ಸ್ವಭಾವದೋಷ ನಿರ್ಮೂಲನೆಯಿಂದಾಗುವ ಲಾಭಗಳು

ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಹತ್ವದ್ದಾಗಿದೆ

ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಮತ್ತು ಅಹಂ ಪ್ರಮಾಣ ಕಡಿಮೆಯಿರುತ್ತಿತ್ತು. ಆದ್ದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಆವಶ್ಯಕತೆಯಿರಲಿಲ್ಲ. ಆಗ ವಿವಿಧ ಯೋಗಮಾರ್ಗಗಳಿಂದ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು. ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಹೆಚ್ಚಿರುವುದರಿಂದ ಅವುಗಳನ್ನು ಮೊದಲು ನಿರ್ಮೂಲನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವ್ಯವಸ್ಥಿತವಾಗಿ ಸಾಧನೆಯಾಗುವುದಿಲ್ಲ.

ಸ್ವಭಾವದೋಷ ನಿರ್ಮೂಲನೆಯಿಂದಾಗುವ ಲಾಭಗಳು

ವ್ಯಾವಹಾರಿಕ ದೃಷ್ಟಿಯಲ್ಲಿ

ಶಾರೀರಿಕ : ಸ್ವಭಾವದೋಷಗಳಿಂದ ಆಹಾರ-ವಿಹಾರಗಳ ಅಯೋಗ್ಯ ಅಭ್ಯಾಸವಾಗಿ ವ್ಯಕ್ತಿಯ ಆರೋಗ್ಯವು ಹಾಳಾಗುತ್ತದೆ. ಸ್ವಭಾವದೋಷ ನಿರ್ಮೂಲನೆಯಿಂದ ಈ ಅಯೋಗ್ಯ ಅಭ್ಯಾಸಗಳು ಬದಲಾಗಿ ಆರೋಗ್ಯಸಂಪನ್ನ ಜೀವನವನ್ನು ಜೀವಿಸಬಹುದು. ಹಾಗೆಯೇ ಮಾನಸಿಕ ಒತ್ತಡಕ್ಕೆ ಕಾರಣವಾಗಿರುವ ಸ್ವಭಾವದೋಷಗಳು, ಉದಾ. ಚಿಂತೆ, ಭಯ, ಕೋಪ ಇತ್ಯಾದಿ ದೂರವಾಗುವುದರಿಂದ ಪಿತ್ತ, ರಕ್ತದೊತ್ತಡ, ದಮ್ಮು, ಹೃದಯವಿಕಾರ ಇತ್ಯಾದಿ ಮನಸ್ಸಿಗೆ ಸಂಬಂಧಿಸಿದ ರೋಗಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಮಾನಸಿಕ : ಸ್ವಭಾವದೋಷ ನಿರ್ಮೂಲನೆಯಿಂದ ಮಾನಸಿಕ ಸ್ತರದಲ್ಲಾಗುವ ಲಾಭಗಳು ಮುಂದಿನಂತಿವೆ.

ಮನೋರೋಗಗಳು ದೂರವಾಗುವುದು : ಸ್ವಭಾವದೋಷಗಳು ದೂರವಾಗುವುದರಿಂದ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ವಿವಿಧ ರೀತಿಯ ಮನೋರೋಗಗಳು ದೂರವಾಗಲು ಸಹಾಯವಾಗುತ್ತದೆ. ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗುವುದರಿಂದ ಸ್ವಭಾವದೋಷಗಳೊಂದಿಗೆ ಹೋರಾಡಿ ಸ್ಥಿರವಾಗಿರಲು ಅನಾವಶ್ಯಕವಾಗಿ ಖರ್ಚಾಗುವ ಮನಸ್ಸಿನ ಇಂಧನವು (ಶಕ್ತಿಯು) ಉಳಿಯುತ್ತದೆ. ಇದರಿಂದ ಮನಸ್ಸಿನ ಉತ್ಸಾಹವು ದೀರ್ಘಕಾಲದವರೆಗೆ ಉಳಿಯುತ್ತದೆ.

ವ್ಯಸನಾಧೀನತೆಯು ಕಡಿಮೆಯಾಗುತ್ತದೆ : ಮನಸ್ಸಿನ ದುರ್ಬಲತೆಯು ಕಡಿಮೆಯಾಗುವುದರಿಂದ ಅಭ್ಯಾಸಗಳು (ವ್ಯಸನಗಳು) ಕಡಿಮೆಯಾಗಲು ಸಹಾಯವಾಗುತ್ತದೆ.

ಅಂತರ್ಮುಖತೆ ಮತ್ತು ಅಂತರ್ನಿರೀಕ್ಷಣೆಯಲ್ಲಿ ಹೆಚ್ಚಳವಾಗುವುದು : ಸ್ವಭಾವದೋಷ ನಿರ್ಮೂಲನೆಯನ್ನು ಮಾಡುವಾಗ ತನ್ನ ಪ್ರತಿಯೊಂದು ಕೃತಿ, ಭಾವನೆ, ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ಕಡೆಗೆ ತುಂಬಾ ಸೂಕ್ಷ ವಾಗಿ ಗಮನವಿಡಬೇಕಾಗುತ್ತದೆ. ಇದರಿಂದ ಅಂತರ್ನಿರೀಕ್ಷಣೆ ಹೆಚ್ಚಾಗುತ್ತದೆ.

ಮನಸ್ಸಿನ ಉತ್ಸಾಹವು ಹೆಚ್ಚಾಗುವುದು : ನಿರರ್ಥಕ ಮತ್ತು ನಕಾರಾತ್ಮಕ ವಿಚಾರಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಕಾರಾತ್ಮಕ ವಿಚಾರಗಳಲ್ಲಿ ವೃದ್ಧಿಯಾಗಿ ಮನಸ್ಸಿನ ಉತ್ಸಾಹ ಹೆಚ್ಚಾಗುತ್ತದೆ.

ಮನಸ್ಸಿನ ಏಕಾಗ್ರತೆ ಹೆಚ್ಚಾಗುವುದು : ಚಿತ್ತದಲ್ಲಿರುವ ಕೇಂದ್ರಗಳಲ್ಲಿನ ಸಂಸ್ಕಾರಗಳು ಎಷ್ಟು ಕಡಿಮೆ ಇರುತ್ತವೆಯೋ, ಚಿತ್ತದಿಂದ ಬಾಹ್ಯಮನಸ್ಸಿನ ಕಡೆ ಬರುವ ಸಂವೇದನೆಗಳೂ ಅಷ್ಟೇ ಕಡಿಮೆಯಾಗುತ್ತವೆ. ಸ್ವಭಾವದೋಷ ನಿರ್ಮೂಲನೆಯಿಂದ ಅಂತರ್ಮನಸ್ಸಿನ ವಿವಿಧ ಕೇಂದ್ರಗಳಲ್ಲಿನ ಅಯೋಗ್ಯ ಸಂಸ್ಕಾರಗಳು ಕಡಿಮೆಯಾಗುತ್ತವೆ. ಹಾಗೆಯೇ ಹೊಸ ಅಯೋಗ್ಯ ಸಂಸ್ಕಾರಗಳು ನಿರ್ಮಾಣವಾಗುವುದಿಲ್ಲ. ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ.

ಮನೋಬಲವು ಹೆಚ್ಚಾಗುವುದು : ಕಠಿಣ ಪ್ರಸಂಗಗಳನ್ನು ಧೈರ್ಯದಿಂದ ಎದು ರಿಸಲು ಆಗುತ್ತದೆ.

ವ್ಯಕ್ತಿತ್ವ ವಿಕಸನ : ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ‘ಪ್ರಭಾವಿ ವ್ಯಕ್ತಿತ್ವ’ಕ್ಕೆ ಬಹಳ ಮಹತ್ವವಿದೆ. ವ್ಯಕ್ತಿತ್ವ ಉತ್ತಮವಾಗಿದ್ದಲ್ಲಿ ನಾವು ವಿವಿಧ ಕ್ಷೇತ್ರಗಳಲ್ಲಿ ಪ್ರಭಾವನ್ನು ಬೀರಬಹುದು. ಯಾವ ವ್ಯಕ್ತಿತ್ವದಲ್ಲಿ ಸ್ವಭಾವದೋಷಗಳು ಇರುವುದಿಲ್ಲವೋ ಮತ್ತು ಯಾವುದೇ ರೀತಿಯ ಒತ್ತಡವನ್ನು ಸಹಿಸುವ ಕ್ಷಮತೆಯು ಉತ್ತಮವಾಗಿರುತ್ತದೋ, ಆ ವ್ಯಕ್ತಿತ್ವಕ್ಕೆ ‘ಆದರ್ಶ ವ್ಯಕ್ತಿತ್ವ’ ಎಂದು ಹೇಳುತ್ತಾರೆ. ಸ್ವಭಾವದೋಷ ನಿರ್ಮೂಲನೆಯಿಂದ ಅಯೋಗ್ಯ ವರ್ತನೆಗೆ ಕಾರಣವಾಗಿರುವ ಸ್ವಭಾವದೋಷಗಳು ದೂರವಾಗುತ್ತವೆ ಹಾಗೂ ಸ್ವಭಾವದೋಷಗಳ ಸ್ಥಳದಲ್ಲಿ ಗುಣಗಳ ಸಂಸ್ಕಾರವಾಗುತ್ತದೆ ಮತ್ತು ವ್ಯಕ್ತಿಯ ವೃತ್ತಿಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಇದರಿಂದ ‘ಆದರ್ಶ ವ್ಯಕ್ತಿತ್ವ’ದ ವಿಕಾಸವಾಗಲು ಸಹಾಯವಾಗುತ್ತದೆ.

ಬೌದ್ಧಿಕ : ಸ್ವಭಾವದೋಷಗಳಿಂದ ಮನಸ್ಸಿನಲ್ಲಿ ಬರುವ ನಿರರ್ಥಕ ಮತ್ತು ನಕಾರಾತ್ಮಕ ವಿಚಾರಗಳು ಕಡಿಮೆಯಾಗಿ ಮನಸ್ಸಿನ ಏಕಾಗ್ರತೆಯು ಹೆಚ್ಚಾಗುವುದರಿಂದ ಅರಿತುಕೊಳ್ಳುವ ಮತ್ತು ಗ್ರಹಿಸುವ ಶಕ್ತಿಯು ಹೆಚ್ಚಾಗುತ್ತದೆ.

ಅ. ಸ್ವಭಾವದೋಷಗಳಿಂದ ಮನಸ್ಸಿನಲ್ಲಿ ಬರುವ ನಿರರ್ಥಕ ಮತ್ತು ನಕಾರಾತ್ಮಕ ವಿಚಾರಗಳು ಕಡಿಮೆಯಾಗಿ ಮನಸ್ಸಿನ ಏಕಾಗ್ರತೆಯು ಹೆಚ್ಚಾಗುವುದರಿಂದ ಅರಿತುಕೊಳ್ಳುವ ಮತ್ತು ಗ್ರಹಿಸುವ ಶಕ್ತಿಯು ಹೆಚ್ಚಾಗುತ್ತದೆ.

ಆ. ಯಾವುದೇ ಪ್ರಸಂಗದಲ್ಲಿ ಹೆಚ್ಚು ಯೋಗ್ಯ ಕೃತಿಯನ್ನು ನಿರ್ಧರಿಸುವುದು ವ್ಯಕ್ತಿಯ ನಿರ್ಣಯಕ್ಷಮತೆಯನ್ನು ಅವಲಂಬಿಸಿರುತ್ತದೆ. ಸ್ವಭಾವದೋಷಗಳನ್ನು ದೂರಗೊಳಿಸುವುದರಿಂದ ವ್ಯಕ್ತಿಯ ನಿರ್ಣಯಕ್ಷಮತೆ ಹೆಚ್ಚಾಗುತ್ತದೆ.

ಇ. ಯಾವುದೇ ಸಮಸ್ಯೆಯಿಂದ ಚಿಂತಿತನಾಗದೇ, ಅದರ ಮೇಲೆ ಸ್ವತಃ ಉಪಾಯವನ್ನು ಕಂಡುಕೊಳ್ಳುವ ಅಭ್ಯಾಸವಾಗಿ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಅವನು ಸ್ವಯಂಪೂರ್ಣದ ದಿಶೆಯಲ್ಲಿ ಮಾರ್ಗಕ್ರಮಣ ಮಾಡುತ್ತಾನೆ.

ಈ. ಸ್ವಭಾವದೋಷಗಳನ್ನು ಸ್ವೀಕರಿಸುವ ಅಭ್ಯಾಸವಾಗುವುದರಿಂದ ಅಂತರ್ನಿರೀಕ್ಷಣೆ ಹೆಚ್ಚಾಗುತ್ತದೆ. ತನ್ನ ಪ್ರತಿಯೊಂದು ಕೃತಿ ಮತ್ತು ಮನಸ್ಸಿನಲ್ಲಿನ ಪ್ರತಿಯೊಂದು ವಿಚಾರವನ್ನು ತಟಸ್ಥನಾಗಿ ಅಧ್ಯಯನ ಮಾಡುವ ಅಂತರ್‌ದೃಷ್ಟಿ ನಿರ್ಮಾಣವಾಗುತ್ತದೆ. ಇದರಿಂದ ಅಂತರ್ಮುಖತೆ ಮತ್ತು ಚಿಂತನೆ ಹೆಚ್ಚಾಗುತ್ತದೆ.

ಉ. ತನ್ನ ವ್ಯಕ್ತಿತ್ವದಲ್ಲಿನ ಪ್ರತಿಯೊಂದು ಅಂಗವನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಇದರಿಂದ ವೈಚಾರಿಕ ಪ್ರಗಲ್ಭತೆ ಹೆಚ್ಚುತ್ತದೆ.

ಕೌಟುಂಬಿಕ

ಸ್ವಭಾವದೋಷ ನಿರ್ಮೂಲನೆಯಿಂದ ಕೋಪಗೊಳ್ಳುವುದು, ಜಗಳವಾಡುವುದು, ಉದ್ಧಟತನ ಇತ್ಯಾದಿ ಸ್ವಭಾವದೋಷಗಳು, ಹಾಗೆಯೇ ಪ್ರತಿಕ್ರಿಯೆಗಳು ವ್ಯಕ್ತವಾಗುವುದು ಕಡಿಮೆಯಾಗುತ್ತವೆ. ಇದರಿಂದ ಕುಟುಂಬದವರ ಮನಸ್ಸಿನಲ್ಲಿ ಮೇಲೆ ಒತ್ತಡ ಬರುವುದಿಲ್ಲ. ಕುಟುಂಬದಲ್ಲಿನ ವ್ಯಕ್ತಿಗಳ ಪ್ರಕೃತಿಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದ ರಿಂದ ಕುಟುಂಬದಲ್ಲಿ ಪರಸ್ಪರರ ಹೊಂದಾಣಿಕೆ ಹೆಚ್ಚಾಗಿ ಕೌಟುಂಬಿಕ ಸುಖ-ಶಾಂತಿ ಹೆಚ್ಚಾಗುತ್ತದೆ

ಕಚೇರಿಗೆ ಸಂಬಂಧಿತ

ಕಾರ್ಯಕ್ಷಮತೆಯಲ್ಲಿ ವೃದ್ಧಿಯಾಗುವುದು : ಸ್ವಭಾವದೋಷ ನಿರ್ಮೂಲನೆಯಿಂದ ಈ ಅನಾವಶ್ಯಕ ಖರ್ಚಾಗುವ ಶಕ್ತಿಯು ಉಳಿದು ನಮ್ಮ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ, ಉದಾ. ಒಬ್ಬ ವ್ಯಕ್ತಿಯು ಆಲಸ್ಯದಿಂದಾಗಿ ಬೆಳಗ್ಗೆ ತಡಮಾಡಿ ಎದ್ದರೆ ಅವನಿಗೆ ಕಾರ್ಯಾಲಯಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ತುಂಬಾ ಗಡಿಬಿಡಿ ಮಾಡಬೇಕಾಗುತ್ತದೆ. ಇದರಿಂದ ಪ್ರತಿದಿನ ಅವನ ಮನಸ್ಸಿನ ಮೇಲೆ ಒತ್ತಡವುಂಟಾಗುತ್ತದೆ ಮತ್ತು ಒತ್ತಡ ಕಡಿಮೆಗೊಳಿಸಲು ಅವನ ಮನಸ್ಸಿನ ಶಕ್ತಿಯು ಖರ್ಚಾಗುತ್ತದೆ. ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನಿಸಿದಲ್ಲಿ ‘ಆಲಸ್ಯ’ ಎಂಬ ಸ್ವಭಾವದೋಷವು ದೂರವಾಗಿ ಅವನ ‘ತತ್ಪರತೆ’ಯು ಹೆಚ್ಚಾಗುತ್ತದೆ ಮತ್ತು ಅವನ ಮನಸ್ಸಿನ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಇದರಿಂದ ವ್ಯಕ್ತಿಯ ಕಾರ್ಯಕ್ಷಮತೆಯು ಶೇ. ೩೦ ರಷ್ಟು ವೃದ್ಧಿಯಾಗುತ್ತದೆ.

ಸಹೋದ್ಯೋಗಿಯೊಂದಿಗೆ ಸುಸಂವಾದ ಸಾಧಿಸಲು ಸಹಾಯವಾಗುವುದು : ಸ್ವಭಾವದೋಷ ನಿರ್ಮೂಲನೆಯಿಂದ ಸಹೋದ್ಯೋಗಿಗಳ ಜೊತೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ನೇತೃತ್ವಗುಣದಿಂದ ಕಚೇರಿಯಲ್ಲಿ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಯಶಸ್ಸು ಸಿಗುವುದು : ಯೋಗ್ಯ ನಿರ್ಣಯಕ್ಷಮತೆ ಮತ್ತು ಸಂಘಟನಾ ಕೌಶಲ್ಯಗಳು ವಿಕಾಸವಾಗುವುದರಿಂದ ವ್ಯಕ್ತಿಯಲ್ಲಿ ನೇತೃತ್ವಗುಣ ನಿರ್ಮಾಣವಾಗುತ್ತದೆ. ಇದರಿಂದ ಅವನು ಕಚೇರಿಯ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾನೆ. ಅಯೋಗ್ಯ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದ ಸ್ವಭಾವದೋಷಗಳು ದೂರವಾಗಿ ವ್ಯಕ್ತಿಯಲ್ಲಿ ಸಂಭಾಷಣೆಯ ಕೌಶಲ್ಯವು ವಿಕಾಸವಾಗಿ ಅವನಿಗೆ ವ್ಯಾವಹಾರಿಕ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.

ಆಧ್ಯಾತ್ಮಿಕ ದೃಷ್ಟಿಯಲ್ಲಿ

ಅ. ಶ್ರದ್ಧೆಯು ದೃಢವಾಗಿ ಸತತವಾಗಿ ಸಾಧನೆಯಾಗುವುದು

ಆ. ವಾಸನೆಯ ಬಗೆಗಿನ ವಿಚಾರಗಳು ಕಡಿಮೆಯಾಗುವುದು

ಇ. ಸಾಧಕತ್ವ ನಿರ್ಮಾಣವಾಗಿ ವೃದ್ಧಿಯಾಗುವುದು : ‘ಸಾಧಕತ್ವವೆಂದರೆ’ ಮುಮುಕ್ಷುತ್ವ, ಸ್ವಯಂಶಿಸ್ತು, ಅಂತರ್ಮುಖತೆ, ಪ್ರೇಮ, ಪರಸ್ಪರರಿಗೆ ಸಹಾಯ ಮಾಡುವ ವೃತ್ತಿ, ಕಲಿಯುವ ವೃತ್ತಿ, ಕ್ಷಾತ್ರವೃತ್ತಿ ಇತ್ಯಾದಿ ಗುಣಗಳಿರುವುದು ಮತ್ತು ಈಶ್ವರ ಅಥವಾ ಗುರುಗಳ ಬಗ್ಗೆ ಭಾವವಿರುವುದು ಮತ್ತು ಅಹಂ ಕಡಿಮೆಯಿರುವುದು ಆವಶ್ಯಕವಾಗಿದೆ.

ಈ. ಸಾಧನೆಯಲ್ಲಿ ಗುಣಾತ್ಮಕ ವೃದ್ಧಿಯಾಗುವುದು

ಉ. ಸಾತ್ತ್ವಿಕತೆಯಲ್ಲಿ ವೃದ್ಧಿಯಾಗುವುದು

ಊ. ಕ್ಷಾತ್ರವೃತ್ತಿ ನಿರ್ಮಾಣವಾಗುವುದು

ಎ. ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯಾಗುವುದು

ಏ. ಷಡ್ರಿಪುಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವುದು

ಐ. ಚಿತ್ತಶುದ್ಧಿಯಾಗುತ್ತದೆ

ಒ. ಕುಂಡಲಿನಿ ಜಾಗೃತವಾಗುತ್ತದೆ

ಓ. ಸಾಧನೆ ಮತ್ತು ಸ್ವಭಾವದೋಷ ನಿರ್ಮೂಲನೆಯಿಂದ ಸೂಕ್ಷ ಕರ್ಮೇಂದ್ರಿಯಗಳು ಜಾಗೃತವಾಗಿ ಸಾಧಕರಲ್ಲಿ ಕೆಟ್ಟ ಶಕ್ತಿಗಳೊಂದಿಗೆ ಹೋರಾಡುವ ಕ್ಷಮತೆಯು ಹೆಚ್ಚಾಗುತ್ತದೆ

ಔ. ಅಹಂ ನಿರ್ಮೂಲನೆಗಾಗಿ ಸಹಾಯವಾಗುವುದು

ಕ. ಸತತ ಭಾವಾವಸ್ಥೆಯಲ್ಲಿರುವುದು

ಖ. ಈಶ್ವರನಿಂದ ಪ್ರಕ್ಷೇಪಿಸುವ ಚೈತನ್ಯ ಮತ್ತು ಜ್ಞಾನವನ್ನು ಗ್ರಹಿಸುವ ಕ್ಷಮತೆಯು ಹೆಚ್ಚಾಗುವುದು

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ’ ಗ್ರಂಥ)

2 thoughts on “ಸ್ವಭಾವದೋಷ ನಿರ್ಮೂಲನೆಯಿಂದಾಗುವ ಲಾಭಗಳು”

 1. ಸ್ವಭಾವ ದೋಷ ಆದರೇನು ದಯವಿಟ್ಟು ತಿಳಿಸಿ ದಯವಿಟ್ಟು ತಿಳಿಸಿ

  Reply
  • ನಮಸ್ಕಾರ ಉಮಾಶಂಕರ ರವರೇ

   ನಾವು ಯಾವುದನ್ನು ಷಡ್ವೈರಿ ಎಂದು ಕರೆಯುತ್ತೇವೆಯೋ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಅವುಗಳು ನಮ್ಮಲ್ಲಿ ಸ್ವಭಾವದೋಷಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.sanatan.org/kannada/personality-development ಈ ಪುಟಕ್ಕೆ ಭೇಟಿ ನೀಡಿ.

   ಸನಾತನ ಸಂಸ್ಥೆ

   Reply

Leave a Comment