ಪಿತೃಲೋಕದ ವ್ಯಾಖ್ಯೆ
ಯಾವ ಲಿಂಗದೇಹಗಳಿಗೆ ಇತರ ಲೋಕಗಳಲ್ಲಿ ಇನ್ನೂ ಸ್ಥಾನ ನಿಗದಿಯಾಗಿಲ್ಲವೋ ಅಥವಾ ಪುನರ್ಜನ್ಮಕ್ಕೆ ಇನ್ನೂ ಕಾಲಾವಧಿ ಇದೆಯೋ ಅಥವಾ ಕೆಲವು ಕರ್ಮದೋಷಗಳಿಂದ ಸ್ವಲ್ಪ ಕಾಲದ ವರೆಗೆ ಸಿಲುಕಿಕೊಂಡಿರುವ ಲಿಂಗದೇಹಗಳು ತಾತ್ಕಾಲಿಕವಾಗಿ ವಾಸಿಸುವ ಸೂಕ್ಷ್ಮ ಲೋಕವೇ ‘ಪಿತೃಲೋಕ’.
ಪಿತೃಲೋಕದ ವಿಧಗಳು ಮುಂದಿನಂತಿದೆ
ಅ. ಸಾಧಕರಿಗೆ ಸಂಬಂಧಿಸಿದ ಪಿತೃಲೋಕ
ಯಾವ ಸಾಧಕರು ಒಂದಿಷ್ಟು ಕಾಲವಾದರೂ ನಿಷ್ಕಾಮ ಅಂದರೆ, ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡಿದ್ದಾರೆಯೋ, ಆದರೆ ಯಾವುದೋ ಕಾರಣಕ್ಕಾಗಿ ಬೇರೆ ಲೋಕಗಳಲ್ಲಿ ಅವರಿಗೆ ಇನ್ನೂ ಸ್ಥಾನ ನಿಗದಿಯಾಗಿಲ್ಲವೋ, ಅಂತಹ ಸಾಧಕರಿಗೆ ಮೃತ್ಯುವಿನ ನಂತರ ‘ಸಾಧಕರಿಗೆ ಸಂಬಂಧಿಸಿದ ಪಿತೃಲೋಕ’ದಲ್ಲಿ ಸ್ಥಾನ ಸಿಗುತ್ತದೆ. ಈ ಲೋಕಕ್ಕೆ ಈಶ್ವರನ ರಕ್ಷಣಾಕವಚ ಇರುವುದರಿಂದ, ಇಲ್ಲಿರುವ ಲಿಂಗದೇಹಗಳು ಅನಿಷ್ಟ ಶಕ್ತಿಗಳಿಂದ ಸುರಕ್ಷಿತವಾಗಿರುತ್ತವೆ. ಈ ಕಾರಣದಿಂದ, ಅನಿಷ್ಟ ಶಕ್ತಿಗಳು ಈ ಲೋಕದ ಲಿಂಗದೇಹಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಲಿಂಗದೇಹಗಳ ರಕ್ಷಣೆಯ ಕಾರ್ಯವು ಅತೀ ಸೂಕ್ಷ್ಮ ಮಟ್ಟದಲ್ಲಿ ನಡೆಯುತ್ತದೆ.
ಆ. ಪುಣ್ಯವಂತ ಜೀವಗಳ ಪಿತೃಲೋಕ
ತಮ್ಮ ಜೀವನದುದ್ದಕ್ಕೂ ಇತರರಿಗೆ ಅನ್ನದಾನ ಮಾಡಿದ, ಗೋಮಾತೆಯ ಸೇವೆ ಮಾಡಿದ, ಹಾಗೂ ಬೇರೆ ಬೇರೆ ರೀತಿಯಲ್ಲಿ ನಿಸ್ವಾರ್ಥವಾಗಿ ಬೇರೆಯವರಿಗೆ ಸಹಾಯ ಮಾಡಿದ ಪುಣ್ಯವಂತ ಲಿಂಗದೇಹಗಳು ಈ ಪಿತೃಲೋಕದಲ್ಲಿ ವಾಸಿಸುತ್ತವೆ.
ಕನಿಷ್ಠ ಪಿತೃಲೋಕ
ತಮ್ಮ ಜೀವನದುದ್ದಕ್ಕೂ ಇತರರಿಗೆ ತೊಂದರೆ ಕೊಡದ, ತಮ್ಮ ಜೀವನವನ್ನು ನಿಯತ್ತಾಗಿ ಬದುಕಿದ ಮತ್ತು ತಕ್ಕ ಮಟ್ಟಿಗೆ ದೇವರಲ್ಲಿ ನಂಬಿಕೆಯಿದ್ದ ಸಜ್ಜನರ ಲಿಂಗದೇಹಗಳು ಈ ಲೋಕದಲ್ಲಿ ಇರುತ್ತವೆ.
ನೀಚ ಪಿತೃಲೋಕ
ತಮ್ಮ ಜೀವನದುದ್ದಕ್ಕೂ ಸಾಧನೆ ಮಾಡದ, ಆದರೆ ಒಂದೆರಡು ಪ್ರಸಂಗಗಳಲ್ಲಿ ಒಳ್ಳೆಯ ಮತ್ತು ದೊಡ್ಡ ಪುಣ್ಯವನ್ನು ತಂದುಕೊಡುವಂತಹ ಕರ್ಮವನ್ನು ಮಾಡಿದವರಿಗೆ ಈ ಲೋಕದಲ್ಲಿ ಸ್ಥಾನ ದೊರೆಯುತ್ತದೆ.
ಪುಣ್ಯವಂತ ಜೀವಗಳ ಪಿತೃಲೋಕ, ಕನಿಷ್ಠ, ಮತ್ತು ನೀಚ ಪಿತೃಲೋಕ ಸೇರಿರುವ ಲಿಂಗದೇಹಗಳ ರಕ್ಷಣೆ ಹೇಗಾಗುತ್ತದೆ?
ಪುಣ್ಯವಂತ ಜೀವಗಳ ಪಿತೃಲೋಕ, ಕನಿಷ್ಠ ಪಿತೃಲೋಕ, ಮತ್ತು ನೀಚ ಪಿತೃಲೋಕದಲ್ಲಿರುವ ಲಿಂಗದೇಹಗಳನ್ನು ರಕ್ಷಿಸಲು ದತ್ತಗುರುಗಳ ಗಣಗಳು ಇರುತ್ತವೆ. ಈ ಗಣಗಳು ಸಣ್ಣ-ಪುಟ್ಟ ಅನಿಷ್ಟ ಶಕ್ತಿಗಳಿಂದ ಇಲ್ಲಿರುವ ಲಿಂಗದೇಹಗಳನ್ನು ರಕ್ಷಿಸುತ್ತವೆ. ಆದರೆ ಅದಕ್ಕಿಂತ ದೊಡ್ಡ ಅನಿಷ್ಟ ಶಕ್ತಿಗಳ ಆಕ್ರಮಣವಾದರೆ, ಈ ಗಣಗಳು ಲಿಂಗದೇಹಗಳನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಗಣಗಳಿಗೆ ತಮ್ಮದೇ ಆದ ಮಿತಿಗಳಿವೆ.
ಪಿತೃಲೋಕದಲ್ಲಿನ ಲಿಂಗದೇಹಗಳ ರಕ್ಷಣೆಗಾಗಿ ಇರುವ ದತ್ತನ ಗಣಗಳ ನಿರ್ಮಿತಿಯ ಪ್ರಕ್ರಿಯೆ
ಸೃಷ್ಟಿಯ ಆರಂಭದಲ್ಲಿ, ಮೊದಲ ಪಿತೃಗಳಲ್ಲಿ ಕೆಲವರು ದತ್ತ ಭಕ್ತರಾಗಿದ್ದರು. ಸೂಕ್ಷ್ಮ ಲೋಕದಲ್ಲಿಯೇ ಉಳಿದು ದತ್ತನ ಸೇವೆ ಮಾಡಬೇಕೆಂಬ ಅವರ ಇಚ್ಛೆಯಿಂದ, ಭಗವಾನ್ ದತ್ತಗುರುಗಳು ಅವರಿಗೆ ತಮ್ಮ ‘ಗಣ’ಗಳನ್ನಾಗಿ ಸ್ಥಾನ ನೀಡಿದರು ಮತ್ತು ಅವರಿಗೆ ಪಿತೃಲೋಕಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರು. ಶಿವನ ಗಣಗಳಿರುವಂತೆಯೇ ದತ್ತನಿಗೂ ಗಣಗಳಿರುತ್ತವೆ. ದತ್ತನ ಗಣಗಳಿಗೆ ಲಿಂಗದೇಹಗಳ ರಕ್ಷಣೆಗೆ ಬೇಕಾದ ಆಧ್ಯಾತ್ಮಿಕ ಸಾಮರ್ಥ್ಯವಿದೆ. ದತ್ತಗುರುಗಳ ಕೃಪೆಯಿಂದ, ಅವು ಸೂಕ್ಷ್ಮ ಲೋಕದಲ್ಲಿ ತಮ್ಮ ವಿಶಿಷ್ಟ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತವೆ.
– ಶ್ರೀ ರಾಮ ಹೊನಪ (ಸೂಕ್ಷ್ಮದ ಮೂಲಕ ಪಡೆದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.
ಆಷಾಢ ಏಕಾದಶಿ
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (13 ನೇ ದಿನದ ಕರ್ಮಗಳ ವರೆಗೆ)
ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)