ಶ್ರೀಕೃಷ್ಣನ ಗುಜರಾತಿನಲ್ಲಿ ಪ್ರಾಚೀನ ಗಣಪತಿ ದೇವಸ್ಥಾನದ ವೈಶಿಷ್ಟ್ಯ ಮತ್ತು ಮಹತ್ವ !

ಸಾಕ್ಷಾತ್ ಭಗವಾನ ಶ್ರೇಕೃಷ್ಣನು ಪೂಜಿಸಿದ ಗಣಪತಿಪುರದ ಸಿದ್ಧಿವಿನಾಯಕನ ದರ್ಶನ ಪಡೆಯುತ್ತಿರುವ ಸದ್ಗುರು (ಸೌ.) ಅಂಜಲಿ ಗಾಡಗೀಳ

೧. ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಇರುವಂತಹ ಅಡಚಣೆಗಳು ದೂರವಾಗಲು ಗುಜರಾತಿನ ಗಣಪತಿಯ ದೇವಸ್ಥಾನದಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ನಾಮಜಪಿಸಬೇಕು!

೧೯.೩.೨೦೧೯ ದಂದು ಪೂ.(ಡಾ.) ಓಂ ಉಲಗನಾಥನ್ ಇವರು “ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಬರುವಂತಹ ಅಡಚಣೆಗಳು ದೂರವಾಗಲು ಶ್ರೀಕೃಷ್ಣ ಕ್ಷೇತ್ರವಾಗಿರುವ ಗುಜರಾತ್ ರಾಜ್ಯದ ರಾಜಧಾನಿಯ ಸಮೀಪವಿರುವ ಪ್ರಾಚೀನ ಗಣಪತಿ ದೇವಸ್ಥಾನಕ್ಕೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಭೇಟಿ ನೀಡಬೇಕು. ದೇವಸ್ಥಾನದಲ್ಲಿ ಅವರು ಕುಳಿತುಕೊಂಡು ೫ ನಿಮಿಷ ನಾಮಜಪಿಸಬೇಕು. ಈ ದೇವಸ್ಥಾನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು” ಎಂದು ಮಹರ್ಷಿಗಳ ಆಜ್ಞೆಯನ್ನು ನಮಗೆ ತಿಳಿಸಿದರು.

೨. ಪ್ರಾಚೀನ ಗಣಪತಿ ದೇವಸ್ಥಾನದ ಮಹತ್ವ !

ಮಹರ್ಷಿಗಳ ಆಜ್ಞೆಯಂತೆ ನಾವು ಮಾಹಿತಿಯನ್ನು ಸಂಗ್ರಹಿಸಿದೆವು. ಅದರಂತೆ ನಮಗೆ ಮುಂದಿನ ವಿಷಯ ತಿಳಿಯಿತು.

೨ಅ. ೫,೫೦೦ ವರ್ಷಗಳ ಹಿಂದೆ ಭಗವಾನ ಶ್ರೀಕೃಷ್ಣ ಮತ್ತು ಪಾಂಡವರು ಪೂಜಿಸಿದ ‘ಸಿದ್ಧಿವಿನಾಯಕ’ !

ಗುಜರಾತಿನ ರಾಜಧಾನಿಯಿಂದ ೯೦ ಕಿ.ಮೀ. ದೂರದಲ್ಲಿರುವ ಊರು ‘ಗಣಪತಿಪುರ’. ಅಲ್ಲಿ ಗುಜರಾತಿನ ಅತ್ಯಂತ ಪ್ರಾಚೀನ ಮತ್ತು ಸ್ವಯಂಭೂ ಗಣಪತಿಯ ದೇವಸ್ಥಾನವಿದೆ. ಆ ದೇವಸ್ಥಾನದ ಪುರೋಹಿತರು ನಮಗೆ ಈ ಸ್ಥಳದ ವೈಶಿಷ್ಟ್ಯವನ್ನು ಹೇಳುವಾಗ, ೫,೫೦೦ ವರ್ಷಗಳ ಹಿಂದೆ ಶ್ರೀಕೃಷ್ಣ ಮತ್ತು ಪಾಂಡವರು ಪೂಜಿಸಿದ ಗಣಪತಿ ಇದು, ಈ ಗಣಪತಿಯನ್ನು ಪೂಜಿಸಿದ ನಂತರ ಶ್ರೀಕೃಷ್ಣನು ದ್ವಾರಕೆಯಲ್ಲಿ ನೆಲೆಸಿ ಅನೇಕ ವರ್ಷಗಳ ರಾಜ್ಯವನ್ನಾಳಿದನು ಎಂದು ಹೇಳುತ್ತಾರೆ. ಈ ಗಣಪತಿಯನ್ನು ಸಿದ್ಧಿವಿನಾಯಕ ಎಂದು ಕರೆಯುತ್ತಾರೆ. ಶ್ರೀಕೃಷ್ಣನು ಈ ಗಣಪತಿಯನ್ನು ಪೂಜಿಸುತ್ತಿದ್ದುದರಿಂದ ಈ ಸ್ಥಳಕ್ಕೆ ಹಿಂದೆ “ಗಣೇಶ ದ್ವಾರಕೆ” ಎಂದು ಕರೆಯಲಾಗುತ್ತಿತ್ತು. ಶ್ರೀಕೃಷ್ಣನ್ನು ಭೇಟಿಯಾಗಲು ಪಾಂಡವರು ದ್ವಾರಕೆಗೆ ಹೋಗುವಾಗ ಈ ಗಣಪತಿಯ ದರ್ಶನವನ್ನು ಪಡೆದೇ ಮುಂದೆ ಹೋಗುತ್ತಿದ್ದರು.

೨ಆ. ರೈತನು ಭೂಮಿಯನ್ನು ಉಳುವಾಗ ಸ್ವಯಂಭೂ ಗಣಪತಿಯ ಮೂರ್ತಿಯು ದೊರೆಯುವುದು ಮತ್ತು ಶ್ರೀ ಗಣಪತಿಯ ಇಚ್ಛೆಯಂತೆ ಆ ಮೂರ್ತಿಯ ಸ್ಥಾಪನೆಯಾಗಿ ಆ ಸ್ಥಳ ಗಣಪತಿಪುರ ಎಂದು ಪ್ರಸಿದ್ಧವಾಗುವುದು

ಕಲಿಯುಗದಲ್ಲಿ ಅನೇಕ ವರ್ಷಗಳ ಕಾಲ ಈ ದೇವಸ್ಥಾನವು ಅಜ್ಞಾತವಾಗಿತ್ತು. ೮೦೦ ವರ್ಷಗಳ ಹಿಂದೆ ಕರ್ಣಾವತಿಯ ಹತ್ತಿರದ ‘ಕೋಟ’ ಎಂಬ ಊರಿನ ಓರ್ವ ರೈತನು ಭೂಮಿಯನ್ನು ಉಳುವಾಗ ಅಕಸ್ಮಾತಾಗಿ ಈ ಸ್ವಯಂಭೂ ಗಣಪತಿಯ ಮೂರ್ತಿ ದೊರೆಯಿತು. ಇದೊಂದು ಎಡಮುರಿ ಗಣಪತಿಯ ಮೂರ್ತಿಯಾಗಿದೆ.

ಈ ಮೂರ್ತಿಯ ಕಿವಿಯಲ್ಲಿ ಕುಂಡಲ, ಬಂಗಾರದ ಕಣಕಾಲು, ಸೊಂಟಕ್ಕೆ ಪಟ್ಟಿ ಮತ್ತು ತಲೆಯ ಮೇಲೆ ಮುಕುಟವಿದೆ. ಈ ಮೂರ್ತಿಯು ದೊರೆತಾಗ ಅಲ್ಲಿ ಆಸುಪಾಸಿನ ಊರಿನ ಜನರು ಸೇರಿದರು ಮತ್ತು ಎಲ್ಲರಿಗು ಆ ಮೂರ್ತಿಯ ಸ್ಥಾಪನೆಯು ಅವರವರ ಊರಿನ ದೇವಸ್ಥಾನದಲ್ಲಿ ಆಗಬೇಕು ಎಂದೆನಿಸಿತು. ಎಲ್ಲರು ಸೇರಿ ಒಂದು ತೀರ್ಮಾನ ತೆಗೆದುಗೊಂಡು ಆ ಮೂರ್ತಿಯನ್ನು ಒಂದು ಎತ್ತಿನ ಗಾಡಿಯಲ್ಲಿ ಇಟ್ಟರು. ಆದರೆ ಆ ಗಾಡಿಗೆ ಎತ್ತು ಕಟ್ಟಿರಲಿಲ್ಲ. ಆಶ್ಚರ್ಯವೆಂದರೆ ಮೂರ್ತಿಯು ಇಟ್ಟ ತಕ್ಷಣ ಆ ಗಾಡಿಯು ಹಾಗೆಯೆ ಮುಂದೆ ಚಲಿಸಿತು. ಹೀಗೆ ಸಾಗಿದ ಗಾಡಿಯು ಒಂದು ಸ್ಥಳದಲ್ಲಿ ಬಂದು ನಿಂತು ಹೋಯಿತು ಮತ್ತು ಮೂರ್ತಿಯು ತನ್ನಿಂದ ತಾನೇ ಗಾಡಿಯಿಂದ ಕೆಳಗಿಳಿಯಿತು. ಮುಂದೆ ಅದೇ ಸ್ಥಾನದಲ್ಲಿ ಆ ಗಣಪತಿಯನ್ನು ಸ್ಥಾಪಿಸಿದರು. ಗಣಪತಿಯು ನೆಲೆಸಿದ ಈ ಸ್ಥಳಕ್ಕೆ ಗಣಪತಿಪುರ ಎಂಬ ಹೆಸರು ಬಂತು. ಈ ಮೂರ್ತಿಗೆ ಸಿಂದೂರ ಮತ್ತು ತುಪ್ಪದ ಲೇಪನವಿರುವುದರಿಂದ ಮೂರ್ತಿಗೆ ಸಿಂದೂರದ ಬಣ್ಣವಿದೆ.

Leave a Comment