ಸೀಮಂತೋನ್ನಯನ

ಅ. ಉದ್ದೇಶ

‘ಸೀಮಂತೋನ್ನಯನ’ ಶಬ್ದವು ಸೀಮಂತ (ಎಂದರೆ ಬೈತಲೆಯ ರೇಖೆ) ಮತ್ತು ಉನ್ನಯನ (ಎಂದರೆ ಪಕ್ಕದಲ್ಲಿರುವ ಕೂದಲನ್ನು ಮೇಲೆ ಒಯ್ಯುವುದು) ಈ ಎರಡು ಶಬ್ದಗಳಿಂದ ರೂಪುಗೊಂಡಿದೆ. ಸೀಮಂತೋನ್ನಯನ ಎಂದರೆ ಪತ್ನಿಯ ತಲೆಯ ಮೇಲಿರುವ ಕೂದಲನ್ನು ಮೇಲೆ ತಳ್ಳಿ ಚೆನ್ನಾಗಿ ಬೈತಲೆ ತೆಗೆಯುವುದು. ಇದರಿಂದ ಅವಳ ಸಹಸ್ರಾರಚಕ್ರದಿಂದ ಒಳ್ಳೆಯ ಲಹರಿಗಳು ಶರೀರದಲ್ಲಿ ಪ್ರವೇಶಿಸಿ ಗರ್ಭದ ಬೆಳವಣಿಗೆಯಾಗಲು ಸಹಾಯವಾಗುತ್ತದೆ.

ಆ. ಮುಹೂರ್ತ 

ಪುಂಸವನ ವಿಧಿಯಲ್ಲಿರುವಂತೆಯೇ ಸೀಮಂತೋನ್ನಯನಕ್ಕೂ ಪುರುಷವಾಚಕ ನಕ್ಷತ್ರವಿರುವುದು ಅವಶ್ಯವಾಗಿದೆ. ಸಮಮಾಸದಲ್ಲಿ, ಸಾಧ್ಯವಾದರೆ ನಾಲ್ಕನೆಯ ತಿಂಗಳಿನಲ್ಲಿ ಈ ಸಂಸ್ಕಾರವನ್ನು ಮಾಡಿದರೆ ಅದು ನಿಜವಾದ ಅರ್ಥದಲ್ಲಿ ಹೆಸರಿಗೆ ತಕ್ಕಂತೆ ಆಗುತ್ತದೆ. ಈ ಸಂಸ್ಕಾರವನ್ನು ಗರ್ಭ ಶುದ್ಧಿಗಾಗಿ ಮಾಡುತ್ತಾರೆ. ಪುತ್ರನು ಜನಿಸುವುದು ಎಷ್ಟು ಮಹತ್ವದ ವಿಷಯವಾಗಿದೆಯೋ, ಆತನು ಅಂಗವೈಕಲ್ಯರಹಿತನಾಗಿ, ಆರೋಗ್ಯಶಾಲಿಯಾಗಿ ಹಾಗೂ ಬುದ್ಧಿವಂತನಾಗಿ ಹುಟ್ಟುವುದು ಅಷ್ಟೇ ಮಹತ್ವದ ವಿಷಯವಾಗಿದೆ. ಗರ್ಭಾವಸ್ಥೆಯಲ್ಲಿ ಬಾಲಕನ ಎಲ್ಲ ಅವಯವಗಳ ಸರ್ವಾಂಗೀಣ ವೃದ್ಧಿಯಾಗಬೇಕೆಂದು ಸೀಮಂತೋನ್ನಯನ ಮಾಡುವ ಆವಶ್ಯಕತೆಯಿರುತ್ತದೆ.

ಇ. ವಿಧಿ

ಔದುಂಬರ ಹಣ್ಣಿನ ಗೊಂಚಲು, ಮುಳ್ಳುಹಂದಿಯ ಮುಳ್ಳು (ಮುಳ್ಳುಹಂದಿ ಎಂಬ ಹೆಸರಿನ ಬಹುಪ್ರಸವ ಪ್ರಾಣಿಯ ಶರೀರದ ಮೇಲಿನ ಮುಳ್ಳು) ಮತ್ತು ಜಡೆಯಂತೆ ಹೆಣೆದಿರುವ ದರ್ಭೆಯ ಮೂರು ಚಿಗುರುಗಳು ಈ ವಸ್ತುಗಳಿಂದ ಪತಿಯು ಪತ್ನಿಯ ಸೀಮಂತದ (ಬೈತಲೆ) ಉನ್ನಯನ ಮಾಡಬೇಕು ಎಂದರೆ ಇಬ್ಭಾಗಿಸಬೇಕು. ಕೆಲವು ಕಡೆಗಳಲ್ಲಿ ಆಚಾರಕ್ಕನುಸಾರವಾಗಿ ಗೋಧಿಯ ತೆನೆಗಳ ಮತ್ತು ಔದುಂಬರದ ಫಲಗಳ ಮಾಲೆಯನ್ನು ಸ್ತ್ರೀಯ ಕೊರಳಿಗೆ ಹಾಕುತ್ತಾರೆ.

ಸೀಮಂತೋನ್ನಯನದಲ್ಲಿ ಮಂತ್ರಗಳಿಂದ ಅಭಿಮಂತ್ರಿತವಾಗಿರುವ ಯಜ್ಞಪ್ರಸಾದ, ಬಹಳಷ್ಟು ಹಣ್ಣುಗಳು ಬರುವ ಔದುಂಬರಾದಿ ಔಷಧೀಯ ಗಿಡ-ಮರಗಳ ಮೂಲಿಕೆಗಳು, ಸಾಳಿಂದರ ಎಂಬ ಹೆಸರಿನ (ಬಹಳ ಪ್ರಸವವಾಗುವ) ಮುಳ್ಳುಹಂದಿಯ ಮುಳ್ಳು ಇತ್ಯಾದಿ ವಸ್ತುಗಳಿಂದ ಪತಿಯ ಕೈಯಿಂದ ಪತ್ನಿಯ ಸೀಮಂತದ (ಬೈತಲೆಯ) ಉನ್ನಯನ (ಪೃಥಕ್ಕರಣ) ಇತ್ಯಾದಿ ಭಾವಪೂರ್ಣ ಸಂಸ್ಕಾರಗಳಿಂದ ಗರ್ಭವತಿಯಲ್ಲಿರುವ ಚೈತನ್ಯ ಶಕ್ತಿಯು ಗರ್ಭದ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಪ್ರೇರಣಾದಾಯಕವಾಗುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)

Leave a Comment