‘ಸನಾತನ ಚೈತನ್ಯವಾಣಿ ಆಡಿಯೋ ಆಪ್’ನ ಲೋಕಾರ್ಪಣೆ

ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ‘ಸನಾತನ ಚೈತನ್ಯವಾಣಿ ಆಡಿಯೋ ಆಪ್’ನ ಲೋಕಾರ್ಪಣೆ !

‘ಸನಾತನ ಚೈತನ್ಯವಾಣಿ’ಯ ಮಾಧ್ಯಮದಿಂದ ನಾದದ ಅಂದರೆ ಆಕಾಶತತ್ತ್ವದ ಸ್ತರದಲ್ಲಿ ಕಾರ್ಯ ನಡೆಯುತ್ತಿದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ರಾಮನಾಥಿ (ಗೋವಾ) – ಸಮಾಜಕ್ಕೆ ಶಾಸ್ತ್ರೋಕ್ತವಾಗಿ ಹಾಗೂ ಭಾವಪೂರ್ಣ ಧ್ವನಿಯಲ್ಲಿ ಹೇಳಿದ ಹಾಗೂ ಸಂತರ, ಸಾಧನೆ ಮಾಡುತ್ತಿರುವ ಸಾಧಕರ ಸಾತ್ತ್ವಿಕ ವಾಣಿಯಲ್ಲಿ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗೂ ಲಭ್ಯವಾಗಬೇಕೆಂದು ಸನಾತನ ಸಂಸ್ಥೆಯು ಅಕ್ಷಯ ತದಿಗೆಯಂದು ‘ಸನಾತನ ಚೈತನ್ಯವಾಣಿ’ ಆಡಿಯೋ ಆಪ್‌ಅನ್ನು ಪ್ರಪ್ರಥಮ ಬಾರಿ ಮರಾಠಿ ಭಾಷೆಯಲ್ಲಿ ಬಿಡುಗಡೆಗೊಳಿಸಿತ್ತು. ಸಮಾಜದಿಂದ ಸಿಗುತ್ತಿರುವ ಉತ್ತಮ ಅಭಿಪ್ರಾಯದಿಂದ ಈ ಆಪ್ ಈಗ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಲಭ್ಯವಾಗಿದೆ. ಅಕ್ಟೊಬರ್ ೨೫ ರ ದಸರಾದ ಶುಭಮುಹೂರ್ತದಂದು ಸನಾತನ ಆಶ್ರಮದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಶುಭಹಸ್ತಗಳಿಂದ ಈ ಮೂರು ಭಾಷೆಗಳ ಆಡಿಯೋ ಆಪ್‌ನ ಲೋಕಾರ್ಪಣೆ ಮಾಡಲಾಯಿತು.

ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು, ‘ಸನಾತನ ಚೈತನ್ಯವಾಣಿ’ ಈ ಆಡಿಯೋ ಆಪ್‌ನ ಮಾಧ್ಯಮದಿಂದ ನಾದದ ಅಂದರೆ ಆಕಾಶತತ್ತ್ವದ ಮಟ್ಟದಲ್ಲಿ ಕಾರ್ಯ ಆರಂಭವಾಗಿದೆ. ೪ ಭಾಷೆಗಳಲ್ಲಿರುವ ಈ ಆಪ್‌ನಿಂದ ಇನ್ನು ಬೃಹತ್ ಪ್ರಮಾಣದಲ್ಲಿ ಧರ್ಮಪ್ರಸಾರವಾಗಲಿದೆ. ಗುರುಗಳ ಆಶೀರ್ವಾದದಿಂದಾಗಿ ಎಲ್ಲ ಮಟ್ಟದಲ್ಲಿಯೂ ರಾಷ್ಟ್ರ ಹಾಗೂ ಧರ್ಮಗಳ ಕಾರ್ಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

‘ಸನಾತನ ಚೈತನ್ಯವಾಣಿ’ ಆಪ್ ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ಎಲ್ಲರಿಗಾಗಿ ಉಚಿತವಾಗಿ ಲಭ್ಯವಾಗಿದೆ. ಹೆಚ್ಚೆಚ್ಚು ಜನರು ಈ ಆಪ್‌ಅನ್ನು ಡೌನ್‌ಲೋಡ್ ಮಾಡಿ ಇದನ್ನು ಉಪಯೋಗಿಸಬೇಕು ಹಾಗೂ ಸಾತ್ತ್ವಿಕ ಸ್ತೋತ್ರ, ಆರತಿ, ಶ್ಲೋಕ, ಮಂತ್ರ, ನಾಮಜಪ ಇತ್ಯಾದಿಗಳ ಲಾಭ ಪಡೆದುಕೊಳ್ಳಬೇಕು. ಇಲ್ಲಿಯವರೆಗೆ ಮರಾಠಿ ಭಾಷೆಯಲ್ಲಿ ಈ ಆಪ್ ೨೪ ಸಾವಿರಕ್ಕಿಂತಲೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.

ಸನಾತನ ಚೈತನ್ಯವಾಣಿ ಡೌನ್‌ಲೋಡ್ ಮಾಡಿ !

Leave a Comment