ವಿವಿಧ ಕಠಿಣ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬೇಕು ಎಂದು ಪ್ರಸಂಗಗಳ ಅವಲೋಕನೆಗಾಗಿ ಉಪಯೋಗಿಸುವ ಅ ೩ ಸ್ವಯಂಸೂಚನೆ ಪದ್ಧತಿ !

ದೈನಂದಿನ ಜೀವನದಲ್ಲಿ ವಿವಿಧ ಪ್ರಸಂಗಗಳನ್ನು ಎದುರಿಸುವಾಗ ಕೆಲವರ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಜನಸಂದಣಿಯಿರುವ ಸ್ಥಳದಲ್ಲಿ ಒಬ್ಬಂಟಿಯಾಗಿ ಪ್ರವಾಸ ಮಾಡಲು ಭಯವೆನಿಸುವುದು, ಹೆದ್ದಾರಿಯಲ್ಲಿ ವಾಹನವನ್ನು ಓಡಿಸಲು ಆತ್ಮವಿಶ್ವಾಸವಿಲ್ಲದಿರುವುದು ಇತ್ಯಾದಿ ಸಂದರ್ಭಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅನೇಕ ಸಾಧಕರಿಗೆ ಭಯವೆನಿಸುವುದು, ಮನಸ್ಸುಬಿಚ್ಚಿ ಮಾತನಾಡಲು ಹಿಂಜರಿಕೆ ಈ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ವೇದಿಕೆಯ ಮೇಲೆ ಮಾತನಾಡಲು ಭಯ ಇರುವುದರಿಂದ ಕಾರ್ಯಕ್ರಮದ ನಿರೂಪಣೆ ಮಾಡುವುದು, ಸಭೆ ಅಥವಾ ಬೈಠಕಗಳಲ್ಲಿ ವಿಷಯಗಳನ್ನು ಮಂಡಿಸುವುದು, ಸಾಧಕರಿಗೆ ಸತ್ಸಂಗವನ್ನು ತೆಗೆದುಕೊಳ್ಳುವುದು, ಮುಂತಾದ ಸೇವೆಗಳನ್ನು ಮಾಡಲು ಭಯವಾಗುತ್ತದೆ.

ಕೆಲವರಿಗೆ ಬೈಠಕದಲ್ಲಿ ಅಥವಾ ಗಣಕಯಂತ್ರ ತಂತ್ರಾಂಶದಲ್ಲಿ ನಡೆಯುವ ಸತ್ಸಂಗದಲ್ಲಿ ಅಥವಾ ಜವಾಬ್ದಾರಿಯುತ ಸಾಧಕರಿಗೆ ತಮ್ಮ ತಪ್ಪುಗಳನ್ನು ಹೇಳಲು ಕೂಡ ಭಯವಾಗುತ್ತದೆ. ಇಂತಹ ಸಮಯದಲ್ಲಿ ಅ ೩ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡಬಹುದು. ಇದರಿಂದ ಭಯ ಅಥವಾ ಒತ್ತಡವು ಕ್ರಮೇಣ ಕಡಿಮೆಯಾಗುತ್ತದೆ.

ವ್ಯಕ್ತಿತ್ವದಲ್ಲಿ ಮುಂದಿನ ಸ್ವಭಾವದೋಷವನ್ನು ದೂರಗೊಳಿಸಲು ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸಿರಿ !

ಜಿಗುಟುತನ ಇಲ್ಲದಿರುವುದು, ಮುಂದಾಳತ್ವ ವಹಿಸದಿರುವುದು, ಗಂಭೀರತೆಯ ಸ್ವಭಾವ, ಆತ್ಮವಿಶ್ವಾಸದ ಅಭಾವ, ಹಿಂಜರಿಕೆ, ಕೀಳರಿಮೆ ಇತ್ಯಾದಿ. ಇವುಗಳ ಸ್ವಯಂಸೂಚನೆಯ ವಾಕ್ಯ ರಚನೆಯನ್ನು ಅಪೂರ್ಣ ವರ್ತಮಾನ ಕಾಲದಲ್ಲಿ ಪ್ರಾರಂಭಿಸಬೇಕು. ಈ ಸ್ವಯಂಸೂಚನೆಯ ಪದ್ಧತಿಯಿಂದ ತಯಾರಿಸಿದ ಸ್ವಯಂಸೂಚನೆಯು ೮ ರಿಂದ ೧೦ ವಾಕ್ಯಗಳದ್ದಾಗಿರುವುದರಿಂದ ಅಭ್ಯಾಸ ಸತ್ರಗಳ ಸಮಯದಲ್ಲಿ ಕೇವಲ ಒಂದು ಬಾರಿ ಹೇಳಬೇಕು. (ಇತರ ಸ್ವಯಂಸೂಚನೆಗಳ ಪದ್ಧತಿಯಂತೆ ಸಿದ್ಧಪಡಿಸಿದ ಸ್ವಯಂಸೂಚನೆಯನ್ನು ೩-೪ ವಾಕ್ಯಗಳದ್ದಾಗಿರುವುದರಿಂದ ಒಂದು ಅಭ್ಯಾಸಸತ್ರದಲ್ಲಿ ೫ ಸಲ ಹೇಳಲಾಗುತ್ತದೆ.)

ಸ್ವಯಂಸೂಚನೆಯ ಉದಾಹರಣೆಗಳು

ಅ. ಉದಾಹರಣೆ ೧

ಅ ೧. ಪ್ರಸಂಗ : ಆದಿತಿಗೆ ಪ್ರಸಾರ ಸೇವೆಯಲ್ಲಿ ತನ್ನಿಂದಾದ ತಪ್ಪನ್ನು ಸಂತರಿಗೆ ಹೇಳಬಾರದು, ಎಂದೆನಿಸುತ್ತದೆ. ತಪ್ಪು ಹೇಳುವಾಗ ಅವಳಿಗೆ ಅಳು ಬರುತ್ತದೆ.

ಅ ೨. ಸ್ವಯಂಸೂಚನೆ.

ಅ. ಸಂತರಿಗೆ ತಪ್ಪು ಹೇಳುವ ಮೊದಲು ನಾನು ಚಿಂತನೆ ಮಾಡುತ್ತಿದ್ದೇನೆ

ಆ. ಸಂತರಿಗೆ ತಪ್ಪು ಹೇಳುವುದರಿಂದ ನನಗೆ ಹಗುರವೆನಿಸಲಿದೆ, ಈ ಸಕಾರಾತ್ಮಕ ವಿಚಾರವನ್ನಿಟ್ಟುಕೊಂಡು ತಪ್ಪು ಹೇಳಲು ನಾನು ಅವರಿಗೆ ಸಂಚಾರಿವಾಣಿಯಲ್ಲಿ ಕರೆ ಮಾಡುತ್ತಿದ್ದೇನೆ.

ಇ. ನನ್ನ ಯಾವ ಅಯೋಗ್ಯ ವಿಚಾರಪ್ರಕ್ರಿಯೆಯಿಂದ ಆ ತಪ್ಪಾಗಿತ್ತು ?, ಎಂಬುದನ್ನು ನಾನು ಸಂತರಿಗೆ ಅಂತರ್ಮುಖತೆಯಿಂದ ಹೇಳುತ್ತಿದ್ದೇನೆ. ನನಗೆ ನಿಶ್ಚಿಂತಳಾಗಿ ಮತ್ತು ಸಹಜವಾಗಿ ತಪ್ಪು ಹೇಳಲು ಆಗುತ್ತಿದೆ. ಭಾವನಾಶೀಲ ಆಗದಿರಲು ನನಗೆ ಸಾಧ್ಯವಾಗುತ್ತಿದೆ.

ಈ. ಸಂತರು ತಿಳಿಸಿದ ದೃಷ್ಟಿಕೋನವನ್ನು ಕೇಳಿದ ಬಳಿಕ ‘ನನಗೆ ಈ ತಪ್ಪಿನಿಂದ ಕಲಿಯಬೇಕಾಗಿದೆ, ಎಂದು ಅರಿವಾಗುತ್ತಿದೆ.

ಉ. ಸಂತರ ಚರಣಗಳಿಗೆ ಮನಸ್ಸಿನಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿ ನಾನು ಸಂಚಾರಿವಾಣಿ ಸ್ಥಗಿತಗೊಳಿಸುತ್ತಿದ್ದೇನೆ.

ಊ. ಸಂತರಿಗೆ ತಪ್ಪು ಹೇಳುವಾಗ ನನಗೆ ಅಳು ಬರಬಹುದು, ಮಾತನಾಡುವಾಗ ನಾನು ತೊದಲಬಹುದು, ತಪ್ಪುಗಳನ್ನು ಸ್ಪಷ್ಟವಾಗಿ ಹೇಳಲು ತೊಂದರೆಯಾಗಬಹುದು ಎಂದು ನನಗೆ ಅನಿಸುತ್ತಿತ್ತು. ಆದರೆ ಹಾಗೇನು ಆಗದೇ ಇರುವ ಕಾರಣ ನನಗೆ ಆನಂದವೆನಿಸುತ್ತಿದೆ.

ಆ. ಉದಾಹರಣೆ ೨

ಆ ೧. ಪ್ರಸಂಗ : ಜವಾಬ್ದಾರ ಸಾಧಕರು ಬೈಠಕನಲ್ಲಿ ವಿಷಯವನ್ನು ಮಂಡಿಸಬೇಕು ಎಂದು ಹೇಳುವಾಗ ‘ನನ್ನಿಂಗ್ ಅದು ಸಾಧ್ಯವಿಲ್ಲ’ ಎಂಬ ನಕಾರಾತ್ಮಕ ವಿಚಾರ ಬರುವುದು.

ಆ ೨. ಸ್ವಯಂಸೂಚನೆ

ಅ. ಜವಾಬ್ದಾರ ಸಾಧಕರ ಮಾಧ್ಯಮದಿಂದ ದೇವರೇ ನನಗೆ ಬೈಠಕದಲ್ಲಿ ವಿಷಯವನ್ನು ಮಂಡಿಸುವ ಸೇವೆಯನ್ನು ಹೇಳುತ್ತಿದ್ದಾರೆ. ನನ್ನ ಮನಸ್ಸು ಶಾಂತ, ಪ್ರಸನ್ನ ಮತ್ತು ಹಗುರ (ರಿಲ್ಯಾಕ್ಸ) ಆಗುತ್ತಿದೆ.

ಆ. ನಾನು ಸಾಧಕರಿಂದ ವಿಷಯವನ್ನು ಮಂಡಿಸುವ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇನೆ.

ಇ. ಬೈಠಕದಲ್ಲಿ ಮಂಡಿಸಬೇಕಾದ ಅಂಶಗಳನ್ನು ನಾನು ಸ್ವಲ್ಪದರಲ್ಲಿಯೇ ಒಂದು ಕಾಗದದ ಮೇಲೆ ಬರೆದು ಆ ಅಂಶಗಳನ್ನು ಅಭ್ಯಾಸ ಮಾಡುತ್ತಿದ್ದೇನೆ.

ಈ. ಅಭ್ಯಾಸ ಮಾಡಿದ ಅಂಶಗಳನ್ನು ದೊಡ್ಡ ಧ್ವನಿಯಲ್ಲಿ ಇತರರಿಗೆ ತಿಳಿಸಿ ಹೇಳಲು ನಾನು ಅಭ್ಯಾಸ ಮಾಡುತ್ತಿದ್ದೇನೆ.

ಉ. ನಾನು ಬೈಠಕದ ಮೊದಲು ವಿಷಯವನ್ನು ಶಾಂತವಾಗಿ ಪುನಃ ಒಮ್ಮೆ ಓದುತ್ತೇನೆ. ಎಲ್ಲ ಅಂಶಗಳು ನನಗೆ ಕ್ರಮಶಃ ನೆನಪಾಗುತ್ತಿದೆ.

ಊ. ಬೈಠಕ ಪ್ರಾರಂಭಿಸುವ ಮೊದಲು ನಾನು ದೇವರಿಗೆ ಶರಣಾಗತಿಯಿಂದ ಮತ್ತು ತಳಮಳದಿಂದ ಪ್ರಾರ್ಥಿಸುತ್ತಿದ್ದೇನೆ.

ಎ. ಬೈಠಕ ಪ್ರಾರಂಭವಾದ ಬಳಿಕ ನಾನು ಎಲ್ಲ ಅಂಶಗಳನ್ನು ಶಾಂತವಾಗಿ ಮತ್ತು ಕ್ರಮಶಃ ಸಮರ್ಪಕವಾಗಿ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದೇನೆ.

ಏ. ಗಂಭೀರ ಅಂಶಗಳನ್ನು ಮಂಡಿಸುವಾಗ ನನ್ನ ಮುಖದ ಮೇಲೆ ಗಂಭೀರ ಭಾವವಿದೆ. ಇತರ ಸಮಯದಲ್ಲಿ ನನ್ನ ಮುಖದ ಮೇಲೆ ಸಹಜಭಾವವಿದೆ.

ಓ. ‘ನಾನು ಎಲ್ಲೆಡೆ ಆತ್ಮವಿಶ್ವಾಸದಿಂದ ನೋಡಲಾರೆ, ಅವರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಲಾರೆನು, ಮಾತನಾಡುವಾಗ ನನಗೆ ಭಯವೆನಿಸುವುದು, ನಾನು ಮಧ್ಯದಲ್ಲಿಯೇ ವಿಷಯವನ್ನು ಮರೆಯುತ್ತೇನೆ, ಎಂದು ನನಗೆ ಅನಿಸುತ್ತಿತ್ತು; ಆದರೆ ಅದರಂತೆ ಏನೂ ಆಗದೇ, ನಾನು ಆತ್ಮವಿಶ್ವಾಸದಿಂದ ವಿಷಯವನ್ನು ಮಂಡಿಸಲು ಸಾಧ್ಯವಾಯಿತು ಮತ್ತುಅದಕ್ಕೆ ಉತ್ತಮ ಸ್ಪಂದನೆ ದೊರಕಿತು ಎಂದು ನನಗೆ ಸಂತೋಷವಾಗಿದೆ.

ಸಾಧಕರು ಮೇಲಿನಂತೆ ಸ್ವಯಂಸೂಚನೆಯನ್ನು ತಯಾರಿಸಿ ಆ ಸ್ವಯಂಸೂಚನೆಗಳನ್ನು ಸತ್ರಗಳ ಸಮಯದಲ್ಲಿ ಹಾಗೆಯೇ ಯಾವ ಪ್ರಸಂಗದಲ್ಲಿ ಭಯವಾಗುತ್ತದೆಯೋ, ಆ ಪ್ರಸಂಗಳನ್ನು ಎದುರಿಸುವ ಮೊದಲು ಸ್ವಯಂಸೂಚನೆ ನೀಡಬೇಕು.

ಕಠಿಣ ಪ್ರಸಂಗಗಳನ್ನು ಯಶಸ್ವಿಯಾಗಿ ಎದುರಿಸಲು ಈ ರೀತಿಯ ಸ್ವಯಂಸೂಚನೆಯನ್ನು ತೆಗೆದುಕೊಂಡರೂ ಮನಸ್ಸಿನ ಮೂಲ, ಹೆದರಿಕೆಯ ಮೂಲ ವಿಚಾರಕ್ಕಾಗಿ ಹಾಗೂ ಪ್ರಸಂಗಾನುರೂಪ ಗಮನಕ್ಕೆ ಬಂದಂತಹ ಮೂಲ ಸ್ವಭಾವದೋಷಗಳಿಗಾಗಿ ಅ೧ ಈ ಸ್ವಯಂಸೂಚನೆಗಳ ಪದ್ಧತಿಯನ್ನು ಉಪಯೋಗಿಸಿ ಸ್ವಯಂಸೂಚನೆಯನ್ನು ನೀಡಬೇಕು. ಇದರಿಂದ ಆ ಸ್ವಭಾವದೋಷಗಳು ಬೇರುಸಹಿತ ನಾಶವಾಗುವುದು.

(ಈ ವಿಷಯದ ಅಧಿಕ ಮಾಹಿತಿ‘ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ (ಭಾಗ ೨) ಈ ಗ್ರಂಥದಲ್ಲಿದೆ)

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೧೨.೨೦೧೭)

Leave a Comment