21.06.2020 ರಂದು ಇರಲಿರುವ ಸೂರ್ಯಗ್ರಹಣದ ಬಗ್ಗೆ

ಸಾಮಾಜಿಕ ಪ್ರಸಾರಮಾಧ್ಯಮಗಳಲ್ಲಿ ‘ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ೩ ಗ್ರಹಣಗಳು (೫.೬.೨೦೨೦, ೨೧.೬.೨೦೨೦ ಹಾಗೂ ೫.೭.೨೦೨೦ ಈ ದಿನಗಳಂದು) ಬರುವುದರಿಂದ ನೈಸರ್ಗಿಕ ಆಪತ್ತುಗಳು ಬಂದೆರಗಲಿವೆ. ಎಚ್ಚರದಿಂದಿರಿ’, ಎಂಬಂತಹ ಸಂದೇಶಗಳು ಪ್ರಸಾರವಾಗುತ್ತಿವೆ. ಆದುದರಿಂದ ಅನೇಕ ಜನರಲ್ಲಿ ಗೊಂದಲ ಹಾಗೂ ಭಯದ ವಾತಾವರಣವು ಉಂಟಾಗುತ್ತಿದೆ.

ವಸ್ತುಸ್ಥಿತಿ

ಅ. ಈ ೩ ಗ್ರಹಣಗಳ ಪೈಕಿ ಕೇವಲ ಜ್ಯೇಷ್ಠ ಅಮಾವಾಸ್ಯೆ, ರವಿವಾರ ೨೧.೬.೨೦೨೦ ರಂದು ಇರಲಿರುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸಲಿದೆ.

ಆ. ೫.೬.೨೦೨೦ ಈ ದಿನದಂದು ಇರುವ ಚಂದ್ರಗ್ರಹಣವು ‘ಛಾಯಾ ಕಲ್ಪ’ವಾಗಿತ್ತು. ಛಾಯಾಕಲ್ಪ ಚಂದ್ರಗ್ರಹಣದಲ್ಲಿ ಚಂದ್ರಬಿಂಬಕ್ಕೆ ಪ್ರತ್ಯಕ್ಷ ಗ್ರಹಣ ತಗಲುವುದಿಲ್ಲ. ಚಂದ್ರಬಿಂಬವು ಪೃಥ್ವಿಯ ಮಸುಕಾದ ಹಾಗೂ ಅಸ್ಪಷ್ಟ ಛಾಯೆಯನ್ನು ಪ್ರವೇಶಿಸುತ್ತದೆ. ‘ಛಾಯಕಲ್ಪ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು’, ಎಂದಿರುವುದರಿಂದ ಈ ಗ್ರಹಣಗಳ ನೈಸರ್ಗಿಕ ಹಾಗೂ ಜನ್ಮರಾಶಿ ಇತ್ಯಾದಿಗನುಸಾರವಿರುವ ಪರಿಣಾಮಗಳನ್ನು ಪರಿಗಣಿಸಬೇಕಾಗಿಲ್ಲ.

ಇ. ಆಷಾಢ ಶುಕ್ಲ ಪಕ್ಷ ಹುಣ್ಣಿಮೆ, ಅಂದರೆ ಗುರುಪೂರ್ಣಿಮೆ, ರವಿವಾರ ೫.೭.೨೦೨೦ ರಂದು ಇರಲಿರುವ ‘ಕುಮಾರಿ ಚಂದ್ರಗ್ರಹ’ಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದರಿಂದ ಈ ಗ್ರಹಣದ ವೇಧಾದಿ ಯಾವುದೇ ನಿಯಮಗಳನ್ನು ಪಾಲಿಸಬಾರದು.

ಈ. ಗರ್ಭವತಿ ಸ್ತ್ರೀಯರು ೫.೬.೨೦೨೦ ಹಾಗೂ ೫.೭.೨೦೨೦ ಈ ದಿನದಂದು ಇರಲಿರುವ ಚಂದ್ರಗ್ರಹಣಗಳ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

ಉ. ೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.

ಖಂಡಗ್ರಾಸ ಸೂರ್ಯಗ್ರಹಣ (ಜೂನ್ 21, 2020)

ಈ ಗ್ರಹಣವು ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಾಖಂಡದ ಕೆಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಹಾಗೂ ಭಾರತದ ಉಳಿದೆಡೆಗಳಲ್ಲಿ ಖಂಡಗ್ರಾಸವಾಗಿ ಕಾಣಿಸುವುದು.

ವೇಧ ಕಾಲಾವಧಿ : ಜೂನ್ 20 ರ ರಾತ್ರಿ 10 ರಿಂದ ಗ್ರಹಣಮೋಕ್ಷದ ವರೆಗೆ.

ಮಕ್ಕಳು, ವೃದ್ಧರು, ನಿಶ್ಶಕ್ತರು ಮತ್ತು ಗರ್ಭಿಣಿಯರು ಜೂನ್ 21 ಮುಂಜಾನೆ 4.45 ರಿಂದ ಗ್ರಹಣಮೋಕ್ಷದವರೆಗೆ ವೇಧ ಪಾಲಿಸಬೇಕು

ವೇಧಕಾಲದ ವಿಧಿನಿಷೇಧಗಳು : ದೇವರ ಪೂಜೆ, ನಾಮಜಪ ಮತ್ತು ಶ್ರಾದ್ಧ ಕರ್ಮಗಳನ್ನು ಮಾಡಬೇಕು. ಊಟ ಮಾಡಬಾರದು, ಗ್ರಹಣಸ್ಪರ್ಶದವರೆಗೆ ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ, ನಿದ್ರೆ ಮಾಡಬಹುದು; ಆದರೆ ಪರ್ವಕಾಲದಲ್ಲಿ (ಗ್ರಹಣ- ಸ್ಪರ್ಶದಿಂದ ಗ್ರಹಣಮೋಕ್ಷ) ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ, ನಿದ್ರೆ ಇಂತಹ ಕರ್ಮಗಳನ್ನು ಮಾಡಬಾರದು.

ಗ್ರಹಣಕ್ಕೆ ಸಂಬಂಧಿಸಿದ ಸಮಯಗಳು

ನಗರ ಸ್ಪರ್ಶ ಮಧ್ಯ ಮೋಕ್ಷ ಪರ್ವಕಾಲ
ಬಾಗಲಕೋಟೆ ಬೆಳಗ್ಗೆ 10.07 ಬೆಳಗ್ಗೆ 11.44 ಮಧ್ಯಾಹ್ನ 01.33 3 ಗಂಟೆ 26 ನಿಮಿಷ
ಬೆಳಗಾವಿ ಬೆಳಗ್ಗೆ 10:04 ಬೆಳಗ್ಗೆ 11:39 ಮಧ್ಯಾಹ್ನ 01.28 3 ಗಂಟೆ 24 ನಿಮಿಷ
ಬೆಂಗಳೂರು ಬೆಳಗ್ಗೆ 10.13 ಬೆಳಗ್ಗೆ 11.47 ಮಧ್ಯಾಹ್ನ 01.32 3 ಗಂಟೆ 19 ನಿಮಿಷ
ಗದಗ ಬೆಳಗ್ಗೆ 10.07 ಬೆಳಗ್ಗೆ 11.43 ಮಧ್ಯಾಹ್ನ 01.31 3 ಗಂಟೆ 24 ನಿಮಿಷ
ಗೋಕರ್ಣ ಬೆಳಗ್ಗೆ 10.03 ಬೆಳಗ್ಗೆ 11.37 ಮಧ್ಯಾಹ್ನ 01.24 3 ಗಂಟೆ 21 ನಿಮಿಷ
ಹಾವೇರಿ ಬೆಳಗ್ಗೆ 10.06 ಬೆಳಗ್ಗೆ 11.41 ಮಧ್ಯಾಹ್ನ 01.29 3 ಗಂಟೆ 23 ನಿಮಿಷ
ಹುಬ್ಬಳ್ಳಿ ಬೆಳಗ್ಗೆ 10:05 ಬೆಳಗ್ಗೆ 11:41 ಮಧ್ಯಾಹ್ನ 01:29 3 ಗಂಟೆ 24 ನಿಮಿಷ
ಕಾರವಾರ ಬೆಳಗ್ಗೆ 10:02 ಬೆಳಗ್ಗೆ 11:37 ಮಧ್ಯಾಹ್ನ 01:24 3 ಗಂಟೆ 22 ನಿಮಿಷ
ಮೈಸೂರು ಬೆಳಗ್ಗೆ 10:10 ಬೆಳಗ್ಗೆ 11:43 ಮಧ್ಯಾಹ್ನ 01:27 3 ಗಂಟೆ 17 ನಿಮಿಷ
ಮಂಗಳೂರು ಬೆಳಗ್ಗೆ 10.04 ಬೆಳಗ್ಗೆ 11.36 ಮಧ್ಯಾಹ್ನ 01:21 3 ಗಂಟೆ 17 ನಿಮಿಷ
ರಾಯಚೂರು ಬೆಳಗ್ಗೆ 10:11 ಬೆಳಗ್ಗೆ 11:50 ಮಧ್ಯಾಹ್ನ 01:38 3 ಗಂಟೆ 27 ನಿಮಿಷ
ಶಿವಮೊಗ್ಗ ಬೆಳಗ್ಗೆ 10:06 ಬೆಳಗ್ಗೆ 11:41 ಮಧ್ಯಾಹ್ನ 01:27 3 ಗಂಟೆ 21 ನಿಮಿಷ
ಉಡುಪಿ ಬೆಳಗ್ಗೆ 10:04 ಬೆಳಗ್ಗೆ 11:37 ಮಧ್ಯಾಹ್ನ 01:23 3 ಗಂಟೆ 19 ನಿಮಿಷ
ವಿಜಯಪುರ ಬೆಳಗ್ಗೆ 10:07 ಬೆಳಗ್ಗೆ 11:45 ಮಧ್ಯಾಹ್ನ 01:34 3 ಗಂಟೆ 27 ನಿಮಿಷ

ಏನು ಮಾಡಬೇಕು ?

ಅ. ಗ್ರಹಣಸ್ಪರ್ಶವಾಗುತ್ತಿದ್ದಂತೆ ಸ್ನಾನ ಮಾಡಿ.

ಆ. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣೆ ನೀಡುವುದು, ಶ್ರಾದ್ಧ, ಜಪ, ಹೋಮ, ದಾನ ಇತ್ಯಾದಿಗಳನ್ನು ಮಾಡಿ.

ಇ. ಯಾವುದಾದರೂ ಕಾರಣದಿಂದ ಹಿಂದೊಮ್ಮೆ ಪ್ರಾರಂಭಿಸಿ ಮಧ್ಯದಲ್ಲೇ ನಿಂತುಹೋಗಿರುವ ಮಂತ್ರಪಠಣವನ್ನು ಪುನಃ ಪ್ರಾರಂಭಿಸುವುದರಿಂದ ಅದರ ಅನೇಕ ಪಟ್ಟಿನಲ್ಲಿ ಲಾಭವಾಗುತ್ತದೆ.

ಈ. ಗ್ರಹಣ ಮೋಕ್ಷಣದ ನಂತರ ಮತ್ತೊಮ್ಮೆ ಸ್ನಾನ ಮಾಡಿ.

ಕಾರಣಾಂತರದಿಂದ ಅಶೌಚವಿದ್ದರೆ ಗ್ರಹಣಕಾಲದಲ್ಲಿ ಗ್ರಹಣಕ್ಕೆ ಸಂಬಂಧಿಸಿದ ಸ್ನಾನ ಮತ್ತು ದಾನ ನೀಡುವುದರಿಂದ ಶುದ್ಧಿಯಾಗುತ್ತದೆ.

೫. ರಾಶಿಗಳಿಗನುಸಾರ ಗ್ರಹಣದ ಫಲ

ಶುಭಫಲ : ಮೇಷ, ಸಿಂಹ, ಕನ್ಯಾ, ಮಕರ

ಅಶುಭ ಫಲ : ಮಿಥುನ, ಕರ್ಕ, ವೃಶ್ಚಿಕ, ಮೀನ

ಮಿಶ್ರಫಲ : ವೃಷಭ, ತುಲಾ, ಧನು, ಕುಂಭ

ಸೂಚನೆ : ಯಾವ ರಾಶಿಗಳಿಗೆ ಅಶುಭ ಫಲವಿದೆಯೋ ಅವರು ಹಾಗೂ ಗರ್ಭಿಣಿ ಮಹಿಳೆಯರು ಸೂರ್ಯಗ್ರಹಣವನ್ನು ನೋಡಬಾರದು. (ಆಧಾರ : ದಾತೆ ಪಂಚಾಂಗ)

ಸೂರ್ಯಗ್ರಹಣ ನೋಡುವಾಗ ವಹಿಸಬೇಕಾದ ಜಾಗರೂಕತೆ 

ಖಂಡಗ್ರಾಸ ಸೂರ್ಯಗ್ರಹಣ ನೋಡುವಾಗ ‘ಸೂರ್ಯಗ್ರಹಣ’ ವೀಕ್ಷಿಸಲು ತಯಾರಿಸಲಾದ ವಿಶೇಷ ಕನ್ನಡಕ, ಮಸಿ ಹಚ್ಚಿದ ಗಾಜು, ಕಪ್ಪು ಗಾಜು ಅಥವಾ ಸೂರ್ಯನ ಪ್ರಖರ ಕಿರಣಗಳು ನಮ್ಮ ಕಣ್ಣಿಗೆ ಬೀಳದಂತೆ ತಯಾರಿಸಲಾದ ಉಪಕರಣಗಳನ್ನು ಬಳಸಿ. ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡಬಾರದು. ಗ್ರಹಣದ ಛಾಯಾಚಿತ್ರವನ್ನು ತೆಗೆಯುವಾಗ ಕೂಡ ವಿಶಿಷ್ಟ ಫಿಲ್ಟರ್ ಉಪಯೋಗಿಸಿ.

ಈ ಗ್ರಹಣದಲ್ಲಿ ಕಂಕಣಾಕೃತಿಯು ೩ ನಿಮಿಷಗಳ ಕಾಲ ಕಾಣಿಸಲಿರುವುದರಿಂದ ಆ ಸಮಯದಲ್ಲಿ ಸೂರ್ಯಗ್ರಹಣವನ್ನು ನೋಡುವವರು ವಿಶೇಷ ಕನ್ನಡಕವನ್ನು ಧರಿಸಿಯೇ ಇರಬೇಕು.

ಗ್ರಹಣದ ಸಮಯದಲ್ಲಿ ಮಾಡುವ ಸ್ನಾನದ ಮಹತ್ವ

ಗ್ರಹಣದ ಸಮಯದಲ್ಲಿ ನೀರು ಗಂಗಸಮಾನವಾಗಿರುತ್ತದೆ. ಆದರೂ ಬಿಸಿ ನೀರಿನ ತುಲನೆಯಲ್ಲಿ ತಣ್ಣಗಿರುವ ನೀರು ಪುಣ್ಯಕಾರಕವಾಗಿರುತ್ತದೆ. ಮೇಲೆತ್ತಿದ ನೀರಿನ ತುಲನೆಯಲ್ಲಿ ಹರಿಯುವ ನೀರು, ಸರೋವರ, ನದಿ, ಮಹಾನದಿ, ಗಂಗೆ, ಸಮುದ್ರ ಇವುಗಳಲ್ಲಿ ಸ್ನಾನ ಮಾಡುವುದು ಕ್ರಮವಾಗಿ ಹೆಚ್ಚು ಶ್ರೇಷ್ಠ ಮತ್ತು ಪುಣ್ಯಕಾರಕವಾಗಿದೆ. ಸೂರ್ಯಗ್ರಹಣದ ಸಮಯದಲ್ಲಿ ನರ್ಮದೆಯಲ್ಲಿ ಮಾಡಿದ ಸ್ನಾನಕ್ಕೆ ವಿಶೇಷ ಮಹತ್ವವಿದೆ. ನರ್ಮದೆಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲದಿದ್ದರೆ ಸ್ನಾನದ ಸಮಯದಲ್ಲಿ ನರ್ಮದೆಯನ್ನು ಅವಶ್ಯ ಸ್ಮರಿಸಿ. (ಆಧಾರ : ದಾತೆ ಪಂಚಾಂಗ)

ಸೂರ್ಯಗ್ರಹಣದ ಸಮಯದಲ್ಲಿ ಸಾಧನೆಯನ್ನು ಮಾಡುವ ಮಹತ್ವ 

ಗ್ರಹಣದ ಸಮಯದಲ್ಲಿ ನಿರ್ಮಾಣವಾಗುವ ವಿಶೇಷ ವಾತಾವರಣದ ಪರಿಣಾಮವು ಪ್ರತಿಯೊಂದು ಜೀವದ ಮೇಲೆಯೂ ಆಗುತ್ತದೆ. ಚಂದ್ರಗ್ರಹಣಕ್ಕಿಂತ ಸೂರ್ಯಗ್ರಹಣದ ಕಾಲಾವಧಿಯು ಸಾಧನೆಗೆ ಹೆಚ್ಚು ಪೂರಕವಾಗಿದೆ. ಜ್ಯೋತಿಷ್ಯ, ಧಾರ್ಮಿಕ ವಿಷಯಗಳಲ್ಲಿ ಮತ್ತು ವಿಜ್ಞಾನದಲ್ಲಿ ಗ್ರಹಣಕ್ಕೆ ವಿಶೇಷ ಮಹತ್ವವಿದೆ. ಗ್ರಹಣಕಾಲವು ಸಂಧಿಕಾಲವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಸಾಧನೆಯ ಪರಿಣಾಮವು ಬೇಗನೆ ಅರಿವಿಗೆ ಬರುತ್ತದೆ. ಗ್ರಹಣಕಾಲದಲ್ಲಿ ಮಾಡಿದ ಜಪ ಮತ್ತು ದಾನಗಳ ಅನಂತ ಪಟ್ಟಿನಲ್ಲಿ ಫಲವು ಲಭಿಸುತ್ತದೆ. ಆದುದರಿಂದ ಗ್ರಹಣಮೋಕ್ಷದ ನಂತರ ಕ್ಷಮತೆಗನುಸಾರ ದಾನ ನೀಡಬೇಕು.

ಹೊಸ ಮಂತ್ರವನ್ನು ಪ್ರಾರಂಭಿಸಲು ಅಥವಾ ಮಂತ್ರಗಳ ಪುರಶ್ಚರಣಕ್ಕೆ (ನಿಲ್ಲಿಸಿದ ಪಾರಾಯಣವನ್ನು ಪುನಃ ಪ್ರಾರಂಭಿಸಲು) ಸೂರ್ಯಗ್ರಹಣದ ಸಮಯವು ಅನುಕೂಲವಾಗಿದೆ. ಈ ಹಿಂದೆ ಪಡೆದಂತಹ ಮಂತ್ರದ ಗ್ರಹಣ ಪರ್ವಕಾಲದಲ್ಲಿ ಪುರಶ್ಚರಣ ಮಾಡುವುದರಿಂದ ಮಂತ್ರ ಸಿದ್ಧವಾಗುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ಶ್ರೀ ಗುರುಗಳನ್ನು ಅನನ್ಯಭಾವದಿಂದ ಸ್ಮರಿಸಿ, ಸಂಪೂರ್ಣ ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡಿದ ಜಪದಿಂದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗು ವ್ಯಾವಹಾರಿಕ ಸಮಸ್ಯೆಗಳು ಬಗೆಹರಿಯುತ್ತವೆ. ಕಾರ್ಯದಲ್ಲಿ ಸಫಲತೆಯು ಪ್ರಾಪ್ತವಾಗುತ್ತದೆ. ಗ್ರಹಣಕಾಲದಲ್ಲಿ ಜಪವನ್ನು ಮಾಡಲು ಜಪಮಾಲೆಯ ಅವಶ್ಯಕತೆಯಿಲ್ಲ.

ಗ್ರಹಣದ ಸ್ಪರ್ಶದಿಂದ ಮೋಕ್ಷದವರೆಗಿನ ಸಮಯವು ಮಹತ್ತ್ವದ್ದಾಗಿದೆ.

– ಸೌ. ಪ್ರಾಜಕ್ತಾ ಜೋಶಿ, ‘ಜ್ಯೋತಿಷ ಫಲಿತ ವಿಶಾರದ’ (೩೦.೫.೨೦೨೦)

Leave a Comment