ಪಟಕಾರದಿಂದ ದೃಷ್ಟಿ ತೆಗೆಯುವುದು.

ಬಹುದಿನಗಳಿಂದ ಅನಾರೋಗ್ಯವಿರುವುದು, ಸುಸ್ತಾಗುವುದು, ಮನಸ್ಸು ಅಸ್ವಸ್ಥವಾಗುವುದು ಮುಂತಾದ ತೊಂದರೆಗಳಿಗೆ ಉಪಚಾರವೆಂದು ಪಟಕಾರದಿಂದ ದೃಷ್ಟಿ ತೆಗೆಯಿರಿ!

ಸದ್ಯ ಬಹಳಷ್ಟು ಜನರಿಗೆ ಔಷಧಿ ನೀಡಿಯೂ ಸರ್ವಸಾಮಾನ್ಯ ಕಾಯಿಲೆ, ಉದಾ. ಜ್ವರ, ನೆಗಡಿ, ಕೆಮ್ಮು, ಹೊಟ್ಟೆ ನೋವು ಇಂತಹ ಕಾಯಿಲೆಗಳು ಗುಣವಾದದ್ದು ಕಂಡುಬರುವುದಿಲ್ಲ. ಬಹಳಷ್ಟು ದಿನ ಸುಸ್ತಾಗುತ್ತದೆ. ಅದರಿಂದ ಶರೀರವು ಶಕ್ತಿಹೀನವಾಗುತ್ತದೆ. ಯಾವುದೇ ಕಾರಣ ಇಲ್ಲದೇ ಅನೇಕ ದಿನಗಳಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬಂದು ಮನಸ್ಸು ಅಸ್ವಸ್ಥವಾಗುತ್ತದೆ. ಈ ತೊಂದರೆಗಳ ಕಾರಣ ತಿಳಿಯುವುದಿಲ್ಲ. ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ ಮತ್ತು ಅದರ ಲಾಭ ಮುಂದಿನಂತಿದೆ.

alum1.jpg

ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ

ದೃಷ್ಟಿ ತೆಗೆಯಲು ಪಟಕಾರದ ತುಂಡು ಮಧ್ಯಮ ಆಕಾರದ್ದಾಗಿರಬೇಕು, ಅಂದರೆ ಅಡಿಕೆಗಿಂತ ಸ್ವಲ್ಪ ದೊಡ್ಡದ್ದಾಗಿರಬೇಕು. ಪಟಕಾರದ ಒಂದೊಂದು ತುಂಡು ಒಂದೊಂದು ಕೈಯಲ್ಲಿ ಹಿಡಿದು ಉಪ್ಪು ಮತ್ತು ಸಾಸಿವೆಯಿಂದ ದೃಷ್ಟಿ ತೆಗೆಯುವಂತೆ ದೃಷ್ಟಿ ತೆಗೆಯಬೇಕು. ದೃಷ್ಟಿ ತೆಗೆದ ನಂತರ ಪಟಕಾರವನ್ನು ಬೆಂಕಿಯ ಕೆಂಡದಲ್ಲಿ ಉರಿಸಬೇಕು.

ಲಾಭ : ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಯನ್ನು ಪಟಕಾರದಿಂದ ನಿವಾಳಿಸಿದಾಗ ಪಟಕಾರವು ವ್ಯಕ್ತಿಯ ಮನೋಮಯಕೋಶದಲ್ಲಿನ ಆವರಣವನ್ನು ತನ್ನಲ್ಲಿ ಘನಿಭೂತ ಮಾಡಿಕೊಳ್ಳುತ್ತದೆ. ನಂತರ ಅದನ್ನು ಕೆಂಡದ ಮೇಲೆ ಹಾಕುವುದರಿಂದ ಆ ಆವರಣವು ನಾಶವಾಗುತ್ತದೆ. ಅದರೊಂದಿಗೆ ಆ ಸಮಯದಲ್ಲಿ ಪಟಕಾರದಿಂದ ಹೊರಗೆ ಬೀಳುವ ರಜ-ತಮಾತ್ಮಕ ಲಹರಿಗಳು ಘನೀಕರಣವಾಗುತ್ತವೆ ಮತ್ತು ಅದರಿಂದ ನಿರ್ಮಾಣವಾಗುವ ಪಟಕಾರದ ಆಕಾರದಿಂದ ಕೆಟ್ಟ ಶಕ್ತಿಯ ತೊಂದರೆಯ ಸ್ವರೂಪವು ತಿಳಿಯುತ್ತದೆ. ಕೆಂಡದ ಮೇಲೆ ಹಾಕಿದ ಪಟಕಾರದ ಆಕಾರ ಮತ್ತು ಅದರಿಂದ ಗುರುತಿಸುವ ತೊಂದರೆಯ ಸ್ವರೂಪವು ಕೋಷ್ಟಕದಲ್ಲಿ ನೀಡಿದಂತಿದೆ.

DUSTI.JPG

ಯಾವಾಗ ಮತ್ತು ಎಷ್ಟು ದಿನ ದೃಷ್ಟಿ ತೆಗೆಯಬೇಕು ?

ದೃಷ್ಟಿಯನ್ನು ಆದಷ್ಟು ಸಾಯಂಕಾಲ ತೆಗೆಯಬೇಕು. ತೊಂದರೆ ದೂರವಾಗಲು ಆ ಸಮಯ ಅತೀ ಉತ್ತಮವಾಗಿರುತ್ತದೆ; ಏಕೆಂದರೆ ಆ ಸಮಯದಲ್ಲಿ ಕೆಟ್ಟ ಶಕ್ತಿಯನ್ನು ಸಹಜವಾಗಿ ಪ್ರಕಟಗೊಳಿಸಿ ತೊಂದರೆಯನ್ನು ಆಕರ್ಷಿಸಿಕೊಳ್ಳಲು ಸುಲಭವಾಗುತ್ತದೆ. ಪಟಕಾರವು ಆಧ್ಯಾತ್ಮಿಕ ತೊಂದರೆಯನ್ನು ಆಕರ್ಷಿಸಿಕೊಂಡಿದ್ದಿದ್ದರೆ, ಅದು ಕೆಂಡದ ಮೇಲೆ ಬಹಳಷ್ಟು ದೊಡ್ಡ ಆಕಾರದಲ್ಲಿ ಅರಳುತ್ತದೆ. ಪಟಕಾರದ ಆಕಾರವು ಎಷ್ಟು ದೊಡ್ಡದೋ ಅಷ್ಟು ತೊಂದರೆ ಹೆಚ್ಚು ಎಂದಾಗುತ್ತದೆ. ಆದುದರಿಂದ ಪಟಕಾರಕ್ಕೆ ಕಡಿಮೆ ಆಕಾರ ಬರುವ ತನಕ ಮತ್ತು ಮೇಲೆ ಕೊಟ್ಟಂತೆ ತೊಂದರೆಗನುಸಾರ ಆಕಾರ ಕಾಣಿಸದಷ್ಟು ದಿನ ದೃಷ್ಟಿ ತೆಗೆಯಬೇಕು. ಹಾಗಾದಾಗ ಮುಂದೆ ಇನ್ನೂ ಎರಡು ದಿನ ದೃಷ್ಟಿ ತೆಗೆಯಬೇಕು, ಅಂದರೆ ತೊಂದರೆ ಸಂಪೂರ್ಣವಾಗಿ ನಿವಾರಣೆಯಾಗುವುದು. ಈ ಸಮಯದಲ್ಲಿ ತೊಂದರೆಯಿರುವ ಸಾಧಕರು ಪ್ರತಿನಿತ್ಯದ ಆಧ್ಯಾತ್ಮಿಕ ಉಪಾಯ ಮಾಡಬೇಕು ಹಾಗೂ ಪಟಕಾರದಿಂದ ಕೆಟ್ಟ ಶಕ್ತಿಯ ಪ್ರಕಾರವು ದೃಶ್ಯ ರೂಪದಲ್ಲಿ ಕಾಣುತ್ತಿರುವುದರಿಂದ ವ್ಯಕ್ತಿಗೆ ಕೆಟ್ಟ ಶಕ್ತಿಯ ಹಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆಯಿದೆ; ಆದುದರಿಂದ ದೃಷ್ಟಿ ತೆಗೆಯುವವರು ಕೂಡ ಪ್ರಾರ್ಥನೆ ಮತ್ತು ನಾಮಜಪ ಸತತವಾಗಿ ಮಾಡಬೇಕು ಮತ್ತು ಅವರಲ್ಲಿ ಶರಣಾಗತ ಭಾವವಿರಬೇಕು.

(ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ’ ಎಂಬ ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ಓದಿರಿ.)

Leave a Comment