ಅಶುಭ ಕಾಲದಲ್ಲಿ ಹುಟ್ಟಿದ ಮಗುವಿನ ಜನನಶಾಂತಿ ಏಕೆ ಮಾಡಬೇಕು?

Article also available in :

ಮಗುವು ಅಶುಭ ಕಾಲದಲ್ಲಿ ಜನಿಸಿದ್ದರಿಂದ ಅಥವಾ ವಿಶಿಷ್ಟ ಪರಿಸ್ಥಿತಿಯಲ್ಲಿ ಜನಿಸಿದ್ದರಿಂದ ದೋಷ ತಗಲುತ್ತದೆ. ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ. ಮಗುವಿನ ಆರೋಗ್ಯ, ಭವಿಷ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವ ಜನನಶಾಂತಿ ಬಗ್ಗೆ ತಿಳಿದುಕೊಳ್ಳಿ…

ಅಶುಭ ಕಾಲದಲ್ಲಿ ಜನಿಸಿದ್ದರಿಂದ ತಗಲುವ ದೋಷಗಳು

ಮುಂದಿನ ಕೋಷ್ಟಕದಲ್ಲಿ ನೀಡಲಾದ ಯೋಗಗಳ ಮೇಲೆ ಶಿಶುವಿನ ಜನ್ಮವಾಗಿದ್ದರೆ ಅಶುಭ ಕಾಲಕ್ಕೆ ಸಂಬಂಧಿಸಿದ ದೋಷಗಳನ್ನು ಕೊಡಲಾಗಿದೆ.

ಘಟಕ ವಿವರಣೆ
ತಿಥಿ ಕೃಷ್ಣ ಚತುರ್ದಶಿ, ಅಮಾವಾಸ್ಯೆ, ಮತ್ತು ಕ್ಷಯ ತಿಥಿ (ಟಿಪ್ಪಣಿ ೧)
ನಕ್ಷತ್ರ ಅಶ್ವಿನಿ ನಕ್ಷತ್ರದ ಮೊದಲ ೪೮ ನಿಮಿಷ, ಪುಷ್ಯ ನಕ್ಷತ್ರದ ಎರಡನೇ ಮತ್ತು ಮೂರನೇ ಚರಣ, ಆಶ್ಲೇಷಾ ನಕ್ಷತ್ರ ಪೂರ್ಣ, ಮಘಾ ನಕ್ಷತ್ರದ ಮೊದಲನೇ ಚರಣ, ಉತ್ತರಾ ನಕ್ಷತ್ರದ ಮೊದಲನೇ ಚರಣ, ಚಿತ್ರಾ ನಕ್ಷತ್ರದ ಮೊದಲನೇ ಮತ್ತು ಎರಡನೇ ಚರಣ, ವಿಶಾಖಾ ನಕ್ಷತ್ರದ ಚತುರ್ಥ ಚರಣ, ಜ್ಯೇಷ್ಠಾ ನಕ್ಷತ್ರ ಪೂರ್ಣ, ಮೂಲಾ ನಕ್ಷತ್ರ ಪೂರ್ಣ, ಪೂರ್ವಾಷಾಢ ನಕ್ಷತ್ರದ ಮೂರನೇ ಚರಣ, ರೇವತಿ ನಕ್ಷತ್ರದ ಕೊನೆಯ ೪೮ ನಿಮಿಷಗಳು
ಯೋಗ ವೈಧೃತೀ ಮತ್ತು ವ್ಯತೀಪಾತ
ಕರಣ ವಿಷ್ಟಿ (ಭದ್ರಾ)
ಪರ್ವಕಾಲ ಗ್ರಹಣ ಪರ್ವಕಾಲ (ಟಿಪ್ಪಣಿ ೨), ಸೂರ್ಯ ಸಂಕ್ರಮಣ ಪುಣ್ಯಕಾಲ (ಟಿಪ್ಪಣಿ ೩)
ಇತರ ಯೋಗಗಳು ದಗ್ಧಯೋಗ, ಯಮಘಂಟಯೋಗ, ಮತ್ತು ಮೃತ್ಯುಯೋಗ (ಟಿಪ್ಪಣಿ ೪)

(ಆಧಾರ : ದಾತೆ ಪಂಚಾಂಗ)

ಟಿಪ್ಪಣಿ ೧ – ಕ್ಷಯತಿಥಿ : ಯಾವ ತಿಥಿ ಸೂರ್ಯೋದಯದ ನಂತರ ಆರಂಭವಾಗಿ ಮರುದಿನ ಸೂರ್ಯೋದಯದ ಮೊದಲೇ ಮುಗಿಯುತ್ತದೆಯೋ, ಅಂದರೆ ಯಾವುದೇ ಸೂರ್ಯೋದಯವನ್ನು ನೋಡುವುದಿಲ್ಲವೋ, ಇಂತಹ ತಿಥಿಯನ್ನು ‘ಕ್ಷಯತಿಥಿ’ ಎಂದು ಕರೆಯುತ್ತಾರೆ.

ಟಿಪ್ಪಣಿ ೨ – ಗ್ರಹಣ ಪರ್ವಕಾಲ : ಸೂರ್ಯ ಅಥವಾ ಚಂದ್ರ ಗ್ರಹಣಗಳ ಕಾಲ

ಟಿಪ್ಪಣಿ ೩ – ಸೂರ್ಯಸಂಕ್ರಮಣದ ಪುಣ್ಯಕಾಲ : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕಾಲ.

ಟಿಪ್ಪಣಿ ೪ – ದಗ್ಧಯೋಗ, ಯಮಘಂಟಯೋಗ ಮತ್ತು ಮೃತ್ಯುಯೋಗ : ತಿಥಿ, ವಾರ ಮತ್ತು ನಕ್ಷತ್ರ ಇವುಗಳ ಸಂಯೋಗದಿಂದ ನಿರ್ಮಾಣವಾಗುವ ಅಶುಭ ಯೋಗ

ಅಶುಭ ಕಾಲದಲ್ಲಿ ಜನ್ಮವಾದುದರಿಂದ ಶಿಶುವಿನ ಮೇಲಾಗುವ ಪರಿಣಾಮ

ಪ್ರಾರಬ್ಧಕ್ಕನುಸಾರ ಯಾವ ಜೀವಗಳು ಹೆಚ್ಚು ಕಷ್ಟದ ಪ್ರಸಂಗಗಳನ್ನು ಭೋಗಿಸಬೇಕಾಗುತ್ತದೆಯೋ, ಇಂತಹ ಜೀವಗಳ ಜನ್ಮವು ಅಶುಭ ಕಾಲದಲ್ಲಿ ಆಗಿರುತ್ತದೆ. ಇಂತಹ ಜೀವಗಳಿಗೆ ವಿಶಿಷ್ಟ ಗ್ರಹಗಳ ಶಕ್ತಿ ಅಲ್ಪ ಪ್ರಮಾಣದಲ್ಲಿ ಗ್ರಹಣವಾಗುತ್ತದೆ. ಅಶುಭ ಕಾಲದಲ್ಲಿ ಜನ್ಮಪಡೆದ ಜೀವಗಳಿಗೆ ಅವುಗಳ ಪ್ರಾರಬ್ಧದ ತೀವ್ರತೆಗನುಸಾರ ವಿವಿಧ ತೊಂದರೆಗಳಾಗುತ್ತವೆ.

ಮಂದ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ, ಮೇಲಿಂದ ಮೇಲೆ ಜ್ವರ ಬರುವುದು, ಆಯಾಸವಾಗುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ತೊಂದರೆಗಳಾಗುತ್ತವೆ.

ಮಧ್ಯಮ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ ನಡೆಯುವುದು ಅಥವಾ ಮಾತನಾಡುವುದು ತಡವಾಗಿ ಆರಂಭವಾಗುತ್ತದೆ, ಬುದ್ಧಿಗೆ ಸಂಬಂಧಿಸಿದ ತೊಂದರೆಗಳಾಗುವುದು ಮುಂತಾದ ತೊಂದರೆಗಳೂ ಆಗುತ್ತವೆ.

ತೀವ್ರ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ ಶಿಕ್ಷಣ ಇತ್ಯಾದಿಗಳಲ್ಲಿ ತಡವಾಗಿ ಆಸಕ್ತಿ ನಿರ್ಮಾಣವಾಗುವುದು ಅಥವಾ ಆಗದೇ ಇರುವುದು, ಯುವಾವಸ್ಥೆಯಲ್ಲಿ ವಿವಿಧ ರೀತಿಯ ಚಟಗಳು ನಿರ್ಮಾಣವಾಗುವುದು, ಸೂಕ್ಷ್ಮದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಾಗುವುದು ಮುಂತಾದ ತೊಂದರೆಗಳಾಗುತ್ತವೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದ ಜನನ ಶಾಂತಿಯನ್ನು ಮಾಡುವುದರಿಂದ ಜೀವದ ಮಂದ ಮತ್ತು ಮಧ್ಯಮ ಪ್ರಾರಬ್ಧ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ತೀವ್ರ ಪ್ರಾರಬ್ಧವನ್ನು ಭೋಗಿಸಲು ಜೀವಕ್ಕೆ ಈಶ್ವರನಿಂದ ಶಕ್ತಿ ಸಿಗುತ್ತದೆ.

ವಿಶಿಷ್ಟ ಪರಿಸ್ಥಿತಿಯಲ್ಲಿ ಜನ್ಮವಾದುದರಿಂದ ತಗಲುವ ದೋಷಗಳು

ಮುಂದಿನ ಕೋಷ್ಟಕದಲ್ಲಿ ನೀಡಲಾದ ಪರಿಸ್ಥಿತಿಯಲ್ಲಿ ಶಿಶುವಿನ ಜನ್ಮವಾಗಿದ್ದರೆ ಜನನಶಾಂತಿ ಮಾಡಲಾಗುತ್ತದೆ.

ಸ್ಥಿತಿ ವಿವರಣೆ
ಯಮಲ ಅವಳಿ ಮಕ್ಕಳಾಗುವುದು
ಒಂದೇ ನಕ್ಷತ್ರ ಅಣ್ಣ-ತಮ್ಮಂದಿರ, ತಾಯಿ ಅಥವಾ ತಂದೆಯ ಮತ್ತು ಶಿಶುವಿನ ಜನ್ಮನಕ್ಷತ್ರ ಒಂದೇ ಆಗಿರುವುದು
ತ್ರಿಕಪ್ರಸವ ಮೂರು ಗಂಡು ಮಕ್ಕಳ ನಂತರ ಹೆಣ್ಣು ಮಗು ಅಥವಾ ಮೂರು ಹೆಣ್ಣು ಮಕ್ಕಳ ನಂತರ ಗಂಡು ಮಗು ಹುಟ್ಟುವುದು
ಸದಂತ ಜನಿಸುವುದು ಶಿಶುವಿಗೆ ಜನ್ಮದಿಂದಲೇ ಹಲ್ಲುಗಳಿರುವುದು
ವಿಪರೀತ ಜನ್ಮ ಅವಯವಗಳು ಚಮತ್ಕಾರಿಕ ಅಥವಾ ಕಡಮೆ ಅಥವಾ ಹೆಚ್ಚಿರುವುದು

(ಆಧಾರ : ಧರ್ಮಸಿಂಧು)

ವಿಶಿಷ್ಟ ಪರಿಸ್ಥಿತಿಯಲ್ಲಿ ಶಿಶುವಿನ ಜನ್ಮವಾದಾಗ ಜನನಶಾಂತಿಯನ್ನು ಏಕೆ ಮಾಡಬೇಕು

ಪ್ರತಿಯೊಂದು ಜೀವದ ಪ್ರಾರಬ್ಧ ಬೇರೆಬೇರೆಯಾಗಿರುತ್ತದೆ. ಕೆಲವು ಜೀವಗಳ ಪ್ರಾರಬ್ಧದ ತೀವ್ರತೆ (ಕಷ್ಟದ ಪ್ರಸಂಗಗಳು) ಇತರರ ತುಲನೆಯಲ್ಲಿ ಹೆಚ್ಚಿರುತ್ತದೆ. ಆ ಜೀವಗಳ ಜನ್ಮ ವಿಶಿಷ್ಟ ಪರಿಸ್ಥಿತಿಯಲ್ಲಾಗುತ್ತದೆ. ಅವಳಿ ಮಕ್ಕಳು ಅಥವಾ ಒಂದೇ ನಕ್ಷತ್ರ ಇರುವುದು, ಅಂದರೆ ಕುಟುಂಬದ ಸದಸ್ಯರೊಂದಿಗೆ ಕೊಡು-ಕೊಳ್ಳುವಿಕೆ ಹೆಚ್ಚು ಇರುವುದನ್ನು ತೋರಿಸುತ್ತದೆ.

ತ್ರಿಕಪ್ರಸವವು ಕುಟಂಬದಲ್ಲಿ ಪೂರ್ವಜರ ತೊಂದರೆ ಇರುವುದನ್ನು ತೋರಿಸುತ್ತದೆ.

ಶಿಶುವಿಗೆ ಜನ್ಮದಿಂದಲೇ ಹಲ್ಲುಗಳು ಇರುವುದು ಅಥವಾ ಅವಯವಗಳು ಚಮತ್ಕಾರಿಕ ರೀತಿಯಲ್ಲಿ ಇರುವುದು, ಇದು ಅದರ ಪ್ರಾರಬ್ಧಚಕ್ರವು ವೇಗದಿಂದ ನಡೆದಿರುವುದನ್ನು ತೋರಿಸುತ್ತದೆ, ಅಂದರೆ ಜೀವಕ್ಕೆ ಪ್ರಾರಬ್ಧಭೋಗಗಳನ್ನು ಒಂದರ ನಂತರ ಒಂದು ಹೀಗೆ ಕೂಡಲೇ ಕೂಡಲೇ ಭೋಗಿಸಬೇಕಾಗುತ್ತದೆ. ಜನ್ಮದಿಂದಲೇ ಅವಯವಗಳು ಕಡಿಮೆ ಇರುವುದು, ಇದು ಜೀವದ ಜೀವನದಲ್ಲಿ ದುಃಖದ ಪ್ರಸಂಗಗಳು ಹೆಚ್ಚು ಇರುವುದನ್ನು ತೋರಿಸುತ್ತದೆ. ಈ ರೀತಿಯ ತೀವ್ರ ಪ್ರಾರಬ್ಧವನ್ನು ಸಹಿಸಲು ಕಾಲದೇವತೆಯ, ಅಂದರೆ ಗ್ರಹಗಳ ಸಕಾರಾತ್ಮಕ ಶಕ್ತಿ ಪ್ರಾಪ್ತವಾಗಬೇಕು, ಎಂಬುದಕ್ಕಾಗಿ ಹಿಂದೂ ಧರ್ಮದಲ್ಲಿ ಜನನಶಾಂತಿ ಮಾಡುವ ಉಪಾಯವನ್ನು ಹೇಳಿದ್ದಾರೆ.

ಜನನಶಾಂತಿ ವಿಧಿಯನ್ನು ಮಾಡುವುದರಿಂದ ಶಿಶುವಿಗಾಗುವ ಲಾಭ

ಸೂಕ್ಷ್ಮ ಸ್ತರದಲ್ಲಾಗುವ ಲಾಭ ಲಾಭದ ಪ್ರಮಾಣ (ಶೇ.) ಪ್ರತ್ಯಕ್ಷ ಲಾಭ
ಶಿಶುವಿಗೆ ಪ್ರಾಣಶಕ್ತಿ ಸಿಗುವುದು ೪೦ – ಶಿಶುವಿಗೆ ವಿವಿಧ ರೀತಿಯ ರೋಗಗಳಾಗುವುದು, ಆದರೆ ಕಡಿಮೆ ಕಾಲಾವಧಿಯಲ್ಲಿ ಗುಣಮುಖರಾಗುವುದು
– ಶಿಶುವಿನ ಬೆಳವಣಿಗೆ ಇತರ ಮಕ್ಕಳಂತೆಯೇ ಆಗುವುದು, ಅಂದರೆ ಶಿಶು ಸ್ವಸ್ಥವಾಗಿರುವುದು
ಶಿಶುವಿನ ಸುತ್ತಲೂ ಈಶ್ವರೀ ಶಕ್ತಿಯ ಸೂಕ್ಷ್ಮ ಕವಚ ನಿರ್ಮಾಣವಾಗುವುದು ೩೦ – ಶಿಶುವಿಗೆ ಅಖಂಡ ಮತ್ತು ಒಳ್ಳೆಯ ನಿದ್ದೆ ಬರುವುದು, ಒತ್ತಾಯಪೂರ್ವಕವಾಗಿ ಹಾಲು ಅಥವಾ ಆಹಾರ ಕೊಡಬೇಕಾಗದಿರುವುದು.
– ಶಿಶುವಿಗೆ ಪದೇ ಪದೇ ಬೇರೆ ಬೇರೆ ತೊಂದರೆಗಳಾಗದಿರುವುದು
ಪ್ರಾರಬ್ಧದ ತೀವ್ರತೆ ಕಡಿಮೆಯಾಗುವುದು ೨೦ – ಶಿಶುವಿಗೆ ತೊಂದರೆಯಾದಾಗ ಅದರ ಬಗ್ಗೆ ಉಪಾಯ ಹೇಳುವ ತಜ್ಞರು ಸಹಜವಾಗಿ ಸಿಗುವುದು
– ಮಗು ದೊಡ್ಡದಾದ ಮೇಲೆ ಅವನಿಗೆ ತನಗಾಗುವ ತೊಂದರೆ ಗಮನಕ್ಕೆ ಬಂದು ಅದರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವುದು
ಇತರ (ದೇವತೆಗಳ ಆಶೀರ್ವಾದ ಸಿಗುವುದು, ಮನಸ್ಸು ಮತ್ತು ಬುದ್ಧಿಯ ಮೇಲಿರುವ ಮಾಯೆಯ ಆವರಣ ಬೇಗನೆ ದೂರಾಗುವುದು, ಇತ್ಯಾದಿ) ೧೦ – ಶಿಶು ಹೆಚ್ಚು ಆನಂದದಲ್ಲಿರುವುದು
– ಸಾತ್ತ್ವಿಕ ಜನರು, ವಸ್ತು, ಅಥವಾ ಸ್ಥಳಗಳತ್ತ ಶಿಶು ಆಕರ್ಶಿತವಾಗುವುದು
ಒಟ್ಟು ೧೦

ಜನನಶಾಂತಿ ವಿಧಿಯಿಂದ ಮೇಲಿನ ಕೋಷ್ಟಕದಲ್ಲಿ ನೀಡಲಾದ ಎಲ್ಲ ಲಾಭಗಳೂ ಶಿಶುವಿಗೆ ಪ್ರಾಪ್ತವಾಗುವವು ಎಂದೇನಿಲ್ಲ. ಶಿಶುವಿನ ಪ್ರಾರಬ್ಧ ಮತ್ತು ಭಾವ ಇವುಗಳಿಗನುಸಾರ ಕಡಿಮೆ ಅಥವಾ ಹೆಚ್ಚು ಪರಿಣಾಮವಾಗುತ್ತದೆ. ಗುರುಗಳ ಆಜ್ಞೆಗನುಸಾರ ಅಥವಾ ಉತ್ತಮ ಆಧ್ಯಾತ್ಮಿಕ ಮಟ್ಟವಿರುವ ಪುರೋಹಿತರ ಮಾರ್ಗದರ್ಶನದಲ್ಲಿ ಭಾವಪೂರ್ಣ ಮತ್ತು ಪರಿಪೂರ್ಣ ರೀತಿಯಲ್ಲಿ ಈ ವಿಧಿಯನ್ನು ಮಾಡುವುದು ಆವಶ್ಯಕವಾಗಿದೆ. ವರ್ತಮಾನ ಕಲಿಯುಗದಲ್ಲಿ ಭಾವಪೂರ್ಣ ಮತ್ತು ಪರಿಪೂರ್ಣ ವಿಧಿಯನ್ನು ಮಾಡುವ ಪುರೋಹಿತರು ಸಿಗುವುದು ಬಹಳ ದುರ್ಲಭವಾಗಿದ್ದರೂ, ಈ ವಿಧಿಯ ಮಾಧ್ಯಮದಿಂದ ಧರ್ಮಶಾಸ್ತ್ರಾನುಸಾರ ಆಚರಣೆ, ಅಂದರೆ ಸಾಧನೆ ಆಗುವುದರಿಂದ ಜೀವಕ್ಕೆ ಅದರ ಫಲ ಖಂಡಿತವಾಗಿಯೂ ಸಿಗುತ್ತದೆ.

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ, ೨೮.೧೦.೨೦೨೨)

ಜನನಶಾಂತಿಯನ್ನು ಯಾವಾಗ ಮಾಡಬೇಕು ?

ಶಿಶುವಿನ ಜನ್ಮವಾದ ನಂತರ ಹನ್ನೆರಡನೇ ದಿನ ಜನನಶಾಂತಿಯನ್ನು ಮಾಡಬೇಕು. ಆ ದಿನ ಶಾಂತಿಗಾಗಿ ಬೇರೆ ಮುಹೂರ್ತವನ್ನು ನೋಡುವ ಆವಶ್ಯಕತೆ ಇರುವುದಿಲ್ಲ ಹನ್ನೆರಡನೇ ದಿನ ಜನನಶಾಂತಿಯನ್ನು ಮಾಡುವುದು ಸಾಧ್ಯವಿಲ್ಲದಿದ್ದರೆ ಶಿಶುವಿನ ಜನ್ಮನಕ್ಷತ್ರದಲ್ಲಿ ಚಂದ್ರ ಬಂದಾಗ ಅಥವಾ ಇತರ ಶುಭದಿನದಂದು ಮುಹೂರ್ತವನ್ನು ನೋಡಿ ಶಾಂತಿಕರ್ಮವನ್ನು ಮಾಡಬೇಕು. ಜನನಶಾಂತಿಯನ್ನು ಮಾಡಲು ತಡ ಮಾಡಿದರೆ ಅದರ ಪರಿಣಾಮಕಾರತೆ ಕಡಿಮೆಯಾಗುತ್ತದೆ ಆದುದರಿಂದ ಅದನ್ನು ಸಕಾಲದಲ್ಲಿ ಮಾಡುವುದು ಲಾಭದಾಯಕವಾಗಿದೆ.

– ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ) (೨೮.೧೦.೨೦೨೨)

Leave a Comment