ವಿಜ್ಞಾನಿಗಳ ಮತ್ತು ಋಷಿಗಳ ಸಂಶೋಧನೆಯ ವ್ಯತ್ಯಾಸ

೧. ತಾಮಸಿಕ ವಿಜ್ಞಾನಿ

೧ ಅ. ರಜ-ತಮ ಪ್ರಧಾನ ವ್ಯಕ್ತಿಯು ವ್ಯವಹಾರದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ಮಾಡಿ ಅಭಿವೃದ್ಧಿಗೊಳಿಸಲು ಜೀವನವೆಲ್ಲ ಪ್ರಯತ್ನಪಡುವುದು ಮತ್ತು ರಜೋಗುಣಗಳ ಅಧೀನದಲ್ಲಿರುವುದರಿಂದ ವ್ಯವಹಾರದಲ್ಲಿನ ವಿಷಯಗಳಲ್ಲಿ ಸಿಲುಕಿರುವುದರಿಂದ ಅವರ ಗಮನ ಅಧ್ಯಾತ್ಮದಕಡೆಗೆ ಇರದಿರುವುದು : ಸ್ವಲ್ಪ ಪ್ರಮಾಣದಲ್ಲಿ ದೊರಕಿದ ಜಿಜ್ಞಾಸೆಯಿಂದ ರಜಪ್ರಧಾನ ಬುದ್ಧಿಯ ಗಮನ ಹಾಗೆಯೇ (ರಜಪ್ರಧಾನ) ಕುರಿತು ಇರುತ್ತದೆ. ಮಾಯೆಯು ರಜ-ತಮಪ್ರಧಾನವಾಗಿರುವುದರಿಂದ ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ಭೌತಿಕ ಜಗತ್ತಿನ ಮಾಯೆಯ ಆಧಾರಿತ ವ್ಯವಹಾರದ ಕುರಿತು ವಿವಿಧ ವಿಷಯಗಳ ಕ್ಷೇತ್ರಗಳ ಬಗ್ಗೆ ವ್ಯವಹಾರಿಕ ಜಿಜ್ಞಾಸೆ ಇರುತ್ತದೆ. ಆದುದರಿಂದ ಅವರು ವ್ಯವಹಾರದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸುವ ಸಲುವಾಗಿ ಜೀವನವೆಲ್ಲ ಪ್ರಯತ್ನಿಸುತ್ತಿರುತ್ತಾರೆ. ರಜೋಗುಣದ ಪ್ರಾಬಲ್ಯದಿಂದ ಜೀವವು ವ್ಯಾವಹಾರಿಕ ವಿಷಯಗಳಲ್ಲಿ ಸಿಲುಕಿರುವುದರಿಂದ ಅವನ ಚಿತ್ತ ಅಧ್ಯಾತ್ಮದಕಡೆಗೆ ಇರುವುದಿಲ್ಲ. ಸಮಾಜದಲ್ಲಿನ ಹೆಚ್ಚಿನ ವಿಜ್ಞಾನಿಗಳು ಸಾತ್ತ್ವಿಕ ಅಧ್ಯಾತ್ಮದಲ್ಲಿನ ಸಂಶೋಧನೆ ಕುರಿತು ಸ್ವಲ್ಪವೂ ಜಿಜ್ಞಾಸೆಯನ್ನು ತೋರಿಸುವುದಿಲ್ಲ ; ಆದರೆ ವ್ಯವಹಾರದಲ್ಲಿನ ಅನೇಕ ವಿಷಯಗಳ ಕುರಿತು ಅವರಿಗೆ ಅತಿಯಾದ ಜಿಜ್ಞಾಸೆ ಇರುವುದು ಗಮನಕ್ಕೆ ಬರುತ್ತದೆ.

೧ ಆ. ರಜ-ತಮಪ್ರಧಾನ ಬುದ್ಧಿಯಿಂದ ಮಾಡಿದ ಸಂಶೋಧನೆಯ ದುಷ್ಪರಿಣಾಮ

೧ಆ ೧. ರಜ-ತಮಪ್ರಧಾನ ಬುದ್ಧಿಯಿಂದ ಮಾಡಿದ ಆಧ್ಯಾತ್ಮಿಕ ವಿಷಯಗಳಲ್ಲಿ ವೈಜ್ಞಾನಿಕ ಸಂಶೋಧನೆಯ ನಿಷ್ಕರ್ಷವು ಅಯೋಗ್ಯವಾಗಿದ್ದು ತಾಮಸಿಕ ವೃತ್ತಿಯಿಂದ ಮಾಡಿದ ಸಂಶೋಧನೆಯ ಉಪಯೋಗವು ಅತ್ಯಲ್ಪ ಕಾಲದ ವರೆಗೆ ಆಗುವುದು ಮತ್ತು ಸಂಪೂರ್ಣ ಮನುಕುಲಕ್ಕೆ ವಿನಾಶಕಾರಿ ಪರಿಣಾಮಗಳನ್ನು ಎದುರಿಸಬೇಕಾಗುವುದು : ಯಾವ ವಿಜ್ಞಾನಿಗಳ ಬುದ್ಧಿಯು ರಜ-ತಮಪ್ರಧಾನವಿರುತ್ತದೆ, ಅವರ ವಿಚಾರಗಳು ಮತ್ತು ವಿಚಾರ ಪ್ರಕ್ರಿಯೆಯೂ ಯೋಗ್ಯವಾಗಿರುವುದಿಲ್ಲ. ಇಂತಹ ವಿಜ್ಞಾನಿಗಳಿಗೆ ಎಷ್ಟು ಸಾಕ್ಷಿಗಳನ್ನು ನೀಡಿದರೂ, ಅವರ ಬುದ್ಧಿ ಅಯೋಗ್ಯ ಮಾರ್ಗದಿಂದ ವಿಚಾರ ಮಾಡುತ್ತದೆ. ಇಂತಹ ರಜ-ತಮಪ್ರಧಾನ ಬುದ್ಧಿಯಿಂದ ಆಧ್ಯಾತ್ಮಿಕ ವಿಷಯಗಳ ಮೇಲೆ ಮಾಡಿದ ವೈಜ್ಞಾನಿಕ ಸಂಶೋಧನೆಗಳ ನಿಷ್ಕರ್ಷವೂ ಅಯೋಗ್ಯವಾಗಿರುತ್ತವೆ. ಇದು ಪ್ರಕಾಶವನ್ನು ಹುಡುಕಲು ಕತ್ತಲೆಯ ಮಾರ್ಗದಲ್ಲಿ ಅಲೆದಾಡುವಂತೆ ಆಯಿತು. ಆದುದರಿಂದ ತಾಮಸಿಕ ವೃತ್ತಿಯಿಂದ ವಿಜ್ಞಾನಿಗಳು ಹೊಸಹೊಸ ಸಂಶೋಧನೆ ಮಾಡುತ್ತಿರುತ್ತಾರೆ, ಅವುಗಳ ಉಪಯೋಗವು ಮನುಷ್ಯನಿಗಾಗಿ ಕೇವಲ ತಾತ್ಕಾಲಿಕ ಸ್ವರೂಪದ ಮತ್ತು ಅತ್ಯಲ್ಪ ಕಾಲಾವಧಿಗೆ ಆಗುತ್ತದೆ; ಆದರೆ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿಯೇ ತಾಮಸಿಕ ಸಂಶೋಧನೆಯ ದುಷ್ಪರಿಣಾಮ ಮತ್ತು ವಿನಾಶಕಾರಿ ತಾಮಸಿಕತೆಯ ಪರಿಣಾಮವು ಮಾನವಕುಲಕ್ಕೆ ಸವಾಲಾಗಿ ನಿಲ್ಲುತ್ತದೆ. ವಿಜ್ಞಾನದ ತಾಮಸಿಕ ಪರಿಣಾಮವು ರಾಕ್ಷಸನಂತೆ ಮನುಕುಲವನ್ನೇ ಸ್ವಾಹಾ ಮಾಡಲು ಕಾದು ಕುಳಿತಿರುತ್ತದೆ.

೧ ಆ ೨. ತಾಮಸಿಕ ಬುದ್ಧಿಯಿಂದಾಗಿ ತಾಮಸಿಕ ವಿಜ್ಞಾನಿಗಳಿಂದ ವಿಜ್ಞಾನ-ಶಕ್ತಿಯನ್ನು ವಿಧ್ವಂಸಕ ರೀತಿಯಲ್ಲಿ ದುರುಪಯೋಗ ಮಾಡಲಾಗುವುದು ಮತ್ತು ಅಣುಬಾಂಬು, ಅತ್ಯಾಧುನಿಕ ಕ್ಷೇಪಣಾಸ್ತ್ರ ಇತ್ಯಾದಿಗಳಿಂದ ಯಾವುದೇ ದೇಶದಲ್ಲಿನ ಮನುಷ್ಯನ ಜೀವನ ಸುರಕ್ಷಿತ ಇಲ್ಲದಿರುವುದು : ವಿಜ್ಞಾನದ ತಾಮಸಿಕ ಪರಿಣಾಮಗಳಿಂದ ಎರೆಡು ಮಹಾಯುದ್ಧಗಳಲ್ಲಿ ಪೃಥ್ವಿಯ ಮೇಲೆ ಮೃತ್ಯು ತಾಂಡವನೃತ್ಯವನ್ನೇ ಆಡಿದೆ. ಅಣುಬಾಂಬು, ಪರಮಾಣುಬಾಂಬು, ಅತ್ಯಾಧುನಿಕ ಕ್ಷೇಪಣಾಸ್ತ್ರಗಳು, ಯುದ್ಧಕ್ಷೇತ್ರದ ಗಣಕದ ಮಾಹಿತಿಜಾಲ ಯಂತ್ರಣೆ ಮತ್ತು ಅದರ ಉಪಗ್ರಹ ಪ್ರಣಾಲಿಕೆಯ ಮೂಲಕ ನಿಯಂತ್ರಣ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಮನುಷ್ಯನ ಜೀವನ ಯಾವುದೇ ದೇಶದಲ್ಲಿ ಸುರಕ್ಷಿತವಾಗಿಲ್ಲ. ಅವನ ತಲೆಯ ಮೇಲೆ ಸತತವಾಗಿ ಮಹಾ ಭಯಂಕರ ಸಂಕಟದ ಖಡ್ಗವು ತೂಗಾಡುತ್ತಿದೆ.

ತಾಮಸಿಕ ಬುದ್ಧಿಯಿಂದಾಗಿ ‘ವಿಜ್ಞಾನದ ಶಕ್ತಿಯನ್ನು ತಪ್ಪು ಪದ್ಧತಿಯಲ್ಲಿ ಉಪಯೋಗಿಸಲು’ ತಾಮಸಿಕ ವಿಜ್ಞಾನಿಗಳಲ್ಲಿ ಕುಬುದ್ಧಿಯು ನಿರ್ಮಾಣವಾಗಿ ಆ ಶಕ್ತಿಯನ್ನು ಮನುಷ್ಯನನ್ನು ಮತ್ತು ಪೃಥ್ವಿಯ ಮೇಲಿನ ಇತರ ಜೀವಗಳನ್ನು ನಷ್ಟಗೊಳಿಸುವುದಕ್ಕಾಗಿ ವಿಧ್ವಂಸಕ ರೀತಿಯಿಂದ ದುರುಪಯೋಗಪಡಿಸಲಾಗುತ್ತಿದೆ. ಜಿಹಾದಿಗಳಿಗೆ ಸಹಾಯ ಮಾಡುವ ವಿಜ್ಞಾನಿಗಳು ತಾಮಸಿಕ ವಿಜ್ಞಾನಿಗಳ ಜ್ವಲಂತ ಉದಾಹರಣೆ ಇವೆ.

೧ಇ. ತಾಮಸಿಕ ವಿಜ್ಞಾನಿಗಳು ಆಧ್ಯಾತ್ಮದ ಕುರಿತು ಸಂಶೋಧನೆ ಮಾಡಲು ಅನರ್ಹರಾಗಿದ್ದು, ಅವರ ಅಲ್ಪಬುದ್ಧಿಯಿಂದ ಅಧ್ಯಾತ್ಮವನ್ನು ಅರಿತುಕೊಳ್ಳುವುದು ಅಸಾಧ್ಯವಾಗಿರುವುದರಿಂದ ಅವರು ಅಧ್ಯಾತ್ಮವೇ ಟೊಳ್ಳೆಂದು ಸುಳ್ಳು ಆರೋಪ ಮಾಡುವುದು : ತಾಮಸಿಕ ವಿಜ್ಞಾನಿಗಳು ಅಧ್ಯಾತ್ಮದಲ್ಲಿನ ವಿವಧ ವಿಷಯಗಳ ಮೇಲೆ ಸಂಶೋಧನೆ ಮಾಡಲು ಅನರ್ಹರಾಗಿದ್ದಾರೆ. ಈ ವಿಜ್ಞಾನಿಗಳಿಗೆ ಅಧ್ಯಾತ್ಮದಲ್ಲಿನ ಒಂದಕ್ಷರದ ಜ್ಞಾನವೂ ಇಲ್ಲದಿರುವುದರಿಂದ ಅವರು ಈ ವಿಷಯಗಳ ಕುರಿತು ಸಂಶೋಧನೆ ಮಾಡುವ  ಕೃತಿ ಮಾಡಬಹುದು ; ಆದರೆ ನಿಜವಾದ ಅರ್ಥದಲ್ಲಿ ಸಂಶೋಧನೆ ಆಗದಿರುವುದರಿಂದ ತಮ್ಮ ಅಸಫಲತೆಯನ್ನು ಅವರು ಸ್ವೀಕರಿಸುವುದಿಲ್ಲ. ವೈಜ್ಞಾನಿಕ ದೃಷ್ಟಿಯಿಂದ ಸಿದ್ಧವಾಗದಿರುವ ಆಧ್ಯಾತ್ಮಿಕ ಪ್ರಯೋಗಗಳಲ್ಲಿ ‘ವಿಜ್ಞಾನ ಮತ್ತು ಸ್ವಂತ ಬುದ್ಧಿಗೆ ಇರುವ ಮಿತಿ’ಯನ್ನು ಅವರು ಪ್ರಾಮಾಣಿಕವಾಗಿ ಸ್ವೀಕರಿಸುವುದಿಲ್ಲ. ‘ಕುಣಿಯಲು ಬರದಿದ್ದರೆ ನೆಲ ಡೊಂಕು’ ಎಂಬಂತೆ ವೈಜ್ಞಾನಿಕ ಸಂಶೋಧನೆಯಿಂದ ಯಾವುದೇ ಉತ್ತರ ಸಿಗದಿದ್ದರೆ ಅವರು ‘ಅಧ್ಯಾತ್ಮವೇ ಟೊಳ್ಳೆಂದು’ ಸುಳ್ಳು ಆರೋಪ ಮಾಡುತ್ತಾರೆ.

೨. ಹಿಂದಿನ ಜನ್ಮದ ಸಾಧನೆಯಿಂದಾಗಿ ರಜಪ್ರಧಾನವಾದ ಬುದ್ಧಿಯ ರೂಪಾಂತರ ರಜ-ಸತ್ತ್ವಪ್ರಧಾನ ಬುದ್ಧಿಯಲ್ಲಿ ಆಗುವುದು, ಆದರೆ ಅದಕ್ಕೆ ಸಾಧನೆಯ ಬಲ ಸಿಗದಿರುವುದರಿಂದ ತೊಂದರೆದಾಯಕ ಶಕ್ತಿಗಳ ಆವರಣ ಬಂದು ಜೀವವನ್ನು ಮಾಯೆಯಲ್ಲಿ ಸಿಲುಕಿಸುವ ರಜ-ತಮಪ್ರಧಾನ ಬುದ್ಧಿಯಲ್ಲಿ ರೂಪಾಂತರವಾಗುವುದು

ಕಾರಣದೇಹಕ್ಕಿಂತ ವಿಜ್ಞಾನಮಯಕೋಷವು ಅಧಿಕ ಸೂಕ್ಷ್ಮವಿರುತ್ತದೆ. ಕಾರಣದೇಹವು ರಜೋಗುಣದೊಂದಿಗೆ, ವಿಜ್ಞಾನಮಯಕೋಷವು ರಜ-ಸತ್ತ್ವ ಗುಣದೊಂದಿಗೆ ಸಂಬಂಧಪಟ್ಟಿರುತ್ತದೆ. ಜೀವದ ಸೂಕ್ಷ್ಮದೇಹದ ಶುದ್ಧಿಯನಂತರ ಅದರ ಸೂಕ್ಷ್ಮ ಕೋಷಗಳ ಶುದ್ಧಿ ಆರಂಭವಾಗುತ್ತದೆ. ಯಾವ ಜೀವಗಳ ಹಿಂದಿನ ಜನ್ಮದ ಸಾಧನೆ ಮೂಲಕ ಕಾರಣದೇಹದ ಶುದ್ಧಿಯಾಗಿ ವಿಜ್ಞಾನಮಯಕೋಷದ ಶುದ್ಧಿಯು ಕನಿಷ್ಠಪಕ್ಷ ಶೇ. ೩೦ ರಷ್ಟು ಪ್ರಮಾಣದಲ್ಲಿ ಆಗಿರುತ್ತದೆ, ಅವರ ಪ್ರಸ್ತುತ ಜನ್ಮದಲ್ಲಿ ರಜಪ್ರಧಾನ ಬುದ್ಧಿಯ ರೂಪಾಂತರ ಸಾತ್ತ್ವಿಕ ಬುದ್ಧಿಯಲ್ಲಿ ಆಗಲು ಆರಂಭವಾಗುತ್ತದೆ. ಇಂತಹ ಜೀವಗಳ ಬುದ್ಧಿಯು ರಜ-ಸತ್ತ್ವ ಪ್ರಧಾನವಿರುತ್ತದೆ. ಈ ಬುದ್ಧಿಗೆ ಸಾಧನೆಯ ಬಲ ಸಿಗದಿದ್ದರೆ, ಅದರ ಉಪಯೋಗ ಮಾಯೆಯ ಮಾರ್ಗದಲ್ಲಿ ಹೋಗಿ ಕೊನೆಗೆ ಜೀವವು ಪೂರ್ಣತಃ ಮಾಯೆಯಲ್ಲಿ ಸಿಲುಕಿಕೊಳ್ಳುತ್ತದೆ. ಮಾಯೆಯ ಪ್ರಭಾವ ಬಲವಾಗಿ ಇರುವ ಇಂತಹ ಬುದ್ಧಿಯ ಮೇಲೆ ಸತತವಾಗಿ ತೊಂದರೆದಾಯಕ ಶಕ್ತಿಗಳ ಆವರಣ ಇರುವುದರಿಂದ ಕಾಲಕ್ರಮೇಣ ಅದರ ರೂಪಾಂತರ ರಜ-ತಮ ಪ್ರಧಾನ ಬುದ್ಧಿಯಲ್ಲಿ ಆಗುತ್ತದೆ.

೩. ಸಾತ್ತ್ವಿಕ ವಿಜ್ಞಾನಿ

೩ ಅ. ಸಾತ್ತ್ವಿಕ ಬುದ್ಧಿಯ ಆಧಾರದಲ್ಲಿ ಸಂಶೋಧನೆ ಮಾಡುವ ವಿಜ್ಞಾನಿಗಳಲ್ಲಿ ತೀವ್ರ ಜಿಜ್ಞಾಸೆ ಮತ್ತು ಸತ್ಯವನ್ನು ಅರಿತುಕೊಳ್ಳುವ ತೀವ್ರ ತಳಮಳದಂತಹ ಗುಣಗಳಿರುವುದು ಮತ್ತು ಅವರಿಗೆ ಸ್ಥೂಲ ಜಗತ್ತಿನ ಕುರಿತು ಕನಿಷ್ಠ ದರ್ಜೆಯ ಜ್ಞಾನವು ಕನಿಷ್ಠ ಮಟ್ಟದ ಕೆಟ್ಟಶಕ್ತಿಗಳ ಮೂಲಕ ಸಿಗುವುದು :

ಸಾತ್ತ್ವಿಕ ಬುದ್ಧಿ ಇರುವ ವ್ಯಕ್ತಿಗಳಲ್ಲಿ ನಿಜವಾದ ಜಿಜ್ಞಾಸೆ ಇರುತ್ತದೆ. ಆದುದರಿಂದ ಯಾವ ವ್ಯಕ್ತಿ ಪರಿಶುದ್ಧ ಜಿಜ್ಞಾಸೆಯಿಂದ ಕೆಲವೊಂದು ವಿಷಯಗಳಲ್ಲಿ ಆಳವಾಗಿ ಅಧ್ಯಯನ ಮಾಡಿ ಸತ್ಯವನ್ನು ಹುಡುಕುತ್ತಿರುತ್ತಾನೆ, ಅವನ ಬುದ್ಧಿ ಸಾತ್ತ್ವಿಕವಾಗಿರುತ್ತದೆ. ಈ ಬುದ್ಧಿಯ ಆಧಾರದಿಂದಲೇ ಸಾತ್ತ್ವಿಕ ಜೀವಾತ್ಮಕ್ಕಾಗಿ ಸತ್ಯ ಮತ್ತು ಜ್ಞಾನ ಇವುಗಳ ಪ್ರಾಪ್ತಿಯ ಕೋಣೆಯನ್ನು ಭಗವಂತನು ಮೊದಲು ತೆರೆದಿಡುತ್ತಾನೆ.

ಸಾತ್ತ್ವಿಕ ಬುದ್ಧಿಯ ಆಧಾರದಿಂದ ಸಂಶೋಧನೆ ಮಾಡುವ ವಿಜ್ಞಾನಿಗಳಲ್ಲಿ ತೀವ್ರ ಜಿಜ್ಞಾಸೆ ಮತ್ತು ಸತ್ಯವನ್ನು ಅರಿತುಕೊಳ್ಳುವ ತೀವ್ರ ತಳಮಳ ಎಂಬ ಎರೆಡು ಗುಣಗಳಿರುತ್ತವೆ. ಆದುದರಿಂದ ಅಧ್ಯಾತ್ಮದಲ್ಲಿನ ‘ಜಿಜ್ಞಾಸುವೇ ಜ್ಞಾನ ಪಡೆಯಲು ಅರ್ಹ’, ಎಂಬ ತತ್ತ್ವಕ್ಕನುಸಾರ ಇಂತಹ ವಿಜ್ಞಾನಿಗಳಿಗೆ ಸ್ಥೂಲ ಜಗತ್ತಿನ ಕುರಿತು ಸ್ಥೂಲ-ಸೂಕ್ಷ್ಮ ಮಟ್ಟದಲ್ಲಿ ಕನಿಷ್ಠ ದರ್ಜೆಯ ಜ್ಞಾನ ಸಿಗುತ್ತದೆ, ಅದಕ್ಕೆ ಆಧ್ಯಾತ್ಮಿಕ ಭಾಷೆಯಲ್ಲಿ ‘ವೈಜ್ಞಾನಿಕ ಮಾಹಿತಿ’ ಎಂದು ಕರೆಯುತ್ತಾರೆ. ಅನೇಕಬಾರಿ ಇಂತಹ ಜ್ಞಾನವು ವಿಜ್ಞಾನಿಗಳಿಗೆ ಕನಿಷ್ಠ ಸ್ತರದ ಕೆಟ್ಟಶಕ್ತಿಗಳ ಮೂಲಕ ಸಿಗುತ್ತಿರುತ್ತದೆ.

೩ ಆ. ಸಾಧನೆ ಮತ್ತು ಶುದ್ಧ ಜಿಜ್ಞಾಸೆಯಿಂದ ರಜಪ್ರಧಾನ ಬುದ್ಧಿಯು ಸತ್ತ್ವ-ರಜ ಪ್ರಧಾನ ಬುದ್ಧಿಯಲ್ಲಿ ರೂಪಾಂತರಗೊಂಡು ವಿಷಯಗಳ ಆಳವಾದ ಅಧ್ಯಯನ ಮಾಡುವ ವೃತ್ತಿಯು ನಿರ್ಮಾಣವಾಗವುದು : ಸಾಧನೆಯಿಂದ ರಜಪ್ರಧಾನ ಬುದ್ಧಿಯ ರೂಪಾಂತರವು ಕಾಲಕ್ರಮೇಣ ರಜ-ಸತ್ತ್ವ ಪ್ರಧಾನ ಬುದ್ಧಿಯಲ್ಲಿ ಆಗುತ್ತದೆ. ಮಾಯೆಯ ಪ್ರಭಾವದಿಂದ ಈ ಬುದ್ಧಿಯನ್ನು ರಕ್ಷಿಸಲು ಯೋಗ್ಯ ಸಾಧನೆಯ ಬಲವಿರುವುದು ಅತ್ಯಂತ ಅವಶ್ಯಕವಾಗಿದೆ. ಸಾಧನೆಯ ಬಲವಿರುವ ರಜ-ತಮ ಪ್ರಧಾನ ಬುದ್ಧಿಯಲ್ಲಿ ಸತತವಾಗಿ ಶುದ್ಧ ಜಿಜ್ಞಾಸೆ ಜಾಗೃತವಾಗಿದ್ದರೆ, ಅದರ ರೂಪಾಂತರ ಅಲ್ಪ ಕಾಲದಲ್ಲಿ ಸತ್ತ್ವ-ರಜ ಪ್ರಧಾನ ಬುದ್ಧಿಯಲ್ಲಿ ಆಗುತ್ತದೆ. ನಿಜವಾದ ಜಿಜ್ಞಾಸೆಯಿಂದ ಮಾನಸಿಕ ಸ್ತರದಲ್ಲಿ ತರ್ಕ-ವಿತರ್ಕ ಮಾಡದೇ ವಿಷಯಗಳ ಬುಡಕ್ಕೆ ಹೋಗುವುದು ಮತ್ತು ಆಳವಾಗಿ ಅಧ್ಯಯನ ಮಾಡುವ ವೃತ್ತಿಯು ನಿರ್ಮಾಣವಾಗುತ್ತದೆ.

೩ ಇ. ಜಿಜ್ಞಾಸೆ ತೀವ್ರವಾದ ನಂತರ ಜೀವವು ಜ್ಞಾನ ಪಡೆಯುವುದಕ್ಕಾಗಿ ಚಡಪಡಿಸಿ ಜ್ಞಾನಪ್ರಾಪ್ತಿಯಾಗುವವರೆಗೂ ಸಮಾಧಾನ ಸಿಗದಿರುವುದು, ಶುದ್ಧ ಜಿಜ್ಞಾಸೆಯಿಂದ ಮನಸ್ಸಿನ ನಿರ್ಮಲತೆಯಲ್ಲಿ ವೃದ್ಧಿಯಾಗಿ ಸಾತ್ತ್ವಿಕವಾಗುವುದು ಮತ್ತು ಸತ್ಯವನ್ನು ಹುಡುಕಿ ಜ್ಞಾನಪ್ರಾಪ್ತಿಯಾಗುವುದು : ಜಿಜ್ಞಾಸೆ ತೀವ್ರವಾದ ಮೇಲೆ ಜೀವವು ಜ್ಞಾನ ಪಡೆಯುವುದಕ್ಕಾಗಿ ಚಡಪಡಿಸಿ ಜ್ಞಾನ ಸಿಗುವವರೆಗೂ ಸಮಾಧಾನವಾಗುವುದಿಲ್ಲ. ಈ ಅವಸ್ಥೆ ಎಂದರೆ ಜಿಜ್ಞಾಸುವಿನ ಪರಮೋಚ್ಚ ಅವಸ್ಥೆಯಾಗಿರುತ್ತದೆ. ತೀವ್ರ ಶುದ್ಧ ಜಿಜ್ಞಾಸೆಯಿಂದ ಮನಸ್ಸಿನ ನಿರ್ಮಲತೆ ವೃದ್ಧಿಯಾಗಿ ಬುದ್ಧಿಯೂ ಸಾತ್ತ್ವಿಕವಾಗುತ್ತದೆ. ನಿರ್ಮಲ ಮನಸ್ಸು ಮತ್ತು ಸಾತ್ತ್ವಿಕ ಬುದ್ಧಿ ಇವುಗಳ ಸಂಗಮದಿಂದ ಸತ್ಯವನ್ನು ಹುಡುಕಿ ಜ್ಞಾನದ ಪ್ರಾಪ್ತಿಯಾಗುತ್ತದೆ. ಈ ಜ್ಞಾನವು ಹೆಚ್ಚಾಗಿ ಉಚ್ಚ ಲೋಕದಲ್ಲಿನ ಉನ್ನತ ಜೀವಗಳ, ದೇವತೆಗಳ ತತ್ತ್ವಗಳ ಅಥವಾ ವಿಶ್ವಮನ ಮತ್ತು ವಿಶ್ವಬುದ್ಧಿಯ ಮೂಲಕ ಪ್ರಾಪ್ತಿಯಾಗುತ್ತದೆ. ಕೆಲವೊಮ್ಮೆ ೫ ರಿಂದ ೭ ನೇ ಪಾತಾಳ ಮತ್ತು ಪಾತಾಳ ಕ್ರ. ೧ ರಿಂದ ೭ ರ ಬಲವಾದ ಕೆಟ್ಟ ಶಕ್ತಿಗಳೂ ಜ್ಞಾನ ಕೊಡುತ್ತವೆ.

– ಕು. ಮಧುರಾ ಭೊಸಲೆ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ) (೧೬.೧.೨೦೧೩, ರಾತ್ರಿ ೧೨.೦೦)

Leave a Comment