ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 12

೧. ಸಮಾಜದಲ್ಲಿ ವಿಚಾರವಂತರ ಮಹತ್ವ ಮತ್ತು ಸದ್ಯದ ಪ್ರಜಾಪ್ರಭುತ್ವದಲ್ಲಿ ಅವರ ಕಡೆಗೆ ಆಗುತ್ತಿರುವ ದುರ್ಲಕ್ಷ

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಲು ವಿವಿಧ ಘಟಕಗಳ ಮಹತ್ವವು ಅಸಾಧಾರಣವಾಗಿದೆ. ಅವುಗಳಲ್ಲಿ ವಿಚಾರವಂತರೂ ಒಂದು ಮಹತ್ವದ ಘಟಕವಾಗಿದ್ದಾರೆ. ಯಾವುದೇ ಚಳುವಳಿಯನ್ನು ಆರಂಭಿಸುವಾಗ ಅದಕ್ಕೆ ರಚನಾತ್ಮಕ ತಿರುವನ್ನು ನೀಡಲು ವಿಚಾರವಂತರ ಆವಶ್ಯಕತೆಯಿರುತ್ತದೆ. ಹುಕುಂಶಾಹಿಯನ್ನು ಬಿಟ್ಟು ಜಗತ್ತಿನಲ್ಲಿ ನಿರ್ಮಾಣವಾದ ಎಲ್ಲ ವೈಚಾರಿಕ ಚಳುವಳಿಗಳ ಹಿಂದೆ, ಉದಾ. ಸಾಮ್ಯವಾದ, ಸಮಾಜವಾದ ಇವುಗಳ ಹಿಂದೆ ವಿಚಾರವಂತರ ಯೋಗದಾನವೇ ಇದೆ. ಸಮಾಜವನ್ನು ಘಟಿಸುವ ಕಾರ್ಯದಲ್ಲಿ ವಿಚಾರವಂತರು ಮಹತ್ವದ ಭೂಮಿಕೆಯನ್ನು ವಹಿಸುತ್ತಾರೆ, ಇದು ನಿಜ ಸಂಗತಿಯಾದರೂ ಸಮಾಜದಲ್ಲಿನ ಎಲ್ಲ ಘಟಕಗಳಿಂದ ಅವರ ಕಡೆಗೆ ದುರ್ಲಕ್ಷ್ಯವಾಗಿದೆ ಎಂಬುದನ್ನು ಅಲ್ಲಗಳೆಯಲೂ ಸಾಧ್ಯವಿಲ್ಲ. ಒಂದು ಕಾಲದಲ್ಲಿ ಪ್ರಾಚೀನ ರಾಜ ಮಹಾರಾಜರ ರಾಜಸಭೆಯಲ್ಲಿ ವಿಚಾರವಂತರಿಗೆ ಮಹತ್ವದ ಸ್ಥಾನವಿತ್ತು. ರಾಜ್ಯಭಾರವನ್ನು ಮಾಡುವಾಗ ಅವರಿಂದ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿತ್ತು; ಆದರೆ ಹೇಗೆ ಧರ್ಮಾಧಿಷ್ಠಿತ ರಾಜ್ಯ ಪದ್ಧತಿಯು ಕಣ್ಮರೆಯಾಯಿತೋ, ಹಾಗೆಯೇ ವಿಚಾರವಂತರ ಮಹತ್ವವೂ ಕಡಿಮೆಯಾಗತೊಡಗಿತು. ಇಂದು ಪ್ರಜಾಪ್ರಭುತ್ವದಲ್ಲಿ ವಿಚಾರವಂತ ಘಟಕವೇ ಸಾಮಾಜಿಕ ಜೀವನದಿಂದ ಕಣ್ಮರೆಯಾಗಿದ್ದು ಅದು ಕೇವಲ ವೈಯಕ್ತಿಕ ದೃಷ್ಟಿಯಲ್ಲಿ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ‘ನಾವು ಮಾಡಿದ್ದೇ ಕಾನೂನು ಮತ್ತು ನಾವು ಹೇಳಿದ್ದೇ ನೀತಿ ನಿಯಮ ಎಂಬುದು ರಾಜಕಾರಣಿಗಳ ಧೋರಣೆಯಾಗಿದೆ.

೨. ವಿಚಾರಸಾಮರ್ಥ್ಯದ ಮೇಲೆಯೂರಚನಾತ್ಮಕ ರಾಷ್ಟ್ರದ ಪುನರ್ನಿರ್ಮಾಣವನ್ನು ಮಾಡಬಹುದು ಎಂಬುದನ್ನು ಹೇಳುವ ಭಾರತದ ಉಜ್ವಲ ಇತಿಹಾಸ !

ವಿಚಾರವಂತರ ಬಗ್ಗೆ ಮಾತನಾಡುವಾಗ ಇತಿಹಾಸದ ಕೆಲವು ವ್ಯಕ್ತಿತ್ವಗಳು ಕಣ್ಣೆದುರು ಬರುತ್ತವೆ. ಅವರಲ್ಲಿನ ಎಲ್ಲ ಅರ್ಥದಲ್ಲಿ ಆದರ್ಶ ವ್ಯಕ್ತಿತ್ವವೆಂದರೆ ಆರ್ಯ ಚಾಣಕ್ಯ ಮತ್ತು ಮಹಾಭಾರತದಲ್ಲಿ ಯುಧಿಷ್ಠಿರನಿಗೂ ನೀತಿ ನಿಯಮಗಳನ್ನು ನೆನಪಿಸಿಕೊಡುವ ವಿದುರ ! ಇವರ ರೂಪದಲ್ಲಿ ವಿಚಾರವಂತರು ಎಷ್ಟು ಉಚ್ಚ ಮಟ್ಟದಲ್ಲಿದ್ದು ಕಾರ್ಯವನ್ನು ಮಾಡಬೇಕು ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಇನ್ನೂ ಇತ್ತೀಚಿನ ಕಾಲದ ತಮ್ಮ ಸೀಮೆಯನ್ನು ಬಿಟ್ಟು ಮುಂದೆಹೋಗಿ ಧ್ವಜವನ್ನು ಹಾರಿಸುವ ಪೇಶ್ವೆಗಳ ದರಬಾರಿನಲ್ಲಿದ್ದ ನಾನಾ ಫಡ್ನವೀಸರು ಮುತ್ಸದ್ದಿಗಳೆಂದು ಗುರುತಿಸಲ್ಪಟ್ಟರೂ, ಆಗಿನ ಕಾಲದಲ್ಲಿ ಅವರು ವಿಚಾರವಂತರ ಭೂಮಿಕೆಯನ್ನು ನಿಭಾಯಿಸಿದ್ದರು. ಇದು ವಿಚಾರವಂತರ ವಿಚಾರ ಸಾಮರ್ಥ್ಯದ ಮೇಲೆ ಒಂದು ರಚನಾತ್ಮಕ ರಾಷ್ಟ್ರದ ಪುನರ್ನಿರ್ಮಾಣವು ಸಾಧ್ಯವಿದೆ ಎಂಬುದರ ಉದಾಹರಣೆಯಾಗಿದೆ.

೩. ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ವಿಚಾರವಂತರ ಭೂಮಿಕೆ !

೩ ಅ. ಜನರಲ್ಲಿ ಹಿಂದೂ ರಾಷ್ಟ್ರದ ವಿಷಯದಲ್ಲಿ ಪ್ರಬೋಧನೆಯನ್ನು ಮಾಡುವುದು : ಹಿಂದೂ ರಾಷ್ಟ್ರದ ಸ್ಥಾಪನೆಗೆ ಜನಬೆಂಬಲವನ್ನು ನಿರ್ಮಿಸುವುದು ಮಹತ್ವದ್ದಾಗಿದೆ. ಇದಕ್ಕಾಗಿ ಜನರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯವನ್ನು ಹಬ್ಬಿಸಬೇಕು ಮತ್ತು ಅದಕ್ಕಾಗಿ ಸಮಾಜ ಪ್ರಬೋಧನೆಯನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಈ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆಯು ಒಂದು ಮಹತ್ವದ ಘಟಕವಾಗಿದೆ. ಆದುದರಿಂದ ವಿಚಾರವಂತರಲ್ಲಿ ಮೈಗೂಡಿದ ಈ ಗುಣದ ಸಹಾಯದಿಂದ ಅವರು ಸಮಾಜಕ್ಕೆ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಅಧಿಕಾರವಾಣಿಯಿಂದ ಹೇಳಬಲ್ಲರು.

೩ ಆ. ವಿಚಾರಸಾಮರ್ಥ್ಯದಿಂದ ಸಂಘಟಿತ ಸಮಾಜಕ್ಕೆ ಯೋಗ್ಯ ದಿಕ್ಕನ್ನು ನೀಡಿ ಮಹತ್ವಪೂರ್ಣ ಭೂಮಿಕೆಯನ್ನು ನಿಭಾಯಿಸುವುದು : ವಿಚಾರವಂತರಲ್ಲಿ ಪ್ರತಿಯೊಂದು ಘಟನೆಯ ಕಡೆಗೆ ದೂರದೃಷ್ಟಿ ಯಿಂದ ನೋಡುವ ಮತ್ತು ವಿವಿಧ ದೃಷ್ಟಿಕೋನಗಳಿಂದ ನೋಡುವ ಹಾಗೂ ಅದನ್ನು ಸಮಾಜ, ರಾಷ್ಟ್ರ ಮತ್ತು ಧರ್ಮದ ಹಿತದೃಷ್ಟಿಯಿಂದ ವಿಶ್ಲೇಷಣೆಯನ್ನು ಮಾಡುವ ಸಾಮರ್ಥ್ಯವಿರುತ್ತದೆ. ಇದರಿಂದ ವಿಚಾರವಂತರಿಗೆ ಸ್ವಂತದ ಸಂಘಟನೆಯನ್ನು ನಿರ್ಮಿಸಲು ಆಗದಿದ್ದರೂ, ಸಂಘಟಿತ ಸಮಾಜಕ್ಕೆ ದಿಕ್ಕನ್ನು ನೀಡಿ ಮಹತ್ತರ ಕಾರ್ಯದ ನಿರ್ಮಿತಿಗಾಗಿ ಅವರು ಸಹಕರಿಸಬಲ್ಲರು. ವಿಚಾರವಂತರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಿರುವ ಅನೇಕ ಘಟನೆಗಳಲ್ಲಿ ತಮ್ಮಲ್ಲಿರುವ ಸಾಮರ್ಥ್ಯವನ್ನು ಎತ್ತಿ ಹಿಡಿಯಬೇಕು.

೩ ಇ. ಪ್ರಸಾರ ಮಾಧ್ಯಮಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಪರವಾಗಿ ವಿಚಾರಗಳನ್ನು ಮಂಡಿಸುವುದು

೧. ದೂರಚಿತ್ರವಾಹಿನಿಗಳಲ್ಲಿನ ಚರ್ಚಾಕೂಟಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಪರವಾಗಿ ವಿಚಾರಗಳನ್ನು ಮಂಡಿಸುವಲ್ಲಿ ವಿಚಾರವಂತರು ನೇತೃತ್ವವನ್ನು ವಹಿಸಬೇಕು.

೨. ಸದ್ಯದ ಯುಗವು ಮಾಹಿತಿ ಮತ್ತು ತಂತ್ರಜ್ಞಾನದ ಯುಗವಾಗಿದ್ದರಿಂದ ವಿಚಾರವಂತರು ಫೇಸ್‌ಬುಕ್, ಬ್ಲಾಗ್ ಇತ್ಯಾದಿಗಳ ಮಾಧ್ಯಮದಿಂದ ತರುಣರೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದು ಅವರ ವಿಚಾರಗಳಿಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅನುಕೂಲಕರ ದಿಶೆಯನ್ನು ನೀಡಲು ಸಾಧ್ಯವಿದೆ.

೩. ಹಿಂದುತ್ವವಾದಿ ನಿಯತಕಾಲಿಕೆಗಳ ಮಾಧ್ಯಮದಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಲು ಸಾಧ್ಯವಿದೆ.

೪. ಹಿಂದೂ ರಾಷ್ಟ್ರಕ್ಕಾಗಿ ವಿಚಾರಗಳ ದಿಶೆ ಹೇಗಿರಬೇಕು ?

೪ ಅ. ಧಾರ್ಮಿಕ ಶ್ರದ್ಧೆಗಳನ್ನು ಆದರಿಸುವುದು : ಹಿಂದೂ ಧರ್ಮೀಯರ ಧರ್ಮಶ್ರದ್ಧೆಯು ಎಲ್ಲ ದೇವತೆಗಳು, ಧರ್ಮಗ್ರಂಥಗಳು, ರೂಢಿ – ಪರಂಪರೆ, ಹಬ್ಬ, ಧಾರ್ಮಿಕ ಉತ್ಸವ, ವ್ರತ ಇವೆಲ್ಲವುಗಳಲ್ಲಿ ಹಂಚಿಹೋಗಿದೆ. ಆದುದರಿಂದ ವಿಚಾರವಂತರು ಹಿಂದೂಗಳನ್ನು ಸಂಘಟಿಸುವಾಗ ಅವರ ಶ್ರದ್ಧಾಸ್ಥಾನಗಳನ್ನು ಆದರಿಸಬೇಕು.

೪ ಆ. ಜಾತಿಗಳ ಆಚೆಗೆ ಹೋಗಿ ವ್ಯಾಪಕ ಸ್ತರದಲ್ಲಿ ವಿಚಾರ ಮಾಡುವುದು : ಹಿಂದೂಗಳ ರಾಷ್ಟ್ರಪುರುಷರು ಮತ್ತು ಸಂತರನ್ನು ಅವರ ಜಾತಿಗಳ ಆಚೆಗೆ ಹೋಗಿ ಓರ್ವ ಹಿಂದೂ ಎಂದು ನೋಡಬೇಕು. ಹಾಗೆಯೇ ಅವರ ಬೋಧನೆಯನ್ನೂ ಪ್ರಮಾಣವೆಂದು ತಿಳಿಯಬೇಕು.

೪ ಇ. ಧರ್ಮಪ್ರಮಾಣವನ್ನು ಒಪ್ಪಲು ಆಗ್ರಹಿಸುವುದು : ಧರ್ಮದ ವಿಷಯದಲ್ಲಿನ ಸಂಕಲ್ಪನೆಗಳನ್ನು ಮಂಡಿಸುವಾಗ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಧರ್ಮಪ್ರಮಾಣವನ್ನು ಒಪ್ಪಲು ಆಗ್ರಹಿಸಬೇಕು.

೫. ಹಿಂದುತ್ವನಿಷ್ಠ ವಿಚಾರವಂತರಲ್ಲಿ ಸಮನ್ವಯ ಮತ್ತು ವಿಚಾರಗಳ ವಿನಿಮಯವಾಗುವುದು ಆವಶ್ಯಕ ?

೫ ಅ. ಸಮನ್ವಯದಿಂದ ಪರಿಣಾಮಕಾರಿಯಲ್ಲಿ ವೃದ್ಧಿಯಾಗುವುದು : ಯಾವುದೇ ಕ್ಷೇತ್ರದಲ್ಲಿ ಸಮನ್ವಯವಿದ್ದರೆ ಮಾತ್ರ ಕಾರ್ಯದಲ್ಲಿ ಸುಸೂತ್ರತೆಯು ಬರುತ್ತದೆ. ಕಾರ್ಯದ ವಿಭಜನೆಯಾದರೆ ಮತ್ತು ಆಯಾಯ ಕ್ಷೇತ್ರದಲ್ಲಿನ ತಜ್ಞ ವ್ಯಕ್ತಿಯು ಆಯಾ ಕ್ಷೇತ್ರಗಳನ್ನು ಕೈಗೆತ್ತಿಕೊಂಡರೆ ಕಾರ್ಯ ಪರಿಣಾಮಕಾರಿಯಾಗುತ್ತದೆ. ಇದಕ್ಕಾಗಿ ಎಲ್ಲ ವಿಚಾರವಂತರು ಪರಸ್ಪರ ಸಂಪರ್ಕದಲ್ಲಿರಬೇಕು. ಯಾವ ಕ್ಷೇತ್ರದಲ್ಲಿ ಯಾರು ಕಾರ್ಯನಿರತರಾಗಿದ್ದಾರೆ ಎಂಬುದು ಪರಸ್ಪರರಿಗೆ ತಿಳಿದರೆ ಆ ಕಾರ್ಯದಲ್ಲಿ ಹೆಚ್ಚು ಪರಿಣಾಮವನ್ನು ತರುವಲ್ಲಿ ಎಲ್ಲರ ಸಹಾಯ ದೊರೆಯಬಹುದು.

೫ ಆ. ಜ್ಞಾನ ಮತ್ತು ಅನುಭವದ ವಿನಿಮಯವಾಗುವುದು : ವಿಚಾರಗಳ ವಿನಿಮಯವು ಜ್ಞಾನಸಮೃದ್ಧವಾಗುವುದರ ಲಕ್ಷಣವಾಗಿದೆ. ಯಾವುದೇ ಒಬ್ಬ ವ್ಯಕ್ತಿಗೆ ಎಲ್ಲ ಕ್ಷೇತ್ರಗಳ ಮಾಹಿತಿ ತಿಳಿದಿರುತ್ತದೆ ಎಂದಿರುವುದಿಲ್ಲ ಆಯಾ ಕ್ಷೇತ್ರಗಳಲ್ಲಿನ ವ್ಯಕ್ತಿಗಳೊಂದಿಗೆ ಚರ್ಚೆ ಮತ್ತು ವಿಚಾರ ವಿನಿಮಯ ಮಾಡಿ ಈ ಜ್ಞಾನವನ್ನು ವೃದ್ಧಿಸಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಕೇವಲ ಹಿಂದುತ್ವನಿಷ್ಠ ವಿಚಾರವಂತರೇ ಅಲ್ಲ, ಹಿಂದೂ ರಾಷ್ಟ್ರಕ್ಕಾಗಿ ಕಾರ್ಯನಿರತರಾಗಿರುವ ಎಲ್ಲ ಘಟಕಗಳು ಸತತವಾಗಿ ವಿಚಾರ, ಅನುಭವ ಮತ್ತು ತಪ್ಪುಗಳನ್ನು ತಡೆಗಟ್ಟಲು ತಪ್ಪುಗಳ ವಿಚಾರ-ವಿನಿಮಯವನ್ನೂ ಮಾಡಬೇಕು.

(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)

Leave a Comment