ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ

೧. ದೇವಿಯ ಉಡಿ ತುಂಬುವುದರ ಮಹತ್ವವೇನು ?


ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ) ಅರ್ಪಿಸಿ) ಮುಕ್ತಾಯ ಮಾಡಬೇಕು. ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು. ದೇವಿಗೆ ಸೀರೆ ಮತ್ತು ಖಣವನ್ನು ಅರ್ಪಿಸುವಾಗ, ದೇವಿಗೆ ಕಾರ್ಯವನ್ನು ಮಾಡಲು ಪ್ರಾರ್ಥನೆ ಮಾಡುವುದರಿಂದ ನಾವು ಮೊದಲು ಮಾಡಿದ ಪಂಚೋಪಚಾರ ಪೂಜೆಯ ವಿಧಿಗಳಿಂದ ಕಾರ್ಯನಿರತವಾದ ದೇವಿಯ ನಿರ್ಗುಣ ತತ್ತ್ವಕ್ಕೆ ಸೀರೆ ಮತ್ತು ಖಣದ ಮಾಧ್ಯಮದಿಂದ ಸಗುಣ ರೂಪದಲ್ಲಿ ಸಾಕಾರವಾಗಲು ಸಹಾಯವಾಗುವುದು.

೨. ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ

ಅ. ದೇವಿಗೆ ಅರ್ಪಣೆ ಮಾಡುವ ಸೀರೆಯು ಹತ್ತಿ ಅಥವಾ ರೇಷ್ಮೆಯದ್ದಾಗಿರಬೇಕು, ಏಕೆಂದರೆ ಇತರ ಯಾವುದೇ ದಾರಗಳಿಗಿಂತ ಹತ್ತಿ ಅಥವಾ ರೇಷ್ಮೆಯ ದಾರಗಳಲ್ಲಿ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಹಾಗೂ ಹಿಡಿದಿಟ್ಟುಕೊಳ್ಳುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ.
ಆ. ಒಂದು ತಟ್ಟೆಯಲ್ಲಿ ಸೀರೆ, ಅದರ ಮೇಲೆ ಖಣ (ರವಕೆಯ ಬಟ್ಟೆ), ಅದರ ಮೇಲೆ ತೆಂಗಿನಕಾಯಿಯನ್ನು ಇಟ್ಟು ಸ್ವಲ್ಪ ಅಕ್ಕಿಯನ್ನು ಇಡಬೇಕು. ತೆಂಗಿನಕಾಯಿಯ ಜುಟ್ಟು ದೇವಿಯ ಕಡೆಗೆ ಇರಬೇಕು. ನಂತರ ತಟ್ಟೆಯಲ್ಲಿನ ಎಲ್ಲ ವಸ್ತುಗಳು ನಮ್ಮ ಕೈಗಳ ಬೊಗಸೆಯಲ್ಲಿ ತೆಗೆದುಕೊಂಡು, ಅದನ್ನು ನಮ್ಮ ಎದೆಯ ಮುಂದೆ ಬರುವಂತೆ ಹಿಡಿದು ದೇವಿಯೆದುರು ನಿಲ್ಲಬೇಕು.
ಇ. ‘ದೇವಿಯಿಂದ ನಮಗೆ ಚೈತನ್ಯವು ಸಿಗಲಿ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲಿ’ ಎಂದು ಭಾವಪೂರ್ಣ ಪ್ರಾರ್ಥನೆ ಮಾಡಬೇಕು. ಇದರಿಂದ ದೇವಿತತ್ತ್ವವು ಜಾಗೃತವಾಗಲು ಸಹಾಯವಾಗುತ್ತದೆ.
ಈ. ಉಡಿಯ ವಸ್ತುಗಳನ್ನು ದೇವಿಯ ಚರಣಗಳಲ್ಲಿ ಅರ್ಪಿಸಿದ ನಂತರ ಉಡಿಯ ವಸ್ತುಗಳ ಮೇಲೆ ಅಕ್ಕಿಯನ್ನು ಅರ್ಪಿಸಬೇಕು.
ಉ. ದೇವಿಗೆ ಅರ್ಪಿಸಿದ ಸೀರೆಯನ್ನು ಸಾಧ್ಯವಿದ್ದಲ್ಲಿ ಧರಿಸಬೇಕು ಮತ್ತು ತೆಂಗಿನಕಾಯಿಯ ಕೊಬ್ಬರಿಯನ್ನು ಪ್ರಸಾದವೆಂದು ಸ್ವೀಕರಿಸಬೇಕು.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ದೇವಿಯ ಪೂಜೆಗೆ ಸಂಬಂಧಿಸಿದ ಕೃತಿಗಳ ಶಾಸ್ತ್ರ”)

 

1 thought on “ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ”

Leave a Comment