
೧. ಶ್ರಾದ್ಧವನ್ನು ಮಾಡದಿದ್ದರೆ ಅದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನೂ ಸಹಿಸಿಕೊಳ್ಳಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ
ಸಹೋದರರೆಲ್ಲರೂ ಒಂದೇ ಕುಟುಂಬದಲ್ಲಿದ್ದರೆ ಹಿರಿಯ ಸಹೋದರನು ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ (ಉದಾ. ಶಾರೀರಿಕ ತೊಂದರೆ) ಹಿರಿಯ ಸಹೋದರನಿಗೆ ಮಾಡಲು ಸಾಧ್ಯವಾಗದಿದ್ದರೆ ಇತರ ಸಹೋದರರಲ್ಲಿ ಯಾರಾದರೂ ಮಾಡಬಹುದು; ಏಕೆಂದರೆ ಶ್ರಾದ್ಧವನ್ನು ಮಾಡದಿರುವುದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನು ಸಹ ಅನುಭವಿಸಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಅದು ಪೂರ್ವಜರನ್ನು ತೃಪ್ತಿಗೊಳಿಸಲು ಉಪಯೋಗವಾಗುವುದರಿಂದ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ. ಸಹೋದರರೆಲ್ಲರೂ ವಿಭಕ್ತ ಕುಟುಂಬದಲ್ಲಿದ್ದರೆ ಪ್ರತಿಯೊಬ್ಬರೂ ಶ್ರಾದ್ಧ ವಿಧಿಯನ್ನು ಮಾಡಬಹುದು.
೨. ಮಹಾಲಯ ಶ್ರಾದ್ಧದಲ್ಲಿ ತಂದೆ-ತಾಯಿಯ ಜೊತೆಗೆ ಇತರ ಆಪ್ತರು ಸಹ ಬರುವುದರಿಂದ ಅವರಿಗೂ ಪಿಂಡ ನೀಡಲು ಸಾಧ್ಯವಾಗುತ್ತದೆ
ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆಂದು ಕರೆಯುತ್ತಾರೆ. ಇದರಲ್ಲಿ ತಂದೆಯ ಶ್ರಾದ್ಧವಿದ್ದರೆ ತಂದೆ, ಅಜ್ಜ, ಮುತ್ತಜ್ಜ ಹಾಗೂ ತಾಯಿಯದ್ದಾಗಿದ್ದರೆ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿ ಪಿತೃಗಳು ಬರುತ್ತಾರೆ. ಮಹಾಲಯ ಶ್ರಾದ್ಧದಲ್ಲಿ ಮಾತ್ರ ಅವರೊಂದಿಗೆ ಚಿಕ್ಕಪ್ಪ, ಮಾವ, ಅತ್ತೆ, ಸಹೋದರಿ, ಚಿಕ್ಕಮ್ಮ, ಇನ್ನೂ ಇತರ ಬಂಧುಗಳು ಹೀಗೆ ತುಂಬ ಪಿತೃಗಳು ಬರುತ್ತಿರುತ್ತಾರೆ. ಈ ಶ್ರಾದ್ಧದ ವೈಶಿಷ್ಟ್ಯವೆಂದರೆ ಇದರಲ್ಲಿ ಆಪ್ತರೆಂದು ನಮ್ಮ ಪರಿಚಿತರು, ಮಿತ್ರರು, ಹಿತಚಿಂತಕರಿಗೂ ಪಿಂಡವನ್ನು ನೀಡಬಹುದು. ಆದ್ದರಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ ಪಿತೃಪಕ್ಷದಲ್ಲಿ ಮಹಾಲಯವನ್ನು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನು ತುಲಾ ರಾಶಿಯಲ್ಲಿರುವ ವರೆಗೆ ಮಹಾಲಯ ಶ್ರಾದ್ಧವನ್ನು ಮಾಡಬಹುದು.
೩. ಸಾಧಕರು ಸನಾತನದ ಪಿತೃಪಕ್ಷ ಹಾಗೂ ಮಹಾಲಯ ಶ್ರಾದ್ಧ (ಶಾಸ್ತ್ರ ಹಾಗೂ ಶ್ರಾದ್ಧದಲ್ಲಿನ ವಿಧಿಗಳ ಪರಿಚಯ) ಈ ಧ್ವನಿಚಿತ್ರಸುರುಳಿಯನ್ನು ನೋಡಿ ಅದರಂತೆ ಶ್ರಾದ್ಧವಿಧಿಯನ್ನು ಮಾಡಬೇಕು !
ಅ. ಸಾಧಕರು ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ಸನಾತನದ “ಪಿತೃಪಕ್ಷ ಹಾಗೂ ಮಹಾಲಯ ಶ್ರಾದ್ಧ (ಶಾಸ್ತ್ರ ಹಾಗೂ ಶ್ರಾದ್ಧದಲ್ಲಿನ ವಿಧಿಗಳ ಪರಿಚಯ)” ಎಂಬ ಧ್ವನಿಚಿತ್ರಸುರುಳಿಯನ್ನು ನೋಡಿ ಹಾಗೂ ತಾವು ಯಾವ ಪುರೋಹಿತರಿಂದ ಶ್ರಾದ್ಧವನ್ನು ಮಾಡಿಸಿಕೊಳ್ಳುವವರಿರುವಿರೋ ಆ ಪುರೋಹಿತರಿಗೂ ಈ ಧ್ವನಿಚಿತ್ರಸುರುಳಿಯನ್ನು ಅವಶ್ಯಕತೆಗನುಸಾರ ನೋಡಲು ವಿನಂತಿಸಿಕೊಳ್ಳಿರಿ.
ಆ. ನಮಗೆ ಇದೇ ರೀತಿ ವಿಧಿ ಮಾಡಬೇಕೆಂದು ಹೇಳಿ ಹಾಗೂ ಅದರಲ್ಲಿರುವಂತೆ ಶ್ರಾದ್ಧವನ್ನು ಮಾಡಿರಿ.
ಇ. ಶ್ರಾದ್ಧವಿಧಿಯನ್ನು ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕೆಂಬುದು ಎಲ್ಲರಿಗೂ ತಿಳಿಯಲೆಂದು ಧ್ವನಿಚಿತ್ರಸುರುಳಿಯಲ್ಲಿ ಭೋಜನಕ್ಕಾಗಿ ಪ್ರತ್ಯಕ್ಷವಾಗಿ ಬ್ರಾಹ್ಮಣರನ್ನು ಕೂರಿಸಿ ವಿಧಿ ಮಾಡಲಾಗಿದೆ. ಬ್ರಾಹ್ಮಣ ಭೋಜನ ಸಾಧ್ಯವಿಲ್ಲದ್ದಿದ್ದರೆ ಬ್ರಾಹ್ಮಣರ ಜಾಗದಲ್ಲಿ ದರ್ಬೆಯಿಟ್ಟು ಚಟಶ್ರಾದ್ಧವನ್ನು ಮಾಡಬಹುದು.
ಈ. ವಿಧಿಯ ಪೌರೋಹಿತ್ಯ ಮಾಡಲು ಮಾತ್ರ ಒಬ್ಬ ಬ್ರಾಹ್ಮಣರ ಆವಶ್ಯಕತೆಯಿರುತ್ತದೆ.
ಶಾಸ್ತ್ರೋಕ್ತವಾಗಿ ಮಹಾಲಯ ಶ್ರಾದ್ಧವನ್ನು ಆಚರಿಸಿ ಪೂರ್ವಜರ ತೊಂದರೆಯಿಂದ ತಮ್ಮನ್ನು ಮುಕ್ತಗೊಳಿಸಿಕೊಳ್ಳಿ!
– ಶ್ರೀ. ದಾಮೋದರ ವಝೇ ಗುರೂಜಿ (ಸನಾತನ ಸಾಧಕ-ಪುರೋಹಿತ ಪಾಠಶಾಲೆಯ ಸಂಚಾಲಕರು), ಫೋಂಡಾ, ಗೋವಾ.
ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ನಾಮಜಪದ ಪರಿಣಾಮ
ಶ್ರಾದ್ಧದ ಅಡುಗೆ ಮತ್ತು ಊಟ
ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದವನ್ನು ಪಡೆಯಿರಿ !
ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು !
ಮಹಾಲಯ ಶ್ರಾದ್ಧದ ಶ್ರಾದ್ಧಕರ್ತನ (ಶ್ರಾದ್ಧ ಮಾಡುವವನ) ಮೇಲೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮದ ವೈಜ್ಞಾನಿಕ ಸಂಶೋಧನೆ