ಸರ್ವಧರ್ಮಸಮಭಾವವು ಒಂದು ಭ್ರಮೆಯುಕ್ತ ಕಲ್ಪನೆಯಾಗಿದ್ದು, ಹಿಂದೂ ಧರ್ಮವು ವ್ಯಾಪಕ ಸಂಕಲ್ಪನೆಯಾಗಿದೆ !

ಶ್ರೀ. ಚೇತನ ರಾಜಹಂಸ,

ಸಂಪೂರ್ಣ ಜಗತ್ತಿನ ಹಿತದ ವಿಚಾರವನ್ನು ಕೇವಲ ಹಿಂದೂ ಧರ್ಮ ಮಾತ್ರ ಮಾಡುತ್ತದೆ. ಇದರ ತುಲನೆಯಲ್ಲಿ ಇಸ್ಲಾಮ್ ಪಂಥವು ಜಗತ್ತನ್ನು ‘ದಾರುಲ್ ಇಸ್ಲಾಮ್’ ಮತ್ತು ‘ದಾರುಲ್ ಹರಬ್’, ಅಂದರೆ ಅನುಕ್ರಮವಾಗಿ ಇಸ್ಲಾಮ್ ಆಡಳಿತವಿರುವ ದೇಶ ಮತ್ತು ಇಸ್ಲಾಮ್ ಆಡಳಿತವಿಲ್ಲದಿರುವ ದೇಶ ಹೀಗೆ ೨ ಭಾಗಗಳಲ್ಲಿ ವಿಭಜನೆ ಮಾಡುತ್ತದೆ. ಇದರಲ್ಲಿ ಇಸ್ಲಾಮ್‌ನ ಆಡಳಿತವಿಲ್ಲದ ಅಂದರೆ ‘ದಾರುಲ್‌ ಹರಬ್’ ಆಗಿರುವ ಭೂಮಿಯಲ್ಲಿ ‘ದಾರುಲ್ ಇಸ್ಲಾಮ್’ ತರಲು ಅಲ್ಲಿ ಅದು ಜಿಹಾದ್ ಮಾಡಲು ಆಜ್ಞೆ ನೀಡುತ್ತದೆ. ಕ್ರೈಸ್ತ ಪಂಥದ ಪ್ರಚಾರಕರೂ ಜಗತ್ತಿನಾದ್ಯಂತ ಬೈಬಲ್ ಮತ್ತು ಏಸುವಿನ ರಾಜ್ಯವನ್ನು ಸ್ಥಾಪಿಸಲು ನಿರಂತರ ಪ್ರಯತ್ನಿಸುತ್ತಿರುತ್ತಾರೆ. ಇಸ್ಲಾಮ್ ಮತ್ತು ಕ್ರೈಸ್ತ ಈ ಎರಡೂ ಪಂಥದ ಜನರು ಭಾರತಕ್ಕೆ ಆಕ್ರಮಕರೆಂದು ಆಡಳಿತ ನಡೆಸಲು ಅಥವಾ ಭಾರತವನ್ನು ಲೂಟಿಗೈಯಲು ಬಂದಿದ್ದರು. ಅವರು ನೂರಾರು ವರ್ಷಗಳವರೆಗೆ ಮೂಲ ಭಾರತೀಯ ಹಿಂದೂಗಳನ್ನು ದಾಸರನ್ನಾಗಿ ಮಾಡಿಟ್ಟುಕೊಂಡಿದ್ದರು. ಅವರ ಈ ದಾಸ್ಯತ್ವದಿಂದ ಮುಕ್ತರಾಗಲು ಲಕ್ಷಗಟ್ಟಲೆ ಭಾರತೀಯರಿಗೆ ಬಲಿದಾನ ನೀಡಬೇಕಾಯಿತು. ಅನಂತರ ಬಹುಸಂಖ್ಯಾತ ಹಿಂದೂ ಇತರ ಪಂಥೀಯರನ್ನು ಬಂಧುಭಾವದಿಂದ ನೋಡುತ್ತಿದ್ದರೂ, ಅವರು ಹಿಂದೂಗಳನ್ನೇ ಕೋಮುವಾದಿಗಳು ಹಾಗೂ ಸಂಕುಚಿತರು ಎಂದು ಹೇಳುತ್ತಿದ್ದರು.

ದುರ್ದೈವದಿಂದ ನಮ್ಮ ದೇಶದಲ್ಲಿ ಧರ್ಮದ ಅಧ್ಯಯನವಿಲ್ಲದ ಹಿಂದೂಗಳು ‘ಸೆಕ್ಯುಲರಿಸಂ’ ಹೆಸರಿನಲ್ಲಿ ‘ಸರ್ವಧರ್ಮಸಮಭಾವ’ ಎಂಬ ಭ್ರಮೆಯುಕ್ತ ಕಲ್ಪನೆಯಿಂದ ವಿಶ್ವಹಿತದ ವಿಚಾರ ಮಾಡುವ ಹಿಂದೂ ಧರ್ಮ, ಇಸ್ಲಾಮ್ ಪಂಥ ಮತ್ತು ಕ್ರೈಸ್ತ ಪಂಥ ಎಲ್ಲವೂ ಒಂದೇ ಎಂದು ಹೇಳುವ ಮೂರ್ಖತನವನ್ನು ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು, ‘ಇಸ್ಲಾಮ್‌’ವು ಪ್ರವಾದಿ ಮಹಮ್ಮದರನ್ನು ಆಧಾರದ ಮೇಲಿದೆ, ಕ್ರೈಸ್ತ ಪಂಥವು ಏಸು ಕ್ರೈಸ್ತನ ಆಧಾರದ ಮೇಲಿದೆ ಮತ್ತು ಬೌದ್ಧ ಪಂಥವು ಗೌತಮ ಬುದ್ಧನ ಆಧಾರದ ಮೇಲಿದೆ; ಆದರೆ ಹಿಂದೂ ಧರ್ಮವು ಯಾವುದೇ ವ್ಯಕ್ತಿಯ ಆಧಾರದ ಮೇಲಿಲ್ಲ, ಅದು ಧರ್ಮದ ಸಿದ್ಧಾಂತಗಳ ಆಧಾರದ ಮೇಲಿದೆ ಎಂದು ಹೇಳಿದ್ದಾರೆ. ಆದುದರಿಂದ ಹಿಂದೂ ಧರ್ಮವು ಒಂದು ವ್ಯಾಪಕ ಮತ್ತು ಶಾಶ್ವತ ಸಂಕಲ್ಪನೆಯಾಗಿದೆ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು.

ಇದೇ ದೃಷ್ಟಿಕೋನದಿಂದ ಹಿಂದೂ ರಾಷ್ಟ್ರದ ಕಡೆಗೆ ಸಂಕುಚಿತ ದೃಷ್ಟಿಯಿಂದ ನೋಡುವವರು, ಹಿಂದೂ ರಾಷ್ಟ್ರವು ಹಿಂದೂ ಧರ್ಮದಂತೆಯೆ ವ್ಯಾಪಕವಾಗಿದೆ, ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದಲೇ ಭಾರತ ಸರಕಾರ ‘ಸೆಕ್ಯುಲರ್’ ರಾಜ್ಯವ್ಯವಸ್ಥೆಯನ್ನು ಸ್ವೀಕರಿಸಿದ್ದರೂ ಭಾರತದಲ್ಲಿನ ವಿವಿಧ ಆಡಳಿತ ಸಂಸ್ಥೆಗಳು ಹಿಂದೂ ಧರ್ಮಶಾಸ್ತ್ರದಲ್ಲಿನ ಬೋಧವಾಕ್ಯಗಳನ್ನು ಸ್ವೀಕರಿಸಿವೆ. ಉದಾ. ಭಾರತ ಸರಕಾರದ ಬೋಧವಾಕ್ಯ ‘ಸತ್ಯಮೇವ ಜಯತೆ |’ ಯಾಗಿದೆ, ಲೋಕಸಭೆಯ ಬೋಧವಾಕ್ಯ ‘ಧರ್ಮಚಕ್ರ ಪ್ರವರ್ತನಾಯ |’ ಯಾಗಿದೆ. ಸವೋಚ್ಚ ನ್ಯಾಯಾಲಯದ ಬೋಧವಾಕ್ಯ ‘ಯತೋ ಧರ್ಮಸ್ತತೋ ಜಯಃ |’ ಆಗಿದೆ. ಹಿಂದೂ ಧರ್ಮಶಾಸ್ತ್ರದಲ್ಲಿನ ಈ ಬೋಧವಾಕ್ಯಗಳು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲ ಭಾರತೀಯರ ಹಿತಕ್ಕಾಗಿವೆ.

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರ, ಸನಾತನ ಸಂಸ್ಥೆ

Leave a Comment