ಸಮಷ್ಟಿಗಾಗಿ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಮಾಡಬೇಕಾಗಿರುವ ನಾಮಜಪ

೧. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕ ಸಮಷ್ಟಿ ನಾಮಜಪ ಮತ್ತು ಅದನ್ನು ಮಾಡುವುದರಿಂದಾಗುವ ಲಾಭ

ಅ. ಯಾವ ಸಾಧಕರ ವ್ಯಷ್ಟಿ ಸಾಧನೆಗಾಗಿ ಹೇಳಲಾದ ಕುಲದೇವರು/ಕುಲದೇವಿ ಮತ್ತು ದತ್ತ ಇವರ ನಾಮಜಪ ಹಾಗೂ ಕೆಟ್ಟ ಶಕ್ತಿಗಳ ತೊಂದರೆ ಇದ್ದರೆ, ಅದನ್ನು ದೂರಗೊಳಿಸಲು ಹೇಳಿದ ಜಪವು ಕಡಿಮೆಪಕ್ಷ ೫ ವರ್ಷಗಳಿಂದ ಚೆನ್ನಾಗಿ ಆಗುತ್ತಿದೆಯೋ, ಅವರು ಈಗ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿರುವ ಮುಂದಿನ ಸಮಷ್ಟಿ ಜಪವನ್ನು ಮಾಡಬೇಕು. ಮೊದಲಿನ ಜಪವನ್ನು ಈಗ ಮಾಡುವುದು ಬೇಡ.

ಆ. ಯಾರ ಸಮಷ್ಟಿ ಸೇವೆ ಯೋಗ್ಯ ರೀತಿಯಲ್ಲಿ ಆಗುತ್ತಿದೆಯೋ, ಅವರೂ ಮುಂದಿನ ಸಮಷ್ಟಿ ನಾಮಜಪವನ್ನು ಮಾಡಬೇಕು. ಮೊದಲಿನ ಜಪವನ್ನು ಈಗ ಮಾಡಬೇಕಿಲ್ಲ.

ಆ ೧. ಪ್ರತಿಯೊಂದು ನಾಮಜಪದಿಂದ ಆಗಲಿರುವ ಆಧ್ಯಾತ್ಮಿಕ ಲಾಭಗಳು
೧. ಶ್ರೀ ವಿಷ್ಣವೇ ನಮಃ | – ಇದರಿಂದ ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು ಮತ್ತು ರಾಷ್ಟ್ರಕ್ಕೆ ಸ್ಥಿರತೆ ಬರುವುದು.
೨. ಶ್ರೀ ಸಿದ್ಧಿವಿನಾಯಕಾಯ ನಮಃ | – ಇವರ ಆಶೀರ್ವಾದದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬಲ ಮತ್ತು ಯೋಗ್ಯ ದಿಶೆಯು ಸಿಗುವುದು.
೩. ಶ್ರೀ ಭವಾನಿದೇವ್ಯೈ ನಮಃ | – ದೇವಿಯ ಆಶೀರ್ವಾದದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬಲ ಸಿಗುವುದು.

ಪ್ರತಿದಿನ ನಾಮಜಪಕ್ಕೆ ಎಷ್ಟು ಸಮಯ ನೀಡುತ್ತೇವೆಯೋ ಅದರಲ್ಲಿನ ೧/೩ ರಷ್ಟು ಸಮಯವನ್ನು ಪ್ರತಿಯೊಂದು ನಾಮಜಪಕ್ಕೆ ನೀಡಬೇಕು. ಅಂದರೆ ಮೂರು ಗಂಟೆ ನೀಡುವವರಿದ್ದರೆ, ಮೇಲಿನ ಪ್ರತಿಯೊಂದು ನಾಮಜಪವನ್ನು ಪ್ರತಿಯೊಂದನ್ನು ಒಂದು ಗಂಟೆ ಮಾಡಬೇಕು.

– (ಪರಾತ್ಪರ ಗುರು) ಡಾ. ಆಠವಲೆ

ಮೇಲಿನ ಲೇಖನವನ್ನು ಓದುವಾಗ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಬಂದಂತಹ ಅನುಭೂತಿ
ಈ ಕಡತವನ್ನು ಓದುವಾಗ ‘ನನ್ನ ಶರೀರದಲ್ಲಿ ದೈವೀ ಶಕ್ತಿಯು ವೇಗವಾಗಿ ಸಂಚರಿಸಿತು, ಎಂದು ನನಗೆ ಅನಿಸಿತು. ಸಹಸ್ರಾರದ ಮೇಲೆ ಬಹಳ ಶಕ್ತಿಯ ಅರಿವಾಯಿತು, ಅಲ್ಲದೇ ಮುಂದೆ ಸ್ಥಾಪನೆಯಾಗಲಿರುವ ಹಿಂದೂ ರಾಷ್ಟ್ರದ ಶಂಖನಾದವು ನನಗೆ ಸೂಕ್ಷ್ಮದಲ್ಲಿ ಕೇಳಿಸಿತು. – (ಸದ್ಗುರು) ಸೌ. ಬಿಂದಾ ಸಿಂಗಬಾಳ (೨೦.೫.೨೦೨೦)

೨. ಸಮಷ್ಟಿಗಾಗಿ ನಾಮಜಪವನ್ನು ಮಾಡುವವರು ಮತ್ತು ಸಮಷ್ಟಿ ಸ್ತರದ ತೊಂದರೆ ದೂರವಾಗಲು ಸಾಧಕರು ಮಾಡಬೇಕಾದ ನಾಮಜಪಾದಿ ಉಪಾಯಗಳು

೨ ಅ. ಜಪ : ಪ್ರಸ್ತುತ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿದೆ. ಕಾಲ ಮಹಾತ್ಮೆಗನುಸಾರ ಸರ್ವಸಾಧಾರಣವಾಗಿ ಸಾಧಕರಿಗೆ ಆಗುವ ತೊಂದರೆಗಳಲ್ಲಿ ಶೇ. ೭೦ ರಷ್ಟು ತೊಂದರೆಯು ಸಮಷ್ಟಿ ಸ್ತರದ್ದಾಗಿದ್ದು ಹಾಗೂ ಶೇ. ೩೦ ರಷ್ಟು ತೊಂದರೆ ವ್ಯಷ್ಟಿ ಸ್ತರದ್ದಾಗಿದೆ.

೨ ಅ ೧. ಉಪಾಯವೆಂದು ಕುಳಿತು ನಾಮಜಪ ಮಾಡುವ ಸಾಧಕರು : ಇವರು ಎಷ್ಟು ಸಮಯ ನಾಮಜಪ ಮಾಡುತ್ತಾರೆಯೋ, ಅದರ ಶೇ. ೭೦ ರಷ್ಟು ಸಮಯವನ್ನು ವ್ಯಷ್ಟಿ ಉಪಾಯಕ್ಕಾಗಿ ‘ಪ್ರಾಣಶಕ್ತಿ ವಹನ ಉಪಾಯಪದ್ಧತಿಗನುಸಾರ ಹುಡುಕಿದ ಜಪ, ಇನ್ನಿತರ ಯಾವುದಾದರೂ ಜಪ ಮಾಡಲು ತಿಳಿಸಿದ್ದಲ್ಲಿ ಅಥವಾ ಮಂತ್ರಜಪ ವಿದ್ದರೆ ಅದನ್ನು ಮಾಡಬೇಕು ಹಾಗೂ ಶೇ. ೩೦ ರಷ್ಟು ಸಮಯ ಸಮಷ್ಟಿಗಾಗಿನ ‘ಶ್ರೀ ವಿಷ್ಣವೇ ನಮಃ |’, ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಮತ್ತು ‘ಶ್ರೀ ಭವಾನಿ ದೇವ್ಯೈ ನಮಃ |’ ಈ ನಾಮಜಪವನ್ನು ಮಾಡಬೇಕು. ಈ ಸಾಧಕರು ‘ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ’ ಹುಡುಕಿದ ದೇವತೆಯ ಜಪಕ್ಕನುಸಾರ ಆಯಾ ದೇವತೆಯ ಚಿತ್ರವನ್ನು ಉಪಾಯಗಳಲ್ಲಿ ದೊರಕಿದ ಶರೀರದ ಚಕ್ರಗಳ ಸ್ಥಾನದಲ್ಲಿ ಹಚ್ಚಬಹುದು. ಹುಡುಕಿದ ಉಪಾಯಗಳಿಂದ ೨-೩ ವಾರಗಳಲ್ಲಿ ಲಾಭವಾಗದಿದ್ದರೆ ಅಥವಾ ತೀವ್ರ ತೊಂದರೆಯಿದ್ದ ಕಾರಣ ಉಪಾಯವನ್ನು ಹುಡುಕಲು ಆಗದಿದ್ದರೆ, ಶೇ. ೬೦ ಕ್ಕಿಂತ ಹೆಚ್ಚಿನ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಅಥವಾ ಸಂತರಿಗೆ ಕೇಳಬೇಕು.

೨ ಅ ೧ ಅ. ಚಕ್ರಗಳ ಸ್ಥಾನದಲ್ಲಿ ದೇವತೆಯ ಚಿತ್ರ ಮತ್ತು ನಾಮಪಟ್ಟಿಯನ್ನು ಹಾಕುವ ಬಗ್ಗೆ : ಈ ಸಾಧಕರು ‘ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ’ ಕಂಡುಹಿಡಿದ ದೇವತೆಯ ಜಪಾನುಸಾರ ಆಯಾ ದೇವತೆಯ ಚಿತ್ರವನ್ನು ಉಪಾಯದಲ್ಲಿ ದೊರಕಿದ ಶರೀರದ ಚಕ್ರಗಳ ಸ್ಥಾನದಲ್ಲಿ ಹಚ್ಚಬಹುದು.

ತೇಜತತ್ತ್ವಕ್ಕೆ ಸಂಬಂಧಿತ ಅಗ್ನಿದೇವ ಅಥವಾ ಸೂರ್ಯದೇವ ಇವರ ಜಪ ಬಂದಿದ್ದಲ್ಲಿ ದುರ್ಗಾದೇವಿಯ ಚಿತ್ರ ಹಾಕಬೇಕು.
ವಾಯುತತ್ತ್ವಕ್ಕೆ ಸಂಬಂಧಿತ ಹನುಮಂತ ಅಥವಾ ವಾಯುದೇವರ ಜಪ ಬಂದಿದ್ದಲ್ಲಿ ಹನುಮಂತನ ಚಿತ್ರ ಹಾಕಬೇಕು.
ಆಕಾಶ ತತ್ತ್ವಕ್ಕೆ ಸಂಬಂಧಿತ ಆಕಾಶದೇವತೆಯ ಜಪ ಬಂದಿದ್ದಲ್ಲಿ ಶಿವನ ಚಿತ್ರ ಹಾಕಬೇಕು.

ದೇವತೆಯ ಚಿತ್ರದ ಬದಲು ದೇವತೆಯ ನಾಮಪಟ್ಟಿ ಸಹ ಹಾಕಬಹುದು. ದೇವತೆಯ ಚಿತ್ರ ಅಥವಾ ನಾಮಪಟ್ಟಿಯನ್ನು ಶರೀರಕ್ಕೆ ಸ್ಪರ್ಶಿಸಿ ಹಾಕುವಾಗ, ‘ದೇವತೆಯ ಚಿತ್ರವಿರುವ ಬದಿ ಅಥವಾ ನಾಮಪಟ್ಟಿಯ ಅಕ್ಷರಗಳಿರುವ ಬದಿಯು ಶರೀರದ ದಿಕ್ಕಿನಲ್ಲಿ ಬರಬೇಕೋ ಹೊರಗಿನ ದಿಕ್ಕಿನಲ್ಲಿ ಬರಬೇಕು ?’ ಇದರ ವಿವರವನ್ನು ಪ್ರಾಣಶಕ್ತಿ (ಚೇತನಾ) ವಹನವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ ಈ ಗ್ರಂಥದಲ್ಲಿ ಪುಟ ಕ್ರ. ೫೭ ರಲ್ಲಿ ೬ ಇ ೬. ಶರೀರದಲ್ಲಿನ ಯಾವುದಾದರೊಂದು ಸ್ಥಳದಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ಉಪಾಯ ಮಾಡಲು ಸಾಧ್ಯವಿಲ್ಲದಿದ್ದರೆ ಅಥವಾ ನ್ಯಾಸ ಮಾಡಲು ಸಾಧ್ಯವಿಲ್ಲದ್ದರೆ ಅಲ್ಲಿ ಯಾವ ದೇವತೆಯ ನಾಮಜಪ ಮಾಡಬೇಕಾಗಿರುತ್ತದೆಯೋ, ಆ ದೇವತೆಯ ಚಿತ್ರವನ್ನು ಸಗುಣ ಅಥವಾ ನಿರ್ಗುಣ ಬದಿಯಲ್ಲಿಡಬೇಕು ಈ ವಿಷಯದ ಅಂತರ್ಗತ ನೀಡಲಾಗಿದೆ. ‘ಶೂನ್ಯ’, ‘ಮಹಾಶೂನ್ಯ’, ‘ನಿರ್ಗುಣ’, ಅಥವಾ ‘ಓಂ’ ಜಪ ಬಂದಲ್ಲಿ ಆಯಾ ನಾಮಪಟ್ಟಿಯ ಅಕ್ಷರವಿರುವ ಭಾಗವನ್ನು ಹೊರಗಿನ ದಿಕ್ಕಿನಲ್ಲಿ ಇಡಬೇಕು.

ಸದ್ಯ ಎಲ್ಲೆಡೆಗಳಲ್ಲಿ ಲಾಕ್‌ಡೌನ್ ಇರುವುದರಿಂದ ಸಾಧಕರ ಬಳಿ ಎಲ್ಲ ದೇವತೆಗಳ ಚಿತ್ರ ಇಲ್ಲದಿರಬಹುದು. ಸಾಧಕರ ಬಳಿ ಹಳೆಯ (ಮೊದಲು ಮುದ್ರಿಸಿದ) ಆದರೆ ಹಾಳಾಗದಿದ್ದ ಸಂಬಂಧಿತ ದೇವತೆಯ ಚಿತ್ರ ಅಥವಾ ನಾಮಪಟ್ಟಿ ಇದ್ದಲ್ಲಿ ಅದನ್ನು ಉಪಯೋಗಿಸಬಹುದು. ಇದು ಸಾಧ್ಯವಿಲ್ಲದಿದ್ದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಸ್ತರವಿರುವ ಅಥವಾ ಭಾವವಿರುವ; ಆದರೆ ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕರು ನಮ್ಮ ಸಮೀಪದಲ್ಲಿ, ಆಶ್ರಮದಲ್ಲಿ ಅಥವಾ ಮನೆಯಲ್ಲಿ ಇದ್ದರೆ ಅವರಿಂದ ಬರೆಸಿದ ಸಂಬಂಧಿತ ದೇವರ ನಾಮಜಪವನ್ನು ಕಾಗದದ ಮೇಲೆ ಬರೆದು ತೆಗೆದುಕೊಳ್ಳಬೇಕು. ಈ ಮೂರು ಪರ್ಯಾಯಗಳನ್ನು ಅವಲಂಬಿಸಲು ಆಗದಿದ್ದಲ್ಲಿ ಭಾವಪೂರ್ಣ ಪ್ರಾರ್ಥನೆಯನ್ನು ಮಾಡಿ ಸಾಧಕರು ತಾವೇ ಆ ನಾಮಜಪವನ್ನು ಕಾಗದದ ಮೇಲೆ ಬರೆಯಬೇಕು.

೨ ಅ ೨. ಉಪಾಯವೆಂದು ಕುಳಿತು ಜಪವನ್ನು ಮಾಡದ ಸಾಧಕರು : ಇವರು ದಿನವಿಡೀ ಸಂಪೂರ್ಣ ಸಮಯದಲ್ಲಿ ‘ಶ್ರೀ ವಿಷ್ಣವೇ ನಮಃ |’, ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಮತ್ತು ‘ಶ್ರೀ ಭವಾನಿ ದೇವ್ಯೈ ನಮಃ |’ ಈ ನಾಮಜಪವನ್ನು ಮಾಡಬೇಕು. ಈ ಸಾಧಕರು ಶರೀರದ ಚಕ್ರ ಸ್ಥಾನದಲ್ಲಿ ದೇವತೆಗಳ ಚಿತ್ರವನ್ನು ಹಚ್ಚುವ ಅವಶ್ಯಕತೆಯಿಲ್ಲ. ಒಂದು ವೇಳೆ ಅವರಿಗೆ ಏನಾದರೂ ತೊಂದರೆಯಾಗುತ್ತಿದ್ದಲ್ಲಿ, ಅವರು ತೊಂದರೆಯ ತೀವ್ರತೆಯನುಸಾರ (ಟಿಪ್ಪಣಿ) ಅಷ್ಟು ಕಾಲಾವಧಿಗಾಗಿ ಉಪಾಯಗಳ ಜಪವನ್ನು ಕುಳಿತು ಮಾಡಬೇಕು ಮತ್ತು ಇನ್ನುಳಿದ ಸಮಯದಲ್ಲಿ ‘ಶ್ರೀ ವಿಷ್ಣವೇ ನಮಃ |’, ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಮತ್ತು ‘ಶ್ರೀ ಭವಾನಿದೇವ್ಯೈ ನಮಃ |’ ಈ ನಾಮಜಪವನ್ನು ಪ್ರತಿಯೊಂದನ್ನು ೧/೩ ರಷ್ಟು ಸಮಯ ಮಾಡಬೇಕು. ಈ ಸಾಧಕರು ಹೋಗುತ್ತಾ-ಬರುತ್ತಾ ಹೆಚ್ಚು ಹೆಚ್ಚು ಈ ನಾಮಜಪವನ್ನು ಮಾಡಬೇಕು.

ಟಿಪ್ಪಣಿ – ಮಂದ ತೊಂದರೆಯಿದ್ದರೆ ೧ ರಿಂದ ೨ ಗಂಟೆ, ಮಧ್ಯಮ ತೊಂದರೆ ಇದ್ದರೆ ೩ ರಿಂದ ೪ ಗಂಟೆ ಹಾಗೂ ತೀವ್ರ ತೊಂದರೆಯಿದ್ದರೆ ೫ ರಿಂದ ೬ ಗಂಟೆ ಉಪಾಯಗಳನ್ನು ಮಾಡಬೇಕು.

೨ ಅ ೩. ಸಮಷ್ಟಿಗಾಗಿ ನಾಮಜಪವನ್ನು ಮಾಡುವ ಸಂತರು ಮತ್ತು ಸಾಧಕರು : ಕೆಲವು ಸಂತರು ಸಮಷ್ಟಿಗಾಗಿ ಕೆಲವು ಗಂಟೆಗಳ ಕಾಲ ನಾಮಜಪವನ್ನು ಮಾಡುತ್ತಾರೆ, ಹಾಗೆಯೇ ಶೇ. ೬೦ ಕ್ಕಿಂತ ಅಧಿಕ ಮಟ್ಟವನ್ನು ಹೊಂದಿರುವ ಕೆಲವು ಸಾಧಕರು ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳು, ಆಂದೋಲನಗಳು ಇತ್ಯಾದಿಗಳಲ್ಲಿ ಬರುವ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಲು ನಾಮಜಪವನ್ನು ಮಾಡುತ್ತಾರೆ. ಅವರು ಅಷ್ಟು ಸಮಯದಲ್ಲಿ ‘ಶ್ರೀ ವಿಷ್ಣವೇ ನಮಃ |’, ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಮತ್ತು ‘ಶ್ರೀ ಭವಾನಿ ದೇವ್ಯೈ ನಮಃ |’ ಈ ನಾಮಜಪವನ್ನು ಪ್ರತಿಯೊಂದು ೧/೩ ರಷ್ಟು ಸಮಯ ಮಾಡಬೇಕು.

೨ ಅ ೪. ಎಲ್ಲರಿಗಾಗಿ ಸಮಾನ್ಯ ಸೂಚನೆಗಳು

೧. ೧.೪.೨೦೨೦ರಿಂದ ೩೦.೬.೨೦೨೦ ರ ತನಕ ಎಲ್ಲ ಸಾಧಕರು ‘ನಿರ್ಗುಣ’ ಈ ನಾಮಜಪವನ್ನು ಮಾಡಬೇಕು ಮತ್ತು ಸಹಸ್ರಾರ ಮತ್ತು ವಿಶುದ್ಧ ಚಕ್ರಗಳ ಮೇಲೆ ‘ನಿರ್ಗುಣ’ ನಾಮಜಪದ ಪಟ್ಟಿಯನ್ನು ಹಾಕಬೇಕು ಎಂದು ಮೊದಲು ಸೂಚನೆಯನ್ನು ನೀಡಲಾಗಿತ್ತು. ಇನ್ನು ಮುಂದೆ ಸಾಧಕರು ‘ನಿರ್ಗುಣ’ ನಾಮಜಪ ಮಾಡಬಾರದು ಹಾಗೂ ನಾಮಜಪದ ಪಟ್ಟಿಯನ್ನು ಹಾಕಬಾರದು.

೨. ಬೆಳಗ್ಗೆ ಅಥವಾ ರಾತ್ರಿ ೯.೩೦ ರಿಂದ ೧೦.೦೦ ಗಂಟೆಯ ಸಮಯದಲ್ಲಿ ಸಾಧಕರು ಧ್ಯಾನವನ್ನು ಮಾಡುತ್ತಾರೆ. ಈ ಸಮಯವನ್ನು ಇಡೀ ದಿನದ ನಾಮಜಪದ ಸಮಯದಲ್ಲಿ ಸೇರಿಸಬೇಕು. ದಿನದಲ್ಲಿ ಎಷ್ಟು ಹೊತ್ತು ನಾಮಜಪಕ್ಕಾಗಿ ನೀಡುವವರಿದ್ದೇವೆ ಅದರ ೧/೩ ರಷ್ಟು ಸಮಯವನ್ನು, ‘ಶ್ರೀವಿಷ್ಣವೇ ನಮಃ |’, ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಮತ್ತು ‘ಶ್ರೀ ಭವಾನಿ ದೇವ್ಯೈ ನಮಃ |’, ಈ ನಾಮಜಪಗಳಿಗಾಗಿ ಪ್ರತಿಯೊಂದು ನಾಮಜಪಕ್ಕೆ ನೀಡಬೇಕು. ಉದಾ. ೩ ಗಂಟೆ ಜಪ ಮಾಡುವುದಾದರೆ ಒಂದೊಂದು ಗಂಟೆ ಪ್ರತಿಯೊಂದು ಜಪ ಮಾಡಬೇಕು. ಉಪಾಯವೆಂದು ಕುಳಿತು ನಾಮಜಪ ಮಾಡದ ಸಾಧಕರು ಈ ನಾಮಜಪವನ್ನು ಓಡಾಡುವಾಗ ಹೆಚ್ಚೆಚ್ಚು ಸಮಯ ಮಾಡಬೇಕು.

೩. ಕೊರೋನಾ ರೋಗಾಣುವಿನ ವಿರುದ್ಧ ನಮ್ಮಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಆಧ್ಯಾತ್ಮಿಕ ಬಲ ಸಿಗಬೇಕು ಎಂದು ಹೇಳಲಾದ ನಾಮಜಪ (ಶ್ರೀದುರ್ಗಾದೇವ್ಯೈ ನಮಃ (೩ ಬಾರಿ)- ಶ್ರೀ ಗುರುದೇವ ದತ್ತ (ಒಂದು ಬಾರಿ)- ಶ್ರೀದುರ್ಗಾದೇವ್ಯೈ ನಮಃ (೩ಬಾರಿ), – ಓಂ ನಮಃ ಶಿವಾಯ (೧ ಬಾರಿ)) ಇದನ್ನು ಪ್ರತಿದಿನ ಒಂದು ಜಾಗದಲ್ಲಿ ಕುಳಿತು ೧೦೮ ಸಲ ಮಾಡಬೇಕು. ಸದ್ಯ ಸಾಧಕರಿಗೆ ಕೊರೋನಾದ ದೃಷ್ಟಿಯಿಂದ ಪ್ರತಿದಿನ ೨ ಮಂತ್ರಜಪ ಮಾಡಲು ಹೇಳಲಾಗಿದೆ, ಮುಂದಿನ ಸೂಚನೆ ಸಿಗುವ ತನಕ ನಾಮಜಪ ಮತ್ತು ಮಂತ್ರಜಪ ಮಾಡಬೇಕಾಗಿದೆ.

೨ ಆ. ಮುದ್ರೆ : ಶ್ರೀ ವಿಷ್ಣವೇ ನಮಃ |, ಶ್ರೀ ಸಿದ್ಧಿವಿನಾಯಕಾಯ ನಮಃ |, ಶ್ರೀ ಭವಾನಿದೇವ್ಯೈ ನಮಃ | ಈ ನಾಮಜಪವನ್ನು ಹೋಗುವಾಗ-ಬರುವಾಗ ಅಥವಾ ಕುಳಿತುಕೊಂಡು ಮಾಡುವಾಗ ‘ತರ್ಜನಿಯ ತುದಿಗೆ ಹೆಬ್ಬೆರಳಿನ ತುದಿಯನ್ನು ಜೋಡಿಸುವುದು’, ಈ ಮುದ್ರೆಯನ್ನು ಎರಡೂ ಕೈಗಳಿಂದ ಮಾಡಬೇಕು. ಕೊರೋನಾ ರೋಗಾಣುವಿನ ವಿರುದ್ಧ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು ನಾಮಜಪ ಮಾಡುವಾಗಲೂ ಇದೇ ಮುದ್ರೆಯನ್ನು ಮಾಡಬೇಕು.

– (ಪೂ.) ಡಾ. ಮುಕುಲ ಗಾಡಗೀಳ (೨೩.೫.೨೦೨೦)

Leave a Comment