ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹದ ಮಹತ್ವ !

ವೈಶಾಖ ಅಮಾವಾಸ್ಯೆಯಂದು ಇರುವ ಶನೈಶ್ಚರ ಜಯಂತಿಯ ಪ್ರಯುಕ್ತ…

ವೈಶಾಖ ಅಮಾವಾಸ್ಯೆಯಂದು ಶನೈಶ್ಚರ ಜಯಂತಿಯಿದೆ. ಇದರ ಪ್ರಯುಕ್ತ ಶನಿದೇವತೆಯ ವೈಶಿಷ್ಟ್ಯಗಳು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಧನೆಯಲ್ಲಿ ಶನಿ ಗ್ರಹದ ಮಹತ್ವ, ಏಳುವರೆ ಶನಿ ಮತ್ತು ಅದರ ಪರಿಹಾರೋಪಾಯ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ…

೧. ಶನಿದೇವತೆಯ ವೈಶಿಷ್ಟ್ಯಗಳು

೧ ಅ. ಸ್ಥಾನ

೧ ಅ ೧. ಜನ್ಮಸ್ಥಾನ : ಭಾರತದ ಸೌರಾಷ್ಟ್ರದಲ್ಲಿ ವೈಶಾಖ ಅಮಾವಾಸ್ಯೆಯಂದು ಮಧ್ಯಾಹ್ನದ ಸಮಯದಲ್ಲಿ ಶನಿದೇವರ ಜನನವಾಯಿತು, ಆದುದರಿಂದ ಈ ದಿನವನ್ನು ಶನೈಶ್ಚರ ಜಯಂತಿಯೆಂದು ಆಚರಿಸಲಾಗುತ್ತದೆ.

೧ ಅ ೨. ಕಾರ್ಯಕ್ಷೇತ್ರ : ಮಹಾರಾಷ್ಟ್ರದಲ್ಲಿರುವ ಶನಿ ಶಿಂಗ್ನಾಪುರದಲ್ಲಿ ಶನಿದೇವರ ದೊಡ್ಡ ಕಪ್ಪು ಶಿಲೆಯಿದ್ದು ಅಲ್ಲಿ ಶನಿದೇವತೆಯ ಶಕ್ತಿಯು ಕಾರ್ಯರತವಾಗಿದೆ. ಶನೈಶ್ಚರ ಜಯಂತಿಯಂದು ಇಲ್ಲಿ ಜಾತ್ರೆಯಾಗುತ್ತದೆ ಮತ್ತು ಶನಿದೇವರ ಉತ್ಸವವನ್ನು ಆಚರಿಸಲಾಗುತ್ತದೆ.

ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶನಿ ಶಿಂಗ್ನಾಪುರದ ಶನಿದೇವರ ಕಟ್ಟೆ

೨. ಜ್ಯೋತಿಷ್ಯದ ಪ್ರಕಾರ ಶನಿ ಗ್ರಹದ ಮಹತ್ವ

ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಶನಿ ಗ್ರಹವು ಪಾಪ ಗ್ರಹವಾಗಿರುವುದರಿಂದ ಲೌಕಿಕ ದೃಷ್ಟಿಯಲ್ಲಿ ಇತರ ಗ್ರಹಗಳ ತುಲನೆಯಲ್ಲಿ ಈ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಶನಿ ಗ್ರಹಕ್ಕೆ ಮಕರ ಮತ್ತು ಕುಂಭ ಇವು ರಾಶಿಗಳು. ತುಲಾ ರಾಶಿಯಲ್ಲಿ ಶನಿಯು ಉಚ್ಚ ಸ್ಥಾನದಲ್ಲಿರುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಗಳಿಗೆ ಉಚ್ಚ ಮತ್ತು ನೀಚ ರಾಶಿಗಳನ್ನು ನಿರ್ಧರಿಸಲಾಗಿದೆ. ‘ಒಂದು ಗ್ರಹವು ಉಚ್ಚ ರಾಶಿಯಲ್ಲಿರುವಾಗ, ಅದು ಯಾವ ವಿಷಯಗಳಿಗೆ ಕಾರಣೀಭೂತವಾಗಿರುತ್ತದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನಗಳ ಸ್ವಾಮಿತ್ವವಿದೆಯೋ, ಆ ವಿಷಯಗಳ ಬಗ್ಗೆ ಶುಭಫಲವನ್ನು ನೀಡುತ್ತದೆ’ ಎಂಬ ನಿಯಮವಿದೆ. ಶನಿ ಗ್ರಹವು ವಾಯುತತ್ತ್ವದ್ದಾಗಿದ್ದು ಮಾನವನನ್ನು ಆಸಕ್ತಿಯಿಂದ ವಿರಕ್ತೆಯೆಡೆಗೆ ಕೊಂಡುಯ್ಯುತ್ತದೆ. ಮನುಷ್ಯನನ್ನು, ಜೀವನದಲ್ಲಿ ಬರುವಂತಹ ಮಾನ, ಅಪಮಾನ ನತ್ತು ಅವಹೇಳನೆಯಿಂದ ಪರಮಾರ್ಥದ ದಿಕ್ಕಿನಲ್ಲಿ ಹೊರಳಿಸುತ್ತದೆ ಈ ಶನಿ ಗ್ರಹ. ಪೂರ್ವಪುಣ್ಯವನ್ನು ತೋರಿಸುವ ಈ ಗ್ರಹವು ಮೋಕ್ಷದ ದಾರಿದೀಪವಾಗಿದೆ.

೩. ಮನುಷ್ಯನ ಗುಣ-ದೋಷಗಳ ಸಂದರ್ಭದಲ್ಲಿ ಶನಿಯ ಮಹತ್ವ

ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಪ್ರತಿಯೊಂದು ಗ್ರಹದ ಶುಭ (ಗುಣ) ಮತ್ತು ಅಶುಭ (ದೋಷ) ಹೀಗೆ ಎರಡು ಮಗ್ಗಲುಗಳಿರುತ್ತವೆ. ಯಾವುದೇ ಗ್ರಹವು ಕೇವಲ ಅಶುಭವೇ ಅಥವಾ ಕೇವಲ ಶುಭವೇ ಇರುತ್ತದೆ ಎಂದಿಲ್ಲ. ಈ ನಿಮಯಕ್ಕನುಸಾರ ಶನಿ ಗ್ರಹಕ್ಕೂ ಎರಡು ಮಗ್ಗಲುಗಳಿವೆ; ಆದರೆ ಶನಿ ಗ್ರಹದ ಬಗ್ಗೆ ಕೇವಲ ಒಂದೇ ಕಡೆಯ ವಿಚಾರ ಮಾಡಲಾಗುತ್ತದೆ; ಆದ್ದರಿಂದ ಜನರ ಮನಸ್ಸಿನಲ್ಲಿ ಶನಿ ಗ್ರಹದ ಬಗ್ಗೆ ಭಯವು ನಿರ್ಮಾಣವಾಗುತ್ತದೆ. ಶನಿ ಗ್ರಹವು ಗರ್ವ, ಅಹಂಕಾರ, ಪೂರ್ವಗ್ರಹ ಇವುಗಳನ್ನು ದೂರ ಮಾಡಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತದೆ ಹಾಗೂ ಅಂತರಂಗದಲ್ಲಿನ ಉಚ್ಚ ಗುಣಗಳ ಪರಿಚಯ ಮಾಡಿಸಿಕೊಡುತ್ತದೆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದಾನೆ. ಯಾರು ಶಿಸ್ತುಬದ್ಧ, ವಿನಯಶೀಲ ಹಾಗೂ ವಿನಮ್ರರಾಗಿರುವರೋ, ಅವರನ್ನು ಶನಿಯು ಉಚ್ಚ ಪದವಿಗೆ ಕರೆದೊಯ್ಯುತ್ತಾನೆ ಹಾಗೂ ಯಾರು ಅಹಂಕಾರಿ, ಗರ್ವಿಷ್ಠ ಹಾಗೂ ಸ್ವಾರ್ಥಿಗಳಾಗಿರುತ್ತಾರೆಯೋ, ಅವರಿಗೆ ಶನಿಯು ತೊಂದರೆ ನೀಡುತ್ತಾನೆ. ಇಂತಹ ಕೆಟ್ಟ ಕಾಲದಲ್ಲಿಯೇ ಮನುಷ್ಯನ ಯೋಗ್ಯ ಪರೀಕ್ಷೆಯಾಗುತ್ತದೆ. ಈ ಕಾಲದಲ್ಲಿ ವ್ಯಕ್ತಿಗೆ ಸ್ವಕೀಯ-ಪರಕೀಯರು ಯಾರೆಂದು ಅರಿವಾಗುತ್ತದೆ. ತಮ್ಮ ಗುಣ-ದೋಷಗಳು ಗಮನಕ್ಕೆ ಬರುತ್ತವೆ. ಗರ್ವಹರಣವಾಗುತ್ತದೆ, ಅಹಂಕಾರ ಸೋರಿ ಹೋಗುತ್ತದೆ. ಮನುಷ್ಯತ್ವದ ಅರಿವಾಗುತ್ತದೆ. ಓರ್ವ ಮನುಷ್ಯನಾಗಿ ಹೇಗೆ ಜೀವಿಸಬೇಕೆಂಬುದರ ಜ್ಞಾನವಾಗುತ್ತದೆ. ಅವಿಚಾರಿಗಳು ಮಾಡಿದ ಕರ್ಮಗಳ ಫಲ ಏಳೂವರೆ ಶನಿದಶೆಯ ಸಮಯದಲ್ಲಿ ಸಿಗುವುದು ಕಾಣಿಸುತ್ತದೆ.

೪. ಶನೈಶ್ಚರ ಜಯಂತಿಯಂದು ಮಾಡಬೇಕಾದ ಸಾಧನೆ

ಶನಿಯು ಪ್ರತಿಯೊಬ್ಬ ಮನುಷ್ಯನ ರಾಶಿಯಲ್ಲಿ ಪ್ರವೇಶಿಸಿ ಏಳೂವರೆ ವರ್ಷಗಳ ಕಾಲ ಅಲ್ಲಿರುತ್ತಾನೆ. ಆದುದರಿಂದ ಮನುಷ್ಯನಿಗೆ ಏಳೂವರೆ ವರ್ಷಗಳ ಕಾಲ ಶನಿಪೀಡೆಯನ್ನು ಭೋಗಿಸಬೇಕಾಗುತ್ತದೆ. ಈಗ ಶನಿಯು ‘ಮಕರ’ ರಾಶಿಯಲ್ಲಿದ್ದು ಧನು, ಮಕರ ಮತ್ತು ಕುಂಭ ರಾಶಿಯಲ್ಲಿರುವವರಿಗೆ ಏಳೂವರೆ ಶನಿದಶೆಯು ನಡೆಯುತ್ತಿದೆ. ಜಾತಕದಲ್ಲಿ ೧, ೨, ೪, ೫, ೭, ೮, ೯ ಮತ್ತು ೧೨ ನೇ ಸ್ಥಾನದಲ್ಲಿರುವ ಶನಿಯು ಪೀಡಾಕಾರಕನಾಗಿರುತ್ತಾನೆ. ಶನಿಪೀಡೆಯ ಪರಿಹಾರಕ್ಕಾಗಿ ಶನಿಜಯಂತಿಯಂದು ಜಪ, ದಾನ ಮತ್ತು ಪೂಜೆಯನ್ನು ಮಾಡಿ ಪುಣ್ಯ ಸಂಪಾದಿಸಬಹುದು ಮತ್ತು ಇದರಿಂದ ಪೀಡೆಯ ಪರಿಹಾರವೂ ಆಗುತ್ತದೆ. ಶನಿಯು ದಾಸ್ಯವೃತ್ತಿಯ ಗ್ರಹವಾಗಿರುವುದರಿಂದ ಏಳೂವರೆ ಶನಿದಶೆಯ ಸಮಯದಲ್ಲಿ ದಾಸ್ಯಭಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

೪ ಅ. ಶನಿಯ ಪೀಡಾಪರಿಹಾರಕ ದಾನಗಳು : ಬಂಗಾರ, ಕಬ್ಬಿಣ, ನೀಲಮಣಿ, ಉದ್ದು, ಎಮ್ಮೆ, ಎಣ್ಣೆ, ಕಪ್ಪು ಕಂಬಳಿ, ಕಪ್ಪು ಅಥವಾ ನೀಲಿ ಹೂವುಗಳು.

೪ ಆ. ಜಪಸಂಖ್ಯೆ : ೨೩ ಸಾವಿರ

೪ ಇ. ಪೂಜೆಗಾಗಿ ಶನಿಯ ಕಬ್ಬಿಣದ ಪ್ರತಿಮೆಯನ್ನು ಉಪಯೋಗಿಸಬೇಕು.

೪ ಈ. ಶನಿಯ ಪುರಾಣ (ಪೌರಾಣಿಕ) ಮಂತ್ರ

ನೀಲಾಞ್ಜನಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |
ಛಾಯಾಮಾರ್ತಣ್ಡಸಮ್ಭೂತಂ ತಂ ನಮಾಮಿ ಶನೈಶ್ಚರಮ್ ||

– ನವಗ್ರಹಸ್ತೋತ್ರ, ಶ್ಲೋಕ ೭

ಅರ್ಥ : ಶನಿದೇವನು ನೀಲಿ ಕಾಡಿಗೆಯಂತೆ ಭಾಸವಾಗುತ್ತಾನೆ. ಅವನು ಭಗವಾನ ಸೂರ್ಯನಾರಾಯಣನ ಪುತ್ರನಿದ್ದು ಸಾಕ್ಷಾತ್ ಯಮ ದೇವನ ಹಿರಿಯ ಸಹೋದರನಾಗಿದ್ದಾನೆ. ದೇವಿ ಛಾಯಾ ಹಾಗೂ ಭಗವಾನ ಸೂರ್ಯರಿಂದ ಉತ್ಪನ್ನ ಶನಿದೇವನಿಗೆ ನಾನು ನಮಸ್ಕರಿಸುತ್ತೇನೆ.

೪ ಉ. ಶನಿಯ ಕಬ್ಬಿಣದ ಪ್ರತಿಮೆಯ ಪೂಜೆ ಹಾಗೂ ದಾನ ಇವುಗಳ ಸಂಕಲ್ಪ : ‘ಮಮ ಜನ್ಮರಾಶೇಃ ಸಕಾಶಾತ್ ಅನಿಷ್ಟಸ್ಥಾನಸ್ಥಿತಶನೇಃ ಪೀಡಾಪರಿಹಾರಾರ್ಥಮ್ ಏಕಾದಶಸ್ಥಾನವತ್ ಶುಭಫಲಪ್ರಾಪ್ತ್ಯರ್ಥಂ ಲೋಹಪ್ರತಿಮಾಯಾಂ ಶನೈಶ್‌ಚರಪೂಜನಂ ತತ್ಪ್ರೀತಿಕರಂ (ಈ ವಸ್ತುವನ್ನು) (ಟಿಪ್ಪಣಿ) ದಾನಂ ಚ ಕರಿಷ್ಯೇ|

ಅರ್ಥ : ನನ್ನ ಜಾತಕದಲ್ಲಿ ಅನಿಷ್ಟ ಸ್ಥಾನದಲ್ಲಿರುವ ಶನಿಯ ಪೀಡೆಯು ದೂರವಾಗಬೇಕು ಹಾಗೂ ಅವನು ಹನ್ನೊಂದನೇ ಸ್ಥಾನದಲ್ಲಿರುವಂತೆ ಶುಭ ಫಲವನ್ನು ನೀಡುವವನಾಗಬೇಕು, ಇದಕ್ಕಾಗಿ ಕಬ್ಬಿಣದ ಶನಿಯ ಮೂರ್ತಿಯ ಪೂಜೆ ಹಾಗೂ ಶನಿದೇವರು ಪ್ರಸನ್ನನಾಗಬೇಕೆಂದು, ‘ಈ ವಸ್ತು’ವಿನ ದಾನ ಮಾಡುತ್ತೇನೆ.

ಟಿಪ್ಪಣಿ – ‘ಈ ವಸ್ತು’, ಈ ಸ್ಥಾನದಲ್ಲಿ ಯಾವ ವಸ್ತುವಿನ ದಾನ ಮಾಡುವುದಿದೆಯೋ, ಆ ವಸ್ತುವಿನ ಹೆಸರು ತೆಗೆದುಕೊಳ್ಳಬೇಕು.

ಧ್ಯಾನ

ಅಹೋ ಸೌರಾಷ್ಟ್ರಸಞ್ಜಾತ ಛಾಯಾಪುತ್ರ ಚತುರ್ಭುಜ |
ಕೃಷ್ಣವರ್ಣಾರ್ಕಗೋತ್ರೀಯ ಬಾಣಹಸ್ತ ಧನುರ್ಧರ ||
ತ್ರಿಶೂಲಿಶ್ಚ ಸಮಾಗಚ್ಛ ವರದೋ ಗೃಧ್ರವಾಹನ |
ಪ್ರಜಾಪತೇ ತು ಸಂಪೂಜ್ಯಃ ಸರೋಜೇ ಪಶ್ಚಿಮೇ ದಲೇ ||

ಅರ್ಥ : ಶನಿದೇವನು ಸೌರಾಷ್ಟ್ರದೇಶದಲ್ಲಿ ಅವತಾರ ಪಡೆದನು. ಅವನು ಸೂರ್ಯ ಹಾಗೂ ಛಾಯಾದೇವಿ ಇವರ ಪುತ್ರನಾಗಿರುವನು. ಅವನಿಗೆ ನಾಲ್ಕು ಕೈಗಳಿವೆ. ಅವನ ಬಣ್ಣ ಕಪ್ಪು ಇದೆ. ಅವನ ಒಂದು ಕೈಯಲ್ಲಿ ಧನುಷ್ಯ, ಒಂದು ಕೈಯಲ್ಲಿ ಬಾಣ ಹಾಗೂ ಒಂದು ಕೈಯಲ್ಲಿ ತ್ರಿಶೂಲವಿದೆ. ನಾಲ್ಕನೆ ಕೈ ಆಶೀರ್ವಾದ ನೀಡುವ ಕೈಯಾಗಿದೆ. ‘ರಣಹದ್ದು’ ಅವನ ವಾಹನವಾಗಿದೆ. ಅವನು ಎಲ್ಲ ಪ್ರಜೆಗಳ ಪಾಲನಕರ್ತಾ ಇರುವನು. ನವಗ್ರಹಗಳ ಕಮಲದಲ್ಲಿ ಅವನ ಸ್ಥಾಪನೆಯನ್ನು ಹಿಂದಿನ ಪಕಳೆಯ ಸ್ಥಳದಲ್ಲಿ ಮಾಡಲಾಗುತ್ತದೆ. ಇಂತಹ ಶನಿದೇವನ ಆರಾಧನೆಯನ್ನು ಮಾಡಬೇಕು.

೪ ಊ. ದಾನದ ಶ್ಲೋಕ

ಶನೈಶ್ಚರಪ್ರೀತಿಕರಂ ದಾನಂ ಪೀಡಾನಿವಾರಕಮ್ |
ಸರ್ವಾಪತ್ತಿವಿನಾಶಾಯ ದ್ವಿಜಾಗ್ರ್ಯಾಯ ದದಾಮ್ಯಹಮ್ ||

ಅರ್ಥ : ಶನಿದೇವನಿಗೆ ಪ್ರಿಯವಾದಂತಹ ದಾನವನ್ನು ಮಾಡಿದಾಗ ತೊಂದರೆಗಳ ಹಾಗೂ ಎಲ್ಲ ಸಂಕಟಗಳ ನಿವಾರಣೆಯಾಗುತ್ತದೆ. ಇಂತಹ ದಾನವನ್ನು ನಾನು ಶ್ರೇಷ್ಠನಾದಂತಹ ಬ್ರಾಹ್ಮಣನಿಗೆ ನೀಡುತ್ತಿದ್ದೇನೆ.

೫. ಏಳೂವರೆ ಶನಿ ಇರುವವರು ಮಾಡಬೇಕಾದ ಪರಿಹಾರೋಪಾಯ

ಅ. ಪ್ರತಿದಿನ ಶನಿಸ್ತೋತ್ರವನ್ನು ಪಠಿಸಿ
ಆ. ಶನಿ ಪ್ರೀತ್ಯರ್ಥ ಜಪ, ದಾನ ಮತ್ತು ಪೂಜೆಯನ್ನು ತಪ್ಪದೆ ಮಾಡಿ
ಇ. ಪೀಡೆಯ ಪರಿಹಾರಕ್ಕಾಗಿ ಶನಿವಾರದಂದು ಅಭ್ಯಂಗ ಸ್ನಾನ್ನ ಮಾಡಿ
ಈ. ಶನಿವಾರದಂದು ಶನಿಯ ದರ್ಶನ ಪಡೆದು ಉದ್ದು ಮತ್ತು ಉಪ್ಪನ್ನು ಶನಿಗೆ ಅರ್ಪಿಸಿ. ಎಣ್ಣೆಯ ಅಭಿಷೇಕವನ್ನು ಮಾಡಿ. ಕಪ್ಪು ಹೂವುಗಳನ್ನು ಅರ್ಪಿಸುವುದರಿಂದ ಪೀಡೆಯನ್ನು ಬಗೆಹರಿಸಬಹುದು. ಕಪ್ಪು ಹೂವುಗಳು ಸಿಗದಿದ್ದಲ್ಲಿ ನೀಲಿ ಬಣ್ಣದ (ಗೋಕರ್ಣ, ಕೃಷ್ಣಕಮಲ, ಆಸ್ಟರ್) ಇತ್ಯಾದಿ ಹೂವುಗಳನ್ನು ಅರ್ಪಿಸಬಹುದು.
ಉ. ಸಾಧ್ಯವಿದ್ದಲ್ಲಿ ಶನಿವಾರದಂದು ಸಂಜೆಯ ತನಕ ನಿರಾಹಾರವಾಗಿರಬೇಕು. ಇಲ್ಲದಿದ್ದರೆ ಒಪ್ಪೊತ್ತಿನ ಊಟ ಮಾಡಬಹುದು.
ಊ. ನೀಲಮಣಿಯ ಉಂಗುರವನ್ನು ಧರಿಸಬಹುದು.

(ಆಧಾರ: ದಾತೆ ಪಂಚಾಂಗ)

ಶನಿ ಸ್ತೋತ್ರ

ಕೋಣಸ್ಥ: ಪಿಙ್ಗಲೋ ಬಭ್ರು: ಕೃಷ್ಣೋ ರೌದ್ರೋಽನ್ತಕೋ ಯಮಃ ।
ಸೌರಿಃ ಶನೈಶ್‍ಚರೋ ಮನ್ದಃ ಪಿಪ್ಪಲಾದೇನ ಸಂಸ್ತುತಃ ॥

ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯ: ಪಠೇತ್ ।
ಶನೈಶ್‍ವರಕೃತಾ ಪೀಡಾ ನ ಕದಾಚಿತ್ ಭವಿಷ್ಯತಿ ॥

ಪಿಪ್ಪಲಾದ ಉವಾಚ । ನಮಸ್ತೇ ಕೋಣಸಂಸ್ಥಾಯ ಪಿಙ್ಗಲಾಯ ನಮೋಽಸ್ತುತೇ ।
ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತುತೇ ॥ ೧ ॥

ನಮಸ್ತೇ ರೌದ್ರದೇಹಾಯ ನಮಸ್ತೇ ಚಾನ್ತಕಾಯ ಚ ।
ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ ॥ ೨ ॥

ನಮಸ್ತೇ ಮನ್ದಸಂಜ್ಞಾಯ ಶನೈಶ್‍ಚರ ನಮೋಽಸ್ತುತೇ ।
ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ ॥ ೩ ॥

ಅರ್ಥ : ಪಿಪ್ಪಲಾದ ಎಂಬ ಹೆಸರಿನ ಋಷಿಗಳು ‘ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ’ ಈ ಹತ್ತು ಹೆಸರುಗಳಿಂದ ಶನಿದೇವನ ಸ್ತುತಿಯನ್ನು ಮಾಡಿದ್ದಾರೆ. ಈ ಹತ್ತು ಹೆಸರುಗಳನ್ನು ಬೆಳಗ್ಗೆ ಎದ್ದ ನಂತರ ಯಾರು ಹೇಳುವರೋ ಅವರಿಗೆ ಎಂದೂ ಶನಿಗ್ರಹದ ತೊಂದರೆಯಾಗಲಾರದು. ಪಿಪ್ಪಲಾದಋಷಿಗಳು ಹೇಳುತ್ತಾರೆ, ‘ಹೇ ಕೋನದಲ್ಲಿ ನಿಲ್ಲುವ ಕೋಣಸ್ಥನೇ, ಹೇ ಪಿಂಗಲ, ಹೇ ಬಭ್ರು, ಹೇ ಕೃಷ್ಣಾ, ಹೇ ರೌದ್ರ ದೇಹನೇ, ಹೇ ಅಂತಕನೇ, ಹೇ ಯಮ, ಹೇ ಸೌರೀ, ಹೇ ವಿಭೋ, ಹೇ ಮಂದ, ಹೇ ಶನಿದೇವ ನಾನು ನಿಮಗೆ ನಮಸ್ಕಾರ ಮಾಡುತ್ತೇನೆ. ನಾನು ದೀನನಾಗಿ ನಿಮಗೆ ಶರಣಾಗಿದ್ದೇನೆ. ನೀವು ನನ್ನ ಮೇಲೆ ಪ್ರಸನ್ನರಾಗಿ’.

ಈ ಸ್ತೋತ್ರವನ್ನು ನಿತ್ಯ ಪ್ರಾತಃಕಾಲದಲ್ಲಿ ಪಠಿಸಬೇಕು.

– ಸೌ. ಪ್ರಜಕ್ತಾ ಜೋಶಿ, ಜ್ಯೋತಿಷ ಫಲಿತ ವಿಶಾರದೆ, ಸನಾತನ ಆಶ್ರಮ, ಗೋವಾ.

Leave a Comment