ಕೊರೋನಾ ಸೋಂಕಿನ ಬಗ್ಗೆ ತಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಪ್ರತಿದಿನ ಮಂತ್ರಜಪವನ್ನು ಮಾಡಿ !

ಪ್ರಸ್ತುತ ಕೊರೋನಾ ವೈರಾಣುವಿನ ಸೋಂಕು ಎಲ್ಲೆಡೆ ಹರಡುತ್ತಿದೆ. ಈ ವೈರಾಣುವಿನ ಸೋಂಕು ತಗಲಬಾರದು, ಎಂಬುದಕ್ಕಾಗಿ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ರೋಗನಿರೋಧಕದ ಉಪಾಯವೆಂದು, ಹಾಗೂ ನಮ್ಮಲ್ಲಿನ ರೋಗನಿರೋಧ ಕ್ಷಮತೆ ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಾಗಬೇಕು ಎಂದು ದೇವರ ಕೃಪೆಯಿಂದ ನಮಗೆ 3 ಮಂತ್ರಗಳು ಲಭ್ಯವಾಗಿವೆ. ಅದರಲ್ಲಿ ಯಾವುದಾದರೂ ಒಂದು ಮಂತ್ರ ಉಪಾಯವನ್ನು ಮಾಡಬೇಕು. ಈ ಎಲ್ಲ ಮಂತ್ರ ಮತ್ತು ಅವುಗಳ ಕುರಿತಾದ ಸೂಚನೆಯನ್ನು ಇಲ್ಲಿ ಕೊಡುತ್ತಿದ್ದೇವೆ.

1. ಮಂತ್ರಜಪಕ್ಕೆ ಸಂಬಂಧಿಸಿದ ಸೂಚನೆ

ಅ. ಸೂತಕ ಅಥವಾ ಮೈಲಿಗೆ ಇರುವ ವ್ಯಕ್ತಿಗಳು ಮಂತ್ರಜಪದ ಉಪಾಯ ಮಾಡಬಾರದು. ಮಾಸಿಕ ಸರದಿ ಇರುವ ಸ್ತ್ರೀಯರು ಮಂತ್ರವನ್ನು ಹೇಳಬಾರದು ಅಥವಾ ಕೇಳಬಾರದು. ಈ ಕಾಲದಲ್ಲಿ ನಾಮಜಪಾದಿ ಇತರ ಉಪಾಯಗಳನ್ನು ಮಾಡಬಹುದು.

ಆ. ಮಂತ್ರವನ್ನು ಸುಮ್ಮನೆ ಕೇಳುವುದಕ್ಕಿಂತ ಅದನ್ನು ಭಾವಪೂರ್ಣವಾಗಿ ಹೇಳುವುದು ಹೆಚ್ಚು ಲಾಭದಾಯಕವಾಗಿದೆ. ಆದುದರಿಂದ ಯಾರಿಗೆ ಮಂತ್ರ ಹೇಳಲು ಸಾಧ್ಯವಿದೆಯೋ, ಅವರು ಮಂತ್ರವನ್ನು ಹೇಳಬೇಕು. ಮಂತ್ರದ ಉಚ್ಚಾರವು ಯೋಗ್ಯವಾಗಿರಬೇಕು, ಅದಕ್ಕಾಗಿ, ಆಡಿಯೋವನ್ನು ಕೇಳುತ್ತಿರುವಾಗ ಅದರಲ್ಲಿ ಇದ್ದಂತೆ ಅದನ್ನು ಹೇಳಬೇಕು. ಸ್ವಲ್ಪ ದಿನಗಳ ನಂತರ ಮಂತ್ರಗಳನ್ನು ಯೋಗ್ಯ ರೀತಿಯಲ್ಲಿ ಹೇಳುವ ಅಭ್ಯಾಸವಾಗಿ ಅದು ಬಾಯಿಪಾಠವಾದ ನಂತರ ಮಂತ್ರವನ್ನು ಕೇಳುವ ಆವಶ್ಯಕತೆ ಇರುವುದಿಲ್ಲ.

ಇ. 3 ಮಂತ್ರಗಳ ಪೈಕಿ ಯಾವುದಾದರೂ ಒಂದು ಮಂತ್ರವನ್ನು ಹೇಳಬೇಕು. ಯಾವ ಮಂತ್ರವು ಯೋಗ್ಯ ಉಚ್ಚಾರ ಸಹಿತ ಮತ್ತು ಹೆಚ್ಚು ಭಾವಪೂರ್ಣವಾಗಿ ಹೇಳಲು ತಮಗೆ ಸುಲಭವಾಗುತ್ತದೋ, ಆ ಮಂತ್ರವನ್ನು ಆಯ್ದುಕೊಳ್ಳಬೇಕು. (ಹೀಗೆ ಮಾಡಿದ ಮೇಲೆ ಇತರ ಮಂತ್ರಗಳನ್ನು ಕೇಳುವ ಆವಶ್ಯಕತೆ ಇಲ್ಲ.)

ಈ. ಸಂಸ್ಕೃತ ಭಾಷೆಯಲ್ಲಿ ಅನುಸ್ವಾರದ ಉಚ್ಚಾರವು ಅದರ ಮುಂದಿನ ಅಕ್ಷರದ ಮೇಲೆ ಅವಲಂಬಿಸಿರುತ್ತದೆ. ಅನುಸ್ವಾರದ ಮುಂದಿನ ಅಕ್ಷರವು ಯಾವುದಿದೆ, ಎಂಬುದರ ಮೇಲೆ ಅನುಸ್ವಾರದ ಉಚ್ಚಾರ, ಙ, ಞ, ಣ್, ನ್, ಮ್, ಹೀಗಾಗುತ್ತವೆ. ಅನುಸ್ವಾರದ ಯೋಗ್ಯ ಉಚ್ಚಾರವು ಗೊತ್ತಾಗಬೇಕು ಎಂದು ಈ ಮಂತ್ರದಲ್ಲಿ ಅನುಸ್ವಾರದ ಬದಲು ಸಾಧ್ಯವಿದ್ದಲ್ಲೆಲ್ಲ ಅದರ ಉಚ್ಚಾರಕ್ಕಾಗಿ ಬರುವ ಅಕ್ಷರಗಳನ್ನು ಬರೆಯಲಾಗಿದೆ. ಕೆಲವು ಮಂತ್ರಗಳಲ್ಲಿ ಅಲ್ಪವಿರಾಮ ಕೊಡಲಾಗಿದೆ. ಮಂತ್ರವನ್ನು ಹೇಳುವಾಗ ಆ ಸ್ಥಳದಲ್ಲಿ ಸ್ವಲ್ಪ ನಿಲ್ಲಬೇಕು.

ಉ. ಅರ್ಥವನ್ನು ತಿಳಿದು ಮಂತ್ರ ಹೇಳಿದರೆ ಭಾವಜಾಗೃತಿಯಾಗಲು ಸಹಾಯವಾಗುತ್ತದೆ. ಇದಕ್ಕಾಗಿ ಇಲ್ಲಿ ಮಂತ್ರಗಳ ಅರ್ಥವನ್ನೂ ಕೊಡಲಾಗಿದೆ.

ಊ. ಆಯ್ದ ಮಂತ್ರವನ್ನು ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಪ್ರತಿಯೊಂದನ್ನು 21 ಬಾರಿ ಹೇಳಬೇಕು

ಋ. ಬೆಳಗ್ಗೆ ಮಂತ್ರವನ್ನು ಹೇಳುವಾಗ ನೀರನ್ನು ಮಂತ್ರಿಸಬೇಕು ಮತ್ತು ಆ ನೀರನ್ನು ತಮ್ಮ ಕುಡಿಯುವ ನೀರಿನ ಬಾಟಲಿ ಅಥವಾ ತಾಮ್ರದ ಚೊಂಬಿನಲ್ಲಿ ಹಾಕಿ ದಿನವಿಡಿ ಸ್ವಲ್ಪ ಸ್ವಲ್ಪ ಕುಡಿಯಬೇಕು. ಹೀಗೆ ಮಾಡಿದರೆ ಮಧ್ಯಾಹ್ನ ಮತ್ತು ಸಾಯಂಕಾಲ ಪುನಃ ನೀರನ್ನು ಅಭಿಮಂತ್ರಿಸುವ ಆವಶ್ಯಕತೆ ಇಲ್ಲ. ಆಧ್ಯಾತ್ಮಿಕ ತೊಂದರೆ ಇಲ್ಲದಿದ್ದರೆ ಒಬ್ಬರು ಅಭಿಮಂತ್ರಿಸಿದ ನೀರನ್ನು ಬೇರೆಯವರು ಸೇವಿಸಬಹುದು. ಆದರೆ ಆಧ್ಯಾತ್ಮಿಕ ತೊಂದರೆ ಇದ್ದರೆ ಒಬ್ಬರು ಅಭಿಮಂತ್ರಿಸಿದ ನೀರನ್ನು ಇನ್ನೊಬ್ಬರು ಕುಡಿಯಬಾರದು.

ಎ. ನೀರನ್ನು ಮಂತ್ರಿಸುವ ಪದ್ಧತಿ – ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ಅನಂತರ ಒಂದು ಅರ್ಘ್ಯಪಾತ್ರೆ (ಲೋಟ) ಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಬಲಗೈಯ ಐದೂ ಬೆರಳುಗಳನ್ನು ಮುಳುಗಿಸಿ ಮಂತ್ರಜಪ ಮಾಡಬೇಕು. ಅರ್ಘ್ಯಪಾತ್ರೆಯು ಬೆಳ್ಳಿ, ತಾಮ್ರ, ಹಿತ್ತಾಳೆ, ಗಾಜು ಅಥವಾ ಪಿಂಗಾಣಿ ಇವುಗಳದ್ದಾಗಿರಬೇಕು. ಈ ರೀತಿಯ ಅರ್ಘ್ಯಪಾತ್ರೆ ಸಿಗದಿದ್ದರೆ ಸ್ಟೀಲ್ ಪಾತ್ರೆಯನ್ನು ಉಪಯೋಗಿಸಬಹುದು. ಅದೂ ಸಿಗದಿದ್ದರೆ ಮಾತ್ರ ಪ್ಲಾಸ್ಟಿಕ್ ಲೋಟಗಳನ್ನು ಉಪಯೋಗಿಸಬಹುದು. ಮಂತ್ರಜಪ ಮಾಡುವಾಗ ಅರ್ಘ್ಯಪಾತ್ರೆಯನ್ನು ನೆಲದ ಮೇಲಿಡದೇ ತಮ್ಮ ತೊಡೆಯ ಮೇಲೆ, ಆಸನದ ಮೇಲೆ ಅಥವಾ ಮರದ ಮೇಜಿನ ಮೇಲೆ ಇಡಬೇಕು. ಒಬ್ಬರು ಉಪಯೋಗಿಸಿದ ಪಾತ್ರೆಯನ್ನು ಸಾಧ್ಯವಾದಷ್ಟು ಇನ್ನೊಬ್ಬರು ಉಪಯೋಗಿಸಬಾರದು. ಒಂದು ಪಕ್ಷ ಉಪಯೋಗಿಸಿದರೆ ಆ ಮೇಲೆ ತೊಳೆದು ಉಪಯೋಗಿಸಬೇಕು. (ಆಶ್ರಮದಲ್ಲಿ ಅಥವಾ ಸೇವಾಕೇಂದ್ರಗಳಲ್ಲಿ ಎಲ್ಲ ಸಾಧಕರಿಗಾಗಿ ಪಾತ್ರೆಯನ್ನು ಕೊಡಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ನೀರು ಕುಡಿಯುವ ಪ್ಲಾಸ್ಟಿಕ್‌ನ ಅಥವಾ ಇತರ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಳ್ಳಬೇಕು ಮತ್ತು ಮಂತ್ರ ಹೇಳುತ್ತಿರುವಾಗ ಆ ಬಾಟಲಿಯನ್ನು ಬಲಗೈಯಲ್ಲಿ ಹಿಡಿದುಕೊಳ್ಳಬೇಕು ಆಗ ನೀರು ಅಭಿಮಂತ್ರಿತವಾಗುವುದು.)

ಏ. ಮಂತ್ರ-ಉಪಾಯಗಳಿಗಾಗಿ ತಗಲುವ ಸಮಯವನ್ನು ಆಧ್ಯಾತ್ಮಿಕ ಉಪಾಯಗಳಲ್ಲಿ ಪರಿಗಣಿಸಬಹುದು.

ಐ. ಸ್ನಾನದ ನಂತರ ಮಂತ್ರಜಪ ಮಾಡಿದರೆ ರಜ-ತಮದ ಆವರಣವು ದೂರವಾಗಿ ಮಂತ್ರದ ಪರಿಣಾಮವು ಹೆಚ್ಚಾಗುತ್ತದೆ.

2. ಮಂತ್ರಜಪ ಹೇಳುವ ಮೊದಲು ಮಾಡಬೇಕಾದ ಪ್ರಾರ್ಥನೆ !

ಹೇ ಸೂರ್ಯದೇವಾ, ನನಗೆ ಯಾವುದೇ ವ್ಯಾಧಿ ಆಗಿದ್ದಲ್ಲಿ ಅದರಲ್ಲಿರುವ ವಿಷವು ನಿನ್ನ ಎಳೆಯ ಕಿರಣಗಳಿಂದ ನಾಶವಾಗಲಿ. ಉತ್ತಮ ಸಾಧನೆ ಮಾಡಲು ನನ್ನ ಶರೀರವು ಆರೋಗ್ಯಶಾಲಿಯಾಗಿರಲಿ, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ.

3. ಮಂತ್ರ ಮತ್ತು ಅವುಗಳ ಅರ್ಥ

ಶ್ರೀ ಧನ್ವಂತರಿ

3 ಅ. ಪರಾತ್ಪರ ಗುರು ಪಾಂಡೆಮಹಾರಾಜರು ನೀಡಿದ ಮಂತ್ರಗಳು

ಮಂತ್ರ ಕ್ರ. 1

ಅತ್ರಿವದ್ ವಃ ಕ್ರಿಮಯೋ ಹನ್ಮಿ ಕಣ್ವವಜ್ಜಮದಗ್ನಿವತ್ ।
ಅಗಸ್ತ್ಯಸ್ಯ ಬ್ರಹ್ಮಣಾ ಸಮ್ ಪಿನಷ್ಮ್ಯಹಙ್ ಕ್ರಿಮೀನ್ ।। – ಅಥರ್ವವೇದ, ಕಾಂಡ ೨, ಸೂಕ್ತ ೩೨, ಖಂಡ ೩

ಅರ್ಥ : ಋಷಿಗಳು ಹೇಳುತ್ತಾರೆ, ಹೇ ಕ್ರಿಮಿಗಳೇ (ರೋಗವನ್ನು ಉತ್ಪನ್ನ ಮಾಡುವ ಸೂಕ್ಷ್ಮ ಜಂತುಗಳೇ) ! ಅತ್ರಿ, ಕಣ್ವ ಮತ್ತು ಜಮದಗ್ನಿ ಋಷಿಗಳು ಯಾವ ರೀತಿ ನಿಮ್ಮನ್ನು ನಾಶಗೊಳಿಸಿದರೋ, ಅದೇ ರೀತಿ ನಾನೂ ನಿಮ್ಮನ್ನು ನಾಶ ಗೊಳಿಸುವೆನು. ಅಗಸ್ತ್ಯ ಋಷಿಗಳ ಮಂತ್ರದಿಂದ ನಾನು ‘ರೋಗ ಉತ್ಪಾದಕ ಸೂಕ್ಷ್ಮ ಜಂತುಗಳು ಪುನಃ ಹರಡದಂತೆ, ವ್ಯವಸ್ಥೆ ಮಾಡುವೆನು.

ಮಂತ್ರ ಕ್ರ. 2.

ಹತಾಸೋ ಅಸ್ಯ ವೇಶಸೋ ಹತಾಸಃ ಪರಿವೇಶಸಃ |
ಅಥೋ ಯೇ ಕ್ಷುಲ್ಲಕಾ ಇವ ಸರ್ವೇ ತೇ ಕ್ರಿಮಯೋ ಹತಾಃ || – ಅಥರ್ವವೇದ, ಕಾಂಡ 2, ಸೂಕ್ತ 32, ಖಂಡ 5

ಅರ್ಥ : ಈ ಕ್ರಿಮಿಗಳ (ರೋಗ ಉತ್ಪಾದಕ ಸೂಕ್ಷ್ಮ ಜಂತುಗಳ) ಮೂಲ ಸ್ಥಾನವು ನಾಶವಾಯಿತು, ಈ ಮೂಲ ಸ್ಥಾನದ ಅಕ್ಕಪಕ್ಕದ ಸ್ಥಾನಗಳು ನಾಶವಾದವು ಮತ್ತು ಚಿಕ್ಕ-ಚಿಕ್ಕ ಬೀಜರೂಪದಲ್ಲಿದ್ದ ಕ್ರಿಮಿಗಳೂ ನಾಶವಾದವು.

3 ಆ. ಪುಣೆಯ ಮಂತ್ರ-ಉಪಚಾರ ತಜ್ಞರಾದ ಡಾ. ಮೋಹನ ಫಡಕೆ ಇವರು ಹೇಳಿದ ಮಂತ್ರ

ಮಂತ್ರ ಕ್ರ. 3. ಶ್ವಾಸಾಂಗವ್ಯೂಹದ ಎಲ್ಲ ವ್ಯಾಧಿಗಳಿಗೆ ಉಪಯುಕ್ತವಾದ ಮಂತ್ರ (6 ಬಾರಿ ಓಂಕಾರವಿರುವ ಗಾಯತ್ರಿ ಮಂತ್ರ)

ಓಂ ಭೂಃ | ಓಂ ಭುವಃ | ಓಂ ಸ್ವಃ | ಓಂ ತತ್ಸವಿತುರ್ವರೇಣ್ಯಮ್ | ಓಂ ಭರ್ಗೋ ದೇವಸ್ಯ ಧೀಮಹಿ | ಓಂ ಧಿಯೋ ಯೋ ನಃ ಪ್ರಚೋದಯಾತ್ ||

– ಋಗ್ವೇದ, ಮಂಡಲ 3, ಸೂಕ್ತ 62, ಋಚಾ 10

ಅರ್ಥ : ನಾವು ದೈದಿಪ್ಯಮಾನ ಭಗವಾನ ಸವಿತಾ (ಸೂರ್ಯ) ದೇವರ ಆ ತೇಜದ ಧ್ಯಾನವನ್ನು ಮಾಡುತ್ತೇವೆ. ಅದು (ತೇಜವು) ನಮ್ಮ ಬುದ್ಧಿಗೆ ಪ್ರೇರಣೆ ನೀಡಲಿ.

1 thought on “ಕೊರೋನಾ ಸೋಂಕಿನ ಬಗ್ಗೆ ತಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಪ್ರತಿದಿನ ಮಂತ್ರಜಪವನ್ನು ಮಾಡಿ !”

Leave a Comment