ಧರ್ಮ ಮತ್ತು ಭಾರತದ ಮಹತ್ವ

ಅ. ಯುಗಗಳಿಗನುಸಾರ ಧರ್ಮದ ಅಧಿಷ್ಠಾನವಿರುವ ಭಾಗ ಕಡಿಮೆಯಾಗುತ್ತಾ ಹೋಗಿ ಈಗ ಕೇವಲ ಭಾರತದಲ್ಲಿ ಮಾತ್ರ ಧರ್ಮ ಉಳಿದಿದೆ

ನಮ್ಮ ಪೂರ್ವಜರ ಇತಿಹಾಸವನ್ನು ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ, ಪುರಾಣ ಇತ್ಯಾದಿ ಗ್ರಂಥಗಳಲ್ಲಿ ಕೊಡಲಾಗಿದೆ. ಇದರಿಂದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಪೃಥ್ವಿಯನ್ನು ಆಳುವ ಅಧಿಕಾರವು ಕೇವಲ ಸಾಧಕರಿಗೆ ಮಾತ್ರ ಇದೆ ಎಂಬುದು ನಿಮ್ಮ ಗಮನಕ್ಕೆ ಬರುವುದು. ಸತ್ಯಯುಗದ ಅಂತ್ಯದಲ್ಲಿ ‘ಸೋಹಂ’ ಭಾವ ನಾಶವಾಗಿದ್ದರಿಂದ ಧರ್ಮದ ನಾಲ್ಕು ಪಾದಗಳ ಪೈಕಿ ಒಂದು ಪಾದವು ನಾಶವಾಯಿತು ಮತ್ತು ಆ ಪ್ರಮಾಣದಲ್ಲಿ ಪೃಥ್ವಿಯ ಮೇಲಿನ ಕಾಲುಭಾಗದಲ್ಲಿನ ಧರ್ಮಾಚರಣೆಯು ಲೋಪವಾಗಿ ಮುಕ್ಕಾಲು ಭಾಗದಲ್ಲಿ ಮಾತ್ರ ಧರ್ಮವು ಉಳಿದುಕೊಂಡಿತು. ಆ ಮೇಲೆ ತ್ರೇತಾಯುಗವು ಬಂದಿತು. ಪುನಃ ಒಂದು ಪಾದವು ನಾಶವಾಗಿದ್ದರಿಂದ ಅರ್ಧ ಪೃಥ್ವಿಯ ಮೇಲೆ ಮಾತ್ರ ಅಲ್ಪಸ್ವಲ್ಪ ಪ್ರಮಾಣದಲ್ಲಿ ಧರ್ಮಾಚರಣೀ ವ್ಯಕ್ತಿಗಳು ಉಳಿದುಕೊಂಡರು. ನಂತರ ದ್ವಾಪರಯುಗದ ಅಂತ್ಯದಲ್ಲಿ ಮೂರು ಪಾದಗಳು ಕ್ಷೀಣವಾದುದ್ದರಿಂದ ಪೃಥ್ವಿಯ ಕೇವಲ ಕಾಲು ಭಾಗದಲ್ಲಿ ಮೇಲೆ ಮಾತ್ರ ಧರ್ಮಾಚರಣೀ ವ್ಯಕ್ತಿಗಳು ಉಳಿದುಕೊಂಡರು. ನಂತರ ಕಲಿಯುಗವು ಪ್ರಾರಂಭವಾಯಿತು. ಪಾಂಡವರ ವಂಶದಲ್ಲಿನ ಅರ್ಜುನನ ಮೊಮ್ಮಗನಾದ ಪರೀಕ್ಷಿತನು ಕಲಿಯುಗದಲ್ಲಿನ ಪ್ರಥಮ ರಾಜನಾದನು. ಕಲಿಯುಗದ ಆ ಕಾಲದಲ್ಲಿಯೂ ಸಹ ಬ್ರಾಹ್ಮಣರಲ್ಲಿ ಸರ್ಪಯಜ್ಞವನ್ನು ಮಾಡುವಷ್ಟು ಸಾಮಥ್ರ್ಯವಿತ್ತು. ಮುಂದೆ ಇತರ ಕಡೆಗಳಲ್ಲೆಲ್ಲಾ ಸತ್ತ್ವಪ್ರಧಾನ ವೃತ್ತಿಯು ಕ್ಷೀಣಿಸಿ ಕೇವಲ ಭಾರತ ಭೂಮಿಯು ಮಾತ್ರ ಸಾಧನಾಭೂಮಿಯಾಗಿ ಉಳಿದುಕೊಂಡಿದ್ದರಿಂದ ಅದು ಮಾತ್ರ ಪುಣ್ಯಭೂಮಿಯಾಗಿ ಉಳಿದುಕೊಂಡಿತು. ಆದ್ದರಿಂದ ‘ಪಂಚಖಂಡಭೂಮಂಡಲದಲ್ಲಿ ಭರತಖಂಡದಲ್ಲಿ ಬಹಳ ಪುಣ್ಯ’ ಎಂದು ಶ್ರೀ ಗುರುಚರಿತ್ರೆಯಲ್ಲಿ ಹೇಳಲಾಗಿದೆ.

ಆ.’ಭಾರತ’ ದೇಶದ ಹೆಸರುಗಳ ಇತಿಹಾಸ

ಸದ್ಯದ ಕಾಲದಲ್ಲಿ ನಮ್ಮ ದೇಶಕ್ಕೆ ಭಾರತ ಮತ್ತು ಹಿಂದೂಸ್ಥಾನ ಎಂಬ ಎರಡು ಶಬ್ದಗಳು ಸಮಾನಾರ್ಥಕ ಪದಗಳಾಗಿದ್ದರೂ ಕಾಲದ ಆವಶ್ಯಕತೆ ಎಂದು ಹಿಂದೂಸ್ಥಾನ ಎಂಬ ಹೆಸರೇ ನಮ್ಮ ದೇಶಕ್ಕೆ ಯೋಗ್ಯವಾಗಿದೆ. ಸೃಷ್ಟಿಯ ಉತ್ಪತ್ತಿಯ ಸಮಯದಲ್ಲಿ ಸತ್ಯಯುಗವಿತ್ತು. ಆಗ ದೇಶದ ಹೆಸರು ‘ಧರ್ಮ’ ಎಂದಿತ್ತು. ಮುಂದೆ ಮಾನವನ ವೃತ್ತಿಯಲ್ಲಿ ಅವನತಿಯಾಗಿದ್ದರಿಂದ ತ್ರೇತಾಯುಗದಲ್ಲಿ ಸಮಾಜ ಮತ್ತು ರಾಷ್ಟ್ರದಲ್ಲಿ ಸತ್ತ್ವಪ್ರಧಾನ ವೃತ್ತಿ ಜಾಗೃತವಾಗಿರುವ ದೃಷ್ಟಿಯಿಂದ ದೇಶದ ಹೆಸರು ‘ವೇದಧರ್ಮ’ ಎಂದಾಯಿತು. ಮುಂದೆ ದ್ವಾಪರಯುಗದಲ್ಲಿ ‘ಭಾರತ’ ಎಂಬ ಹೆಸರು ಬಂತು. ಕಲಿಯುಗದ ಆರಂಭದಲ್ಲಿ ‘ಆರ್ಯವರ್ತ’ ಎಂಬ ಹೆಸರು ಬಿದ್ದು, ಮುಂದೆ ಕಾಲದ ಆವಶ್ಯಕತೆ ಎಂದು ಇದೇ ಭೂಮಿಗೆ ‘ಹಿಂದೂಸ್ಥಾನ’ ಎಂಬ ಹೆಸರನ್ನು ನಮ್ಮ ಧರ್ಮಪಂಡಿತರು ಕೊಟ್ಟರು. ಈ ಹೆಸರು ಮಾತ್ರ ಕಲಿಯುಗದ ಅಂತ್ಯದವರೆಗೂ ಇರಬೇಕು, ಎಂಬುದು ಅವರ ಆಶಯವಾಗಿತ್ತು. ಮೊದಲಿನ ‘ಧರ್ಮ’, ನಂತರದ ‘ವೇದಧರ್ಮ’, ಅದರ ನಂತರದ ‘ಭಾರತ’, ಅದರ ನಂತರದ ‘ಆರ್ಯಧರ್ಮ’ ಮತ್ತು ಅದರ ನಂತರದ ‘ಹಿಂದೂ ಧರ್ಮ’ ಇವೆಲ್ಲ ಸಮಾನಾರ್ಥಕ ಶಬ್ದಗಳಾಗಿವೆ.’
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

ಇ. ಧರ್ಮಗ್ರಂಥಗಳು ಮತ್ತು ಸಂತರು ಹೇಳಿದ ಭಾರತದ ಮಹತ್ವ

ನಮ್ಮ ಪೂರ್ವಜ ರಾಜರು ಸಂಪೂರ್ಣ ಪೃಥ್ವಿಯ ಮೇಲೆ ರಾಜ್ಯವನ್ನಾಳುತ್ತಿದ್ದರೂ, ಅವರ ರಾಜಧಾನಿಯು ಸದ್ಯದ ಭಾರತದಲ್ಲಿಯೇ ಇತ್ತು. ಅದುವೇ ಇಂದ್ರಪ್ರಸ್ಥ. ಆದ್ದರಿಂದ ಜಗತ್ತಿನಲ್ಲಿ ಸುಖಶಾಂತಿ ನೆಲೆಸಬೇಕಾದರೆ ಅದು ಭಾರತದಿಂದಲೇ ಪ್ರಾರಂಭವಾಗಬೇಕು; ಏಕೆಂದರೆ ಈಗ ಕೇವಲ ಭಾರತ ಮಾತ್ರ ಧರ್ಮಕ್ಷೇತ್ರವಾಗಿ ಉಳಿದುಕೊಂಡಿದೆ. ‘ಯಾವಾಗ ಭಾರತದ ನೈತಿಕ ಪತನವು ಪರಮಾವಧಿಗೆ ತಲುಪುವುದೋ ಆಗ ಜಗತ್ತು ನಾಶವಾಗುವುದು’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.
ನಮ್ಮ ಶರೀರದ ಎಲ್ಲ ಭಾಗಗಳೂ ರೋಗಗಳಿಂದ ಸೊರಗಿ ಹೋದರೂ, ಎಲ್ಲಿಯವರೆಗೆ ನಮ್ಮ ಹೃದಯದಲ್ಲಿ ಮಿಡಿತವಿದೆಯೋ, ಅಲ್ಲಿಯವರೆಗೆ ನಾವು ಉಳಿಯಬಹುದು. ಈಗ ಇಡೀ ವಿಶ್ವದ ಸ್ಥಿತಿಯೂ ಇಂತಹ ರೋಗಗ್ರಸ್ತ ಶರೀರದ ಅವಸ್ಥೆಯಂತಾಗಿದೆ. ಇದನ್ನೇ ‘ಧರ್ಮಗ್ಲಾನಿ’ ಎನ್ನುತ್ತಾರೆ. ಸದ್ಯದ ಭಾರತವು ಈ ವಿಶ್ವದ ಹೃದಯದ ಸ್ಥಾನದಲ್ಲಿ ವಿರಾಜಮಾನವಾಗಿದೆ ಮತ್ತು ಅದರಲ್ಲಿರುವ ಸಂತರು ಹಾಗೂ ಅವರ ಅಂತರಂಗ ಶಿಷ್ಯರು ಇವರೇ ಆ ಹೃದಯದ ಕ್ಷೀಣ ಮಿಡಿತವಾಗಿದ್ದಾರೆ. ಆದ್ದರಿಂದ ಈ ವಿಶ್ವರೂಪಿ ಶರೀರಕ್ಕೆ ಬಂದಿರುವ ಈ ಹೃದ್ರೋಗವು, ಆ ಧರ್ಮನಿಷ್ಠರ ಮಾರ್ಗಕ್ಕನುಸಾರ ನಮ್ಮ ವೃತ್ತಿಯನ್ನು ಆದಷ್ಟು ಹೆಚ್ಚು ಸತ್ತ್ವಪ್ರಧಾನಗೊಳಿಸಿಕೊಳ್ಳುವುದರಿಂದ ಮಾತ್ರ ಸುಧಾರಿಸುವುದು ಮತ್ತು ಆಗಲೇ ವಿಶ್ವರೂಪಿ ದೇಹದ ಆರೋಗ್ಯವೂ ಸುಧಾರಿಸುವುದು.

‘ಭಾರತ’ ಎನ್ನುವ ಶಬ್ದವು ಭಾ+ರತ ಹೀಗೆ ರೂಪುಗೊಂಡಿದೆ. ‘ಭಾ’ ಎಂದರೆ ಆತ್ಮ ಮತ್ತು ‘ರತ’ ಎಂದರೆ ಮಗ್ನ; ಆದುದರಿಂದ ಭಾರತ ಎಂದರೆ ಎಲ್ಲಿ ಜನರು ಆತ್ಮಭಾವದಲ್ಲಿ ಮಗ್ನರಾಗಿದ್ದಾರೆಯೋ ಅದು.
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾಂವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

ಈ. ಪಾಶ್ಚಾತ್ಯರು ವರ್ಣಿಸಿದ ಭಾರತದ ಮಹಾನತೆ

‘ಹಿಂದೂರಾಷ್ಟ್ರಕ್ಕೆ’ ತನ್ನದೇ ಆದ ಜಾಗತಿಕ ‘ಮಿಷನ್’ ಇದೆ. ವಿನಾಶದ ಅಂಚಿನಲ್ಲಿ ನಿಂತಿರುವ ಮಾನವಜಾತಿಗೆ ಸುರಕ್ಷತೆ, ಸುಖ ಮತ್ತು ಸಮೃದ್ಧಿಯ ಮಾರ್ಗವನ್ನು ತೋರಿಸುವ ಐತಿಹಾಸಿಕ ಜವಾಬ್ದಾರಿಯನ್ನು ವಿಧಿಯು ಹಿಂದೂರಾಷ್ಟ್ರದ ಮೇಲೆ ಹೊರಿಸಿದೆ ಮತ್ತು ಆ ದೃಷ್ಟಿಯಿಂದ ಹಿಂದೂರಾಷ್ಟ್ರದಲ್ಲಿ ವೈಚಾರಿಕ ಸಾಮರ್ಥ್ಯವನ್ನು ನಿರ್ಮಿಸುವುದು ಇಲ್ಲಿನ ಋಷಿಸಂಸ್ಥೆಯ ಜವಾಬ್ದಾರಿಯಾಗಿದೆ, ಎಂದು ಪಂ. ದೀನದಯಾಳ ಉಪಾಧ್ಯಾಯರು ನಂಬಿದ್ದರು. ಹಿಂದೂರಾಷ್ಟ್ರದ ಈ ಜಾಗತಿಕ ಮಿಷನ್ ಸ್ವರೂಪವನ್ನು ಸ್ವಾಮಿ ವಿವೇಕಾನಂದರು, ಯೋಗಿ ಅರವಿಂದರು ಮತ್ತು ಪೂ. ಗೊಳವಲಕರ ಗುರೂಜಿಯವರು ನಿಃಸಂದಿಗ್ಧ ಶಬ್ದಗಳಲ್ಲಿ ಘೋಷಿಸಿದ್ದಾರೆ. ಇಷ್ಟೇ ಅಲ್ಲದೇ ಭವಿಷ್ಯವನ್ನು ಅರಿಯುವ ಸಾಮರ್ಥ್ಯವಿರುವ ಕೆಲವು ಪಾಶ್ಚಾತ್ಯ ವಿಚಾರವಂತರೂ ಈ ರಾಷ್ಟ್ರದ ಜೀವನಕಾರ್ಯದ ಬಗ್ಗೆ ತಮ್ಮ ಕಲ್ಪನೆ ಮತ್ತು ಅಪೇಕ್ಷೆಯನ್ನು ನೇರವಾದ ಸರಳ ಶಬ್ದಗಳಲ್ಲಿಯೇ ಪ್ರಕಟಿಸಿದ್ದಾರೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.

1. ‘ಇಲ್ಲಿ (ಭಾರತದಲ್ಲಿ) ನಮಗೆ ಎಂತಹ ಮನೋಧಾರಣೆ ಮತ್ತು ಚೇತನೆ ಕಾಣಿಸುತ್ತದೆ ಎಂದರೆ, ಅದರ ಆಧಾರದಲ್ಲಿ ಮಾನವಜಾತಿಗೆ ಒಂದು ಕುಟುಂಬವೆಂದು ನಮ್ಮ ವಿಕಾಸ ಮಾಡಿಕೊಳ್ಳುವುದು ಸಾಧ್ಯವಾಗಬಹುದು. ಇಂದಿನ ಅಣುಯುಗದಲ್ಲಿ ನಮ್ಮ ಸರ್ವನಾಶವನ್ನು ಮಾಡಿಕೊಳ್ಳುವುದು ಬೇಡವಾಗಿದ್ದರೆ ಇತರ ಯಾವುದೇ ಪರ್ಯಾಯವಿಲ್ಲ.

ಇಂದು ನಾವು ಇನ್ನೂ ಮಾನವನ ಇತಿಹಾಸದಲ್ಲಿನ ಒಂದು ಸಂಕ್ರಮಣಯುಗದಲ್ಲಿದ್ದೇವೆ. ಈ ಯುಗದ ಆರಂಭವು ಪಶ್ವಿಮದ ಕಡೆಗೆ ಆಗಿದ್ದರೂ, ಮಾನವಜಾತಿಯ ಆತ್ಮವಿನಾಶವಾಗುವ ಈ ಯುಗದ ಕೊನೆಯನ್ನು ತಡೆಯಬೇಕಾಗಿದ್ದರೆ, ಅದರ ಸಮಾಪ್ತಿ ಭಾರತದಿಂದಲೇ ಆಗಬೇಕು. ಸದ್ಯದ ಯುಗದಲ್ಲಿ ಪಾಶ್ಚಾತ್ಯ ತಂತ್ರಜ್ಞಾನವು ಜಗತ್ತನ್ನು ಭೌತಿಕ ಸ್ತರದಲ್ಲಿ ಒಂದಾಗಿಸಿದೆ. ಈ ಪಾಶ್ಚಾತ್ಯ ತಂತ್ರದಿಂದ ನಮ್ಮಲ್ಲಿನ ‘ಅಂತರ’ವು ನಾಶವಾಗಿದೆ, ಜಗತ್ತಿನಲ್ಲಿನ ಎಲ್ಲ ದೇಶಗಳು ಪರಸ್ಪರ ಅತ್ಯಂತ ಸಮೀಪ ಬಂದಿದ್ದರೂ, ಅದೇ ತಂತ್ರಜ್ಞಾನವು ಅವರನ್ನು ಅತ್ಯಂತ ವಿಧ್ವಂಸಕ ಶಸ್ತ್ರಗಳಿಂದ ಸುಸಜ್ಜಿತಗೊಳಿಸಿದೆ. ಪರಸ್ಪರರನ್ನು ಅರಿತುಕೊಳ್ಳಲು ಮತ್ತು ಪರಸ್ಪರರನ್ನು ಪ್ರೀತಿಸಲು ಮಾತ್ರ ಅವರು ಇಂದಿಗೂ ಕಲಿತಿಲ್ಲ ! ಮಾನವನ ಇತಿಹಾಸದಲ್ಲಿನ ಈ ಅತ್ಯಂತ ಅಪಾಯಕಾರಿ ಕ್ಷಣದಲ್ಲಿ ಮಾನವೀಯತೆ ಉಳಿಯ ಬೇಕಾದರೆ ಅದು ಕೇವಲ ಭಾರತೀಯ ಮಾರ್ಗದಿಂದಲೇ ಉಳಿಯಹುದು.

ನನಗೆ ಮೂರು ವಿಷಯಗಳ ಕಡೆಗೆ ಗಮನ ಸೆಳೆಯಬೇಕಾಗಿದೆ. ಮೊದಲನೇ ವಿಷಯವೆಂದರೆ, ಜಗತ್ತಿನಲ್ಲಿ ಭಾರತದ ಸ್ಥಾನವು ಬಹಳ ಮಹತ್ವದ್ದಾಗಿದೆ ಮತ್ತು ಅದು ಯಾವಾಗಲೂ ಹಾಗೆಯೇ ಇದೆ. ನನ್ನ ಎರಡನೇ ವಿಷಯವೆಂದರೆ ಭಾರತವೆಂದರೆ ಸದ್ಯದ ಜಗತ್ತಿನ ಸಾರಭೂತ ಸ್ವರೂಪವೇ ಆಗಿದೆ. ಸಂಪೂರ್ಣ ಜಗತ್ತನ್ನು ಭಯಪಡಿಸುವ ಅನೇಕ ಪ್ರಮುಖ ಪ್ರಶ್ನೆಗಳು ಇಂದು ಭಾರತದಲ್ಲಿ ನಿಖರವಾಗಿ ಮುಂದೆ ಬಂದಿವೆ ಮತ್ತು ಅವುಗಳನ್ನು ಭಾರತದಲ್ಲಿನ ರಾಷ್ಟ್ರೀಯ ಪ್ರಶ್ನೆಗಳೆಂದು ಬೆಳಕಿಗೆ ತರುವ ಪ್ರಯತ್ನ ನಡೆಯುತ್ತಿದೆ. ಭಾರತದಲ್ಲಿನ ಜನತೆ ಮತ್ತು ಭಾರತ ಸರಕಾರವು ಆ ಪ್ರಯತ್ನವನ್ನು ಮಾಡುತ್ತಿದೆ. ಮೂರನೇ ವಿಷಯವೆಂದರೆ, ಭಾರತದಲ್ಲಿ ಜೀವನದ ಕಡೆಗೆ ನೋಡುವ ದೃಷ್ಟಿ ಮತ್ತು ಮಾನವನ ವ್ಯವಹಾರಗಳನ್ನು ಸಂಭಾಳಿಸುವ ಒಂದು ಭೂಮಿಕೆ ಇದೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅದು ಕೇವಲ ಭಾರತಕ್ಕೆ ಮಾತ್ರವಲ್ಲ, ಸಂಪೂರ್ಣ ಜಗತ್ತಿಗೆ ಅತ್ಯಂತ ಉಪಕಾರಿಯಾಗಿದೆ.

ಅತೀಸುಂದರ, ಆದುದರಿಂದಲೇ ಅತ್ಯಂತ ಪರಿಶ್ರಮಸಾಧ್ಯ ಆದರ್ಶಕ್ಕನುಸಾರ, (ಯಾವ ಆದರ್ಶವು ನಿಮ್ಮ ಭಾರತೀಯ ಪರಂಪರೆಯ ವಾರಸುದಾರವಾಗಿದೆ,) ಜೀವನವನ್ನು ನಡೆಸಲು ಭಾರತಕ್ಕೆ ಯಾವಾಗಲಾದರೂ ಅಪಯಶಸ್ಸು ಬಂದರೆ, ಸಂಪೂರ್ಣ ಮಾನವಜಾತಿಯ ಭಾವಿ ಕಲ್ಯಾಣಕ್ಕೆ ಆಪತ್ತು ಬರುವುದು. ಭಾರತದ ಮೇಲೆ ಇಷ್ಟು ದೊಡ್ಡ ಆಧ್ಯಾತ್ಮಿಕ ಜವಾಬ್ದಾರಿಯಿದೆ.’ – ಸುಪ್ರಸಿದ್ಧ ಇತಿಹಾಸಕಾರರು ಅರ್ನಾಲ್ಡ್ ಟೊಯ್ನಬೀ

2. ಸಂಪತ್ತು, ಶಕ್ತಿ ಮತ್ತು ಪ್ರಾಕೃತಿಕ ಸೌಂದರ್ಯದಿಂದ ಪರಿಪೂರ್ಣವಾಗಿರುವ ದೇಶ ಯಾವುದು ಎಂದು ನನಗೆ ಹೇಳಬೇಕಾಗಿದ್ದರೆ ನಾನು ಭಾರತದ ಹೆಸರನ್ನೇ ಹೇಳುವೆನು. ಯಾವ ದೇಶದಲ್ಲಿನ ಜನರು ತಮಗೆ ದೊರೆತ ಬಹಳಷ್ಟು ಉತ್ಕೃಷ್ಟ ಈಶ್ವರೀ ಕೊಡುಗೆಗಳ ಪರಿಪೂರ್ಣ ವಿಕಾಸವನ್ನು ಮಾಡಿದ್ದಾರೆ, ಜೀವನದಲ್ಲಿನ ಜಟಿಲ ಸಮಸ್ಯೆಗಳ ಮೇಲೆ ಆಳವಾದ ಚಿಂತನೆಯನ್ನು ಮಾಡಿ ಕೆಲವು ಸಮಸ್ಯೆಗಳ ಮೇಲೆ ಎಂತಹ ಉಪಾಯಗಳನ್ನು ಹುಡುಕಿದ್ದಾರೆ ಎಂದರೆ ಅವು ಪ್ಲೆಟೊ ಮತ್ತು ಕಾನ್ಟರ ಕಲಿಕೆಯನ್ನು ಅಭ್ಯಾಸ ಮಾಡಿದವರ ಗಮನವನ್ನೂ ಸೆಳೆಯುವವು, ಇಂತಹ ಪ್ರಶ್ನೆಗಳನ್ನು ನನಗೆ ಯಾರಾದರೂ ಕೇಳಿದರೆ ನಾನು ಅದರ ಉತ್ತರ ‘ಭಾರತ’ ಎಂದು ಹೇಳುವೆನು. ನಾವು ಯುರೋಪಿಯನ್ನರು ಜೀವನದಲ್ಲಿ ಹೆಚ್ಚಾಗಿ ಗ್ರೀಕ, ರೋಮನ ಮತ್ತು ಜ್ಯೂಗಳ ವಿಚಾರಧಾರೆಯ ಅನುಕರಣೆಯನ್ನು ಮಾಡುತ್ತೇವೆ. ಈ ಜೀವನವನ್ನು ಹೆಚ್ಚು ಸಫಲ, ಪರಿಪೂರ್ಣ, ನಿಜವಾದ ಮಾನವತಾವಾದಿ ಮತ್ತು ಶಾಶ್ವತವಾಗಿಸಬೇಕಾಗಿದ್ದರೆ ಯಾವ ಸಾಹಿತ್ಯದ ಆಧಾರ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಯನ್ನು ನನಗೆ ಯಾರಾದರೂ ಕೇಳಿದರೆ ಆ ಪ್ರಶ್ನೆಯ ಉತ್ತರವನ್ನೂ ನಾನು ‘ಭಾರತೀಯ’ ಎಂದೇ ನೀಡುವೆನು.’ – ಮ್ಯಾಕ್ಸಮುಲ್ಲರ (1858 ರಲ್ಲಿ ಮ್ಯಾಕ್ಸಮುಲ್ಲರರು ಮಾಹಾರಾಣಿ ವಿಕ್ಟೋರಿಯಾಗೆ ಬರೆದ ಪತ್ರದಲ್ಲಿನ ಬರವಣಿಗೆ)

Leave a Comment