ಸಂಸ್ಕೃತದ ವಿಲೋಮಕಾವ್ಯ ಎಂಬ ವಿಸ್ಮಯ !

ಶ್ರಾವಣ ಹುಣ್ಣಿಮೆಯಂದು ಇರುವ ‘ಸಂಸ್ಕೃತ ದಿನ’ದ ಪ್ರಯುಕ್ತ …

ವಿಲೋಮ ಕಾವ್ಯವೆಂದರೆ ಒಂದು ವೈಶಿಷ್ಟ್ಯಪೂರ್ಣ ರೀತಿಯಲ್ಲಿ ರಚಿಸಿದ ಕಾವ್ಯವಾಗಿದೆ. ಸಂಸ್ಕೃತದಲ್ಲಿ ಕಾಣಸಿಗುವ ಇಂತಹ ಕಾವ್ಯಗಳಲ್ಲಿ ಪದಜೋಡಣೆ ಎಷ್ಟು ಸುಂದರವಾಗಿರುತ್ತದೆ ಎಂದರೆ ಕಾವ್ಯದ ಸಾಲುಗಳನ್ನು ಮೊದಲನೇ ಅಕ್ಷರದಿಂದ ಕೊನೆಯವರೆಗೆ ನೇರವಾಗಿ ಓದಿದರೆ ಒಂದು ರೀತಿಯ ಅರ್ಥವನ್ನು ನೀಡುತ್ತದೆ ಮತ್ತು ಅದನ್ನು ಕೊನೆಯಿಂದ ಮೊದಲನೆಯ ಅಕ್ಷರದ ವರೆಗೆ ಓದಿದರೆ ಬೇರೆಯೇ ಅರ್ಥವನ್ನು ನೀಡುತ್ತದೆ!

೧. ಸಂಸ್ಕೃತದ ವ್ಯಾಕರಣದ ನಿಯಮಗಳನ್ನು ಪಾಲಿಸಿ ಅದ್ಭುತವಾದ ಕಾವ್ಯ ರಚಿಸಲು ಸಾಧ್ಯ !

ಜಗತ್ತಿನ ಅತ್ಯಂತ ಪ್ರಾಚೀನವಾದ ಭಾಷೆಗಳಲ್ಲಿ ಸಂಸ್ಕೃತವನ್ನು ಕೂಡ ಪರಿಗಣಿಸಲಾಗುತ್ತದೆ. ವೇದ, ಪುರಾಣಗಳು, ವೈದ್ಯಕೀಯ ಶಾಸ್ತ್ರ, ವಾಸ್ತು ಶಾಸ್ತ್ರ, ಅರ್ಥಶಾಸ್ತ್ರ, ಖಗೋಳ ವಿಜ್ಞಾನ, ರಸಾಯನ ಶಾಸ್ತ್ರ, ಯುದ್ಧ ಕಲೆ, ಗಣಿತ, ಜ್ಯೋತಿಷ್ಯ, ನೃತ್ಯ, ಸಂಗೀತ, ಶೃಂಗಾರ, ಹೀಗೆ ಲೆಕ್ಕವಿಲ್ಲದಷ್ಟು ವಿಷಯಗಳ ಬಗ್ಗೆ ಸಂಸ್ಕೃತದಲ್ಲಿ ಅಪಾರವಾದ ಜ್ಞಾನ ಸಂಪತ್ತಿದೆ. ಇಷ್ಟೊಂದು ಜ್ಞಾನ ತುಂಬಿರುವ ಸಂಸ್ಕೃತ ಸಾಹಿತ್ಯದ ವ್ಯಾಕರಣವೂ ಕ್ಲಿಷ್ಟವಾಗಿದೆ. ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಪಾಲಿಸಿಯೂ ಇಂತಹ ಅದ್ಭುತವಾದ ಕಾವ್ಯವನ್ನು ರಚಿಸಲು ಸಾಧ್ಯವಿದೆ. ಸಂಸ್ಕೃತ ಭಾಷೆಯ ಸಮೃದ್ಧಿಯನ್ನು ಈ ಕಾವ್ಯಗಳು ನಮಗೆ ಪರಿಚಯಿಸುತ್ತವೆ !

೨. ಪ್ರಭು ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣನನ್ನು ವರ್ಣಿಸಲು ನಿರ್ಮಿಸಿರುವ ವಿಲೋಮ ಕಾವ್ಯ !

ಸಾಧಾರಣ ೪೫೦ ವರ್ಷಗಳ ಹಿಂದಿ ದೈವಜ್ಞ ಸೂರ್ಯಕವಿ ಎಂಬವರು ‘ಶ್ರೀರಾಮಕೃಷ್ಣ ಕಾವ್ಯಮ್’ ಎಂಬ ಕವಿತೆಯನ್ನು ರಚಿಸಿದರು. ಇದರ ವಿಶೇಷತೆ ಏನೆಂದರೆ ಮೊದಲನೇ ಅಕ್ಷರದಿಂದ ಕೊನೆಯ ಅಕ್ಷರದ ವರೆಗೆ ಕಾವ್ಯವನ್ನು ಓದಿದರೆ ಅದರಲ್ಲಿ ಪ್ರಭು ಶ್ರೀರಾಮಚಂದ್ರನನ್ನು ಬಣ್ಣಿಸಲಾಗಿದೆ. ಅದೇ ಕಾವ್ಯವನ್ನು ಕೊನೆಯ ಅಕ್ಷರದಿಂದ ಮೊದಲನೇ ಅಕ್ಷರದ ವರೆಗೆ ವಿರುದ್ಧ ದಿಕ್ಕಿನಲ್ಲಿ ಓದಿದರೆ ಅದರಲ್ಲಿ ಶ್ರೀಕೃಷ್ಣನನ್ನು ಬಣ್ಣಿಸಲಾಗಿದೆ !

ಉದಾಹರಣೆಗೆ, ಈ ಕಾವ್ಯದ ಮೊದಲನೇ ಸಾಲು –

ತಂ ಭೂಸುತಾಮುಕ್ತಿಮುದಾರಹಾಸಂ ವಂದೇ ಯತೋ ಭವ್ಯಭವಂ ದಯಾಶ್ರೀಃ ।

ಇದನ್ನು ನೇರವಾಗಿ ಓದುವಾಗ ತಿಳಿಯುವ ಅರ್ಥ : ಸೀತೆಯನ್ನು ಮುಕ್ತಗೊಳಿಸಿದ, ಯಾರ ಸ್ಮಿತ ಹಾಸ್ಯವು ಎಲ್ಲರಿಗೂ ಪ್ರಿಯವಾಗಿದೆಯೋ, ಭವ್ಯ ಅವತಾರವಾದ ಮತ್ತು ಯಾರಿಂದ ಎಲ್ಲೆಡೆ ದಯೆ ಮತ್ತು ಶೋಭೆ ಪ್ರಾಪ್ತವಾಗುತ್ತದೆಯೋ, ಅಂತಹ (ಶ್ರೀ ರಾಮಚಂದ್ರನನ್ನು) ನಾನು ವಂದಿಸುತ್ತೇನೆ.

ಈಗ ಇದೆ ಸಾಲನ್ನು ವಿರುದ್ಧ ದಿಕ್ಕಿನಲ್ಲಿ ಓದಿದಾಗ ನಮಗೆ ಗೋಚರಿಸುವುದು –

ಶ್ರೀಯಾದವಂ ಭವ್ಯಭತೋಯದೇವಂ ಸಂಹಾರದಾಮುಕ್ತಿಮುತಾಸುಭೂತಮ್ |

ಇದರ ಅರ್ಥ : ಭವ್ಯವಾದ ಪ್ರಭೆಯನ್ನು ಹೊಂದಿರುವ, ಸೂರ್ಯ-ಚಂದ್ರರಿಗೂ ದೇವತೆಯಾಗಿರುವ, ಸಂಹರಿಸಲು ಬಂದಿರುವವರನ್ನೂ (ಪೂತನೆಯನ್ನೂ) ಮುಕ್ತಿ ನೀಡುವ ಹಾಗೂ ಸಂಪೂರ್ಣ ಸೃಷ್ಟಿಯಲ್ಲಿ ಅಂತರ್ಭೂತನಾಗಿರುವ (ಪ್ರಾಣವಾಗಿರುವ) ಆ ಯದುನಂದನನನ್ನು (ಶ್ರೀಕೃಷ್ಣನನ್ನು) ನಾನು ವಂದಿಸುತ್ತೇನೆ.

೩. ವಿಲೋಮ ಕವಿತೆಯು ಸಂಸ್ಕೃತವು ಎಷ್ಟು ಅಲೌಕಿಕವಾಗಿದೆ ಎಂದು ನಮಗೆ ತೋರಿಸುತ್ತದೆ

ವಿಲೋಮ ಕವಿತೆಗಳ ಬಗ್ಗೆ ಅಧ್ಯಯನ ನಡೆಸಿರುವ ವಿದ್ವಾನ್ ಶ್ರೀ. ವೇಲಣಕರ ಎಂಬವರು, ತಮ್ಮ ಪುಸ್ತಕದಲ್ಲಿ ೧೫೪೨ ರಲ್ಲಿ ಲಕ್ಷ್ಮಣಭಟ್ಟ ಪುತ್ರ ರಾಮಚಂದ್ರ ಎಂಬವರು ರಚಿಸಿದ ‘ರಸಿಕರಂಜನ’ ಎಂಬ ಕವಿತೆಯ ಬಗ್ಗೆ ತಿಳಿಸಿದ್ದಾರೆ. ಈ ಕವಿತೆಯ ವೈಶಿಷ್ಟ್ಯ ಏನೆಂದರೆ ಕವಿತೆಯ ಸಾಲುಗಳನ್ನು ನೇರವಾಗಿ ಓದಿದಾಗ, ಅವುಗಳಲ್ಲಿ ಶೃಂಗಾರದ ವರ್ಣನೆ ಇದೆ. ಆದರೆ ಇದೇ ಕಾವ್ಯವನ್ನು ವಿರುದ್ಧ ದಿಕ್ಕಿನಲ್ಲಿ ಓದಿದಾಗ ಅದು ವೈರಾಗ್ಯದ ಬಗ್ಗೆ ತಿಳಿಸುತ್ತದೆ ! ಇಂತಹ ಎರಡು ವಿರುದ್ಧವಾದ ವಿಷಯಗಳನ್ನು ಒಂದೇ ವಾಕ್ಯದಲ್ಲಿ ವರ್ಣಿಸಲು ಅಕ್ಷರಗಳನ್ನು ಪೋಣಿಸುವುದು ಸಾಮಾನ್ಯವಾದ ಮಾತಲ್ಲ! ಈ ಕೌಶಲ್ಯದ ಎಷ್ಟೇ ಪ್ರಶಂಸೆ ಮಾಡಿದರೂ ಅದು ಕಡಿಮೆಯೇ !

ತಂಜಾವೂರಿನಲ್ಲಿ ಜಗತ್ತಿನ ಅತ್ಯಂತ ದೊಡ್ಡ ಶಿಲಾಲೇಖವಿದ್ದು, ಅದರಲ್ಲಿ ಇರುವ ವಿಷಯವನ್ನು ನೇರವಾಗಿ ಓದಿದಾಗ ರಾಮಾಯಣವೂ, ವಿರುದ್ಧ ದಿಕ್ಕಿನಲ್ಲಿ ಓದಿದಾಗ ಮಹಾಭಾರತವು ಓದಲು ಸಿಗುತ್ತದೆ ಎಂದು ನಂಬಲಾಗಿದೆ.

ಲೇಖಕರು : ಮಕರಂದ ಕರಂದೀಕರ್ (ದೈನಿಕ ಸಾಮಾನಾ, ೨.೯.೨೦೧೫)

ಶ್ರೀರಾಮಕೃಷ್ಣ ವಿಲೋಮ ಕಾವ್ಯಮ್ ಇಲ್ಲಿ ನೀಡಿದ್ದೇವೆ. ಮೊದಲೆರಡು ವಾಕ್ಯಗಳು ಶ್ರೀರಾಮನ ಬಗ್ಗೆ ಇದ್ದು, ನಂತರದ ಎರಡು ವಾಕ್ಯಗಳು ಮೊದಲೆರಡು ವಾಕ್ಯಗಳ ವಿರುದ್ಧ ದಿಕ್ಕಿನಲ್ಲಿ ಓದಿದಾಗ ಗೋಚರಿಸುವ ಪದಗಳನ್ನು ಒಳಗೊಂಡಿವೆ ಮತ್ತು ಶ್ರೀಕೃಷ್ಣನನ್ನು ವರ್ಣಿಸುತ್ತವೆ.

॥ ಹರಿಃ ಓಂ ತತ್ ಸತ್ ॥
॥ ಶ್ರೀರಾಮಕೃಷ್ಣ ವಿಲೋಮ ಕಾವ್ಯಮ್ ॥
ತಂ ಭೂಸುತಾಮುಕ್ತಿಮುದಾರಹಾಸಂ
ವಂದೇ ಯತೋ ಭವ್ಯಭವಂ ದಯಾಶ್ರೀಃ ।
ಶ್ರೀಯಾದವಂ ಭವ್ಯಭತೋಯದೇವಂ
ಸಂಹಾರದಾಮುಕ್ತಿಮುತಾಸುಭೂತಮ್ ॥ ೧ ॥

ಚಿರಂ ವಿರಂಚಿರ್ನ ಚಿರಂ ವಿರಂಚಿಃ
ಸಾಕಾರತಾ ಸತ್ಯಸತಾರಕಾ ಸಾ ।
ಸಾಕಾರತಾ ಸತ್ಯಸತಾರಕಾ ಸಾ
ಚಿರಂ ವಿರಂಚಿರ್ನ ಚಿರಂ ವಿರಂಚಿಃ ॥ ೨ ॥

ತಾಮಸೀತ್ಯಸತಿ ಸತ್ಯಸೀಮತಾ
ಮಾಯಯಾಕ್ಷಮಸಮಕ್ಷಯಾಯಮಾ ।
ಮಾಯಯಾಕ್ಷಸಮಕ್ಷಯಾಯಮಾ
ತಾಮಸೀತ್ಯಸತಿ ಸತ್ಯಸೀಮತಾ ॥ ೩ ॥

ಕಾ ತಾಪಘ್ನೀ ತಾರಕಾದ್ಯಾ ವಿಪಾಪಾ
ತ್ರೇಧಾ ವಿದ್ಯಾ ನೋಷ್ಣಕೃತ್ಯಂ ನಿವಾಸೇ ।
ಸೇವಾ ನಿತ್ಯಂ ಕೃಷ್ಣನೋದ್ಯಾ ವಿಧಾತ್ರೇ
ಪಾಪಾವಿದ್ಯಾಕಾರತಾಘ್ನೀ ಪತಾಕಾ ॥ ೪ ॥

ಶ್ರೀರಾಮತೋ ಮಧ್ಯಮತೋದಿ ಯೇನ
ಧೀರೋಽನಿಶಂ ವಶ್ಯವತೀವರಾದ್ವಾ
ದ್ವಾರಾವತೀವಶ್ಯವಶಂ ನಿರೋಧೀ
ನಯೇದಿತೋ ಮಧ್ಯಮತೋಽಮರಾ ಶ್ರೀಃ ॥ ೫ ॥

ಕೌಶಿಕೇ ತ್ರಿತಪಸಿ ಕ್ಷರವ್ರತೀ
ಯೋಽದದಾದ್ಽದ್ವಿತನಯಸ್ವಮಾತುರಮ್ ।
ರಂತುಮಾಸ್ವಯನ ತದ್ವಿದಾದಯೋಽ
ತೀವ್ರರಕ್ಷಸಿ ಪತತ್ರಿಕೇಶಿಕೌ ॥ ೬ ॥

ಲಂಬಾಧರೋರು ತ್ರಯಲಂಬನಾಸೇ
ತ್ವಂ ಯಾಹಿ ಯಾಹಿ ಕ್ಷರಮಾಗತಾಜ್ಞಾ ।
ಜ್ಞಾತಾಗಮಾ ರಕ್ಷ ಹಿ ಯಾಹಿ ಯಾ ತ್ವಂ
ಸೇನಾ ಬಲಂ ಯತ್ರ ರುರೋಧ ಬಾಲಮ್ ॥ ೭ ॥

ಲಂಕಾಯನಾ ನಿತ್ಯಗಮಾ ಧವಾಶಾ
ಸಾಕಂ ತಯಾನುನ್ನಯಮಾನುಕಾರಾ ।
ರಾಕಾನುಮಾ ಯನ್ನನು ಯಾತಕಂಸಾ
ಶಾವಾಧಮಾಗತ್ಯ ನಿನಾಯ ಕಾಲಮ್ ॥ ೮ ॥

ಗಾಧಿಜಾಧ್ವರವೈರಾ ಯೇ
ತೇಽತೀತಾ ರಕ್ಷಸಾ ಮತಾಃ ।
ತಾಮಸಾಕ್ಷರತಾತೀತೇ
ಯೇ ರಾವೈರಧ್ವಜಾಧಿಗಾಃ ॥ ೯ ॥

ತಾವದೇವ ದಯಾ ದೇವೇ
ಯಾಗೇ ಯಾವದವಾಸನಾ ।
ನಾಸವಾದವಯಾ ಗೇಯಾ
ವೇದೇ ಯಾದವದೇವತಾ ॥ ೧೦ ॥

ಸಭಾಸ್ವಯೇ ಭಗ್ನಮನೇನ ಚಾಪಂ
ಕೀನಾಶತಾನದ್ಧರುಷಾ ಶಿಲಾಶೈಃ ।
ಶೈಲಾಶಿಷಾರುದ್ಧನತಾಶನಾಕೀ
ಪಂಚಾನನೇ ಮಗ್ನಭಯೇ ಸ್ವಭಾಸಃ ॥ ೧೧ ॥

ನ ವೇದ ಯಾಮಕ್ಷರಭಾಮಸೀತಾಂ
ಕಾ ತಾರಕಾ ವಿಷ್ಣುಜಿತೇಽವಿವಾದೇ ।
ದೇವಾವಿತೇ ಜಿಷ್ಣುವಿಕಾರತಾ ಕಾ
ತಾಂ ಸೀಮಭಾರಕ್ಷಮಯಾದವೇನ ॥ ೧೨ ॥

ತೀವ್ರಗೋರನ್ವಯತ್ರಾರ್ಯೋ
ವೈದೇಹೀಮನಸೋ ಮತಃ ।
ತಮಸೋ ನ ಮಹೀದೇವೈ-
ರ್ಯಾತ್ರಾಯನ್ವರಗೋವ್ರತೀ ॥ ೧೩ ॥

ವೇದ ಯಾ ಪದ್ಮಸದನಂ
ಸಾಧಾರಾವತತಾರ ಮಾ ।
ಮಾರತಾ ತವ ರಾಧಾ ಸಾ
ನಂದ ಸದ್ಮಪ ಯಾದವೇ ॥ ೧೪ ॥

ಶೈವತೋ ಹನನೇಽರೋಧೀ
ಯೋ ದೇವೇಷು ನೃಪೋತ್ಸವಃ ।
ವತ್ಸಪೋ ನೃಷು ವೇದೇ ಯೋ
ಧೀರೋಽನೇನ ಹತೋಽವಶೈಃ ॥ ೧೫ ॥

ನಾಗೋಪಗೋಽಸಿ ಕ್ಷರ ಮೇ ಪಿನಾಕೇಽ
ನಾಯೋಽಜನೇ ಧರ್ಮಧನೇನ ದಾನಮ್ ।
ನಂದಾನನೇ ಧರ್ಮಧನೇ ಜಯೋ ನಾ
ಕೇನಾಪಿ ಮೇ ರಕ್ಷಸಿ ಗೋಪಗೋ ನಃ ॥ ೧೬ ॥

ತತಾನ ದಾಮ ಪ್ರಮದಾ ಪದಾಯ
ನೇಮೇ ರುಚಾಮಸ್ವನಸುಂದರಾಕ್ಷೀ ।
ಕ್ಷೀರಾದಸುಂ ನ ಸ್ವಮಚಾರು ಮೇನೇ
ಯದಾಪ ದಾಮ ಪ್ರಮದಾ ನತಾತಃ ॥ ೧೭ ॥

ತಾಮಿತೋ ಮತ್ತಸೂತ್ರಾಮಾ
ಶಾಪಾದೇಷ ವಿಗಾನತಾಮ್ ।
ತಾಂ ನಗಾವಿಷದೇಽಪಾಶಾ
ಮಾತ್ರಾಸೂತ್ತಮತೋ ಮಿತಾ ॥ ೧೮ ॥

ನಾಸಾವದ್ಯಾಪತ್ರಪಾಜ್ಞಾವಿನೋದೀ
ಧೀರೋಽನುತ್ಯಾ ಸಸ್ಮಿತೋಽದ್ಯಾವಿಗೀತ್ಯಾ ।
ತ್ಯಾಗೀ ವಿದ್ಯಾತೋಽಸ್ಮಿ ಸತ್ತ್ಯಾನುರೋಧೀ
ದೀನೋಽವಿಜ್ಞಾ ಪಾತ್ರಪದ್ಯಾವಸಾನಾ ॥ ೧೯ ॥

ಸಂಭಾವಿತಂ ಭಿಕ್ಷುರಗಾದಗಾರಂ
ಯಾತಾಧಿರಾಪ ಸ್ವನಘಾಜವಂಶಃ ।
ಶವಂ ಜಘಾನ ಸ್ವಪರಾಧಿತಾಯಾ
ರಂಗಾದಗಾರಕ್ಷುಭಿತಂ ವಿಭಾಸಮ್ ॥ ೨೦ ॥

ತಯಾತಿತಾರಸ್ವನಯಾಗತಂ ಮಾ
ಲೋಕಾಪವಾದದ್ವಿತಯಂ ಪಿನಾಕೇ ।
ಕೇನಾಪಿ ಯಂ ತದ್ವಿದವಾಪ ಕಾಲೋ
ಮಾತಂಗಯಾನಸ್ವರತಾತಿಯಾತಃ ॥ ೨೧ ॥

ಶವೇಽವಿದಾ ಚಿತ್ರಕುರಂಗಮಾಲಾ
ಪಂಚಾವಟೀನರ್ಮ ನ ರೋಚತೇ ವಾ ।
ವಾತೇಽಚರೋ ನರ್ಮನಟೀವ ಚಾಪಂ
ಲಾಮಾಗರಂ ಕುತ್ರಚಿದಾವಿವೇಶ ॥ ೨೨ ॥

ನೇಹ ವಾ ಕ್ಷಿಪಸಿ ಪಕ್ಷಿಕಂಧರಾ
ಮಾಲಿನೀ ಸ್ವಮತಮತ್ತ ದೂಯತೇ ।
ತೇ ಯದೂತ್ತಮತಮ ಸ್ವನೀಲಮಾ-
ರಾಧಕಂ ಕ್ಷಿಪಸಿ ಪಕ್ಷಿವಾಹನೇ ॥ ೨೩ ॥

ವನಾಂತಯಾನಸ್ವಣುವೇದನಾಸು
ಯೋಷಾಮೃತೇಽರಣ್ಯಗತಾವಿರೋಧೀ ।
ಧೀರೋಽವಿತಾಗಣ್ಯರತೇ ಮೃಷಾ ಯೋ
ಸುನಾದವೇಣುಸ್ವನಯಾತನಾಂ ವಃ ॥ ೨೪ ॥

ಕಿಂ ನು ತೋಯರಸಾ ಪಂಪಾ
ನ ಸೇವಾ ನಿಯತೇನ ವೈ ।
ವೈನತೇಯನಿವಾಸೇನ
ಪಾಪಂ ಸಾರಯತೋ ನು ಕಿಮ್ ॥ ೨೫ ॥

ಸ ನತಾತಪಹಾ ತೇನ
ಸ್ವಂ ಶೇನಾವಿಹಿತಾಗಸಮ್ ।
ಸಂಗತಾಹಿವಿನಾಶೇ ಸ್ವಂ
ನೇತೇಹಾಪ ತತಾನ ಸಃ ॥ ೨೬ ॥

ಕಪಿತಾಲವಿಭಾಗೇನ
ಯೋಷಾದೋಽನುನಯೇನ ಸಃ ।
ಸ ನಯೇ ನನು ದೋಷಾಯೋ
ನಗೇ ಭಾವಿಲತಾಪಿಕಃ ॥ ೨೭॥

ತೇ ಸಭಾ ಪ್ರಕಪಿವರ್ಣಮಾಲಿಕಾ
ನಾಲ್ಪಕಪ್ರಸರಮಭ್ರಕಲ್ಪಿತಾ ।
ತಾಲ್ಪಿಕಭ್ರಮರಸಪ್ರಕಲ್ಪನಾ
ಕಾಲಿಮರ್ಣವ ಪಿಕ ಪ್ರಭಾಸತೇ ॥ ೨೮ ॥

ರಾವಣೇಽಕ್ಷಿಪತನತ್ರಪಾನತೇ
ನಾಲ್ಪಕಭ್ರಮಣಮಕ್ರಮಾತುರಮ್ ।
ರಂತುಮಾಕ್ರಮಣಮಭ್ರಕಲ್ಪನಾ
ತೇನ ಪಾತ್ರನತಪಕ್ಷಿಣೇ ವರಾ ॥ ೨೯ ॥

ದೈವೇ ಯೋಗೇ ಸೇವಾದಾನಂ
ಶಂಕಾ ನಾಯೇ ಲಂಕಾಯಾನೇ ।
ನೇಯಾಕಾಲಂ ಯೇನಾಕಾಶಂ
ನಂದಾವಾಸೇ ಗೇಯೋ ವೇದೈಃ ॥ ೩೦ ॥

ಶಂಕಾವಜ್ಞಾನುತ್ವನುಜ್ಞಾವಕಾಶಂ
ಯಾನೇ ನದ್ಯಾಮುಗ್ರಮುದ್ಯಾನನೇಯಾ ।
ಯಾನೇ ನದ್ಯಾಮುಗ್ರಮುದ್ಯಾನನೇಯಾ
ಶಂಕಾವಜ್ಞಾನುತ್ವನುಜ್ಞಾವಕಾಶಮ್ ॥ ೩೧ ॥

ವಾ ದಿದೇಶ ದ್ವಿಸೀತಾಯಾಂ
ಯಂ ಪಾಥೋಯನಸೇತವೇ ।
ವೈತಸೇನ ಯಥೋಪಾಯಂ
ಯಂತಾಸೀದ್ಽವಿಶದೇ ದಿವಾ ॥ ೩೨ ॥

ವಾಯುಜೋಽನುಮತೋ ನೇಮೇ
ಸಂಗ್ರಾಮೇಽರವಿತೋಽಹ್ನಿ ವಃ ।
ವಹ್ನಿತೋ ವಿರಮೇ ಗ್ರಾಸಂ
ಮೇನೇಽತೋಽಮನುಜೋ ಯುವಾ ॥ ೩೩॥

ಕ್ಷತಾಯ ಮಾ ಯತ್ರ ರಘೋರಿತಾಯು-
ರಂಕಾನುಗಾನನ್ಯವಯೋಽಯನಾನಿ ।
ನಿನಾಯ ಯೋ ವನ್ಯನಗಾನುಕಾರಂ
ಯುತಾರಿಘೋರತ್ರಯಮಾಯತಾಕ್ಷಃ ॥ ೩೪ ॥

ತಾರಕೇ ರಿಪುರಾಪ ಶ್ರೀ-
ರುಚಾ ದಾಸಸುತಾನ್ವಿತಃ ।
ತನ್ವಿತಾಸು ಸದಾಚಾರು
ಶ್ರೀಪುರಾ ಪುರಿ ಕೇ ರತಾ ॥ ೩೫ ॥

ಲಂಕಾ ರಂಕಾಂಗರಾಧ್ಯಾಸಂ
ಯಾನೇ ಮೇಯಾ ಕಾರಾವ್ಯಾಸೇ ।
ಸೇವ್ಯಾ ರಾಕಾ ಯಾಮೇ ನೇಯಾ
ಸಂಧ್ಯಾರಾಗಾಕಾರಂ ಕಾಲಮ್ ॥ ೩೬॥

॥ ಇತಿ ಶ್ರೀದೈವಜ್ಞ ಪಂಡಿತ ಸೂರ್ಯಕವಿ ವಿರಚಿತಂ ವಿಲೋಮಾಕ್ಷರ ರಾಮಕೃಷ್ಣಕಾವ್ಯಂ ಸಮಾಪ್ತಮ್ ॥

ಕಾವ್ಯ ಕೃಪೆ : ಜ್ಞಾನ ದೀಪ ಫೇಸ್ಬುಕ್ ಪುಟ

Leave a Comment