ಸಾಧನಾವೃದ್ಧಿ ಸತ್ಸಂಗ (2)

ಕಳೆದ ಲೇಖನದಲ್ಲಿ ನಾವು ಅಧ್ಯಾತ್ಮ ಪ್ರಸಾರವು ಸರ್ವೋತ್ತಮ ಸತ್ಸೇವೆಯಾಗಿದೆ ಎಂದು ತಿಳಿದುಕೊಂಡಿದ್ದೆವು. ಅಧ್ಯಾತ್ಮ ಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿದೆ. ಅದರ ವಿಷಯದಲ್ಲಿ ಒಂದು ಸುಂದರವಾದ ಕಥೆಯಿದೆ. ಒಂದು ಸಲ ಗುರುಗಳು ತಮ್ಮ ಇಬ್ಬರು ಶಿಷ್ಯರನ್ನು ಕರೆದು ಸ್ವಲ್ಪ ಗೋಧಿಯ ಕಾಳುಗಳನ್ನು ನೀಡುತ್ತಾರೆ. ನಾನು ಹಿಂದಿರುಗಿ ಬರುವ ತನಕ ಈ ಗೋಧಿಯನ್ನು ಒಳ್ಳೆಯ ರೀತಿಯಲ್ಲಿ ಸಂಭಾಳಿಸಿಟ್ಟುಕೊಳ್ಳಿ ಎಂದು ಹೇಳಿ ಹೋಗುತ್ತಾರೆ. ಒಂದು ವರ್ಷದ ಬಳಿಕ ಗುರುಗಳು ಬಂದ ನಂತರ ಮೊದಲನೆಯ ಶಿಷ್ಯನ ಬಳಿಗೆ ಹೋಗಿ, ಗೋಧಿಕಾಳುಗಳನ್ನು ಚೆನ್ನಾಗಿ ಇಟ್ಟುಕೊಂಡಿರುವೆಯಲ್ಲ? ಎಂದು ವಿಚಾರಿಸುತ್ತಾರೆ. ಶಿಷ್ಯನು ‘ಹೌದು’, ಎಂದು ಉತ್ತರಿಸಿದಾಗ, ಗುರುಗಳು ಆ ಗೋಧಿಕಾಳುಗಳನ್ನು ತರಲು ಹೇಳುತ್ತಾರೆ. ಆಗ ಶಿಷ್ಯನು ಗೋಧಿಕಾಳು ಇಟ್ಟಿರುವ ಡಬ್ಬಿಯನ್ನು ತಂದು ತೋರಿಸುತ್ತಾನೆ ಮತ್ತು ಗುರುಗಳ ಬಳಿ, ‘ನೀವು ಕೊಟ್ಟಿರುವ ಗೋಧಿಯು ಹಾಗೆಯೇ ಇದೆ’ ಎನ್ನುತ್ತಾನೆ. ಗುರುಗಳು ‘ಸರಿ’ ಎಂದು ಹೇಳಿ ಇನ್ನೊಬ್ಬ ಶಿಷ್ಯನ ಬಳಿಗೆ ಹೋಗುತ್ತಾರೆ ಆ ಶಿಷ್ಯನ ಬಳಿಯೂ ಗೋಧಿಯ ಬಗ್ಗೆ ವಿಚಾರಿಸುತ್ತಾರೆ. ಆ ಶಿಷ್ಯನು ಗುರುಗಳನ್ನು ಹತ್ತಿರದ ಗದ್ದೆಗೆ ಕರೆದುಕೊಂಡು ಹೋಗುತ್ತಾನೆ. ಗುರುಗಳು ನೋಡಿದಾಗ, ಎಲ್ಲೆಡೆಗಳಲ್ಲಿ ಗೋಧಿಯ ತೆನೆಗಳಿಂದ ತುಂಬಿದ ಬೆಳೆಯು ಕಾಣಿಸುತ್ತದೆ. ಅದನ್ನು ನೋಡಿ ಗುರುಗಳಿಗೆ ಬಹಳ ಆನಂದವಾಗುತ್ತದೆ. ಇನ್ನೊಬ್ಬ ಶಿಷ್ಯನು ಏನು ಮಾಡಿದ್ದನು? ಗುರುಗಳು ನೀಡಿದ ಗೋಧಿಕಾಳುಗಳಿಂದ ಅನೇಕ ಗೋಧಿಕಾಳುಗಳನ್ನು ಮಾಡಿದ್ದನು. ಹೀಗೇ ಮೊದಲನೆಯ ಶಿಷ್ಯನು ಕೇವಲ ತನ್ನ ಬಳಿ ಗೋಧಿಕಾಳುಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದನು; ಈ ವಿಷಯದಿಂದ ಏನು ಕಲಿಯಲು ಸಿಗುತ್ತದೆ? ಎಂದರೆ ಗುರುಗಳು ಅಥವಾ ಸಂತರಿಗೆ ಏನು ಅಪೇಕ್ಷಿತವಿದೆ ಅದನ್ನು ಅರಿತು ಅದರಂತೆ ಕೃತಿಯನ್ನು ಮಾಡಬೇಕು. ಗುರುಗಳು ನೀಡಿದ ನಾಮ, ಹಾಗೂ ಅಧ್ಯಾತ್ಮದ ಜ್ಞಾನವನ್ನು ಕೇವಲ ನಮಗಾಗಿ ಮಾತ್ರ ಇಟ್ಟುಕೊಳ್ಳದೇ ಅದನ್ನು ಇತರರಿಗೆ ನೀಡಿ ಹೆಚ್ಚಿಸಬೇಕು. ಶ್ರೀಗುರುಗಳಿಗೆ ಅದೇ ಅಪೇಕ್ಷಿತವಿದೆ.

ಅ. ಸತ್ಸೇವೆಯ ಮೂಲಕ ಅಷ್ಟಾಂಗ ಸಾಧನೆಯಾಗುತ್ತದೆ !

ಅಷ್ಟಾಂಗ ಸಾಧನೆ ಎಂದರೆ ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ, ಸ್ವಭಾವದೋಷ ನಿರ್ಮೂಲನ, ಅಹಂ ನಿರ್ಮೂಲನ ಹಾಗೂ ಭಾವಜಾಗೃತಿ!

ಅ೧. ಸತ್ಸೇವೆಯನ್ನು ಮಾಡುವಾಗ ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ, ಸೇವೆಯು ಉತ್ತಮವಾಗಿ ಆಗಬೇಕಾದರೆ ಏನೇನು ಮಾಡಬೇಕು ಎಂದೆಲ್ಲ ವಿಚಾರವನ್ನು ಮಾಡುತ್ತೇವೆ. ಅದರಿಂದ ಒಂದು ರೀತಿಯಲ್ಲಿ ನಾವು ದೇವರ ಅನುಸಂಧಾನದಲ್ಲಿರುತ್ತೇವೆ. ಇದರಿಂದ ಸಾಧನೆಯಲ್ಲಿನ ಭಾವಜಾಗೃತಿಯ ಅಂಗಗಳ ವಿಕಸನವಾಗುತ್ತವೆ ಮತ್ತು ಈಶ್ವರನಿಂದಲೂ ನಮಗೆ ಸಹಾಯ ಸಿಗುತ್ತದೆ. ಸಮಾಜದಿಂದ ಅನೇಕ ಬಾರಿ ಸಕಾರಾತ್ಮಕ ಪ್ರತಿಸ್ಪಂದನ ಸಿಗುತ್ತದೆ. ಆಗ ನಮ್ಮ ಮಿತಿಯ ಅರಿವಾಗುತ್ತದೆ. ಈಶ್ವರನ ಶ್ರೇಷ್ಠತ್ವದ ಅರಿವಾಗುತ್ತದೆ ಮತ್ತು ಈಶ್ವರನೇ ಸತ್ ನ ಕಾರ್ಯವನ್ನು ನಮ್ಮನ್ನು ಮಾಧ್ಯಮವನ್ನಾಗಿಸಿ ಹೇಗೆ ಮಾಡಿಸಿಕೊಳ್ಳುತ್ತಿದ್ದಾನೆ ಎಂಬುವುದರ ಅರಿವಾಗಿ ಕೃತಜ್ಞತೆ ಅನಿಸುತ್ತದೆ.

ಅ೨. ಸತ್ಸಂಗ : ಸತ್ಸೇವೆಯನ್ನು ಮಾಡುವಾಗ ನಮಗೆ ಸಾಧಕರ ಅಥವಾ ಸಂತರ ಸತ್ಸಂಗವು ಸಿಗುತ್ತದೆ.

ಅ೩. ನಾಮಸ್ಮರಣೆ : ಸತ್ಸೇವೆಯ ಮೂಲಕ ನಮಗೆ ಸಕಾರಾತ್ಮಕ ಶಕ್ತಿ ಮತ್ತು ಚೈತನ್ಯ ಸಿಗುತ್ತಿರುವುದರಿಂದ ನಮ್ಮ ನಾಮಸ್ಮರಣೆಯೂ ಚೆನ್ನಾಗಿ ಆಗುತ್ತದೆ. ಶಾರೀರಿಕ ಸತ್ಸೇವೆಯನ್ನು ಮಾಡುವಾಗ ನಾಮಸ್ಮರಣೆಯನ್ನು ಮಾಡಿದರೆ, ಆ ಸೇವೆಯಲ್ಲಿ ಈಶ್ವರನ ಸಹಾಯ ಸಿಗುತ್ತದೆ, ಹಾಗೂ ಈಶ್ವರನೊಂದಿಗೆ ಅನುಸಂಧಾನವು ಅಬಾಧಿತವಾಗಿರುತ್ತದೆ.

ಅ೪. ತ್ಯಾಗ : ಅಧ್ಯಾತ್ಮದಲ್ಲಿ ತನು, ಮನ ಮತ್ತು ಧನದ ತ್ಯಾಗವನ್ನು ಮಾಡಬೇಕಾಗಿರುತ್ತದೆ. ಯಾವಾಗ ಸತ್ಸೇವೆಗಾಗಿ ನಮ್ಮ ಶರೀರವನ್ನು ಸವೆಸುತ್ತೇವೆಯೋ ಆಗ ನಮ್ಮ ತನುವಿನ ತ್ಯಾಗವಾಗುತ್ತದೆ. ಸೇವೆಯನ್ನು ಮಾಡುವಾಗ ನಾಮಸ್ಮರಣೆಯನ್ನು ಮಾಡಿದರೆ ಮನಸ್ಸಿನ ತ್ಯಾಗವಾಗುತ್ತದೆ. ಸೇವೆಯನ್ನು ಇನ್ನಷ್ಟು ಉತ್ತಮವಾಗಿ ಆಗಬೇಕೆಂದು ಪ್ರಯತ್ನಿಸುತ್ತೇವೆ ಆಗ ಅದರಿಂದ ಬುದ್ಧಿಯ ತ್ಯಾಗವಾಗುತ್ತದೆ. ಸೇವೆಗಾಗಿ ನಮಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಲು ದುಡ್ಡು ಖರ್ಚಾದರೆ ಅದರಿಂದ ನಮ್ಮ ಧನದ ತ್ಯಾಗವಾಗುತ್ತದೆ. ಅಂದರೆ ಸತ್ಸೇವೆಯ ಮೂಲಕ ತಿಳಿದು ಅಥವಾ ತಿಳಿಯದೇ ನಮ್ಮ ತನು, ಮನ, ಧನದ ತ್ಯಾಗವಾಗುತ್ತದೆ.

ಆ. ಸೇವೆಯ ಮೂಲಕ ನಮ್ಮಲ್ಲಿ ವ್ಯಾಪಕತ್ವವು ಮೂಡುತ್ತದೆ

ಅದು ಹೇಗೆ? ಸೇವೆಯ ಮೂಲಕ ನಮಗೆ ಸಮಾಜದೊಂದಿಗೆ ಸಂಪರ್ಕ ಬರುತ್ತದೆ. ಇತರರಿಗೆ ನಾವು ಸಾಧನೆಯನ್ನು ಹೇಳಲು ಪ್ರಯತ್ನಿಸುತ್ತೇವೆ, ಆಗ ನಮ್ಮಲ್ಲಿ ವ್ಯಾಪಕತ್ವ ಬರುತ್ತದೆ. ಇತರರಿಗೆ ಅವರ ಪ್ರಕೃತಿಗನುಸಾರ ಹೇಳಬೇಕಾಗುತ್ತದೆ. ಇದರಿಂದ ನಮ್ಮಲ್ಲಿ ಪ್ರೀತಿಯು ಮೂಡುತ್ತದೆ.

ಇ. ಸ್ವಭಾವದೋಷ ಮತ್ತು ಅಹಂನಿರ್ಮೂಲನೆ

ನಾವು ಯಾವಾಗ ಅಧ್ಯಾತ್ಮ ಪ್ರಸಾರಕ್ಕಾಗಿ ಹೋಗುತ್ತೇವೆಯೋ, ಆಗ ನಮಗೆ ಕೆಲವೊಮ್ಮೆ ಪ್ರತಿಕೂಲ ಸ್ಪಂದನಗಳು ಸಹ ಸಿಗುತ್ತವೆ. ಆಗ ಅದರಿಂದ ನಮ್ಮ ಅಹಂನಿರ್ಮೂಲನೆ ಆಗುತ್ತದೆ. ಹಿಂದಿನ ಕಾಲದಲ್ಲಿ ಸಾಧನಾನಿರತ ಕೆಲವು ಜೀವಗಳು ಭಿಕ್ಷೆ ಬೇಡಿ ಊಟ ಮಾಡುತ್ತಿದ್ದವು. ಅವರ ಉದ್ದೇಶವು ದೇಹಬುದ್ಧಿ, ಇಷ್ಟಾನಿಷ್ಟ ದೂರವಾಗಿ ಅಹಂನಿರ್ಮೂಲನೆಯಾಗಬೇಕು ಎಂದಾಗಿತ್ತು. ನಾವು ಇದರ ಮೊದಲಿನ ಲೇಖನಗಳಲ್ಲಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವವನ್ನು ತಿಳಿದುಕೊಂಡಿದ್ದೆವು. ಸೇವೆಯ ಮೂಲಕ ನಮಗೆ ಅನೇಕರೊಂದಿಗೆ ಸಂಪರ್ಕ ಉಂಟಾಗುತ್ತದೆ. ಅದರಿಂದ ನಮಗೆ ನಮ್ಮ ತಪ್ಪುಗಳು ಹಾಗೂ ಸ್ವಭಾವದೋಷಗಳು ಗಮನಕ್ಕೆ ಬರುತ್ತವೆ. ನಾವು ಏನೂ ಪ್ರಯತ್ನ ಮಾಡದಿದ್ದರೆ ನಮಗೆ ನಮ್ಮ ಬಗ್ಗೆ ಒಳ್ಳೆಯದೇ ಅನಿಸುತ್ತಿರುತ್ತದೆ. ಆದರೆ ಸತ್ಸೇವೆಯ ಮೂಲಕ ನಮ್ಮಲ್ಲಿರುವ ಕೊರತೆಯು ನಮಗೆ ಗಮನಕ್ಕೆ ಬರುತ್ತದೆ.

ಈ ರೀತಿ ಸತ್ಸೇವೆಯ ಮೂಲಕ ನಮ್ಮ ಅಷ್ಟಾಂಗ ಸಾಧನೆಯಾಗುತ್ತದೆ. ಹಾಗಾಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಸತ್ಸೇವೆಯನ್ನು ಮಾಡುವುದು ಮಹತ್ವದ್ದಾಗಿದೆ. ಇಂದು ತೀವ್ರ ತಳಮಳದಿಂದ ಸೇವೆಯನ್ನು ಮಾಡುತ್ತಿರುವ ಅನೇಕ ಜನರು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡಿದ್ದಾರೆ.

ಈ. ಸೇವೆಯ ತೀವ್ರ ತಳಮಳವಿದ್ದಲ್ಲಿ ಮಿತಿಗಳೂ ದೂರವಾಗುತ್ತದೆ

ಸೇವೆಯ ತೀವ್ರ ತಳಮಳವಿದ್ದಲ್ಲಿ ಸೇವೆಯನ್ನು ಮಾಡುವಾಗ ಶಾರೀರಿಕ, ಕೌಟುಂಬಿಕ, ಆರ್ಥಿಕ ಮಿತಿಯೂ ಸಹ ಇಲ್ಲವಾಗುತ್ತವೆ. ಮತ್ತು ಶ್ರೀಗುರುಗಳೇ ಅವರ ಅಸ್ತಿತ್ವದ ಅನುಭೂತಿಯನ್ನು ನೀಡುತ್ತಾರೆ. ಇಂತಹ ಅನೇಕ ಅನುಭೂತಿಗಳಿವೆ. ತುಳಜಾಪುರದ ಒಬ್ಬ ಮಹಿಳೆಗೆ ಗುರುಪೂರ್ಣಿಮೆಯ ಸೇವೆಯಲ್ಲಿ ಪಾಲ್ಗೊಳ್ಳುವ ಬಹಳ ಇಚ್ಛೆಯಿತ್ತು. ಆದರೆ ಮನೆಯ ಹಾಗೂ ಗದ್ದೆಯ ಕೆಲಸ ಮಾಡಲು ಯಾರೂ ಇಲ್ಲದ ಕಾರಣ ಅವರಿಗೆ ಪ್ರಸಾರದ ಸೇವೆಗೆ ಹೋಗಲು ಆಗುತ್ತಿರಲಿಲ್ಲ. ಯಜಮಾನರು ನೌಕರಿಗೆ ಹೋಗುತ್ತಿದ್ದುದರಿಂದ ಅವರು ಗುರುಗಳಲ್ಲಿಯೇ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಒಂದು ದಿನ ಅವರ ಯಜಮಾನರು ವಾಹನವನ್ನು ತೆಗೆದುಕೊಂಡು ಬರುತ್ತಿರುವಾಗ ಒಬ್ಬ ೮-೧೦ ವರ್ಷದ ಹುಡುಗನು ಕೈತೋರಿಸಿ ಅವರ ವಾಹನವನ್ನು ನಿಲ್ಲಿಸಿದನು. ಯಜಮಾನರು ‘ಎಲ್ಲಿಗೆ ಹೋಗಬೇಕಾಗಿದೆ’ ಎಂದು ವಿಚಾರಿಸಿದಾಗ ತುಳಜಾಪುರಕ್ಕೆ ಎಂದು ಉತ್ತರಿಸಿದನು. ಅವನನ್ನು ತುಳಜಾಪುರಕ್ಕೆ ಬಿಡುವಾಗ ಆ ಹುಡುಗನು ನನಗೆ ನಿಮ್ಮೊಂದಿಗೆ ಬರಬೇಕಾಗಿದೆ. ಯಜಮಾನರಿಗೆ ಸ್ವಲ್ಪ ಆಶ್ಚರ್ಯವೆನಿಸಿತು. ಆದರೆ ಅವರು ಆ ಹುಡುಗನನ್ನು ಮನೆಗೆ ಕರೆದುಕೊಂಡು ಬಂದರು ಮತ್ತು ಎಲ್ಲ ಪ್ರಸಂಗವನ್ನು ತಿಳಿಸಿದರು. ಆಗ ಮಹಿಳೆ ‘ನನಗೆ ಸೇವೆಗೆ ಹೋಗಬೇಕಾಗಿದೆ, ಮತ್ತು ಗೋವುಗಳನ್ನು ಕಾಯುವವರು ಯಾರೂ ಇಲ್ಲ, ಅದಕ್ಕಾಗಿ ಅವನನ್ನು ಇಟ್ಟುಕೊಳ್ಳೋಣ’ ಎಂದರು. ಯಜಮಾನರು ‘ನೀನು ಇರುವಿಯೇನು?’ ಎಂದು ಕೇಳಿದಾಗ ಅವನು ಆಗಬಹುದು ಎಂದನು. ಆ ಹುಡುಗನು ಪ್ರತಿದಿನ ಗದ್ದೆಗೆ ಹೋಗುತ್ತಿದ್ದನು ಮತ್ತು ಹಸುಗಳನ್ನು ಮೇಯಿಸುತ್ತಿದ್ದನು. ಹಾಗಾಗಿ ಆ ಮಹಿಳೆಗೆ ಗುರುಪೂರ್ಣಿಮೆಯ ಸೇವೆಗೆ ಹೋಗಲು ಆಗುತ್ತಿತ್ತು. ಅವನು ಗುರುಪೂರ್ಣಿಮೆಯಾಗುವ ತನಕ ಅವರ ಮನೆಯಲ್ಲಿದ್ದನು. ಗುರುಪೂರ್ಣಿಮೆಯ ದಿನದಂದು ಅವನು ಕಿಚ್ಚಡಿಯನ್ನು ತಯಾರಿಸಿ ಕೊಟ್ಟನು. ಆ ಹುಡುಗನಿಂದಾಗಿ ಸೇವೆ ಮಾಡಲು ಸಾಧ್ಯವಾದ ಬಗ್ಗೆ ಆ ಮಹಿಳೆಗೆ ಬಹಳ ಆನಂದವೆನಿಸಿತು. ಅವನು ಇಷ್ಟೊಂದು ಕೆಲಸ ಮಾಡಿದ ಬಗ್ಗೆ ಅವನಿಗೆ ಏನಾದರೂ ಮುಂದಿನ ಸಹಾಯ ಮಾಡುವ ದೃಷ್ಟಿಯಿಂದ ಅವರು ‘ನಿನ್ನ ಬಳಿ ಏನಾದರೂ ಕಾಗದಪತ್ರಗಳಿದ್ದರೆ ಹೇಳು, ನಿನಗೆ ಎಲ್ಲಿಯಾದರೂ ಕೆಲಸ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದರು. ಅವನು ಅರ್ಧ ಗಂಟೆ ಹೊರಗೆ ಕುಳಿತು ವಿಚಾರ ಮಾಡತೊಡಗಿದನು; ಆದರೆ ಅನಂತರ ಅವನು ಮನೆಗೆ ಬರಲೇ ಇಲ್ಲ. ಅವನನ್ನು ಹುಡುಕಲು ಬಹಳ ಪ್ರಯತ್ನ ಮಾಡಿಯೂ ಅವನು ಎಲ್ಲಿಯೂ ಸಿಗಲಿಲ್ಲ. ಅವನು ಗುರುಪೂರ್ಣಿಮೆಯ ತನಕ ಮನೆಯ, ಗದ್ದೆಯ ಎಲ್ಲ ಕೆಲಸಗಳನ್ನು ಉಚಿತವಾಗಿ ಮಾಡಿದನು. ಈಶ್ವರನು ಭಕ್ತನ ಮೊರೆಗೆ ಧಾವಿಸಿ ಬರುತ್ತಾನೆ. ಇದು ಅದರದ್ದೇ ಅನುಭೂತಿಯಾಗಿತ್ತು.

ಜನಾಬಾಯಿಯ ಮನೆಯಲ್ಲಿ ದೇವರು ಬೀಸುವುದು-ಕುಟ್ಟುವುದು, ಸಂತ ಎಕನಾಥರ ಮನೆಗೆ ಶ್ರೀಖಂಡ್ಯಾನ ರೂಪದಲ್ಲಿ ಬಂದು ನೀರು ತುಂಬಿಸಿದುದನ್ನು ನಾವು ಕಥೆಗಳ ಮೂಲಕ ಕೇಳಿದ್ದೆವು. ಇದು ಕೇವಲ ಹಿಂದಿನ ಕಾಲದಲ್ಲಿ ಘಟಿಸುತ್ತಿತ್ತು ಎಂದೇನಿಲ್ಲ, ಇಂದಿನ ಕಾಲದಲ್ಲಿಯೂ ಇಂತಹ ಅನುಭೂತಿಗಳು ಬರುತ್ತಿವೆ. ನಮ್ಮ ಶ್ರದ್ಧೆ ಮತ್ತು ತಳಮಳ ಮಾತ್ರ ಅದರಲ್ಲಿರಬೇಕಾಗುತ್ತದೆ.

ಉ. ಸತ್ಸೇವೆ

ಕೆಲವು ಜನರಿಗೆ ರೋಗಿಗಳ ಆರೈಕೆ ಅಥವಾ ಬಡವರಿಗೆ ಸಹಾಯ ಮಾಡುವುದು ಸಹ ಸೇವೆಯೇ ಆಗಿದೆ ಎಂದು ಅನಿಸುತ್ತದೆ. ಏನೂ ಮಾಡದಿರುವುದಕ್ಕಿಂತ ಅಥವಾ ಕೇವಲ ಸ್ವಂತ ವಿಚಾರವನ್ನು ಮಾಡುವುದಕ್ಕಿಂತ ಇತರರಿಗೆ ಸಹಾಯ ಮಾಡುವುದು ಒಳ್ಳೆಯದೇ. ಆದರೆ ಅದು ಕೇವಲ ಒಂದು ಹಂತದ ತನಕದ ಆಧ್ಯಾತ್ಮಿಕ ಪ್ರಗತಿ ಮಾಡಿಸಬಲ್ಲದು. ಮೋಕ್ಷಪ್ರಾಪ್ತಿಯಲ್ಲ. ಇದನ್ನು ಗಮನದಲ್ಲಿರಿಸಿಕೊಳ್ಳಬೇಕು. ಅಸತ್ ನ ಸೇವೆ ಉದಾ. : ರೋಗಿಗಳ ಸೇವೆ ಇತ್ಯಾದಿಗಳನ್ನು ಮಾಡುವಾಗ ‘ನಾನು ಸೇವೆಯನ್ನು ಮಾಡುತ್ತೇನೆ’ ಎಂಬ ಅಹಂ ಸಹ ಇರುತ್ತದೆ. ಹಾಗಾಗಿ ಅದರಿಂದ ಸಾಧನೆ ಎಂದು ವಿಶೇಷ ಉಪಯೋಗವೇನೂ ಆಗುವುದಿಲ್ಲ. ಅಸತ್ ನ ಸೇವೆಯಿಂದ ಕೊಡಕೊಳ್ಳುವಿಕೆಯ ಲೆಕ್ಕಾಚಾರವಾಗುವ ಸಾಧ್ಯತೆಯಿದೆ. ಇದಕ್ಕೆ ವಿರುದ್ಧವಾಗಿ ಸತ್ಸೇವೆಯನ್ನು ‘ಅಹಂ’ ಅನ್ನು ಮರೆಯಲಿಕ್ಕಾಗಿ ಮಾಡಲಾಗುತ್ತದೆ. ಹಾಗಾಗಿ ಸತ್ಸೇವೆಯನ್ನು ಮಾಡಲು ಪ್ರಾಧಾನ್ಯತೆಯನ್ನು ನೀಡಬೇಕು.

ಊ. ವ್ಯಷ್ಟಿ ಸಾಧನೆಗೆ ಸಮಷ್ಟಿ ಸಾಧನೆಯನ್ನು ಜೋಡಿಸಲು ಸಾಧನ – ಸತ್ಸೇವೆ

ಸದ್ಯ ಆಪತ್ಕಾಲವು ನಡೆಯುತ್ತಿದೆ. ಮೂರನೆಯ ಮಹಾಯುದ್ಧವು ಯಾವಾಗ ಬೇಕಾದರೂ ಪ್ರಾರಂಭವಾಗಬಲ್ಲದು, ಅದು ಹೇಳಲು ಸಾಧ್ಯವಿಲ್ಲ. ಇಂತಹ ಕಾಲದಲ್ಲಿ ವ್ಯಷ್ಟಿ ಸಾಧನೆಗೆ ಸಮಷ್ಟಿ ಸಾಧನೆಯನ್ನು ಜೋಡಿಸಿದರೆ ಸಾಧನೆಯು ಉತ್ತಮವಾಗಿ ಆಗುತ್ತದೆ. ಸಮಷ್ಟಿ ಸಾಧನೆ ಎಂದರೆ ಸಮಾಜವೇ ಸಾತ್ತ್ವಿಕ ಮತ್ತು ಧರ್ಮಪರಾಯಣವಾಗುವಂತೆ ಪ್ರಯತ್ನಿಸುವುದು!

ಹಿಂದಿನ ಕಾಲದಲ್ಲಿ ಸಮರ್ಥ ರಾಮದಾಸ ಸ್ವಾಮಿಯವರು, ಸ್ವಾಮಿ ವಿವೇಕಾನಂದರಂತಹ ದ್ರಷ್ಟಾರರೂ ಅದನ್ನೇ ಮಾಡಿದ್ದರು. ತಾವೂ ಸಹ ಈಗ ಕಾಲಾನುಸಾರ ಅವಶ್ಯವಿರುವಂತಹ ಹಿಂದೂ ಸಂಘಟನೆ ಮಾಡುವುದು, ಬೇರೆ ಬೇರೆ ಮಾಧ್ಯಮಗಳಿಂದಾಗುತ್ತಿರುವ ಧರ್ಮಹಾನಿಯನ್ನು ತಡೆಗಟ್ಟುವುದು, ರಾಷ್ಟ್ರೀಯ ಅಸ್ಮಿತೆಯ ಗೌರವವನ್ನು ಕಾಪಾಡುವುದು, ಧರ್ಮಜಾಗೃತಿ ಮಾಡುವುದು ಮುಂತಾದ ಸೇವೆಯನ್ನು ಮಾಡಬಹುದು. ಕೃಷ್ಣನು ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಿಂದ ಎತ್ತಿದ್ದನು, ಆಗ ಗೋಪಗೋಪಿಯರು ತಮ್ಮ ತಮ್ಮ ಕೋಲುಗಳಿಂದ ಪರ್ವತವನ್ನು ಎತ್ತಿ ಹಿಡಿದು ತಮ್ಮದೇ ಪರಿಯಿಂದ ಸಹಾಯವನ್ನು ಮಾಡಿದ್ದರು. ಅದೇ ರೀತಿ ನಾವು ಸಹ ಮಾಡಬೇಕಾಗಿದೆ.

ಊ. ದೇವರ ಕೃಪೆಯ ಸಾಧನ – ಸಮರ್ಪಣಾ ಭಾವದಿಂದ ಸತ್ಸೇವೆ

ನಮಗೆ ರಾಮಾಯಣದ ಅಳಿಲಿನ ಉದಾಹರಣೆಯು ಗೊತ್ತಿದೆ. ಲಂಕೆಯ ಮೇಲೆ ದಾಳಿ ನಡೆಸಲು ವಾನರಸೇನೆಯು ಸೇತುವೆಯನ್ನು ಕಟ್ಟುತ್ತಲಿತ್ತು. ಅದಕ್ಕಾಗಿ ವಾನರರು ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತಿ ತಂದು ಅದನ್ನು ನೀರಿನಲ್ಲಿ ಹಾಕುತ್ತಿದ್ದರು. ಹೀಗೆ ಆಗುತ್ತಿರುವಾಗ ಅಲ್ಲಿರುವ ಅಳಿಲು ಸಹ ಅದರಲ್ಲಿ ಪಾಲ್ಗೊಂಡಿತ್ತು., ಅದು ಒದ್ದೆಯಾಗಿ ಮರಳಿನಲ್ಲಿ ಹೊರಳಾಡುತ್ತಿತ್ತು ಮತ್ತು ಸೇತುವೆಯನ್ನು ಕಟ್ಟುತ್ತಿರುವ ಸ್ಥಳಕ್ಕೆ ಬಂದು ತನ್ನ ಶರೀರವನ್ನು ಝಾಡಿಸುತ್ತಿತ್ತು. ಸೇತುವೆಯ ನಿರ್ಮಾಾಣದ ದೃಷ್ಟಿಯಿಂದ ವಿಚಾರ ಮಾಡಿದರೆ ಅಳಿಲಿನ ಯೋಗದಾನವು ಅತ್ಯಲ್ಪವಾಗಿತ್ತು. ಆದರೆ ಅದು ತನ್ನ ಕ್ಷಮತೆಗನುಸಾರ ಈಶ್ವರೀ ಕಾರ್ಯದಲ್ಲಿ ಪಾಲ್ಗೊಂಡಿತು. ಹಾಗಾಗಿ ಪುಟ್ಟ ಅಳಿಲನ್ನು ರಾಮರಾಯರು ಎತ್ತಿ ಕೈಯಲ್ಲಿ ಇಟ್ಟುಕೊಂಡರು ಮತ್ತು ಪ್ರೇಮದಿಂದ ಕೈಯಾಡಿಸಿದರು. ಅಳಿಲಿನ ಉದ್ಧಾರವಾಯಿತು. ನಾವೂ ಸಹ ಸಮರ್ಪಣಾಭಾವದ ಆದರ್ಶವನ್ನು ಇಟ್ಟುಕೊಂಡು ನಮ್ಮ ಸಮಯಕ್ಕನುಸಾರ, ಕ್ಷಮತೆಗನುಸಾರ ನಮ್ಮ ಪ್ರಕೃತಿಗನುಸಾರ ಸತ್ಸೇವೆಯನ್ನು ಆರಂಭಿಸಿದರೆ ದೇವರ ಕೃಪೆಯು ನಮ್ಮ ಮೇಲಾಗದೇ ಇರುವುದೇನು?

ಅಳಿಲಿನ ಹಾಗೆ ನಾವು ಸಹ ಸತ್ಸೇವೆಯ ಅನುಭೂತಿಯನ್ನು ಪಡೆದುಕೊಳ್ಳೋಣ. ಅಲ್ಲವೇ? ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವನ್ನಿರಿಸಲು ನಾವು ನಿಯಮಿತವಾಗಿ ಸತ್ಸೇವೆಯನ್ನು ಹೇಗೆ ಮಾಡಬಹುದು ಎಂದು ಪ್ರಯತ್ನಿಸೋಣ. ಯಾರ ಬಳಿ ಸಮಯ ಇದೆ ಮತ್ತು ಆ ಸಮಯದಲ್ಲಿ ಸೇವೆಯನ್ನು ಲಭ್ಯ ಮಾಡಿಕೊಡಬೇಕು ಎಂದಾದರೆ ನಮಗೆ ತಿಳಿಸಿ. ಸನಾತನ ಸಂಸ್ಥೆಯ ವತಿಯಿಂದ ಕೇವಲ ಸತ್ಸಂಗದ ಮೂಲಕವೇ ಅಧ್ಯಾತ್ಮ ಪ್ರಸಾರವನ್ನು ಮಾಡಲಾಗುತ್ತದೆ ಎಂದೇನಿಲ್ಲ. ಜಾಲತಾಣಗಳು, ಗ್ರಂಥಗಳು, ಸೋಶಲ್ ಮಿಡಿಯಾ, ನಿಯತಕಾಲಿಕೆಗಳು, ಪ್ರವಚನಗಳು ಇಂತಹ ಅನೇಕ ಅಧ್ಯಾತ್ಮ ಪ್ರಸಾರದ ಮಾಧ್ಯಮಗಳಿವೆ. ನಿಮಗೆ ಸಮಯ ಕೊಡಲು ಆಗುತ್ತದೆ ಎಂದಾದರೆ ತಮ್ಮ ಆಸಕ್ತಿ, ಕ್ಷಮತೆ, ಕೌಶಲ್ಯ, ಶಿಕ್ಷಣ, ಹಾಗೂ ಅನುಭವಗಳ ಆಧಾರದಲ್ಲಿ ಸತ್ಸೇವೆಯನ್ನು ಲಭ್ಯ ಮಾಡಿಕೊಡಲು ನಾವು ಖಂಡಿತವಾಗಿಯೂ ಪ್ರಯತ್ನಿಸುವೆವು.

ನಾವು ಇನ್ನೂ ಒಂದು ಪ್ರಯತ್ನವನ್ನು ಮಾಡೋಣ. ನಮ್ಮ ಪರಿಚಿತರಲ್ಲಿ ಕಡಿಮೆ ಪಕ್ಷ ೩ ಜನರಿಗೆ ಸಾಧನೆ ಮತ್ತು ಸತ್ಸಂಗದಲ್ಲಿ ನಿಮಗೆ ಏನು ಕಲಿಯಲು ಸಿಗುತ್ತದೆ ಅದನ್ನು ಹೇಳೋಣ. ಸಾಧನೆಯ ಮೊದಲನೆಯ ಹಂತ ಎಂದು ಕುಲದೇವಿ ಹಾಗು ದತ್ತಗುರುಗಳ ನಾಮಜಪವನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂದು ಹೇಳೋಣ. ನಾವು ನಮ್ಮೆದುರಿಗಿರುವ ವ್ಯಕ್ತಿಗೆ ತಳಮಳದಿಂದ ಹೇಳೋಣ. ಆದರೆ ಅವರು ಕೇಳಲೇ ಬೇಕು, ಜಪ ಮಾಡಲೇ ಬೇಕು ಎಂದು ಆಗ್ರಹ ಹಿಡಿಯಬಾರದು. ನಾವು ನಮ್ಮ ಸೇವೆ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ನಿರಪೇಕ್ಷವಾಗಿ ಹೇಳಲು ಪ್ರಯತ್ನಿಸೋಣ. ಹೇಗೆ ಮಾತನಾಡುವುದು, ಹೇಗೆ ಹೇಳಬೇಕು, ಎಲ್ಲಿಂದ ಆರಂಭಿಸಬೇಕು, ಎಂದು ತಮಗೇನಾದರೂ ಪ್ರಶ್ನೆ ಉಂಟಾದಲ್ಲಿ ನಿಸ್ಸಂಕೋಚವಾಗಿ ನಮ್ಮನ್ನು ಸಂಪರ್ಕಿಸಬಹುದು. ಆದರೆ ಕಡಿಮೆ ಪಕ್ಷ ೩ ಜನರಿಗೆ ಸಾಧನೆ, ನಾಮಜಪ, ಸತ್ಸಂಗದ ವಿಷಯದಲ್ಲಿ ಹೇಳಲು ಪ್ರಯತ್ನಿಸೋಣ.

Leave a Comment