ಶಿಷ್ಯನಿಗೆ ‘ಧರ್ಮವೆಂದರೆ ಏನು?’, ಎಂಬುದನ್ನು ಕಲಿಸಿ ಅವನಿಂದ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಮಾಡಿಸಿಕೊಳ್ಳುವ ಗುರುಗಳು !

ಧರ್ಮವೆಂದರೆ ಏನು?

ಅ ೧. ಒಳ್ಳೆಯ ಸಂಸ್ಕಾರದ ಧಾರಣೆಯೆಂದರೆ ಧರ್ಮ ! : ಧೃ ಧಾರಯತಿ ಇತಿ ಧರ್ಮಃ | ಒಳ್ಳೆಯ ಸಂಸ್ಕಾರವನ್ನು ಧರಿಸಿಕೊಳ್ಳುವುದು, ಈ ರೀತಿ ಮಾಡುವುದರಿಂದ ಸದ್ವಿಚಾರಗಳು ಬರುತ್ತವೆ. ಆ ಮೂಲಕ ಒಳ್ಳೆಯ ಕೃತಿಗಳು ಆಗುತ್ತವೆ. ನಮ್ಮಲ್ಲಿರುವ ಸ್ವಭಾವದೋಷ ಹಾಗೂ ಅಹಂನ ನಿರ್ಮೂಲನೆಯಾಗಿ ಅಂತಃಕರಣವು ಶುದ್ಧವಾಗುತ್ತದೆ. ಸಹಜವಾಗಿಯೇ ಒಳಗೆ ಚೈತನ್ಯ ಪ್ರಕಟವಾಗಿ ನಮಗೆ ಆನಂದ ಪ್ರಾಪ್ತಿಯಾಗುತ್ತದೆ.

ಅ ೨. ಸಮಾಜ ವ್ಯವಸ್ಥೆ ಉತ್ತಮವಾಗಿ ಜೋಪಾಸನೆ ಮಾಡುವುದು, ಪ್ರತ್ಯೇಕ ಪ್ರಾಣಿಮಾತ್ರರ ಐಹಿಕ ಅಭ್ಯುದಯ ಹಾಗೂ ಪಾರಮಾರ್ಥಿಕ ಉನ್ನತಿಯನ್ನು ಸಾಧಿಸುವುದು, ಅಂದರೆ ಧರ್ಮ ! : ಧರ್ಮದ ವ್ಯಾಖ್ಯೆ ನೀಡುವಾಗ ಆದಿ ಶಂಕರಾಚಾರ್ಯರು ನುಡಿಯುತ್ತಾರೆ ಜಗತಃ ಸ್ಥಿತಿಕಾರಣಂ ಪ್ರಾಣೀನಾಂ ಸಾಕ್ಷಾತ್ ಅಭ್ಯುದಯಾನಿಃ ಶ್ರೇಯಸಹೇತುರ್ಯಃ ಸ ಧರ್ಮ | ಅಂದರೆ ಸಮಾಜವ್ಯವಸ್ಥೆಯನ್ನು ಉತ್ತಮವಾಗಿರಿಸುವುದು, ಪ್ರತ್ಯೇಕ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮಾಡುವುದು ಹಾಗೂ ಪಾರಮಾರ್ಥಿಕ ಉನ್ನತಿಯನ್ನು ಸಾಧಿಸುವುದು, ಇದೆಲ್ಲವೂ ಯಾವುದರಿಂದ ಸಾಧ್ಯವಾಗುವುದೋ, ಅದುವೇ ಧರ್ಮ

ಅ ೩. ಎಲ್ಲಾ ಜೀವಪ್ರಾಣಿಮಾತ್ರರು ಜೀವನದಲ್ಲಿ ಆನಂದ ಹೊಂದಿ, ಜೀವನು ಶರದ್ ಋತುವಿನಂತೆ ೧೦೦ ವರ್ಷಗಳ ತನಕ ಆನಂದದಲ್ಲಿರಲು ಸಾಧಿಸುವುದೇ ಧರ್ಮ ! : ವ್ಯಕ್ತಿಯ ಆಚರಣೆಯಿಂದ ಸಮಾಜದ ಮೇಲೆ ಪರಿಣಾಮವಾಗುವಂತೆ, ಸಮಾಜದಿಂದ ವ್ಯಕ್ತಿಯ ಮೇಲೆ ಪರಿಣಾಮವಾಗುತ್ತದೆ ಅದೇ ರೀತಿ ಈ ಎರಡರ ಪರಿಣಾಮ ಜೀವ-ಪ್ರಾಣಿಮಾತ್ರರ ಮೇಲಾಗುತ್ತದೆ. ಆಗ ಜೀವದ ಐಹಿಕ ಅಭ್ಯುದಯ ಹಾಗೂ ಪಾರಮಾರ್ಥಿಕ ಉನ್ನತಿಯಾಗುವುದು ಅಗತ್ಯವಾಗಿರುತ್ತದೆ. ಹೀಗಾದರೆ ವ್ಯಕ್ತಿ, ಸಮಾಜ ಹಾಗೂ ಎಲ್ಲಾ ಜೀವ-ಪ್ರಾಣಿಗಳ ಜೀವನವು ಆನಂದವಾಗಿ ಮಾನವನ ಜೀವನವು ಜೀವೇತ್ ಶರದಃ ಶತಮ್ ಅಂದರೆ ಶರದ್ ಋತುವಿನಂತೆ ೧೦೦ ವರ್ಷ ಆನಂದಮಯವಾಗಿ ಸಾಗುತ್ತದೆ. ಅದು ಯಾವುದರಿಂದ ಸಾಧ್ಯವೋ ಅದುವೇ ಧರ್ಮ

ಆ. ನಿಲುವು ಚೆನ್ನಾಗಿ ಆಗಲು ಶಾಸ್ತ್ರವನ್ನು ಅರಿತುಕೊಳ್ಳುವುದು ಅಗತ್ಯವಾಗಿರುತ್ತದೆ ! : ಭಗವಂತನು ಸೃಷ್ಟಿಯನ್ನು ನಿರ್ಮಿಸಿದ್ದಾನೆ. ಈ ಯೋಜನೆಯು ಅವನದ್ದೇ ಆಗಿದೆ. ಅದನ್ನು ಮಾನವನು ಅರ್ಥಮಾಡಿಕೊಂಡು ಅದರಂತೆ ಆಚರಿಸಿ ತನ್ನ ಪಾರಮಾರ್ಥಿಕ ಉನ್ನತಿಯನ್ನು ಮಾಡಿಕೊಳ್ಳಬೇಕು; ಅದಕ್ಕಾಗಿಯೇ ವೇದಗಳು ಧರ್ಮಶಾಸ್ತ್ರವನ್ನು ನಿರ್ಮಿಸಿವೆ. ಶ್ರೀಮದ್‌ಭಗವದ್ಗೀತೆಯ ಮೂರನೇ ಅಧ್ಯಾಯ ಶ್ಲೋಕ ೨೦ ರಲ್ಲಿ ಜನಕ ಇತ್ಯಾದಿ ಜ್ಞಾನಿ ಜನರೇ ಆಸಕ್ತಿ ರಹಿತ (ನಿಷ್ಕಾಮ ಕರ್ಮಯೋಗದಿಂದ) ಕರ್ಮದಿಂದಲೇ ಪರಮಸಿದ್ಧಿಯನ್ನು ಪಡೆದರು. ಲೋಕ ಸಂಗ್ರಹದ ಕಡೆ ಗಮನ ನೀಡಿಯೂ ನಿಷ್ಕಾಮ ಕರ್ಮ ಮಾಡುವುದೇ ಶ್ರೇಯಸ್ಕರವಾಗಿದೆ.

– ಪ.ಪೂ. ಪರಶರಾಮ ಪಾಂಡೆ ಮಹಾರಾಜರು

Leave a Comment