ವಾಹನವನ್ನು ದೃಷ್ಟಿ ತಗಲುವುದರಿಂದ ಹೇಗೆ ರಕ್ಷಿಸುವುದು?

ವಾಹನ ಮತ್ತು ವಾಹನದಲ್ಲಿನ ವ್ಯಕ್ತಿಗಳು ಬಾಧಿತರಾಗುವ ಕಾರಣಗಳು ಮತ್ತು ಅದರ ಪರಿಣಾಮ

 

೧. ವಾಹನದಲ್ಲಿ ಪ್ರವಾಸ ಮಾಡುವಾಗ ಅದು ಅನೇಕ ಸ್ಥಳಗಳಲ್ಲಿನ ರಜ-ತಮಾತ್ಮಕ ವಾಯುಮಂಡಲದಿಂದ ಹೋಗುತ್ತಿರುತ್ತದೆ. ಈ ವಾಯುಮಂಡಲದಲ್ಲಿನ ತ್ರಾಸದಾಯಕ ಲಹರಿಗಳಿಂದ ಕೇವಲ ವಾಹನವಷ್ಟೇ ಅಲ್ಲದೇ, ವಾಹನದಲ್ಲಿನ ವ್ಯಕ್ತಿಗಳೂ ತೊಂದರೆಗೀಡಾಗುತ್ತಾರೆ.
೨. ಈ ಪ್ರಕ್ರಿಯೆಯಲ್ಲಿ ವಾಹನವು ರಜ-ತಮಾತ್ಮಕ ಲಹರಿಗಳಿಂದ ಬಾಧಿತವಾಗುವುದರಿಂದ ವಾಹನವು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಆ. ವಾಹನಕ್ಕೆ ದೃಷ್ಟಿ ತಗಲಬಾರದೆಂದು ಮಾಡಬೇಕಾದ ಉಪಾಯಗಳು – ವಾಹನದಲ್ಲಿ ಮೆಣಸಿನಕಾಯಿ-ಲಿಂಬೆಯನ್ನು ನೇತಾಡಿಸುವುದು ಅಥವಾ ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸುವುದು: ವಾಹನವು ರಜ-ತಮಾತ್ಮಕ ದೋಷಗಳಿಂದ ಮುಕ್ತ ವಾಗಬೇಕೆಂದು ಅದರಲ್ಲಿ ಚಾಲಕನ ಆಸನದ ಎದುರಿನ ಗಾಜಿನ ಬದಿಗೆ (ಮಧ್ಯಭಾಗಕ್ಕೆ ಬರುವಂತೆ) ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸಬೇಕು ಅಥವಾ ಮೆಣಸಿನಕಾಯಿ ಮತ್ತು ಲಿಂಬೆಯನ್ನು ದಾರದಲ್ಲಿ ಪೋಣಿಸಿ (ಚಿತ್ರ ನೋಡಿ) ನೇತಾಡಿಸಬೇಕು.

೧. ಪ್ರಕ್ರಿಯೆ: ಕಪ್ಪು ಗೊಂಬೆ, ಮೆಣಸಿನಕಾಯಿ ಅಥವಾ ಲಿಂಬೆಕಾಯಿಯಲ್ಲಿನ ರಜ- ತಮಾತ್ಮಕ ಸ್ಪಂದನಗಳು ರಜ-ತಮಾತ್ಮಕ ಲಹರಿಗಳನ್ನು ಆಕರ್ಷಿಸಿಕೊಳ್ಳುವ ಮಾಧ್ಯಮಗಳಾಗಿವೆ.

೨. ಘಟಕಗಳ ಮಿತಿ: ವಾಹನದಲ್ಲಿ ಒಂದೆರಡು ದಿನ ಪ್ರವಾಸ ಮಾಡಿದರೆ ಈ ಘಟಕಗಳನ್ನು ವಿಸರ್ಜನೆ ಮಾಡಿ ಅವುಗಳ ಬದಲಿಗೆ ಹೊಸ ಘಟಕಗಳನ್ನು ಹಾಕಬೇಕು, ಇಲ್ಲವಾದರೆ ಈ ಘಟಕಗಳಲ್ಲಿ ಘನಿಭವಿಸಿದ ರಜ-ತಮಾತ್ಮಕ ಸ್ಪಂದನಗಳ ತೊಂದರೆಯಾಗಿ ವಾಹನದ ಮೇಲೆ ಮತ್ತು ವಾಹನದಲ್ಲಿನ ವ್ಯಕ್ತಿಗಳ ಮೇಲೆ ತ್ರಾಸದಾಯಕ ಸ್ಪಂದನಗಳ ಆವರಣವು ಬರಬಹುದು ಮತ್ತು ವಾಯುಮಂಡಲವು ಅಶುದ್ಧವಾಗುವ ಸಾಧ್ಯತೆಯಿರುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜ್ಯೇಷ್ಠ ಶುಕ್ಲ ೧೦, ಕಲಿಯುಗ ವರ್ಷ ೫೧೧೧ ೨.೬.೨೦೦೯ ಮಧ್ಯಾಹ್ನ ೩.೨೬)

ವಾಹನದ ದೃಷ್ಟಿಯನ್ನು ತೆಗೆಯುವುದು

೧. ಪ್ರವಾಸದಲ್ಲಿ ಕೆಟ್ಟ ಶಕ್ತಿಗಳು ತೊಂದರೆ ಕೊಡಬಾರದೆಂದು ಪ್ರವಾಸಕ್ಕೆ ಹೊರಡುವ ಮೊದಲೇ ವಾಹನದ ದೃಷ್ಟಿಯನ್ನು ತೆಗೆಯಬೇಕು : ವಾಹನದಲ್ಲಿ ಪ್ರವಾಸ ಮಾಡುವಾಗ ಕೆಟ್ಟ ಶಕ್ತಿಗಳು ವಾಹನವನ್ನು ಹಾಳುಮಾಡಿ ಅಥವಾ ಅಪಘಾತವನ್ನು ಮಾಡಿ ಆಡಚಣೆಗಳನ್ನು ತರುವ ಸಾಧ್ಯತೆಗಳಿರುತ್ತವೆ. ಆದುದರಿಂದ ಯಾವುದೇ ಶುಭಕಾರ್ಯಕ್ಕೆ ಅಥವಾ ಮಹತ್ವದ ಕಾರ್ಯಕ್ಕೆ ಹೋಗುವಾಗ ವಾಹನದ ದೃಷ್ಟಿಯನ್ನು ತೆಗೆಯಬೇಕು.

೨. ವಾಹನಕ್ಕೆ ದೃಷ್ಟಿ ತಗಲಿದ್ದರೆ ವಾಹನದ ದೃಷ್ಟಿಯನ್ನು ತೆಗೆಯಬೇಕು: ವಾಹನದಲ್ಲಿ ಸತತವಾಗಿ ಒಂದಲ್ಲ ಒಂದು ಕಾರಣದಿಂದ ತೊಂದರೆಗಳು ನಿರ್ಮಾಣ ವಾಗುವುದು, ಅಪಘಾತದ ಪ್ರಸಂಗಗಳು ಎದುರಾಗುವುದು, ವಾಹನದಲ್ಲಿ ಕುಳಿತ ನಂತರ ತಲೆ ಭಾರವಾಗುವುದು, ವಾಹನದಲ್ಲಿ ಪ್ರವಾಸ ಮಾಡಿ ಬಂದ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ವಾಹನಕ್ಕೆ ದೃಷ್ಟಿ ತಗಲಿದೆ ಎಂದು ತಿಳಿದುಕೊಳ್ಳಬೇಕು ಮತ್ತು ವಾಹನದ ದೃಷ್ಟಿಯನ್ನು ತೆಗೆಯಬೇಕು.

೩. ವಾಹನದ ದೃಷ್ಟಿಯನ್ನು ತೆಗೆಯುವ ಪದ್ಧತಿ
ಅ. ಪ್ರವಾಸದಲ್ಲಿರುವಾಗ ವಾಹನದ ದೃಷ್ಟಿಯನ್ನು ತೆಗೆಯುವುದಿದ್ದರೆ ದಾರಿಯಲ್ಲಿ ಮಾರುತಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನವಿದ್ದರೆ ಅಥವಾ ಯಾವುದಾದರೊಂದು ಜಲಾಶಯವಿದ್ದರೆ ಅಲ್ಲಿ ದೃಷ್ಟಿಯನ್ನು ತೆಗೆಯಲು ವಾಹನವನ್ನು ನಿಲ್ಲಿಸಬೇಕು.

ಆ. ದೃಷ್ಟಿಯನ್ನು ತೆಗೆಯುವ ಮೊದಲು ವಾಹನದ ಬಾಗಿಲು ಮತ್ತು ಮುಂದಿನ ಭಾಗವನ್ನು (ಬಾನೆಟ್) ತೆರೆದಿಡಬೇಕು. ವಾಹನದ ಮುಂದೆ ನಿಂತುಕೊಂಡು ವಾಹನದ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಬೇಕು. ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಅಥವಾ ಉಚ್ಚ ದೇವತೆಯ ದೇವಸ್ಥಾನದ ಮೆಟ್ಟಿಲಿನ ಮೇಲೆ ಒಡೆಯಬೇಕು ಅಥವಾ ತೆಂಗಿನಕಾಯಿಯನ್ನು ಜಲಾಶಯದಲ್ಲಿ ವಿಸರ್ಜಿಸಬೇಕು. ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟ ತ್ರಾಸದಾಯಕ ಸ್ಪಂದನಗಳು ದೇವತೆಯ ಕೃಪಾಶೀರ್ವಾದದಿಂದ ನಾಶವಾಗುತ್ತವೆ ಅಥವಾ ನೀರಿನಲ್ಲಿ ವಿಸರ್ಜನೆಯಾಗುತ್ತವೆ.

ಇ. ಹೆಚ್ಚಾಗಿ ದಾರಿಯಲ್ಲಿ ಮಾರುತಿಯ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳು ಅಥವಾ ಜಲಾಶಯಗಳು ಇರುವುದಿಲ್ಲ. ಇಂತಹ ಸಮಯದಲ್ಲಿ ತೆಂಗಿನಕಾಯಿಯಿಂದ ವಾಹನದ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ಆ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಒಡೆಯಬೇಕು. ಒಡೆದ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿನಿಂದ ನಾಲ್ಕೂ ದಿಕ್ಕುಗಳಿಗೆ ಎಸೆಯಬೇಕು. ದೃಷ್ಟಿತೆಗೆದ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಒಡೆಯುವುದರಿಂದ ತೆಂಗಿನಕಾಯಿಯಲ್ಲಿನ ತ್ರಾಸದಾಯಕ ಸ್ಪಂದನಗಳು ಭೂಮಿಯಲ್ಲಿ ವಿಸರ್ಜಿಸಲ್ಪಡುತ್ತವೆ.

ಈ. ದೃಷ್ಟಿಯನ್ನು ತೆಗೆದ ನಂತರ ವಾಹನಕ್ಕೆ ಊದುಬತ್ತಿಗಳಿಂದ ಬೆಳಗಿ ಮತ್ತು ದೇವತೆಯ ಜಯಘೋಷ ಮಾಡಿ ಹೊರಡಬೇಕು. ಊದುಬತ್ತಿಗಳಿಂದ ಬೆಳಗುವುದರಿಂದ ಆ ಸ್ಥಳದ ಶುದ್ಧೀಕರಣವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ನಿವಾಳಿಸುವುದು ಮತ್ತು ಮಾನಸ ದೃಷ್ಟಿ (ವಾಸ್ತು, ವಾಹನ ಮತ್ತು ಗಿಡಗಳಿಗೆ ದೃಷ್ಟಿ ತಗಲಬಾರದೆಂದು ಮಾಡುವ ಉಪಾಯಗಳೊಂದಿಗೆ)’)

Leave a Comment