ಸಾತ್ತ್ವಿಕ ಶ್ರೀ ಗಣೇಶಮೂರ್ತಿಯಿಂದ ಉಪಾಸಕನಿಗೆ ಆಗುವ ಲಾಭದ ಬಗ್ಗೆ ನಡೆದ ವೈಜ್ಞಾನಿಕ ಪರೀಕ್ಷಣೆ

‘ತಾಂತ್ರಿಕ ಗಣೇಶಮೂರ್ತಿ’ ಮತ್ತು ‘ಸಾಮಾನ್ಯ ಗಣೇಶಮೂರ್ತಿ’ ಇವುಗಳ ತುಲನೆಯಲ್ಲಿ ‘ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿ’ಯು ಉಪಾಸಕನಿಗೆ ಆಧ್ಯಾತ್ಮಿಕದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿರುವುದನ್ನು ದೃಢಪಡಿಸುವ ‘ಪಿಪ್’ (ಪಾಲಿಕಾಂಟ್ರಾಸ್ಟ್ ಇಂಟರ್‌ಫಿಯರೆನ್ಸ್ ಫೋಟೋಗ್ರಫಿ) ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಪರೀಕ್ಷಣೆಯ ಉದ್ದೇಶ

‘ತಾಂತ್ರಿಕ ಗಣೇಶಮೂರ್ತಿ, ಸಾಮಾನ್ಯ ಗಣೇಶಮೂರ್ತಿ ಮತ್ತು ಸನಾತನವು ನಿರ್ಮಿಸಿದ ಬಣ್ಣದ ಗಣೇಶಮೂರ್ತಿ ಇವುಗಳಿಂದ ಅವುಗಳ ಸುತ್ತಲಿನ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ಎಂದು ವೈಜ್ಞಾನಿಕದೃಷ್ಟಿಯಿಂದ ಅಧ್ಯಯನ ಮಾಡುವುದು’ ಈ ಪರೀಕ್ಷಣೆಯ ಉದ್ದೇಶವಾಗಿತ್ತು. ಈ ಪರೀಕ್ಷಣೆಗಾಗಿ ‘ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರ್‌ಫಿಯರೆನ್ಸ್ ಫೋಟೊಗ್ರಫಿ)’ ತಂತ್ರಜ್ಞಾನವನ್ನು ಬಳಸಲಾಗಿತ್ತು. ಈ ತಂತ್ರಜ್ಞಾನದ ಸಹಾಯದಿಂದ ವಸ್ತು ಮತ್ತು ವ್ಯಕ್ತಿಯ ಪ್ರಭಾವಲಯದ (‘ಔರಾ’ದ) ಅಧ್ಯಯನ ಮಾಡಬಹುದು. ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಈ ಪರೀಕ್ಷಣೆ ಮಾಡಲಾಗಿತ್ತು.

ಪರೀಕ್ಷಣೆಯ ಸ್ವರೂಪ

ಈ ಪರೀಕ್ಷಣೆಯಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಮೇಜಿನ ಮೇಲಿಡುವ ಮೊದಲು ‘ಪಿಪ್’ ತಂತ್ರಜ್ಞಾನದ ಮೂಲಕ ವಾತಾವರಣದ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಯಿತು. ಇದು ‘ಮೂಲ ನೊಂದಣಿ’ಯಾಗಿದೆ (ಕೋಷ್ಟಕದಲ್ಲಿ ೧೦ ಈ ೩ ಊ ೧). ಅನಂತರ ತಾಂತ್ರಿಕ ಗಣೇಶಮೂರ್ತಿ, ಸಾಮಾನ್ಯ ಗಣೇಶಮೂರ್ತಿ ಮತ್ತು ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿ ಒಂದೊಂದಾಗಿ ಮೇಜಿನ ಮೇಲಿಟ್ಟು ‘ಪಿಪ್’ ಛಾಯಾಚಿತ್ರವನ್ನು ತೆಗೆಯಲಾಯಿತು. ಈ ‘ಮೂರೂ ವಿಧದ ಮೂರ್ತಿಗಳಿಂದ ಪ್ರಕ್ಷೇಪಿತವಾಗುತ್ತಿರುವ ಸ್ಪಂದನಗಳಿಂದ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ’ ಎಂದು ಈ ಛಾಯಾಚಿತ್ರಗಳ ತುಲನಾತ್ಮಕ ಅಧ್ಯಯನ ಮಾಡಿದ ನಂತರ ಅರಿವಿಗೆ ಬಂದಿತು.

ವೈಜ್ಞಾನಿಕ ಪರೀಕ್ಷೆಗಾಗಿ ಉಪಯೋಗಿಸಿದ ೩ ರೀತಿಯ ಶ್ರೀ ಗಣೇಶನ ಮೂರ್ತಿಗಳು ಮತ್ತು ಅವುಗಳ ವೈಶಿಷ್ಟ

೧. ತಾಂತ್ರಿಕ ಗಣೇಶಮೂರ್ತಿ : ಇದು ತಂತ್ರಮಾರ್ಗದಿಂದ ಸಾಧನೆ ಮಾಡುವವರಿಗಾಗಿ ತಯಾರಿಸಲಾದ ಮೂರ್ತಿಯಾಗಿದೆ.

೨. ಸಾಮಾನ್ಯ ಗಣೇಶಮೂರ್ತಿ : ಇದು ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಗಣೇಶಮೂರ್ತಿಯಾಗಿದೆ.

೩. ಸನಾತನ ನಿರ್ಮಿತ (ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿಸಿದ ಮತ್ತು ಸಾತ್ತ್ವಿಕವಾಗಿರುವ) ಬಣ್ಣದ ಗಣೇಶಮೂರ್ತಿ : ಈ ಮೂರ್ತಿಯನ್ನು ಸಾಧಕ-ಮೂರ್ತಿಕಾರರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಭಕ್ತಿಭಾವದಿಂದ ತಯಾರಿಸಿದ್ದಾರೆ.

() ಮೂಲ ನೊಂದಣಿಯ ತುಲನೆಯಲ್ಲಿ ವಸ್ತುವಿನ ಪ್ರಭಾವಳಿಯನ್ನು ತೋರಿಸುವ ‘ಪಿಪ್’ ಛಾಯಾಚಿತ್ರದಲ್ಲಿನ ಬಣ್ಣಗಳ ಪ್ರಮಾಣದಲ್ಲಿ ಹೆಚ್ಚು ಅಥವಾ ಕಡಿಮೆಯಾಗುವುದರ ಹಿಂದಿನ ತತ್ತ್ವ : ಪರೀಕ್ಷಣೆಗಾಗಿ ಘಟಕವನ್ನು (ಈ ಪರೀಕ್ಷಣೆಯಲ್ಲಿ  ಶ್ರೀ ಗಣೇಶನ ಮೂರ್ತಿ) ಇಡುವ ಮೊದಲಿನ (‘ಮೂಲ ನೊಂದಣಿ’ಯ) ತುಲನೆಯಲ್ಲಿ ಘಟಕವನ್ನಿಟ್ಟ ನಂತರದ ಪ್ರಭಾವಲಯದಲ್ಲಿನ ಬಣ್ಣದ ಪ್ರಮಾಣವು ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಈ ಹೆಚ್ಚು ಅಥವಾ ಕಡಿಮೆಯು ಆ ಘಟಕದಿಂದ ಪ್ರಕ್ಷೇಪಿತವಾಗುವ ಆ ಬಣ್ಣಕ್ಕೆ ಸಂಬಂಧಿಸಿದ ಸ್ಪಂದನಗಳ ಪ್ರಮಾಣಕ್ಕನುಸಾರ ಇರುತ್ತದೆ, ಉದಾ. ಪರೀಕ್ಷಣೆಗಾಗಿ ಘಟಕವನ್ನು ಇಟ್ಟ ನಂತರ ಅದರಿಂದ ಚೈತನ್ಯದ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿಸಿದರೆ ಪ್ರಭಾವಲಯದಲ್ಲಿನ ಹಳದಿ ಬಣ್ಣವು ಹೆಚ್ಚಾಗುತ್ತದೆ, ಚೈತನ್ಯದ ಸ್ಪಂದನಗಳು ಪ್ರಕ್ಷೇಪಿಸದಿದ್ದರೆ ಅಥವಾ ಇತರ ಸ್ಪಂದನಗಳ ತುಲನೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಕ್ಷೇಪಿತವಾದರೆ ಪ್ರಭಾವಲಯದಲ್ಲಿನ ಹಳದಿ ಬಣ್ಣದ ಪ್ರಮಾಣವು ಕಡಿಮೆಯಾಗುತ್ತದೆ. (ಇದನ್ನು ಗಮನ ದಲ್ಲಿಟ್ಟುಕೊಂಡು ಅಂಶ ‘ನಿರೀಕ್ಷಣೆ ೧’ ಮತ್ತು ‘ನಿರೀಕ್ಷಣೆ ೨’ ರಲ್ಲಿ ಕೊಟ್ಟಿರುವ ಕೋಷ್ಟಕಗಳನ್ನು ಓದಬೇಕು.)

ಪ್ರಭಾವಲಯದಲ್ಲಿ ಕಾಣಿಸುವ ಬಣ್ಣಗಳ ಮಾಹಿತಿ : ಪರೀಕ್ಷಣೆಯಲ್ಲಿನ ವಸ್ತುವಿನ (ಅಥವಾ ವ್ಯಕ್ತಿಯ) ‘ಪಿಪ್’ ಛಾಯಾಚಿತ್ರದಲ್ಲಿ ಕಾಣಿಸುವ ಪ್ರಭಾವಲಯದ ಬಣ್ಣಗಳು ಆ ವಸ್ತುವಿನ ಊರ್ಜಾಕ್ಷೇತ್ರದಲ್ಲಿನ ವಿಶಿಷ್ಟ ಸ್ಪಂದನಗಳನ್ನು ತೋರಿಸುತ್ತವೆ. ಪ್ರಭಾವಲಯದಲ್ಲಿನ ಪ್ರತಿಯೊಂದು ಬಣ್ಣದ ಬಗ್ಗೆ ‘ಪಿಪ್’ ಗಣಕಯಂತ್ರ ತಂತ್ರಾಂಶದ ನಿರ್ಮಾಪಕನು ಪ್ರಕಾಶಿಸಿರುವ ಕೈಪಿಡಿಯಲ್ಲಿರುವ (‘ಮ್ಯಾನ್ಯುಯಲ್’ನಲ್ಲಿರುವ) ಮಾಹಿತಿ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ನಡೆಸಿರುವ ನೂರಾರು ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳ ಅನುಭವಗಳ ಆಧಾರದಲ್ಲಿ ‘ಪ್ರತಿಯೊಂದು ಬಣ್ಣವು ಯಾವ ಸ್ಪಂದನಗಳ ಪ್ರತೀಕವಾಗಿದೆ ?’ ಎಂಬುದನ್ನು ನಿಗದಿಪಡಿಸಲಾಗಿದೆ. ಆ ಅಂಶಗಳನ್ನು ‘ನಿರೀಕ್ಷಣೆ ೧’ ರಲ್ಲಿ ಕೊಟ್ಟಿರುವ ಕೋಷ್ಟಕದ ಎರಡನೇ ಉದ್ದ ಸ್ತಂಭದಲ್ಲಿ ನೀಡಲಾಗಿದೆ.

ಸಕಾರಾತ್ಮಕ ಸ್ಪಂದನಗಳು : ಆಧ್ಯಾತ್ಮಿಕ ದೃಷ್ಟಿಯಿಂದ ‘ಪಿಪ್’ ಛಾಯಾ ಚಿತ್ರದಲ್ಲಿನ ತಿಳಿ ಗುಲಾಬಿ, ಗಿಳಿ ಹಸಿರು, ನೀಲಿಮಿಶ್ರಿತ ಬಿಳಿ, ಹಳದಿ, ಗಾಢ ಹಸಿರು,  ಹಸಿರು, ನೀಲಿ ಮತ್ತು ನೇರಳೆ ಈ ಬಣ್ಣಗಳು ಕ್ರಮವಾಗಿ ಹೆಚ್ಚು ಲಾಭದಾಯಕದಿಂದ ಕಡಿಮೆ ಲಾಭದಾಯಕ ಸ್ಪಂದನಗಳನ್ನು (ಬಣ್ಣಗಳನ್ನು) ತೋರಿಸುತ್ತವೆ. ಈ ಎಲ್ಲ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ವಾಗಿರುವ ಸ್ಪಂದನಗಳಿಗೆ (ಬಣ್ಣಗಳಿಗೆ) ‘ಸಕಾರಾತ್ಮಕ ಸ್ಪಂದನಗಳು’ ಎಂದು ಹೇಳಲಾಗಿದೆ.

ನಕಾರಾತ್ಮಕ ಸ್ಪಂದನಗಳು : ಆಧ್ಯಾತ್ಮಿಕ ದೃಷ್ಟಿಯಿಂದ ‘ಪಿಪ್’ ಛಾಯಾ ಚಿತ್ರದಲ್ಲಿನ ಬೂದು ಬಣ್ಣ, ಗುಲಾಬಿ, ಕಿತ್ತಳೆ ಮತ್ತು ಕೇಸರಿ ಬಣ್ಣಗಳು ಕ್ರಮವಾಗಿ ಹೆಚ್ಚು ತ್ರಾಸದಾಯಕದಿಂದ ಕಡಿಮೆ ತ್ರಾಸದಾಯಕ ಸ್ಪಂದನಗಳನ್ನು ತೋರಿಸುತ್ತವೆ. ಈ ಎಲ್ಲ ಆಧ್ಯಾತ್ಮಿಕ ದೃಷ್ಟಿಯಿಂದ ತ್ರಾಸದಾಯಕವಾಗಿರುವ ಸ್ಪಂದನ (ಬಣ್ಣಗಳಿಗೆ) ಗಳಿಗೆ ‘ನಕಾರಾತ್ಮಕ ಸ್ಪಂದನಗಳು’ ಎಂದು ಹೇಳಲಾಗಿದೆ.

‘ಪಿಪ್’ ಛಾಯಾಚಿತ್ರದಲ್ಲಿ ಸಾಮಾನ್ಯಕ್ಕಿಂತ ಉಚ್ಚ ಸಕಾರಾತ್ಮಕ ಸ್ಪಂದನಗಳ ಪ್ರತೀಕವಾಗಿರುವ ಬಣ್ಣಗಳು ಕಾಣಿಸುವುದು ಹೆಚ್ಚು ಒಳ್ಳೆಯದಾಗಿದೆ : ‘ಪಿಪ್’ ಛಾಯಾಚಿತ್ರದಲ್ಲಿ ಗಿಳಿಹಸಿರು ಅಥವಾ ನೀಲಿಮಿಶ್ರಿತ ಬಿಳಿ ಬಣ್ಣ ಈ ಉಚ್ಚ ಸಕಾರಾತ್ಮಕ ಸ್ಪಂದನಗಳ ಬಣ್ಣಗಳು ಕಡಿಮೆಯಾಗುತ್ತವೆ ಅಥವಾ ಆ ಬಣ್ಣಗಳು ಸಂಪೂರ್ಣ ಇಲ್ಲವಾಗುತ್ತವೆ. ಇದನ್ನು ಒಳ್ಳೆಯ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ; ಏಕೆಂದರೆ ಆಗ ಸಾಧಾರಣ ಸಕಾರಾತ್ಮಕ ಸ್ಪಂದನಗಳ ಸ್ಥಾನವನ್ನು ಅದಕ್ಕಿಂತಲೂ ಉಚ್ಚ ಮಟ್ಟದ ಸಕಾರಾತ್ಮಕ ಸ್ಪಂದನಗಳು ತೆಗೆದುಕೊಂಡಿರುತ್ತವೆ.

‘ಪಿಪ್’ ಛಾಯಾಚಿತ್ರದಲ್ಲಿನ ಬಣ್ಣಗಳ ವೈಶಿಷ್ಟ  ಮತ್ತು ಆ ಬಣ್ಣಗಳ ಪ್ರತ್ಯಕ್ಷ ಆಧ್ಯಾತ್ಮಿಕ ವೈಶಿಷ್ಟ ಇವುಗಳಿಗೆ ಯಾವ ಸಂಬಂಧವೂ ಇಲ್ಲ : ‘ಪಿಪ್’ ಗಣಕಯಂತ್ರ ತಂತ್ರಾಂಶದ ನಿರ್ಮಾಪಕರು ‘ಪಿಪ್’ ಛಾಯಾಚಿತ್ರದಲ್ಲಿ ನಕಾರಾತ್ಮಕ ಸ್ಪಂದನಗಳಿಗಾಗಿ ಕೇಸರಿ ಮತ್ತು ಕಿತ್ತಳೆ ಈ ಬಣ್ಣಗಳನ್ನು ನಿಗದಿಪಡಿಸಿದ್ದಾರೆ. ಅದಕ್ಕೆ ಮತ್ತು ಆ ಬಣ್ಣಗಳ ನಿಜವಾದ ಆಧ್ಯಾತ್ಮಿಕ ವೈಶಿಷ್ಟ ಗಳಿಗೆ (ಉದಾ. ಕೇಸರಿ ಬಣ್ಣವು ತ್ಯಾಗ ಮತ್ತು ವೈರಾಗ್ಯದ ಪ್ರತೀಕವಾಗಿದೆ.) ಯಾವುದೇ ಸಂಬಂಧವಿಲ್ಲ.

‘ಪಿಪ್’ ಛಾಯಾಚಿತ್ರಗಳ ತುಲನೆ ಮಾಡುವಾಗ ಪರೀಕ್ಷಣೆಗಾಗಿ ಇಟ್ಟ ಶ್ರೀ ಗಣೇಶಮೂರ್ತಿಯ ಬಣ್ಣ ಮತ್ತು ಮೇಜಿನ ಬಣ್ಣವನ್ನು ಗಣನೆಗೆ ತೆಗೆದುಕೊಂಡಿಲ್ಲ : ಇದು ವಾತಾವರಣದಲ್ಲಿನ ಪ್ರಭಾವಲಯದ ಪರೀಕ್ಷಣೆಯಾಗಿರುವುದರಿಂದ ‘ಪಿಪ್’ ಛಾಯಾಚಿತ್ರ ಕ್ರ. ೨, ೩ ಮತ್ತು ೪ ನ್ನು ಮೂಲ ಪ್ರಭಾವಲಯದ ಜೊತೆಗೆ (ಛಾಯಾಚಿತ್ರ ಕ್ರ. ೧ ರ ಜೊತೆಗೆ) ತುಲನೆ ಮಾಡುವಾಗ ಪರೀಕ್ಷಣೆಗಾಗಿ ಇಟ್ಟ ಶ್ರೀ ಗಣೇಶಮೂರ್ತಿಯ ಬಣ್ಣ ಮತ್ತು ಮೇಜಿನ ಬಣ್ಣವನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.

ನಿರೀಕ್ಷಣೆಗಳು

ನಿರೀಕ್ಷಣೆ ೧ – ‘ಪಿಪ್’ ಛಾಯಾಚಿತ್ರಗಳಲ್ಲಿ ಕಾಣಿಸುವ ಪ್ರಭಾವಲಯಗಳ ಬಣ್ಣ, ಅವು ಯಾವುದರ ಪ್ರತೀಕವಾಗಿವೆ ಮತ್ತು ಅವುಗಳ ಪ್ರಮಾಣದಲ್ಲಾದ ಹೆಚ್ಚಳ ಅಥವಾ ಕಡಿಮೆ : ಶ್ರೀ ಗಣೇಶಮೂರ್ತಿಯನ್ನು ಇಟ್ಟ ನಂತರ ಬಂದ ಪ್ರಭಾವಲಯಗಳ ತುಲನೆಯನ್ನು ‘ಮೂಲ ನೋಂದಣಿ’ಯೊಂದಿಗೆ ಮಾಡಲಾಗಿದೆ, ಇದನ್ನು ಗಮನದಲ್ಲಿಟ್ಟು ಮುಂದಿನ ಕೋಷ್ಟಕವನ್ನು ಓದಿ.

ಟಿಪ್ಪಣಿ ೧ – ಘಟಕದ ಅಂತರ್ಬಾಹ್ಯ ಸ್ತರದ ನಕಾರಾತ್ಮಕ ಸ್ಪಂದನಗಳನ್ನು ಕಡಿಮೆ ಅಥವಾ ನಾಶಗೊಳಿಸುವ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಗೊಳಿಸುವ ಕ್ಷಮತೆ

ಟಿಪ್ಪಣಿ ೨ – ಘಟಕದ ಕೇವಲ ಬಾಹ್ಯ ಸ್ತರದ ನಕಾರಾತ್ಮಕ ಸ್ಪಂದನಗಳನ್ನು ಕಡಿಮೆ ಅಥವಾ ನಾಶಗೊಳಿಸುವ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಗೊಳಿಸುವ ಕ್ಷಮತೆ

ಟಿಪ್ಪಣಿ ೩ – ಈ ಮೂರ್ತಿಯಿಂದ ಉಚ್ಚ ಮಟ್ಟದ ನೀಲಿ ಬಣ್ಣದಲ್ಲಿ ಕಾಣಿಸುವ ಸಾತ್ತ್ವಿಕತೆಯ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಪ್ರಕ್ಷೇಪಿತವಾದವು ಎಂಬುದು ಈ ಕೋಷ್ಟಕದಲ್ಲಿನ ಅಂಶ ‘ನಿರೀಕ್ಷಣೆ ೧’ರಿಂದ ಸ್ಪಷ್ಟವಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಂಶ ‘‘ಪಿಪ್’ ಛಾಯಾಚಿತ್ರದಲ್ಲಿ ಸಾಮಾನ್ಯಕ್ಕಿಂತ ಉಚ್ಚ ಸಕಾರಾತ್ಮಕ ಸ್ಪಂದನಗಳ ಪ್ರತೀಕವಾಗಿರುವ ಬಣ್ಣಗಳು ಕಾಣಿಸುವುದು ಹೆಚ್ಚು ಒಳ್ಳೆಯದಾಗಿದೆ’ ನೋಡಿ.

ಟಿಪ್ಪಣಿ ೪ – ಈ ಮೂರ್ತಿಯಿಂದ ಪ್ರಕ್ಷೇಪಿತವಾಗುವ ಸ್ಪಂದನಗಳಿಂದ ವಾತಾವರಣದಲ್ಲಿನ ಭಾವನಿಕ ಒತ್ತಡ ಹೆಚ್ಚಾಯಿತು (ಮೂರ್ತಿಗೆ ಬಳಸಲಾದ ಮಾರುಕಟ್ಟೆಯ ಬಣ್ಣಗಳಿಂದ ಈ ಪರಿಣಾಮವಾಗಿರಬಹುದು.); ಆದರೆ ನಕಾರಾತ್ಮಕತೆಯು ಸಂಪೂರ್ಣವಾಗಿ ನಾಶವಾಯಿತು, ಹಾಗೆಯೇ ಸಕಾರಾತ್ಮಕ ಸ್ಪಂದನಗಳ ಪೈಕಿ ಸ್ಥೂಲ ಸ್ತರದಲ್ಲಿನ ಆಧ್ಯಾತ್ಮಿಕ ಉಪಾಯಕ್ಷಮತೆ, ಸಕಾರಾತ್ಮಕತೆ ಮತ್ತು ಸಾತ್ತ್ವಿಕತೆಯು ಬಹಳ ಹೆಚ್ಚಾಯಿತು ಎಂಬುದು ಕೋಷ್ಟಕದಲ್ಲಿನ ಅಂಶ ೪, ೫, ೭ ಮತ್ತು ೮ ರಿಂದ ಸ್ಪಷ್ಟವಾಗುತ್ತದೆ.

ನಿರೀಕ್ಷಣೆ ೨ – ‘ಪಿಪ್’ ಛಾಯಾಚಿತ್ರಗಳಲ್ಲಿನ ಪ್ರತಿಯೊಂದು ಸ್ಪಂದನಗಳ (ಬಣ್ಣಗಳ) ಪ್ರಮಾಣ (ಶೇ.)

ಟಿಪ್ಪಣಿ : ಛಾಯಾಚಿತ್ರಗಳಲ್ಲಿ ಕಾಣಿಸುವ ವಿವಿಧ ಬಣ್ಣಗಳ ಪ್ರಮಾಣವನ್ನು ನಿರ್ಧರಿಸಲು ‘ಪಿಪ್’ ಛಾಯಾಚಿತ್ರದ ಮೇಲೆ ನಕ್ಷೆಯ ಕಾಗದದ ಮೇಲೆ ಇರುವಂತಹ ಅನೇಕ ಚೌಕ (ಬಾಕ್ಸ್) ಗಳನ್ನು ಗಣಕಯಂತ್ರ ತಂತ್ರಾಂಶದ ಮೂಲಕ ಮಾಡಲಾಯಿತು. ಅನಂತರ ಪ್ರತಿಯೊಂದು ಛಾಯಾಚಿತ್ರದಲ್ಲಿನ ಒಟ್ಟು ಚೌಕ (ಬಾಕ್ಸ್) ಗಳು ಮತ್ತು ಅವುಗಳ ತುಲನೆಯಲ್ಲಿ ಪ್ರಭಾವಲಯದಲ್ಲಿನ ಪ್ರತಿಯೊಂದು ಬಣ್ಣದಿಂದ ವ್ಯಾಪಿಸಿದ ಚೌಕಗಳ ಸಂಖ್ಯೆಯನ್ನು ಎಣಿಸಲಾಯಿತು. ಅವುಗಳನ್ನು ಶೇಕಡಾವಾರುಗಳಲ್ಲಿ ರೂಪಾಂತರಿಸಿ ಪ್ರಭಾವಲಯದಲ್ಲಿನ ಪ್ರತಿಯೊಂದು ಬಣ್ಣದ ಪ್ರಮಾಣ (ಶೇ.) ವನ್ನು ಸರ್ವಸಾಧಾರಣವಾಗಿ ನಿರ್ಧರಿಸಲಾಯಿತು.

ನಿರೀಕ್ಷಣೆಗಳ ಸಾರಾಂಶ

ನಿಷ್ಕರ್ಷ

೧. ತಾಂತ್ರಿಕ ಗಣೇಶಮೂರ್ತಿ : ಈ ಮೂರ್ತಿಯ ಉಪಾಸನೆಯಿಂದ ಸಾಮಾನ್ಯ ಉಪಾಸಕನಿಗೆ (ಮೂರ್ತಿಯಲ್ಲಿನ ಶಕ್ತಿಯನ್ನು ಸಹಿಸಲು ಆಗದಿದ್ದರೆ) ತೊಂದರೆಯಾಗಬಹುದು. ಆದ್ದರಿಂದ ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳು (ಉದಾ. ಸಂತರು) ಹೇಳಿದ್ದರೆ ಮಾತ್ರ ಇಂತಹ ಮೂರ್ತಿಯ ಉಪಾಸನೆಯನ್ನು ಮಾಡಬೇಕು. ತಾಂತ್ರಿಕ ಉಪಾಸನೆಯಿಂದಾಗಿ ಈ ಮೂರ್ತಿಯಿಂದ ಕೆಲವು ಪ್ರಮಾಣದಲ್ಲಿ ಸೂಕ್ಷ -ಸ್ತರದಲ್ಲಿನ ಆಧ್ಯಾತ್ಮಿಕ ಉಪಾಯದ ಕ್ಷಮತೆಯ ಸ್ಪಂದನಗಳು ಪ್ರಕ್ಷೇಪಿತವಾಗಿವೆ.

೨. ಸಾಮಾನ್ಯ ಗಣೇಶಮೂರ್ತಿ : ಈ ಮೂರ್ತಿಯು ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳನ್ನು ಮತ್ತು ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ. ಆದ್ದರಿಂದ ಇಂತಹ ಮೂರ್ತಿಯು ಆಧ್ಯಾತ್ಮಿಕ ದೃಷ್ಟಿಯಿಂದ ಕಡಿಮೆ ಪ್ರಮಾಣ ದಲ್ಲಿ ಲಾಭದಾಯಕವಾಗಿದೆ.

ದೇವತೆಯ ಮೂರ್ತಿಯನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿಸದಿದ್ದರೆ, ಏನು ದುಷ್ಪರಿಣಾಮವಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಇದರಿಂದ ಪ್ಲಾಸ್ಟಿಕ್, ಕಾಗದ ಮುಂತಾದ ಅಸಾತ್ತ್ವಿಕ ವಸ್ತುಗಳಿಂದ ತಯಾರಿಸಿದ ಅಥವಾ ವಿಡಂಬನಾತ್ಮಕ ಮೂರ್ತಿಗಳಿಂದ ಎಷ್ಟು ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರಬಹುದು ಎಂಬುದರ ಕಲ್ಪನೆ ಬರಬಹುದು.

೩. ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿ : ಈ ಮೂರ್ತಿಯು ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ; ಇದರಿಂದಾಗಿ ಉಪಾಸಕನಿಗೆ ಆಧ್ಯಾತ್ಮಿಕದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭವಾಗುತ್ತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ತಪಾಸಣೆಯಿಂದ ‘ಮೂರ್ತಿಯನ್ನು ಶಾಸ್ತ್ರಕ್ಕನುಸಾರ, ಅಂದರೆ ಋಷಿಮುನಿಗಳು ಹೇಳಿದ ಮೂರ್ತಿವಿಜ್ಞಾನಕ್ಕನುಸಾರ ತಯಾರಿಸಬೇಕು ಎಂಬುದರ ಮಹತ್ವವು ಗಮನಕ್ಕೆ ಬರುತ್ತದೆ. ಇಂತಹ ಮೂರ್ತಿಯ ಪೂಜೆ ಮತ್ತು ಉಪಾಸನೆಯನ್ನು ಮಾಡುವುದು ಉಪಾಸಕನ ದೃಷ್ಟಿಯಿಂದ ಲಾಭದಾಯಕವಾಗಿದೆ !

ಸಾಮಾನ್ಯ ವ್ಯಕ್ತಿಯು ಸನಾತನ ನಿರ್ಮಿತ ಬಿಳಿಬಣ್ಣದ ಗಣೇಶಮೂರ್ತಿ ಮತ್ತು ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿ ಇವುಗಳಲ್ಲಿ ಬಣ್ಣದ ಗಣೇಶಮೂರ್ತಿಯನ್ನು ಪೂಜೆಗೆ ಉಪಯೋಗಿಸುವುದು ಹೆಚ್ಚು ಯೋಗ್ಯ !

೧. ಸನಾತನ ನಿರ್ಮಿತ ಬಿಳಿಬಣ್ಣದ ಗಣೇಶಮೂರ್ತಿ : ಈ ಮೂರ್ತಿಯನ್ನು ಸಹ ಸಾಧಕ-ಮೂರ್ತಿಕಾರರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ಭಕ್ತಿಭಾವದಿಂದ ತಯಾರಿಸಿದ್ದಾರೆ. ‘ಪಿಪ್’ ತಂತ್ರಜ್ಞಾನದ ಮೂಲಕ ಈ ಮೂರ್ತಿಯ ಛಾಯಾಚಿತ್ರವನ್ನೂ ತೆಗೆಯಲಾಗಿದೆ. ಈ ಮೂರ್ತಿಯು ಆಧ್ಯಾತ್ಮಿಕ ದೃಷ್ಟಿಯಿಂದ ಉಚ್ಚ ಮಟ್ಟದ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ. ಆದ್ದರಿಂದ ಉಪಾಸಕನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭದಾಯಕವಾಗುವುದರೊಂದಿಗೆ, ಉಚ್ಚ ಮಟ್ಟದ ಆಧ್ಯಾತ್ಮಿಕ ಅನುಭೂತಿಗಳನ್ನು ಕೊಡುವ ಕ್ಷಮತೆಯೂ ಈ ಮೂರ್ತಿಯಲ್ಲಿದೆ. (ಈ ಮೂರ್ತಿಯ ‘ಪಿಪ್’ ಪರೀಕ್ಷಣೆಯ ವಿಷಯವನ್ನು ಸೇರಿಸಿಲ್ಲ)

೨. ಸನಾತನ ನಿರ್ಮಿತ ಎರಡು ಮೂರ್ತಿಗಳಲ್ಲಿ ಬಣ್ಣದ ಗಣೇಶಮೂರ್ತಿಯನ್ನು ಪೂಜೆಗಾಗಿ ಉಪಯೋಗಿಸುವುದು ಹೆಚ್ಚು ಯೋಗ್ಯವಾಗಿದೆ ! : ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿಯು ಸಗುಣ ಸ್ತರದಲ್ಲಿನ ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ ಮತ್ತು ಬಿಳಿ ಬಣ್ಣದ ಗಣೇಶಮೂರ್ತಿಯು ಆಧ್ಯಾತ್ಮಿಕ ದೃಷ್ಟಿಯಿಂದ ಉಚ್ಚ ಮಟ್ಟದ ನಿರ್ಗುಣ ಸ್ತರದಲ್ಲಿನ ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ. ಈ ಎರಡೂ ಮೂರ್ತಿಗಳು ಉಪಾಸಕನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದ್ದರೂ, ಬಿಳಿ ಬಣ್ಣದ ಗಣೇಶಮೂರ್ತಿಯಿಂದ ಪ್ರಕ್ಷೇಪಿತವಾಗುವ ನಿರ್ಗುಣ ಸ್ಪಂದನಗಳನ್ನು ಸಾಮಾನ್ಯ ವ್ಯಕ್ತಿಗೆ ಸಹಿಸಲು ಆಗದಿರುವುದರಿಂದ ಪೂಜೆಗಾಗಿ ಬಣ್ಣದ ಗಣೇಶಮೂರ್ತಿಯನ್ನು ಉಪಯೋಗಿಸುವುದು ಹೆಚ್ಚು ಯೋಗ್ಯವಾಗಿದೆ.’

– ಶ್ರೀ. ರೂಪೇಶ ರೇಡಕರ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೮.೨೦೧೪) ವಿ-ಅಂಚೆ : [email protected]

Leave a Comment