ನವಗ್ರಹಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ಋಷಿಮುನಿಗಳಿಗೆ ತಿಳಿದಿತ್ತು
ಆಕಾಶದಲ್ಲಿ ಸೂರ್ಯನ ಸುತ್ತಲೂ ತಿರುಗುವ ಗ್ರಹಗಳು ಮಾನವನ ಜೀವನದ ಮೇಲೆ ಪರಿಣಾಮವನ್ನು ಮಾಡುತ್ತವೆ, ಎಂಬುದನ್ನು ನಮ್ಮ ಋಷಿಮುನಿಗಳು ಪ್ರಾಚೀನ ಕಾಲದಲ್ಲಿ ಗುರುತಿಸಿದ್ದರು. ಯೋಗಸಾಧನೆ ಮತ್ತು ತಪಶ್ಚರ್ಯೆಯಿಂದ ಋಷಿಮುನಿಗಳಿಗೆ ಅನುಕ್ರಮವಾಗಿ ಯೋಗಬಲ ಮತ್ತು ತಪೋಬಲ ಪ್ರಾಪ್ತವಾಗುತ್ತಿತ್ತು. ಋಷಿಮುನಿಗಳು ಉಚ್ಚ ಆಧ್ಯಾತ್ಮಿಕ ಸ್ತರದವರಾಗಿರುವುದರಿಂದ ಅವರಿಗೆ ಈಶ್ವರನಿಂದ ಜ್ಞಾನ ಪ್ರಾಪ್ತವಾಗುತ್ತಿತ್ತು. ಈ ಜ್ಞಾನವನ್ನು ಅವರು ವೇದಗಳಲ್ಲಿನ ಸೂಕ್ತಗಳಲ್ಲಿ ಬರೆದಿಟ್ಟಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಬಗ್ಗೆ ಋಗ್ವೇದದಲ್ಲಿ ೩೬, ಯಜುರ್ವೇದದಲ್ಲಿ ೪೪ ಹಾಗೂ ಅಥರ್ವವೇದದಲ್ಲಿ ೧೩೨ ಶ್ಲೋಕಗಳಿವೆ. ಜ್ಯೋತಿಷ್ಯಶಾಸ್ತ್ರದ ನಿಯಮಗಳು ಭಾರತದ ದರ್ಶನಶಾಸ್ತ್ರಗಳ ಮೇಲಾಧಾರಿತವಾಗಿವೆ.
ನವಗ್ರಹಗಳ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಮಾಡಿದ ಅಧ್ಯಯನ
ಭೂಕಂಪ ಮತ್ತು ಜ್ವಾಲಾಮುಖಿಗಳ ಅಧ್ಯಯನ ಮಾಡುವ ವಿಜ್ಞಾನಿಗಳಿಗೆ ‘ಜಗತ್ತಿನಲ್ಲಿನ ಭೂಕಂಪ, ಜ್ವಾಲಾಮುಖಿ, ತೀವ್ರ ಚಂಡಮಾರುತ ಅಥವಾ ದೊಡ್ಡ ದುರ್ಘಟನೆ ಮುಂತಾದ ಘಟನೆಗಳು ಹುಣ್ಣಿಮೆ ಅಥವಾ ಅಮವಾಸ್ಯೆಯ ತಿಥಿಗಳ ಸಮಯದಲ್ಲಿ ಆಗಿವೆ, ಎಂಬುದು ಕಂಡುಬಂದಿದೆ, ಉದಾ. ೪.೪.೧೯೦೫ ರಲ್ಲಿ ಕಾಂಗಡಾದಲ್ಲಾದ ಮತ್ತು ೩೧.೫.೧೯೩೫ ರಂದು ಕ್ವೇಟಾದಲ್ಲಾದ ಪ್ರಸಿದ್ಧ ಭೂಕಂಪಗಳು ಅಮವಾಸ್ಯೆಯ ತಿಥಿಯಂದೆ ಆಗಿವೆ. ಕೆಲವು ಭೂಕಂಪಗಳು ಶನಿ, ಚಂದ್ರ, ರವಿ ಮತ್ತು ಮಂಗಳ ಇವುಗಳ ಕೇಂದ್ರಯೋಗದ ಮೇಲೆ (ಅಶುಭ ಯೋಗದ ಮೇಲೆ) ಘಟಿಸಿವೆ.
(ಸೌಜನ್ಯ : ಪ್ರಜ್ಞಾಲೋಕ, ಜುಲೈ ೧೯೮೧)
ಗ್ರಹದೋಷ ಎಂದರೇನು ?
ಗ್ರಹದೋಷಗಳೆಂದರೆ ಜಾತಕದಲ್ಲಿ ಗ್ರಹಗಳ ಅಶುಭ ಸ್ಥಿತಿ. ಜಾತಕದಲ್ಲಿ ಯಾವುದಾದರೊಂದು ಗ್ರಹವು ದೂಷಿತವಾಗಿದ್ದರೆ, ಆ ಗ್ರಹದ ಅಶುಭ ಫಲಗಳು ವ್ಯಕ್ತಿಗೆ ಪ್ರಾಪ್ತವಾಗುತ್ತವೆ, ಉದಾ. ಜಾತಕದಲ್ಲಿ ಶನಿ ಗ್ರಹವು ದೂಷಿತವಾಗಿದ್ದರೆ ಸಾಮಾನ್ಯವಾಗಿ ಗಂಭೀರ ಪ್ರಾರಬ್ಧ, ದೀರ್ಘಕಾಲದ ಕಾಯಿಲೆಗಳು, ಕೌಟುಂಬಿಕ ಅಥವಾ ಆರ್ಥಿಕ ಅಡಚಣೆಗಳು ಇತ್ಯಾದಿ ಅಶುಭ ಫಲಗಳು ಸಿಗುತ್ತವೆ. (ಈ ಫಲಗಳು ಸ್ಥಾನ, ರಾಶಿ ಇತ್ಯಾದಿ ಘಟಕಗಳಿಗನುಸಾರ ಭಿನ್ನವಾಗಿರುತ್ತವೆ.) ಇದನ್ನೇ ‘ಜಾತಕದಲ್ಲಿ ಶನಿ ಗ್ರಹ ದೂಷಿತವಾಗಿದೆ’ ಅಥವಾ ‘ವ್ಯಕ್ತಿಗೆ ಶನಿ ಗ್ರಹದ ತೊಂದರೆ ಇದೆ’, ಎಂದು ಕರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ವ್ಯಕ್ತಿಗಿರುವ ಶಾರೀರಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ತೊಂದರೆಗಳ ಹಿಂದೆ ಜಾತಕದ ಗ್ರಹದೋಷಗಳು ಕಾರಣವಾಗಿರುತ್ತವೆ.
ಜಾತಕದಿಂದ ತಿಳಿಯುತ್ತದೆ ಪ್ರಾರಬ್ಧದ ತೀವ್ರತೆ
ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ವ್ಯಕ್ತಿಯ ಜಾತಕದ ಗ್ರಹದೋಷಗಳಂತೆ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ಹೀಗಿದ್ದರೂ ಆ ವ್ಯಕ್ತಿಯ ಪ್ರಾರಬ್ಧವೇ ಅದರ ಮೂಲ ಕಾರಣವಾಗಿರುತ್ತದೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲಗಳನ್ನು ಮನುಷ್ಯನು ಮುಂದಿನ ಜನ್ಮಗಳಲ್ಲಿ ಪ್ರಾರಬ್ಧದ ರೂಪದಲ್ಲಿ ಭೋಗಿಸುತ್ತಾನೆ. ಜ್ಯೋತಿಷ್ಯಶಾಸ್ತ್ರವು ಇದೇ ಕರ್ಮ ಸಿದ್ಧಾಂತವನ್ನು ಆಧರಿಸಿದೆ. ವ್ಯಕ್ತಿಯ ಜನ್ಮದ ಸಮಯಕ್ಕನುಸಾರ ಮಂಡಿಸಲಾಗುವ ಜಾತಕವು ಅವರ ಈ ಜನ್ಮದ ಪ್ರಾರಬ್ಧವನ್ನು ತೋರಿಸುತ್ತದೆ. ಅನುಕೂಲ ಗ್ರಹಸ್ಥಿತಿಯಲ್ಲಿ ಪುಣ್ಯದ ಫಲವನ್ನು ಹಣ, ಸುಖ, ಹೆಸರು-ಗೌರವ, ಪ್ರಸಿದ್ಧಿ ಇತ್ಯಾದಿಗಳ ರೂಪದಲ್ಲಿ ಅನುಭವಿಸಬಹುದು. ಪ್ರತಿಕೂಲ ಗ್ರಹಸ್ಥಿತಿಯಲ್ಲಿ ಪಾಪದ ಫಲವನ್ನು ದುಃಖ, ಅಪಮಾನ, ರೋಗ, ಆರ್ಥಿಕ ಹಾನಿ ಇತ್ಯಾದಿಗಳ ರೂಪಗಳಲ್ಲಿ ಅನುಭವಿಸಬೇಕಾಗುತ್ತದೆ.
ಕಲಿಯುಗದಲ್ಲಿ ತೊಂದರೆಗಳ ಪ್ರಮಾಣವೇ ಹೆಚ್ಚು
ರಜ-ತಮಗಳ ಪ್ರಾಬಲ್ಯವಿರುವ ಕಲಿಯುಗ ಈಗ ನಡೆಯುತ್ತಿದೆ. ಈಗಿನ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಒಟ್ಟು ಕರ್ಮಗಳ ಶೇ. ೬೫ ರಷ್ಟು ಕರ್ಮಗಳು ಪ್ರಾರಬ್ಧದಿಂದ ಘಟಿಸುತ್ತವೆ. ಆದ್ದರಿಂದ ಕಲಿಯುಗದಲ್ಲಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದ ತೊಂದರೆಗಳ ಪ್ರಮಾಣ ತುಂಬಾ ಹೆಚ್ಚಾಗಿದೆ.
ಗ್ರಹದೋಷಗಳಿಂದಾಗುವ ದುಷ್ಪರಿಣಾಮಗಳ ನಿವಾರಣೆ
ಗ್ರಹದೋಷಗಳಿಂದಾಗುವ ದುಷ್ಪರಿಣಾಮಗಳ ನಿವಾರಣೆಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಜಪ, ದಾನ, ಶಾಂತಿವಿಧಿ, ಪೂರಕ ರತ್ನಗಳನ್ನು ಧರಿಸುವುದು ಇತ್ಯಾದಿ ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಮಾಡಿದರೆ ದುಷ್ಪರಿಣಾಮಗಳ ತೀವ್ರತೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ; ಆದರೆ ಈ ಉಪಾಯಗಳಿಂದ ತಾತ್ಕಾಲಿಕ ಪರಿಣಾಮಗಳಾಗುತ್ತವೆ. ಕಾಲಾಂತರದಲ್ಲಿ ಪುನಃ ತೊಂದರೆಗಳ ಪ್ರಮಾಣ ಹೆಚ್ಚಾಗುತ್ತದೆ. ಮನುಷ್ಯನು ತನ್ನ ಪ್ರಾರಬ್ಧದ ಭೋಗಗಳನ್ನು ಭೋಗಿಸಿಯೇ ತೀರಿಸಬೇಕಾಗುತ್ತದೆ. ಆದ್ದರಿಂದ ಜನ್ಮ-ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಮುಕ್ತರಾಗಲು ಆಧ್ಯಾತ್ಮಿಕ ಸಾಧನೆ ಮಾಡುವುದೊಂದೇ ಸರ್ವೋತ್ತಮ ಉಪಾಯವಾಗಿದೆ.
ಅ. ಆಧ್ಯಾತ್ಮಿಕ ಸಾಧನೆ ಎಂದರೇನು ?
ಆಧ್ಯಾತ್ಮಿಕ ಸಾಧನೆ ಎಂದರೆ ಈಶ್ವರಪ್ರಾಪ್ತಿಗಾಗಿ ಪ್ರತಿದಿನ ಮಾಡುವ ಪ್ರಯತ್ನ. ಈಶ್ವರನ ಪ್ರಾಪ್ತಿಯಾಗುವುದು, ಅಂದರೆ ಸತ್-ಚಿತ್-ಆನಂದದ ಅವಸ್ಥೆಯನ್ನು ನಿರಂತರವಾಗಿ ಅನುಭವಿಸುವುದು. ಜೀವನದಲ್ಲಿ ಬರುವ ದುಃಖಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ಮತ್ತು ಸರ್ವೋಚ್ಚ ಹಾಗೂ ಸತತವಾಗಿ ಉಳಿಯುವ ಆನಂದವು ಕೇವಲ ಸಾಧನೆಯಿಂದಲೇ ಸಿಗುತ್ತದೆ. ಸಾಧನೆಯನ್ನು ಜ್ಞಾನಯೋಗ, ಧ್ಯಾನಯೋಗ, ಭಕ್ತಿಯೋಗ, ಕರ್ಮಯೋಗ ಇತ್ಯಾದಿ ಯೋಗಮಾರ್ಗಗಳಿಗನುಸಾರ ಮಾಡಲಾಗುತ್ತದೆ. ಕಲಿಯುಗದಲ್ಲಿ ನಾಮಜಪವು ಸರ್ವೋತ್ತಮ ಸಾಧನೆಯಾಗಿದೆ, ಎಂದು ಅನೇಕ ಸಂತರು ಹೇಳಿದ್ದಾರೆ.
ಆ. ಯೋಗ್ಯ ಸಾಧನೆಯಾಗಲು ಗುರುಗಳ ಆವಶ್ಯಕತೆಯಿರುತ್ತದೆ
ಒಬ್ಬಂಟಿಯಾಗಿ ಸಾಧನೆಯನ್ನು ಮಾಡಿ ತನ್ನ ಬಲದಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ತುಂಬಾ ಕಠಿಣವಾಗಿದೆ. ಬದಲಾಗಿ ಅಧ್ಯಾತ್ಮದಲ್ಲಿ ಅಧಿಕಾರವಿರುವ ವ್ಯಕ್ತಿಯ, ಅಂದರೆ ಗುರುಗಳ ಅಥವಾ ಸಂತರ ಕೃಪೆಯನ್ನು ಸಂಪಾದಿಸಿದರೆ, ಈಶ್ವರಪ್ರಾಪ್ತಿಯ ಧ್ಯೇಯವು ಬೇಗನೇ ಸಾಧ್ಯವಾಗುತ್ತದೆ. ಇದಕ್ಕಾಗಿ ಗುರುಪ್ರಾಪ್ತಿ ಆಗುವುದು ಆವಶ್ಯಕವಾಗಿರುತ್ತದೆ. ಗುರುಗಳು ಶಿಷ್ಯನ ಅಜ್ಞಾನವನ್ನು ದೂರಗೊಳಿಸಿ ‘ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕು’, ಎಂದು ಅವನಿಗೆ ಸಾಧನೆಯನ್ನು ಕಲಿಸುತ್ತಾರೆ, ಅದನ್ನು ಅವನಿಂದ ಮಾಡಿಸಿಕೊಳ್ಳುತ್ತಾರೆ, ಮತ್ತು ಅವನಿಗೆ ಅನುಭೂತಿಗಳನ್ನೂ ಕೊಡುತ್ತಾರೆ.
ಇ. ಗುರುಕೃಪೆಯಿಂದ ಕಠಿಣ ಪ್ರಸಂಗಗಳಲ್ಲಿ ಶಿಷ್ಯನ ರಕ್ಷಣೆಯಾಗುತ್ತದೆ
ಮಂದ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆ ಮಧ್ಯಮ ಸಾಧನೆಯಿಂದ, ಮಧ್ಯಮ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆ ತೀವ್ರ ಸಾಧನೆಯಿಂದ ಮತ್ತು ತೀವ್ರ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆ ಕೇವಲ ಗುರುಕೃಪೆಯಿಂದಲೇ ಪ್ರಾಪ್ತವಾಗುತ್ತದೆ. ಇದರ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.
ಸಾವಿನ ದವಡೆಯಲ್ಲಿದ್ದ ಸಾಧಕಿ ಕು. ದೀಪಾಲಿ ಮತಕರ ಇವರ ರಕ್ಷಣೆಯಾಗುವುದು
ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಸಾಧಕಿ ಕು. ದೀಪಾಲಿ ಮತಕರ ಇವರಿಗೆ ೨೨.೧೦.೨೦೧೬ ರಂದು ಡೆಂಗ್ಯೂ, ನ್ಯುಮೋನಿಯಾ ಮತ್ತು ಕಾಮಾಲೆ (ಜಾಂಡಿಸ್) ಗಂಭೀರ ರೋಗಗಳಾದವು. ಅವರ ಯಕೃತ್ತು (ಲಿವರ್) ಮತ್ತು ಪ್ಲೀಹ (ಸ್ಪ್ಲೀನ್) ಇವುಗಳಿಗೆ ಬಾವು ಬಂದಿತ್ತು. ಪುಪ್ಪುಸಗಳಲ್ಲಿ ನೀರು ತುಂಬಿತ್ತು ಮತ್ತು ಒಂದು ರೀತಿಯ ಗಂಭೀರ ನ್ಯುಮೋನಿಯಾವಾಯಿತು. ರಕ್ತದಲ್ಲಿ ಪ್ಲೆಟಲೆಟ್ಸ್ ಸಂಖ್ಯೆ ಬಹಳ ಕಡಿಮೆಯಾಗಿತ್ತು. ಪ್ಲೆಟಲೆಟ್ಸ್ ಸಂಖ್ಯೆ ಕಡಿಮೆ ಇರುವಾಗ ಯಾವುದೇ ಕಾರಣವಿಲ್ಲದೇ ಅಪಾರ ರಕ್ತಸ್ರಾವವಾಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆಧುನಿಕ ವೈದ್ಯರು ಕು. ದೀಪಾಲಿ ಬದುಕುಳಿಯುವ ಆಸೆಯನ್ನು ಬಿಟ್ಟಿದ್ದರು.
ಕು. ದೀಪಾಲಿಯವರ ಗೋಚರ (ತತ್ಕಾಲೀನ) ಜಾತಕದಲ್ಲಿನ ಆರನೇ ಸ್ಥಾನದಲ್ಲಿ, ಅಂದರೆ ರೋಗದ ಸ್ಥಾನದಲ್ಲಿ ರಾಹೂ (ಪಾಪಗ್ರಹ) ಇತ್ತು. ಆರನೇ ಸ್ಥಾನದ ಸ್ವಾಮಿಯಾದ ರವಿ ಗ್ರಹವು ಎಂಟನೇ ಸ್ಥಾನದಲ್ಲಿ, ಅಂದರೆ ಮೃತ್ಯು ಸ್ಥಾನದಲ್ಲಿತ್ತು. ಗೋಚರ ಜಾತಕದಲ್ಲಿ ಮಂಗ ಗ್ರಹದ ಭ್ರಮಣವು ಜಾತಕದ ಶನಿ ಗ್ರಹದ ಮೇಲಿನಿಂದ ನಡೆದಿತ್ತು. ಕು. ದೀಪಾಲಿಯವರ ಕೇತು ಗ್ರಹದ ಮಹಾದಶೆ ನಡೆದಿತ್ತು. ಈ ಯೋಗಗಳು ತೀವ್ರ ಶಾರೀರಿಕ ತೊಂದರೆ ಅಥವಾ ಅಪಮೃತ್ಯುಯೋಗ ಇರುವುದನ್ನು ತೋರಿಸುತ್ತವೆ.
ಕು. ದೀಪಾಲಿಯವರು ಮರಣೋನ್ಮುಖವಾಗಿದ್ದಾಗ ಸಂತರು ದೀಪಾಲಿಯವರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡಿದರು. ಭೃಗು ಮಹರ್ಷಿಗಳು ಮತ್ತು ಸಪ್ತರ್ಷಿಗಳು ನಾಡಿಪಟ್ಟಿಯ ಮಾಧ್ಯಮದಿಂದ ಅನೇಕ ಉಪಾಯಗಳನ್ನು ಮಾಡಲು ಹೇಳಿದರು. ಆದ್ದರಿಂದ ಕು. ದೀಪಾಲಿಯವರಿಗೆ ಆಗಿರುವ ಎಲ್ಲ ಗಂಭೀರ ಕಾಯಿಲೆಗಳು ದೂರವಾಗಿ ಅವರು ಕೇವಲ ೧೫ ದಿನಗಳಲ್ಲಿ ಗುಣಮುಖರಾದರು.
ಕು. ದೀಪಾಲಿಯವರು ತನು-ಮನ-ಧನವನ್ನು ಅರ್ಪಿಸಿ ಪೂರ್ಣವೇಳೆ ಗುರುಕಾರ್ಯ ಮತ್ತು ಸಾಧನೆಯನ್ನು ಮಾಡುತ್ತಾರೆ. ಅವರಲ್ಲಿ ಗುರುಗಳ ಬಗ್ಗೆ ಶ್ರದ್ಧೆ ಮತ್ತು ಈಶ್ವರಪ್ರಾಪ್ತಿಯ ತಳಮಳವಿದೆ. ಅವರ ವೈಶಿಷ್ಟ್ಯವೆಂದರೆ ಅವರಲ್ಲಿ ಗೋಪಿಕೆಯಂತಹ ಭಾವ ಇದೆ. ಆದ್ದರಿಂದ ಅವರು ಸತತವಾಗಿ ಶ್ರೀಕೃಷ್ಣನ ಅನುಸಂಧಾನದಲ್ಲಿರುತ್ತಾರೆ. ಕು. ದೀಪಾಲಿಯವರು ಸಾಧನೆಯನ್ನು ಮಾಡುತ್ತಿರುವುದರಿಂದ ಅವರ ಮೇಲೆ ಗುರುಕೃಪೆಯಾಗಿ ಅಪಮೃತ್ಯುಯೋಗದಂತಹ ಸಂಕಟದಲ್ಲಿಯೂ ಗುರುಗಳು ಅವರನ್ನು ರಕ್ಷಿಸಿದರು.
ಗಂಭೀರ ಪ್ರಾರಬ್ಧವನ್ನು ಭೋಗಿಸುವಾಗ ಅದರತ್ತ ಸಾಕ್ಷೀಭಾವದಿಂದ ನೋಡಿ ಸಂತಪದವಿಯನ್ನು ಪ್ರಾಪ್ತಮಾಡಿಕೊಂಡ ಪೂ. (ಸೌ.) ಸಂಗೀತಾ ಪಾಟೀಲ !
ಪೂ. (ಸೌ.) ಸಂಗೀತಾ ಪಾಟೀಲ ಚಿಕ್ಕವರಿರುವಾಗಲೇ ಅವರ ತಂದೆ-ತಾಯಿ ತೀರಿಹೋದರು. ಮುಂದೆ ವಿವಾಹವಾಗಿ ಅವರಿಗೆ ಒಬ್ಬ ಮಗ ಹುಟ್ಟಿದ; ಆದರೆ ಚಿಕ್ಕ ಅವನೂ ವಯಸ್ಸಿಯಲ್ಲಿಯೇ ಮರಣಹೊಂದಿದನು. ಪೂ. (ಸೌ.) ಸಂಗೀತಾ ಇವರಿಗೆ ವಿಷಮಜ್ವರ (ಟೈಫಾಯಿಡ್) ಬಂದು ಅವರು ಕುರುಡರಾದರು. ಅವರ ಯಜಮಾನರ ನೌಕರಿಯ ಸ್ಥಳದಲ್ಲಿ ಅಪಘಾತವಾಗಿ ಯಜಮಾನರ ನೌಕರಿ ಹೋಯಿತು. ಮುಂದೆ ಯಜಮಾನರ ಒಂದು ಕಣ್ಣಿನ ದೃಷ್ಟಿಯೂ ಹೋಯಿತು. ಅವರ ಆರ್ಥಿಕವಾಗಿ ಅತ್ಯಂತ ಬಿಕ್ಕಟ್ಟಿನಲ್ಲಿದ್ದಾರೆ.
ಸನಾತನದ ಸೂಕ್ಷ್ಮ ಜ್ಞಾನಪ್ರಾಪ್ತಕರ್ತ ಸಾಧಕ ಶ್ರೀ. ನಿಷಾದ ದೇಶಮುಖ ಇವರು ಪೂ. (ಸೌ.) ಸಂಗೀತಾ ಇವರ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಿ, “ಸೌ. ಸಂಗೀತಾ ಇವರ ಪ್ರಾರಬ್ಧವು ಶೇ. ೭೫ ರಷ್ಟಿದೆ; ಆದರೆ ಭಕ್ತಿಭಾವದ ಬಲದಿಂದ ಅವರು ಅದರ ಮೇಲೆ ಜಯಗಳಿಸಿದ್ದಾರೆ” ಎಂದು ಹೇಳಿದರು. (ಕಲಿಯುಗದ ಸದ್ಯದ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಪ್ರಾರಬ್ಧವು ಶೇ. ೬೫ ರಷ್ಟಿರುಯ್ಯದೆ ಮತ್ತು ಅದರಿಂದ ನಿರ್ಮಾಣವಾಗುವ ಅಡಚಣೆಗಳಿಂದ ಹತಾಶನಾಗಿ ದುಃಖಿಯಾಗುತ್ತಾನೆ!)
ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಪೂ. (ಸೌ.) ಸಂಗೀತಾ ಪಾಟೀಲ ಇವರು ಆನಂದದಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಗಂಭೀರ ಪ್ರಾರಬ್ಧ ಇರುವಾಗಲೂ ಅವರು ಎಂದಿಗೂ ಪರಿಸ್ಥಿತಿಯನ್ನು ದೂಷಿಸಲಿಲ್ಲ. ಅವರು ಶ್ರಮಪಟ್ಟು ಗುರುಕಾರ್ಯ ಮತ್ತು ಸಾಧನೆಯನ್ನು ಮಾಡಿದರು. ಅವರು, “ನನ್ನ ಜೀವನದಲ್ಲಿ ಅನೇಕ ದುಃಖದ ಪ್ರಸಂಗಗಳು ಬಂದವು; ಆದರೆ ನಾನು ಗುರುಕೃಪೆಯಿಂದ ಪಾರಾದೆ” ಎಂದು ಹೇಳುತ್ತಾರೆ. ಈಶ್ವರನ ಬಗೆಗಿರುವ ಭಾವದಿಂದ ಪೂ. (ಸೌ.) ಸಂಗೀತಾ ಪಾಟೀಲ ಇವರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.
ಈಶ್ವರೀ ರಾಜ್ಯದ ಸ್ಥಾಪನೆಗಾಗಿ ನಿರಂತರವಾಗಿ ಶ್ರಮಪಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗ ಸಂತರು ಮಾಡಿದ ಸಹಾಯದಿಂದ ತಪ್ಪುವುದು
ಈಶ್ವರೀ ರಾಜ್ಯದ ಸ್ಥಾಪನೆಗಾಗಿ ನಿರಂತರವಾಗಿ ಶ್ರಮಪಡುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಇದುವರೆಗೆ ಅನೇಕ ಬಾರಿ ಮಹಾಮೃತ್ಯುಯೋಗದ ಸಂಕಟ ಬಂದಿದೆ. ೨೦೦೧ ರಿಂದ ಅವರ ಮೇಲೆ ಸೂಕ್ಷ್ಮದಲ್ಲಿನ ಅನಿಷ್ಟ ಶಕ್ತಿಗಳಿಂದಾಗುವ ಆಕ್ರಮಣಗಳು ಹೆಚ್ಚುತ್ತಾ ಹೋದವು. ೨೦೦೭ ರಿಂದ ಅವರ ಮೇಲೆ ಸೂಕ್ಷ್ಮದಲ್ಲಿ ಮಾರಣಾಂತಿಕ ಆಕ್ರಮಣಗಳಾಗಲು ಪ್ರಾರಂಭವಾಯಿತು. ಎಲ್ಲ ಜ್ಯೋತಿಷ್ಯಾಚಾರ್ಯರು ಅವರಿಗೆ ವರ್ಷ ೨೦೦೭ ರಲ್ಲಿ (ಮತ್ತು ನಂತರವೂ) ಮಹಾಮೃತ್ಯುಯೋಗವು ಇರುವುದಾಗಿ ಹೇಳಿದ್ದರು. ಅಂದಿನಿಂದ ಅವರ ಪ್ರಾಣಶಕ್ತಿಯು ಹೆಚ್ಚುಕಡಿಮೆ ಶೇ. ೩೦ ರ ವರೆಗೆ ಸ್ಥಿರವಾಗಿದೆ. (ಪ್ರಾಣಶಕ್ತಿಯು ಶೇ. ೩೦ ರ ಕ್ಕಿಂತಲೂ ಕಡಿಮೆಯಾದರೆ ಮೃತ್ಯು ಬರುತ್ತದೆ. ಸಾಮಾನ್ಯ ವ್ಯಕ್ತಿಯ ಪ್ರಾಣಶಕ್ತಿ ಶೇ. ೧೦೦ ರಷ್ಟಿರುತ್ತದೆ, ಎಂದು ಇಲ್ಲಿ ಗ್ರಹಿಸಲಾಗಿದೆ.) ೨೦೦೭ ರಲ್ಲಿನ ಅನಾರೋಗ್ಯದ ನಂತರ ಅವರು ಆಶ್ರಮದ ಹೊರಗೆ ಹೋಗುವುದು ಸಂಪೂರ್ಣ ನಿಂತಿತು. ೨೦೦೭ ರ ಗುರುಪೂರ್ಣಿಮೆಯ ನಂತರ ಸುಮಾರು ೧ ವಾರ ಅವರು ಮರಣೋನ್ಮುಖ ಸ್ಥಿತಿಯಲ್ಲಿದ್ದರು.
೩೦.೭.೨೦೦೭ ರಂದು ಗುರುಪೂರ್ಣಿಮೆಯ ನಂತರ ಮುಂದಿನ ಒಂದು ವಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮರಣೋನ್ಮುಖ ಸ್ಥಿತಿಯಲ್ಲಿದ್ದರು. ಆಗಸ್ಟ್ ೨೦೦೭ ರಲ್ಲಿ ಅವರಿಗೆ ಹಾಸಿಗೆಯಿಂದ ಏಳಲೂ ಆಗುತ್ತಿರಲಿಲ್ಲ. ಆ ಸಮಯದಲ್ಲಿ ಅವರ ಗೋಚರ (ತತ್ಕಾಲೀನ) ಜಾತಕದಲ್ಲಿ ಮಂಗಳ ಗ್ರಹವು ಹನ್ನೆರಡನೇ ಸ್ಥಾನದಲ್ಲಿ, ಅಂದರೆ ಅಶುಭ ಸ್ಥಾನದಲ್ಲಿತ್ತು. ಆರೋಗ್ಯಕ್ಕೆ ಸಂಬಂಧಿಸಿದ ರವಿ ಗ್ರಹದೊಂದಿಗೆ ಶನಿ ಮತ್ತು ಕೇತು ಪಾಪಗ್ರಹಗಳ ಸಂಯೋಗವಾಗಿತ್ತು. ಜನ್ಮ ಕುಂಡಲಿಗನುಸಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆ ಸಮಯದಲ್ಲಿ ಮೃತ್ಯು ಸ್ಥಾನದ ಸ್ವಾಮಿಯಾಗಿರುವ ಶನಿ ಗ್ರಹದ ಮಹಾದಶೆ ಮತ್ತು ಮೃತ್ಯು ಸ್ಥಾನದಲ್ಲಿರುವ ಚಂದ್ರ ಗ್ರಹದ ಅಂತರ್ದಶೆ ನಡೆದಿತ್ತು. ಈ ಗ್ರಹಸ್ಥಿತಿಯು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಮಹಾಮೃತ್ಯುಯೋಗ ಇರುವುದನ್ನು ತೋರಿಸುತ್ತದೆ.
ಸಂತರು ಮಾಡಿದ ಸಹಾಯದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ಅನೇಕ ಬಾರಿ ತಪ್ಪಿ ಹೋಗಿದೆ. ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, “ಜನ್ಮ, ವಿವಾಹ ಮತ್ತು ಮೃತ್ಯು ಇವು ಪ್ರಾರಬ್ಧಕ್ಕನುಸಾರವೇ ಆಗುತ್ತವೆ, ಎಂದು ಕರ್ಮಯೋಗ ಹೇಳುತ್ತದೆ. ಹೀಗಿದ್ದರೂ, ‘ಕೇವಲ ಅಪಮೃತ್ಯುಯೋಗ ಮತ್ತು ಮೃತ್ಯುಯೋಗವೇ ಅಲ್ಲ, ಮಹಾಮೃತ್ಯುಯೋಗವನ್ನೂ ತಪ್ಪಿಸಬಹುದು, ಎಂಬುದನ್ನು ಯೋಗತಜ್ಞ ದಾದಾಜಿ ವೈಶಂಪಾಯನ, ಗುರುದೇವ ಡಾ. ಕಾಟೆಸ್ವಾಮೀಜಿ ಮತ್ತು ಇತರ ಕೆಲವು ಅಧಿಕಾರಿ ಸಂತರು ನನ್ನ ಸಂದರ್ಭದಲ್ಲಿ ೨೦೦೭ ರಿಂದ ಇದುವರೆಗೆ ಸಾಬೀತುಪಡಿಸಿದ್ದಾರೆ. ಇದರಿಂದ ‘ಸಂತರ ಕೃಪೆಯಿಂದ ಯಾವುದೂ ಅಸಾಧ್ಯವಿಲ್ಲ, ಎಂಬುದು ಗಮನಕ್ಕೆ ಬರುತ್ತದೆ” ಎಂದು ಹೇಳಿದರು.
ಗುರುಕೃಪಾಯೋಗಾನುಸಾರ ಸಾಧನೆಯ ಮೂಲಕ ವಿಹಂಗಮ ಆಧ್ಯಾತ್ಮಿಕ ಉನ್ನತಿ ಆಗುವುದು
ಕರ್ಮ, ಭಕ್ತಿ, ಧ್ಯಾನ ಇತ್ಯಾದಿ ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ, ಅದರಿಂದ ಈಶ್ವರಪ್ರಾಪ್ತಿಯಾಗಲು ಗುರುಕೃಪೆಯ ಹೊರತು ಬೇರೆ ಮಾರ್ಗವಿಲ್ಲ; ಆದುದರಿಂದಲೇ, ‘ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಮ್ |’, ಅಂದರೆ ಕೇವಲ ಗುರುಕೃಪೆಯೇ ಶಿಷ್ಯನ ಪರಮ ಕಲ್ಯಾಣವನ್ನು ಮಾಡುತ್ತದೆ ಎಂದು ಹೇಳಲಾಗಿದೆ. ಗುರುಕೃಪೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗಕ್ರಮಣವಾಗುವುದಕ್ಕೇ ‘ಗುರುಕೃಪಾಯೋಗ’ ಎನ್ನುತ್ತಾರೆ. ವಿವಿಧ ಯೋಗಮಾರ್ಗಗಳಿಂದ ಸಾಧನೆಯನ್ನು ಮಾಡುವುದರಲ್ಲಿ ಅನೇಕ ವರ್ಷಗಳನ್ನು ಕಳೆಯದೇ ಗುರುಕೃಪೆಯನ್ನು ಬೇಗನೇ ಹೇಗೆ ಗಿಟ್ಟಿಸಿಕೊಳ್ಳಬೇಕೆಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದ್ದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು ಶೀಘ್ರ ಗತಿಯಲ್ಲಿ ಆಗುತ್ತದೆ. ಗುರುಕೃಪಾಯೋಗಾನುಸಾರ ಸಾಧನೆಯು ಪ್ರಸ್ತುತ ಕಾಲಕ್ಕನುಸಾರ ಹೇಳಿದ ಸಾಧನೆಯಾಗಿದೆ.
ತಾತ್ಪರ್ಯ
ಸಾಧನೆಯನ್ನು ಮಾಡುವುದರಿಂದ ವ್ಯಕಿಯ ಜೀವನದ ಕಡೆಗೆ ನೋಡುವ ದೃಷ್ಟಿಕೋನ ಬದಲಾಗುತ್ತದೆ. ವ್ಯಕ್ತಿಗೆ ಮನುಷ್ಯಜನ್ಮದ ಉದ್ದೇಶ ಗಮನಕ್ಕೆ ಬರುವುದರಿಂದ ಸುಖ-ದುಃಖದ ಪ್ರಸಂಗಗಳಲ್ಲಿ ಅವನ ಸ್ಥಿರವಾಗಿರಲು ಪ್ರಯತ್ನಿಸುತ್ತಾನೆ. ಇದರಿಂದ ಅವನಿಗೆ ಶಾರೀರಿಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ ಇಂತಹ ಅನೇಕ ಸ್ತರಗಳಲ್ಲಿ ಲಾಭವಾಗುತ್ತದೆ, ಹಾಗೆಯೇ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದುದರಿಂದ ಗ್ರಹದೋಷಗಳಿಂದ ಮನುಷ್ಯನ ಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ಸಹ್ಯಗೊಳಿಸಲು ‘ಸಾಧನೆಯನ್ನು ಮಾಡುವುದೇ’ ಸರ್ವೋತ್ತಮ ಉಪಾಯವಾಗಿದೆ !
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ (೨೦.೧೦.೨೦೧೯)
ಜಾತಕದ ೧೨ ಮನೆಗಳು : ಮಾನವ ಜೀವನವು ಸಂಕುಚಿತತೆಯಿಂದ ವ್ಯಾಪಕತ್ವದತ್ತ ಸಾಗುವ ನೈಸರ್ಗಿಕ ಪ್ರವಾಸವನ್ನು ದರ್ಶಿಸುತ್ತವೆ
ಹಸ್ತ ಸಾಮುದ್ರಿಕಾ ಶಾಸ್ತ್ರ : ಪ್ರಾಥಮಿಕ ಪರಿಚಯ
೭.೯.೨೦೨೫ ರ ಖಗ್ರಾಸ ಚಂದ್ರಗ್ರಹಣ – ರಾಶಿಗಳಿಗನುಸಾರ ದೊರೆಯುವ ಫಲ
ನವಗ್ರಹಗಳ ಉಪಾಸನೆ ಮತ್ತು ಮಹತ್ವ
ಗ್ರಹ, ರಾಶಿ ಮತ್ತು ಕುಂಡಲಿಯ ಮನೆಗಳು