ಹಿಂದೂ ಎಂದು ಯಾರಿಗೆ ಹೇಳಬೇಕು ?

ಹಿಂದೂ

‘ವೇದ, ವೇದಾಂಗಗಳು, ಪುರಾಣ ಮತ್ತು ಅದರ ಮೂಲಕ ಬಂದಿರುವ ಸಂಪ್ರದಾಯಗಳು ಯಾವನಿಗೆ ಮಾನ್ಯವಾಗಿವೆಯೋ ಮತ್ತು ಯಾವನು ಪಾರಂಪರಿಕ ಹಿಂದೂಗಳ ಹೊಟ್ಟೆಯಿಂದ ಜನ್ಮಕ್ಕೆ ಬಂದಿದ್ದಾನೆಯೋ ಅವನಿಗೆ ಹಿಂದೂ ಎಂದು ಹೇಳಬೇಕು.

ದೀಕ್ಷಾಹಿಂದೂ

ಮೇಲೆ ಉಲ್ಲೇಖಿಸಿರುವ ವಿಷಯಗಳು ಯಾವನಿಗೆ ಮನಸ್ಸಿನಿಂದ ಪ್ರಮಾಣಗಳೇ ಆಗಿವೇ ಎಂದು ಅನಿಸುತ್ತದೆಯೋ, ಅವನಿಗೆ ‘ದೀಕ್ಷಾಹಿಂದೂ’ ಎನ್ನುತ್ತಾರೆ.

ಜನ್ಮಹಿಂದೂ

ಯಾರಿಗೆ ವೇದ, ವೇದಾಂಗಗಳು, ಪುರಾಣಗಳು ಮತ್ತು ಅದರ ಮೂಲಕ ಸಂಪ್ರದಾಯ ಇವೆರಡೂ ಒಪ್ಪಿಗೆ ಇಲ್ಲವೋ ಮತ್ತು ಅವನು ಕೇವಲ ಹಿಂದೂಗಳ ಹೊಟ್ಟೆಯಲ್ಲಿ ಜನ್ಮಕ್ಕೆ ಬಂದಿದ್ದಾನೆಯೋ, ಅವನು ಕೇವಲ ‘ಜನ್ಮಾರ್ಥ’, ಅಂದರೆ ಜನ್ಮಹಿಂದೂ ಆಗಿರುತ್ತಾನೆ.

ರಾಜಕೀಯ ಹಿಂದೂ

ಕೆಲವು ಹಿಂದೂಗಳ ಸಂದರ್ಭದಲ್ಲಿ ಹೇಳಬೇಕಾದರೆ, ಅವರು ಹಿಂದೂರಾಷ್ಟ್ರವಾದಕ್ಕಾಗಿ ಬಹಳ ದೊಡ್ಡ ತ್ಯಾಗ ಮಾಡಿರುವುದು ಕಂಡುಬರುತ್ತದೆ. ಅವರ ತ್ಯಾಗದ ಬಗ್ಗೆ ಎಲ್ಲ ಹಿಂದೂಗಳಿಗೆ ಪರಮಾದರವಿದೆ; ಆದರೆ ಹಿಂದೂಗಳಲ್ಲದ ಜನರು ಭೂತಕಾಲದಲ್ಲಿ ಹಿಂದೂಗಳ ಮೇಲೆ ಯಾವೆಲ್ಲ ವಿಪರೀತ ಅತ್ಯಾಚಾರಗಳನ್ನು ಮಾಡಿದ್ದಾರೆಯೋ, ಅದರ ಬಗ್ಗೆ ಅವರ ಮನಸ್ಸಿನಲ್ಲಿ ಮಿತಿಮೀರಿದ ದ್ವೇಷ ಕಂಡುಬರುತ್ತದೆ; ಆದರೆ ಇದು ನಿಜವಾದ ಹಿಂದೂವಿನ ಲಕ್ಷಣವಲ್ಲ. ಇವರನ್ನು ನಾನು ‘ರಾಜಕೀಯ ಹಿಂದೂ’ ಎಂದು ತಿಳಿಯುತ್ತೇನೆ. ಅವರು ಇಷ್ಟೊಂದು ಬುದ್ಧಿವಂತರಾಗಿದ್ದರೂ ಸಮ್ಯಕ್ ಉಪಾಸನೆಯ ಅಭಾವದಿಂದಾಗಿ ಧರ್ಮದ ಮರ್ಮವನ್ನು ತಿಳಿದುಕೊಳ್ಳುವ ಸಂದರ್ಭದಲ್ಲಿ ಅಜ್ಞಾನಿಗಳಾಗಿದ್ದಾರೆ. ಇದು ಅವರ ದ್ವೇಷದ ಏಕೈಕ ಕಾರಣವೆಂದು ಹೇಳಬಹುದು. ಆದುದರಿಂದ ಇಂತಹವರು ಅವರ ಮೃತ್ಯುವಿನ ನಂತರ ತಕ್ಷಣ ಮನುಷ್ಯ ಜನ್ಮಕ್ಕೆ ಬರದಿದ್ದರೂ ಯಾವಾಗ ಬರುತ್ತಾರೆಯೋ ಆಗ ಅವರ ಜನ್ಮವು ಹಿಂದೂ ಧರ್ಮದ ಸೇವೆಗಾಗಿಯೇ ಇರುವುದು. ಗೋವಳಕರ ಗುರೂಜಿ, ಶಿವಾಜಿ ಮಹಾರಾಜರು ಮತ್ತು ತತ್ಸಮ ವ್ಯಕ್ತಿಗಳ ಬಗ್ಗೆ ಹೀಗಾಗುವುದಿಲ್ಲ, ಏಕೆಂದರೆ ಅವರು ಹಿಂದೂರಾಷ್ಟ್ರ ನಿರ್ಮಿತಿಯ ಕಾರ್ಯವನ್ನು ಈಶ್ವರಪ್ರಾಪ್ತಿಯ ಸಾಧನೆ ಎಂದು ಮಾಡಿದ್ದರು.’ – ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

ಆಸ್ತಿಕ ಮತ್ತು ನಾಸ್ತಿಕ

ಸಮಸ್ತ ವಿಶ್ವವ್ಯಾಪಾರದ ಹಿಂದೆ ಯಾರಾದರೂ ಅದರ ನಿಯಂತ್ರಕರು ಇರಲೇಬೇಕು. ಹೀಗೆ ಯಾವನು ಇದ್ದಾನೆಯೋ, ಅವನೇ ಈಶ್ವರ. ಅವನೇ ಈ ವಿಶ್ವದ ಕರ್ತಾರ (ಸೃಷ್ಟಿಕರ್ತ), ಧರ್ತಾರ (ಪಾಲಿಸುವವ) ಮತ್ತು ಸಂಹರಿಸುವವನಾಗಿದ್ದು ಚೈತನ್ಯ ಅಥವಾ ಜ್ಞಾನವು ಅವನ ವೈಶಿಷ್ಟ್ಯವಾಗಿದೆ. ಹಿಂದೂ ಧರ್ಮದಂತೆ ಹೀಗೆ ಈಶ್ವರನ ಅಸ್ತಿತ್ವ ಮತ್ತು ವೇದಗಳ ಪ್ರಮಾಣವನ್ನು ಒಪ್ಪುವವನಿಗೆ ಆಸ್ತಿಕ ಮತ್ತು ಅದನ್ನು ಒಪ್ಪದಿರುವವನಿಗೆ ನಾಸ್ತಿಕ ಎಂಬ ಸಂಜ್ಞೆಯಿದೆ.
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ

(ಸನಾತನ ನಿರ್ಮಿಸಿದ ‘ಧರ್ಮದ ಆಚರಣೆ ಮತ್ತು ರಕ್ಷಣೆ’ ಮತ್ತು ‘ಧರ್ಮದ ಮೂಲಭೂತ ವಿವೇಚನ’ ಗ್ರಂಥಗಳು)

Leave a Comment