ಮೇಧಾಜನನ

ಅ. ಮಹತ್ವ 

‘ಮೇಧಾ’ ಎಂದರೆ ಬುದ್ಧಿಯ ಸೂಕ್ಷ  ಅವಸ್ಥೆ. ‘ಯಾರ ಮೇಧಾವು ಜಾಗೃತವಾಗುತ್ತದೆಯೋ’, ಅವನಿಗೆ ಎಲ್ಲವೂ ಸಾಧ್ಯವಾಗುತ್ತದೆ. ತ್ರಿಸುಪರ್ಣದಲ್ಲಿ ಮೇಧಾಕ್ಕೆ ‘ಬ್ರಹ್ಮರಸ’ ಎಂದು ಹೇಳಲಾಗಿದೆ. ಈ ಅವಸ್ಥೆಯು ಪ್ರಾಪ್ತವಾದ ಮೇಲೆ ದ್ವೆ ತಭಾವ ಮತ್ತು ಭ್ರಮೆ ಇಲ್ಲವಾಗಿ ಜೀವನದ ಸತ್ಯವು ಅರಿವಾಗತೊಡಗುತ್ತದೆ. ಆದುದರಿಂದ ಈ ಸಂಸ್ಕಾರವು ಅವಶ್ಯಕವಾಗಿದೆ. ಈ ದೃಷ್ಟಿಯಿಂದಲೇ ಋಷಿಕುಲದಲ್ಲಿ ಶಿಕ್ಷಣವನ್ನು ನೀಡಿ ಅವನ ಮೇಧಾವನ್ನು ಜಾಗೃತಗೊಳಿಸಲಾಗುತ್ತಿತ್ತು. – ಪ.ಪೂ. ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಆ. ಮುಹೂರ್ತ 

ಉಪನಯನದ ನಂತರ ನಾಲ್ಕನೆಯ ದಿನ ಈ ವಿಧಿ ಮಾಡುತ್ತಾರೆ.

ಇ.  ಸಂಕಲ್ಪ 

‘ನನ್ನ ಕುಮಾರನ ಉಪನಯನದ ವ್ರತವು ಸಮಾಪ್ತಿಯಾಗಿ, ವೇದಗ್ರಹಣ ಮಾಡುವ ಸಾಮರ್ಥ್ಯವುಳ್ಳ ಬುದ್ಧಿಯು ಉತ್ಪನ್ನವಾಗಿ ಶ್ರೀ ಪರಮೇಶ್ವರನ ತೃಪ್ತಿಗಾಗಿ ಮೇಧಾಜನನ ಎನ್ನುವ ಕರ್ಮವನ್ನು ಮಾಡುತ್ತೇನೆ. ಮೇಧಾ ಎಂದು ಇನ್ನೊಂದು ಹೆಸರಿರುವ ಸಾವಿತ್ರಿಯ ಪೂಜೆಯನ್ನು ಮಾಡುತ್ತೇನೆ’ ಎಂದು ಸಂಕಲ್ಪ ಮಾಡಬೇಕು.

ಮುಂಜಿಯಾದ ನಂತರ ವಟುವು ಮುಂದಿನ ವಿಷಯಗಳಿಗಾಗಿ ಆಶೀರ್ವಾದ ಕೇಳುತ್ತಾನೆ.

೧. ಸ್ವಸ್ತಿ : ಸ್ವಸ್ತಿ ಎಂದರೆ ಕಲ್ಯಾಣ.

೨. ಶ್ರದ್ಧೆ : ಶ್ರದ್ಧೆಯ ಹೊರತು ಜ್ಞಾನವಿಲ್ಲ.

೩. ಮೇಧಾ : ಮೇಧಾ ಎಂದರೆ ಗ್ರಹಿಸುವ ಕ್ಷಮತೆ

೪. ಯಶಸ್ಸು

೫. ಪ್ರಜ್ಞೆ : ವಿಚಾರಶಕ್ತಿ

೬. ವಿದ್ಯೆ : ವಿದ್ಯೆಯಿಂದ ಜ್ಞಾನಪ್ರಾಪ್ತಿಯಾಗುತ್ತದೆ.

೭. ಬುದ್ಧಿ : ವಿದ್ಯೆಯನ್ನು ಮಂಡಿಸುವ ಕೌಶಲ್ಯ, ವಿವೇಚನಾ ಕೌಶಲ್ಯ.

ಈ. ವಿಧಿ

ಈ ವಿಧಿಯಲ್ಲಿ ಮುತ್ತುಗದ ಟೊಂಗೆಯಲ್ಲಿ ಮೇಧಾದೇವಿಯ ಆವಾಹನೆಯನ್ನು ಮಾಡಿ ಅವಳ ಪೂಜೆಯನ್ನು ಮಾಡುತ್ತಾರೆ. ಈ ವಿಧಿಯಲ್ಲಿ ‘ಸುಶ್ರವಂ’ ಈ ಮಂತ್ರವನ್ನು ಹೇಳುತ್ತಾ ಬ್ರಹ್ಮಚಾರಿಯು (ವಟುವು) (ಬ್ರಹ್ಮವೃಕ್ಷದ) ಮುತ್ತುಗದ ಟೊಂಗೆಯ ಸುತ್ತಲೂ ನೀರನ್ನು ಹಾಕುತ್ತಾ ಮೂರು ಬಾರಿ ಪ್ರದಕ್ಷಿಣೆಗಳನ್ನು ಹಾಕುವುದಿರುತ್ತದೆ. ಪ್ರದಕ್ಷಿಣೆಗಳ ನಂತರ ವಟುವು ಸ್ನಾನ ಮಾಡಿ ಬ್ರಹ್ಮವೃಕ್ಷದ ಸ್ಥಳದಲ್ಲಿ ಉಪನಯನ ವಿಧಿಯಲ್ಲಿ ಹೇಳಿದಂತೆ ಹೊಸ ಯಜ್ಞೋಪವೀತ (ಜನಿವಾರ), ಅಜಿನ (ಆಸನದ ಚರ್ಮ), ಮೇಖಲಾ (ನಡುಪಟ್ಟಿ), ದಂಡ ಮುಂತಾದವುಗಳನ್ನು ಮಂತ್ರಪೂರ್ವಕಧಾರಣೆ ಮಾಡಬೇಕು ಮತ್ತು ಹಳೆಯದನ್ನು ಬ್ರಹ್ಮವೃಕ್ಷದ ಸ್ಥಳದಲ್ಲಿ ವಿಸರ್ಜನೆ ಮಾಡಬೇಕು. ಅನಂತರ ಬ್ರಾಹ್ಮಣರು ಮೇಧಾಸೂಕ್ತವನ್ನು ಹೇಳಿ ಪ್ರಾರ್ಥನೆ ಮಾಡುತ್ತಾರೆ. ಮುತ್ತುಗದ (ಪಲಾಶ) ಟೊಂಗೆಯ ಸುತ್ತಲೂ ನೀರನ್ನು ಹಾಕುವ ವಿಧಿಯಿಂದ ‘ಪಲಾಶದಂಡ ಪೂಜೆ’ ಈ ಶಬ್ದವು ತಯಾರಾಗಿದೆ.

Leave a Comment