ಸಂಕಟವನ್ನು ನಿವಾರಿಸುವ ತ್ರಿನೇತ್ರ ಗಣೇಶ (ಸವಾಯಿ ಮಾಧೋಪುರ, ರಾಜಸ್ಥಾನ)

ತ್ರಿನೇತ್ರ ಗಣೇಶ

ಈ ಗಣೇಶನು ತುಂಬಾ ಜಾಗೃತನಾಗಿದ್ದು ಸಂಕಟದ ಸಮಯದಲ್ಲಿ ಭಕ್ತರಿಗೆ ಸಹಾಯ ಮಾಡಲು ಧಾವಿಸಿ ಬರುವನು, ಎಂದು ಮಹರ್ಷಿಗಳು ಹೇಳಿದರು.

ರಾಜಸ್ಥಾನದ ಸವಾಯಿ ಮಾಧೋಪುರದ ಒಂದು ಕೋಟೆಯಲ್ಲಿ ಈ ಗಣೇಶನಿದ್ದಾನೆ. ನಾವು ಆ ಗಣೇಶನಿಗೆ ಪ್ರಾರ್ಥಿಸೋಣ ಎಂದು ಮಹರ್ಷಿಗಳು ಹೇಳಿದರು. ಆಗ ಅದೇ ಸಮಯಕ್ಕೆ ಯೋಗಾಯೋಗದಿಂದ ಸನಾತನದ ಸಂತರಾದ (ಪೂ.) ಡಾ. ಪಿಂಗಳೆಕಾಕಾರವರು ಜಯಪುರಕ್ಕೆ ಬಂದಿದ್ದರು. ಸವಾಯಿ ಮಾಧೋಪುರವು ಜಯಪುರದಿಂದ ೧೫೦ ಕಿ.ಮೀ. ದೂರದಲ್ಲಿದೆ. ಪೂ. ಪಿಂಗಳೆಕಾಕಾರವರು ಅಲ್ಲಿಗೆ ಹೋಗಿ ದೇವರಿಗೆ ಅಭಿಷೇಕ ಮಾಡಿ ಅಲ್ಲಿರುವ ಅರ್ಚಕರಿಗೆ ಸನಾತನದ ಬಗ್ಗೆ ಸಂಕಲ್ಪವನ್ನು ನಿವೇದಿಸಿ ಗಣಪತಿಗೆ ಸಿಂಧೂರ ಲೇಪನ ಮಾಡಲು ಹೇಳಿ, ಎಂದು ಮಹರ್ಷಿಗಳು ಆದೇಶಿಸಿದ್ದರು. ಅದರಂತೆ ಮರುದಿನ (ಪೂ.) ಪಿಂಗಳೆ ಕಾಕಾರವರು ಅಲ್ಲಿಗೆ ಹೋಗಿ ಸಿಂಧೂರ ಲೇಪನದೊಂದಿಗೆ ಗಣೇಶನ ಪೂಜೆ ಮಾಡಿದರು ಹಾಗೂ ಅಲ್ಲಿಯೇ ಕುಳಿತುಕೊಂಡು ಸಾಧಕರಿಗಾಗಿ ಪ್ರಾರ್ಥನೆಯನ್ನೂ ಮಾಡಿದರು.

ತ್ರಿನೇತ್ರ ಗಣೇಶನ ಬಗ್ಗೆ ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಬಂದ ಅನುಭೂತಿ : ದೇವಾಲಯದಲ್ಲಿ ಗಣೇಶನ ಪ್ರಸಾದವೆಂದು ಬೇಯಿಸಿದ ಮೋದಕವನ್ನು ಹಂಚುತ್ತಿರುವಂತೆ ಕನಸು ಕಾಣಿಸುವುದು

ಯಾವ ದಿನ ಗಣೇಶನಿಗೆ ಸಿಂಧೂರ ಲೇಪನ ನಡೆಯುವುದಿತ್ತೋ ಆ ದಿನ ನನ್ನ ಕನಸಿನಲ್ಲಿ ಒಂದು ದೇವಾಲಯದಲ್ಲಿ ಒಂದು ಜಾಗದಲ್ಲಿ ದೇವರ ಆರತಿ ನಡೆಯುತ್ತಿರುವಾಗ ನಾನು ಬೇಯಿಸಿ ತಯಾರಿಸಿದ ಮೋದಕದ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಿರುವ ದೃಶ್ಯ ಕಾಣಿಸಿತು. ಇದರಿಂದ ತ್ರಿನೇತ್ರ ಗಣೇಶನು ನನಗೆ ಪ್ರಸಾದದ ರೂಪದಲ್ಲಿ ದೃಷ್ಟಾಂತ ನೀಡಿರುವುದು ಗಮನಕ್ಕೆ ಬಂದು ನನ್ನ ಪ್ರಾರ್ಥನೆಯನ್ನು ಅವನು ಕೇಳಿಸಿಕೊಂಡನು, ಎಂದು ಅನಿಸಿ ಭಾವಜಾಗೃತಿಯಾಯಿತು.

ತ್ರಿನೇತ್ರ ಗಣೇಶ ದೇವಾಲಯದಲ್ಲಿ ಶ್ರೀ ಗಣೇಶನು ಬಿಳಿ ಇಲಿಯ ರೂಪದಲ್ಲಿ ದರ್ಶನ ನೀಡಿ ಪೂಜೆಯ ಹರಿವಾಣದಲ್ಲಿರುವ ದೂರ್ವೆಯನ್ನು ಪ್ರತ್ಯಕ್ಷವಾಗಿ ಸೇವಿಸುವುದು

ಪೂ. ಡಾ. ಪಿಂಗಳೆಕಾಕಾರಿಗೆ ತ್ರಿನೇತ್ರ ಗಣೇಶನ ದೇವಾಲಯದಲ್ಲಿ ಸಾಕ್ಷಾತ್ ಗಣೇಶನು ಬಿಳಿ ಇಲಿಯ ರೂಪದಲ್ಲಿ ದರ್ಶನ ನೀಡಿ ಪೂಜೆಯ ಹರಿವಾಣದಲ್ಲಿದ್ದ ದುರ್ವೆಯನ್ನು ಸೇವಿಸುವುದು ಹಾಗೂ ಅದರ ಛಾಯಾಚಿತ್ರವನ್ನು ತೆಗೆಯಲು ಸಾಧ್ಯವಾಗುವುದು ಅದೇ ಸಮಯದಲ್ಲಿ ಪ್ರತ್ಯಕ್ಷವಾಗಿ ದೇವಾಲಯದಲ್ಲಿ ಒಂದು ಬಿಳಿ ಇಲಿ ಬಂದು ನಮ್ಮ ಪೂಜೆಯ ಹರಿವಾಣದಲ್ಲಿದ್ದ ದೂರ್ವೆಯನ್ನು ಸೇವಿಸಿತು.

ತ್ರಿನೇತ್ರ ಗಣೇಶನ ಸ್ಥಾನ ಮಹಿಮೆ ಹಾಗೂ ಅವನು ವಿಘ್ನಹರ್ತನಾಗಿರುವ ಸಾಕ್ಷಿ ನೀಡುವ ಕಥೆ

ಶ್ರೀ ಗಣೇಶನು ಒಬ್ಬ ರಾಜನ ಮೇಲೆ ಬಂದ ಸಂಕಟವನ್ನು ನಿವಾರಿಸಿದ್ದ ಬಗ್ಗೆ ಮಹರ್ಷಿಗಳು ನಾಡಿ ವಾಚನದಲ್ಲಿ ಉಲ್ಲೇಖಿಸಿದ್ದರು. (ಹೌದು. ಇದು ನಿಜವಾಗಿದೆ. ಅದೇ ಈ ಗಣೇಶನ ಸ್ಥಾನಮಹಿಮೆಯಾಗಿದೆ. – ಸೌ. ಗಾಡಗೀಳ) ತ್ರಿನೇತ್ರ ಗಣೇಶನ ಕಥೆ ಈ ಕೆಳಗಿನಂತಿದೆ.

ಮುಸಲ್ಮಾನ ರಾಜ ಅಲ್ಲಾವುದ್ದೀನ ಖಿಲ್ಜಿಯು ರಾಜ ಹಮೀರನ ಮೇಲೆ ದಂಡೆತ್ತಿ ಬಂದಿದ್ದ ಸಂಕಟವು ತ್ರಿನೇತ್ರ ಗಣೇಶನ ಕೃಪೆಯಿಂದ ದೂರವಾಗುವುದು

ಸರಿಸುಮಾರು ೭೦೦ ವರ್ಷಗಳ ಹಿಂದೆ ಹಮೀರನೆಂಬ ರಾಜನಿದ್ದನು. ಅವನ ಮೇಲೆ ಮುಸಲ್ಮಾನ ರಾಜನಾದ ಅಲ್ಲಾವುದ್ದೀನ್ ಖಿಲ್ಜಿಯ ಲಕ್ಷಗಟ್ಟಲೆ ಸೈನಿಕರು ದಾಳಿ ಮಾಡಲು ಬಂದಿದ್ದರು. ರಾಜ ಹಮೀರನು ಶ್ರೀಗಣೇಶನ ಪರಮ ಭಕ್ತನಾಗಿದ್ದನು. ಅವನು ಗಣೇಶನನ್ನು, ಈಗ ನೀನೇ ಇದರಿಂದ ನನ್ನನ್ನು ಕಾಪಾಡು ಎಂದು ಪ್ರಾರ್ಥಿಸಿದನು. ಅದಕ್ಕೆ ತ್ರಿನೇತ್ರ ಗಣೇಶನು ಚಮತ್ಕಾರ ಮಾಡಿದನು, ಇದ್ದಕ್ಕಿದ್ದಂತೆ ಅಲ್ಲಾವುದ್ದೀನ್ ಖಿಲ್ಜಿಯು ಮುಂದೆ ಬರದೆ, ಲಕ್ಷಗಟ್ಟಲೆ ಸೇನೆಯನ್ನು ತೆಗೆದುಕೊಂಡು ಹಾಗೆಯೇ ಹಿಂದೆ ಹೋದನು. ತ್ರಿನೇತ್ರ ಗಣೇಶನು ಲಕ್ಷಗಟ್ಟಲೆ ಸೇನೆಯನ್ನು ಮರಳಿ ಕಳುಹಿಸಿದಂತೆಯೇ ನಿಮ್ಮ ಮೇಲೆ ಬಂದಿರುವ ಸಂಕಟವನ್ನು ಸಹ ನಿವಾರಿಸುತ್ತಾನೆ ಎಂದು ಮಹರ್ಷಿಗಳು ಹೇಳಿದರು.

ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಸಹಾಯಕ್ಕೆ ಧಾವಿಸಿ ಬಂದ ತ್ರಿನೇತ್ರ ಗಣಪತಿ !

ಈ ಗಣೇಶನ ವೈಶಿಷ್ಟ್ಯವೆಂದರೆ ದ್ವಾಪರಯುಗದಲ್ಲಿ ಶ್ರೀಕೃಷ್ಣಾವತಾರ ವಾದಾಗ ಅವನ ಸಹಾಯಕ್ಕಾಗಿ ಗಣೇಶನು ಪ್ರಕಟವಾದನು ಹಾಗೂ ಈಗಲೂ ಪ.ಪೂ. ಡಾಕ್ಟರರ ಅವತಾರ ಕಾಲದಲ್ಲಿ ಅವನು ನಮ್ಮ ಸಹಾಯಕ್ಕೆಂದು ಧಾವಿಸಿ ಬಂದಿದ್ದಾನೆ ಎಂದು ಅನಿಸಿತು.

ಸಂಕಟ ಸಮಯದಲ್ಲಿ ಈ ತ್ರಿನೇತ್ರ ಗಣೇಶನನ್ನು ಪ್ರಾರ್ಥಿಸಲು ಮಹರ್ಷಿಗಳು ಹೇಳುವುದು

ಈ ತ್ರಿನೇತ್ರ ಗಣೇಶನ ಚಿತ್ರವನ್ನು ತಮ್ಮ ಸಂಚಾರಿವಾಣಿಯಲ್ಲಿ ಇಟ್ಟುಕೊಳ್ಳಿರಿ ಹಾಗೂ ಸಂಕಟ ಸಮಯದಲ್ಲಿ ಅವನಿಗೆ ಪ್ರಾರ್ಥಿಸಿ, ಎಂದು ಮಹರ್ಷಿಗಳು ನಮಗೆ ಹೇಳಿದರು.

ಮಹರ್ಷಿಗಳು ಹೇಳಿದಂತೆ ಮೂರು ದಿನ ತ್ರಿನೇತ್ರ ಗಣೇಶನ ಹೆಸರಿನಲ್ಲಿ ೧೦೧ ರೂಪಾಯಿಗಳ ದಕ್ಷಿಣೆ ತೆಗೆದಿಡುವುದು

ಎಲ್ಲಿಯವರೆಗೆ ಈ ತ್ರಿನೇತ್ರ ಗಣೇಶನ ಬಗ್ಗೆ ನಮಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ಮಹರ್ಷಿಗಳು ಪ್ರತಿ ದಿನ ೧೦೧ ರೂಪಾಯಿಗಳ ದಕ್ಷಿಣೆಯನ್ನು ಅವನ ಹೆಸರಿನಲ್ಲಿ ತೆಗೆದಿಡಲು ಆದೇಶಿಸಿದ್ದರು. ಅದರಂತೆ ನಾವು ೩ ದಿನ ಈ ದಕ್ಷಿಣೆಯ ಮೇಲೆ ತ್ರಿನೇತ್ರ ಗಣೇಶನ ಹೆಸರು ಬರೆದಿಟ್ಟೆವು. ಈ ದಕ್ಷಿಣೆಯನ್ನು ಮುಂದೆ ಏನು ಮಾಡುವುದು ? ಎಂಬ ಬಗ್ಗೆ ಮಹರ್ಷಿಗಳು ನಮಗೆ ಹೇಳುವವರಿದ್ದಾರೆ. ಇದೇ ಕೋಟೆಯಲ್ಲಿ ಹನುಮಂತನ ದೇವಾಲಯವೂ ಇದೆ. ಅಲ್ಲಿಗೂ ನಾವು ಮುಂದೆ ಹೋಗಬೇಕಾಗಿದೆ, ಎಂದು ಮಹರ್ಷಿಗಳು ಹೇಳಿದರು.

Leave a Comment