ಶ್ರೀಗಣೇಶಯಾಗದಲ್ಲಿನ ಅಭಿಮಂತ್ರಿತ ಜಲದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳು

ಶ್ರೀಗಣೇಶಯಾಗದಲ್ಲಿನ ಅಭಿಮಂತ್ರಿತ ಜಲದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳನ್ನು
ಅಧ್ಯಯನ ಮಾಡಲು ಯು.ಟಿ.ಎಸ್. (Universal Thermo Scanner) ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಜ್ಞಾನಿಕ ಪರೀಕ್ಷೆ !

ಯಜ್ಞವೆಂಬುದು ಸನಾತನ ವೈದಿಕ ಧರ್ಮದ ಒಂದು ಮಹತ್ವದ ಅಂಗವಾಗಿದೆ. ಧರ್ಮಗ್ರಂಥಗಳಲ್ಲಿ ರಾಜಸೂಯ, ಅಶ್ವಮೇಧ, ಪುತ್ರಕಾಮೇಷ್ಟಿ ಇತ್ಯಾದಿ ಯಜ್ಞಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯಿದೆ. ಧರ್ಮಗ್ರಂಥಗಳಲ್ಲಿ ವರ್ಣಿಸಿದ ಯಜ್ಞಗಳಿಂದ ಸಮಾಜಕ್ಕೆ ಲಾಭವಾಗಬೇಕೆಂದು ಕೆಲವು ಸಂತರು ಪ್ರಯತ್ನಿಸುತ್ತಿದ್ದಾರೆ. ಸಂತರ ನಿರಂತರ ಪ್ರಯತ್ನದಿಂದಲೇ ಯಜ್ಞಸಂಸ್ಕೃತಿ ಉಳಿದಿದೆ. ತಮಿಳುನಾಡಿನ ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನ ಮಾಡುವ ಪೂ. ಡಾ. ॐ ಉಲಗನಾಥನ್ ಇವರು ಸನಾತನ ಆಶ್ರಮದಲ್ಲಿ ಶ್ರೀ ಗಣೇಶಯಾಗ ಮಾಡಿ ಅದರ ಅಭಿಮಂತ್ರಿತ ನೀರನ್ನು ಆಶ್ರಮದಲ್ಲಿ ಎಲ್ಲ ಕಡೆ ಸಿಂಪಡಿಸಬೇಕೆಂದು ನಾಡಿಪಟ್ಟಿಯಲ್ಲಿ ಋಷಿಗಳ ಆಜ್ಞೆಯಿದೆಯೆಂದು ಹೇಳಿದರು. ಅದಕ್ಕನುಸಾರ ಧರ್ಮಪ್ರಸಾರದ ಕಾರ್ಯದಲ್ಲಿನ ಅಡಚಣೆಗಳು ದೂರವಾಗಿ ಸಾಧಕರ ರಕ್ಷಣೆಯಾಗಬೇಕೆಂದು ೧೨ ರಿಂದ ೧೪.೯.೨೦೧೬ ಈ ಅವಧಿಯಲ್ಲಿ ಗೋವಾದ ಸನಾತನ ಆಶ್ರಮದಲ್ಲಿ ಶ್ರೀ ಗಣೇಶಯಾಗ (ಯಜ್ಞ) ಮಾಡಲಾಯಿತು. ಅದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಯಾಗದ ಸಮಯದಲ್ಲಿ ಉಪಯೋಗಿಸಿದ ಕಲಶದಲ್ಲಿನ ನೀರನ್ನು ಯು.ಟಿ.ಎಸ್. (Universal Thermo Scanner) ಈ ಉಪಕರಣದ ಸಹಾಯದಿಂದ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಯ ನಿರೀಕ್ಷಣೆ ಮತ್ತು ಅದರ ವಿವರಣೆಯನ್ನು ಮುಂದೆ ನೀಡಲಾಗಿದೆ.

ವೈಜ್ಞಾನಿಕ ಪರೀಕ್ಷಣೆ ಮಾಡುವ ಉದ್ದೇಶ

ಯಾವುದೇ ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿಗಳಲ್ಲಿ) ಎಷ್ಟು ಶೇ. ಸಕಾರಾತ್ಮಕ ಸ್ಪಂದನ ಇದೆ, ಆ ಘಟಕ ಸಾತ್ತ್ವಿಕವಾಗಿದೆಯೋ ಇಲ್ಲವೋ ಅಥವಾ ಘಟಕ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ವಾಗಿದೆಯೋ ಇಲ್ಲವೋ ಎಂಬುದನ್ನು ಹೇಳಲು ಸೂಕ್ಷ ವಿಷಯ ತಿಳಿಯುವುದು ಆವಶ್ಯಕವಾಗಿದೆ. ಸಂತರಿಗೆ ಸೂಕ್ಷ್ಮದ ವಿಷಯಗಳು ತಿಳಿಯುವುದರಿಂದ ಅವರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು ನಿಖರವಾಗಿ ಕಂಡು ಹಿಡಿಯುತ್ತಾರೆ. ಭಕ್ತರು ಮತ್ತು ಸಾಧಕರು ಸಂತರು ಹೇಳಿದ್ದನ್ನು ‘ಶಬ್ದ ಪ್ರಮಾಣ’ವೆಂದು ತಿಳಿದು ಅದರ ಮೇಲೆ ಶ್ರದ್ಧೆ ಇಡುತ್ತಾರೆ; ಆದರೆ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ಮಾತ್ರ ‘ಶಬ್ದ ಪ್ರಮಾಣ’ ವಲ್ಲ, ಅವರಿಗೆ ‘ಪ್ರತ್ಯಕ್ಷ ಪ್ರಮಾಣ’ ಬೇಕಾಗುತ್ತದೆ. ಅವರಿಗೆ ಪ್ರತೀ ವಿಷಯ ವನ್ನೂ ವೈಜ್ಞಾನಿಕ ಪರೀಕ್ಷೆಯ ಮೂಲಕ, ಅಂದರೆ ಯಂತ್ರದಿಂದ ಸಿದ್ಧಪಡಿಸಿ ತೋರಿಸಿದರೆ ಮಾತ್ರ ಅದು ಸತ್ಯವೆಂದು ಅನಿಸುತ್ತದೆ.

ಪರೀಕ್ಷೆಯ ಸ್ವರೂಪ

ಈ ಪರೀಕ್ಷೆಯಲ್ಲಿ ಗೋವಾದ ಸನಾತನ ಆಶ್ರಮದಲ್ಲಿ ಸಾಮಾನ್ಯ ನೀರು ಮತ್ತು ಶ್ರೀ ಗಣೇಶಯಾಗದ ಅಭಿಮಂತ್ರಿತ ನೀರನ್ನು ಯು.ಟಿ.ಎಸ್. ಉಪಕರಣದಿಂದ ಪರೀಕ್ಷಿಸಲಾಯಿತು. ಇವೆರಡೂ ಪರೀಕ್ಷೆಗಳ ತುಲನಾತ್ಮಕ ಅಧ್ಯಯನ ಮಾಡಲಾಯಿತು.

ವೈಜ್ಞಾನಿಕ ಪರೀಕ್ಷೆಯಲ್ಲಿನ ಘಟಕಗಳ ಬಗೆಗಿನ ಮಾಹಿತಿ

ಅ. ಸನಾತನ ಆಶ್ರಮದ ಸಾಮಾನ್ಯ ನೀರು : ಇದು ಶ್ರೀ ಗಣೇಶಯಾಗ ಆರಂಭವಾಗುವ ಮೊದಲು ಗೋವಾದ ಸನಾತನ ಆಶ್ರಮದ ಸಾಮಾನ್ಯ ನೀರು.

ಆ. ಶ್ರೀ ಗಣೇಶಯಾಗದ ಅಭಿಮಂತ್ರಿತ ನೀರು : ಇದು ಶ್ರೀ ಗಣೇಶಯಾಗದ ವಿಧಿ ಪೂರ್ಣಗೊಂಡ ನಂತರ ಕಲಶದ ಜಲವಾಗಿದೆ. ಶ್ರೀ ಗಣೇಶಯಾಗದಲ್ಲಿ ತಾಮ್ರದ ಕಲಶದಲ್ಲಿ ಸನಾತನ ಆಶ್ರಮದ ಸಾಮಾನ್ಯ ನೀರನ್ನು ತೆಗೆದುಕೊಂಡು ಅದರಲ್ಲಿ ದೂರ್ವೆ, ಪಂಚರತ್ನ, ಪಂಚಗವ್ಯ, ಪಂಚಾಮೃತ, ಗಂಧ-ಪುಷ್ಪ ಮತ್ತು ಗಂಗಾಜಲವನ್ನು ಹಾಕಲಾಯಿತು. ಅನಂತರ ಕಲಶದ ಜಲದಲ್ಲಿ ವೈದಿಕ ಮಂತ್ರದ ಮೂಲಕ ವರುಣದೇವತೆಯನ್ನು ಆಹ್ವಾನಿಸಿ ಕಲಶದ ಹರಿವಾಣದಲ್ಲಿ ಶ್ರೀ ಗಣೇಶಯಾಗದ ಪ್ರಮುಖ ದೇವತೆಯಾಗಿರುವ ಶ್ರೀ ಗಣಪತಿಯನ್ನು ಸ್ಥಾಪಿಸಲಾಯಿತು.

ಯು.ಟಿ.ಎಸ್. ಮೂಲಕ ಪ್ರಭಾವಲಯವನ್ನು ಅಳೆಯುವುದು

ಅ. ಯು.ಟಿ.ಎಸ್. ಉಪಕರಣದ ಪರಿಚಯ : ಈ ಉಪಕರಣಕ್ಕೆ ‘ಔರಾ ಸ್ಕ್ಯಾನರ್’ ಎಂದು ಸಹ ಹೇಳುತ್ತಾರೆ. ಈ ಉಪಕರಣದ ಮೂಲಕ ಘಟಕದ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿ ಇತ್ಯಾದಿಗಳ) ಇಂಧನ ಮತ್ತು ಅದರ ಪ್ರಭಾವಳಿಯನ್ನು ಅಳೆಯಲು ಸಾಧ್ಯವಿದೆ. ಈ ಉಪಕರಣ ಭಾಗ್ಯನಗರದ ತೆಲಂಗಣಾದಲ್ಲಿನಮಾಜಿ ಪರಮಾಣು ವಿಜ್ಞಾನಿ ಡಾ. ಮನ್ನಮ ಮೂರ್ತಿ ಇವರು ೨೦೦೩ ರಲ್ಲಿ ವಿಕಸಿತಗೊಳಿಸಿದರು. ‘ವಾಸ್ತು, ವೈದ್ಯಕೀಯಶಾಸ್ತ್ರ, ಪಶುವೈದ್ಯ ಶಾಸ್ತ್ರ ಹಾಗೂ ವೈದಿಕ ಶಾಸ್ತ್ರ ಇತ್ಯಾದಿಗಳಲ್ಲಿ ಬರುವ ಅಡಚಣೆ ಗಳನ್ನು ಕಂಡುಹಿಡಿಯಲು ಈ ಉಪಕರಣವನ್ನು ಉಪ ಯೋಗಿಸಲು ಸಾಧ್ಯವಿದೆ’, ಎಂದು ಅವರು ಹೇಳುತ್ತಾರೆ.

ಆ. ಉಪಕರಣದ ಮೂಲಕ ಮಾಡುವ ಪರೀಕ್ಷೆಯ ಘಟಕಗಳು ಮತ್ತು ಅವುಗಳ ವಿವರಣೆ

ಆ ೧. ನಕಾರಾತ್ಮಕ ಶಕ್ತಿ : ಈ ಶಕ್ತಿ ಹಾನಿಕರವಾಗಿರುತ್ತದೆ. ಇದರಲ್ಲಿ ೨ ವಿಧ ಇವೆ.

ಆ ೧ ಅ. ಅತಿಗೆಂಪಿನ ಶಕ್ತಿ (ಇನ್ಫ್ರಾರೆಡ್ ) : ಇದರಲ್ಲಿ ಘಟಕಗಳಿಂದ ಪ್ರಕ್ಷೇಪಿತವಾಗುವ ‘ಇನ್ಫ್ರಾರೆಡ್ ’ ಶಕ್ತಿ ಯನ್ನು ಅಳೆಯುತ್ತಾರೆ.

ಆ ೧ ಆ. ನೇರಳಾತೀತ ಇಂಧನ (ಅಲ್ಟ್ರಾ ವೈಲೆಟ್): ಇದರಲ್ಲಿ ಘಟಕಗಳಿಂದ ಪ್ರಕ್ಷೇಪಿತವಾಗುವ ಅಲ್ಟ್ರಾ ವೈಲೆಟ್ ಶಕ್ತಿ ಅಳೆಯುತ್ತಾರೆ.

ಆ ೨. ಸಕಾರಾತ್ಮಕ ಶಕ್ತಿ : ಈ ಶಕ್ತಿ ಲಾಭದಾಯಕವಾಗಿದ್ದು ಅದನ್ನು ಅಳೆಯಲು ಸ್ಕ್ಯಾನರ್‌ನಲ್ಲಿ ಸಕಾರಾತ್ಮಕ ಶಕ್ತಿಯನ್ನು ತೋರಿಸುವ +Ve ಈ ನಮೂನೆ ಇಡುತ್ತಾರೆ.

ಇ. ‘ಯು.ಟಿ.ಎಸ್’ ಉಪಕರಣದ ಮೂಲಕ ಘಟಕದ ಪ್ರಭಾವಳಿಯನ್ನು ಅಳೆಯುವುದು : ಪ್ರಭಾವಳಿಯನ್ನು ಅಳೆಯಲು ಆ ಘಟಕದ ಅತಿ ಹೆಚ್ಚು ಸ್ಪಂದನ ಇರುವ ನಮೂನೆಯನ್ನು ಉಪಯೋಗಿಸುತ್ತಾರೆ, ಉದಾ. ವ್ಯಕ್ತಿಗೆ ಸಂಬಂಧಿಸಿ ಆತನ ಲಾಲಾರಸ ಅಥವಾ ಆತನ ಛಾಯಾಚಿತ್ರ, ವನಸ್ಪತಿಗೆ ಸಂಬಂಧಿಸಿ ಅದರ ಎಲೆ, ಪ್ರಾಣಿ ಗಳಿಗೆ ಸಂಬಂಧಿಸಿ ಅದರ ಕೂದಲು, ವಾಸ್ತುವಿಗೆ ಸಂಬಂಧಿಸಿ ಅಲ್ಲಿನ ಮಣ್ಣು ಮತ್ತು ದೇವತೆಯ ಮೂರ್ತಿಗೆ ಸಂಬಂಧಿಸಿ ಮೂರ್ತಿಗೆ ಹಚ್ಚಿದ ಚಂದನ, ಗಂಧ, ಸಿಂಧೂರ ಇತ್ಯಾದಿ.

ಈ. ಯು.ಟಿ.ಎಸ್. ಉಪಕರಣದ ಮೂಲಕ ಮಾಡುವ ಪರೀಕ್ಷೆಯ ಪದ್ಧತಿ : ಪರೀಕ್ಷೆಯ ವಸ್ತುವಿನಲ್ಲಿ ಅನುಕ್ರಮವಾಗಿ ಇನ್ಫ್ರಾರೆಡ್ ಶಕ್ತಿ, ಅಲ್ಟ್ರಾವೈಲೆಟ್ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಅಳೆಯು ತ್ತಾರೆ. ಅದನ್ನು ಅಳೆಯಲು ಬೇಕಾಗುವ ಮಾದರಿಯನ್ನು ಯು.ಟಿ.ಎಸ್. ಸ್ಕ್ಯಾನರ್‌ನ ಜೊತೆಗೆ ನೀಡಲಾಗಿರುತ್ತದೆ. ಈ ಮೇಲಿನ ಮೂರು ಪರೀಕ್ಷೆಯ ನಂತರ ವಸ್ತುವಿನ ಪ್ರಭಾವಲಯವನ್ನು ಅಳೆಯುತ್ತಾರೆ ಹಾಗೂ ಅದಕ್ಕಾಗಿ ಅಂಶ ೪ ಆ ೩ ರಲ್ಲಿ ನೀಡಿದ ಮಾದರಿಯನ್ನು ಉಪಯೋಗಿಸಲಾಗುತ್ತದೆ. ವಸ್ತುವಿನ ಅಥವಾ ವಾಸ್ತುವಿನ ಇನ್ಫ್ರಾರೆಡ್ ಶಕ್ತಿಯನ್ನು ಅಳೆಯಲು ಯು.ಟಿ.ಎಸ್. ಸ್ಕ್ಯಾನರ್‌ನಲ್ಲಿ ಮೊದಲು ಇನ್ಫ್ರಾರೆಡ್ ಶಕ್ತಿಯನ್ನು ಅಳೆಯಲು ಬೇಕಾಗುವ ಮಾದರಿಯನ್ನು ಇಡುತ್ತಾರೆ. ಅನಂತರ ಪರೀಕ್ಷಿಸುವ ವ್ಯಕ್ತಿ ವಿಶಿಷ್ಟ ಪದ್ಧತಿಯಲ್ಲಿ ಸ್ಕ್ಯಾನರ್ ಕೈಯಲ್ಲಿ ಹಿಡಿದುಕೊಂಡು ಯಾವ ವಸ್ತುವನ್ನು ಪರೀಕ್ಷಿಸಲಿಕ್ಕಿದೆಯೋ, ಆ ವಸ್ತುವಿನ ಎದುರಿಗೆ ಸುಮಾರು ಒಂದು ಅಡಿ ದೂರದಲ್ಲಿ ನಿಂತುಕೊಳ್ಳುತ್ತಾರೆ. ಆಗ ಸ್ಕ್ಯಾನರ್‌ನ ಎರಡು ಭುಜಗಳಲ್ಲಿ ಆಗುವ ಕೋನವು ಆ ವಸ್ತುವಿನಲ್ಲಿನ ಇನ್ಫ್ರಾರೆಡ್ ಶಕ್ತಿಯ ಪ್ರಮಾಣವನ್ನು ತೋರಿಸುತ್ತದೆ. ಉದಾ. ಸ್ಕ್ಯಾನರ್‌ನ ಎರಡು ಭುಜ ೧೮೦ ಅಂಶದ ಕೋನದಲ್ಲಿ ತೆರೆದರೆ ಆ ವಸ್ತುವಿನಲ್ಲಿ ಇನ್ಫ್ರಾರೆಡ್ ಶಕ್ತಿಯು ಸಂಪೂರ್ಣ ಇದೆ ಹಾಗೂ ಸ್ಕ್ಯಾನರ್‌ನ ಭುಜವು ಸ್ವಲ್ಪವೂ ತೆರೆಯದಿದ್ದರೆ (ಅಂದರೆ ೦ ಅಂಶದ ಕೋನ) ಆ ವಸ್ತುವಿನಲ್ಲಿ ಇನ್ಫ್ರಾರೆಡ್ ಶಕ್ತಿಯು ಸ್ವಲ್ಪವೂ ಇಲ್ಲದಿರುವುದು ಅರಿವಾಗುತ್ತದೆ. ಸ್ಕ್ಯಾನರ್‌ನ ಭುಜವು ೧೮೦ ಅಂಶದ ಕೋನದಲ್ಲಿ ತೆರೆದರೆ ಭುಜಗಳ ಈ ಕೋನವು ಆ ವಸ್ತುವಿನಿಂದ ಎಷ್ಟು ದೂರದ ವರೆಗೆ ಉಳಿಯುತ್ತದೆ ?, ಎಂಬುದನ್ನು ಅಳೆಯುತ್ತಾರೆ. ಅಳೆಯುವ ಈ ಅಂತರ, ಅಂದರೆ ಆ ವಸ್ತುವಿನ ಇನ್ಫ್ರಾರೆಡ್ ಶಕ್ತಿಯ ಪ್ರಭಾವಲಯ ಆಗಿರುತ್ತದೆ. ಸ್ಕ್ಯಾನರ್‌ನ ಭುಜ ೧೮೦ ಅಂಶಕ್ಕಿಂತ ಕಡಿಮೆ ಅಂಶದ ಕೋನದಲ್ಲಿ ತೆರೆದರೆ ಅದರ ಅರ್ಥ ಆ ವಸ್ತು ವಿನ ಸುತ್ತಲೂ ಇನ್ಫ್ರಾರೆಡ್ ಶಕ್ತಿಯ ಪ್ರಭಾವಲಯ ಇಲ್ಲ, ಎಂದಾಗುತ್ತದೆ. ಇದೇ ರೀತಿ ಅನುಕ್ರಮವಾಗಿ ಅಲ್ಟ್ರಾವೈಲೆಟ್ ಶಕ್ತಿ, ಸಕಾರಾತ್ಮಕ ಶಕ್ತಿ ಮತ್ತು ಆ ವಸ್ತುವಿನಲ್ಲಿನ ವಿಶಿಷ್ಟ ಸ್ಪಂದನಗಳ ಪ್ರಭಾವಲಯವನ್ನು ಅಳೆಯುತ್ತಾರೆ.

ಪರೀಕ್ಷೆಯಲ್ಲಿ ಸಮಾನತೆ ಬರುವ ಸಲುವಾಗಿ ತೆಗೆದುಕೊಂಡ ಜಾಗರೂಕತೆ

ಅ. ಉಪಕರಣವನ್ನು ಉಪಯೋಗಿಸುವ ವ್ಯಕ್ತಿ ಆಧ್ಯಾತ್ಮಿಕ ತೊಂದರೆ (ನಕಾರಾತ್ಮಕ ಸ್ಪಂದನ) ಇಲ್ಲದ ವ್ಯಕ್ತಿಯಾಗಿದ್ದರು.

ಆ. ಉಪಕರಣವನ್ನು ಉಪಯೋಗಿಸುವ ವ್ಯಕ್ತಿತೊಟ್ಟ ವಸ್ತ್ರದ ಬಣ್ಣದಿಂದ ಪರೀಕ್ಷೆಯ ಮೇಲೆ ಪರಿಣಾಮವಾಗಬಾರದು ಎಂದು ಆ ವ್ಯಕ್ತಿ ಬಿಳಿ ವಸ್ತ್ರವನ್ನು ಧರಿಸಿದ್ದರು.

ಯು.ಟಿ.ಎಸ್. (Universal Thermo Scanner) ಉಪಕರಣದ ಮೂಲಕ
೧೩.೯.೨೦೧೬ ರಂದು ಮಾಡಿದ ನಿರೀಕ್ಷಣೆ, ಅದರ ವಿವೇಚನೆ ಮತ್ತು ನಿಷ್ಕರ್ಷ

ಟಿಪ್ಪಣಿ : ಸ್ಕ್ಯಾನರ್ ೧೮೦ ಅಂಶದ ಕೋನದಲ್ಲಿ ತೆರೆದರೆ ಮಾತ್ರ ಆ ಘಟಕದ ಪ್ರಭಾವಳಿಯನ್ನು ಅಳೆಯಲು ಸಾಧ್ಯವಾಗುತ್ತದೆ. ಅದಕ್ಕಿಂದ ಕಡಿಮೆ ಅಂಶದ ಕೋನದಲ್ಲಿ ಸ್ಕ್ಯಾನರ್ ತೆರೆದರೆ, ಅದರ ಅರ್ಥ ‘ಆ ಘಟಕದ ಸುತ್ತಮುತ್ತ ಪ್ರಭಾವಳಿ ಇಲ್ಲ’, ಎಂದಾಗುತ್ತದೆ.

ಅ. ಕೋಷ್ಟಕದಲ್ಲಿ ನಕಾರಾತ್ಮಕ ಶಕ್ತಿಯ ವಿಷಯದ ನಿರೀಕ್ಷಣೆಯ ವಿವೇಚನೆ

ನಕಾರಾತ್ಮಕ ಶಕ್ತಿ ಕಾಣಿಸದಿರುವುದು : ಸಾಮಾನ್ಯ ನೀರಿನಲ್ಲಿ ನಕಾರಾತ್ಮಕ ಶಕ್ತಿ ಇರಬಹುದು; ಆದರೆ ಪರೀಕ್ಷೆಯಲ್ಲಿ ನೀರಿನ ಎರಡೂ ಮಾದರಿಗಳಲ್ಲಿ ನಕಾರಾತ್ಮಕ ಶಕ್ತಿ ಸ್ವಲ್ಪವೂ ಕಂಡುಬರಲಿಲ್ಲ.

ಆ. ಕೋಷ್ಟಕದಲ್ಲಿ ಸಕಾರಾತ್ಮಕ ಶಕ್ತಿಯ ವಿಷಯದಲ್ಲಿನ ನಿರೀಕ್ಷಣೆಯ ವಿವೇಚನೆ

ಆ ೧. ನೀರಿನಲ್ಲಿ ಸಕಾರಾತ್ಮಕ ಶಕ್ತಿ ಕಾಣಿಸುವುದು : ಎಲ್ಲ ಕಡೆಗಳ ನೀರಿನಲ್ಲಿ ಸಕಾರಾತ್ಮಕ ಶಕ್ತಿ ಇದ್ದೇ ಇರುತ್ತದೆ ಎಂದಿಲ್ಲ; ಆದರೆ ಪರೀಕ್ಷೆಯ ನೀರಿನ ಎರಡೂ ಮಾದರಿಗಳಲ್ಲಿ ಸಂಪೂರ್ಣ ಸಕಾರಾತ್ಮಕ ಶಕ್ತಿ ಇದೆ. ಸನಾತನ ಆಶ್ರಮದ ನೀರಿನ ಸಕಾರಾತ್ಮಕ ಶಕ್ತಿ ಪ್ರಭಾವಲಯ ೮೮ ಸೆಂ.ಮೀ. ಹಾಗೂ ಶ್ರೀ ಗಣೇಶಯಾಗದಲ್ಲಿನ ಅಭಿಮಂತ್ರಿತ ನೀರಿನ ಪ್ರಭಾವಲಯವು ೩.೧೧ ಮೀಟರ್‌ನಷ್ಟಿದೆ. (ಇದರ ಕಾರಣವು ಅಂಶ ೬ ಇ ೧ ರಲ್ಲಿ ನೀಡಿದ ವಿವೇಚನೆಯಂತಿದೆ.)

ಇ. ಕೋಷ್ಟಕದಲ್ಲಿನ ವಸ್ತುವಿನ ಪ್ರಭಾವಲಯಕ್ಕೆ ಸಂಬಂಧಿಸಿದ ನಿರೀಕ್ಷಣೆಯ ವಿವೇಚನೆ

ಇ ೧. ಸನಾತನ ಆಶ್ರಮದ ನೀರಿನ ಪ್ರಭಾವಲಯವೇ ಹೆಚ್ಚು ಪ್ರಮಾಣದಲ್ಲಿದ್ದರೆ, ಶ್ರೀ ಗಣೇಶಯಾಗದಲ್ಲಿನ ಕಲಶದಲ್ಲಿನ ನೀರಿನ ಪ್ರಭಾವಲಯವು ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿರುವುದು : ಸಾಮಾನ್ಯ ವ್ಯಕ್ತಿಯ ಪ್ರಭಾವಲಯವು ಸುಮಾರು ೧ ಮೀಟರ್‌ನಷ್ಟು ಇರುತ್ತದೆ. ಸನಾತನ ಆಶ್ರಮದಲ್ಲಿ ನೀರಿನ ಪ್ರಭಾವಲಯವು ೨.೬೨ ಮೀಟರ್, ಅಂದರೆ ಸಾಮಾನ್ಯ ವ್ಯಕ್ತಿಯ ಪ್ರಭಾವಲಯದ ತುಲನೆಯಲ್ಲಿ ಬಹಳ ಹೆಚ್ಚು ಪ್ರಮಾಣದಲ್ಲಿದೆ. ಇದು ಸನಾತನ ಆಶ್ರಮದ ಸಾತ್ತ್ವಿಕತೆಯ ಪರಿಣಾಮವಾಗಿದೆ. ಸನಾತನ ಆಶ್ರಮದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ, ಸಂತರು ಮತ್ತು ಸಾಧಕರ ವಾಸ, ಆಶ್ರಮದಿಂದಾಗುವ ಧರ್ಮ ಪ್ರಸಾರದ ಕಾರ್ಯ ಇತ್ಯಾದಿಗಳಿಂದ ಸನಾತನ ಆಶ್ರಮದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾತ್ತ್ವಿಕತೆ ಇದೆ, ಎಂದು ಅಧ್ಯಾತ್ಮದ ಪ್ರಭುತ್ವವಿರುವ ವ್ಯಕ್ತಿಗಳು ಹೇಳಿದ್ದಾರೆ.

ಸಾತ್ತ್ವಿಕವಾದಂತಹ ತಾಮ್ರದ ಕಲಶದಲ್ಲಿ ಸನಾತನ ಆಶ್ರಮದಲ್ಲಿ ಮೊದಲೇ ಸಾತ್ತ್ವಿಕವಾಗಿದ್ದ ನೀರನ್ನು ತೆಗೆದುಕೊಂಡು ಅದರಲ್ಲಿ ದೂರ್ವೆ, ಪಂಚರತ್ನ ಮುಂತಾದ ಸಾತ್ತ್ವಿಕ ಘಟಕಗಳನ್ನು ಮಿಶ್ರಣ ಮಾಡಿದರು. ಅನಂತರ ಆ ನೀರಿನಲ್ಲಿ ಸಾಧಕ-ಪುರೋಹಿತರು ಭಾವಪೂರ್ಣವಾಗಿ ವೈದಿಕ ಮಂತ್ರಗಳನ್ನು ಪಠಿಸಿ ವರುಣದೇವತೆಯನ್ನು ಆಹ್ವಾನಿಸಲಾಯಿತು. ಅನಂತರ ಆ ಕಲಶದ ಮೇಲೆ ಶ್ರೀ ಗಣೇಶನ ಪ್ರತಿಮೆಯನ್ನು ಸ್ಥಾಪನೆ ಮಾಡಿರುವುದರಿಂದ ಕಲಶದಲ್ಲಿನ ನೀರಿನ ಸಾತ್ತ್ವಿಕತೆ ಬಹಳಷ್ಟು ಹೆಚ್ಚಾಯಿತು. ಆದ್ದರಿಂದ ಕಲಶದಲ್ಲಿನ ಅಭಿಮಂತ್ರಿತ ನೀರಿನ ಪ್ರಭಾವಲಯವು ೫.೩೫ ಮೀಟರ್, ಅಂದರೆ ಬಹಳ ಹೆಚ್ಚು ಪ್ರಮಾಣದಲ್ಲಿದೆ.

ಯಜ್ಞ – ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ವಿವಿಧ ಕೃತಿಗಳು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿರುತ್ತವೆ, ಎಂಬುದು ಈ ಪರೀಕ್ಷೆಯಿಂದ ಅರಿವಾಗುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೧೬.೯.೨೦೧೬)
ವಿ-ಅಂಚೆ : [email protected]

Leave a Comment