ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ ಮತ್ತು ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ !
೧. ಯಾವ ಸಾಧಕನ ದೃಷ್ಟಿಯನ್ನು ತೆಗೆಯುವುದಿದೆಯೋ, ಅವನು ಮಾಡಬೇಕಾದ ಪ್ರಾರ್ಥನೆ ಮತ್ತು ನಾಮಜಪ
೧ ಅ. ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ : ‘ಹೇ ಭಗವಂತಾ, ನೀನು ನಮ್ಮಿಂದ ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯವನ್ನು ಮಾಡಿಸಿಕೊಳ್ಳುತ್ತಿರುವೆ. ಈ ಕಾರ್ಯವು ಆದಷ್ಟು ಬೇಗನೆ ಪೂರ್ಣವಾಗಲು ನನ್ನನ್ನು ಮತ್ತು ಇತರ ಎಲ್ಲ ಸಾಧಕರನ್ನು ರೋಗಮುಕ್ತರನ್ನಾಗಿ ಮಾಡಿ ನಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ನೀಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !’
೧ ಆ. ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ : ಶ್ರೀ ವಿಷ್ಣವೇ ನಮಃ |
೨. ಯಾವ ಸಾಧಕನು ದೃಷ್ಟಿಯನ್ನು ತೆಗೆಯುವವನಿದ್ದಾನೆಯೋ, ಅವನು ಮಾಡಬೇಕಾದ ಪ್ರಾರ್ಥನೆ ಮತ್ತು ನಾಮಜಪ
೨ ಅ. ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ : ‘ಹೇ ಭಗವಂತಾ, ಈ ಸಾಧಕನ ದೃಷ್ಟಿಯನ್ನು ನನಗೆ ಭಾವಪೂರ್ಣವಾಗಿ, ಪರಿಪೂರ್ಣವಾಗಿ ಮತ್ತು ಶರಣಾಗತ ಭಾವದಿಂದ ತೆಗೆಯಲು ಸಾಧ್ಯವಾಗಲಿ. ಈ ದೃಷ್ಟಿಯನ್ನು ತೆಗೆದು ನನಗೆ ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಅಳಿಲು ಸೇವೆಯನ್ನು ಮಾಡಲು ಸಾಧ್ಯವಾಗಲಿ. ದೃಷ್ಟಿಯನ್ನು ತೆಗೆಯುವಾಗ ನೀನೇ ನನ್ನ ರಕ್ಷಣೆಯನ್ನು ಮಾಡು. ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !’
೨ ಆ. ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ : ಶ್ರೀ ವಿಷ್ಣವೇ ನಮಃ |
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೩.೨೦೨೧)
ಹೊಸ ವಸ್ತುಗಳನ್ನು ಬಳಸುವ ಮೊದಲು ಇದನ್ನು ಮಾಡಿ…
ಸಾಧನೆಯಲ್ಲಿ ಅಡಚಣೆಗಳನ್ನು ದೂರಗೊಳಿಸಲು ‘ನಾಮಜಪದ ಮಂಡಲ ಹಾಕುವ’ ಉಪಾಯ
ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಅಂಗೈಗಳನ್ನು ಜೋಡಿಸಿ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ!
ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’