ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರವರು ವಿದೇಶಗಳಲ್ಲಿನ ಪ್ರವಾಸದ ಸಮಯದಲ್ಲಿ ಮಾಡಲು ಹೇಳಿದ ಆಶೀರ್ವಾದರೂಪಿ ಉಪಾಸನೆ

೧. ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಇವರು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ವಿದೇಶ ಪ್ರವಾಸದಲ್ಲಿರುವಾಗ ಪ್ರತಿದಿನ ಮಾಡಲು ಹೇಳಿದ ಉಪಾಸನೆ

ಇಂಡೋನೇಶಿಯಾದೊಂದಿಗೆ ದಕ್ಷಿಣಪೂರ್ವ ಏಶಿಯಾ ಖಂಡದಲ್ಲಿನ ಕೆಲವು ದೇಶಗಳ ಅಧ್ಯಯನ ಪ್ರವಾಸಕ್ಕೆ ಹೊರಡುವ ಮೊದಲು ಸದ್ಗುರು (ಸೌ.) ಅಂಜಲಿ ಗಾಡಗೀಳ ಕಾಕೂರವರು ಕಲ್ಯಾಣ (ಠಾಣೆ)ನಲ್ಲಿನ ಶ್ರೇಷ್ಠ ಸಂತರಾದ ಯೋಗತಜ್ಞ ದಾದಾಜಿ ವೈಶಂಪಾಯನ ಇವರ ಸೇವೆಯಲ್ಲಿರುವ ಸನಾತನದ ಸಾಧಕ ಶ್ರೀ. ಅತುಲ ಪವಾರ ಇವರಿಗೆ ಸಂಚಾರಿವಾಣಿ ಮಾಡಿ ಯೋಗತಜ್ಞ ದಾದಾಜಿಯವರಿಗೆ, “ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೇವೆಯ ನಿಮಿತ್ತ ನಾವು ವಿದೇಶ ಪ್ರವಾಸಕ್ಕೆ ಹೊರಟಿದ್ದೇವೆ, ಪ.ಪೂ. ದಾದಾಜಿಯವರ ಚರಣಗಳಲ್ಲಿ ನಮ್ಮೆಲ್ಲರ ಭಾವಪೂರ್ಣ ನಮಸ್ಕಾರಗಳನ್ನು ಹೇಳಿರಿ. ಅವರ ಆಶೀರ್ವಾದಗಳು ನಮ್ಮೆಲ್ಲರ ಮೇಲೆ ಯಾವಾಗಲೂ ಇರಲಿ ಮತ್ತು ಪ್ರವಾಸದ ಸೇವೆಯು ಅವರ ಕೃಪೆಯಿಂದ ನಿರ್ವಿಘ್ನವಾಗಿ ಪೂರ್ಣವಾಗಲಿ” ಎಂಬ ಸಂದೇಶವನ್ನು ಕಳುಹಿಸಿದ್ದರು. ಅದೇ ದಿನ ಸಾಯಂಕಾಲ ಶ್ರೀ. ಅತುಲ ಪವಾರ ಇವರು ಸಂಚಾರಿವಾಣಿಯ ಮೂಲಕ ‘ಯೋಗತಜ್ಞ ದಾದಾಜಿಯವರು ನಿಮಗೆ ವಿಶಿಷ್ಟ ಉಪಾಸನೆಯನ್ನು ಮಾಡಲು ಹೇಳಿದ್ದಾರೆ. ಇದರಲ್ಲಿ ಪ್ರತಿದಿನ ದತ್ತಮಾಲಾ ಮಂತ್ರದ ಒಂದು ಸಲ ಪಠಣ ಮತ್ತು ದಿನದಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು || ಓಂ ವಿಶೋಕಂ ನಮಃ ಓಂ || ಈ ಜಪವನ್ನು ಸಂಪೂರ್ಣ ಪ್ರವಾಸದಲ್ಲಿ ಮಾಡಿರಿ’, ಎಂಬ ಸಂದೇಶವನ್ನು ಸದ್ಗುರು ಕಾಕೂರವರಿಗೆ ನೀಡಿದರು. ಅದರಂತೆ ಸದ್ಗುರು ಕಾಕೂ ಮತ್ತು ಅವರೊಂದಿಗೆ ಪ್ರವಾಸದಲ್ಲಿರುವ ನಾವೆಲ್ಲರು ಪ್ರತಿದಿನ ಮಂತ್ರಪಠಣ ಮತ್ತು ಜಪವನ್ನು ಮಾಡುತ್ತಿದ್ದೆವು.

೨. ಆಪತ್ಕಾಲದ ತೀವ್ರತೆ ಹೆಚ್ಚಾಗಿದ್ದರಿಂದ ಆಧ್ಯಾತ್ಮಿಕ ಉಪಾಯದ ಕವಚವಿದ್ದರೆ ಮಾತ್ರ ರಕ್ಷಣೆಯಾಗಬಲ್ಲದು ಎಂದರಿವಾಗುವುದು

ಸದ್ಗುರು ಕಾಕೂ ಇವರು ಮಹತ್ವದ ಪ್ರವಾಸಕ್ಕೆ ಹೊರಡುವಾಗ ಯೋಗತಜ್ಞ ದಾದಾಜಿಯವರ ಆಶೀರ್ವಾದ ಪಡೆಯಲು ಅವರಿಗೆ ಸಂಚಾರಿವಾಣಿ ಕರೆ ಮಾಡುತ್ತಾರೆ. ಅನೇಕಬಾರಿ ಯೋಗತಜ್ಞ ದಾದಾಜಿಯವರು, ‘ಬೇರೆ ಏನೂ ಮಾಡುವುದರ ಆವಶ್ಯಕತೆ ಇಲ್ಲ. ನಾನು ಇಲ್ಲಿಂದಲೇ ಪ್ರಾರ್ಥನೆ ಮಾಡುತ್ತೇನೆ; ಸಾಧನೆ ಮಾಡುತ್ತೇನೆ’ ಎಂದು ಹೇಳುತ್ತಾರೆ. ಆದರೆ ಇದೇ ಮೊದಲ ಸಲ ಸಂಪೂರ್ಣ ಪ್ರವಾಸದಲ್ಲಿ ಅವರು ನಮಗೆ ಕೆಲವು ಉಪಾಸನೆಗಳನ್ನು ಮಾಡಲು ಹೇಳಿದರು. ಇದರಿಂದ ಈಗ ಆಪತ್ಕಾಲದ ತೀವ್ರತೆ ಹೆಚ್ಚಾಗಿದೆ ಎಂಬುದು ತಿಳಿಯಿತು. ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳ ಸಂರಕ್ಷಕ ಕವಚ ನಮ್ಮ ಸುತ್ತಲೂ ಇದ್ದರೆ ಮಾತ್ರ ನಮ್ಮ ರಕ್ಷಣೆಯಾಗುತ್ತದೆ. ‘ನಮಗೆಲ್ಲರಿಗೂ ಯೋಗತಜ್ಞ ದಾದಾಜಿಯವರ ಕೃಪೆಯಿಂದಲೇ ವಿದೇಶದಲ್ಲಿ ಪ್ರವಾಸ ಮಾಡಲು ಸಾಧ್ಯವಾಯಿತು. ರಜ-ತಮದಿಂದ ನಮ್ಮೆಲ್ಲರ ರಕ್ಷಣೆ ಆಯಿತು, ಇದಕ್ಕಾಗಿ ನಾವೆಲ್ಲ ಸನಾತನದ ಸಾಧಕರು ಯೋಗತಜ್ಞ ದಾದಾಜಿಯವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞರಾಗಿದ್ದೇವೆ’. (ಸಂಗ್ರಾಹಕರು : ಶ್ರೀ. ದಿವಾಕರ ಆಗವಣೆ, ಸುರಾಬಾಯಾ ೧೬.೩.೨೦೧೮)

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಇವರು ಹೇಳಿದ ಉಪಾಸನೆಯನ್ನು ಮಾಡುವಾಗ ಅವರ ಅಸ್ತಿತ್ವದ ಅರಿವಾಗಿ ಕೃತಜ್ಞತಾಭಾವ ಜಾಗೃತವಾಗುವುದು

೧. ಒಂದೇ ಸಮಯದಲ್ಲಿ ಮಂತ್ರಪಠಣ ಮಾಡುವಾಗ ಯೋಗತಜ್ಞ ದಾದಾಜಿಯವರ ಬಗ್ಗೆ ಕೃತಜ್ಞತಾಭಾವ ಜಾಗೃತವಾಗುವುದು ಮತ್ತು ಅವರ ಚರಣಗಳ ಸಮೀಪ ಕುಳಿತು ಪಠಣ ಮಾಡುತ್ತಿದ್ದೇನೆ ಎಂದು ಅನಿಸುವುದು : ೧೩.೩.೨೦೧೮ ರಂದು ಇಂಡೋನೇಶಿಯಾದ ಯೋಗ್ಯಕರ್ತಾದಲ್ಲಿ ಬೆಳಗ್ಗೆ ನಾವು ನಿತ್ಯ ಅಗ್ನಿಹೋತ್ರ ಮಾಡಿದೆವು. ಅನಂತರ ನಾವು ದಾದಾಜಿ ವೈಶಂಪಾಯನರು ಹೇಳಿದಂತೆ ದತ್ತಮಾಲಾ ಮಂತ್ರವನ್ನು ಪಠಿಸಲು ಪ್ರಾರಂಭ ಮಾಡಿದೆವು. ದತ್ತಮಾಲಾ ಮಂತ್ರದ ಮೊದಲ ಆವರ್ತನೆ ಪೂರ್ಣವಾಗುತ್ತಿದ್ದಂತೆಯೇ ನನ್ಮ ಮನಸ್ಸಿಲ್ಲಿ ಯೋಗತಜ್ಞ ದಾದಾಜಿಯವರ ಬಗ್ಗೆ ಕೃತಜ್ಞತೆಯ ಭಾವಜಾಗೃತವಾಯಿತು. ‘ಅವರ ಕೃಪೆಯಿಂದಲೇ ನಮ್ಮೆಲ್ಲರ ಪ್ರವಾಸ ಸುಗಮವಾಗಿ ಸಾಗುತ್ತಿದೆ. ಅವರು ಹೇಳಿದ ಸಾಧನೆಯನ್ನು ನಮ್ಮೆಲ್ಲ ಸಾಧಕರಿಂದ ಅವರೇ ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬುದರ ತೀವ್ರ ಅರಿವಾಗುತ್ತಿತ್ತು. ಇದೆಲ್ಲವೂ ಮನಸ್ಸಿನಸ್ತರದಲ್ಲಿ ನಡೆಯುತ್ತಿರುವಾಗ ಸೂಕ್ಷ್ಮದಲ್ಲಿ ನಾನು ಯೋಗತಜ್ಞ ದಾದಾಜಿಯವರ ಎದುರಿಗೆ ಅವರ ಚರಣಗಳ ಸಮೀಪ ಕುಳಿತು ಮಂತ್ರಪಠಣ ಮಾಡುತ್ತಿರುವಂತೆಯೂ ಅನಿಸುತ್ತಿತ್ತು. ಈ ಸಮಯದಲ್ಲಿ ಯೋಗತಜ್ಞ ದಾದಾಜಿಯವರ ಅಸ್ತಿತ್ವದ ಅರಿವು ಕೋಣೆಯಲ್ಲಿ ಸ್ಪಷ್ಟವಾ ಆಗುತ್ತಿತ್ತು. ಇದರಿಂದ ಅವರ ಸಂಪೂರ್ಣ ಗಮನ ಸನಾತನದ ಪ್ರತಿಯೊಬ್ಬ ಸಾಧಕನ ಕಡೆಗಿದೆ ಎಂದು ಅರಿವಾಯಿತು. ಒಂದೇ ಸಮಯಕ್ಕೆ ೨ ಬೇರೆ ಬೇರೆ ಪ್ರಕ್ರಿಯೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಾಗ ನನಗೆ ಆಶ್ಚರ್ಯವಾಯಿತು ಮತ್ತು ಕೃತಜ್ಞತೆಯೂ ಅನಿಸಿತು.

೨. ಪ್ರವಾಸದಲ್ಲಿ ಯೋಗತಜ್ಞ ದಾದಾಜಿಯವರು ಹೇಳಿದ ನಾಮಜಪ ಮಾಡುತ್ತಿರುವಾಗ ವಾಹನದಲ್ಲಿ ಅವರ ಅಸ್ತಿತ್ವ ಮತ್ತು ಪ್ರೇಮದ ಮೃದು ಸ್ಪರ್ಶದ ಅರಿವಾಗುವುದು : ನಾವು ೧೪.೩.೨೦೧೮ ರಂದು ಯೋಗ್ಯಕರ್ತಾದಿಂದ ಸುರಾಬಾಯಾವನ್ನು ತಲುಪಿದೆವು. ಮಾರ್ಚ ೧೫ ರ ರಾತ್ರಿ ೧೧.೩೦ ಕ್ಕೆ ನಾವು ೩ ಜನ ಸಾಧಕರು ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂತರಾದ ಪೂ. ರೆಂಡಿ ಇಕರಾಂತಿಯೊ ಚತುಷ್ಚಕ್ರ ವಾಹನದ ಮೂಲಕ ಇಲ್ಲಿಯ ‘ಬ್ರೊಮೊ’ ಮತ್ತು ‘ಸುಮೇರು’ ಎಂಬ ಜ್ವಾಲಾಮುಖಿಯ ದರ್ಶನ ಪಡೆಯಲು ಹೊರಟೆವು. ಹೋಗುವಾಗ ಯೋಗತಜ್ಞ ದಾದಾಜಿ ವೈಶಂಪಾಯನ ಅವರು ಹೇಳಿದ || ಓಂ ವಿಶೋಕಂ ನಮಃ ಓಂ || ಎಂಬ ಮಂತ್ರಜಪವು ಮನಸ್ಸಿನಲ್ಲಿ ಸಹಜವಾಗಿ ಆಗುತ್ತಿತ್ತು. ವಾಹನದಲ್ಲಿ ನಾನು ಕುಳಿತ ಆಸನದ ಮೇಲೆ ಮಧ್ಯದ ಸ್ಥಳವು ಖಾಲಿಯಿತ್ತು. ಜೊತೆಯಲ್ಲಿದ್ದ ಸಂತರಾದ ಪೂ. ರೆಂಡಿ ಇಕರಾಂತಿಯೊ ಮತ್ತು ಇನ್ನುಳಿದ ಸಾಧಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದುದರಿಂದ ಗಾಡಿಯಲ್ಲಿ ಚಾಲಕನೊಂದಿಗೆ ನಾನೊಬ್ಬನೇ ಎಚ್ಚರವಾಗಿದ್ದೆ. ನಮ್ಮ ವಾಹನವು ಒಂದು ಘಾಟದಲ್ಲಿ ಹೋಗುತ್ತಿರುವಾಗ ಆಕಸ್ಮಿಕವಾಗಿ ನನ್ನ ಎಡಬದಿಯ ಖಾಲಿ ಆಸನದ ಮೇಲೆ ಯೋಗತಜ್ಞ ದಾದಾಜಿ ವೈಶಂಪಾಯನರವರ ಅಸ್ತಿತ್ವ ಸ್ಪಷ್ಟವಾಗಿ ಅರಿವಾಯಿತು. ‘ಅವರು ನನ್ನ ಬೆನ್ನ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಿದ್ದಾರೆ’, ಎಂದು ನನಗೆ ಅನಿಸಿತು. ಅವರ ಸ್ಪರ್ಶದಿಂದ ನನ್ನ ಭಾವಜಾಗೃತವಾಯಿತು. ‘ಅವರು ಹೇಳಿರುವ ಉಪಾಸನೆಯನ್ನು ಅವರೇ ನಮ್ಮೆಲ್ಲರಿಂದ ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬ ಅರಿವೂ ಪುನಃ ಆಯಿತು ಮತ್ತು ಅವರ ಚರಣಗಳಲ್ಲಿ ತುಂಬಾ ಕೃತಜ್ಞತೆ ವ್ಯಕ್ತವಾಯಿತು. ಈ ಸ್ಥಿತಿಯು ಸುಮಾರು ೨ ಗಂಟೆಗಳ ವರೆಗೆ ಹಾಗೆಯೇ ಇತ್ತು. ಇದರಿಂದ ಮುಂದಿನ ಸೇವೆಗಳನ್ನು ಮಾಡುತ್ತಿರುವಾಗಲೂ ಸತತವಾಗಿ ಮತ್ತು ಸಹಜವಾಗಿ ಜಪವಾಗುತ್ತಿತ್ತು ಮತ್ತು ಸೇವೆಯಲ್ಲಿನ ಅಡಚಣೆಗಳೂ ತೀರ ಕಡಿಮೆ ಇರುವುದರ ಅರಿವಾಯಿತು. ಯೋಗತಜ್ಞ ದಾದಾಜಿಯವರು ಉಪಾಸನೆಯ ಮಾಧ್ಯಮದಿಂದ ನಮಗೆ ಆಧ್ಯಾತ್ಮಿಕ ಸಂರಕ್ಷಕ ಕವಚವನ್ನು ನೀಡಿದ್ದಾರೆ. ಆದ್ದರಿಂದಲೇ ನಾವು ಪ್ರತ್ಯಕ್ಷ ನೋಡುತ್ತಿದ್ದ ಜೀವಂತ ಜ್ವಾಲಾಮುಖಿಯ ಸ್ಥಳದಲ್ಲಿಯೂ ಮನಸ್ಸಿನಲ್ಲಿ ಯಾವುದೇ ಭಯವಿರಲಿಲ್ಲ. ಚಿತ್ರೀಕರಣದ ಸೇವೆಯೂ ಉತ್ತಮ ರೀತಿಯಲ್ಲಿ ಮತ್ತು ನಿರ್ವಿಘ್ನವಾಗಿ ಪೂರ್ಣವಾಯಿತು. ‘ಕೇವಲ ಯೋಗತಜ್ಞ ದಾದಾಜಿ ವೈಶಂಪಾಯನ, ಪರಾತ್ಪರಗುರು ಡಾ. ಆಠವಲೆ ಮತ್ತು ಭಗವಾನ ಶ್ರೀಕೃಷ್ಣನ ಕೃಪೆಯಿಂದಲೇ ನಮಗೆ ಈ ಅನುಭೂತಿಗಳು ಬರುತ್ತಿದ್ದವು. ಅವರ ಕೃಪೆಯಿಂದ ನಾಮ್ಮೆಲ್ಲ ಸಾಧಕರ ಪ್ರವಾಸವೂ ಉತ್ತಮ ರೀತಿಯಲ್ಲಿ ನಡೆದಿತ್ತು’, ಎಂಬುದೂ ಸಹ ನನ್ನ ಗಮನಕ್ಕೆ ಬಂತು. ಆದುದರಿಂದ ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದಲೇ ಈ ಸೇವೆಯ ಅವಕಾಶ ದೊರಕಿದೆ. ‘ಈ ಸೇವೆಯ ಮಾಧ್ಯಮದಿಂದ ನಮ್ಮೆಲ್ಲ ಸಾಧಕರಿಂದ ಅವರಿಗೆ ಅಪೇಕ್ಷಿತವಿರುವ ಸಾಧನೆಯಾಗಲಿ’, ಎಂದು ಅವರ ಚರಣಗಳಲ್ಲಿ ಪ್ರಾರ್ಥನೆ ! – ಕೃತಜ್ಞತಾಪೂರ್ವಕ, ಶ್ರೀ. ಸತ್ಯಕಾಮ ಕಣಗಲೇಕರ, ಸುರಬಾಯಾ, ಇಂಡೋನೆಶಿಯಾ.(೧೭.೩.೨೦೧೮, ಸಾಯಂ. ೫.೩೦ ಗಂಟೆಗೆ)

Leave a Comment