ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕದೇ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿರಿ !

‘ಯಾರಾದರೊಬ್ಬ ಆಧುನಿಕ ವೈದ್ಯನಿಗೆ (ಡಾಕ್ಟರರಿಗೆ) ಒಂದೇ ಔಷಧಿ ಗೊತ್ತಿದ್ದರೆ ಆ ಔಷಧಿಯಿಂದ ಎಲ್ಲ ರೋಗಿಗಳು ಗುಣಮುಖರಾಗುವುದಿಲ್ಲ; ಏಕೆಂದರೆ ಕೆಲವು ರೋಗಿಗಳಿಗೆ ಅವರ ಕಾಯಿಲೆಗಳಿಗನುಸಾರ ಬೇರೆ ಔಷಧಿಗಳ ಆವಶ್ಯಕತೆ ಇರುತ್ತದೆ. ಸಾಧನೆಯಲ್ಲಿಯೂ ಹೀಗೆಯೇ ಇರುತ್ತದೆ. ಎಲ್ಲರಿಗೂ ಒಂದೇ ಸಾಧನಾಮಾರ್ಗವು ಉಪಯುಕ್ತವಾಗಿರುವುದಿಲ್ಲ. ಪ್ರಾರಬ್ಧ, ಹಿಂದಿನ ಜನ್ಮದ ಸಾಧನೆ, ಸಾಧನೆ ಮಾಡುವ ಕ್ಷಮತೆ ಇವುಗಳಂತಹ ವಿವಿಧ ಅಂಶಗಳಿಗನುಸಾರ ಪ್ರತಿಯೊಬ್ಬರ ಸಾಧನಾಮಾರ್ಗವು ನಿಶ್ಚಿತವಾಗಿರುತ್ತದೆ. ಹೆಚ್ಚಿನ ಸಂಪ್ರದಾಯದವರಿಗೆ ಒಂದೇ ಸಾಧನಾಮಾರ್ಗವು ಗೊತ್ತಿರುವುದರಿಂದ ಅವರು ತಮ್ಮ ಬಳಿ ಬರುವ ಪ್ರತಿಯೊಬ್ಬನಿಗೆ ಒಂದೇ ಸಾಧನೆಯನ್ನು ಹೇಳುತ್ತಾರೆ. ಇದರಿಂದಾಗಿ ಕಾಲಾಂತರದಲ್ಲಿ ಆ ಸಾಧನೆಯ ಪದ್ಧತಿಯಿಂದ ಪರಿವರ್ತನೆಯಾಗದಿರುವುದರಿಂದ ಅನೇಕ ಜನರು ಸಾಧನೆ ಮಾಡುವುದನ್ನು ಬಿಟ್ಟುಬಿಡುತ್ತಾರೆ ಅಥವಾ ಅವರು ಹೇಳಿದ ಸಾಧನೆಯನ್ನು ಮಾಡುತ್ತಿದ್ದರೂ, ಅವರ ಸಾಧನೆಯಲ್ಲಿ ಪ್ರಗತಿ ಆಗುವುದಿಲ್ಲ. ಇದನ್ನು ತಡೆಗಟ್ಟಲು ಸರ್ವಸಂಪ್ರದಾಯದವರು ‘ಎಷ್ಟು ವ್ಯಕ್ತಿಗಳು, ಅಷ್ಟು ಪ್ರಕೃತಿ, ಅಷ್ಟೇ ಸಾಧನಾ ಮಾರ್ಗಗಳು’, ಈ ನಿಯಮವನ್ನು ಗಮನದಲ್ಲಿಡಬೇಕು. ಅವರ ಬಳಿ ಬರುವ ಜಿಜ್ಞಾಸುವಿಗೆ ಅವನಿಗೆ ಆವಶ್ಯಕವಾಗಿರುವ ಸಾಧನೆಯನ್ನು ಕಲಿಸಬೇಕು. ಸನಾತನದ ಸಾವಿರಾರು ಸಾಧಕರಲ್ಲಿ ಯಾರಿಬ್ಬರ ಸಾಧನೆಯು ಒಂದೇ ತರಹ ಇಲ್ಲದಿರುವುದಕ್ಕೆ ಇದು ಒಂದು ಕಾರಣವಾಗಿದೆ.

– (ಪರಾತ್ಪರ ಗುರು) ಡಾ. ಆಠವಲೆ (೭.೯.೨೦೨೧)

Leave a Comment