ಕ್ಷಣಕ್ಷಣವನ್ನು ಸಾಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಶ್ರೀ. ಸತ್ಯಕಾಮ ಕಣಗಲೇಕರ ಇವರ ಪ್ರಯತ್ನಗಳು

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ದೈವೀ ಪ್ರವಾಸ ಮಾಡುವಾಗ ಸತ್ಯಕಾಮ ಕಣಗಲೇಕರ ಇವರು ಮಾಡಿದ ವ್ಯಷ್ಟಿ ಸಾಧನೆಯ ಪ್ರಯತ್ನ ಮತ್ತು ಅವರಿಗೆ ಬಂದ ಅನುಭೂತಿಗಳು

`ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಸಂಪೂರ್ಣ ಮನುಕುಲದ ಏಳಿಗೆಗಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ನಿರ್ಮಿಸುವ ಸಂಕಲ್ಪ ಮಾಡಿ ಅದರ ಪೂರ್ವತಯಾರಿಯನ್ನು ಕೂಡ ಪ್ರಾರಂಭಿಸಿದ್ದಾರೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಬರುವ ವಿದ್ಯಾರ್ಥಿಗಳಿಗೆ ಜೀವನದಲ್ಲಿನ ಪ್ರತಿಯೊಂದು ಅಂಶದ ಮಾಹಿತಿಯನ್ನು ಒದಗಿಸುವುದಕ್ಕಾಗಿ ಸನಾತನದ ಸದ್ಗುರು (ಸೌ.) ಅಂಜಲೀ ಗಾಡಗೀಳ (ಸದ್ಗುರು ಕಾಕು)ರವರು ದೇಶವಿದೇಶಗಳಲ್ಲಿ ಪ್ರಯಾಣಿಸುತ್ತಿದ್ದರೆ. ಈ ನಿಮತ್ತ ಶ್ರೀ ಗುರುಗಳ ಕೃಪೆಯಿಂದ ಸದ್ಗುರು ಕಾಕುರವರೊಂದಿಗೆ ಇರುವ ನಾವು 4 ಸಾಧಕರ ಹೆಚ್ಚಿನ ಸಮಯ ಪ್ರಯಾಣ ಮತ್ತು ಆಧ್ಯಾತ್ಮಿಕ ಉಪಾಯಗಳಲ್ಲಿ ವ್ಯವವಾಗುತ್ತದೆ, ಆದರೂ ನಮ್ಮಿಂದ ವ್ಯಷ್ಟಿ ಸಾಧನೆ ಯೋಗ್ಯ ರೀತಿಯಲ್ಲಿ ಆಗಬೇಕೆಂದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಳ ಪ್ರಕ್ರಿಯೆ ನಡೆಸುವುದು ಮತ್ತು ಭಾವಜಾಗೃತಿಯ ಪ್ರಯತ್ನವನ್ನು ಸತತವಾಗಿ ಮಾಡುವ ಅವಶ್ಯಕತೆ ಇರುತ್ತದೆ. ಈ ದೈವಿ ಪ್ರವಾಸ ಮಾಡುತ್ತಿರುವಾಗ ನನ್ನಿಂದ ವ್ಯಷ್ಟಿ ಸಾಧನೆಗಾಗಿ ಆದ ಪ್ರಯತ್ನ ಮತ್ತು ಆ ಸಮಯದಲ್ಲಿ ಬಂದ ಅನುಭೂತಿಗಳನ್ನು ಮುಂದೆ ನೀಡುತ್ತಿದ್ದೇನೆ.

1. ದೈವೀ ಪ್ರಯಾಣದ ಆರಂಭದಲ್ಲಿ ವ್ಯಷ್ಟಿ ಸಾಧನೆ ಕಡೆಗೆ ನಿರ್ಲಕ್ಷ ಆಗುತ್ತಿದ್ದರಿಂದ ಸೇವೆಯಲ್ಲಿನ ಆನಂದ ಸಿಗುವ ಪ್ರಮಾಣ ಅಲ್ಪವಿರುವುದು

ದೈವೀ ಪ್ರಯಾಣದ ಆರಂಭದ ಕಾಲಾವಧಿಯಲ್ಲಿ ಪ್ರವಾಸದಲ್ಲಿರುವಾಗ ವ್ಯಷ್ಟಿ ಸಾಧನೆಗೆ ಸಂಬಂಧಪಟ್ಟ ತಪ್ಪುಗಳ ಕುರಿತು ಬರಹ, ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನೆ ಸತ್ರಗಳು, ಹಾಗೆಯೇ ಪ್ರಾರ್ಥನೆ ಮತ್ತು ನಾಮಜಪ ಮಾಡುವುದರ ಕಡೆಗೆ ನಿರ್ಲಕ್ಷವಾಗುತ್ತಿತ್ತು. ಸೇವೆಯು ಕೇವಲ ಯಾಂತ್ರಿಕವಾಗಿ ಆಗುತ್ತಿತ್ತು. ದೈವೀ ಪ್ರವಾಸದ ಕಾಲಾವಧಿಯಲ್ಲಿ ನನ್ನಿಂದ ಮತ್ತು ಇತರರಿಂದ ಆಗುವ ತಪ್ಪುಗಳ ಕುರಿತು ಅನೌಪಚಾರಿಕ ಉಪಾಯಯೋಜನೆ ಮಾಡಲಾಗುತ್ತಿತ್ತು. ಆದುದರಿಂದ ತಪ್ಪುಗಳ ಪುನರಾವೃತ್ತಿ ಅಧಿಕವಾಗಿರುತ್ತಿತ್ತು. ಪರಸ್ಪರರನ್ನು ಅರ್ಥೈಸಿಕೊಳ್ಳಲು ಪ್ರಯತ್ನಗಳು ಕಡಿಮೆ ಇರುವುದರಿಂದ ನಮ್ಮ ಮನಸ್ಸುಗಳ ಹೊಂದಾಣಿಕೆ ಕಡಿಮೆಯಿತ್ತು. ಆದುದರಿಂದ ನಮಗೆ ಸೇವೆಯಲ್ಲಿನ ಆನಂದ ದೊರಕುವ ಪ್ರಮಾಣ ತುಂಬಾ ಕಡಿಮೆ ಇತ್ತು.

2. ಸದ್ಗುರು ಕಾಕುರವರ ಸೂಚನೆಯಂತೆ ಎಲ್ಲರೂ ಒಟ್ಟಿಗೆ ಸೇರಿ ಪ್ರಯತ್ನ ಮಾಡಲು ಆರಂಭಿಸಿದ ನಂತರ ಆನಂದ ಅನುಭವಿಸಲು ಪ್ರಾರಂಭವಾಗುವುದು

ಸ್ವಲ್ಪ ಕಾಲದನಂತರ ಸದ್ಗುರು ಕಾಕುರವರು ನಮ್ಮೆಲರಿಗೂ, ‘ದಿನನಿತ್ಯ ಸ್ವಲ್ಪ ಸಮಯ ಸತ್ಸಂಗದ ಸಲುವಾಗಿ ಒಟ್ಟಿಗೆ ಕುಳಿತುಕೊಳ್ಳಿ. ಅದರಿಂದ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ವಿಚಾರಗಳ ವಿನಿಮಯವಾಗಿ ಅಡಚಣೆಗಳು ದೂರವಾಗಲು ಸಹಾಯವಾಗುತ್ತದೆ. ಪ್ರಯಾಣ ಮಾಡುವಾಗ ಪ್ರತ್ಯಕ್ಷದಲ್ಲಿ ಯಾವ ಸೇವೆಯೂ ಮಾಡಲು ಆಗುವುದಿಲ್ಲ. ಆದುದರಿಂದ ಆ ಸಮಯದ ಉಪಯೋಗವನ್ನು ನಾಮಜಪ, ಸ್ವಯಂಸೂಚನೆ, ಪ್ರಾರ್ಥನೆ ಮತ್ತು ಕೃತಜ್ಞತೆ ಸಲ್ಲಿಸಲು ಮಾಡಿ’ ಎಂದು ಹೇಳಿದರು. ನಮಗೆ ಪ್ರಾರಂಭದಲ್ಲಿ ಇದೆಲ್ಲವನ್ನು ಕೃತಿಯಲ್ಲಿ ತರಲು ಕಷ್ಟವಾಗುತ್ತಿತ್ತು; ಆದರೆ ಪ್ರಯತ್ನಪೂರ್ವಕವಾಗಿ ಮತ್ತು ಒಬ್ಬರಿಗೊಬ್ಬರು ನೆನಪು ಮಾಡಿಕೊಟ್ಟು ಕೃತಿ ಮಾಡಲು ಪ್ರಾರಂಭಿಸಿದ ನಂತರ ಕ್ರಮೇಣ ಅದರಲ್ಲಿನ ಕಾಠಿಣ್ಯ ಕ್ರಮೇಣ ಕಡಿಮೆಯಾಗಿ ಆನಂದ ಸಿಗಲು ಆರಂಭವಾಯಿತು.

3. ವಿವಿಧ ಪ್ರಕಾರದ ಹಾಡುಗಳನ್ನು ಕೇಳಿ ಇದ್ದ ಪರಿಸ್ಥಿತಿಯಲ್ಲಿ ದೇವರಿಗೆ ಅನುಭವಿಸುವುದು ಮತ್ತು ಪ್ರಾಯೋಗಿಕ ಸ್ತರದಲ್ಲಿ ದೇವರ ಅನುಸಂಧಾನದಲ್ಲಿ ಇರಲು ಕಲಿಯುವುದು

ಆನಂತರ ನಾವು ಪ್ರಯಾಣದ ಕಾಲಾವಧಿಯಲ್ಲಿಯೂ ವ್ಯಷ್ಟಿ ಸಾಧನೆಯ ಸಾರಣಿ ಬರೆಯಲು ಆರಂಭಿಸಿದೆವು. ಮುಂದೆ ಪ್ರಯಾಣದಲ್ಲಿರುವಾಗ ಪ್ರಾರ್ಥನೆ, ಕೃತಜ್ಞತೆ, ಹಾಗೆಯೇ ನಾಮಜಪ ಮತ್ತು ಈಶ್ವರನ ಅನುಸಂಧಾನಲ್ಲಿರಲು ಮಾಡಬೇಕಾದ ಪ್ರಯತ್ನಗಳು ಆಗತೊಡಗಿದವು. ಪ್ರಯಾಣ ಮಾಡುವಾಗ ಕೆಲವೊಮ್ಮೆ ವಿವಿಧ ಹಾಡು, ಭಜನೆ ಇತ್ಯಾದಿಗಳನ್ನು ಕೇಳುತ್ತೇವೆ. ಇದೆಲ್ಲ ಕೇಳುವಾಗ ಉದ್ದೇಶ ಒಂದೇ ಇರುತ್ತಿತ್ತು. ಅದೇನೆಂದರೆ ಸದ್ಗುರು ಕಾಕು ಇವರು ಪ್ರವಾಸದ ಸಮಯದಲ್ಲಿ ಸಂಗೀತದ ಕುರಿತು ಅಧ್ಯಯನ ಮಾಡುತ್ತಾರೆ ಮತ್ತು ಈಶ್ವರನ ಜ್ಞಾನದಿಂದ ಲಭಿಸುವ ಸೂತ್ರಗಳನ್ನು ಅವರು ನಮಗೂ ಹೇಳುತ್ತಾರೆ. ಇನ್ನೊಂದು ಉದ್ದೇಶವೆಂದರೆ ನಾವು ಸತತವಾಗಿ ಪ್ರವಾಸದಲ್ಲಿರುತ್ತೇವೆ ಮತ್ತು ಸಮಾಜದಲ್ಲಿನ ವಿವಿಧ ಪ್ರಕಾರದ ಜನರ ನಡುವೆ ಅಥವಾ ಪರಿಸ್ಥಿತಿಯಲ್ಲಿ ಹೋಗಬೇಕಾಗುತ್ತದೆ. ಹೀಗಿರುವಾಗ ಆ ಪರಿಸ್ಥಿತಿಯಲ್ಲಿ ಈಶ್ವರನನ್ನು ನೋಡುವುದು, ಅವನ ಅನುಸಂಧಾನದಲ್ಲಿರುವುದು ಇದು ನಮಗೆ ಅಭ್ಯಾಸದಿಂದಲೇ ಸಾಧ್ಯವಾಗುತ್ತದೆ. ಸದ್ಗುರು ಕಾಕುರವರು ನಮಗೆ ‘ಸಮಾಜದಲ್ಲಿ ಓಡಾಡುತ್ತಿರುವಾಗ ಯಾವುದೊ ಒಂದು ಜಾಗದಲ್ಲಿ ಹಾಡು ಹಚ್ಚಿದ್ದರೆ, ಆ ಹಾಡಿನಲ್ಲಿನ ಶಬ್ದಗಳನ್ನು ಈಶ್ವರನೊಂದಿಗೆ ಜೋಡಿಸಿ ಅದರ ಅನುಭೂತಿ ಪಡೆಯಲು ಬರಬೇಕು’, ಎಂಬುದನ್ನು ಕಲಿಸುತ್ತಿದ್ದರು. ಆದುದರಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಹೊಂದಾಣಿಕೆ ಇರುತ್ತಿತ್ತು. ಇದೆಲ್ಲ ಕೇವಲ ತಾತ್ತ್ವಿಕವಾಗಿ ಇರದೇ, ಪ್ರಾಯೋಗಿಕ ಸ್ತರದಲ್ಲಿ ಕಲಿಯಲು ಸಿಗುತ್ತಿತ್ತು.

4. ಪ್ರಾಯೋಗಿಕ ಸ್ತರದಲ್ಲಿ ಕಲಿಯುವಾಗ ಸ್ವಭಾವದೋಷ ಮತ್ತು ಅಹಂ ಇವುಗಳ ಅಂಶಗಳು ಗಮನಕ್ಕೆ ಬಂದು ಸಾರಣಿಯಲ್ಲಿ ಬರೆದು ಮಾಡಿ ಪರಸ್ಪರರು ವರದಿ ಕೊಡಲು ನಿಶ್ಚಯಿಸುವುದರಿಂದ ಸ್ವಯಂಸೂಚನೆ ನೀಡಲು ಸುಲಭವಾಗುವುದು

ಇದೆಲ್ಲ ಆಗುತ್ತಿರುವಾಗ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ, ನನ್ನ ಯಾವ ಸ್ವಭಾವದೋಷ ಅಡ್ಡ ಬಂತು ಅಥವಾ ನಾನು ಯಾವ ಪ್ರಸಂಗದಲ್ಲಿ ಸಿಲುಕಿಬಿದ್ದೆ’, ಎಂಬ ಅರಿವು ಮನಸ್ಸಿಗೆ ಆಗಲು ಪ್ರಾರಂಭವಾಯಿತು ಮತ್ತು ಆ ಅಂಶಗಳನ್ನು ಬರೆಯುವಾಗ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಸಾರಣಿಯಲ್ಲಿ ಬರೆಯಲು ಪ್ರಾರಂಭ ಮಾಡಿದೆನು. ಇಷ್ಟೇ ಅಲ್ಲದೇ, ‘ಸಹಸಾಧಕರೊಂದಿಗೆ ಆಗುವ ಸಂಪರ್ಕದಲ್ಲಿ ಅಹಂನ ಯಾವ ಅಂಶ ಮತ್ತು ಸ್ವಭಾವದೋಷ ನನ್ನ ಸಾಧನೆಯಲ್ಲಿ ಅಡ್ಡ ಬರುತ್ತಿದೆ’, ಎಂಬ ಅರಿವು ಕೂಡ ಅಗತೊಡಗಿತು. ಈ ರೀತಿ ಸಾರಣಿಯಲ್ಲಿ ಬರೆಯತೊಡಗಿದೆನು. ಆದುದರಿಂದ ನಮಗೆ ಸ್ವಭಾವದೋಷ ಮತ್ತು ಅಹಂಗಳ ಅಂಶಗಳು ಗಮನಕ್ಕೆ ಬಂದು ಸ್ವಯಂಸೂಚನೆ ಸಿದ್ಧಗೊಳಿಸಲು ಸಾಧ್ಯವಾಗುತ್ತಿತ್ತು. ಸತ್ಸಂಗದಲ್ಲಿ ಎಲ್ಲರೂ ತಮ್ಮ ತಮ್ಮ ಸ್ವಯಂಸೂಚನೆಗಳನ್ನು ಸಿದ್ಧಗೊಳಿಸಿ ವರದಿಯನ್ನು ಪರಸ್ಪರರಿಗೆ ಕೊಡಲು ನಿಶ್ಚಯಿಸಿದೆವು. ಆದುದರಿಂದ ಪ್ರಯಾಣದಲ್ಲಿದ್ದಾಗಲೂ ಸ್ವಯಂಸೂಚನೆ ನೀಡಲು ಸಾಧ್ಯವಾಯಿತು.

5. ಪ್ರಯಾಣದಲ್ಲಿ ಬರೆಯುವುದಕ್ಕಾಗಿ ಸಂಚಾರವಾಣಿಯನ್ನು ಉಪಯೋಗಿಸುವುದರಿಂದ ಸತತವಾಗಿ ಪ್ರಯತ್ನಗಳು ಹೆಚ್ಚಾಗುವುದು

ಪ್ರಯಾಣದ ಅವಧಿಯಲ್ಲಿ ಕೆಲವು ಸಮಯ ಹೀಗಿರುತ್ತದೆ, ಯಾವಾಗ ನಾನು ಮತ್ತು ಸಾಧಕ-ಚಾಲಕನು ಎಚ್ಚರ ಇರುತ್ತೇವೆಯೋ ಆಗ ಉಳಿದ ಎಲ್ಲ ಸಾಧಕರು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಇಂತಹ ಸಮಯದಲ್ಲಿ ಸರಣಿ ಬರೆಯಲು ಕಷ್ಟವಾಗುತ್ತದೆ; ಏಕೆಂದರೆ ವಾಹನ ಅಲುಗಾಡುತ್ತಿರುತ್ತದೆ. ಈ ಸಮಯದಲ್ಲಿ ದೇವರು ಲಭ್ಯಗೊಳಿಸಿದ ಸಂಚಾರವಾಣಿಯನ್ನು ತಪ್ಪುಗಳನ್ನು ಬರೆಯಲು, ಸ್ವಯಂಸೂಚನೆ ಸಿದ್ಧಗೊಳಿಸಲು ಅಥವಾ ಉಳಿದಿರುವ ಸೇವೆಯ ಪಟ್ಟಿಯನ್ನು ಸಿದ್ಧಗೊಳಿಸಲು ಉಪಯೋಗಿಸಲು ತೊಡಗಿದೆವು. ಇದೆಲ್ಲವು ಪೂರ್ತಿಯಾದ ಬಳಿಕ ಪುನಃ ಪ್ರಾರ್ಥನೆ, ನಾಮಜಪ ಮತ್ತು ಕೃತಜ್ಞತೆ ಇವುಗಳಿಗಾಗಿ ಪ್ರಯತ್ನ ಆಗತೊಡಗಿತು.

6. ಭಾವಜಾಗೃತಿಯ ಪ್ರಯತ್ನಗಳಲ್ಲಿ ಇರುವ ಬುದ್ಧಿಯ ಅಡೆತಡೆಗಳು ದೂರವಾಗುವುದಕ್ಕಾಗಿ ದೇವರು ಸಹಾಯ ಮಾಡುತ್ತಿರುವುದು

ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಬುದ್ಧಿಯ ಅಡಚಣೆಗಳು ಬರುತ್ತಿದ್ದವು. ಭಾವದ ಯಾವುದೇ ಸೂತ್ರವನ್ನು ಹೇಳಿದಾಗ, ಬುದ್ಧಿಯು ಕೂಡಲೇ ‘ಅದು ನಿಜವಾಗಿ ಹಾಗೆ ಇರಬಹುದೇ’, ಎಂಬ ಪ್ರಶ್ನೆ ನಿರ್ಮಿಸುತ್ತಿತ್ತು; ಆದರೆ ಮುಂದೆ ಘಟಿಸುವ ಪ್ರಸಂಗದಿಂದ ‘ಮನಸ್ಸಿಗೆ ಅರಿವಾಗುವ ಸ್ಪಂದನಗಳು ಮತ್ತು ದೇವರಿಂದ ದೊರೆಯುತ್ತಿಯುವ ಸಾಕ್ಷಿ (ಅನುಭೂತಿ), ಇವುಗಳಿಂದಾಗಿ ಬುದ್ಧಿಯ ಅಡಚಣೆಯನ್ನು ದೂರಗೊಳಿಸುವುದಕ್ಕಾಗಿಯೇ ದೇವರು ಸಹಾಯ ಮಾಡುತ್ತಿದ್ದಾರೆ’, ಎಂಬುವುದು ಗಮನಕ್ಕೆ ಬರುತ್ತಿತ್ತು.

7. ಸದ್ಗುರು ಕಾಕುರವರು ರೂಢಿಸಿಕೊಂಡ ಅಭ್ಯಾಸದಿಂದಾಗಿ ಹಾಡುಗಳ ಪರಿಣಾಮವಾಗಿ ಮನಸ್ಸು ಬಹಿರ್ಮುಖವಾಗುವ ಬದಲು ಅಂರ್ತಮುಖತೆಯಲ್ಲಿ ಹೆಚ್ಚಳವಾಗಿ ಈಶ್ವರನ ಅನುಸಂಧಾನದಲ್ಲಿ ಇರಲು ಸಾಧ್ಯವಾಗುವುದು ಮತ್ತು ಭಗವಂತನೇ ಪ್ರಯತ್ನ ಮಾಡಿಸಿಕೊಳ್ಳುತ್ತಿರುವುದಾಗಿ ಅನುಭೂತಿ ಬರುವುದು

ಅನೇಕ ಸಲ ಸಮಾಜದಲ್ಲಿ ಇರುವಾದ ಬೇರೆ ಬೇರೆ ಹಾಡುಗಳು ಕೇಳಿಸುತ್ತವೆ. ಸಾಮಾನ್ಯವಾಗಿ ಹಾಡು ಕೇಳುತ್ತಿದ್ದಂತೆ ಸಹಜವಾಗಿ ಮನಸ್ಸು ಬಹಿರ್ಮುಖಗೊಂಡು ಇತರ ವಿಚಾರಗಳು ಹೆಚ್ಚುತ್ತವೆ; ಆದರೆ ಸದ್ಗುರು ಕಾಕುರವರು ನಮ್ಮಿಂದ ರೂಢಿಸಿಕೊಂಡ ಅಭ್ಯಾಸದಿಂದ ನಮಗೆ ಈಗ ಹಾಡು ಕೇಳುತ್ತಿದ್ದರೂ ಮನಸ್ಸು ಬಹಿರ್ಮುಖವಾಗದೇ ಅದರಲ್ಲಿನ ಶಬ್ದಗಳು ಈಶ್ವರನಿಗೆ ಜೋಡಿಸಿ ಅಂರ್ತಮುಖರಾಗಲು ಮತ್ತು ಈಶ್ವರನ ಅನುಸಂಧಾನದಲ್ಲಿರಲು ಸಾಧ್ಯವಾಗುತ್ತದೆ. ಆದುದರಿಂದ ಆನಂದದಿಂದ ಇರುವ ಕಾಲಾವಧಿಯಲ್ಲಿ ಹೆಚ್ಚಳವಾಗಿದೆ. ‘ಎಲ್ಲ ಕೃತಿಗಳನ್ನು ಭಗವಂತನೇ ನಮ್ಮಿಂದ ಮಾಡಿಸಿಕೊಳ್ಳುತ್ತಿದ್ದಾನೆ’, ಎಂಬ ಅನುಭೂತಿ ಸತತವಾಗಿ ಬರುತ್ತದೆ. ‘ನಮ್ಮ ಆಧ್ಯಾತ್ಮಿಕ ಉನ್ನತಿಯಾಗಬೇಕು ಎಂದು ನಮಗಿಂತ ಅನೇಕ ಪಟ್ಟು ಹೆಚ್ಚಿನ ತಳಮಳ ಭಗವಂತನಿಗೆ ಇದೆ’, ಎಂಬುದು ನನಗೆ ಕಲಿಯಲು ಸಿಕ್ಕಿತು.

8. ಅನುಭೂತಿ : ಸಂತರು ಹೇಳಿದ ಅಂಶಗಳನ್ನು ಕೃತಿಯಲ್ಲಿ ತರಲು ತಳಮಳದಿಂದ ಪ್ರಯತ್ನಿಸಿದಾಗ ದೇವರು ಸಹಾಯಕ್ಕೆ ಓಡಿ ಬರುವುದು :

ಒಮ್ಮೆ ರಾತ್ರಿ ನಾವು ರಾಮೇಶ್ವರಂದಲ್ಲಿ ಸತ್ಸಂಗಕ್ಕಾಗಿ ಒಟ್ಟಿಗೆ ಕುಳಿತಿದ್ದೆವು ಮತ್ತು ಇನ್ನೊಂದು ಕೋಣೆಯಲ್ಲಿ ಸದ್ಗುರು ಕಾಕು ವಿಶ್ರಾಂತಿ ಪಡೆಯುತ್ತಿದ್ದರು. ಆಗ ಅವರಿಗೆ ‘ಓರ್ವ ದೇವಿಯು ನಮ್ಮ ಕೋಣೆಯತ್ತ ಬರುತ್ತಿದ್ದಾಳೆ’, ಎಂದು ಸೂಕ್ಷ್ಮದಲ್ಲಿ ಕಾಣಿಸಿತು. ಅವರು ಆ ದೇವಿಗೆ ‘ನೀನು ಅವರ ಬಳಿಗೆ ಏಕೆ ಹೋಗುತ್ತಿರುವೆ’, ಎಂದು ಕೇಳಿದರು. ದೇವಿಯು ‘ಎಲ್ಲ ಮಕ್ಕಳು ಒಟ್ಟಿಗೆ ಕುಳಿತುಕೊಂಡು ಸಾಧನೆಯ ಸೂತ್ರಗಳನ್ನು ಮಂಡಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಆಶಿರ್ವಾದ ನೀಡಲೆಂದು ನಾನು ಅವರ ಬಳಿಗೆ ಹೋಗುತ್ತಿದ್ದೇನೆ.’ ಎಂದು ಹೇಳಿದಳು. ಈ ಅನುಭೂತಿಯಿಂದ ‘ಸಂತರು ಹೇಳಿದ ಸೂತ್ರಗಳನ್ನು ಕೃತಿಯಲ್ಲಿ ತರಲು ತಳಮಳದಿಂದ ಪ್ರಯತ್ನಿಸಿದಾಗ, ದೇವತೆಗಳು ಸಹ ಸಾಧಕರ ಸಹಾಯಕ್ಕಾಗಿ ಬರುತ್ತಾರೆ’ ಎಂಬುವುದು ನನ್ನ ಗಮನಕ್ಕೆ ಬಂತು.

9. ಪ್ರಾರ್ಥನೆ

ಪ್ರಯಾಣದ ಸಮಯವನ್ನು ವ್ಯಷ್ಟಿ ಸಾಧನೆಯನ್ನು ಮಾಡಲು ಉಪಯೋಗಿಸುತ್ತಿದ್ದರೂ ಕೂಡ ಇವೆಲ್ಲವುಗಳ ಅಭ್ಯಾಸವಾಗಬೇಕು. ಯಾವ ರೀತಿ ನಮಗೆ ಬೇರೆಬೇರೆ ಅಭ್ಯಾಸಗಳು ಇರುತ್ತವೆಯೋ, ಅದರಂತೆ ಈಶ್ವರನ ಅನುಸಂಧಾನದಲ್ಲಿರುವುದು ಕೂಡ ಒಂದಾಗಬೇಕು, ಎಂಬ ಹಂತದವರೆಗೆ ನಾವು ಪ್ರಯಾಣಿಸಬೇಕಾಗಿದೆ. ‘ಭಾವಪೂರ್ಣ ಕೃತಿ ಮಾಡಬೇಕು ಎಂಬುವುದರ ಅಭ್ಯಾಸವಾಗಲಿ’, ಇದೇ ಭಗವಾನ ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಪ್ರಾರ್ಥನೆ.’

– ಕೃತಜ್ಞತಾಪೂರ್ವಕವಾಗಿ
ಶ್ರೀ. ಸತ್ಯಕಾಮ ಕಣಗಲೇಕರ,( ಸದ್ಗುರು (ಸೌ.) ಅಂಜಲಿ ಗಾಡಗೀಳ ಮಾಡುತ್ತಿರುವ ದೈವಿ ಪ್ರಯಾಣದಲ್ಲಿನ ಒಬ್ಬ ಸಾಧಕ (5.2.2017))

Leave a Comment