ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಸಂಗ್ರಹಿಸಿ ! (ಭಾಗ ೧)

ಮುಂಬರುವ ಭೀಕರ ಮಹಾ ಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು. ‘ನಿಸರ್ಗದಲ್ಲಿ ಸುಲಭವಾಗಿ ಬೆಳೆಯುವ ಗಿಡಗಳ ಸಂಗ್ರಹವನ್ನು ಹೇಗೆ ಮಾಡಬೇಕು’ ಎಂದು ತಿಳಿದುಕೊಳ್ಳೋಣ. ಶೀಘ್ರದಲ್ಲಿಯೇ ಈ ವಿಷಯದ ಸನಾತನದ ಗ್ರಂಥವೂ ಪ್ರಕಾಶಿತಗೊಳ್ಳಲಿದೆ. ಈ ಗ್ರಂಥದಲ್ಲಿ ‘ಔಷಧಿ ಗಿಡಗಳನ್ನು ಒಟ್ಟು ಮಾಡಿ ಸಂಗ್ರಹಿಸಿಡುವುದು’ ಇದರ ಬಗೆಗಿನ ವ್ಯಾವಹಾರಿಕ (ಪ್ರತ್ಯಕ್ಷ ಮಾಡುವ ಕೃತಿಗಳ) ಮಾಹಿತಿಯನ್ನು ಸವಿಸ್ತಾರವಾಗಿ ನೀಡಲಾಗುವುದು.

೧. ಮಳೆಗಾಲದ ನಂತರ ಕೆಲವು ಔಷಧಿ ಗಿಡಗಳು ಒಣಗಿ ಹೋಗುವುದರಿಂದ ಅವುಗಳನ್ನು ಈಗಲೇ ಸಂಗ್ರಹಿಸಿರಿ !

ಪ್ರತಿವರ್ಷ ವರುಣದೇವತೆಯ ಕೃಪೆಯಿಂದ ಮಳೆಗಾಲದಲ್ಲಿ ನೈಸರ್ಗಿಕವಾಗಿ ಅಸಂಖ್ಯಾತ ಔಷಧಿ ಗಿಡಗಳು ಬೆಳೆಯುತ್ತವೆ. ಇದರಲ್ಲಿ ಕೆಲವು ಗಿಡಗಳು ಮಳೆಗಾಲ ಮುಗಿದ ನಂತರ ಸಾಧಾರಣ ೧ – ೨ ತಿಂಗಳುಗಳಲ್ಲಿ ಒಣಗಿ ಹೋಗುತ್ತವೆ. ಅನಂತರ ಪುನಃ ಮಳೆಗಾಲ ಬರುವವರೆಗೆ ಈ ಗಿಡಗಳು ಸಿಗುವುದಿಲ್ಲ. ಆದ್ದರಿಂದ ಇಂತಹ ಗಿಡಗಳನ್ನು ಈಗಲೇ ಸಂಗ್ರಹಿಸಿಡಬೇಕು.

೨. ಔಷಧಿ ಗಿಡಗಳನ್ನು ಸಂಗ್ರಹಿಸಿಡುವುದರಿಂದ ಆಗುವ ಲಾಭ

ಈ ಲೇಖನದಲ್ಲಿ ಕೊಟ್ಟಿರುವ ಔಷಧಿ ಗಿಡಗಳ ಪೈಕಿ ಕೆಲವು ಗಿಡಗಳು ಆಯುರ್ವೇದಿಕ ಔಷಧಿಗಳ ಅಂಗಡಿಗಳಲ್ಲಿ ಮಾರಾಟಕ್ಕಿರುತ್ತವೆ; ಆದರೆ ಇಂತಹ ಗಿಡಗಳನ್ನು ಅಂಗಡಿಗಳಲ್ಲಿ ಖರೀದಿಸುವುದಕ್ಕಿಂತ ಅವುಗಳನ್ನು ನಿಸರ್ಗದಿಂದ ಸಂಗ್ರಹಿಸುವುದು ಯಾವಾಗಲೂ ಉತ್ತಮವಾಗಿದೆ. ಮಾರಾಟಕ್ಕಾಗಿರುವ ಔಷಧಿ ಗಿಡಗಳು ತಾಜಾ ಇರುತ್ತವೆ, ಎಂದು ಹೇಳಲಾಗುವುದಿಲ್ಲ. ಗಿಡಗಳು ತುಂಬಾ ಹಳೆಯದ್ದಾಗಿದ್ದರೆ ಅವುಗಳ ಪ್ರಭಾವ ಕಡಿಮೆಯಾಗುತ್ತದೆ. ಅನೇಕ ಬಾರಿ ಮಾರುಕಟ್ಟೆಯಲ್ಲಿ ಸಿಗುವ ಔಷಧಿ ಗಿಡಗಳಲ್ಲಿ ಕಲಬೆರಕೆಯ ಪ್ರಮಾಣವು ಹೆಚ್ಚಿರುತ್ತದೆ. ಅವುಗಳಲ್ಲಿ ಧೂಳು, ಮಣ್ಣು ಮತ್ತು ಇತರ ಕಸವೂ ಇರುತ್ತದೆ. ಅದೇ ಯಾವಾಗ ನಾವು ಸ್ವತಃ ಔಷಧೀಯ ಗಿಡಗಳನ್ನು ಸಂಗ್ರಹಿಸುತ್ತೇವೆಯೋ, ಆಗ ನಮಗೆ ತಾಜಾ ಹಾಗೂ ಶುದ್ಧ ಗಿಡಗಳು ಸಿಗುತ್ತವೆ. ಇಂತಹ ಗಿಡಗಳನ್ನು ನಾವು ತೊಳೆದು ಸ್ವಚ್ಛ ಮಾಡಿಡಬಹುದು. ಇದರಿಂದ ಅವು ಸ್ವಚ್ಛವಾಗಿರುತ್ತವೆ. ಗಿಡಗಳನ್ನು ಸಂಗ್ರಹಿಸಿ ಸರಿಯಾಗಿ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಸುರಕ್ಷಿತವಾಗಿಟ್ಟರೆ ಸಾಧಾರಣ ೧ ರಿಂದ ಒಂದೂವರೆ ವರ್ಷಗಳ ವರೆಗೆ ಅವುಗಳನ್ನು ಉಪಯೋಗಿಸಬಹುದು.

೩. ಗಿಡಗಳನ್ನು ಗುರುತಿಸಲು ಹಳ್ಳಿಗಳಲ್ಲಿ ಅದರ ಬಗ್ಗೆ ಜ್ಞಾನವಿರುವ ಹಿರಿಯರ ಅಥವಾ ಪರಿಚಿತ ವೈದ್ಯರ ಸಹಾಯವನ್ನು ಪಡೆಯಿರಿ !

ಹಳ್ಳಿಗಳಲ್ಲಿ ಹೆಚ್ಚಾಗಿ ಹಿರಿಯ ವ್ಯಕ್ತಿಗಳಿಗೆ ಬಹಳಷ್ಟು ಔಷಧಿ ಗಿಡಗಳ ಮಾಹಿತಿ ಇರುತ್ತದೆ. ಇಂತಹ ವ್ಯಕ್ತಿಗಳಿಗೆ ಈ ಲೇಖನದಲ್ಲಿ ನೀಡಲಾದ ಗಿಡಗಳ ಛಾಯಾಚಿತ್ರಗಳನ್ನು ತೋರಿಸಿ ಈ ಗಿಡಗಳು ಎಲ್ಲಿ ಸಿಗುತ್ತವೆ, ಎಂದು ಕೇಳಿ ಈ ಗಿಡಗಳ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಸಾಧ್ಯವಿದ್ದರೆ ತಮ್ಮ ಪರಿಚಯದ ವೈದ್ಯರ ಸಹಾಯವನ್ನೂ ಪಡೆಯಬಹುದು. ವೈದ್ಯರಿಗೆ ಔಷಧಿ ಗಿಡಗಳ ಪರಿಚಯದೊಂದಿಗೆ, ಅವುಗಳನ್ನು ಹೇಗೆ ಉಪಯೋಗಿಸಬೇಕು, ಎಂಬ ಜ್ಞಾನವೂ ಇರುತ್ತದೆ. ಯಾರಾದರೊಬ್ಬ ಕುಶಲ ವೈದ್ಯರು ಒಂದೇ ಔಷಧೀಯ ಗಿಡಯನ್ನು ವಿವಿಧ ರೋಗಗಳಿಗೆ ಪ್ರಭಾವಿಯಾಗಿ ಉಪಯೋಸುತ್ತಾರೆ. ಈ ಲೇಖನದಲ್ಲಿ ಕೊಡಲಾದ ಗಿಡಗಳ ಹೊರತಾಗಿ ಯಾರಾದರೂ ತಿಳುವಳಿಕೆಯುಳ್ಳವರು ಇತರ ಗಿಡಗಳ ಬಗ್ಗೆ ಹೇಳಿದರೆ ಅವುಗಳನ್ನು ಸಹ ಯೋಗ್ಯ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು.

೪. ಔಷಧೀಯ ಗಿಡಗಳನ್ನು ಸಂಗ್ರಹಿಸುವ ಕುರಿತು ಕೆಲವು ಪ್ರಾಯೋಗಿಕ ಅಂಶಗಳು

ಅ. ಮನೆಯಿಂದ ಹೊರಗೆ ಹೋಗುವ ಮೊದಲು ಪ್ರಾರ್ಥನೆಯನ್ನು ಮಾಡಬೇಕು ಮತ್ತು ಮನೆಗೆ ಬಂದ ನಂತರ ಕೃತಜ್ಞತೆಯನ್ನು ಸಲ್ಲಿಸಬೇಕು.

ಆ. ಹೊಲಸು, ಕೊಳಚೆ ನೀರು, ಕೆಸರು, ಸ್ಮಶಾನಭೂಮಿ ಮುಂತಾದ ಸ್ಥಳಗಳಲ್ಲಿರುವ ಗಿಡಗಳನ್ನು ಸಂಗ್ರಹಿಸಬಾರದು. ಔಷಧೀಯ ಗಿಡಗಳನ್ನು ಸಂಗ್ರಹ ಮಾಡುವ ಜಾಗವು ಸ್ವಚ್ಛವಾಗಿರಬೇಕು.

ಇ. ಆ ಪರಿಸರದಲ್ಲಿ ಮಾಲಿನ್ಯವನ್ನುಂಟು ಮಾಡುವ, ವಿಶೇಷವಾಗಿ ಅಪಾಯಕಾರಿ ರಾಸಾಯನಿಕಗಳನ್ನು ಬಿಡುವ ಕಾರ್ಖಾನೆಗಳು ಇರಬಾರದು.

ಈ. ಮುಗ್ಗಲು (ಬುರಸು) ಅಥವಾ ಹುಳ ಹಿಡಿದ ಹಾಗೆಯೇ ರೋಗವಿರುವ ಗಿಡಗಳನ್ನು ತೆಗೆದುಕೊಳ್ಳಬಾರದು.

ಉ. ವಿಷಕಾರಿ ವೃಕ್ಷಗಳ ಮೇಲಿನ ಔಷಧಿ ಗಿಡಗಳನ್ನು ತೆಗೆದುಕೊಳ್ಳಬಾರದು, ಉದಾ. ಹೆಮ್ಮುಷ್ಟಿಯ (Strychnos nux-vomica) ಗಿಡದ ಮೇಲಿನ ಅಮೃತಬಳ್ಳಿಯನ್ನು ತೆಗೆದುಕೊಳ್ಳಬಾರದು.

ಊ. ಮನಸ್ಸಿಗೆ ತೊಂದರೆದಾಯಕ ಸ್ಪಂದನಗಳ ಅರಿವಾಗುವ ಜಾಗದ ಗಿಡಗಳನ್ನು ತೆಗೆದುಕೊಳ್ಳಬಾರದು.

ಋ. ಗಿಡಗಳನ್ನು ಖಚಿತಪಡಿಸಿಕೊಳ್ಳದೇ ಅವುಗಳನ್ನು ತೆಗೆದುಕೊಳ್ಳಬಾರದು. ತಪ್ಪು ಗಿಡಗಳನ್ನು ಬಳಸಿದರೆ ಅಪಾಯಕಾರಿ ಪರಿಣಾಮಗಳೂ ಆಗಬಹುದು. ಆದ್ದರಿಂದ ನುರಿತ ಜನರಿಂದ ಗಿಡಗಳ ಪರಿಚಯ ಮಾಡಿಕೊಳ್ಳಬೇಕು.

ಎ. ಸೂರ್ಯಾಸ್ತದ ನಂತರ ಔಷಧೀಯ ಗಿಡಗಳನ್ನು ಕೀಳಬಾರದು.

೫. ಔಷಧೀಯ ಗಿಡಗಳನ್ನು ಸಂಗ್ರಹಿಸಿದ ನಂತರ ಮಾಡಬೇಕಾದ ಪ್ರಕ್ರಿಯೆ

ಅ. ಸಂಗ್ರಹಿಸಿದ ಗಿಡಗಳನ್ನು ಹಗ್ಗದಿಂದ / ದಾರದಿಂದ ಒಟ್ಟಿಗೆ ಕಟ್ಟಿ ಅದರ ಮೇಲೆ ಆ ಗಿಡದ ಹೆಸರು ಬರೆದು ಚೀಲಗಳಲ್ಲಿ ತುಂಬಬೇಕು.

ಆ. ಅವುಗಳನ್ನು ಮನೆಗೆ ತಂದು ಸ್ವಚ್ಛವಾಗಿ ತೊಳೆದಿಡಬೇಕು. ಗಿಡಗಳನ್ನು ತೊಳೆಯುವಾಗ ಅವುಗಳ ಬೀಜಗಳು ವ್ಯರ್ಥವಾಗದಂತೆ, ತೊಳೆಯುವ ಮೊದಲು ಅವುಗಳನ್ನು ಬೇರೆ ತೆಗೆದಿಡಬೇಕು. ಗಿಡಗಳನ್ನು ಬೇರುಸಹಿತ ಕಿತ್ತು ತಂದಿದ್ದರೆ ಅವುಗಳ ಬೇರುಗಳನ್ನು ಕತ್ತರಿಯಿಂದ ಕತ್ತರಿಸಿ ಗಿಡದಿಂದ ಪ್ರತ್ಯೇಕವಾಗಿಡಬೇಕು. ಬೇರುಗಳಿಗೆ ಮಣ್ಣು ತಾಗಿದ್ದರೆ ಗಿಡಗಳನ್ನು ತೊಳೆಯುವಾಗ ಇತರ ಗಿಡಗಳಿಗೆ ಆ ಮಣ್ಣು ತಾಗದಂತೆ, ಬೇರುಗಳನ್ನು ಬೇರೆ ತೊಳೆಯಬೇಕು.

ಇ. ಗಿಡಗಳನ್ನು ಸ್ವಚ್ಛವಾಗಿ ತೊಳೆಯಲು ಬರಬೇಕೆಂದು, ಅವುಗಳನ್ನು ಅರ್ಧ ಗಂಟೆಯಿಂದ ೧ ಗಂಟೆಯ ಕಾಲ ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಅವುಗಳ ಮೇಲಿನ ಧೂಳು ಮತ್ತು ಇತರ ಹೊಲಸು ಬೇಗನೆ ಬೇರ್ಪಡಲು ಸಹಾಯವಾಗುತ್ತದೆ.

ಈ. ಗಿಡಗಳು ಹಸಿಯಿರುವಾಗಲೇ ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಡಬೇಕು.

ಉ. ಗಿಡಗಳನ್ನು ತೊಳೆದ ನಂತರ ಅವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಸುಗಂಧಿತ ಗಿಡಗಳಿದ್ದರೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬಾರದು, ನೆರಳಿನಲ್ಲಿ ಒಣಗಿಸಬೇಕು. ಒಣಗಿದ ಗಿಡಗಳ ಮೇಲೆ ಮುಂದಿನ ಪ್ರಕ್ರಿಯೆಯನ್ನು ತಕ್ಷಣ ಮಾಡುವುದಿಲ್ಲದಿದ್ದರೆ ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹೆಸರು ಬರೆದು ಸೀಲ್ ಮಾಡಿಡಬೇಕು. ಸೀಲ್ ಮಾಡಿದ ಚೀಲಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ಇಡಬೇಕು.

ಊ. ಒಣಗಿಸಿಟ್ಟ ಗಿಡಗಳನ್ನು ಅಥವಾ ಅವುಗಳ ಚೂರ್ಣ ತಯಾರಿಸಿಟ್ಟ ನಂತರ ಉಪಯೋಗಿಸಿಲ್ಲ ಎಂದಾದರೆ ನಿಗದಿತ ಅವಧಿಯಲ್ಲಿ ಆಗಾಗ ಡಬ್ಬಗಳನ್ನು ತೆರೆದು ಅವು ಸುಸ್ಥಿತಿಯಲ್ಲಿವೆಯೋ ಎಂದು ಪರಿಶೀಲನೆ ಮಾಡಬೇಕು.

ಋ. ಚೆನ್ನಾಗಿ ಒಣಗಿದ ಗಿಡಗಳ ಚಿಕ್ಕ ತುಂಡುಗಳನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಡಬೇಕು. ಮಿಕ್ಸರ್‌ನಲ್ಲಿ ಮಾಡಿದ ಪುಡಿಯನ್ನು ಜರಡಿಯಾಡಿ ಉಳಿದ ಪುಡಿಯನ್ನು ಪುನಃ ಮಿಕ್ಸರ್‌ನಲ್ಲಿ ಹಾಕಿ ಪುಡಿ ಮಾಡಬೇಕು ಅಥವಾ ಹಾಗೆಯೇ ಬೇರೆ ಚೀಲದಲ್ಲಿ ಇಡಬೇಕು. ಗಿಡಯ ನುಣ್ಣನೆಯ ಪುಡಿಗೆ ‘ಚೂರ್ಣ’ ಮತ್ತು ಜರಡಿಯಲ್ಲಿ ಉಳಿದ ಪುಡಿಗೆ ‘ಯವಕುಟ ಚೂರ್ಣ’ ಅಥವಾ ನುಚ್ಚು ಎಂದು ಹೇಳುತ್ತಾರೆ. ಚೂರ್ಣವನ್ನು ಸೇವಿಸಲು ಅಥವಾ ಲೇಪನಕ್ಕಾಗಿ ಮತ್ತು ಭರಡನ್ನು ಕಶಾಯವನ್ನು ಮಾಡಲು ಉಪಯೋಗಿಸಬಹುದು. ಎಲ್ಲ ಚೂರ್ಣವನ್ನು ಒಟ್ಟಿಗೆ ಒಂದೇ ಚೀಲದಲ್ಲಿ ತುಂಬಿಸಿಡುವುದಕ್ಕಿಂತ ಸಾಧಾರಣ ೧೫ ಚಮಚಗಳಷ್ಟು ಚೂರ್ಣವನ್ನು ಚಿಕ್ಕ ಚಿಕ್ಕ ಚೀಲಗಳಲ್ಲಿ ತುಂಬಬೇಕು. ಪ್ರತಿಯೊಂದು ಚೀಲದ ಮೇಲೆ ಚೂರ್ಣದ ಹೆಸರು ಮತ್ತು ಉತ್ಪಾದನೆಯ ದಿನಾಂಕ ಬರೆದು ಅವುಗಳನ್ನು ಸೀಲ್ ಮಾಡಿ ಗಾಳಿಯಾಡದ ಡಬ್ಬಿಗಳಲ್ಲಿ ಇಡಬೇಕು. ಹೀಗೆ ಮಾಡಿದರೆ ಚೂರ್ಣವು ಹೆಚ್ಚು ಸುರಕ್ಷಿತವಾಗಿರುತ್ತದೆ.

೬. ಗಿಡಗಳನ್ನು ಒಟ್ಟು ಮಾಡುವಾಗ ಸಿಗುವ ಬೀಜಗಳಿಂದ ನಾವೇ ಗಿಡಗಳನ್ನು ಬೆಳೆಸಬಹುದು !

ಕೆಲವು ಗಿಡಗಳು ನೈಸರ್ಗಿಕವಾಗಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಾದರೂ ಅವುಗಳನ್ನು ನಾವೇ ಬೆಳೆಸುವುದು ಯೋಗ್ಯವಾಗಿದೆ. ನಾವೇ ಗಿಡಗಳನ್ನು ಬೆಳೆಸಿದರೆ (ಕೃಷಿಮಾಡಿದರೆ) ನಮ್ಮ ಆವಶ್ಯಕತೆಗನುಸಾರ ಬೇಕಾದಾಗ ಗಿಡಗಳು ಲಭ್ಯವಾಗುತ್ತವೆ. ಔಷಧಿ ಗಿಡಗಳನ್ನು ಸಂಗ್ರಹಿಸುವಾಗ ಆ ಗಿಡಗಳ ಬೀಜಗಳನ್ನೂ ಬೇರೆ ತೆಗೆದಿಡಬೇಕು. ಯಾರಿಗೆ ಸಾಧ್ಯವಿದೆಯೋ, ಅವರು ಈ ಗಿಡಗಳನ್ನು ತಮ್ಮ ಮನೆಯ ಹಿಂಭಾಗದಲ್ಲಿ ಅಥವಾ ಹೊಲದಲ್ಲಿ ಬೆಳೆಸಬೇಕು. ಯಾವ ಗಿಡಗಳನ್ನು ಬೆಳೆಸಬೇಕು, ಎಂಬುದನ್ನು ಮುಂದೆ ಆಯಾ ಗಿಡಗಳ ಮಾಹಿತಿಯಲ್ಲಿ ನೀಡಲಾಗಿದೆ.

೭. ರಸ್ತೆಯಲ್ಲಿ ಓಡಾಡುವಾಗ ನಮಗೆ ಕಾಣಿಸುವ ಗಿಡಗಳ ನಿರೀಕ್ಷಣೆಯನ್ನು ಮಾಡುವ ಅಭ್ಯಾಸವನ್ನು ಮಾಡಿರಿ !

ನಾವು ರಸ್ತೆಯಲ್ಲಿ ಓಡಾಡುವಾಗ ಅನೇಕ ಗಿಡಗಳನ್ನು ನೋಡುತ್ತೇವೆ; ಆದರೆ ಅವು ಔಷಧೀಯ ಗಿಡಗಳಾಗಿವೆಯೇ ಎಂಬುದು ನಮಗೆ ಗೊತ್ತಿರುವುದಿಲ್ಲ. ಈ ಲೇಖನದಲ್ಲಿ ನೀಡಿದ ಗಿಡಗಳು ಎಲ್ಲೆಡೆ ಕಂಡುಬರುವ ಗಿಡಗಳಾಗಿವೆ. ಈ ಗಿಡಗಳನ್ನು ರಸ್ತೆಯಲ್ಲಿ ಓಡಾಡುವಾಗ ಸಹಜವಾಗಿ ಗುರುತಿಸಬಹುದು. ಇವು, ಹಾಗೆಯೇ ಇತರ ಗಿಡಗಳ ನಿರೀಕ್ಷಣೆಯನ್ನು ಮಾಡಲು ಮತ್ತು ಅವುಗಳ ಪರಿಚಯ ಮಾಡಿಕೊಳ್ಳಲು ನಾವು ಸ್ವತಃ ಅಭ್ಯಾಸವನ್ನು ಮಾಡಿಕೊಂಡರೆ, ಭೀಕರ ಆಪತ್ಕಾಲದಲ್ಲಿ ನಮಗೆ ಅವುಗಳನ್ನು ಬಳಸಲು ಸಾಧ್ಯವಾಗುವುದು.

೮. ಗಿಡಗಳ ಮಾಹಿತಿಯನ್ನು ಓದುವಾಗ ಉಪಯುಕ್ತವಾದ ಕೆಲವು ಸಾಮೂಹಿಕ ಸೂಚನೆಗಳು

ಅ. ಮುಂದೆ ಕೊಡಲಾದ ಗಿಡಗಳ ಮಾಹಿತಿಯಲ್ಲಿ ಗಿಡಗಳ ಲ್ಯಾಟಿನ್ ಹೆಸರು ಕೊಡಲಾಗಿದೆ. ಇವು ಆಧುನಿಕ ಸಸ್ಯಶಾಸ್ತ್ರದಲ್ಲಿನ ಸಂಜ್ಞೆಗಳಾಗಿವೆ. ಇವುಗಳ ಮೂಲಕ ಅಂತರ್ಜಾಲದಲ್ಲಿ ಈ ಗಿಡಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಲು ಸುಲಭವಾಗುತ್ತದೆ.

ಆ. ಆರಂಭದಲ್ಲಿ ಔಷಧಿ ಗಿಡಗಳ ಉಪಯೋಗವನ್ನು ಕೊಡಲಾಗಿದೆ. ದೊಡ್ಡವರಿಗೆ ಗಿಡಗಳ ಚೂರ್ಣ ಇತ್ಯಾದಿ ಸಾಮಾನ್ಯವಾಗಿ ಎಷ್ಟು ಪ್ರಮಾಣದಲ್ಲಿ ಕೊಡಬೇಕು, ಎಂಬುದನ್ನು ಅದರ ಮುಂದಿನ ಉಪ ಅಂಶದಲ್ಲಿ ಕೊಡಲಾಗಿದೆ. ೩ ರಿಂದ ೭ ವಯೋಮಾನದ ಮಕ್ಕಳಿಗೆ ದೊಡ್ಡವರ ಅಳತೆಯ ಕಾಲು ಪ್ರಮಾಣದಲ್ಲಿ ಮತ್ತು ೮ ರಿಂದ ೧೪ ವಯೋಮಾನದವರಿಗೆ ವಯಸ್ಕರರ ಅಳತೆಯ ಅರ್ಧ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.

ಇ. ಔಷಧದ ಉಪಯುಕ್ತತೆಗನುಸಾರ ೪ ಜನರ ಕುಟುಂಬಕ್ಕಾಗಿ ತಾಜಾ (ಒಣಗಿದ್ದಲ್ಲ) ಗಿಡಗಳನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಬೇಕು, ಎಂಬುದನ್ನು ಇಲ್ಲಿ ಕೊಡಲಾಗಿದೆ. ಇದು ಕೇವಲ ಮಾರ್ಗದರ್ಶಕ ಅಂದಾಜಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಆವಶ್ಯಕತೆಗನುಸಾರ ಗಿಡಗಳನ್ನು ಸಂಗ್ರಹಿಸಬೇಕು.

ಈ. ಎಲ್ಲಿ ಔಷಧಗಳ ಪ್ರಮಾಣವನ್ನು ಚಮಚಗಳಲ್ಲಿ ಕೊಡಲಾಗಿದೆ, ಅಲ್ಲಿ ಚಮಚ ಎಂದರೆ ಮಧ್ಯಮ ಆಕಾರದ ಚಮಚವನ್ನು ತೆಗೆದುಕೊಳ್ಳಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೧೧.೨೦೨೦)

| ಭಾಗ ೨ |

Leave a Comment