ತಮ್ಮ ಮೇಲಿನ ತ್ರಾಸದಾಯಕ ಆವರಣವನ್ನು ನಿಯಮಿತವಾಗಿ ತೆಗೆಯಿರಿ !

ತಮ್ಮ ಮೇಲಿನ ತ್ರಾಸದಾಯಕ ಆವರಣವನ್ನು ನಿಯಮಿತವಾಗಿ ತೆಗೆಯಿರಿ !

‘ಇತ್ತೀಚೆಗೆ ತೊಂದರೆಯಾಗುತ್ತಿರುವ ಸಾಧಕರಿಗೆ ನಾಮಜಪ ಇತ್ಯಾದಿ ಉಪಾಯಗಳನ್ನು ಹೇಳುವಾಗ ಗಮನಕ್ಕೆ ಬಂದ ಅಂಶವೆಂದರೆ, ವಾತಾವರಣದಲ್ಲಿರುವ ಅನಿಷ್ಟ ಶಕ್ತಿಗಳು ಸಾಧಕರ ಆಜ್ಞಾಚಕ್ರ ಹಾಗೂ ಅನಾಹತ ಚಕ್ರದ ಮೇಲೆ ತ್ರಾಸದಾಯಕ ಆವರಣವನ್ನು ಪದೇಪದೇ ಹಾಕುತ್ತಿರುತ್ತವೆ. ಈ ಆವರಣವನ್ನು ಹೆಚ್ಚಿಸಿ ನಂತರ ತಲೆಯಿಂದ ಎದೆಯ ತನಕ ಕಂಬಳಿ ಹೊದ್ದುಕೊಂಡಿರುವಂತೆ ಸಂಪೂರ್ಣವಾಗಿ ಆವರಣ ಬರುತ್ತದೆ. ಇದರಿಂದ ಸಾಧಕರಿಗೆ ‘ಏನೂ ತೋಚದಿರುವುದು, ಮನಸ್ಸು ಅಸ್ವಸ್ಥವಾಗಿರುವುದು, ನಿರುತ್ಸಾಹವೆನಿಸುವುದು, ನಾಮಜಪ ಮಾಡಬೇಕೆಂದೆನಿಸದಿರುವುದು, ಉಪಾಯಗಳ ಪರಿಣಾಮವಾಗದಿರುವುದು’, ಈ ರೀತಿಯ ತೊಂದರೆಗಳಾಗುತ್ತಿವೆ. ಆಗ ಸಾಧಕರಿಗೆ ತಮ್ಮ ತಲೆಯ ಮೇಲೆ ಅಥವಾ ಎದೆಯಲ್ಲಿ ಒತ್ತಡವೆನಿಸುತ್ತಿದ್ದರೆ ಹಾಗೂ ಮೇಲಿನಂತೆ ತೊಂದರೆಗಳಾಗುತ್ತಿದ್ದರೆ ಮೊದಲು ವಿಶೇಷ ಸ್ಥಾನದ ಅಥವಾ ಎದೆಯಿಂದ ತಲೆಯವರೆಗಿನ ಶರೀರದ ಭಾಗಗಳ ಆವರಣ ತೆಗೆಯಬೇಕು.
ಸಾಧಕರು ನಿರ್ಧರಿತ ಸಮಯಕ್ಕೆ ಸರಿಯಾಗಿ ಅತ್ತರ್ ಹಾಗೂ ಕರ್ಪೂರದ ಉಪಾಯವನ್ನು ಮಾಡುತ್ತಾರೆ, ಆ ಸಮಯದಲ್ಲಿ ಅವರು ತಮ್ಮ ಮೇಲಿರುವ ಆವರಣವನ್ನು ಸಹ ತೆಗೆಯಬೇಕು. ಆವರಣ ತೆಗೆಯಲು ೧-೨ ನಿಮಿಷಗಳಷ್ಟೇ ತಗಲುತ್ತದೆ. ತಮ್ಮ ಮೇಲಿನ ಆವರಣವನ್ನು ಕೈ ಬೆರಳುಗಳಿಂದ ಅಥವಾ ಸನಾತನ ಪ್ರಭಾತ ನಿಯತಕಾಲಿಕೆಯಿಂದ ತೆಗೆಯಬಹುದು. ಕೈ ಬೆರಳುಗಳಿಂದ ಆವರಣ ತೆಗೆಯುವುದರಿಂದಾಗುವ ಲಾಭವೆಂದರೆ ನಮ್ಮ ಕೈ ಬೆರಳುಗಳಿಂದ ನಿರಂತರವಾಗಿ ಪ್ರಾಣಶಕ್ತಿಯ ಪ್ರಕ್ಷೇಪಣೆಯಾಗುತ್ತಿರುತ್ತದೆ, ಇದರಿಂದ ಈ ಪ್ರಾಣಶಕ್ತಿ ನಮಗೆ ಸಿಗುತ್ತದೆ. ಸನಾತನ ಪ್ರಭಾತ ನಿಯತಕಾಲಿಕೆ ಸಾತ್ತ್ವಿಕವಾಗಿರುವುದಿಂದ ಅದರಿಂದ ಆವರಣ ಹೋಗುತ್ತದೆ. ತಮ್ಮ ಮೇಲಿರುವ ತ್ರಾಸದಾಯಕ ಶಕ್ತಿಯ ಆವರಣವನ್ನು ಪ್ರತಿನಿತ್ಯ ತೆಗೆಯುವುದರಿಂದ ತೊಂದರೆಯ ಪ್ರಮಾಣ ತುಂಬಾ ಕಡಿಮೆಯಾಗುತ್ತದೆ.
– (ಪೂ.) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೬.೩.೨೦೧೭)

ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ

 

 

Leave a Comment