು ರಾಮನನ್ನೇ ಗುರುವಾಗಿಸಿಕೊಂಡರು. ರಾಮನನ್ನು ಗುರು ಮಾಡಿಕೊಂಡ ಏಕೈಕ ಸಂತರೆಂದರೆ ಸಮರ್ಥ ರಾಮದಾಸಸ್ವಾಮಿಗಳಾಗಿದ್ದಾರೆ. ನಾಶಿಕದಲ್ಲಿನ ಪಂಚವಟಿ ಹತ್ತಿರದ ಟಾಕಳಿ ಎಂಬ ಹಳ್ಳಿಯಲ್ಲಿ ಸಮರ್ಥರ ಮಠವಿದೆ. ಅಲ್ಲಿನ ಗೋದಾವರಿ ನದಿಯಲ್ಲಿ ನಿಂತುಕೊಂಡು ಸಮರ್ಥರು ೧೩ ಕೋಟಿ ರಾಮನಾಮದ ಪುರಶ್ಚರಣ ಮತ್ತು ೧೨ ಲಕ್ಷ ಗಾಯತ್ರಿ ಮಂತ್ರದ ಜಪವನ್ನು ಮಾಡಿದರು, ಹಾಗೆಯೇ ಮಾರುತಿಯ ಉಪಾಸನೆಯನ್ನು ಮಾಡಿದರು. ಈ ಸಾಧನೆಯ ಬಲದ ಮೇಲೆ ಅವರು ಛತ್ರಪತಿ ಶಿವಾಜಿ ಮಹಾರಾಜರಿಂದ ನಿಜಾಮರ (ಯವನರ)ನ್ನು ಪರಾಭವಗೊಳಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅವರು ಭಾರತದೆಲ್ಲೆಡೆ ಸಂಚಾರ ಮಾಡಿ ಧರ್ಮಜಾಗೃತಿಯ ಕಾರ್ಯವನ್ನು ಮಾಡಿದರು, ಇದು ಸಜ್ಜನಗಡಕ್ಕೆ ಹೋದಾಗ ಅನುಭವಕ್ಕೆ ಬರುತ್ತದೆ. ಇಂದು ಪರಾತ್ಪರ ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ಕೂಡ ಇದೇ ರೀತಿಯ ಧರ್ಮಕಾರ್ಯವನ್ನು ಮಾಡುತ್ತಿದ್ದಾರೆ. ಸಮರ್ಥರು ಧರ್ಮಕಾರ್ಯಕ್ಕಾಗಿ ಮಾರುತಿಯ ಸಹಾಯವನ್ನು ಪಡೆದುಕೊಂಡರು. ೨೦೦೨ ನೇ ಇಸವಿಯಲ್ಲಿ ಗುರುದೇವರು ೫೫ ಪಂಚಮುಖಿ ಹನುಮತ್ಕವಚ ಯಜ್ಞಗಳ ಸಂಕಲ್ಪವನ್ನು ಫೋಂಡಾ (ಗೋವಾ)ದ ಆಶ್ರಮದಲ್ಲಿ ಮಾಡಿದರು ಮತ್ತು ಮಾರುತಿಗೆ ಧರ್ಮಕಾರ್ಯಕ್ಕಾಗಿ ಕರೆಯಿಸಿಕೊಂಡರು ಈ ಯಜ್ಞಗಳ ಪ್ರಾರಂಭವು ಫೋಂಡಾ (ಗೋವಾ)ದಲ್ಲಿನ ಆಶ್ರಮದಲ್ಲಾಯಿತು. ಅದರ ನಂತರದ ಯಜ್ಞಗಳು ಸನಾತನದ ವಿವಿಧ ಕಡೆಗಳಲ್ಲಿನ ಆಶ್ರಮಗಳಲ್ಲಿ ಮಾಡಿದರು. ರಾಮನಾಥಿ (ಗೋವಾ)ಯಲ್ಲಿನ ಸನಾತನ ಆಶ್ರಮದಲ್ಲಿ ೩೧.೩.೨೦೧೯ ರಂದು ೫೫ ನೇ ಯಜ್ಞವನ್ನು ಮಾಡಿ ಸಂಕಲ್ಪವನ್ನು ಪೂರ್ಣ ಮಾಡಿದರು. ರಾಮನಾಥಿ ಆಶ್ರಮದಲ್ಲಿ ಮಾರುತಿಯ ಸ್ಥಾಪನೆಯಾಯಿತು. ಆಗಿನಿಂದ ಈ ಆಶ್ರಮದಲ್ಲಿ ಯಜ್ಞ ಮಾಡಲು ಪ್ರಾರಂಭವಾಯಿತು. ಅನಂತರ ಇಂದಿನವರೆಗೆ ಈ ಸ್ಥಳದಲ್ಲಿ ಅನೇಕ ಯಜ್ಞಗಳನ್ನು ಮಾಡಲು ಪ್ರಾರಂಭವಾಯಿತು ಮತ್ತು ಈಗಲೂ ನಡೆಯುತ್ತಿದೆ. ಈ ಯಜ್ಞಗಳು ಧರ್ಮಕಾರ್ಯಕ್ಕಾಗಿ ಮತ್ತು ‘ಹಿಂದೂ ರಾಷ್ಟ್ರವು ಬೇಗನೆ ಸ್ಥಾಪನೆಯಾಗಬೇಕು’, ಎಂಬುದಕ್ಕಾಗಿ ಮಾಡಲಾಗುತ್ತಿದೆ. ಈ ಯಜ್ಞಗಳ ಮಾಧ್ಯಮದಿಂದ ಸಾಧಕರಿಗೆ ಅನೇಕ ದೇವತೆಗಳ ಆಶೀರ್ವಾದವು ಲಭಿಸಿದೆ. ಧರ್ಮಕಾರ್ಯಕ್ಕಾಗಿ ಹೇಗೆ ಶ್ರೀಕೃಷ್ಣನ ರಥದ ಮೇಲೆ ಮಾರುತಿರಾಯನಿರುವನೋ, ಹಾಗೆಯೇ ಅವನು ರಾಮನಾಥಿ ಆಶ್ರಮದ ಶಿಖರದ ಮೇಲೆ ಧ್ವಜದ ರೂಪದಲ್ಲಿ ಸಂರಕ್ಷಣೆಗಾಗಿ ವಿರಾಜಮಾನನಾಗಿದ್ದಾನೆ. ಮಾರುತಿಯಂತೆ ಪ್ರಭು ರಾಮಚಂದ್ರನೂ ಪರಾತ್ಪರ ಗುರುದೇವರ ರೂಪದಲ್ಲಿ ಆಶ್ರಮದಲ್ಲಿರುವರು.

೫. ಹಿಂದೂ ರಾಷ್ಟ್ರ ಸ್ಥಾಪನೆಗೆ ಈಗ ತುಂಬಾ ಸಮಯ ಬೇಕಾಗಿಲ್ಲ !

ಹಿಂದೂ ಧರ್ಮಕ್ಕೆ ಸಂಕಟ ಬಂದಿದೆ. ಸಾಧಕರಿಗೆ ತೊಂದರೆಯಾಗುತ್ತಿದೆ. ಹಿಂದೂ ರಾಷ್ಟ್ರ-ಸ್ಥಾಪನೆಯಲ್ಲಿ ಅಡಚಣೆಗಳು ಬರುತ್ತಿವೆ; ಆದರೆ ಈಗ ಹಿಂದೂ ರಾಷ್ಟ್ರ ಸ್ಥಾಪನೆಯಾಗಲು ಬಹಳ ಸಮಯ ಬೇಕಾಗಿಲ್ಲ. ಶ್ರೀರಾಮನ ಕೃಪೆಯಿಂದ ಶ್ರೀರಾಮಜನ್ಮ ಭೂಮಿಯು ಮುಕ್ತವಾಯಿತು. ಇದಕ್ಕಾಗಿ ಅವನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ.

೬. ಪ್ರಾರ್ಥನೆ ಮತ್ತು ಕೃತಜ್ಞತೆ

‘ಹೇ ಗುರುದೇವಾ, ನಮ್ಮೆಲ್ಲ ಸಾಧಕರಲ್ಲಿ ಅನೇಕ ಸ್ವಭಾವದೋಷಗಳಿವೆ. ಈ ಸ್ವಭಾವದೋಷಗಳನ್ನು ದೂರ ಮಾಡಿರಿ. ನಮ್ಮಿಂದ ಸಾಧನೆಯನ್ನು ಮಾಡಿಸಿಕೊಳ್ಳಿ. ನಮಗೆ ಶಕ್ತಿ ಮತ್ತು ಬುದ್ಧಿಯನ್ನು ನೀಡಿ ಹಾಗೂ ನಮ್ಮೆಲ್ಲ ಸಾಧಕರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಿಸಿಕೊಳ್ಳಿರಿ. ನಮ್ಮನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಿರಿ. ನಾವೆಲ್ಲ ಸಾಧಕರು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ನಾನು ಮತ್ತು ಸೌ. ಲಕ್ಷ್ಮಿ (ಮಾಯಿ) ನಾವಿಬ್ಬರೂ ತಮ್ಮ ಚರಣಗಳಲ್ಲಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ.

ತಮ್ಮ ಚರಣ ಸೇವಕ, ಪ.ಪೂ. ದಾಸ ಮಹಾರಾಜ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೧೯)

Leave a Comment