ಸಂಪತ್ಕಾಲದಿಂದ ಯುದ್ಧಕಾಲದೆಡೆಗೆ ಸೀಮೋಲ್ಲಂಘನೆ ಮಾಡಿ!

ವಿಜಯದಶಮಿಯು ಸೀಮೋಲ್ಲಂಘನೆ ಮಾಡುವ ದಿನವಾಗಿದೆ. ‘ಆಪರೇಷನ್ ಸಿಂದೂರ’ವು ಶತ್ರುವಿನ ಗಡಿಗಳ ಸೀಮೋಲ್ಲಂಘನೆ ಮಾಡಿ ‘ಶತ್ರುರಾಷ್ಟ್ರವನ್ನು ಗೆಲ್ಲಲು ಭಾರತೀಯ ಸೇನೆಯು ಸಮರ್ಥವಾಗಿದೆ’ ಎಂದು ಸಾಬೀತುಪಡಿಸಿದೆ. ‘ಆಪರೇಷನ್ ಸಿಂದೂರ’ದ ಸಮಯದಲ್ಲಿ ೫-೬ ದಿನಗಳ ಕಾಲ ಸತತವಾಗಿ ಅನುಭವಿಸಿದ ಯುದ್ಧದ ಪರಿಸ್ಥಿತಿಯನ್ನು ಭಾರತವು ಮುಂಬರುವ ಕೆಲವು ವರ್ಷಗಳ ಕಾಲ ನಿರಂತರವಾಗಿ ಅನುಭವಿಸಬೇಕಾಗಬಹುದು. ಇಡೀ ವಿಶ್ವದಲ್ಲಿ ಸದ್ಯ ಯುದ್ಧಜನ್ಯ ಪರಿಸ್ಥಿತಿ ಇದೆ. ಮೂರನೇ ಮಹಾಯುದ್ಧವು ಯಾವುದೇ ಸಮಯದಲ್ಲಿ ಆರಂಭವಾಗಬಹುದು. ಅಮೇರಿಕಾದ ಸುಂಕ ಸಮರದಿಂದ ಭವಿಷ್ಯದ ಯುದ್ಧದ ಪರಿಸ್ಥಿತಿಯಲ್ಲಿ ಆರ್ಥಿಕ ದಾಳಿಗಳು ನಡೆಯುವಂತಹ ಪರಿಸ್ಥಿತಿಯಿದೆ.
ಶಾಂತಿಯ ಸಮಯದಲ್ಲಿ ಜನಸಾಮಾನ್ಯರಿಗೆ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳ ಬಿಸಿ ತಗಲುವ ಪ್ರಮಾಣ ಅತ್ಯಲ್ಪವಿರುತ್ತದೆ. ಆದರೆ, ಮುಂಬರುವ ಯುದ್ಧದ ಸಮಯದಲ್ಲಿ ಮಾತ್ರ ನಾಗರಿಕರಿಗೆ ಜೀವಹಾನಿ, ಗಾಯಗಳು, ಅಂಗವೈಕಲ್ಯ, ಭಾವನಾತ್ಮಕ ಆಘಾತ (ಉದಾಹರಣೆಗೆ ಒತ್ತಡ, ಖಿನ್ನತೆ ಇತ್ಯಾದಿ), ಸ್ಥಳಾಂತರ, ನಿರುದ್ಯೋಗ ಮುಂತಾದ ಸಂಕಷ್ಟಗಳನ್ನು ನೇರವಾಗಿ ಎದುರಿಸಬೇಕಾಗುತ್ತದೆ. ಯುದ್ಧದ ಸಮಯದಲ್ಲಿ, ವಿಭಜಕ ಮತ್ತು ಅರ್ಬನ್ ನಕ್ಸಲ್ ಶಕ್ತಿಗಳು ದೇಶದೊಳಗೆ ಆಂತರಿಕ ಕಲಹ, ಗೊಂದಲ ಮತ್ತು ವದಂತಿಗಳನ್ನು ಸೃಷ್ಟಿಸಿ ಗಲಭೆಯಂತಹ ಅಂತರ್ಯುದ್ಧವನ್ನು ಉಂಟುಮಾಡಬಹುದು.
ವಿಜಯದಶಮಿಯಂದು ಸೀಮೋಲ್ಲಂಘದ ಸಂಪ್ರದಾಯವಿದೆ. ಈ ಬಾರಿಯ ವಿಜಯದಶಮಿಯು ಒಂದು ಸಂಕ್ರಮಣಕಾಲದ್ದಾಗಿದೆ. ಭಾರತವು ಸಂಪತ್ಕಾಲದಿಂದ ಯುದ್ಧಕಾಲದೆಡೆಗೆ ಸಾಗುತ್ತಿದೆ. ಆದ್ದರಿಂದ, ಯುದ್ಧಕಾಲದೆಡೆಗೆ ಸಾಗಲು ಶಾರೀರಿಕ ಮತ್ತು ಮಾನಸಿಕ ಸೀಮೋಲ್ಲಂಘನೆ ಮಾಡಿ. ಸಂಕ್ಷಿಪ್ತವಾಗಿ, ಶಾಂತಿಯ ಸಮಯದಲ್ಲಿ ಬೆವರು ಸುರಿಸಿದರೆ, ಯುದ್ಧದ ಸಮಯದಲ್ಲಿ ರಕ್ತಪಾತವಾಗುವುದಿಲ್ಲ ಎಂಬ ನಿಯಮವನ್ನು ಗಮನದಲ್ಲಿಟ್ಟುಕೊಂಡು, ಕಾಲದ ಸೀಮೋಲ್ಲಂಘನೆ ಮಾಡುವಾಗ ಅದನ್ನು ಎದುರಿಸಲು ಶಾರೀರಿಕ ಮತ್ತು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳಿರಿ.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.
ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ
ದಸರಾದ ದಿನದಂದು ಮಂದಾರದ ಎಲೆಗಳ ಮೇಲಾಗುವ ಸಕಾರಾತ್ಮಕ ಪರಿಣಾಮ ತೋರಿಸುವ ವೈಶಿಷ್ಟ್ಯಪೂರ್ಣ ಸಂಶೋಧನೆ !
ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಸದ್ಯದ ಈ ಆಪತ್ಕಾಲದಲ್ಲಿ ನವರಾತ್ರ್ಯುತ್ಸವವನ್ನು ಹೇಗೆ ಆಚರಿಸಬೇಕು ?
ನವರಾತ್ರಿ : ವ್ಯಾಪಾರೀಕರಣ ಮತ್ತು ಸಂಭವಿಸಬಹುದಾದ ಅಪಾಯಗಳು !
ಪುರಾಣದ ಕಥೆಗಳಿಂದ ಗಮನಕ್ಕೆ ಬಂದಂತಹ ದೇವಿಯ ವಿವಿಧ ಗುಣವೈಶಿಷ್ಟ್ಯಗಳು
ನವರಾತ್ರಿಯ ವ್ರತಗಳು ಮತ್ತು ಪೂಜೆ