ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! (ಭಾಗ ೨)

ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಎಂಬ ಹೊಸ ಗ್ರಂಥದ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. ಈ ಉಪಾಯಪದ್ಧತಿಯು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ಎಂದಿಗೂ ಉಪಯುಕ್ತವಾಗಿದೆ. ವಾಚಕರು ಈಗಿನಿಂದಲೇ ಈ ಉಪಾಯ ಮಾಡಿ ನೋಡಬೇಕು. ಈ ರೀತಿ ಮಾಡುವುದರಿಂದ ಉಪಾಯಪದ್ಧತಿಯನ್ನು ಹೇಗೆ ಮಾಡಬೇಕು ಎಂಬುದರ ಅಭ್ಯಾಸವಾಗುವುದು ಮತ್ತು ಅದರಲ್ಲಿನ ಸೂಕ್ಷ್ಮ ವಿಷಯಗಳು ಸಹ ಗಮನಕ್ಕೆ ಬರುವವು. ಇದರಿಂದ ಆಪತ್ಕಾಲದಲ್ಲಿ ಬರುವ ರೋಗಗಳನ್ನು ಪ್ರತ್ಯಕ್ಷ ಎದುರಿಸಲು ಆತ್ಮವಿಶ್ವಾಸ ನಿರ್ಮಾಣವಾಗಲು ಸಹಾಯವಾಗುವುದು. ಈ ವಿಷಯದಿಂದ ವಾಚಕರಿಗೆ ಉಪಾಯಪದ್ಧತಿಯ ಪರಿಚಯವಾಗುತ್ತದೆ. ಸವಿಸ್ತಾರ ಮಾಹಿತಿಯನ್ನು ಗ್ರಂಥದಲ್ಲಿ ನೀಡಲಾಗಿದೆ. ಆ ಗ್ರಂಥವನ್ನು ವಾಚಕರು ಅವಶ್ಯವಾಗಿ ಸಂಗ್ರಹಿಸಿಡಬೇಕು.

ಭಾಗ ೨

೨. ಉಪಾಯ ಮಾಡಲು ಆವಶ್ಯಕ ಮುದ್ರೆ ಮತ್ತು ನಾಮಜಪ ಹುಡುಕುವುದು

೨ ಅ. ಪಂಚಮಹಾಭೂತಗಳು ಮತ್ತು ಅವುಗಳಿಗೆ ಸಂಬಂಧಿಸಿದ ದೇವತೆಗಳ ನಾಮಜಪ/ ಬೀಜಮಂತ್ರ, ಅಂಕಜಪ ಮತ್ತು ಮುದ್ರೆಗಳು.

೨ ಅ ೧. ಮುದ್ರೆಯನ್ನು ಹುಡುಕುವ ಪದ್ಧತಿ :

ಕನಿಷ್ಠ ಮಟ್ಟದ ಕೆಟ್ಟ ಶಕ್ತಿಗಳ ತೊಂದರೆಯಿದ್ದರೆ ಕಿರುಬೆರಳು ಮತ್ತು ಅನಾಮಿಕಾ (ಉಂಗುರಬೆರಳು) ಇವುಗಳಿಗೆ ಸಂಬಂಧಿಸಿದ ಮುದ್ರೆಗಳನ್ನು ಮಾಡ ಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೆಟ್ಟ ಶಕ್ತಿಗಳ ಪ್ರಕೋಪವಿದೆ, ಅಂದರೆ ವರಿಷ್ಠ ಮಟ್ಟದ ಕೆಟ್ಟ ಶಕ್ತಿಗಳ ಆಕ್ರಮಣಗಳಾಗುತ್ತಿವೆ. ಆದ್ದರಿಂದ ಸದ್ಯದ ಸ್ಥಿತಿಯಲ್ಲಿ ಕಿರುಬೆರಳು ಮತ್ತು ಅನಾಮಿಕಾ ಇವುಗಳಿಗೆ ಸಂಬಂಧಿಸಿದ ಮುದ್ರೆಗಳನ್ನು ಮಾಡುವುದು ಅಷ್ಟೊಂದು ಉಪಯುಕ್ತವಾಗಿಲ್ಲ. ವರಿಷ್ಠ ಮಟ್ಟದ ಕೆಟ್ಟ ಶಕ್ತಿಗಳ ತೊಂದರೆಗಳನ್ನು ದೂರಗೊಳಿಸಲು ಮುಂದುಮುಂದಿನ ತತ್ತ್ವಗಳ ಮುದ್ರೆಗಳನ್ನೂ ಮಾಡುವುದು ಆವಶ್ಯಕವಾಗಿರುತ್ತದೆ.

ಮುದ್ರೆಯನ್ನು ಹುಡುಕುವಾಗ

೧. ಹೆಬ್ಬೆರಳಿನ ತುದಿಯನ್ನು ಬೆರಳಿನ ತುದಿಗೆ ತಗಲಿಸುವುದು
೨. ಹೆಬ್ಬೆರಳಿನ ತುದಿಯನ್ನು ಬೆರಳಿನ ಮೂಲಕ್ಕೆ ತಗಲಿಸುವುದು
೩. ಬೆರಳಿನ ತುದಿಯನ್ನು ಅಂಗೈಗೆ ತಗಲಿಸುವುದು ಮತ್ತು
೪. ತರ್ಜನಿಯ ತುದಿಯನ್ನು ಹೆಬ್ಬೆರಳಿನ ಮೂಲಕ್ಕೆ ತಗಲಿಸುವುದು

ಈ ಕ್ರಮದಲ್ಲಿ ಪ್ರಯೋಗವನ್ನು ಮಾಡಬೇಕು. ಮೊದಲು ಮಧ್ಯದ ಬೆರಳು, ನಂತರ ತರ್ಜನಿ (ತೋರುಬೆರಳು) ಮತ್ತು ಕೊನೆಗೆ ಹೆಬ್ಬೆರಳು ಈ ಕ್ರಮದಲ್ಲಿ ಮುದ್ರೆಯನ್ನು ಹುಡುಕಬೇಕು. ಪ್ರತಿಯೊಂದು ಮುದ್ರೆಯನ್ನು ಸಾಮಾನ್ಯವಾಗಿ ೨೦-೩೦ ಸೆಕೆಂಡುಗಳಷ್ಟು ಮಾಡಿ ನೋಡಬೇಕು. ಒಂದು ಮುದ್ರೆಯನ್ನು ಮಾಡಿದ ನಂತರ ೩-೪ ಸೆಕೆಂಡ್ ತಡೆಯಬೇಕು ಮತ್ತು ಅನಂತರ ಮುಂದಿನ ಮುದ್ರೆಯನ್ನು ಮಾಡಬೇಕು. ಒಂದೊಂದು ಮುದ್ರೆಯನ್ನು ಮಾಡಿ ನೋಡುವಾಗ ಯಾವ ಮುದ್ರೆಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಶ್ವಾಸವು ತಡೆಯುತ್ತದೆಯೋ ಅಥವಾ ಶ್ವಾಸವು ಸಿಲುಕಿಕೊಂಡಂತೆ ಆಗುತ್ತದೆಯೋ, ಆ ಮುದ್ರೆಯು ಉಪಾಯಕ್ಕೆ ಉಪಯುಕ್ತವಾಗಿರುತ್ತದೆ.

೨ ಅ ೨. ಮುದ್ರೆಯ ವಿಧಗಳು ಮತ್ತು ಸಗುಣ-ನಿರ್ಗುಣ ಸ್ತರ


೨ ಅ ೩. ತೊಂದರೆಗೆ ಸಂಬಂಧಿಸಿದ ಮಹಾಭೂತಗಳಿಂದ ಉಪಾಯವಾಗಲು ಪ್ರಯೋಗದಿಂದ ಬಂದ ಮುದ್ರೆ
ಮತ್ತು ಅದಕ್ಕನುಸಾರ ಮಾಡಬೇಕಾದ ನಾಮಜಪ / ಬೀಜಮಂತ್ರದ ಜಪ

(ದೇವತೆಯ ನಾಮಜಪಕ್ಕೆ ‘ಓಂ ಅಥವಾ ‘ಮಹಾ ಸೇರಿಸುವುದರ ಬಗೆಗಿನ ಸೂಚನೆಯನ್ನು ಭಾಗ ೩ ರಲ್ಲಿನ ಅಂಶ ‘೪ ಇ ಯಲ್ಲಿ ಕೊಡಲಾಗುವುದು.)

೨ ಅ ೪. ಪ್ರಯೋಗದಿಂದ ಹುಡುಕಿದ ಉಪಾಯವನ್ನು ೨ ಗಂಟೆಗಳ ಕಾಲ ಮಾಡಿಯೂ ಲಾಭವಾಗದಿದ್ದರೆ ಏನು ಮಾಡಬೇಕು ? : ಕೆಲವೊಮ್ಮೆ ಯಾರಿಗಾದರೂ ತೊಂದರೆ ತುಂಬಾ ಹೆಚ್ಚಾಗಿದ್ದರೆ, ಅವನಿಗೆ ನ್ಯಾಸ ಮತ್ತು ಮುದ್ರೆಯನ್ನು ಹುಡುಕಲು ಕಠಿಣವಾಗುತ್ತದೆ. ಹಾಗೆಯೇ ಕೆಲವೊಮ್ಮೆ ಹುಡುಕಿದ ನ್ಯಾಸ, ಮುದ್ರೆ ಮತ್ತು ಅದಕ್ಕನುಸಾರ ಬಂದ ನಾಮಜಪವನ್ನು ೨ ಗಂಟೆಗಳಷ್ಟು ಮಾಡಿಯೂ ಲಾಭವಾಗುವುದಿಲ್ಲ ಮತ್ತು ಪುನಃ ಪುನಃ ಪ್ರಯೋಗ ಮಾಡಲು ಸಮಯ ಕೊಡ ಬೇಕಾಗುತ್ತದೆ. ಇದನ್ನು ತಡೆಗಟ್ಟಲು ಮುಂದಿನಂತೆ ಮಾಡಬೇಕು.

ಅ. ಪ್ರಯೋಗದಲ್ಲಿ ಹುಡುಕಿದ ಉಪಾಯವನ್ನು ೨ ಗಂಟೆಗಳಷ್ಟು ಮಾಡಿದ ನಂತರ ಲಾಭವಾಗದಿದ್ದರೆ, ‘ಇನ್ನೂ ೧-೨ ಗಂಟೆ ಉಪಾಯ ಮಾಡಿದರೆ ಲಾಭವಾಗಬಹುದೇ ? ಎಂದು ಧ್ಯಾನದಲ್ಲಿ ಅಥವಾ ಈಶ್ವರನಿಗೆ ಪ್ರಶ್ನೆಯನ್ನು ಕೇಳಬೇಕು. ಉತ್ತರ ‘ಹೌದು ಎಂದು ಬಂದಲ್ಲಿ ಅದೇ ಉಪಾಯವನ್ನು ಮುಂದುವರಿಸ ಬೇಕು. ಅದೇ ಉಪಾಯವನ್ನು ೧-೨ ಗಂಟೆಗಳಷ್ಟು ಮಾಡಿಯೂ ಪುನಃ ಲಾಭವಾಗದಿದ್ದಲ್ಲಿ, ಮುಂದಿನಂತೆ ಉಪಾಯವನ್ನು ಮಾಡಬೇಕು. ಉತ್ತರ ‘ಇಲ್ಲ ಎಂದು ಬಂದರೂ ಮುಂದಿನಂತೆ ಉಪಾಯ ಮಾಡಬೇಕು.

ಆ. ನ್ಯಾಸವನ್ನು ಮಧ್ಯದ ಬೆರಳಿನಿಂದ, ಅಂದರೆ ತೇಜತತ್ತ್ವದಿಂದ ಮಾಡುತ್ತಿದ್ದಲ್ಲಿ ಅದರ ಬದಲು ಮುಂದಿನ, ಅಂದರೆ ವಾಯುತತ್ತ್ವಕ್ಕೆ ಸಂಬಂಧಿಸಿದ ತರ್ಜನಿಯಿಂದ ಮಾಡಬೇಕು. ಅಂದರೆ ‘ಹೆಬ್ಬೆರಳಿನ ತುದಿಯನ್ನು ತರ್ಜನಿಯ ಮೂಲಕ್ಕೆ ತಗಲಿಸುವ ಮುದ್ರೆಯನ್ನು ಮಾಡಬೇಕು. ಆ ಸಮಯದಲ್ಲಿ ಅಗ್ನಿದೇವ ಅಥವಾ ಸೂರ್ಯದೇವನ ಜಪದ ಬದಲು ಹನುಮಂತ ಅಥವಾ ವಾಯುದೇವನ ನಾಮಜಪ ಮಾಡಬೇಕು.

ಇ. ನ್ಯಾಸವನ್ನು ತರ್ಜನಿಯಿಂದ, ಅಂದರೆ ವಾಯುತತ್ತ್ವದಿಂದ ಮಾಡುತ್ತಿದ್ದಲ್ಲಿ ಅದರ ಬದಲು ಮುಂದಿನ, ಅಂದರೆ ಆಕಾಶತತ್ತ್ವಕ್ಕೆ ಸಂಬಂಧಿಸಿದ ಹೆಬ್ಬೆರಳಿನಿಂದ ಮಾಡಬೇಕು. ಅಂದರೆ ‘ತರ್ಜನಿಯ ತುದಿಯನ್ನು ಹೆಬ್ಬೆರಳಿನ ಮೂಲಕ್ಕೆ ತಗಲಿಸುವ ಮುದ್ರೆಯನ್ನು ಮಾಡಬೇಕು. ಈ ಸಮಯದಲ್ಲಿ ಹನುಮಂತ ಅಥವಾ ವಾಯುದೇವನ ನಾಮಜಪ ಮಾಡುವ ಬದಲು ಆಕಾಶದೇವನ ನಾಮಜಪ ಮಾಡಬೇಕು.

ಈ. ಆಕಾಶದೇವತೆಯ ಜಪವನ್ನು ಮೇಲಿನಂತೆ ನ್ಯಾಸ ಮಾಡಿಯೂ ಲಾಭವಾಗದಿದ್ದಲ್ಲಿ, ಆಕಾಶದೇವನ ಜಪವನ್ನು ನ್ಯಾಸ ಮಾಡದೇ ಮಾಡಬೇಕು. ಈ ಸಮಯದಲ್ಲಿ ಮುದ್ರೆಯನ್ನು ಮೇಲಿನಂತೆಯೇ ಮಾಡಬೇಕು.

ಉ. ಆಕಾಶದೇವನ ಜಪವನ್ನು ಅಂಶ ‘ಈ ಯಲ್ಲಿ ಕೊಟ್ಟಂತೆ ೫-೬ ದಿನಗಳ ವರೆಗೆ ಮಾಡಿಯೂ ಲಾಭವಾಗದಿದ್ದಲ್ಲಿ ಸದ್ಯದ ಕಾಲಕ್ಕನುಸಾರ ಆವಶ್ಯಕವಾದ ಶ್ರೀಕೃಷ್ಣನ ಜಪವನ್ನು ಮಾಡಬೇಕು. ಆ ಸಮಯದಲ್ಲಿ ಮಧ್ಯದ ಬೆರಳು ಮತ್ತು ಹೆಬ್ಬೆರಳು ಇವುಗಳ ತುದಿಗಳನ್ನು ಪರಸ್ಪರ ಜೋಡಿಸಿ, ಒಂದು ಕೈಯಿಂದ ಮಣಿಪುರಚಕ್ರದ ಮೇಲೆ ನ್ಯಾಸ ಮಾಡಬೇಕು ಮತ್ತು ಇನ್ನೊಂದು ಕೈಯಿಂದ ಮುದ್ರೆ ಮಾಡಬೇಕು. ಆಕಾಶದೇವನ ನಾಮಜಪವು ನಿರ್ಗುಣ ಸ್ತರದ್ದಾಗಿದೆ ಮತ್ತು ಶ್ರೀಕೃಷ್ಣನ ನಾಮಜಪವು ನಿರ್ಗುಣ-ಸಗುಣ ಸ್ತರದ್ದಾಗಿದೆ. ಕೆಟ್ಟ ಶಕ್ತಿಗಳ ಆಕ್ರಮಣಗಳು ಕೆಲವು ಸಲ ಹೆಚ್ಚಿನ ಪ್ರಮಾಣದಲ್ಲಿ ಸಗುಣ ಸ್ತರದಲ್ಲಿ ಮತ್ತು ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ನಿರ್ಗುಣ ಸ್ತರದಲ್ಲಿ ಆಗುತ್ತಿರುತ್ತವೆ. ಆದ್ದರಿಂದ ಆವಶ್ಯಕತೆಗನುಸಾರ ಆಕಾಶದೇವ ಅಥವಾ ಶ್ರೀಕೃಷ್ಣನ ಜಪ ಮತ್ತು ಆವಶ್ಯಕತೆ ಗೊತ್ತಾಗದಿದ್ದರೆ ಒಮ್ಮೆ ಆಕಾಶದೇವ ಮತ್ತು ಒಮ್ಮೆ ಶ್ರೀಕೃಷ್ಣನ ನಾಮಜಪವನ್ನು ಒಂದರನಂತರ ಒಂದು ಮಾಡುವುದು ಉಪಯುಕ್ತವಾಗಿದೆ. ಪಂಚತತ್ತ್ವಗಳ ನಾಮಜಪ ಮಾಡುವಾಗ ಭಾವಜಾಗೃತಿಯಾಗುವುದು ಕಠಿಣವಾಗುತ್ತದೆ. ತದ್ವಿರುದ್ಧ ಶ್ರೀಕೃಷ್ಣನ ನಾಮಜಪ ಮಾಡುವಾಗ ಸುಲಭವಾಗಿ ಭಾವಜಾಗೃತಿಯಾಗಬಹುದು. ಇದರಿಂದ ನಾಮಜಪ ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

೨ ಆ. ಉಚ್ಚ ದೇವತೆಗಳ ಮತ್ತು ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪ ಮತ್ತು ಮುದ್ರೆ

೨ ಆ ೧. ನಾಮಜಪ ಹುಡುಕುವ ಪದ್ಧತಿ : ಅಂಶ ‘೨ ಆ ೧ ಅರಲ್ಲಿ ಕೊಟ್ಟಿರುವ ನಾಮಜಪಗಳಲ್ಲಿನ ಮೊದಲ ನಾಮಜಪವನ್ನು ೧-೨ ನಿಮಿಷಗಳ ಕಾಲ ಮಾಡಿ ನೋಡಬೇಕು ಮತ್ತು ಅದನ್ನು ಮಾಡುವಾಗ ‘ಶ್ವಾಸ ನಿಲ್ಲುತ್ತದೆಯೇ ಅಥವಾ ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುತ್ತದೆಯೇ ಎಂಬುದರ ನಿರೀಕ್ಷಣೆಯನ್ನು ಮಾಡಬೇಕು. ಹೀಗೆ ಮುಂದು ಮುಂದಿನ ನಾಮಜಪಗಳನ್ನು ಮಾಡಿ ನೋಡಬೇಕು. ಯಾವ ನಾಮಜಪ ಮಾಡುವಾಗ ಶ್ವಾಸ ನಿಲ್ಲುತ್ತದೆಯೋ ಅಥವಾ ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುವ ತೀವ್ರತೆ ಹೆಚ್ಚಿರುತ್ತದೆಯೋ, ಆ ನಾಮಜಪವು ಉಪಾಯಕ್ಕೆ ಎಲ್ಲಕ್ಕಿಂತ ಹೆಚ್ಚು ಆವಶ್ಯಕವಾಗಿದೆ ಎಂದು ತಿಳಿದುಕೊಳ್ಳಬೇಕು.

೨ ಆ ೧ ಅ. ಉಪಾಯಕ್ಕೆ ಆವಶ್ಯಕವಿರುವ ನಾಮಜಪ

೧. ಕುಲದೇವತೆ, ಉಪಾಸ್ಯದೇವತೆ ಮತ್ತು ಸಪ್ತದೇವತೆಗಳು (ಶ್ರೀರಾಮ, ಮಾರುತಿ, ಶಿವ, ಶ್ರೀ ದುರ್ಗಾದೇವಿ, ಶ್ರೀ ಗಣಪತಿ, ದತ್ತ ಮತ್ತು ಶ್ರೀಕೃಷ್ಣ) ಈ ದೇವತೆಗಳ ನಾಮಜಪಗಳಲ್ಲಿನ ಪ್ರತಿಯೊಂದು ನಾಮಜಪವನ್ನು ಮಾಡಿ ನೋಡಬೇಕು. ಹೆಚ್ಚಿನ ದೇವತೆಗಳ ನಾಮಜಪಕ್ಕೆ ಪ್ರಾರಂಭದಲ್ಲಿ ‘ಶ್ರೀ ಸೇರಿಸಲಾಗುತ್ತದೆ, ಉದಾ. ಶ್ರೀ ಗಣೇಶಾಯ ನಮಃ | ಪ್ರಯೋಗ ಮಾಡುವಾಗ ಮೊದಲು ‘ಶ್ರೀ ಸೇರಿಸಿದ ನಾಮಜಪಗಳನ್ನು ಮಾಡಿ ನೋಡಬೇಕು. ಯಾವುದೇ ನಾಮಜಪದಿಂದ ಏನೂ ಅರಿವಾಗದಿದ್ದರೆ ಪ್ರತಿಯೊಂದು ನಾಮಜಪದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಒಂದು ‘ಓಂ ಸೇರಿಸಿ ನಾಮಜಪ ಮಾಡಿ ನೋಡಬೇಕು. ಹೀಗೆ ಮಾಡಿಯೂ ಏನೂ ಅರಿವಾಗದಿದ್ದರೆ ನಾಮಜಪದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಎರಡು ‘ಓಂ ಗಳನ್ನು ಸೇರಿಸಿ ನಾಮಜಪ ಮಾಡಿ ನೋಡಬೇಕು.

೨. ಶೂನ್ಯ, ಮಹಾಶೂನ್ಯ, ನಿರ್ಗುಣ ಮತ್ತು ಓಂ ಇವೆಲ್ಲವೂ ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪಗಳಾಗಿವೆ. ಈ ನಾಮಜಪಗಳು ನಿರ್ಗುಣಕ್ಕೆ ಸಂಬಂಧಿಸಿದ್ದರೂ, ಕ್ರಮವಾಗಿ ಅವು ಹೆಚ್ಚೆಚ್ಚು ನಿರ್ಗುಣಕ್ಕೆ ಸಂಬಂಧಿಸಿವೆ. ಆದ್ದರಿಂದ ಈ ನಾಮಜಪಗಳಲ್ಲಿನ ಒಂದೊಂದು ನಾಮಜಪವನ್ನು ಮೇಲೆ ನೀಡಿದ ಕ್ರಮದಲ್ಲಿಯೇ ಮಾಡಿ ನೋಡಬೇಕು.

೨ ಆ ೨. ಮುದ್ರೆಗಳನ್ನು ಹುಡುಕುವ ಪದ್ಧತಿ : ಅಂಶ ‘೨ ಅ ೧ ನೋಡಿ.

೩. ಪ್ರಾಣಶಕ್ತಿಯ ಪ್ರವಾಹದಲ್ಲಿನ ಅಡಚಣೆಗಳಿಗೆ ಉಪಾಯ ಮಾಡುವುದು.

೩ ಅ. ನ್ಯಾಸವನ್ನು ಹೇಗೆ ಮಾಡಬೇಕು ? : ಪ್ರಯೋಗದಿಂದ ಪ್ರಾಣಶಕ್ತಿಯ ಪ್ರವಾಹದಲ್ಲಿನ ಅಡಚಣೆಯ ಸ್ಥಾನ, ಹಾಗೆಯೇ ಮುದ್ರೆ ಮತ್ತು ನಾಮಜಪವನ್ನು ಹುಡುಕಿದ ನಂತರ ಅಡೆತಡೆಗಳಿರುವ ಜಾಗದಲ್ಲಿ ನಾಮಜಪ ಮಾಡುತ್ತಾ ಉಪಾಯಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ನ್ಯಾಸವನ್ನು ಹೇಗೆ ಮಾಡಬೇಕು ಎಂಬುದನ್ನು ಅರಿತುಕೊಳ್ಳುವುದು ಆವಶ್ಯಕವಾಗಿದೆ. ಮುದ್ರೆಗಳ ನ್ಯಾಸವನ್ನು ಮುಂದಿನಂತೆ ಮಾಡಬೇಕು.

೩ ಆ. ಉಪಾಯ ಮಾಡುವ ಪದ್ಧತಿ

೩ ಆ ೧. ನ್ಯಾಸದ ಸ್ಥಳದಲ್ಲಿ ಬೆರಳುಗಳನ್ನು ಮೇಲೆ-ಕೆಳಗೆ ಒಯ್ದು ಉಪಾಯ ಮಾಡಬೇಕು

೩ ಆ ೧ ಅ. ತತ್ತ್ವ : ನ್ಯಾಸದ ಸ್ಥಳದಲ್ಲಿ ಬೆರಳುಗಳನ್ನು ಕೆಳಗಿನಿಂದ ಮೇಲೆ ಅಥವಾ ಮೇಲಿನಿಂದ ಕೆಳಗೆ ಒಯ್ದು ಉಪಾಯದ ದಿಶೆಯನ್ನು ನಿರ್ಧರಿಸಬೇಕು ಮತ್ತು ಅದಕ್ಕನುಸಾರ ಉಪಾಯ ಮಾಡಬೇಕು.

೩ ಆ ೧ ಆ. ಕೃತಿ

ಸೂಚನೆ : ಹೆಬ್ಬೆರಳನ್ನು ಬಿಟ್ಟು ಉಳಿದ ಬೆರಳುಗಳನ್ನು ಅಡಚಣೆಯ ಸ್ಥಾನದಲ್ಲಿ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಮೇಲಿನಿಂದ ಕೆಳಗೆ ಅಥವಾ ಕೆಳಗಿನಿಂದ ಮೇಲೆ ಒಯ್ಯುವಾಗ ಯಾವ ಕ್ರಿಯೆಯ ಸಮಯದಲ್ಲಿ ಶ್ವಾಸ ಸಿಲುಕಿದಂತಾಗುತ್ತದೆಯೋ, ಅದರಿಂದ ನಮಗೆ ಉಪಾಯ ಮಾಡುವ ದಿಕ್ಕು ತಿಳಿಯುತ್ತದೆ. ಮುಂದೆ ನೀಡಿದ ಲೇಖನ ದಲ್ಲಿ ಎಲ್ಲಿ ಉಪಾಯಗಳ ದಿಕ್ಕನ್ನು ನಿರ್ಧರಿಸುವ ದೃಷ್ಟಿಯಿಂದ ‘ಬೆರಳು ಗಳನ್ನು ಮೇಲೆ-ಕೆಳಗೆ ಮಾಡಿರಿ ಎಂದು ಉಲ್ಲೇಖವಿದೆಯೋ, ಅಲ್ಲಿ ‘ಹೆಬ್ಬೆರಳನ್ನು ಬಿಟ್ಟು ಇತರ ಬೆರಳುಗಳನ್ನು ಮೇಲೆ-ಕೆಳಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕು.

ಎಲ್ಲಿ ‘ಉಪಾಯವನ್ನು ಮಾಡುವ ದೃಷ್ಟಿಯಿಂದ ಬೆರಳುಗಳನ್ನು ಮೇಲೆ-ಕೆಳಗೆ ಮಾಡಿರಿ, ಎಂಬ ಉಲ್ಲೇಖವಿದೆಯೋ, ಅಲ್ಲಿ ‘ನ್ಯಾಸ ಮಾಡಲು ಉಪಯೋಗಿಸುವ ಬೆರಳುಗಳ ತುದಿ, ಎರಡು ಬೆರಳುಗಳನ್ನು ಜೋಡಿಸಿದಾಗ ಆಗುವ ತುದಿ ಅಥವಾ ಅಂಗೈಯನ್ನು ಅಡೆ ತಡೆಯ ಜಾಗದಲ್ಲಿ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಮೇಲೆ-ಕೆಳಗೆ ಮಾಡಿ ಉಪಾಯ ಮಾಡಬೇಕಾಗಿದೆ ಎಂದು ತಿಳಿದುಕೊಳ್ಳಬೇಕು. ನ್ಯಾಸ ಮಾಡಲು ಉಪಯೋಗಿಸುವ ಬೆರಳುಗಳ ಬಗೆಗಿನ ಮಾಹಿತಿಯನ್ನು ಅಂಶ ‘೩ ಅದಲ್ಲಿ ಕೊಡಲಾಗಿದೆ.

೧. ನ್ಯಾಸದ ಸ್ಥಾನದಲ್ಲಿ ಬೆರಳುಗಳನ್ನು ಕೆಳಗಿನಿಂದ ಮೇಲೆ ಒಯ್ಯು ವಾಗ ಶ್ವಾಸ ಸಿಲುಕಿದಂತಾದರೆ ಆ ಜಾಗದಲ್ಲಿ ಬೆರಳುಗಳನ್ನು ೪-೫ ಸೆಂ.ಮೀ.ನಷ್ಟು ಭಾಗದಲ್ಲಿ ಕೆಳಗಿನಿಂದ ಮೇಲೆ ಸರಿದಾಡಿಸಬೇಕು.

೨. ಬೆರಳುಗಳನ್ನು ಮೇಲಿನಿಂದ ಕೆಳಗೆ ಒಯ್ಯುವಾಗ ಶ್ವಾಸ ಸಿಲುಕಿ ದಂತಾದರೆ ಆ ಜಾಗದಲ್ಲಿ ಬೆರಳುಗಳನ್ನು ೪-೫ ಸೆಂ.ಮೀ. ಭಾಗದಲ್ಲಿ ಮೇಲಿನಿಂದ ಕೆಳಗೆ ಸರಿದಾಡಿಸಬೇಕು.

೩. ಕೆಲವೊಮ್ಮೆ ಯಾವುದಾದರೊಂದು ನ್ಯಾಸ ಮಾಡುವ ಜಾಗದಲ್ಲಿ ಕೈಯನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ಯುವಾಗ ಎರಡು ಬಾರಿಯೂ ಶ್ವಾಸ ನಿಲ್ಲುತ್ತದೆ. ಆಗ

ಅ. ಕೈಯನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಹೀಗೆ ಮಾಡುತ್ತಿರಬೇಕು.

ಆ. ನ್ಯಾಸವನ್ನು ಮಾಡುವ ಜಾಗದಿಂದ ಎರಡೂ ದಿಕ್ಕುಗಳಿಗೆ ಕೈಯ ಬೆರಳುಗಳನ್ನು ೨-೩ ಸೆಂ.ಮೀ. ಅಂತರದಲ್ಲಿಟ್ಟು ಉಪಾಯ ಮಾಡಬೇಕು.

೪. ಸಹಸ್ರಾರಚಕ್ರದಿಂದ ಹಿಂದಿನ ಬದಿಗೆ ನೇರವಾಗಿ ಎಲ್ಲಿ ಕೂದಲುಗಳ ಭಾಗ ಮುಗಿಯುತ್ತದೆಯೋ, ಅಲ್ಲಿಯವರೆಗೆ ಬೆರಳುಗಳನ್ನು ಒಯ್ಯಬೇಕು, ಹಾಗೆಯೇ ವಿರುದ್ಧ ದಿಕ್ಕಿನಲ್ಲಿಯೂ ಮಾಡಿ ನೋಡಬೇಕು. ಎರಡರಲ್ಲಿ ಯಾವುದನ್ನು ಮಾಡುವಾಗ ಹೆಚ್ಚು ತೊಂದರೆಯೆನಿಸುತ್ತದೆಯೋ, ಅದು ಉಪಾಯದ ದಿಶೆ ಎಂದು ತಿಳಿದು ಅದರಂತೆ ಉಪಾಯ ಮಾಡಬೇಕು.

೩ ಆ ೨. ತೊಂದರೆಯಿರುವ ಇಂದ್ರಿಯಗಳ ಜಾಗದಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ಉಪಾಯ ಮಾಡುವುದು

೩ ಆ ೨ ಅ. ತತ್ತ್ವ : ರೋಗಕ್ಕನುಸಾರ ಇಂದ್ರಿಯದ ಜಾಗದಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ದಿಕ್ಕನ್ನು ನಿರ್ಧರಿಸಬೇಕು ಮತ್ತು ಅದಕ್ಕನುಸಾರ ಉಪಾಯ ಮಾಡಬೇಕು.

೩ ಆ ೨ ಆ. ಕೃತಿ : ಕೆಲವೊಮ್ಮೆ ಕುಂಡಲಿನಿ ಚಕ್ರದ ಮೇಲಿನ ಅಥವಾ ಶರೀರದ ಇತರ ಭಾಗಗಳಲ್ಲಿನ ನ್ಯಾಸದ ಸ್ಥಾನದಲ್ಲಿ ಉಪಾಯ ಮಾಡಿದರೆ ತೊಂದರೆ ದೂರವಾಗಲು ಸಮಯ ತಗಲುತ್ತದೆ, ಉದಾ. ಮೂತ್ರ ವಿಸರ್ಜನೆ ಆಗದಿರುವುದು, ಶೌಚವಾಗದಿರುವುದು, ಕಾಲಿಗೆ ಬಾವು ಬರುವುದು. ಇಂತಹ ಸಮಯದಲ್ಲಿ ತೊಂದರೆಯಿರುವ ಇಂದ್ರಿಯದ ಸ್ಥಾನದಲ್ಲಿ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಬೆರಳುಗಳನ್ನು ತಿರುಗಿಸಿ ಉಪಾಯ ಮಾಡಿದರೆ ತೊಂದರೆಯು ಬೇಗನೇ ದೂರವಾಗಲು ಸಹಾಯವಾಗುತ್ತದೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.


೧. ಕಾಲಿಗೆ ಬಾವು ಬಂದಿದ್ದರೆ ಕಾಲಿನ ಮೇಲೆ ಬೆರಳುಗಳನ್ನು ಕೆಳಗಿನಿಂದ ಮೇಲೆ ಮಂದಗತಿಯಲ್ಲಿ ಒಯ್ಯಬೇಕು.

೨. ಮೂತ್ರವಾಗದಿದ್ದರೆ ಬೆರಳುಗಳನ್ನು ನಾಭಿಯಿಂದ ೨ ಸೆಂ.ಮೀ. ಕೆಳಗೆ ಸ್ವಾಧಿಷ್ಠಾನಚಕ್ರದವರೆಗೆ ಪುನಃ ಪುನಃ ಒಯ್ಯಬೇಕು.

೩. ಶೌಚವಾಗದಿದ್ದರೆ ಹೊಟ್ಟೆಯಲ್ಲಿನ ದೊಡ್ಡ ಕರುಳಿನ ದಿಕ್ಕಿನಲ್ಲಿ, ಅಂದರೆ ಹೊಟ್ಟೆಯ ಬಲಬದಿಯಲ್ಲಿ ಕೆಳಗಿನಿಂದ ಆರಂಭಿಸಿ ಬೆರಳುಗಳನ್ನು ನೇರವಾಗಿ ಮೇಲೆ ಪಕ್ಕೆಲುಬಿನವರೆಗೆ ತರಬೇಕು. ನಂತರ ಬೆರಳುಗಳನ್ನು ನೇರವಾಗಿ ಎಡಬದಿಗೆ ಪಕ್ಕೆಲುಬಿನವರೆಗೆ ಒಯ್ಯ ಬೇಕು. ಅಲ್ಲಿಂದ ಅವುಗಳನ್ನು ನೇರವಾಗಿ ಕೆಳಗೆ ತೆಗೆದುಕೊಂಡು ಗುದದ್ವಾರದ ದಿಕ್ಕಿನಲ್ಲಿ ಒಯ್ಯಬೇಕು. ಈ ಸಂಪೂರ್ಣ ಕೃತಿಯನ್ನು ಪುನಃ ಪುನಃ ಮಾಡಬೇಕು.

೩ ಆ ೩. ತೊಂದರೆಗಳಿಗೆ ಸಂಬಂಧಿಸಿದ ಕುಂಡಲಿನಿಚಕ್ರಗಳ ಅಥವಾ ಇಂದ್ರಿಯಗಳ ಜಾಗದಲ್ಲಿ ನ್ಯಾಸ ಮಾಡುವುದು : ಕುಂಡಲಿನಿಚಕ್ರಗಳ ಜಾಗದಲ್ಲಿ ಮೇಲಿನಿಂದ ಕೆಳಗೆ ಅಥವಾ ಕೆಳಗಿನಿಂದ ಮೇಲೆ ಬೆರಳುಗಳನ್ನು ಒಯ್ದು ನ್ಯಾಸದ ಸ್ಥಾನವನ್ನು ಹುಡುಕಲು ಬರದಿದ್ದಲ್ಲಿ ಅಥವಾ ಹುಡುಕಲು ಸಾಧ್ಯವಿಲ್ಲದಿದ್ದಲ್ಲಿ, ತೊಂದರೆಗೆ ಸಂಬಂಧಿಸಿದ ಕುಂಡಲಿನಿಚಕ್ರಗಳ ಸ್ಥಾನದಲ್ಲಿ, ಹಾಗೆಯೇ ಆ ಸ್ಥಾನದ ೩-೪ ಸೆಂ.ಮೀ. ಮೇಲೆ-ಕೆಳಗೆ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ನ್ಯಾಸವನ್ನು ಮಾಡಬೇಕು. ಆವಶ್ಯಕತೆಯೆನಿಸಿದರೆ ತೊಂದರೆಯಿರುವ ಇಂದ್ರಿಯಗಳ ಜಾಗದಲ್ಲೂ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ನ್ಯಾಸ ಮಾಡಬೇಕು.

೩ ಆ ೪. ಸಹಸ್ರಾರ ಚಕ್ರದ ಜಾಗದಲ್ಲಿ ಐದೂ ಬೆರಳುಗಳನ್ನು ಜೋಡಿಸಿ ಅಥವಾ ಅಂಗೈಯನ್ನಿಟ್ಟು ನ್ಯಾಸ ಮಾಡುವುದು

೩ ಆ ೪ ಅ. ಕೆಟ್ಟ ಶಕ್ತಿಗಳ ತೊಂದರೆಯಿರುವವರು : ತೊಂದರೆಯಿರುವವರು ಸಹಸ್ರಾರಚಕ್ರದ ಜಾಗದಲ್ಲಿ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಐದೂ ಬೆರಳುಗಳನ್ನು ಜೋಡಿಸಿ ಅಥವಾ ಅಂಗೈಯನ್ನಿಟ್ಟು ನ್ಯಾಸ ಮಾಡಿದರೆ ಉಪಾಯವಾಗುತ್ತದೆ.

೩ ಆ ೪ ಆ. ಕೆಟ್ಟ ಶಕ್ತಿಗಳ ತೊಂದರೆಯಿಲ್ಲದವರು : ಇವರು ಸಹಸ್ರಾರಚಕ್ರದ ಜಾಗದಲ್ಲಿ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಐದೂ ಬೆರಳುಗಳನ್ನು ಜೋಡಿಸಿಟ್ಟರೆ ಅವರಿಗೆ ಭಾವಜಾಗೃತಿ ಯಾಗುತ್ತದೆ. ಸಹಸ್ರಾರಚಕ್ರದ ಜಾಗದಲ್ಲಿ ಅಂಗೈಯನ್ನಿಟ್ಟರೆ ಬೆರಳುಗಳನ್ನಿಡುವುದಕ್ಕಿಂತ ಹೆಚ್ಚು ಭಾವಜಾಗೃತಿಯಾಗುತ್ತದೆ.

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೧
ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೩

(ಆಧಾರ : ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ)

BUY : SanatanShop.com/api/868.html

Leave a Comment