ಭಾರತದ ಅವನತಿಯ ಕಾರಣಗಳು

ಪ್ರಭು ಶ್ರೀರಾಮಚಂದ್ರ, ಭಗವಾನ್ ಶ್ರೀಕೃಷ್ಣರಂತಹ ಪುರುಷೋತ್ತಮರು ಭಾರತದಲ್ಲಿ ಆಗಿಹೋಗಿದ್ದರಿಂದ ಭಾರತವು ಆಧ್ಯಾತ್ಮಿಕತೆಯ ಶಿಖರವನ್ನು ಮುಟ್ಟಿತು, ಹೀಗಿರುವಾಗಲೂ ಮುಂದೆ ಅದರ ಅವನತಿಯು ಏಕೆ ಆಯಿತು, ಎಂಬ ಪ್ರಶ್ನೆಯು ಹಲವರಲ್ಲಿ ತಲೆದೂರುತ್ತದೆ. ಅದರ ಕಾರಣಗಳು ಮುಂದಿನಂತೆ ಇವೆ.

ಅ. ಹಿಂದೂಗಳು ವರ್ಣಾಶ್ರಮಧರ್ಮದ ಪಾಲನೆ ಮಾಡದಿರುವುದು : ‘ಕೆಲವು ಹಿಂದೂ ವಿಚಾರವಂತರಿಗನುಸಾರ ‘ವರ್ಣಾಶ್ರಮಧರ್ಮ ಹಾಗೆಯೇ ಜಾತಿಧರ್ಮದಿಂದ ನಮ್ಮ ರಾಷ್ಟ್ರಕ್ಕೆ ತುಂಬ ಹಾನಿಯಾಗಿದೆ’ ಎಂದು ಅನಿಸುತ್ತದೆ’ ಆದರೆ ಇದು ನಿಜವಲ್ಲ. ಕೇವಲ ಪರಸ್ಪರಲ್ಲಿನ ವೈರತ್ವ ಮತ್ತು ಚಾರಿತ್ರ್ಯಸಂಪನ್ನತೆಯ ಅಭಾವದಿಂದಾಗಿಯೇ ನಮ್ಮ ದೇಶಕ್ಕೆ ಹಾನಿಯಾಗಿದೆ. ಚಾತುರ್ವಣ್ರ್ಯ ಮತ್ತು ಜಾತಿಭೇದ ಇರುವಾಗಲೂ ನಮ್ಮ ದೇಶ ಸಾವಿರಾರು ವರ್ಷ ವೈಭವದ ಶಿಖರದ ಮೇಲಿರುವುದು ಕಂಡುಬರುತ್ತದೆ.

ನಮ್ಮ ಬ್ರಾಹ್ಮಣರು ಸಮಾಜದ ಗುರುಸ್ಥಾನದಲ್ಲಿ ವಿರಾಜಮಾನರಾಗುವುದನ್ನು ಬಿಟ್ಟು ತಮ್ಮನ್ನು ಶ್ರೇಷ್ಠ ಮತ್ತು ಇತರ ವರ್ಣಗಳನ್ನು ಕನಿಷ್ಟವೆಂದು ತಿಳಿದರು. ತಮ್ಮ ಐಹಿಕ ಸುಖಕ್ಕಾಗಿ ಬ್ರಾಹ್ಮಣವರ್ಗವು ಇತರರ ಮೇಲೆ ಅನ್ಯಾಯ ಮಾಡತೊಡಗಿತು. ಇದರಿಂದಾಗಿ ಇತರ ವರ್ಣಗಳೂ ಹಾಗೆಯೇ ವರ್ತಿಸಲಾರಂಭಿಸಿದವು. ಈ ರೀತಿಯಲ್ಲಿ ಹಿಂದೂಗಳೇ ತಮ್ಮ ಧರ್ಮನಿಷ್ಠೆತೆಯ ನಷ್ಟವನ್ನು ಮಾಡಿಕೊಂಡರು. ಧರ್ಮದ ನಾಶವೇ ಹಿಂದೂಗಳ ಅವನತಿಯ ನಿಜವಾದ ಕಾರಣವಾಗಿದೆ.’
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

ಆ. ಧರ್ಮ ಮತ್ತು ರಿಲಿಜನ್ (ಉಪಾಸನಾಪದ್ಧತಿ) ಈ ಶಬ್ದಗಳು ಏಕಾರ್ಥವಾಚಕವಾಗಿವೆ, ಎಂದು ತಿಳಿಯುವುದು : ಧರ್ಮ ಮತ್ತು ರಿಲಿಜನ್ ಈ ಶಬ್ದಗಳನ್ನು ಏಕಾರ್ಥವಾಚಕವೆಂದು ತಿಳಿದಿದ್ದರಿಂದ ನಮ್ಮ ರಾಷ್ಟ್ರದಲ್ಲಿ ಎಲ್ಲ ಗೊಂದಲಗಳು ನಿರ್ಮಾಣವಾಗಿವೆ. ಇವೆರಡರ ನಡುವಿನ ವ್ಯತ್ಯಾಸ ಮುಂದಿನಂತಿದೆ.

1. ರಿಲಿಜನ್ನ ಸಂಕುಚಿತ ಅರ್ಥವನ್ನು ಮಾನವನ ಕಲ್ಯಾಣದ ದೃಷ್ಟಿಯಿಂದ ಆಯಾ ಮಾನವಸಮೂಹವು ನಂಬಿದ ಒಂದು ಉಪಾಸನಾಪದ್ಧತಿ ಎಂದು ಹೇಳಬಹುದು. ಮಾನವನಿಗೆ ತನ್ನ ಮೂಲ ಸ್ವರೂಪದ ದೃಷ್ಟಿಯನ್ನು ನೀಡಿ ಅದನ್ನು ಪ್ರಾಪ್ತಮಾಡಿಕೊಡುವ ಸಾಮಥ್ರ್ಯಶಾಲಿ ಸಾಧನವನ್ನು ಯಾವುದು ಪ್ರಾಪ್ತಮಾಡಿಕೊಡುತ್ತದೆಯೋ, ಅದಕ್ಕೆ ವ್ಯಾಪಕ ಅರ್ಥದಲ್ಲಿ ಧರ್ಮ ಎನ್ನುತ್ತಾರೆ.

2. ರಿಲಿಜನ ಎಂಬ ಶಬ್ದದ ಅರ್ಥವು ಬಹಳ ಸಂಕುಚಿತವಾಗಿದೆ. ಇದಕ್ಕೆ ಬದಲಾಗಿ ಧರ್ಮ ಎಂಬ ಶಬ್ದದ ಅರ್ಥವು ಬಹಳ ವ್ಯಾಪಕವಾಗಿದೆ, ಅದರಲ್ಲಿ ಸಾಪೇಕ್ಷತೆಯೂ ಇಲ್ಲ. ಧರ್ಮ ನಿರಪೇಕ್ಷವೂ, ವ್ಯಾಪಕವಾಗಿದೆ. ಈಗ ವ್ಯಾಪಕ ಈ ಶಬ್ದವನ್ನು ಹೇಳಿದರೆ ವ್ಯಾಪ್ಯ ಎಂಬ ಶಬ್ದದ ದೃಷ್ಟಿಯಿಂದ ಅದು ಸಾಪೇಕ್ಷವಾಗುತ್ತದೆ; ಆದುದರಿಂದಲೇ ಧರ್ಮದ ವ್ಯಾಪಕತೆಯು ವ್ಯಾಪ್ಯ ಮತ್ತು ವ್ಯಾಪಕ ಇವೆರಡನ್ನು ಹೊರತಾಗಿ ಇದೆ.

3. ಧರ್ಮ ಎಂಬ ಶಬ್ದದದ ಅರ್ಥ `ಸ್ವಭಾವ’ಎಂದಾಗಿದೆ. ರಿಲಿಜನ ಎಂಬ ಶಬ್ದದ ಅರ್ಥ ಸ್ವಭಾವವೆಂದು ಎಲ್ಲಿದೆ ? ಸ್ವಭಾವಕ್ಕೆ ಆಂಗ್ಲದಲ್ಲಿ ‘ನೇಚರ್’ ಎಂಬ ಶಬ್ದವಿದೆ. ಆ ‘ನೇಚರ್’ ಶಬ್ದದ ಅರ್ಥವೂ ನಮ್ಮ ಸ್ವಭಾವ ಎಂಬ ಶಬ್ದದ ಅರ್ಥಕ್ಕೆ ಹೊಂದುವುದಿಲ್ಲ. ‘ನೇಚರ್’ ಈ ಶಬ್ದವನ್ನು ಆಯಾ ವ್ಯಕ್ತಿಗಳ ಮನಸ್ಸಿನ ಗುಣಗಳಿಗನುಸಾರ ಮಾಡಲಾಗುತ್ತದೆ. ಹಾಗೆ ನಮ್ಮ ‘ಸ್ವಭಾವ’ ಶಬ್ದದ ಅರ್ಥವಿಲ್ಲ. ಸ್ವಭಾವ ಈ ಶಬ್ದದ ಅರ್ಥ ‘ಆತ್ಮ’ ಎಂದಿದೆ ಮತ್ತು ಅದು ಗುಣಸಂಗರಹಿತವಾಗಿದೆ.

ನಮ್ಮ ದೇಶದಲ್ಲಿನ ರಾಜಕಾರಣಿಗಳು ಹಿಂದೂ ಧರ್ಮದವರಾಗಿದ್ದರೂ ಧರ್ಮ ಮತ್ತು ರಿಲಿಜನ್ ಈ ಎರಡೂ ಶಬ್ದಗಳು ಏಕಾರ್ಥವಾಚಕಗಳಾಗಿವೆ ಎಂಬ ತಪ್ಪು ತಿಳುವಳಿಕೆಯಲ್ಲಿದ್ದಾರೆ. ರಿಲಿಜನ್ನಿಂದ ಪಾಶ್ವಾತ್ಯ ದೇಶಗಳಲ್ಲಿ ಪೋಪರ ಆಡಳಿತವಿದ್ದರೂ ಹೇಗೆ ಸಜ್ಜನರ ಮೇಲೆ (ಸುಟ್ಟು ಕೊಲ್ಲುವುದು, ದೇಹಾಂತ ಪ್ರಾಯಶ್ಚಿತ್ತ ಇಂತಹ ಶಿಕ್ಷೆಗಳಿಂದ) ಅತ್ಯಾಚಾರಗಳಾದವು, ಹಾಗೆಯೇ ನಮ್ಮಲ್ಲಿಯೂ ಆಗಬಹದು ಎಂಬ ಭಯ ನಮ್ಮ ರಾಜಕಾರಣಿಗಳಿಗೆ ಉಂಟಾಯಿತು. ಹಾಗೆಯೇ ನಮ್ಮಲ್ಲಿ ಆಂಗ್ಲ ಶಿಕ್ಷಣವ್ಯವಸ್ಥೆಯಿಂದ ರಿಲಿಜನ್ನಿನ ಉತ್ಪತ್ತಿಯಾಯಿತು. ಈ ವಿಷಯಗಳ ಪರಿಣಾಮವೆಂದರೆ ‘ಧರ್ಮನಿರಪೇಕ್ಷ ರಾಷ್ಟ್ರವಿರಬೇಕು’ ಎಂಬುದು ಭಾರತೀಯ ರಾಜಕಾರಣಿಗಳ ಧೋರಣೆಯಾಯಿತು.

ಯುರೋಪ ಮತ್ತು ಅಮೇರಿಕಾಗಳ ಇತಿಹಾಸದ ಅಧ್ಯಯನದಿಂದ ನಮಗೆ ರಿಲಿಜನನಿಂದ ಆಗುವ ಅನರ್ಥಗಳು ಕಂಡುಬರುತ್ತವೆ. ವಾಸ್ತವಿಕ ರಿಲಿಜನ ಮತ್ತು ಧರ್ಮ ಇವುಗಳನ್ನು ಏಕಾರ್ಥವಾಚಕ ಶಬ್ದಗಳೆಂದು ತಿಳಿದಿದ್ದರಿಂದ ನಮ್ಮಲ್ಲಿರುವ ಸಜ್ಜನರ ಮೇಲೆ ಅತ್ಯಾಚಾರವಾಗಿರುವುದು ಕಂಡುಬರುತ್ತದೆ, ಅಧಿಕಾರದ ದುರಾಸೆಯಿಂದ ರಾಜಕಾರಣಿಗಳಲ್ಲಿ ಭ್ರಷ್ಟಾಚಾರ ಹೆಚ್ಚಿರುವುದು ಮತ್ತು ದೇಶದ ಸ್ಥಿತಿಯು ಅತ್ಯಂತ ದಯನೀಯವಾಗಿರುವುದು ಕಂಡುಬರುತ್ತದೆ.’
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

ಇ. ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಯಿಂದ ಸ್ವಸಂಸ್ಕೃತಿ ಮರೆತುಹೋಯಿತು : ಪರಮಾತ್ಮನು ಹೇಗೆ ಒಳಗಿದ್ದಾನೆಯೋ, ಹಾಗೆಯೇ ಹೊರಗೂ ಇದ್ದಾನೆ. ಭಾರತೀಯರು ಭಕ್ತಿಯನ್ನು ಮಾಡತೊಡಗಿದ್ದರಿಂದ ಅವರ ವೃತ್ತಿಯು ಅಂತರ್ಮುಖವಾಯಿತು. ಇದರಿಂದ ಅವರು ಹೊರಗಿನ ಸಂಸಾರದ ಕಡೆಗೆ ದುರ್ಲಕ್ಷ್ಯ ಮಾಡಿದರು. ಅವರು ಹೊರಗಿನ ಜಗತ್ತಿನ ಸಂಶೋಧನೆಯನ್ನು ಮಾಡಲಿಲ್ಲ, ವಿಜ್ಞಾನದ ಕಡೆಗೆ ದುರ್ಲಕ್ಷಮಾಡಿದರು. ಇದರಿಂದ ಅವರ ವ್ಯಾವಹಾರಿಕ ಅವನತಿಯಾಯಿತು. ದೇಶದಲ್ಲಿನ ಜನತೆಯು ಆಳಸಿ, ದರಿದ್ರ, ರೋಗಗ್ರಸ್ತ ಮತ್ತು ದುರ್ಬಲವಾಯಿತು. ಹಸಿವಿನಿಂದ ಬಳಲುತ್ತಿರುವ ಜನರು ಆಧ್ಯಾತ್ಮದ ವಿಚಾರವನ್ನೂ ಮಾಡಲಾರರು. ನೈತಿಕ ಮೌಲ್ಯಗಳು ರಸಾತಳಕ್ಕೆ ಹೋದವು. ಇದರ ಪರಿಣಾಮದಿಂದ ಜನರು ಭ್ರಷ್ಟಾಚಾರಿ, ಲಂಚಕೋರ, ಕಳ್ಳರು ಮತ್ತು ದರೋಡೆಕೋರರಾದರು. ಈ ಹಿನ್ನೆಲೆಯಲ್ಲಿ ಭಾರತೀಯ ಯುವಪೀಳಿಗೆಗೆ ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಕವೆನಿಸುವುದು ಸ್ವಾಭಾವಿಕವಾಗಿದೆ. ಯುವಪೀಳಿಗೆಯು ವಿಜ್ಞಾನ, ವೈದ್ಯಕೀಯ ಶಾಸ್ತ್ರ, ಅಭಿಯಂತ್ರಿಕ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗಲಾರಂಭಿಸಿತು. ಪಾಶ್ಚಾತ್ಯ ಸಂಸ್ಕೃತಿಯು ಬಹಿರ್ಮುಖವಾಗಿದೆ. ಅಲ್ಲಿ ವಿಜ್ಞಾನದ ಸಹಾಯದಿಂದಲೇ ಬಾಹ್ಯ ಜಗತ್ತಿನ ಸಂಶೋಧನೆಯನ್ನು ಮಾಡಿದರು ಮತ್ತು ಮಾನವನ ಜೀವನಶೈಲಿಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಗತಿಯನ್ನು ಮಾಡಲಾಯಿತು. ಮಾನವನಿಗಾಗಿ ನಿರ್ಮಾಣವಾದ ದೂರಧ್ವನಿ, ದೂರಚಿತ್ರವಾಣಿ, ಗಣಕಯಂತ್ರ, ಇಂಟರನೆಟ್ ಇತ್ಯಾದಿ ಸೌಲಭ್ಯಗಳು ಅದರದ್ದೇ ಪರಿಣಾಮವಾಗಿದೆ. ಈ ರೀತಿಯಲ್ಲಿ ಪಾಶ್ಚಾತ್ಯರು ಮತ್ತು ಅವರ ಅನುಕರಣೆಯಿಂದ ಭಾರತೀಯರೂ ಕೇವಲ ಸುಖಪ್ರಾಪ್ತಿಯ ಆಸೆಯನ್ನು ಮನಸ್ಸಿನಲ್ಲಿರಿಸಿ ಸುಖೋಪಭೋಗಗಳ ಬೆನ್ನತ್ತಿದರು. ಆದುದರಿಂದಲೇ ಅವರು ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಈ ಕಾರಣಕ್ಕಾಗಿ ವ್ಯಯಿಸತೊಡಗಿದರು; ಆದರೆ ಹೇಗೆ ಭೋಗಗಳಲ್ಲಿರುವ ಸುಖವು ಹೆಚ್ಚಾಯಿತೋ, ಹಾಗೆಯೇ ಅವರ ದುಃಖ ಮತ್ತು ಚಿಂತೆಗಳೂ ಹೆಚ್ಚಾದವು. ಇದರ ಮುಖ್ಯ ಕಾರಣವೆಂದರೆ ಜೀವನದಲ್ಲಿ ಆನಂದವನ್ನು ಕೊಡುವ ಧರ್ಮವನ್ನು ಅವರು ಮರೆತಿದ್ದು. ಧರ್ಮ, ಸಂಸ್ಕೃತಿ, ಮತ್ತು ನೈತಿಕ ಮೌಲ್ಯಗಳು ಕಾಲುಕಸಕ್ಕೆ ಸಮಾನವಾದುದರಿಂದ ಜನರು ಸ್ವಾರ್ಥಿಗಳಾದರು. ಸ್ವಾರ್ಥಕ್ಕಾಗಿ ರಾಷ್ಟ್ರ ಹಿತವನ್ನು ಜೋಪಾನಮಾಡುವ ಕೆಲಸದಲ್ಲಿಯೂ ಅವರು ಸಮಯ ಕಳೆಯತೊಡಗಿದರು. ಈ ರೀತಿಯಲ್ಲಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯಾಗದೇ ರಾಷ್ಟ್ರವು ನಿಧಾನವಾಗಿ ಅಧಃಪತನದ ಕಡೆಗೆ ಹೊರಳತೊಡಗಿತು.

ಈಗ ಪಾಶ್ಚಾತ್ಯರು ಆಧ್ಯಾತ್ಮದ ಕಡೆಗೆ ಹೊರಳುತ್ತಿದ್ದಾರೆ!

ಧರ್ಮರಕ್ಷಣೆಯ ಮಹತ್ವ

ಆಧ್ಯಾತ್ಮಿಕ ದೃಷ್ಟಿಕೋನದಿಂದ

ಅ. ‘ಧರ್ಮದ ವಿನಾಶವನ್ನು ತೆರೆದ ಕಣ್ಣುಗಳಿಂದ ನೋಡುವವನು ಮಹಾಪಾಪಿಯಾಗುತ್ತಾನೆ ಮತ್ತು ಧರ್ಮರಕ್ಷಣೆಗಾಗಿ ಚಡಪಡಿಸುವವನು ಮುಕ್ತಿಯ ಅಧಿಕಾರಿಯಾಗುತ್ತಾನೆ’, ಎಂಬ ಧರ್ಮವಚನವಿದೆ.
ಆ. ಯಾವನು ಧರ್ಮದ ರಕ್ಷಣೆಯನ್ನು ಮಾಡುತ್ತಾನೆಯೋ, ಅವನ ರಕ್ಷಣೆಯನ್ನು ಸ್ವತಃ ಧರ್ಮ (ಈಶ್ವರ) ಮಾಡುತ್ತದೆ.
ಇ. ಯಾವ ಈಶ್ವರನು ನಮ್ಮಲ್ಲಿದ್ದಾನೆ, ಆ ಈಶ್ವರನೇ ನಮ್ಮ ಧರ್ಮಬಾಂಧವರಲ್ಲಿಯೂ ಇದ್ದಾನೆ. ಒಂದು ಕಡೆ ಧಮರ್ಾಚರಣೆ ಮತ್ತು ಸಾಧನೆಯಿಂದ ನಮ್ಮಲ್ಲಿರುವ ಈಶ್ವರನನ್ನು ಪ್ರಸನ್ನಗೊಳಿಸುವುದು ಮತ್ತು ಇನ್ನೊಂದು ಕಡೆ ಧರ್ಮಬಾಂಧವರ ಮೇಲೆ ಆಘಾತವಾಗುತ್ತಿರುವಾಗ ಅದರ ಬಗ್ಗೆ ಏನೂ ಅನಿಸದಿರುವುದು, ಹೀಗಾದರೆ ಅವರಲ್ಲಿನ ಈಶ್ವರನು ಎಂದಾದರೂ ನಮ್ಮ ಮೇಲೆ ಪ್ರಸನ್ನನಾಗಬಹುದೇ ?
ಈ. ಯಾವುದೇ ವಿಷಯವನ್ನು ಕಾಲಾನುಸಾರ ಮಾಡುವುದಕ್ಕೆ ಬಹಳ ಮಹತ್ವವಿದೆ. ಧರ್ಮರಕ್ಷಣೆಯನ್ನು ಮಾಡುವುದು ಸದ್ಯದ ಕಾಲಕ್ಕನುಸಾರ ಆವಶ್ಯಕ ಧರ್ಮಪಾಲನೆಯೇ ಆಗಿದೆ. ಗುರುತತ್ವವೂ ಕಾಲಕ್ಕನುಸಾರ ಯೋಗ್ಯ ಧರ್ಮಪಾಲನೆಯನ್ನು ಮಾಡಲು ಕಲಿಸುತ್ತದೆ. ಧರ್ಮರಕ್ಷಣೆಗಾಗಿ ಕೌರವರೊಂದಿಗೆ ಹೋರಾಡಿದ್ದರಿಂದ ಶಿಷ್ಯ ಅಜರ್ುನನು ಗುರು ಶ್ರೀಕೃಷ್ಣನಿಗೆ ಪ್ರಿಯನಾದನು.
ಸ್ವಲ್ಪದರಲ್ಲಿ ಹೇಳಬೇಕಾದರೆ ಧರ್ಮರಕ್ಷಣೆಗಾಗಿ ಕೃತಿ ಮಾಡಿದರೆ, ನಮ್ಮ ಮೇಲೆ ಈಶ್ವರನ ಕೃಪೆಯಾಗುತ್ತದೆ.

ರಾಷ್ಟ್ರಹಿತದ ದೃಷ್ಟಿಕೋನದಿಂದ

‘ಸನಾತನ ಧರ್ಮ ಮತ್ತು ಧರ್ಮವೇ ಹಿಂದುಸ್ಥಾನದ ಜೀವನವಾಗಿದೆ. ಸನಾತನ ಧರ್ಮ ನಾಶವಾದರೆ, ಹಿಂದುಸ್ಥಾನದ ಅಂತ್ಯವಾಗುವುದು. ನಂತರ ನೀವು ಎಷ್ಟೇ ರಾಜಕಾರಣ, ಸಮಾಜಸುಧಾರಣೆಯನ್ನು ಮಾಡಿರಿ, ಕುಬೇರನ ಸಂಪೂರ್ಣ ಸಂಪತ್ತನ್ನು ಈ ಆರ್ಯಭೂಮಿಯ ಪ್ರತಿಯೊಂದು ಸಂತತಿಯ ಮೇಲೆ ಸುರಿದರೂ, ಎಲ್ಲವೂ ನಿಷ್ಫಲವಾಗುವುದು.’ – ಸ್ವಾಮಿ ವಿವೇಕಾನಂದರು

ಹಿಂದೂ ಧರ್ಮದ ಸದ್ಯದ ಸ್ಥಿತಿ

ಅವತಾರಗಳು, ಋಷಿಮುನಿಗಳು, ಸಂತರು ಮತ್ತು ರಾಜ-ಮಹಾರಾಜರು ಅನಾದಿ ಕಾಲದಿಂದ ರಕ್ಷಿಸಿದ ವಿಶ್ವವಂದನೀಯ ಹಿಂದೂ ಧರ್ಮ ಇಂದು ಎಲ್ಲ ಕಡೆಗಳಿಂದ ಸಂಕಟದಲ್ಲಿ ಸಿಲುಕಿದೆ. ಹಿಂದೂಧ್ವೇಷಿಗಳು ರಾಜಾರೋಷವಾಗಿ ಹಿಂದೂ ಧರ್ಮದ ಮೇಲೆ ಆಘಾತ ಮಾಡುತ್ತಿದ್ದಾರೆ. ಧರ್ಮದ ಮೇಲೆ ಆಘಾತ ಮಾಡುವ ಧರ್ಮಾಂಧರು ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ಇನ್ನೇನು ಕಡಿಮೆ ಎಂಬಂತೆ ತಮ್ಮನ್ನು ನಿಧರ್ಮಿ, ಪುರೋಗಾಮಿ, ವಿಜ್ಞಾನವಾದಿ ಮತ್ತು ಸಮಾಜಸುಧಾರಕರು ಎಂದು ಹೇಳಿಕೊಳ್ಳುವ ಕೆಲವು ಹಿಂದೂಗಳಿಂದಲೇ ಧರ್ಮದ ಮೇಲೆ ಆಘಾತಗಳಾಗುತ್ತಿವೆ.

Leave a Comment