ಪ್ರಭು ಶ್ರೀರಾಮ, ಮಾತಾಜಾನಕಿ, ಲಕ್ಷ್ಮಣರ ಚಿತ್ರವಿರುವ ಸಂವಿಧಾನದ ಪುಟ

ಲಂಕೆಯಿಂದ ವಿಜಯಿಯಾಗಿ ಪುಷ್ಪಕ ವಿಮಾನದಿಂದ ಅಯೋಧ್ಯೆಗೆ ಹಿಂದಿರುಗುತ್ತಿರುವ ಪ್ರಭು ಶ್ರೀರಾಮ, ಮಾತಾ ಜಾನಕಿ ಮತ್ತು ಲಕ್ಷ್ಮಣ ಇವರ ಛಾಯಾಚಿತ್ರವಿದೆ.

ಭಾರತೀಯರಿಗೆ ಪ್ರಭು ಶ್ರೀರಾಮನು ಆದರ್ಶ ಮತ್ತು ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಸಂವಿಧಾನ ರಚನಾಕಾರರೂ ಸಂವಿಧಾನದ ಮೊದಲ ಪ್ರತಿಯ ಪ್ರಕಾಶನ ಮಾಡಿದಾಗ, ಅದರಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಚೀನತೆಯನ್ನು ತೋರ್ಪಡಿಸಿದ್ದಾರೆ. ಸಂವಿಧಾನದ ಮೊದಲ ಪ್ರತಿಯಲ್ಲಿ ಮೂರನೇ ಕ್ರಮಾಂಕದ ಛಾಯಾಚಿತ್ರದಲ್ಲಿ ಸಂವಿಧಾನ ರಚನಾಕಾರರ ಸಭೆಯಲ್ಲಿ ಅನೇಕ ಜಾತಿ-ಮತ ಪಂಥಗಳ ಜನರಿದ್ದರು. ಅವರಲ್ಲಿ ಯಾರೂ ಇದನ್ನು ಆಕ್ಷೇಪಿಸಲಿಲ್ಲ. ಅಂತಿಮವಾಗಿ ಎಲ್ಲರ ಅನುಮತಿಯಿಂದಲೇ ಸಂವಿಧಾನದಲ್ಲಿ ಈ ಚಿತ್ರವನ್ನು ಮುದ್ರಿಸಿರಬಹುದು. ಇದೇ ಸಂವಿಧಾನದಲ್ಲಿ ವೈದಿಕ ಕಾಲದ ಆಶ್ರಮ (ಗುರುಕುಲ), ಯುದ್ಧಭೂಮಿಯಲ್ಲಿ ವಿಷಾದಗೊಂಡಿದ್ದ ಅರ್ಜುನನಿಗೆ ಪ್ರೇರಣೆ ನೀಡುತ್ತಿರುವ ಭಗವಾನ ಶ್ರೀಕೃಷ್ಣ, ಮಹಾವೀರ ಮುಂತಾದ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಮತ್ತು ಪೂಜನೀಯ ಮಹಾಪುರುಷರ ಚಿತ್ರಗಳನ್ನು ಸಂವಿಧಾನ ನಿರ್ಮಾಣಕಾರರು ಇಟ್ಟಿದ್ದಾರೆ. ಇಂತಹ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿಯಾಗಿದೆ.

(ಆಧಾರ: ಶ್ರೀರಾಮಜನ್ಮಭೂಮಿ ಆಯೋಧ್ಯಾ ಕೋ ಸಮಜೋ – ಶ್ರೀರಾಮಜನ್ಮಭೂಮಿ ಆಯೋಧ್ಯೆಯನ್ನು ತಿಳಿಯಿರಿ) (ಪ್ರಕಾಶನ : ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣ ಉಚ್ಚಾಧಿಕಾರ ಸಮಿತಿ)

Leave a Comment