ಸತ್ಸೇವೆ ಸತ್ಸಂಗ – 7

ವಾಸ್ತು ಶುದ್ಧಿ ಮತ್ತು ವಾಹನ ಶುದ್ದಿ

ಕಳೆದ ಕೆಲವು ಸತ್ಸಂಗಗಳಲ್ಲಿ ನಾವು ಆಧ್ಯಾತ್ಮಿಕ ತೊಂದರೆ ಮತ್ತು ಅದನ್ನು ದೂರಗೊಳಿಸಲು ಮಾಡುವ ಆಧ್ಯಾತ್ಮಿಕ ಉಪಾಯದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಈವರೆಗೆ ನಾವು ಅತ್ತರ ಕರ್ಪೂರ ಉಪಾಯ, ಉಪ್ಪುನೀರಿನ ಉಪಾಯ, ಸಂತರ ವಾಣಿಯಲ್ಲಿನ ಭಜನೆ ಕೇಳುವುದು, ಖಾಲಿ ಪೆಟ್ಟಿಗೆಯ ಉಪಾಯ ಈ ವಿಷಯವಾಗಿ ತಿಳಿದುಕೊಂಡಿದ್ದೇವೆ. ನಮ್ಮಲ್ಲಿರುವ ನಕಾರಾತ್ಮಕ ಆವರಣ ದೂರಗೊಳಿಸಲು ಜೊತೆಗೆ ನಾವು ಇರುವ ವಾಸ್ತು ಹಾಗೂ ಉಪಯೋಗಿಸುವ ವಾಹನದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ದೂರಗೊಳಿಸಿ ಸಕಾರಾತ್ಮಕ ಸ್ಪಂದನಗಳು ಹೇಗೆ ಬರುವುದು ಇದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ವಾಸ್ತು ನಾವು ಪದೇಪದೇ ಕಟ್ಟಿಸುವುದಿಲ್ಲ. ಮತ್ತು ಬಹಳ ಖರ್ಚು ಮಾಡಿ ಒಂದು ಸಾರಿ ಕಟ್ಟಿಸಿರುವ ವಾಸ್ತು ವಾಸ್ತುದೋಷದಿಂದ ಮತ್ತೆ ಕಟ್ಟಿಸುವುದು ಅಷ್ಟಾಗಿ ನಮಗೆ ಸಾಧ್ಯವಾಗುವುದಿಲ್ಲ. ವಾಸ್ತುವಿನ ಬಗ್ಗೆ ಹೇಗೆ ಇದೆಯೋ, ನಾವು ಉಪಯೋಗಿಸುವ ವಾಹನ ಸಂದರ್ಭದಲ್ಲಿಯೂ ಹಾಗೆಯೇ ಇರುತ್ತದೆ. ವಾಹನಕ್ಕೆ ಸಂಬಂಧಪಟ್ಟ ನಕಾರಾತ್ಮಕ ಸ್ಪಂದನಗಳ ಪರಿಣಾಮವೆಂದು ವಾಹನ ಅಪಘಾತವಾಗುವುದು, ವಾಹನ ನಿಲ್ಲುವುದು, ಈ ರೀತಿಯ ತೊಂದರೆಗಳು ಆಗಬಹುದು, ಆದ್ದರಿಂದ ಇಂದು ನಾವು ವಾಸ್ತು ಶುದ್ದಿ ಎಂದರೆ ಏನು, ವಾಹನ ಶುದ್ದಿಯ ಸರಳ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

೧. ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳ ಪರಿಣಾಮ

ನಾವು ವಾಸಿಸುತ್ತಿರುವ ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ಇದ್ದರೆ ಅದರಿಂದ ನಮ್ಮ ಸಾಧನೆಯ ಮೇಲೆಯೂ ಪರಿಣಾಮ ಆಗುತ್ತದೆ. ನಮ್ಮ ಸಾಧನೆ ಆ ತೊಂದರೆದಾಯಕ ಸ್ಪಂದನಗಳ ಜೊತೆಗೆ ಹೋರಾಡಲು ಖರ್ಚಾಗುತ್ತದೆ. ಇದರ ಅರ್ಥ ತೊಂದರೆದಾಯಕ ಸ್ಪಂದನಗಳ ಮೇಲೆ ಹಿಡಿತ ಸಾಧಿಸಲು ನಾವು ಮಾಡುವ ಸಾಧನೆಯು ಉಪಯೋಗಿಸಲ್ಪಡುತ್ತದೆ. ಆದ್ದರಿಂದ ಸಾಧನೆಯಲ್ಲಿ ಅಪೇಕ್ಷಿತವಾದ ಪ್ರಗತಿಯ ಆಗುವುದಿಲ್ಲ. ಹಾಗೂ ತೊಂದರೆದಾಯಕ ಸ್ಪಂದನಗಳಿಂದ ತಲೆನೋವು, ವಾಕರಿಕೆಯಂತಹ ಶಾರೀರಿಕ ತೊಂದರೆಗಳು ಮತ್ತು ಅನಾರೋಗ್ಯ, ನಿರುತ್ಸಾಹ ಎನಿಸುವುದು ಮುಂತಾದ ಮಾನಸಿಕ ತೊಂದರೆಗಳು ಸಹ ಆಗಬಹುದು. ಈ ರೀತಿ ಆಗಬಾರದು ಅದಕ್ಕಾಗಿ ವಾಸ್ತುಶುದ್ದಿ ಮಾಡುವುದು ಅವಶ್ಯಕವಾಗಿದೆ.

ವಾಸ್ತು ಶುದ್ದಿ ಮಾಡುವುದು ಎಂದರೆ ವಾಸ್ತುವಿನಲ್ಲಿರುವ ಅಯೋಗ್ಯ ಮತ್ತು ತೊಂದರೆದಾಯಕ ಸ್ಪಂದನಗಳನ್ನು ದೂರಗೊಳಿಸಿ ಒಳ್ಳೆಯ ಸ್ಪಂದನಗಳನ್ನು ನಿರ್ಮಾಣ ಮಾಡುವುದು ! ವಾಸ್ತು ದೋಷ ಗಮನಕ್ಕೆ ಬರುವುದಕ್ಕಾಗಿ ವಾಸ್ತುವಿನಲ್ಲಿ ಇರುವ ವ್ಯಕ್ತಿಗಳ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ ಸ್ತರದಲ್ಲಿ ಆಗುವ ತೊಂದರೆಗಳ ಕೆಲವು ಲಕ್ಷಣಗಳನ್ನು ನಾವು ಅಭ್ಯಾಸ ಮಾಡಬಹುದು.

೨. ವಾಸ್ತುದೋಷ ಗೋಚರಿಸುವ ಕೆಲವು ಲಕ್ಷಣಗಳು

ಕೇವಲ ಹೊರಗಿನಿಂದ ಆಕರ್ಷಕವಾಗಿರುವ ವಾಸ್ತು ಸರಿ ಇರುತ್ತದೆ ಎಂದು ಇಲ್ಲ. ನಾವು ಸ್ಪಂದನಗಳ ಅಭ್ಯಾಸಮಾಡಿ ವಾಸ್ತುದೋಷ ಇದೆ ಅನಿಸುತ್ತದೆ ಅಥವಾ ಇಲ್ಲವೋ ಎಂದು ಅಭ್ಯಾಸ ಮಾಡಬಹುದು. ನಮ್ಮ ವಾಸ್ತುವಿನಲ್ಲಿ ದೋಷ ಇದೆ ಅಥವಾ ಇಲ್ಲ ಎಂಬುದನ್ನು ಗುರುತಿಸಲು ಕೆಲವು ಲಕ್ಷಣಗಳು ಇವೆ. ವಾಸ್ತುದೋಷದಿಂದ ಶಾರೀರಿಕ ಸ್ತರದಲ್ಲಿ ಹೊಟ್ಟೆಯ ವಿಕಾರಗಳು, ಸಂಧಿವಾತ, ವಿಕಲಾಂಗತೆ ಮುಂತಾದ ಶಾರೀರಿಕ ರೋಗಗಳು ಅಥವಾ ಚಿಂತೆ, ನಿರಾಸೆ ಮುಂತಾದ ಮಾನಸಿಕ ರೋಗಗಳು ಅಥವಾ ಸತತವಾಗಿ ಆರ್ಥಿಕ ನಷ್ಟವಾಗುವುದು, ಮನೆಯಲ್ಲಿ ಜಗಳವಾಗುವುದು, ನಾಮಜಪದಲ್ಲಿ ವಿಘ್ನ ಬರುವುದು, ಕೆಟ್ಟ ಶಕ್ತಿಯ ಆಸ್ತಿತ್ವ ಅರಿವಿಗೆ ಬರುವುದು ಹೀಗೆ ಆಗಬಹುದು.

೩. ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುವ ಕಾರಣಗಳು

ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗಲು ಅನೇಕ ಕಾರಣಗಳು ಇರಬಹುದು. ಯಾವುದಾದರೂ ಕೋಣೆಯಲ್ಲಿ ಬೇಡವಾದ ವಸ್ತುಗಳ ಸಂಗ್ರಹ, ಅಸಾತ್ವಿಕ ಅಲಂಕಾರ, ಮನೆಯಲ್ಲಿರುವ ವ್ಯಕ್ತಿ ದುರಾಚಾರಿ ಇದ್ದರೆ, ಆಗಲೂ ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ.

ಅ. ವಾಸ್ತು ದೋಷ : ವಾಸ್ತುವಿನ ರಚನೆ ದೋಷಪೂರ್ಣವಾಗಿದ್ದರೆ ಅಥವಾ ಕೆಟ್ಟ ಶಕ್ತಿಯ ತೊಂದರೆ ಇದ್ದರೆ ವಾಸ್ತುದೋಷ ಉದ್ಭವಿಸುತ್ತದೆ. ವ್ಯಕ್ತಿಗಳು ನರಳಿರುವ ಸ್ಥಳಗಳು, ಕೆಟ್ಟ ವ್ಯವಸಾಯ ನಡೆಯುವ ಸ್ಥಳ, ಕೊಲೆ ನಡೆದಿರುವ ಸ್ಥಳ, ಸ್ಮಶಾನ ಮುಂತಾದ ಸ್ಥಳಗಳಲ್ಲಿ ತೊಂದರೆದಾಯಕ ಸ್ಪಂದನಗಳು ಇರುತ್ತವೆ. ಒಂದೇ ಭಾಗದಲ್ಲಿ ಇರುವ ಆಸ್ಪತ್ರೆ ಮತ್ತು ದೇವಸ್ಥಾನದ ವಾತಾವರಣದಲ್ಲಿ ಭೇದ ಇರುತ್ತದೆ ಅಲ್ಲವೇ ? ನಮಗೂ ಸಹ ಅರಿವಿಗೆ ಬರುತ್ತದೆ.

ಆ. ವಾಸ್ತುವಿನ ಅಸಾತ್ವಿಕ ಅಲಂಕಾರ : ವಾಸ್ತುವಿನ ಅಲಂಕಾರ ಅಸಾತ್ವಿಕವಾಗಿದ್ದರೆ, ಆಗಲೂ ಅದರಿಂದ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ. ವಾಸ್ತು ಆರಾಮದಾಯಕವಾಗಿರಲು ನಮ್ಮ ಪ್ರಯತ್ನ ಇರುತ್ತದೆ ಮತ್ತು ಆದರ ಅನುಗುಣವಾಗಿ ವಾಸ್ತುವಿನಲ್ಲಿ ಅಲಂಕಾರವನ್ನು ಮಾಡುತ್ತೇವೆ. ಆದರೆ ಯಾವಾಗಲೂ ವಾಸ್ತುವಿನ ಗೋಡೆಯ ಬಣ್ಣ, ಟೈಲ್ಸ್ ನ ಚಿತ್ರಗಳು, ಪರದೆಗಳ ಬಣ್ಣ, ಗೋಡೆಯ ಮೇಲಿನ ಕಲಾಕೃತಿಗಳು, ಮನೆಯಲ್ಲಿರುವ ಫರ್ನಿಚರ್ ಗಳ ಆಯ್ಕೆ ಮತ್ತು ರಚನೆ ಅಸಾತ್ವಿಕವಾಗಿದ್ದರೆ, ಅದರಿಂದ ನಕಾರಾತ್ಮಕ ಸ್ಪಂದನಗಳು ಕಾರ್ಯನಿರತವಾಗಿ ಕೌಟುಂಬಿಕ ಸಮಸ್ಯೆಗಳನ್ನು ಹೆಚ್ಚಿಸಲು ಕಾರಣವಾಗಬಹುದು.

ಇ. ವಾಸ್ತುವಿನಲ್ಲಿ ವಾಸಿಸುವ ಜನರು : ವಾಸ್ತುವಿನಲ್ಲಿ ಇರುವ ವ್ಯಕ್ತಿಗಳ ಸ್ವಭಾವವೂ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಾಸ್ತುವಿನಲ್ಲಿರುವವರ ಸ್ವಭಾವವು ಒಳ್ಳೆಯದಾಗಿರಬೇಕು. ಶೇ.೩೦ರಷ್ಟು ವಾಸ್ತುದೋಷವು  ಅಲ್ಲಿ ವಾಸಿಸುವವರಿಂದಾಗಿಯೇ ಉದ್ಭವಿಸಿರುತ್ತದೆ.

ಈ. ಕೋಣೆಯಲ್ಲಿ ಅನಗತ್ಯ ವಸ್ತುಗಳ ಸಂಗ್ರಹ : ಅದರ ಜೊತೆಗೆ ಕೋಣೆಯಲ್ಲಿ ಅಸ್ವಚ್ಛತೆ ಮತ್ತು ಅವ್ಯವಸ್ಥಿತತೆಯಿಂದ ಹಾಗೂ ಹೆಚ್ಚುವರಿ ಸಾಮಾನಿನ ಅನಾವಶ್ಯಕ ಸಂಗ್ರಹದಿಂದ ವಾಸ್ತುವಿನ ಸ್ಪಂದನಗಳಲ್ಲಿ ಏರುಪೇರಾಗುತ್ತದೆ. ನಕಾರಾತ್ಮಕ ಸ್ಪಂದನಗಳು ಕಾರ್ಯನಿರತವಾಗಿರುವುದರಿಂದ ಅನಿಷ್ಟ ಶಕ್ತಿಗಳ ತೊಂದರೆಯೂ ಆಗಬಹುದು. ಆದ್ದರಿಂದ ವಾಸ್ತುವಿನಲ್ಲಿ ಸುವ್ಯವಸ್ಥೆ ಮತ್ತು ಸ್ವಚ್ಛತೆ ಇರುವುದು ಮಹತ್ವದ್ದಾಗಿದೆ.

೪. ವಾಸ್ತು ಶುದ್ದಿ ಹಾಗೂ ಅದನ್ನು ಮಾಡುವ ಸುಲಭ ಪದ್ಧತಿ

ವಾಸ್ತುವಿನಲ್ಲಿ ಅಯೋಗ್ಯ ಮತ್ತು ತೊಂದರೆದಾಯಕ ಸ್ಪಂದನಗಳನ್ನು ದೂರ ಪಡಿಸುವುದು ಮತ್ತು ಅದರಿಂದ ಒಳ್ಳೆಯ ಸ್ಪಂದನಗಳು ನಿರ್ಮಾಣ ಮಾಡುವುದು ಎಂದರೆ ಶುದ್ಧಿ ಮಾಡುವುದು. ವಾಸ್ತುವಿನಲ್ಲಿ ಯಾವುದೇ ದೋಷ ಉಳಿಯಬಾರದು ಎಂದು ಇತ್ತೀಚಿಗೆ ಕಟ್ಟಡ ಕಟ್ಟುವಾಗ ಕಂಟ್ರಾಕ್ಟರುಗಳು ಮತ್ತು ಗ್ರಾಹಕರು ವಾಸ್ತುಶಾಸ್ತ್ರದ ಬಗ್ಗೆ ಗಾಂಭೀರ್ಯದಿಂದ ಯೋಚನೆ ಮಾಡುತ್ತಾರೆ. ಆದರೆ ಆ ಕ್ಷೇತ್ರದಲ್ಲಿ ಭ್ರಷ್ಟ ವ್ಯಕ್ತಿಗಳು ಇದ್ದರೆ ವಾಸ್ತುಶುದ್ಧಿಗಾಗಿ ಅನಾವಶ್ಯಕವಾಗಿ ದುಬಾರಿ ವಿಧಿಗಳನ್ನು ಮಾಡಿಸುತ್ತಾರೆ, ವಾಸ್ತುವಿನ ರಚನೆಯಲ್ಲಿ ಬದಲಾವಣೆ ಮಾಡುವುದು ಈ ರೀತಿಯ ಪ್ರಕಾರ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ವಾಸ್ತುದೋಷ ದೂರ ಪಡಿಸಲು ಕೆಲವು ಸುಲಭ, ಸರಳ ಪದ್ಧತಿಗಳ ಅಭ್ಯಾಸ ಮಾಡೋಣ.

ಅ. ಮನೆಯಲ್ಲಿರುವ ಅನಾವಶ್ಯಕ ವಸ್ತುಗಳನ್ನು ತೆರವುಗೊಳಿಸುವುದು : ಮನೆಯಲ್ಲಿ ಅನಾವಶ್ಯಕ ವಸ್ತುಗಳಿದ್ದರೆ, ಅದರಿಂದ ನಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗುತ್ತವೆ ಎಂದು ತಿಳಿದುಕೊಂಡಿದ್ದೇವೆ. ವಾಸ್ತುಶಾಸ್ತ್ರದ ಪ್ರಕಾರ ಪ್ರತಿಯೊಂದು ಮನೆಯಲ್ಲಿ, ಪ್ರತಿಯೊಂದು ಕೋಣೆಯಲ್ಲಿ ಅಂದಾಜು ೪೭% ವಸ್ತುಗಳು ಅನಾವಶ್ಯಕವಾಗಿ ಇರುತ್ತದೆ. ಆದ್ದರಿಂದ ಮೊದಲು ಮನೆಯಲ್ಲಿನ ಬೇಡದ ವಸ್ತುಗಳು, ಅನಾವಶ್ಯಕ ಸಾಮಾನು ಬಿಸಾಕಿ ಉಳಿದಿರುವ ಸಾಮಾನುಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕು, ಆಗ ಮನೆಯಲ್ಲೆಲ್ಲ ತೊಂದರೆದಾಯಕ ಸ್ಪಂದನಗಳು ಕಡಿಮೆಯಾಗುತ್ತದೆ. ಎಲ್ಲಿ ಸ್ವಚ್ಛತೆ, ಪಾವಿತ್ರ್ಯ, ಸೌಂದರ್ಯ ಇರುತ್ತವೆಯೋ ಅಲ್ಲಿ ದೇವರ ಅಸ್ತಿತ್ವ ಇರುತ್ತದೆ. ಅದರ ಜೊತೆಗೆ ವಿಭೂತಿ ಊದುವುದು, ವಾಸ್ತುವಿನಲ್ಲಿ ಗೋಮುತ್ರ ಸಿಂಪಡಿಸುವುದು, ಧೂಪ ಹಾಕುವುದು, ಸಂತರ ಧ್ವನಿಯಲ್ಲಿನ ಭಜನೆಗಳನ್ನು ಹಚ್ಚಿಡುವುದು ಹಾಗೂ ದೇವತೆಗಳ ನಾಮ ಪಟ್ಟಿಯ ವಾಸ್ತುಛಾವಣಿ ನಿರ್ಮಿಸುವುದು ಇದು ವಾಸ್ತು ಶುದ್ಧಿಯ ಕೆಲವು ಸುಲಭೋಪಾಯಗಳಾಗಿವೆ. ಅವುಗಳನ್ನು ಹೇಗೆ ಮಾಡುವುದು ಇದನ್ನು ನಾವು ತಿಳಿದುಕೊಳ್ಳೋಣ.

ಆ. ವಿಭೂತಿ ಊದುವುದು : ಸಂಜೆಯ ಸಮಯದಲ್ಲಿ ಅಥವಾ ದೇವರ ಪೂಜೆಯ ನಂತರ ನಮ್ಮ ಮನೆಯಲ್ಲಿನ ಕೋಣೆಗಳಲ್ಲಿ ಸಾತ್ವಿಕ ವಿಭೂತಿಯನ್ನು ಹೊರಗಿನ ದಿಕ್ಕಿಗೆ ಊದಬಹುದು ಅಥವಾ ಕುಡಿಯುವ ನೀರಿನ ಒಂದು ಲೋಟದಲ್ಲಿ ಸ್ವಲ್ಪ ವಿಭೂತಿ ಹಾಕಿ ವಿಭೂತಿಯಿರುವ ನೀರನ್ನು ತುಳಸಿ ಎಲೆಯ ಸಹಾಯದಿಂದ ವಾಸ್ತುವಿನಲ್ಲಿ ಸಿಂಪಡಿಸಬಹುದು. ತೀರ್ಥಕ್ಷೇತ್ರದ ಸ್ಥಳಗಳಿಂದ ಸಂಗ್ರಹಿಸಿರುವ ಅಥವಾ ಸಾತ್ವಿಕ ಊದುಬತ್ತಿಯ ವಿಭೂತಿಯನ್ನು ಇದಕ್ಕಾಗಿ ಉಪಯೋಗಿಸಬಹುದು. ವಾಸ್ತುವಿನಲ್ಲಿ ವಿಭೂತಿಯಿರುವ ತೀರ್ಥ ಸಿಂಪಡಿಸಿದ ನಂತರ ಅದರ ಪರಿಣಾಮ ಹೆಚ್ಚು ಸಮಯದವರೆಗೆ ಉಳಿಯುತ್ತದೆ.

ಇ. ಧೂಪ ಹಾಕುವುದು : ಮನೆಯಲ್ಲಿ ನಿಯಮಿತವಾಗಿ ಧೂಪ ಹಾಕಿ ಬೇವಿನ ಎಲೆ ಹೊಗೆ ಹಾಕುವುದರಿಂದಾಗಿ ಮನೆಯಲ್ಲಿನ ನಕಾರಾತ್ಮಕ ಮತ್ತು ಅನಿಷ್ಟ ಶಕ್ತಿ ದೂರವಾಗುತ್ತದೆ.

ಈ. ವಾಸ್ತುವಿನಲ್ಲಿ ಗೋಮೂತ್ರ ಸಿಂಪಡಿಸುವುದು : ಗೋಮೂತ್ರ ಸಿಂಪಡಿಸುವುದರಿಂದಲೂ ವಾಸ್ತುಶುದ್ದಿ ಆಗುತ್ತದೆ ಹಾಗೂ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯಾಗುತ್ತದೆ. ಗೋಮೂತ್ರ ಆರೋಗ್ಯದಾಯಕವಾಗಿದ್ದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ. ನೆಲ ಒರೆಸಲೂ ತೆಗೆದುಕೊಳ್ಳುವ ನೀರಿನಲ್ಲಿಯೂ ಗೋಮೂತ್ರದ ಕೆಲವು ಹನಿಗಳನ್ನು ಹಾಕಬಹುದು.

ವಾಸ್ತು ಶುದ್ಧಿಯ ಕೃತಿ ಬಲದಿಂದ ಎಡಕ್ಕೆ ಮಾಡುವುದರಿಂದ ವಾತಾವರಣ  ಶುದ್ಧಿಯಾಗುವ ಪ್ರಮಾಣ ಹೆಚ್ಚುತ್ತದೆ. ವಾಸ್ತು ಶುದ್ಧಿಯ ಕೃತಿ ಮಾಡುವಾಗ ವಾಸ್ತುವಿನ ಬಲದಿಂದ ಎಡಗಡೆ ಮಾರ್ಗವಾಗಿ ಎಂದರೆ ಪ್ರದಕ್ಷಿಣೆಯ ವಿರುದ್ಧ ದಿಕ್ಕಿಗೆ ಗೋಡೆಯ ಹತ್ತಿರ ತಿರುಗುತ್ತಾ ಮಾಡಬೇಕು.  ಹೀಗೆ ಮಾಡುವುದರಿಂದ ವಾತಾವರಣದಲ್ಲಿರುವ ಭಗವಂತನ ಮಾರಕ ಶಕ್ತಿ ಜಾಗೃತವಾಗುತ್ತದೆ ಮತ್ತು ವಾತಾವರಣ ಶುದ್ಧಿಯ ಪ್ರಮಾಣ ಹೆಚ್ಚುತ್ತದೆ. ವಾಸ್ತುಶುದ್ಧಿಗಾಗಿ ನಾವು ಮನೆಯಲ್ಲಿ ಧೂಪ ಹಾಕುವುದು, ವಿಭೂತಿಯಿರುವ ನೀರು ಅಥವಾ ಗೋಅರ್ಕ ಸಿಂಪಡಿಸುವುದು, ಇವನ್ನು ನಾವು ಬಲಗಡೆಯಿಂದ ಎಡಗಡೆಗೆ ಈ ರೀತಿಯಲ್ಲಿ ಶುದ್ದಿ ಮಾಡಬೇಕು.

ನಾಮಜಪ : ವಾಸ್ತು ಶುದ್ಧಿಯ ಉಪಾಯ ಮಾಡುವಾಗ ನಾವು ನಕಾರಾತ್ಮಕ ಸ್ಪಂದನಗಳನ್ನು ದೂರ ಮಾಡುತ್ತಿರುವುದರಿಂದ ನಮ್ಮ ಸುತ್ತಲೂ ಸಂರಕ್ಷಣ ಕವಚ ಇರುವುದು ಆವಶ್ಯಕವಾಗಿದೆ. ಆ ದೃಷ್ಟಿಯಿಂದ ವಾಸ್ತುಶುದ್ಧಿ ಮಾಡುವಾಗ ಪ್ರತಿಯೊಬ್ಬರು ಕಡ್ಡಾಯವಾಗಿ ನಾಮಜಪ ಮಾಡಬೇಕು. ವಾಸ್ತುಶುದ್ದಿ ಮಾಡುವಾಗ ಶ್ರೀಗಣಪತಿಯ ಅಥವಾ ನಮ್ಮ ಉಪಾಸ್ಯದೇವತೆಯ ನಾಮಜಪ ಮಾಡಬಹುದು.

ಪ್ರಾರ್ಥನೆ : ವಾಸ್ತು ಶುದ್ದಿ ಮಾಡುವ ಮೊದಲು ಉಪಾಸ್ಯದೇವತೆಯಲ್ಲಿ ‘ಹೇ ದೇವತೆ, ನಿನ್ನ ಕೃಪೆಯಿಂದ ನನ್ನ ಸುತ್ತಲೂ (ಸ್ವಂತ ಹೆಸರು ಹೇಳಬೇಕು) ಸಂರಕ್ಷಕ ಕವಚ ನಿರ್ಮಾಣವಾಗಲಿ ಹಾಗೂ ಈ ವಾಸ್ತುವಿನಲ್ಲಿರುವ ಕೆಟ್ಟಶಕ್ತಿಯ ತೊಂದರೆದಾಯಕ ಸ್ಪಂದನಗಳು ನಷ್ಟವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು. ವಾಸ್ತು ಶುದ್ದಿ ಮಾಡುವಾಗ ಅಗಾಗ ಪ್ರಾರ್ಥನೆ ಮಾಡಬೇಕು.

ಉ. ದೇವತೆಯ ನಾಮಜಪದ ಪಟ್ಟಿಗಳನ್ನು ಹಚ್ಚುವುದು : ವಾಸ್ತುಶುದ್ಧಿಯ ದೃಷ್ಟಿಯಿಂದ ಸನಾತನದ ವತಿಯಿಂದ ದೇವತೆಯ ನಾಮಪಟ್ಟಿಯ ಛಾವಣಿಯನ್ನು ತಯಾರಿಸಲಾಗಿದೆ. ಸತತ ನಾಮಜಪದ ಸ್ಮರಣೆ ಆಗಲು ನಮ್ಮ ಕಣ್ಣೆದುರು ದೇವತೆಯ ನಾಮಪದ ಪಟ್ಟಿಯನ್ನು ಹಚ್ಚುವುದು ಉಪಯುಕ್ತವಾಗಿದೆ. ಬಹಳ ಸಾರಿ ವಾಸ್ತುವಿನ  ಕೊಣೆಯ ಛಾವಣಿ ಇಳಿಜಾರು ಇರುತ್ತದೆ, ಅಂದರೆ ನೆಲಕ್ಕೆ ಸಮಾನಾಂತರವಾಗಿ ಇರುವುದಿಲ್ಲ. ಹೆಂಚಿನ ಮನೆಗಳಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ವಾಸ್ತುವಿನಲ್ಲಿ ಅಯೋಗ್ಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಇದರ ಮೇಲೆ ಉಪಾಯವೆಂದು ದೇವತೆಯ ನಾಮಪಟ್ಟಿಗಳನ್ನು ಗೋಡೆಯ ಮೇಲೆ ಒಂದೇ ರೇಖೆಯಲ್ಲಿ ಹಚ್ಚಬೇಕು.

ಕೋಣೆಯ ಪೂರ್ವದಿಕ್ಕಿಗೆ ಇರುವ ಗೋಡೆಯ ಮೇಲೆ ಶ್ರೀರಾಮ, ಶ್ರೀಕೃಷ್ಣ ಮತ್ತು ಮಾರುತಿ ನಾಮಪಟ್ಟಿಗಳನ್ನು, ಪಶ್ಚಿಮದ  ಗೋಡೆಗೆ ದೇವಿಯ ನಾಮ ಪಟ್ಟಿ, ಉತ್ತರದ ಕಡೆಗೆ ಇರುವ ಗೋಡೆಯ ಮೇಲೆ ಶಿವ ಮತ್ತು ದಕ್ಷಿಣ ದಿಕ್ಕಿಗೆ ಇರುವ ಗೋಡೆಯ ಮೇಲೆ ದತ್ತ ಮತ್ತು ಗಣಪತಿ ಇವರ ನಾಮಪಟ್ಟಿಗಳನ್ನು ಒಂದೇ ರೇಖೆಯಲ್ಲಿ ಸಾಧಾರಣವಾಗಿ ಟ್ಯೂಬ್ ಲೈಟ್ ಎತ್ತರದಲ್ಲಿ ಹಚ್ಚಬೇಕು. ಈ ರೀತಿ ಪ್ರತಿಯೊಂದು ಕೋಣೆಯಲ್ಲಿ ನಾವು ದೇವತೆಯ ನಾಮ ಪಟ್ಟಿಯ ಛಾವಣಿ ತಯಾರಿಸಿದರೆ ಅದರಿಂದಲೂ ಕೋಣೆಯಲ್ಲಿ ಸಕಾರಾತ್ಮಕ ಸ್ಪಂದನಗಳು ಹರಡುತ್ತವೆ.

ಊ. ಸಂತರು ಹಾಡಿದ ಭಜನೆಗಳನ್ನು ಹಾಕುವುದು : ನಾವು ಹಿಂದಿನ ಸತ್ಸಂಗದಲ್ಲಿ ತಿಳಿದುಕೊಂಡಿರುವ ಪ್ರಕಾರ ಪರಮ ಪೂಜ್ಯ ಭಕ್ತರಾಜ ಮಹಾರಾಜರು ಹಾಡಿದ ಭಜನೆ ಮತ್ತು ನಾಮಜಪ ಮನೆಯಲ್ಲಿ ಹಾಕಿ ಇಡುವುದರಿಂದ ವಾಸ್ತುವಿನಲ್ಲಿನ ನಕಾರಾತ್ಮಕ ಸ್ಪಂದನಗಳು ದೂರವಾಗುತ್ತವೆ. ಸನಾತನದ ಚೈತನ್ಯವಾಣಿ ಆಪ್ ನಲ್ಲಿ ಸಾತ್ವಿಕ ನಾಮಜಪ ಹಾಗೂ ಜಾಲತಾಣಗಳಲ್ಲಿ ಭಜನೆ ಮತ್ತು ನಾಮಜಪ ಲಭ್ಯವಿವೆ.

ಎ. ವಾಸ್ತುಶಾಂತಿ : ಅದರ ಜೊತೆಗೆ ವಾಸ್ತುಶಾಂತಿ ಮಾಡುವುದರಿಂದ ವಾಸ್ತುವಿನಲ್ಲಿನ ನಕಾರಾತ್ಮಕ ಸ್ಪಂದನಗಳು ದೂರವಾಗುತ್ತವೆ. ಮನೆ ಕಟ್ಟಿರುವ ಯಜಮಾನನ ಆಯುಷ್ಯ, ಆರೋಗ್ಯ, ನಿರ್ವಿಘ್ನತೆ, ಸಂಪತ್ತು ಮುಂತಾದವು ಶುಭವಾಗಲು ವಾಸ್ತುವಿನ ಪೂಜೆ ಮಾಡುತ್ತಾರೆ, ಅದಕ್ಕೆ ವಾಸ್ತುಶಾಂತಿ ಎನ್ನುತ್ತಾರೆ. ಪ್ರತಿ ಹತ್ತು ವರ್ಷಕ್ಕೆ ವಾಸ್ತು ಪೂಜೆ ನಡೆಯುವುದು ಆವಶ್ಯಕವಾಗಿದೆ.

ಏ. ನಾಮಜಪ ಮಾಡುವುದು : ಇದು ವಾಸ್ತುಶುದ್ಧಿಯ ದೃಷ್ಟಿಯಿಂದ ಎಲ್ಲಕ್ಕಿಂತ ಮಹತ್ವದ್ದಾಗಿದೆ. ಮನೆಯಲ್ಲಿನ ಸದಸ್ಯರು ನಾಮಜಪ ಮತ್ತು ಸಾಧನೆ, ನಾಮಜಪ ಮಾಡುವುದರಿಂದ ವ್ಯಕ್ತಿಯ ಸಾತ್ವಿಕತೆ ಹೆಚ್ಚುತ್ತದೆ ಮತ್ತು ವ್ಯಕ್ತಿಯಿಂದ ಪ್ರಕ್ಷೇಪಿತವಾಗುವ ಸಾತ್ವಿಕ ಸ್ಪಂದನಗಳಿಂದ ವಾಸ್ತು ಶುದ್ಧಿಯಾಗುತ್ತದೆ. ಅದಕ್ಕಾಗಿ ಪ್ರತಿದಿನ ನಿತ್ಯದ ಪೂಜಾರ್ಚನೆ ಉಪಾಸನೆಯ ಜೊತೆಗೆ ನಿಶ್ಚಿತ ಸಮಯ ಮನೆಯಲ್ಲಿ ವಾಸಿಸುವ ಎಲ್ಲರೂ ಒಟ್ಟಾಗಿ ದೊಡ್ಡ ಧ್ವನಿಯಲ್ಲಿ ಅಥವಾ ಸಾಧ್ಯವಿಲ್ಲದಿದ್ದರೆ ಮನಸ್ಸಿನಲ್ಲಿ ನಾಮಜಪ ಮಾಡಬೇಕು.

ಒ. ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆ ನಡೆಸುವುದು : ಅದರ ಜೊತೆಗೆ ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಪೂರ್ಣ ಮನಸ್ಸಿನಿಂದ ಮಾಡಲು ಪ್ರಯತ್ನಿಸಬೇಕು. ಇದರ ಕಾರಣ ಕುಟುಂಬದವರಲ್ಲಿನ ಸ್ವಭಾವದೋಷದಿಂದಾಗಿ ತಮ್ಮತಮ್ಮಲ್ಲಿ ವಾದ-ವಿವಾದ ನಡೆಯುತ್ತವೆ ಮತ್ತು ಕೌಟುಂಬಿಕ ಕಲಹ ನಿರ್ಮಾಣವಾಗುತ್ತದೆ. ಅದರ ಪರಿಣಾಮ ವಾಸ್ತುವಿನ ಮೇಲಾಗುತ್ತದೆ, ಆದ್ದರಿಂದ ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ ನಡೆಸುವುದು ಮಹತ್ವದ್ದಾಗಿದೆ. ಅದರ ಕಾರಣ ೩೦% ವಾಸ್ತುದೋಷ ಅಲ್ಲೇ ಇರುವವರಿಂದಾಗಿಯೇ ನಿರ್ಮಾಣವಾಗಿರುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದೆಂದರೆ, ತನ್ನ ಸ್ವಂತ ಅಂತರ್ಗತ ಶುದ್ಧಿಗಾಗಿ ಅಥವಾ ವಾಸ್ತು ಶುದ್ಧಿಗಾಗಿ ಸಾಧನೆ ಮಾಡುವುದು ಮಹತ್ವದ್ದಾಗಿದೆ.

೫. ವಾಹನ ಶುದ್ಧಿ

ಹೇಗೆ ನಾವು ವಾಸ್ತು ಶುದ್ಧಿಯ ಉಪಾಯ ನೋಡಿದೆವೋ, ಹಾಗೆ ವಾಹನ ಶುದ್ಧಿಯ ಸುಲಭ ಉಪಾಯವೂ ಇದೆ. ವಾಹನಕ್ಕೆ ದೇವತೆಯ ನಾಮ ಪಟ್ಟಿ ಹಚ್ಚಿ ವಾಹನ ಶುದ್ದಿ ಮಾಡಬಹುದು. ದ್ವಿಚಕ್ರವಾಹನವಿದ್ದರೆ ವಾಹನದ ಮುಂದಿನ ಬದಿಗೆ ಗಣಪತಿ ಮತ್ತು ಹಿಂದಿನವರಿಗೆ ಶ್ರೀಕೃಷ್ಣ ಈ ದೇವತೆಯ ನಾಮಪಟ್ಟಿ ಹಚ್ಚುವುದು.

ಚತುಷ್ಚಕ್ರ ವಾಹನದಲ್ಲಿ ನಾಮಪಟ್ಟಿಯ ಛಾವಣಿ ತಯಾರಿಸಲು ಯಾವ ರೀತಿಯಿಂದ ನಾಮ ಪಟ್ಟಿ ಹಚ್ಚಬೇಕು, ಇದನ್ನು ನಾವು ತಿಳಿದುಕೊಳ್ಳೋಣ. ಚಾಲಕನ ಆಸನದ ಎದುರು ಶ್ರೀಕೃಷ್ಣ, ಚಾಲಕನ ಪಕ್ಕದ ಆಸನದ ಎದುರು ಗಣಪತಿ, ಚಾಲಕನ ಹಿಂದಿನ ಎಡಬದಿಯ ಕಿಟಕಿಯ ಮೇಲೆ ಶ್ರೀರಾಮ, ಹಾಗೂ ಚಾಲಕನ ಹಿಂದಿನ ಬಲಬದಿಗೆ ಕಿಟಕಿಯ ಮೇಲೆ ದತ್ತ ಮತ್ತು ವಾಹನದ ಹಿಂದಿನ ಬದಿಗೆ ದೇವಿ, ಶಿವ ಮತ್ತು ಮಾರುತಿಯ ನಾಮ ಪಟ್ಟಿ ಹಚ್ಚಬೇಕು.

೬. ಕೃತಜ್ಞತೆ

ವಾಸ್ತು ಶುದ್ಧಿಯ ಜೊತೆಗೆ ಮಹತ್ವದ್ದಾಗಿರುವುದೇನೆಂದರೆ ನಾವು ಇರುವ ವಾಸ್ತು ಮತ್ತು ನಾವು ಉಪಯೋಗಿಸುತ್ತಿರುವ ವಾಹನಗಳ ಕುರಿತು ಕೃತಜ್ಞತಾಭಾವ ಇಡುವುದು. ವಸ್ತು ಅಥವಾ ವಾಹನ ಎಂದರೆ ನಿರ್ಜೀವ ವಸ್ತುವಾಗಿರದೆ, ಅಲ್ಲಿ ಪ್ರತ್ಯಕ್ಷ ವಾಸ್ತುದೇವತೆ ಮತ್ತು ವಾಹನದೇವತೆಯ ವಾಸ್ತವ್ಯವಿದೆ ಎಂಬ ಕೃತಜ್ಞತಾಭಾವವನ್ನು ನಾವು ಇಡೋಣ. ನಮಗೆ ಯಾವುದು ಸಾಧ್ಯವಿದೆಯೋ, ಆದರ ಪ್ರಕಾರ ವಾಸ್ತುಶುದ್ಧಿ ಮತ್ತು ವಾಹನ ಶುದ್ಧಿಗಾಗಿ ಪ್ರತಿದಿನ ಉಪಾಯ ಮಾಡಲು ಪ್ರಯತ್ನ ಮಾಡೋಣ.

Leave a Comment