ಸಮಾವರ್ತನ

ಅ. ವ್ಯಾಖ್ಯೆ

ಬ್ರಹ್ಮಚರ್ಯವ್ರತವನ್ನು ತೆಗೆದುಕೊಂಡ ವಿದ್ಯಾರ್ಥಿಯು ಗುರುಕುಲದಿಂದ ಮನೆಗೆ ಹಿಂತಿರುಗಿ ಬರುವುದನ್ನು ‘ಸಮಾವರ್ತನ’ ಎನ್ನುತ್ತಾರೆ.

ಆ. ವಿಧಿ

ಈ ಸಮಯದಲ್ಲಿ ಮುಂದಿನ ವಿಷಯಗಳನ್ನು ಮಂತ್ರಪೂರ್ವಕವಾಗಿ ಮಾಡುತ್ತಾರೆ – ವಸ್ತ್ರಧಾರಣೆ, ಕಾಡಿಗೆಧಾರಣೆ, ಕುಂಡಲಧಾರಣೆ, ಪಾದರಕ್ಷೆಧಾರಣೆ, ಪುಷ್ಪಮಾಲಾಧಾರಣೆ, ಛತ್ರಧಾರಣೆ, ದಂಡಧಾರಣೆ, ಸುವರ್ಣಮಣಿಧಾರಣೆ. ಪುತ್ರನು ಗೃಹಸ್ಥಾಶ್ರಮಕ್ಕೆ ಹಿಂದಿರುಗಿ ಬರುವುದರಿಂದ ಗೃಹಸ್ಥಾಶ್ರಮದಲ್ಲಿ ಹೇಗಿರಬೇಕು ಎನ್ನುವುದನ್ನು ಈ ವಿಧಿಯ ಮೂಲಕ ಕಲಿಸುತ್ತಾರೆ.

ಇ. ಸ್ನಾತಕ

೧. ಅರ್ಥ : ಕೆಲವೊಮ್ಮೆ ವಿದ್ಯಾಧ್ಯಯನವಾದ ನಂತರ ಪುರುಷರ ವಿವಾಹವಾಗುವವರೆಗೆ ಕೆಲವೊಂದು ಸಮಯವು ಕಳೆಯುತ್ತದೆ. ಈ ನಡುವಿನ ಅವಿವಾಹಿತ ಅವಸ್ಥೆಯನ್ನು ಸ್ನಾತಕಾವಸ್ಥೆ ಎನ್ನುತ್ತಾರೆ. ಇದು ಬ್ರಹ್ಮಚರ್ಯಾವಸ್ಥೆ ಮತ್ತು ಗೃಹಸ್ಥಾವಸ್ಥೆ ಇವುಗಳ ನಡುವಿನ ಅವಸ್ಥೆಯಾಗಿದೆ. ಸಮಾವರ್ತನೆಯಿಂದ ವಿವಾಹವಾಗುವವರೆಗೆ ದ್ವಿಜನು ಸ್ನಾತಕನಾಗಿರುತ್ತಾನೆ.

೨. ವಿಧಗಳು : ಸ್ನಾತಕರಲ್ಲಿ ವಿದ್ಯಾಸ್ನಾತಕ, ವ್ರತಸ್ನಾತಕ ಮತ್ತು ವಿದ್ಯಾವ್ರತಸ್ನಾತಕ ಹೀಗೆ ಮೂರು ವಿಧಗಳಿವೆ.

ಬ್ರಹ್ಮಚರ್ಯಾಶ್ರಮದ ಹನ್ನೆರಡು ವರ್ಷಗಳು ಮುಗಿಯುವ ಮೊದಲೇ ವೇದಾಧ್ಯಯನ ಮುಗಿಸಿ ಸಮಾವರ್ತನ ಮಾಡುವವನು ವಿದ್ಯಾಸ್ನಾತಕ.

ಉಪನಯನ, ಸಾವಿತ್ರಿವ್ರತ ಮತ್ತು ವೇದವ್ರತಗಳ ಅನುಷ್ಠಾನ ಮಾಡಿ ವೇದಸಮಾಪ್ತಿ ಆಗುವ ಮೊದಲೇ ಸಮಾವರ್ತನ ಮಾಡುವವನು ವ್ರತಸ್ನಾತಕ.

ಬ್ರಹ್ಮಚರ್ಯದ ಸಂಪೂರ್ಣ ಅವಧಿಯನ್ನು ಮತ್ತು ವೇದಾಧ್ಯಯನವನ್ನು ಮುಗಿಸಿ ಸಮಾವರ್ತನ ಮಾಡುವವನು ವಿದ್ಯಾವ್ರತಸ್ನಾತಕ.

೩. ಸೂತಕ : ಉಪನಯನ ಆದಾಗಿನಿಂದ, ಬ್ರಹ್ಮಚರ್ಯಾಶ್ರಮದಲ್ಲಿ ನೆಂಟರು ಯಾರಾದರೂ ಮರಣ ಹೊಂದಿದ್ದರೆ ಸಮಾವರ್ತನವಾದ ನಂತರ ಮೂರು ದಿನ ಅದರ ಸೂತಕವನ್ನು ಪಾಲಿಸಬೇಕು. ಒಬ್ಬರಿಗಿಂತ ಹೆಚ್ಚು ಮಂದಿ ಮರಣ ಹೊಂದಿದ್ದರೂ ಮೂರು ದಿನ ಮಾತ್ರ ಸೂತಕವನ್ನು ಪಾಲಿಸಬೇಕು.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)

1 thought on “ಸಮಾವರ್ತನ”

Leave a Comment