ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳು

ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗಿ, ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯವಾಗುತ್ತದೆ: ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ. ಆಕರ್ಷಿತಗೊಂಡ ದೇವತ್ವರೂಪಿ ಲಹರಿಗಳು ಬೊಗಸೆಯಲ್ಲಿಯೇ ಘನೀಕೃತವಾಗುತ್ತವೆ ಮತ್ತು ಬೊಗಸೆಯ ರೂಪದಲ್ಲಿ ತಯಾರಾದ ಟೊಳ್ಳಿನಲ್ಲಿ ಆಕಾಶದ ವ್ಯಾಪಕತ್ವವನ್ನು ಪಡೆದುಕೊಂಡು ಅಲ್ಲಿಯೇ ಸುತ್ತಾಡುತ್ತಿರುತ್ತವೆ. ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ತಯಾರಾಗಿ ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಸುಷುಮ್ನಾನಾಡಿಯು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿದೆ. ರಾತ್ರಿಯ ಸಮಯ ಮಾಡಿದ ತಮೋಗುಣೀ ನಿದ್ರೆಯಿಂದ ದೇಹದಲ್ಲಿ ತಮೋಗುಣವು ನಿರ್ಮಾಣವಾಗಿದ್ದರೆ ಸುಷುಮ್ನಾನಾಡಿಯ ಜಾಗೃತಿಯಿಂದ ಅದನ್ನು ಹೊರಹಾಕಲು ಸಹಾಯವಾಗುತ್ತದೆ.
– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೧೦.೨೦೦೭, ಬೆಳಗ್ಗೆ ೯.೪೬)

ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದರಿಂದಾಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ

(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು / ಝೂಮ್ ಮಾಡಲು ಚಿತ್ರವನ್ನು ಕ್ಲಿಕ್ ಮಾಡಿ.)

karadarshan1-1

ಇತರ ಅಂಶಗಳು

ಅ. ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುವುದು, ಈಶ್ವರನೊಂದಿಗೆ ಅವನ ಅನುಸಂಧಾನವಾಗುವುದು ಮತ್ತು ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗುವುದು: ರಾತ್ರಿಯ ನಿದ್ರೆಯಿಂದ ವ್ಯಕ್ತಿಯ ದೇಹದಲ್ಲಿ ತಮೋಗುಣಿ ಸ್ಪಂದನಗಳು ನಿರ್ಮಾಣವಾಗುತ್ತವೆ. ಇದರಿಂದ ಅವನ ಮೇಲೆ ತ್ರಾಸದಾಯಕ ಶಕ್ತಿಯ ದಪ್ಪ ಆವರಣ ಬರುತ್ತದೆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದರಿಂದ ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುತ್ತದೆ. ಹಾಗೆಯೇ ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗಿ, ಈಶ್ವರನ ಅನುಸಂಧಾನ ಪ್ರಾರಂಭವಾಗುತ್ತದೆ ಮತ್ತು ಆ ವ್ಯಕ್ತಿಯು ದಿನವಿಡೀ ಅದೇ ಸ್ಥಿತಿಯಲ್ಲಿರಲು ಸಹಾಯವಾಗುತ್ತದೆ.

ಆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು: ಹಿಂದೂ ಧರ್ಮದಲ್ಲಿ ‘ಅಯಮ್ ಆತ್ಮಾ ಬ್ರಹ್ಮ|’ ಅಂದರೆ ‘ಆತ್ಮವೇ ಬ್ರಹ್ಮ’ವಾಗಿದೆ ಎಂಬುದನ್ನು ಕಲಿಸಲಾಗುತ್ತದೆ. ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವು ಇದರ ಒಂದು ಉದಾಹರಣೆಯಾಗಿದೆ. ಆದುದರಿಂದ ಪ್ರಾತಃಕಾಲ ಎದ್ದ ಮೇಲೆ ಕರದರ್ಶನ ಪಡೆಯುತ್ತಾ ಈ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದಾಗಿದೆ. ಹಿಂದೂ ಧರ್ಮವು ಬಾಹ್ಯಶುದ್ಧಿಗಿಂತ ಅಂತರ್ಮನಸ್ಸಿನ ಶುದ್ಧಿಗೆ ಹೆಚ್ಚು ಮಹತ್ವವನ್ನು ಕೊಡುತ್ತದೆ.

ಇ. ವ್ಯಕ್ತಿಯಿಂದ ಅರಿವಿಲ್ಲದೇ ಘಟಿಸುವ ಅಯೋಗ್ಯ ಕರ್ಮಗಳ ಸಮಯದಲ್ಲಿ ಅವನ ಅಂತರ್ಮನಸ್ಸಿಗೆ ಅವುಗಳ ಅರಿವಾಗಿ ಅವುಗಳನ್ನು ತಡೆಗಟ್ಟಬಹುದು: ವ್ಯಕ್ತಿಯಿಂದ ದಿನವಿಡೀ ಅನೇಕ ಕರ್ಮಗಳು ಘಟಿಸುತ್ತಿರುತ್ತವೆ. ಈ ಯೋಗ್ಯ ಮತ್ತು ಅಯೋಗ್ಯ ಕರ್ಮಗಳು ವ್ಯಕ್ತಿಯ ಪಾಪ-ಪುಣ್ಯಕ್ಕೆ ಕಾರಣವಾಗುತ್ತವೆ. ವ್ಯಕ್ತಿಯು ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ …’ ಎಂಬ ಶ್ಲೋಕವನ್ನು ಪಠಿಸುವುದರಿಂದ ಅವನಿಂದ ತಿಳಿಯದೇ ಘಟಿಸುವ ಅಯೋಗ್ಯ ಕರ್ಮಗಳ ಸಮಯದಲ್ಲಿ ಅವನ ಅಂತರ್ಮನಸ್ಸಿಗೆ ಅವುಗಳ ಅರಿವಾಗಿ ಅವನಿಂದ ಅಯೋಗ್ಯ ಕರ್ಮಗಳು ಘಟಿಸುವುದಿಲ್ಲ.

ಈ. ವ್ಯಕ್ತಿಯಲ್ಲಿರುವ ಭಾವದಿಂದ ಅವನ ಕೈಗಳ ಅಗ್ರಭಾಗದಲ್ಲಿ ಲಕ್ಷ್ಮೀದೇವಿತತ್ತ್ವ, ಮಧ್ಯಭಾಗದಲ್ಲಿ ಸರಸ್ವತಿದೇವಿತತ್ತ್ವ ಮತ್ತು ಮೂಲದಲ್ಲಿ ಶ್ರೀಕೃಷ್ಣತತ್ತ್ವವು ಗ್ರಹಣವಾಗುತ್ತದೆ.

ಉ. ಈ ಶ್ಲೋಕವು ಸಂಸ್ಕೃತ ಭಾಷೆಯಲ್ಲಿ, ಅಂದರೆ ದೇವಭಾಷೆಯಲ್ಲಿರುವುದರಿಂದ ವ್ಯಕ್ತಿಗೆ ಸಂಸ್ಕೃತದಲ್ಲಿನ ಚೈತನ್ಯವೂ ಸಿಗುತ್ತದೆ.
– ಕು. ಪ್ರಿಯಾಂಕಾ ಲೋಟಲೀಕರ, ಸನಾತನ ಸಂಸ್ಥೆ (ಶ್ರಾವಣ ಶು.೭, ಕಲಿಯುಗ ವರ್ಷ ೫೧೧೨ (೧೬.೮.೨೦೧೦))

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

2 thoughts on “ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳು”

  1. Why do Hindu men don’t cut their hair and don’t shave their Beard on Tuesday? What’s the reason behind this practice?

    Reply
    • Namaskar Meghana ji,

      As per Dharmashastra, Men can cut their hair on Tuesdays.

      When should men avoid cutting hair ?
      1. Men should not have a haircut on inauspicious days, new-moon days and full-moon days; because on these days Raja-Tama-predominant waves are more active in the atmosphere.

      2. After a haircut, tips of the hair remain exposed and hence, Raja-Tama-predominant waves can get easily transferred into the hair through hair follicles and remain congregated at hair roots.

      3. This results in creation of centres of negative energies at the roots of the hair; hence, an act like cutting hair should not be carried out on days when there is a predominance of Raja-Tama components.

      4. As far as possible, hair should not be cut in the noon, evening and night, because these periods also help in activating Raja-Tama-predominant waves.

      5. Hair should not be cut on festival days like Rāmnavami, Hanumān Jayanti etc.

      6. Hair should not be cut on the date and tithī of birth.

      Regards,
      Sanatan Sanstha

      Reply

Leave a Comment