೧೦೦% ರಷ್ಟು ಖಚಿತ ಭವಿಷ್ಯಕಾಗಿ ಸ್ತ್ರೀ ಬೀಜ ಫಲಿತವಾದ ಸಮಯ ಗೊತ್ತಾಗುವುದು ಅವಶ್ಯಕ!

ಸಾಮಾನ್ಯವಾಗಿ ಪ್ರಸ್ತುತ ಜನ್ಮಕುಂಡಲಿಯ(ಜಾತಕ)ಯನ್ನು ಜ್ಯೋತಿಷಿಗಳು ಏನು ಹೇಳುತ್ತಾರೆಯೋ ಅದರಲ್ಲಿ ೩೦ ರಿಂದ ೩೫% ರಷ್ಟು (ನಿಜ ) ಯೋಗ್ಯವಾಗಿರುತ್ತದೆ. ಜ್ಯೋತಿಷಿಗಳ ಸಾಧನೆ ಮತ್ತು ಅಧ್ಯಯನಕ್ಕನುಸಾರ ಅದರ ಪ್ರಮಾಣ ಹೆಚ್ಚುತ್ತದೆ. ಮಗುವು ಜನಿಸುತ್ತಿರುವಾಗ ತಲೆಯು ಕೆಳಗೆ ಕಂಡ ತಕ್ಷಣ,ಆ ಸಮಯವನ್ನು ನೆನಪಿನಲ್ಲಿಟ್ಟುಕೊಂಡು ಜನ್ಮ ಕುಂಡಲಿ(ಜಾತಕ) ತಯಾರಿಸಿದರೆ,ಆಗ ಅದು ೩೮% ದಷ್ಟ ಯೋಗ್ಯವಾಗಿರುತ್ತದೆ. ಗರ್ಭಾಶಯವು ಮೊದಲಬಾರಿಗೆ ಆಕುಂಚನ(ಕುಗ್ಗುವಾಗ) ಆಗುತ್ತಿರುವಾಗ, ಆ ಜನ್ಮದ ಸಮಯದ ಆ ಮೊದಲ ಸೆಕೆಂಡನ್ನು ಗಮನದಲ್ಲಿಟ್ಟು ಜನ್ಮ ಕುಂಡಲಿ ತಯಾರಿಸಿದರೆ, ಆಗ ಅದು ಸರಾಸರಿ ೪೪% ರಷ್ಟು ಯೋಗ್ಯವಾಗಿರುತ್ತದೆ. ಅದಕ್ಕೂ ಮೊದಲು ಹಿಂದೆ ಹೋಗಿ ಗರ್ಭಾಶಯದ ಚಲನವಲನವು ಮೊದಲಬಾರಿ ಯಾವಾಗ ಸ್ತ್ರೀಗೆ ಅರಿವಾಗುತ್ತದೆಯೋ, ಆ ಕ್ಷಣವನ್ನು ಗ್ರಹಿಸಿಕೊಂಡು ಆ ಸಮಯಕ್ಕನುಸಾರ ಜನ್ಮ ಕುಂಡಲಿ(ಜಾತಕ) ತಯಾರಿಸಿದರೆ ಸರಾಸರಿ ೪೭ ರಿಂದ ೪೮% ಯೋಗ್ಯವಾಗಿರುತ್ತದೆ . ಹೀಗೆ ಅನೇಕ ಹಂತಗಳು ಇವೆ. ಯಾವ ಕ್ಷಣಕ್ಕೆ ಸ್ತ್ರೀ ಬೀಜವು ಫಲಿಸಿದೆ ಎಂಬ ಕ್ಷಣವು ಗೊತ್ತಾದರೆ ಆಗ ೧೦೦% ರಷ್ಟು ಯೋಗ್ಯವಾಗಿ ಭವಿಷ್ಯ ಹೇಳಲು ಸಾಧ್ಯವಾಗುತ್ತದೆ. ಆದರೆ ಇದು ಯಾರಿಗೆ ತಿಳಿಯುವುದು? ನಮ್ಮ ಶರೀರದಲ್ಲಿ ಕೋಟಿಗಟ್ಟಲೆ ಜೀವಕೋಶಗಳು ಇರುತ್ತವೆ. ಅದರಲ್ಲಿ ಒಂದು ಜೀವಕೋಶದಲ್ಲಿ ಏನು ನಡೆದಿದೆ ಇದನ್ನು ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಯಾರಿಗೆ ತಿಳಿಯುತ್ತದೆ? ಯಾವ ಸ್ತ್ರೀಯು ಸ್ವತ: ಸಂತರ ಮಟ್ಟದಲ್ಲಿ ಇರುತ್ತಾಳೆಯೋ ಅವರಿಗೆ ತಿಳಿಯುತ್ತದೆ, ಅಂದರೆ ಹಿಂದಿನ ಕಾಲದಲ್ಲಿ ಋಷಿಮುನಿಗಳ ಪತ್ನಿಯಂದಿರಿಗೆ ಈಗ ಗರ್ಭಧಾರಣೆ ಆಗಿದೆ ಎಂಬ ಕ್ಷಣವು ತಿಳಿಯುತ್ತಿತ್ತು. ಪ್ರಸ್ತುತ ನಮಗೆ ಅದು ತಿಳಿಯಲು ಸಾಧ್ಯವಿಲ್ಲ.
(ಸಂಗ್ರಹಿತ)

Leave a Comment