ನಾಮಜಪವನ್ನು ಮುಂದಿನಂತೆ ಹಂತಹಂತವಾಗಿ ಹೆಚ್ಚಿಸಬೇಕು.
ಪ್ರತಿಯೊಂದು ಹಂತವನ್ನು ದಾಟಲು ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರವಾಗಿ ಅವರಿಗೆ ೬ ತಿಂಗಳಿಂದ ಎರಡು ವರ್ಷಗಳ ಕಾಲ ತಗಲಬಹುದು.
೧. ಪ್ರತಿದಿನ ಕನಿಷ್ಟಪಕ್ಷ ೩ ಮಾಲೆ ಅಥವಾ 15 ನಿಮಿಷ ನಾಮಜಪ ಮಾಡಬೇಕು.
೨. ಯಾವುದೇ ಕೆಲಸವನ್ನು ಮಾಡದೇ ಇರುವಾಗ ನಾಮಜಪವನ್ನು ಮಾಡಬೇಕು.
೩. ಸ್ನಾನ ಮಾಡುವುದು, ಅಡುಗೆ ಮಾಡುವುದು, ನಡೆದಾಡುವುದು, ಬಸ್ಸು ಅಥವಾ ರೈಲಿನಲ್ಲಿ ಪ್ರವಾಸ ಮಾಡುವುದು ಮುಂತಾದ ಶಾರೀರಿಕ ಕೆಲಸಗಳನ್ನು ಮಾಡುವಾಗ ನಾಮಜಪವನ್ನು ಮಾಡಬೇಕು.
೪. ವರ್ತಮಾನಪತ್ರಿಕೆಗಳನ್ನು ಓದುವಾಗ, ದೂರದರ್ಶನದಲ್ಲಿನ ಕಾರ್ಯಕ್ರಮಗಳನ್ನು ನೋಡುವಾಗ ಅಂದರೆ ನಮ್ಮ ದೈನಂದಿನ ಜೀವನದಲ್ಲಿ ಮಹತ್ವವಿಲ್ಲದಂತಹ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು.
೫. ಕಾರ್ಯಾಲಯದ ಕಾಗದ ಪತ್ರಗಳನ್ನು ಓದುವಾಗ ಅಥವಾ ಬರೆಯುವಾಗ ಅಂದರೆ ದೈನಂದಿನ ಜೀವನದಲ್ಲಿನ ಮಹತ್ವದ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು.
೬. ಇತರರೊಡನೆ ಮಾತನಾಡುವಾಗ ಜಪ ಮಾಡಬೇಕು.
೫ ಮತ್ತು ೬ ನೆಯ ಹಂತದಲ್ಲಿ ಶಬ್ದಗಳಲ್ಲಿ ನಾಮಜಪವನ್ನು ಮಾಡುವುದು ಅಪೇಕ್ಷಿತವಾಗಿರದೇ ಶ್ವಾಸ ಅಥವಾ ನಾಮ ಜಪದಿಂದಾಗುವ ಆನಂದದ ಅನುಭೂತಿಯ ಕಡೆಗೆ ಗಮನವನ್ನು ಕೊಡುವುದು ಅಪೇಕ್ಷಿತವಾಗಿದೆ. ಇದು ಸಾಧ್ಯವಾದರೆ ನಿದ್ದೆಯಲ್ಲಿಯೂ ನಾಮಜಪವು ನಡೆಯುತ್ತದೆ, ಅಂದರೆ ದಿನದ ೨೪ ಗಂಟೆಗಳ ಕಾಲ ನಾಮಜಪವು ನಡೆಯುತ್ತದೆ.
(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ನಾಮಸಂಕೀರ್ತನಯೋಗ’)
ನಾಮಜಪದ ಹೆಚ್ಚೆಚ್ಚು ಲಾಭವಾಗಲೆಂದು ಭಾವಪೂರ್ಣ ಧ್ವನಿಮುದ್ರಣವನ್ನು ಮಾಡಿಸಿಕೊಳ್ಳುವ ಮತ್ತು ಅದನ್ನು ಎಲ್ಲರಿಗೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !
ನಾಮಜಪಾದಿ ಉಪಚಾರಗಳಿಗಾಗಿ ಕುಳಿತುಕೊಳ್ಳುವಾಗ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ
ದೇವತೆಯ ‘ತಾರಕ’ ಮತ್ತು ‘ಮಾರಕ’ ನಾಮಜಪದ ಮಹತ್ತ್ವ
ಸಮಷ್ಟಿಗಾಗಿ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಮಾಡಬೇಕಾಗಿರುವ ನಾಮಜಪ
ನಾಮಜಪ ಅಥವಾ ಮಂತ್ರ ಪಠಣ ಏಕಾಗ್ರತೆಯಿಂದ ಆಗಲು ಇದನ್ನು ಮಾಡಿರಿ !
ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!