ಸಾಧಕರೇ, ಸಾಧನೆಗಾಗಿ ಅನಾವಶ್ಯಕ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಮತ್ತು ಉತ್ತರ ನೀಡುವವರ ಸಮಯ ವ್ಯರ್ಥಗೊಳಿಸದಿರಿ !

೧. ಓರ್ವ ಸಾಧಕನು ಕೇಳಿದ ಪ್ರಶ್ನೆ

ಪ.ಪೂ. ಡಾಕ್ಟರಬಾಬಾ, ನನ್ನ ಆಬಾ (ಚಿಕ್ಕಪ್ಪ), ಶಿರಸಾಷ್ಟಾಂಗ ನಮಸ್ಕಾರಗಳು !

ಪ.ಪೂ. ಆಬಾ, ಹೀಗೆನಾದರೂ ಇರುತ್ತದೆಯೇ ? ಮೊನ್ನೆ ಓರ್ವ ಸಾಧಕಿಯು ತೀರಿಕೊಂಡರು. ಸುಮಾರು ೧೧.೩೦ ಗಂಟೆಗೆ ತೀರಿಕೊಂಡ ನಂತರ ಮಧ್ಯಾಹ್ನ ೧.೩೦ ಕ್ಕೆ ಆ ಸಾಧಕಿಯು ನನ್ನ ಬಳಿ ಬಂದಂತೆ ಅನಿಸಿತು. ಅವರೊಡನೆ ನನ್ನ ಸಂಭಾಷಣೆ ಆಯಿತು.

ಇಂತಹ ಪ್ರಸಂಗಗಳು ಈ ಹಿಂದೆಯೂ ಘಟಿಸಿರುವುದಾಗಿ ನನ್ನ ಗಮನಕ್ಕೆ ಬಂದಿತು. ಇದೊಂದು ವೇಳೆ ಸತ್ಯವಾಗಿದ್ದರೆ, ಹೀಗೆ ಘಟಿಸುವ ಹಿಂದಿನ ಕಾರ್ಯಕಾರಣಭಾವವಾದರೂ ಏನು ? ಇದರ ಶಾಸ್ತ್ರವೇನು ? – ಓರ್ವ ಸಾಧಕ

೨. ಎಲ್ಲರಿಗೂ ಯೋಗ್ಯವಾದ ಉತ್ತರ

ಸಾಧಕರೇ, ತಮ್ಮ ಸಾಧನೆಗಾಗಿ ಅನಾವಶ್ಯಕವಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಮಯ ವ್ಯರ್ಥ ಮಾಡುವುದಕ್ಕಿಂತ ಆ ಸಮಯವನ್ನು ಸಾಧನೆಯನ್ನು ಹೆಚ್ಚು ಮಾಡಲು ಉಪಯೋಗಿಸಿರಿ !
ಕೆಲವು ಸಾಧಕರ ಸಾಧನೆಯಲ್ಲಿ ಬರುವ ಒಂದು ಮುಖ್ಯ ಅಡಚಣೆ ಎಂದರೆ ಬುದ್ಧಿಯ ಅಡಚಣೆ ! ಅನೇಕ ಬಾರಿ ಸಾಧಕರು ತಮ್ಮ ಸಾಧನೆಗಾಗಿ ಅನಾವಶ್ಯಕವಿರುವ ಪ್ರಶ್ನೆಗಳ ಬಗ್ಗೆ ವಿಚಾರ ಮಾಡುತ್ತಾರೆ ಮತ್ತು ಅವುಗಳ ಉತ್ತರ ಪಡೆಯಲು ಪ್ರಯತ್ನಿಸುತ್ತಾರೆ. ಇದರ ಹಿಂದೆ ಜಿಜ್ಞಾಸೆಯಿದ್ದರೂ, ಅದು ತನ್ನ ಸಾಧನೆಗಾಗಿ ಉಪಯೋಗವಿರುವುದಿಲ್ಲ. ಇದರಿಂದಾಗಿ ‘ಪ್ರಶ್ನೆ ನಿರ್ಮಾಣ ಮಾಡುವುದು ಮತ್ತು ಅದಕ್ಕೆ ಉತ್ತರ ಹುಡುಕುವುದು’, ಇದರಿಂದ ಬುದ್ಧಿಗೆ ಆಸಕ್ತಿ ನಿರ್ಮಾಣವಾಗುತ್ತದೆ ಹಾಗೂ ಸಾಧಕರ ಸಾಧನೆಯಲ್ಲಿನ ತುಂಬಾ ಸಮಯವು ಇದರಲ್ಲಿ ವ್ಯರ್ಥವಾಗುತ್ತದೆ. ಆದ್ದರಿಂದ ಸಾಧಕರು ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿ ಸಮಯ ಕಳೆಯದೇ ಆ ಸಮಯವನ್ನು ಸಾಧನೆಗೆ ನೀಡಬೇಕು. ನಮ್ಮ ಸಾಧನೆಗಾಗಿ ಮತ್ತು ಸಾಧನೆಯಲ್ಲಿ ಮುಂದೆ ಮುಂದಿನ ಹಂತಕ್ಕೆ ಹೋಗಲು ಅಗತ್ಯವಿರುವುದನ್ನೆಲ್ಲ ಈಶ್ವರನು ಕೊಟ್ಟೆ ಕೊಡುತ್ತಾನೆ. ಆದ್ದರಿಂದ ಸಾಧಕರು ಮನಸ್ಸಿಗೆ ಅಥವಾ ಬುದ್ಧಿಗೆ ಹೊಳೆಯುವ ಪ್ರಶ್ನೆಗಳಲ್ಲಿ ಸಮಯ ಕಳೆಯಬಾರದು. ಬದಲಾಗಿ ಸಾಧನೆಯನ್ನು ಹೆಚ್ಚಿಸಲು ಸಮಯದ ಉಪಯೋಗ ಮಾಡಬೇಕು. ಸಾಧನೆಯಲ್ಲಿನ ಮಹತ್ವದ ಹಂತವೆಂದರೆ, ಮನೋಲಯ ಮತ್ತು ಬುದ್ಧಿಲಯ ಮಾಡುವುದು. ಸಾಧನೆಯಿಂದಾಗಿ ಮನೋಲಯ ಮತ್ತು ಬುದ್ಧಿಲಯವಾದ ಬಳಿಕ, ಅಂದರೆ ಪ್ರಗತಿಯಾದ ನಂತರ ಸಣ್ಣ ಸಣ್ಣ ಪ್ರಶ್ನೆಗಳ ಉತ್ತರಗಳು ತಮಗೆ ತಿಳಿಯುತ್ತವೆ ಮತ್ತು ಸಾಧಕರಿಗೆ ಈ ಪ್ರಶ್ನೋತ್ತರಗಳಲ್ಲಿ ಆಸಕ್ತಿ ಅನಿಸುವುದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ

Leave a Comment