ಪರಾತ್ಪರ ಗುರು ಡಾ. ಆಠವಲೆಯವರ ಅದ್ವಿತೀಯ ಕಾರ್ಯ ಮತ್ತು ವೈಶಿಷ್ಟ್ಯಗಳ ಸಂಕ್ಷಿಪ್ತ ಪರಿಚಯ !

ಪರಾತ್ಪರ ಗುರು ಡಾ. ಜಯಂತ ಆಠವಲೆ

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರಂತಹ ಉಚ್ಚ ಕೋಟಿಯ ಸಂತರ ಮೇಲೆ ಮಾಧ್ಯಮದವರು ಅತ್ಯಂತ ಹೀನ ಆರೋಪಗಳನ್ನು ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯ ಮೇಲೆ ಇಂದಿನ ವರೆಗೆ ಯಾವುದೇ ಪ್ರಕರಣದಲ್ಲಿ ಆರೋಪ ಪತ್ರವೂ ದಾಖಲಾಗಿಲ್ಲ, ಆದರೂ ‘ಸನಾತನ ಸಂಸ್ಥೆಯ ಸಂಸ್ಥಾಪಕರನ್ನು ಯಾವಾಗ ಬಂಧಿಸುತ್ತಾರೆ’ ? ಎಂಬಂತೆ ಊಹಾ ಪೋಹಗಳನ್ನು ಹುಟ್ಟು ಹಾಕುತ್ತಿದ್ದಾರೆ. ವಸ್ತುನಿಷ್ಠವಾಗಿ ಪರಾತ್ಪರ ಗುರು ಡಾಕ್ಟರರ ಕಾರ್ಯ ನೋಡಿದರೆ, ಈ ಮಾಧ್ಯಮದವರು ಅವರ ಮುಂದೆ ನಿಂತುಕೊಳ್ಳಲು ಕೂಡ ಅಪಾತ್ರರು. ಕಳೆದ ಕೆಲವು ದಿನಗಳಲ್ಲಿ ಮಾಧ್ಯಮದವರು ‘ಡಾ. ಆಠವಲೆ ಯಾರು’ ? ಎಂದು ಬೇರೆ ಬೇರೆ ರೀತಿಯಲ್ಲಿ ಜನರ ದಿಕ್ಕು ತಪ್ಪಿಸಲು ಪ್ರಯತ್ನವನ್ನು ಮಾಡಿದ್ದಾರೆ. ನಾವು ಕೂಡ ಈ ಪ್ರಶ್ನೆಯ ಉತ್ತರವನ್ನು ಸಮಾಜದ ಮುಂದಿಡಲು ಪರಾತ್ಪರ ಗುರು ಡಾಕ್ಟರರ ಸಂಕ್ಷಿಪ್ತ ಪರಿಚಯ, ಅವರು ಸ್ಥಾಪಿಸಿದ ಮತ್ತು ಅವರಿಂದ ಪ್ರೇರಣೆ ಪಡೆದು ಪ್ರಾರಂಭಗೊಂಡ ಸಂಸ್ಥೆ, ಸಂಘಟನೆ ಇತ್ಯಾದಿಗಳ ಕಾರ್ಯದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಓರ್ವ ವ್ಯಕ್ತಿಯಿಂದ ಅಲ್ಪಾವಧಿಯಲ್ಲಿ ಕೇವಲ ರಾಷ್ಟ್ರ-ಧರ್ಮದ ಕಾರ್ಯ ಮಾತ್ರವಲ್ಲ, ಸೂಕ್ಷ್ಮ ಜಗತ್ತಿನ ಸಂದರ್ಭದಲ್ಲಿಯೂ ಸರ್ವವ್ಯಾಪಿ ಕಾರ್ಯವಾಗುವುದು ಅಸಾಧ್ಯವೇ ಆಗಿದೆ ! ಇದರಿಂದಲೇ ಪರಾತ್ಪರ ಗುರು ಡಾಕ್ಟರರ ಅಸಾಧಾರಣತೆ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಅಧಿಕಾರವು ಸ್ಪಷ್ಟವಾಗುತ್ತದೆ. ಇಲ್ಲಿ ನೀಡಿರುವ ಮಾಹಿತಿಯಿಂದ ವಾಚಕರಿಗೆ ಅಧ್ಯಾತ್ಮವನ್ನು ಅರಿತು ಕೊಳ್ಳುವ ಇಚ್ಛೆಯು ನಿರ್ಮಾಣವಾಗಿ ಅವರಿಗೆ ಸಾಧನೆಯನ್ನು ಮಾಡಲು ಸ್ಪೂರ್ತಿದಾಯಕವಾಗಲಿ.

1. ಅಂತರರಾಷ್ಟ್ರೀಯ ಖ್ಯಾತಿ ಪಡೆದ ಸಮ್ಮೋಹನೋಪಚಾರ ತಜ್ಞರು

1 ಅ. 1971 ರಿಂದ 1978 ರ ವರೆಗೆ ಬ್ರಿಟನ್‌ನಲ್ಲಿ ಸಮ್ಮೋಹನ ಉಪಚಾರಪದ್ಧತಿಯ ಮೇಲೆ ಯಶಸ್ವಿ ಸಂಶೋಧನೆ
1 ಅ ಅ. ಸಮ್ಮೋಹನ ಉಪಚಾರಗಳಲ್ಲಿ ನಾವೀನ್ಯಪೂರ್ಣ ಸಂಶೋಧನೆ
1 ಆ. 1982 ರಲ್ಲಿ ‘ಭಾರತೀಯ ವೈದ್ಯಕೀಯ ಸಮ್ಮೋಹನ ಮತ್ತು ಸಂಶೋಧನಾ ಸಂಸ್ಥೆ’ಯ ಸ್ಥಾಪನೆ
1 ಇ. ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನೋಪಚಾರಗಳ ಮೇಲಿನ 6 ಗ್ರಂಥಗಳ ಪ್ರಕಾಶನ

2. ಸಾಧನೆ ಬಗ್ಗೆ ಮಾರ್ಗದರ್ಶನ ಮಾಡಲು
‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಸ್ಥಾಪನೆ (1.8.1991)

2 ಅ. 1995 ರ ವರೆಗೆ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅಧ್ಯಾತ್ಮದ ಅಧ್ಯಯನವರ್ಗಗಳನ್ನು ತೆಗೆದುಕೊಳ್ಳುವುದು, ಗುರುಪೂರ್ಣಿಮಾ ಮಹೋತ್ಸವ ಆಯೋಜಿಸುವುದು ಇತ್ಯಾದಿ
2 ಆ. 1996 ರಿಂದ 1998 ವರೆಗೆ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಜಾಗತಗೊಳಿಸುವ ಸಾಧನೆಯ ಬಗ್ಗೆ ನೂರಾರು ಸಭೆಗಳನ್ನು ತೆಗೆದುಕೊಳ್ಳುವುದು

3. ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕಪಾಯೋಗ’ ಈ ಸಾಧನಾಮಾರ್ಗದ ನಿರ್ಮಿತಿ

3 ಅ. ಸಂಪ್ರದಾಯಗಳಲ್ಲಿ ಇರುವಂತೆ ಎಲ್ಲರಿಗೂ ಒಂದೇ ರೀತಿಯ ಸಾಧನೆಯನ್ನು ಮಾಡಲು ಹೇಳದೇ, ‘ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಸಿದ್ಧಾಂತಕ್ಕನುಸಾರ ಸಾಧನೆಯನ್ನು ಹೇಳಿಕೊಡಲಾಗುತ್ತದೆ.
3 ಆ. ‘ಅಷ್ಟಾಂಗಸಾಧನೆ (ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ಭಾವಜಾಗೃತಿಗಾಗಿ ಪ್ರಯತ್ನ, ಸತ್‌ಗಾಗಿ ತ್ಯಾಗ ಮತ್ತು ಪ್ರೀತಿ) ಇವು ಈ ಸಾಧನಾಮಾರ್ಗದ ಪ್ರಮುಖ ವೈಶಿಷ್ಟ್ಯಗಳಾಗಿವೆ.

4. ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿವಿಧ ವಿಷಯಗಳಲ್ಲಿ
ವಿಪುಲವಾದ ಗ್ರಂಥಗಳ ನಿರ್ಮಿತಿ ಮತ್ತು ಪ್ರಕಾಶನ

ಅಧ್ಯಾತ್ಮ, ಧರ್ಮ, ದೇವತೆ ಗಳು, ಧರ್ಮಜಾಗೃತಿ, ರಾಷ್ಟ್ರರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ಆಗಸ್ಟ್ 2018 ರ ವರೆಗೆ ಸನಾತನದ 310 ಗ್ರಂಥ-ಕಿರು ಗ್ರಂಥಗಳು ಕನ್ನಡ, ಮರಾಠಿ, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಒಡಿಯಾ, ಆಸಾಮಿ, ಗುರುಮುಖಿ ಈ ಭಾರತೀಯ ಭಾಷೆಗಳಲ್ಲಿ ಮತ್ತು ಆಂಗ್ಲ ಮುಂತಾದ 17 ಭಾಷೆಗಳಲ್ಲಿ 73 ಲಕ್ಷದ 19 ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು ಪ್ರಕಾಶಿಸಲಾಗಿದೆ.

 

4 ಅ. ಸನಾತನದ ಗ್ರಂಥಗಳ ಕೆಲವು ಆಯ್ದ ವೈಶಿಷ್ಟ್ಯಗಳು
1. ಕಾಲಾನುಸಾರ ಆವಶ್ಯಕ ಯೋಗ್ಯ ಸಾಧನೆಯನ್ನು ಕಲಿಸುವುದು !
2. ಸಾಧನೆಯಲ್ಲಿ ಬರುವ ಅಡಚಣೆಯನ್ನು ದೂರಗೊಳಿಸಿ ಸಾಧನೆಯ ದಿಶೆ ನೀಡುವ ಮಾರ್ಗದರ್ಶನ !
3. ಅಧ್ಯಾತ್ಮದಲ್ಲಿರುವ ಪ್ರತಿಯೊಂದು ಕೃತಿಯ ಹಿಂದೆ ‘ಏಕೆ ? ಮತ್ತು ಹೇಗೆ ?’ ಇವುಗಳ ಶಾಸ್ತ್ರೀಯ ಉತ್ತರಗಳು !
4. ವಿಜ್ಞಾನಯುಗದಲ್ಲಿ ವಾಚಕರಿಗೆ ಸುಲಭವಾಗಿ ಅರ್ಥವಾಗುವಂತೆ ಆಧುನಿಕ ವೈಜ್ಞಾನಿಕ (ಉದಾ. ಕೋಷ್ಟಕ, ಶೇಕಡಾವಾರು) ಭಾಷೆಯಲ್ಲಿ ಜ್ಞಾನ ! : ಇಂದಿನ ವಿಜ್ಞಾನಯುಗದ ಪೀಳಿಗೆಗೆ ವಿಷಯವನ್ನು ವೈಜ್ಞಾನಿಕ ಭಾಷೆಯಲ್ಲಿ ತಿಳಿಸಿ ಹೇಳಿದರೆ ಆ ವಿಷಯವು ಸುಲಭವಾಗಿ ಅರ್ಥವಾಗುತ್ತದೆ. ಆದುದರಿಂದ ಪರಾತ್ಪರ ಗುರು ಡಾಕ್ಟರರು ಶಾಸ್ತ್ರೀಯ ಭಾಷೆಯಲ್ಲಿ ಗ್ರಂಥಗಳನ್ನು ಬರೆಯುತ್ತಾರೆ. ಈ ಗ್ರಂಥಗಳಲ್ಲಿ ವಿಷಯ ಸ್ಪಷ್ಟವಾಗಿ ಅರ್ಥವಾಗಲು ಆಕೃತಿ, ಕೋಷ್ಟಕ, ಶೇಕಡಾವಾರು, ಸೂಕ್ಷ್ಮಕ್ಕೆ ಸಂಬಂಧಿಸಿದ ಪ್ರಯೋಗಗಳು ಇರುತ್ತವೆ, ಮಾತ್ರವಲ್ಲ ವಿಷಯವನ್ನು ಕ್ರಮಬದ್ಧವಾಗಿ ಮಂಡಿಸಲಾಗುತ್ತದೆ.
4 ಅ. ಶೇಕಡಾವಾರು ಮಾಹಿತಿಯ ಉದಾಹರಣೆ : ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಗುರುಕಪಾಯೋಗದಲ್ಲಿ ಹೇಳಿರುವ ಅಷ್ಟಾಂಗ-ಸಾಧನೆಯ ಘಟಕಗಳ ಮಹತ್ವ

ವ್ಯಷ್ಟಿ ಸಾಧನೆ (ಪ್ರಮಾಣ-ಶೇಕಡಾ) ಸಮಷ್ಟಿ ಸಾಧನೆ (ಪ್ರಮಾಣ-ಶೇಕಡಾ)
1. ಸ್ವಭಾವದೋಷ ನಿರ್ಮೂಲನೆ 50 50
2. ಅಹಂ ನಿರ್ಮೂಲನೆ 10 10
3. ನಾಮಜಪ 10 5
4. ಸತ್ಸಂಗ 10 5
5. ಸತ್ಸೇವೆ 4 11
6. ಭಾವ 6 4
7. ತ್ಯಾಗ 8 7
8. ಪ್ರೀತಿ 2 8
ಒಟ್ಟು 100 100

4 ಆ. ಕ್ರಮಬದ್ಧವಾಗಿ ಮಂಡನೆ : ‘ಸನಾತನದ ಪ್ರತಿಯೊಂದು ಗ್ರಂಥವು ‘ಅಧ್ಯಾತ್ಮ ವಿಶ್ವವಿದ್ಯಾಲಯದ ಪಠ್ಯಪುಸ್ತಕ’ವಾಗಿರುವುದರಿಂದ ಗ್ರಂಥದಲ್ಲಿನ ವಿಷಯಗಳನ್ನು 1 ಅ, 1 ಆ, 1 ಇ, 1 ಈ.. ಹೀಗೆ ಕ್ರಮಬದ್ಧವಾಗಿ ಮಂಡಿಸಲಾಗುತ್ತದೆ.

5. ಕೇವಲ ತಾತ್ತ್ವಿಕ ಮಾಹಿತಿಯನ್ನು ಮಾತ್ರ ನೀಡದೆ ಸಾಧನೆಯನ್ನು ಕೃತಿಯಲ್ಲಿ ತರುವಂತಹ ಮಾರ್ಗದರ್ಶನ !
5 ಅ. ಸಾಧನೆಯನ್ನು ಮಾಡುವುದರಿಂದ ವ್ಯಕ್ತಿಯ ಮೇಲಾಗುವ ಒಳ್ಳೆಯ ಪರಿಣಾಮ; ಆಂಗ್ಲ ಭಾಷೆಯ ಅಕ್ಷರಗಳ ತುಲನೆಯಲ್ಲಿ ದೇವನಾಗರಿ ಅಕ್ಷರಗಳು ಸಾತ್ತ್ವಿಕವಾಗಿರುವುದು; ತೀರ್ಥಕ್ಷೇತ್ರಗಳ ಮಹಾತ್ಮೆ ಇತ್ಯಾದಿ ವಿಷಯಗಳ ಬಗ್ಗೆ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ನಡೆಸಿರುವ ಸಂಶೋಧನೆಗಳ ಸೇರ್ಪಡೆ !

5 ಆ. ಸಾತ್ತ್ವಿಕ ಉಡುಗೆ ತೊಡುಗೆ, ಆಹಾರ ಇತ್ಯಾದಿಗಳಿಂದ ವ್ಯಕ್ತಿಯ ಮೇಲಾಗುವ ಒಳ್ಳೆಯ ಪರಿಣಾಮ ಇತ್ಯಾದಿಗಳ ವಿಷಯದಲ್ಲಿ ಸೂಕ್ಷ್ಮ ಸ್ತರದಲ್ಲಿ ನಡೆಯುವ ಪ್ರಕ್ರಿಯೆಯನ್ನು ತೋರಿಸುವ ಚಿತ್ರಗಳು ಮತ್ತು ಲೇಖನಗಳು !

5 ಇ. ಸನಾತನದ ಅನೇಕ ಗ್ರಂಥಗಳಲ್ಲಿರುವ ಶೇಕಡಾ 20 ರಷ್ಟು ಜ್ಞಾನ ಪಥ್ವಿಯಲ್ಲಿ ಇನ್ನೆಲ್ಲಿಯೂ ಸಿಗದೇ ಇರುವಂತಹ ಅದ್ವಿತೀಯ ಜ್ಞಾನವಾಗಿದೆ !

5. ವ್ಯಾಪಕ ಅಧ್ಯಾತ್ಮಪ್ರಸಾರಕ್ಕಾಗಿ ‘ಸನಾತನ ಸಂಸ್ಥೆಯ’ ಸ್ಥಾಪನೆ (22.3.1999)

5 ಅ. ವ್ಯಕ್ತಿಯೊಬ್ಬರಿಗೆ ಆಗುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಿಗೆ ‘ಪ್ರಾರಬ್ಧ ಮತ್ತು ಕೆಟ್ಟ ಶಕ್ತಿಗಳು ಮೂಲ ಕಾರಣ ಎಂಬುದನ್ನು ತಿಳಿಸುವುದು ಮತ್ತು ಸಾಧನೆಯೇ ಇದಕ್ಕೆ ಶಾಶ್ವತವಾದ ಪರಿಹಾರ ಎಂದು ಮನದಟ್ಟು ಮಾಡುವುದು
5 ಆ. ಜಿಜ್ಞಾಸು ಮತ್ತು ಸಾಧಕರನ್ನು ಸಕಾಮ ಸಾಧನೆಯಲ್ಲಿ ಸಿಲುಕಿಸದೇ ನಿಷ್ಕಾಮ ಸಾಧನೆಯನ್ನು ಕಲಿಸಿ ಈಶ್ವರಪ್ರಾಪ್ತಿಯ ದಿಕ್ಕನ್ನು ತೋರಿಸುವುದು
5 ಆ 1. ವ್ಯಾವಹಾರಿಕ ಲಾಭಕ್ಕಾಗಿ ಅಥವಾ ಅಡಚಣೆಗಳ ವಿಷಯದಲ್ಲಿ ಉಪಾಯಗಳಿಗೆ ಮಹತ್ವ ನೀಡದೆ ಕೇವಲ ಸಾಧನೆಯ ವಿಷಯದಲ್ಲಿ ಆವಶ್ಯಕ ಅಧ್ಯಾತ್ಮಿಕ ಸ್ತರದ ಮಾರ್ಗದರ್ಶನ ಮಾಡುವುದು
5 ಇ. ಸಾಧನೆಯಲ್ಲಿ ಬರುವಂತಹ ಅಡಚಣೆಗಳು ಮತ್ತು ತೊಂದರೆ ಇವುಗಳ ಸಂದರ್ಭದಲ್ಲಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಡಚಣೆಗಳನ್ನು ಹುಡುಕಿ ಅದಕ್ಕನುಸಾರ ಉಪಾಯ ಹೇಳುವುದು
5 ಈ. ಸತ್ಸಂಗ, ಉಪನ್ಯಾಸ ಇತ್ಯಾದಿಗಳ ಆಯೋಜನೆ; ಕುಂಭಮೇಳದಲ್ಲಿ ಅಧ್ಯಾತ್ಮಪ್ರಸಾರ ಮಾಡುವುದು; ಧರ್ಮಪ್ರಸಾರ ಕಾರ್ಯದಲ್ಲಿ ಬರುವಂತಹ ಅಡಚಣೆಗಳು ದೂರವಾಗಲು ಯಜ್ಞ-ಯಾಗ, ಧಾರ್ಮಿಕ ವಿಧಿ ಇತ್ಯಾದಿಗಳನ್ನು ಮಾಡುವುದು; ದೂರಚಿತ್ರವಾಹಿನಿಗಳಲ್ಲಿ ಹಿಂದೂ ಧರ್ಮದ ಪರವಾಗಿ ವಿಷಯವನ್ನು ಮಂಡಿಸುವುದು ಮತ್ತು ಅದಕ್ಕಾಗಿ ವಕ್ತಾರರನ್ನು ತಯಾರಿಸುವ ‘ವಕ್ತಾರ ತರಬೇತಿ ಶಿಬಿರಗಳ ಆಯೋಜನೆ ಇತ್ಯಾದಿ
5 ಉ. ಬುದ್ಧಿಗೆ ಅರ್ಥವಾಗುವಂತಹ ಜ್ಞಾನದ ಆಚೆಗಿನ ಜ್ಞಾನ ಪಡೆಯುವುದು (from known to unknown), ಉದಾ. ‘ಯಾವುದಾದರೊಂದು ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಎಷ್ಟು ಪ್ರಮಾಣದಲ್ಲಿದೆ? ಎಂಬುವುದರ ಬಗ್ಗೆ ಧ್ಯಾನದಲ್ಲಿ ಅಥವಾ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವುದು
5 ಊ. ಸನಾತನ ಸಂಸ್ಥೆಯ ಜಾಲತಾಣ – sanatan.org- ಪ್ರತಿ ತಿಂಗಳು 1 ಲಕ್ಷದ 25 ಸಾವಿರಕ್ಕೂ ಹೆಚ್ಚು ವಾಚಕರಿರುವ ಈ ಜಾಲತಾಣ ಕನ್ನಡ, ಮರಾಠಿ, ಹಿಂದಿ, ಗುಜರಾತಿ, ತಮಿಳು ಮತ್ತು ಆಂಗ್ಲ ಈ 6 ಭಾಷೆಗಳಲ್ಲಿ ಲಭ್ಯವಿದ್ದು 180 ದೇಶಗಳಿಂದ ಇದಕ್ಕೆ ಭೇಟಿ ನೀಡುತ್ತಾರೆ. ಈ ಜಾಲತಾಣದಲ್ಲಿ ಅಧ್ಯಾತ್ಮಶಾಸ್ತ್ರ, ಹಿಂದೂ ಧರ್ಮ, ದೇವತೆಗಳು, ಸಾಧನೆ, ಆಚಾರ ಪಾಲನೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

6. ಈಶ್ವರಪ್ರಾಪ್ತಿಗಾಗಿ ಹಾಗೂ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ
ತನು, ಮನ ಮತ್ತು ಧನಗಳ ತ್ಯಾಗವನ್ನು ಮಾಡುವ
ಸಾವಿರಾರು ಸಾಧಕರನ್ನು ತಯಾರಿಸುವುದು

7. ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿರುವ ಯೋಗ್ಯ ಮಾರ್ಗದರ್ಶನದಿಂದ
ಸಾಧಕರ ಆಧ್ಯಾತ್ಮಿಕ ಕ್ಷಮತೆಯಲ್ಲಿ ವದ್ಧಿಯಾಗುವುದು, ಅವರ ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗುವುದು
ಮತ್ತು ಕೆಲವು ಸಾಧಕರು ಸಂತಪದವಿ (ಗುರುಪದವಿ) ಮತ್ತು ಸದ್ಗುರುಪದವಿಯಲ್ಲಿ ವಿರಾಜಮಾನರಾಗುವುದು.

7 ಅ. ಸಾಧಕರ ಆಧ್ಯಾತ್ಮಿಕ ಕ್ಷಮತೆಯಲ್ಲಿ ವದ್ಧಿಯಾಗುವುದು : ಕೆಲವು ಸಾಧಕರಿಗೆ ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳಲ್ಲಿ ಪಥ್ವಿಯ ಮೇಲೆ ಎಲ್ಲಿಯೂ ಸಿಗದ ಜ್ಞಾನವು ಸೂಕ್ಷ್ಮದಿಂದ ಸಿಗುತ್ತದೆ; ಕೆಲವು ಸಾಧಕರು ಯಾವುದಾದರೊಂದು ವಸ್ತುವಿನ ಅಥವಾ ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಕೂಡ ಮಾಡುತ್ತಾರೆ. (ಅವರಿಗೆ ಆ ಸಮಯದಲ್ಲಿ ಆ ವಸ್ತುವಿನ ಅಥವಾ ಆ ಘಟನೆಯ ಬಗ್ಗೆ ಸೂಕ್ಷ್ಮದಲ್ಲಿ ಜ್ಞಾನ ಸಿಗುತ್ತದೆ). ಕೆಲವು ಸಾಧಕರು ಇನ್ನೊಬ್ಬರ ಆಧ್ಯಾತ್ಮಿಕ ಮಟ್ಟವನ್ನು ಗುರುತಿಸಬಲ್ಲರು. ಕೆಲವು ಸಾಧಕರಿಗೆ ಸೂಕ್ಷ್ಮದಲ್ಲಿನ ಒಳ್ಳೆಯ ಮತ್ತು ಕೆಟ್ಟ ಸ್ಪಂದನಗಳನ್ನು ಗುರುತಿಸಲು ಮತ್ತು ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ಪ್ರಕಟೀಕರಣ (ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ಪ್ರಭಾವದಿಂದ ಆಗುವ ವ್ಯಕ್ತಿಯ ಚಲನವಲನ, ಹಾವಭಾವ, ನಗು, ಮಾತು ಇತ್ಯಾದಿ) ಗುರುತಿಸಲು ಬರುತ್ತದೆ ಮತ್ತು ಕೆಲವು ಸಾಧಕರು ಕೆಟ್ಟ ಶಕ್ತಿಗಳ ಪ್ರಕಟೀಕರಣದ ಮೇಲೆ ಉಪಾಯವನ್ನೂ (ಉದಾ. ಯಾವ ನಾಮಜಪವನ್ನು ಮಾಡಬೇಕು ?) ಮಾಡಬೇಕು ಎಂದು ಹೇಳಬಲ್ಲರು.

7 ಆ. ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುವುದು : ಆಗಸ್ಟ್ 2018 ರ ವರೆಗೆ 85 ಸಾಧಕರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ ಮತ್ತು ಶೇಕಡಾ 60 ಮತ್ತು ಅದಕ್ಕಿಂತಲೂ ಅಧಿಕ ಆಧ್ಯಾತ್ಮಿಕ ಮಟ್ಟವಿರುವ 1,163 ಸಾಧಕರು ಸಂತತ್ವದ ದಿಶೆಯಲ್ಲಿ ಮಾರ್ಗವನ್ನು ಕ್ರಮಿಸುತ್ತಿದ್ದಾರೆ.

ಸನಾತನ ಮತ್ತು ಇತರ ಸಂಪ್ರದಾಯಗಳಲ್ಲಿರುವ ವ್ಯತ್ಯಾಸ !
ಪರಾತ್ಪರ ಗುರು ಡಾಕ್ಟರರು ಅನೇಕ ಸಂತರನ್ನು ಮತ್ತು ಸಾಧಕರನ್ನು ತಯಾರಿಸಿರುವುದರಿಂದ ಪರಾತ್ಪರ ಗುರು ಡಾಕ್ಟರರಂತೆಯೇ ಸನಾತನದ ಸಂತರ ಮತ್ತು ಸಾಧಕರ ಬಗ್ಗೆ ಕೂಡ ಸಾಕಷ್ಟು ಲೇಖನಗಳು ಬರೆಯಲ್ಪಟ್ಟಿವೆ : ಬಹುತೇಕ ಸಂಪ್ರದಾಯಗಳಲ್ಲಿ ಕೇವಲ ಅವರ ಪ್ರಮುಖರ ಬಗ್ಗೆ ಮಾಹಿತಿಯಿರುತ್ತದೆ, ಶಿಷ್ಯರ ಬಗ್ಗೆ ಇರುವುದಿಲ್ಲ. ಪರಾತ್ಪರ ಗುರು ಡಾಕ್ಟರರು ಅನೇಕ ಸಂತರನ್ನು ಮತ್ತು ಸಾಧಕರನ್ನು ತಯಾರಿಸಿರುವುದರಿಂದ ಸನಾತನದ ಸಂತರು ಮತ್ತು ಸಾಧಕರು ಮಾಡುವ ಮಾರ್ಗದರ್ಶನ, ಅವರ ವಿಚಾರಗಳು, ಅವರು ಬರೆದ ಕಾವ್ಯ, ಅವರ ಬಗ್ಗೆ ಇತರ ಸಾಧಕರಿಗೆ ಬಂದ ಅನುಭೂತಿಗಳ ಸಾಕಷ್ಟು ಲೇಖನಗಳು ‘ಸನಾತನ ಪ್ರಭಾತದ ಮಾಧ್ಯಮದಿಂದ ಮುದ್ರಿಸಲಾಗುತ್ತವೆ. ಪರಾತ್ಪರ ಗುರು ಡಾಕ್ಟರರು ಈಗ ಸನಾತನದ ಸಂತರ ಚರಿತ್ರೆಗಳನ್ನು ಕೂಡ ಮುದ್ರಿಸಲಿದ್ದಾರೆ.

8. ಗುರುಕುಲದಂತಹ ‘ಸನಾತನ ಆಶ್ರಮಗಳ ನಿರ್ಮಿತಿ ಮತ್ತು
ಪರಾತ್ಪರ ಗುರು ಡಾ. ಆಠವಲೆ ಇವರ ಪ್ರೇರಣೆಯಿಂದ ಇತರ ಆಶ್ರಮಗಳ ಸ್ಥಾಪನೆ !

ಪರಾತ್ಪರ ಗುರು ಡಾಕ್ಟರರು ರಾಮನಾಥಿಯಲ್ಲಿ (ಗೋವಾ) ತೀರ್ಥಕ್ಷೇತ್ರಕ್ಕೆ ಸಮಾನವಾದ ಚೈತನ್ಯದ ಅನುಭೂತಿಯನ್ನು ನೀಡುವ ಆಶ್ರಮವನ್ನು ನಿರ್ಮಿಸಿದ್ದಾರೆ ಮತ್ತು ಅವರ ಪ್ರೇರಣೆಯಿಂದ ಮಹಾರಾಷ್ಟ್ರದ ಪನವೇಲ್ ಮತ್ತು ಮೀರಜ್‌ನಲ್ಲಿಯೂ ಆಶ್ರಮಗಳ ಸ್ಥಾಪನೆಯಾಗಿದೆ. ಈ ಆಶ್ರಮಗಳಲ್ಲಿ ಮತ್ತು ಇತರ ಸ್ಥಳಗಳನ್ನು ಸೇರಿಸಿ ಸುಮಾರು ಒಂದು ಸಾವಿರ ಪೂರ್ಣವೇಳೆ ಸಾಧಕರು ಸಾಧನೆಯಲ್ಲಿ ತೊಡಗಿದ್ದಾರೆ ಮತ್ತು ಇಲ್ಲಿ ರಾಷ್ಟ್ರ ಮತ್ತು ಧರ್ಮದ ಕಾರ್ಯವು ನಡೆಯುತ್ತಿದೆ.

9. ಸಾಧನೆಯಲ್ಲಿ ಮಾರ್ಗದರ್ಶನ ಮಾಡುವ ಧ್ವನಿಮುದ್ರಿಕೆ (ಆಡಿಯೋ ಸಿ.ಡಿ.) ಮತ್ತು ಧರ್ಮಶಿಕ್ಷಣ ನೀಡುವ 400 ಕ್ಕೂ ಹೆಚ್ಚು ಧ್ವನಿಚಿತ್ರ ಮುದ್ರಿಕೆಗಳ (ವಿಡಿಯೋ ಸಿ.ಡಿ.) ನಿರ್ಮಿತಿ ಹಾಗೂ ರಾಷ್ಟ್ರ ಮತ್ತು ಧರ್ಮ ಜಾಗೃತಿಯನ್ನು ಮಾಡುವ ಕೆಲವು ಕಿರುಚಲನಚಿತ್ರಗಳ ನಿರ್ಮಿತಿ

10. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರೇರಣಾಸ್ಥಾನ
(ನ್ಯಾಸದ ಸ್ಥಾಪನೆ : 22.3.2014)

10. ಅ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಉದ್ದೇಶ : ಈ ವಿಶ್ವವಿದ್ಯಾಲಯದ ಸಂಕಲ್ಪನೆಯು ಹಿಂದಿನ ತಕ್ಷಶಿಲೆ, ನಳಂದಾ ಮುಂತಾದ ವಿದ್ಯಾಪೀಠಗಳಿಗೆ ಸಮಾನವಾಗಿದೆ. ಸಮಗ್ರ ಅಧ್ಯಾತ್ಮದಲ್ಲಿ ಉನ್ನತ ಶಿಕ್ಷಣವನ್ನು ನೀಡುವುದು, ಆಧ್ಯಾತ್ಮಿಕ ಸಂಶೋಧನೆ ಮಾಡುವುದು, ಹಿಂದೂ ಧರ್ಮದ ಪ್ರಸಾರ, ಜಿಜ್ಞಾಸುಗಳಿಗೆ ಸಾಧನೆಯ ಬಗ್ಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವರ ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವುದು, ಇತ್ಯಾದಿಗಳಿಗೆ ಈ ವಿಶ್ವವಿದ್ಯಾಲಯ ಕಟಿಬದ್ಧವಾಗಿದೆ. ಈ ರೀತಿಯ ಶಿಕ್ಷಣವನ್ನು ನೀಡುವ ಒಂದೇ ಒಂದು ವಿದ್ಯಾಪೀಠವು ಇಡೀ ವಿಶ್ವದಲ್ಲಿ ಈಗ ಎಲ್ಲಿಯೂ ಕಾಣಿಸುವುದಿಲ್ಲ !

10 ಆ. ಈಶ್ವರಪ್ರಾಪ್ತಿಯ ದೃಷ್ಟಿಯಿಂದ 14 ವಿದ್ಯೆ ಮತ್ತು 64 ಕಲೆಗಳ ಶಿಕ್ಷಣ : ಈಗ ಚಿತ್ರಕಲೆ, ಮೂರ್ತಿಕಲೆ, ಸಂಗೀತ, ನೃತ್ಯ ಮುಂತಾದ ಕೆಲವು ಕಲೆಗಳ ಮಾಧ್ಯಮದಿಂದ ಸಾಧನೆಯನ್ನು ಮಾಡುವವರಿಗೆ ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಶಿಕ್ಷಣವನ್ನು ನೀಡಲಾಗುತ್ತಿದೆ.

10 ಇ. ಹಿಂದೂ ಸಂಸ್ಕೃತಿಯ ಶ್ರೇಷ್ಠತೆ ಮತ್ತು ಅಧ್ಯಾತ್ಮದ ಮಹತ್ವವನ್ನು ತೋರಿಸುವ ಸಂಶೋಧನೆ ಮತ್ತು ಅದರ ಪ್ರಬಂಧಗಳನ್ನು ರಾಷ್ಟ್ರೀಯ-ಅಂತರರಾಷ್ಟ್ರೀಯ ವಿಜ್ಞಾನ ಪರಿಷತ್ತುಗಳಲ್ಲಿ ಮಂಡಿಸುವುದು : 

ಬ್ಯಾಂಕಾಕ್‌ನಲ್ಲಿ ಶೋಧನಿಬಂಧಗಳನ್ನು ಮಂಡಿಸುತ್ತಿರುವ ಸೌ. ಶ್ವೇತಾ ಕ್ಲಾರ್ಕ್

ಈ ವಿಶ್ವವಿದ್ಯಾಲಯದಿಂದ ‘ಹಿಂದೂ ಧರ್ಮದಲ್ಲಿ ಹೇಳಿರುವಂತೆ ನಾಮಜಪ, ಯಜ್ಞ, ಆಹಾರ, ಉಡುಗೆ-ತೊಡುಗೆ, ಕೇಶವಿನ್ಯಾಸ, ಶ್ರಾದ್ಧ ಇತ್ಯಾದಿಗಳಿಂದ ವ್ಯಕ್ತಿ ಮತ್ತು ವಾತಾವರಣದ ಮೇಲಾಗುವ ಒಳ್ಳೆಯ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಉಪಕರಣ ಮತ್ತು ಗಣಕೀಯ ತಂತ್ರಜ್ಞಾದ ಮೂಲಕ ಸಂಶೋಧನಾತ್ಮಕ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜುಲೈ 2018 ರ ವರೆಗೆ 2,252 ಸಂಶೋಧನಾತ್ಮಕ ಪರೀಕ್ಷೆಗಳನ್ನು ಮಾಡಲಾಗಿದ್ದು ಅದರ ವಿಶ್ಲೇಷಣೆಯನ್ನು ಮಾಡಿ 276 ಸಂಶೋಧನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಅಕ್ಟೋಬರ್ 2016 ರಿಂದ 5.9.2018 ವರೆಗೆ 8 ರಾಷ್ಟ್ರೀಯ ಮತ್ತು 18 ಅಂತರರಾಷ್ಟ್ರೀಯ ವಿಜ್ಞಾನ ಪರಿಷತ್ತುಗಳಲ್ಲಿ ಇಂತಹ ಶೋಧ ನಿಬಂಧಗಳನ್ನು ಮಂಡಿಸಲಾಗಿದೆ.

10 ಈ. ಆಧ್ಯಾತ್ಮಿಕ ಕಾರ್ಯಾಗಾರಗಳ ಆಯೋಜನೆ : ನಿಯಮಿತ ವಾಗಿ ಸಾಧನೆಯನ್ನು ಮಾಡುವ ಸಾಧಕರಿಗೆ ಸಾಧನೆಯ ಬಗ್ಗೆ ಮುಂದಿನ ಹಂತದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಈ ಕಾರ್ಯಾಗಾರಗಳ ಮಾಧ್ಯಮದಿಂದ ಸಾಧಕರಿಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ, ‘ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಮಾಡಬೇಕಾದ ಉಪಾಯ ಇವುಗಳ ಬಗ್ಗೆ ಮಾರ್ಗದರ್ಶನವನ್ನು ಮಾಡಲಾಗುತ್ತದೆ.

10 ಉ. ಪ್ರಾಚೀನ ಕಾಲದಲ್ಲಿ ಜಗತ್ತನ್ನೇ ವ್ಯಾಪಿಸಿದ ಹಿಂದೂ ಸಂಸ್ಕೃತಿಯ ಕುರುಹುಗಳ ಅಧ್ಯಯನಕ್ಕೆ ‘ಅಧ್ಯಯನ ಪ್ರವಾಸಗಳ ಆಯೋಜನೆ : ಪ್ರಾಚೀನ ಕಾಲದಿಂದ ದೇಶ-ವಿದೇಶಗಳಲ್ಲಿಯೂ ಹರಡಿದ ಹಿಂದೂ ಸಂಸ್ಕೃತಿಯ ಕುರುಹುಗಳನ್ನು ಹುಡುಕಿ (ಉದಾ. ಶ್ರೀಲಂಕಾದಲ್ಲಿನ ರಾಮಾಯಣ ಕಾಲದ ಸ್ಥಳಗಳ ಅಧ್ಯಯನ, ಅಂಕೊರ್ ವಾಟ್ (ಕಾಂಬೋಡಿಯಾ) ಮಂದಿರ ಮುಂತಾದ ಪ್ರಾಚೀನ ಮಂದಿರಗಳ ಭೇಟಿ), ಅವುಗಳ ಚಿತ್ರೀಕರಣ ಮತ್ತು ಅದರ ಬಗ್ಗೆ ತಿಳಿದಿರುವವರ ಸಂದರ್ಶನ ಇತ್ಯಾದಿಗಳ ಮಾಧ್ಯಮಗಳಿಂದ ಹಿಂದೂ ಸಂಸ್ಕೃತಿಯ ಪ್ರಾಚೀನತೆ ಮತ್ತು ಮಹಾತ್ಮೆ ಇವುಗಳ ಅಧ್ಯಯನ ಮಾಡುವ ಅಮೂಲ್ಯ ಕಾರ್ಯವನ್ನು ಮಾಡಲಾಗುತ್ತಿದೆ.

ಶ್ರೀ ರಾಮನು ಸ್ಥಾಪಿಸಿದ ಮಾನಾವರಿಯಲ್ಲಿನ ಶಿವಲಿಂಗದ ದರ್ಶನ
ರಾಮಾಯಣಕಾಲದಲ್ಲಿ ರಾವಣನೊಂದಿಗೆ ಯುದ್ಧ ಮಾಡುವ ಮೊದಲು ಪ್ರಭು ಶ್ರೀರಾಮನು ಶ್ರೀಲಂಕಾದಲ್ಲಿ ಮುನ್ನೀಶ್ವರಮ್ ಹತ್ತಿರ ಇರುವ ಸಮುದ್ರದಡ ಮಾನಾವರಿ ಎಂಬ ಸ್ಥಳದಲ್ಲಿ ಶ್ರೀರಾಮನು ಮರಳಿನ ಶಿವಲಿಂಗದ ಸ್ಥಾಪನೆ ಮಾಡಿ ಅದರ ಪೂಜೆಯನ್ನು ಮಾಡಿದನು. ಅಲ್ಲಿಗೆ ಹೋಗಿ ಸನಾತನದ ಸದ್ಗುರು (ಸೌ.) ಅಂಜಲಿ ಗಾಡಗೀಳರವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆಯನ್ನು ಮಾಡಿದರು, ಹಾಗೆಯೇ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕಾಗಿ ಅ ಸ್ಥಾನದಲ್ಲಿನ ಛಾಯಾಚಿತ್ರ ಹಾಗೂ ಚಿತ್ರೀಕರಣವನ್ನು ಸಂಗ್ರಹ ಮಾಡಿದರು.

10 ಊ. ಭವ್ಯ ಗ್ರಂಥಾಲಯದ ನಿರ್ಮಿತಿ : ಈ ಗ್ರಂಥಾಲಯಕ್ಕಾಗಿ ಇದುವರೆಗೆ ಇತಿಹಾಸ, ಸಂಸ್ಕೃತಿ, ಕಲೆ, ಜ್ಯೋತಿಷ್ಯ, ಆಯುರ್ವೇದ, ಸಾಧನೆಯ ವಿವಿಧ ಮಾರ್ಗಗಳು ಇತ್ಯಾದಿ ವಿಷಯಗಳಲ್ಲಿ ನಡೆದಿರುವ ಸಂಶೋಧನಾತ್ಮಕ ಮತ್ತು ವೈಶಿಷ್ಟ್ಯಪೂರ್ಣ 20 ಸಾವಿರಕ್ಕೂ ಹೆಚ್ಚು ಗ್ರಂಥಗಳನ್ನು ಸಂಗ್ರಹಿಸಲಾಗಿದೆ.

10 ಎ. ಆಂಗ್ಲ ಭಾಷೆಯಲ್ಲಿರುವ ಜಾಲತಾಣ : www.spiritual.university (ಈ ವಿಶ್ವವಿದ್ಯಾಲಯದ ಸಂಕೀರ್ಣವು ಮುಂಬರುವ ಕೆಲವೇ ವರ್ಷಗಳಲ್ಲಿ ನಿರ್ಮಾಣವಾಗಲಿದೆ.)

10 ಏ. ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯವಿರುವ ಸಾವಿರಾರು ವಸ್ತುಗಳ ಜೋಪಾಸನೆಗಾಗಿ ಏಕಮೇವಾದ್ವಿತೀಯ ವಸ್ತು ಸಂಗ್ರಹಾಲಯದ ನಿರ್ಮಿತಿಯ ಕಾರ್ಯ : ಈ ಸಂಗ್ರಹಾಲಯಕ್ಕಾಗಿ ಭಾರತ
ದಾದ್ಯಂತ ಇರುವ ತೀರ್ಥಕ್ಷೇತ್ರಗಳ, ದೇವಸ್ಥಾನಗಳ, ಸಂತರ ಮಠ ಮತ್ತು ಸಮಾಧಿಸ್ಥಾನ, ಐತಿಹಾಸಿಕ ಸ್ಥಳ ಮುಂತಾದ ಮಹತ್ವಪೂರ್ಣ ಸ್ಥಳಗಳಿಂದ ಆಧ್ಯಾತ್ಮಿಕ ದೃಷ್ಟಿಯಿಂದ ವೈಶಿಷ್ಟ್ಯಪೂರ್ಣ ವಸ್ತು, ಮಣ್ಣು, ನೀರು ಇತ್ಯಾದಿ ಮತ್ತು ಒಳ್ಳೆಯ ಹಾಗೂ ಕೆಟ್ಟ ಶಕ್ತಿಗಳ ಪರಿಣಾಮವನ್ನು ತೋರಿಸುವ 15 ಸಾವಿರಕ್ಕೂ ಹೆಚ್ಚು ವಸ್ತು, ಸಾವಿರಾರು ಛಾಯಾಚಿತ್ರಗಳು ಮತ್ತು 27 ಸಾವಿರಕ್ಕೂ ಧ್ವನಿಚಿತ್ರಮುದ್ರಿಕೆಗಳು ತಯಾರಿಸಬಹುದಾದ 343 ಟೆರಾಬೈಟ್ ಅಷ್ಟು ಮಾಹಿತಿಯನ್ನು ಇಂದಿನವರೆಗೆ ಸಂಗ್ರಹಿಸಲಾಗಿದೆ.

11. ಕೆಟ್ಟ ಶಕ್ತಿಗಳ ವಿಧಗಳು ಮತ್ತು ಅವುಗಳ ಕಾರ್ಯ
ಇವುಗಳ ಬಗ್ಗೆ ವಿವಿಧ ಅಂಗಗಳಲ್ಲಿ ಸಂಶೋಧನೆ

11 ಅ. ಕೆಟ್ಟ ಶಕ್ತಿಗಳ ಯೋನಿಗಳ ಪೈಕಿ ಪಾತಾಳಗಳಲ್ಲಿನ ‘ಮಾಂತ್ರಿಕ’ ಈ ಬಲಾಢ್ಯ ಕೆಟ್ಟ ಶಕ್ತಿಗಳ ಬಗ್ಗೆ ಜಗತ್ತಿಗೆ ಪರಿಚಯ ಮಾಡಿಸಿ ಕೊಡುವುದು
11 ಆ. ಕೆಟ್ಟ ಶಕ್ತಿಗಳ ಶಕ್ತಿಯನ್ನು ಶೇಕಡವಾರಿನಲ್ಲಿ ಅಳೆಯುವ ಪದ್ಧತಿ
11 ಇ. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ತೊಂದರೆ ಕಡಿಮೆಯಾಗಲು ವಿವಿಧ ಆಧ್ಯಾತ್ಮಿಕ ಪ್ರಯೋಗಗಳನ್ನು ಮಾಡುವುದು, ಉದಾ. ಗಾಯನ, ವಾದನ, ನೃತ್ಯ ಇತ್ಯಾದಿ.
11 ಈ. ಸಾಧಕರಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳ ಬಳಿ ಇರುವ ಜ್ಞಾನವನ್ನು ಸಮಷ್ಟಿಗಾಗಿ ಉಪಯೋಗಿಸುವುದು

12. ಶಾರೀರಿಕ, ಮಾನಸಿಕ ಹಾಗೂ ಕೆಟ್ಟ ಶಕ್ತಿಗಳ ತೊಂದರೆಗಳಿಗಾಗಿ
ಉಪಾಯ ಪದ್ಧತಿಗಳ ಬಗ್ಗೆ ಸಂಶೋಧನೆ

12 ಅ. ಆಧ್ಯಾತ್ಮಿಕ ಉಪಾಯಗಳ ಹೊಸಹೊಸ ಪದ್ಧತಿಗಳ ಶೋಧ ಮಾಡುವುದು
1. ನಾಮಜಪ ಉಪಾಯಗಳ ವಿವಿಧ ಪದ್ಧತಿಗಳ ಶೋಧ, ಉದಾ. ‘ಒಂದು-ಬಿಟ್ಟು-ಒಂದು ಹೀಗೆ ಎರಡು ನಾಮಜಪವನ್ನು ಮಾಡುವುದು
2. ದೇವತೆಗಳ ಸಾತ್ತ್ವಿಕ ನಾಮಜಪ-ಪಟ್ಟಿಗಳ ಉಪಾಯ (ದೇಹಶುದ್ಧಿ, ವಾಸ್ತುಶುದ್ಧಿ ಮತ್ತು ವಾಹನಶುದ್ಧಿ ಮಾಡುವ ಪದ್ಧತಿಗಳೊಂದಿಗೆ)
3. ಶರೀರದಲ್ಲಿನ ಕುಂಡಲಿನೀ ಚಕ್ರಗಳ ಸ್ಥಾನಗಳಲ್ಲಿ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಅಥವಾ ನಾಮಜಪ-ಪಟ್ಟಿಗಳನ್ನು ಹಚ್ಚುವುದು
4. ಸನಾತನ-ನಿರ್ಮಿತ ಸಾತ್ತ್ವಿಕ ಗಣೇಶಮೂರ್ತಿಗೆ ಪ್ರದಕ್ಷಿಣೆ ಹಾಕುವುದು
5. ಸಂತರು ಬಹಳ ಸಮಯ ವಾಸಿಸಿದ ವಾಸ್ತುವಿನಲ್ಲಿ ಅಥವಾ ಕೋಣೆಯಲ್ಲಿ ಕುಳಿತು ನಾಮಜಪ ಮಾಡುವುದು
6. ಸಂತರು ಬಹಳ ಸಮಯ ಉಪಯೋಗಿಸಿದ ವಸ್ತುಗಳನ್ನು ಆಧ್ಯಾತ್ಮಿಕ ಉಪಾಯಗಳಿಗಾಗಿ ಉಪಯೋಗಿಸುವುದು
7. ಪಂಚತತ್ತ್ವಕ್ಕನುಸಾರ (ಪಂಚಮಹಾಭೂತಗಳಿಗನುಸಾರ) ಉಪಾಯ : ಉದಾಹರಣೆಗಳು
ಪಥ್ವಿತತ್ತ್ವದ ಉಪಾಯ : ಹಣೆಗೆ ಸಾತ್ತ್ವಿಕ ಕುಂಕುಮ ಹಚ್ಚುವುದು,
ಆಪತತ್ತ್ವದ ಉಪಾಯ : ತೀರ್ಥ ಪ್ರಾಶನ ಮಾಡುವುದು,
ತೇಜತತ್ತ್ವದ ಉಪಾಯ : ವಿಭೂತಿ ಹಚ್ಚಿಕೊಳ್ಳುವುದು,
ವಾಯುತತ್ತ್ವದ ಉಪಾಯ : ವಿಭೂತಿಯನ್ನು ಊದುವುದು ಮತ್ತು
ಆಕಾಶತತ್ತ್ವದ ಉಪಾಯ : ಸಂತರ ಸ್ವರದಲ್ಲಿನ ಭಜನೆ ಕೇಳುವುದು.

ಪ್ರಾಣಶಕ್ತಿ ಉಪಾಯಪದ್ಧತಿಗನುಸಾರ ಉಪಾಯ ಮಾಡುತ್ತಿರುವಾಗ

12 ಆ. ರೋಗ-ನಿರ್ಮೂಲನೆ ಮತ್ತು ಆಧ್ಯಾತ್ಮಿಕ ತೊಂದರೆ ನಿವಾರಣೆಗಾಗಿ ವಿವಿಧ ಉಪಾಯಪದ್ಧತಿಗಳ ಶೋಧ
1. ಸ್ಪರ್ಶರಹಿತ ಬಿಂದುಒತ್ತಡ (ಆಕ್ಯುಪ್ರೆಶರ್) : ಈ ಪದ್ಧತಿಗನುಸಾರ ಉತ್ತಮ ಆಧ್ಯಾತ್ಮಿಕ ಸ್ತರವಿರುವ ಸಾಧಕನು ರೋಗಿಯನ್ನು ಸ್ಪರ್ಶಿಸದೇ (ಸ್ವಲ್ಪ ದೂರದಿಂದ) ರೋಗಿಯ ಮೇಲೆ ಹೆಚ್ಚು ಪ್ರಭಾವಿಯಾಗಿ ಬಿಂದುಒತ್ತಡದ ಉಪಾಯ ಮಾಡಬಹುದು.
2. ಖಾಲಿ ರಟ್ಟಿನ ಡಬ್ಬಗಳ ಉಪಾಯ : ಖಾಲಿ ರಟ್ಟಿನ ಡಬ್ಬಿಯಲ್ಲಿ ಟೊಳ್ಳು ಇದ್ದು ಟೊಳ್ಳಿನಲ್ಲಿ ಆಕಾಶತತ್ತ್ವವಿರುತ್ತದೆ. ಈ ಆಕಾಶತತ್ತ್ವದಿಂದಾಗಿ ಉಚ್ಚ ಸ್ತರದ ಆಧ್ಯಾತ್ಮಿಕ ಉಪಾಯವಾಗುತ್ತದೆ.
3. ಪ್ರಾಣಶಕ್ತಿ (ಚೇತನಾ) ವಹನ ಉಪಾಯ : ಕೈಗಳ ಬೆರಳುಗಳಿಂದ ಹೊರಗೆ ಬೀಳುವ ಪ್ರಾಣಶಕ್ತಿಯ ಸಹಾಯದಿಂದ ಉಪಾಯ ಮಾಡುವ ಇದು ಸರಳ ಪದ್ಧತಿಯಿದ್ದು ಈ ಪದ್ಧತಿಯ ಮೂಲಕ, ತಮ್ಮ ಮೇಲೆ, ಹಾಗೂ ದೂರದಲ್ಲಿರುವ ರೋಗಿಯ ಮೇಲೂ ಉಪಾಯ ಮಾಡಲು ಬರುತ್ತದೆ.

 

13. ಸ್ವತಃ ತಮ್ಮ (ಪರಾತ್ಪರ ಗುರು ಡಾಕ್ಟರರ) ದೇಹ (ಉಗುರು, ಕೂದಲು ಮತ್ತು ಚರ್ಮ) ಹಾಗೂ ಉಪಯೋಗಿಸುವ ವಸ್ತುಗಳಲ್ಲಿ ದೈವಿ ಬದಲಾವಣೆಯ ಬಗ್ಗೆ ಸಂಶೋಧನೆ

14. ಸ್ವತಃದ ತಮ್ಮ (ಪರಾತ್ಪರ ಗುರು ಡಾಕ್ಟರರ) ಮಹಾಮತ್ಯುಯೋಗದ ಸಂಶೋಧನಾತ್ಮಕ ಅಧ್ಯಯನ

15. ಸೂಕ್ಷ್ಮ ಪಂಚಮಹಾಭೂತ ಗಳಿಂದಾಗಿ ಘಟಿಸುವ ಬುದ್ಧಿಗೆ ಮೀರಿದ ಘಟನೆಗಳ ಅಧ್ಯಯನ ಹಾಗೂ ಆಧುನಿಕ ವೈಜ್ಞಾನಿಕ ಉಪಕರಣ ಗಳು (ಉದಾ. ‘ಯುನಿವರ್ಸಲ್ ಥರ್ಮೋ ಸ್ಕ್ಯಾನರ್) ಮತ್ತು ತಂತ್ರಜ್ಞಾನ (ಉದಾ. ‘ಪಾಲಿಕಾಂಟ್ರಾಸ್ಟ್ ಇಂಟರಫೆರನ್ಸ ಫೋಟೋಗ್ರಾಫಿ) ಇವುಗಳ ಮೂಲಕ ಸಂಶೋಧನೆ

16. ‘ಕಲೆಗಾಗಿ ಕಲೆ ಅಲ್ಲ, ಆದರೆ ‘ಈಶ್ವರಪ್ರಾಪ್ತಿಗಾಗಿ ಕಲೆ

ಈ ಬಗ್ಗೆ ಮಾರ್ಗದರ್ಶನ ಮತ್ತು ಚಿತ್ರಕಲೆ, ಮೂರ್ತಿಕಲೆ, ಸಂಗೀತ, ನೃತ್ಯ ಮುಂತಾದ ವಿವಿಧ ಕಲೆಗಳ ಬಗ್ಗೆ ಸಂಶೋಧನೆ

16 ಅ. ಸಾಧಕರಿಗೆ ಕಲೆಯಲ್ಲಿನ ಕೌಶಲ್ಯವನ್ನು ಹೆಚ್ಚಿಸುವದರೊಂದಿಗೆ ಸಾಧನೆಯಲ್ಲಿ ಪ್ರಗತಿಯ ಬಗ್ಗೆಯೂ ಮಾರ್ಗದರ್ಶನ : ಪರಾತ್ಪರ ಗುರು ಡಾಕ್ಟರರು ಚಿತ್ರಕಲೆ, ಮೂರ್ತಿಕಲೆ, ಸಂಗೀತ, ನೃತ್ಯ, ಧ್ವನಿಚಿತ್ರೀಕರಣ ಮುಂತಾದ ವಿಷಯಗಳಲ್ಲಿ ಸಾಧಕರ ಕೇವಲ ಆಯಾ ಕ್ಷೇತ್ರದಲ್ಲಿ ಪ್ರಾವೀಣ್ಯ ಹೆಚ್ಚಾಗಬೇಕು, ಎಂಬುದಕ್ಕಾಗಿ ಮಾರ್ಗದರ್ಶನ ಮಾಡುವುದಿಲ್ಲ, ಆದರೆ ಆ ಮಾಧ್ಯಮದಿಂದ ಸಾಧಕರ ಸಾಧನೆಯಲ್ಲಿ ಪ್ರಗತಿಯಾಗಬೇಕು, ಎಂಬುದಕ್ಕಾಗಿಯು ಸಹ ಮಾರ್ಗದರ್ಶನ ಮಾಡುತ್ತಾರೆ.

16 ಆ. ಚಿತ್ರಕಲೆ ಮತ್ತು ಮೂರ್ತಿಕಲೆ : ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ತಯಾರಿಸಲಾದ ದೇವತೆಗಳ ಚಿತ್ರಗಳಲ್ಲಿ ಶೇ. 27 ರಿಂದ 31.3 ಮತ್ತು ಶ್ರೀ ಗಣೇಶಮೂರ್ತಿ ಯಲ್ಲಿ ಶೇ. 28.3 ರಷ್ಟು ಆಯಾ ದೇವತೆಯ ತತ್ತ್ವ ಗಳು ಬಂದಿವೆ. (ಕಲಿಯುಗದಲ್ಲಿ ದೇವತೆಯ ಚಿತ್ರದಲ್ಲಿ ಅಥವಾ ಮೂರ್ತಿಯಲ್ಲಿ ಹೆಚ್ಚೆಂದರೆ ಶೇ. 30 ರಷ್ಟೇ ಆಯಾ ದೇವತೆಯ ತತ್ತ್ವ ಬರಬಹುದು.) ಪರಾತ್ಪರ ಗುರು ಡಾಕ್ಟರರು ಚಿತ್ರಗಳಲ್ಲಿ ಮತ್ತು ಮೂರ್ತಿಗಳಲ್ಲಿ ‘ಶಕ್ತಿ, ಭಾವ ಚೈತನ್ಯ, ಆನಂದ ಮತ್ತು ಶಾಂತಿ ಇವುಗಳ ಸ್ಪಂದನಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದನ್ನೂ ಹೇಳುತ್ತಾರೆ.

16 ಆ 1. ಸೂಕ್ಷ್ಮ ಚಿತ್ರಕಲೆ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಸೂಕ್ಷ್ಮದಿಂದ ಏನು ಅರಿವಾಗುತ್ತದೆ ಅಥವಾ ಅಂತರ್ ದೃಷ್ಟಿಯಿಂದ ಏನು ಕಾಣಿಸುತ್ತದೆ, ಅದಕ್ಕೆ ಸಂಬಂಧಿಸಿದಂತೆ ಅವರು ಕಾಗದದ ಮೇಲೆ ತೆಗೆದ ಚಿತ್ರಕ್ಕೆ ‘ಸೂಕ್ಷ್ಮ ಜ್ಞಾನದ ಬಗೆಗಿನ ಚಿತ್ರ ಎಂದು ಹೇಳುತ್ತಾರೆ. ‘ಸೂಕ್ಷ್ಮ ಜ್ಞಾನದ ಬಗೆಗಿನ ಚಿತ್ರಾಂಕನ ವೆಂದರೆ ‘ಸೂಕ್ಷ್ಮ ಚಿತ್ರಕಲೆ. ಈ ಚಿತ್ರಕಲೆಯಲ್ಲಿನ ಹೊಸ ಶಾಖೆಯನ್ನು ಪರಾತ್ಪರ ಗುರು ಡಾಕ್ಟರರು ಶೋಧಿಸಿದರು ಮತ್ತು ಸೂಕ್ಷ್ಮ ಚಿತ್ರಾಂಕನ ಮಾಡುವ ಕ್ಷಮತೆಯಿರುವ ಸಾಧಕರಿಗೆ ಅದನ್ನು ಕಲಿಸಿದರು. ಪರಾತ್ಪರ ಗುರು ಡಾಕ್ಟರರು ಈ ಚಿತ್ರಗಳ ವಿವಿಧ ಪ್ರಕಾರಗಳನ್ನೂ (ಉದಾ. ಭಾಸಮಾನ ಚಿತ್ರ, ಕಾಲ್ಪನಿಕ ಚಿತ್ರ ಕಲಾತ್ಮಕ ಚಿತ್ರ, ಮಾಯಾವಿ ಚಿತ್ರ ಮುಂತಾದ ವಿಧಗಳನ್ನೂ) ಹುಡುಕಿದರು.

ಸೂಕ್ಷ್ಮ ಚಿತ್ರಾಂಕನ ಮಾಡುವ ಸಾಧಕರು ಬಿಡಿಸಿದ ಸೂಕ್ಷ್ಮ ಜ್ಞಾನದ ಬಗೆಗಿನ ಚಿತ್ರಗಳ ಸತ್ಯತೆಯನ್ನು ಪರಾತ್ಪರ ಗುರು ಡಾಕ್ಟರರು ಪರೀಕ್ಷಿಸುತ್ತಾರೆ ಮತ್ತು ಆ ಚಿತ್ರಗಳ ಸತ್ಯತೆಯ ಬಗ್ಗೆ ಶೇಕಡವಾರು ಬಗ್ಗೆಯೂ ಹೇಳುತ್ತಾರೆ.

16 ಇ. ಅಕ್ಷರಗಳು ಮತ್ತು ಅಂಕ ಇವುಗಳ ಲೇಖನ : ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ನಿರ್ಮಿಸಿದ ದೇವನಗರಿ ಅಕ್ಷರಗಳು ಮತ್ತು ಅಂಕಗಳಲ್ಲಿ ಶೇ. 31 ರಷ್ಟು ಸಾತ್ತ್ವಿಕತೆ ಬಂದಿದೆ. (ಕಲಿಯುಗದಲ್ಲಿ ಅಕ್ಷರಗಳು ಅಥವಾ ಅಂಕಗಳು ಇವುಗಳಲ್ಲಿ ಹೆಚ್ಚೆಂದರೆ ಶೇ. 30 ರಷ್ಟೇ ಸಾತ್ತ್ವಿಕತೆ ಬರಬಹುದು.)

ಶ್ರೀಲಕ್ಷ್ಮೀತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿತ ಮಾಡುವ ರಂಗೋಲಿ

16 ಈ. ಸಾತ್ತ್ವಿಕ ರಂಗೋಲಿಗಳು : ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ತಯಾರಿಸಲಾದ ಆಯಾ ರಂಗೋಲಿಗಳಲ್ಲಿ ಆಯಾ ದೇವತೆಗಳ (ಶ್ರೀ ಗಣಪತಿ, ಶ್ರೀಕಷ್ಣ, ಶ್ರೀ ಲಕ್ಷ್ಮಿ, ದತ್ತ ಮತ್ತು ಶಿವ ಈ ದೇವತೆಗಳ) ಸರಾಸರಿ ಶೇ. 3 ರಿಂದ 4 ರಷ್ಟು ತತ್ತ್ವ ಮತ್ತು ಚೈತನ್ಯ, ಆನಂದ ಮುಂತಾದ ಸ್ಪಂದನಗಳು ಬಂದಿವೆ, ಹಾಗೆಯೇ ಒಂದು ರಂಗೋಲಿಯಲ್ಲಿ ಶೇ. 10 ರಷ್ಟು ಗಣೇಶತತ್ತ್ವ ಬಂದಿದೆ. (ಕಲಿಯುಗದಲ್ಲಿ ರಂಗೋಲಿಗಳಲ್ಲಿ ಹೆಚ್ಚೆಂದರೆ ಶೇ. 10 ರಷ್ಟು ದೇವತಾತತ್ತ್ವ ಮತ್ತು ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಇವುಗಳ ಸ್ಪಂದನಗಳು ಬರಬಹುದು.)

16 ಉ. ಸಾತ್ತ್ವಿಕ ಮೆಹಂದಿ : ಪರಾತ್ಪರ ಗುರು ಡಾಕ್ಟರರ ಮಾರ್ಗ ದರ್ಶನದಲ್ಲಿ ಶ್ರೀ ಸರಸ್ವತಿ, ಶ್ರೀಕಷ್ಣ ಮತ್ತು ಶ್ರೀ ಲಕ್ಷ್ಮಿ ಇವರ ಶೇ. 2 ರಿಂದ 4 ರವರೆಗಿನ ತತ್ತ್ವವಿರುವ ಮೆಹಂದಿಯ ಕಲಾಕೃತಿ ನಿರ್ಮಿತಿಯಾಗಿದೆ. (ಕಲಿಯುಗದಲ್ಲಿ ಮೆಹಂದಿಯ ಕಲಾಕೃತಿಯಲ್ಲಿ ಹೆಚ್ಚೆಂದರೆ ಶೇ. 5 ರಷ್ಟು ದೇವತಾತತ್ತ್ವವು ಬರಬಹುದು.)

 

16 ಊ. ಸಂಗೀತ

16 ಊ 1. ಗಾಯನ : ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ‘ಶಾಸ್ತ್ರೀಯ ಸಂಗೀತದಿಂದ ‘ವಿವಿಧ ದೈವಿ ನಾದದ ತನಕ ಅಧ್ಯಾತ್ಮಶಾಸ್ತ್ರದ ಅಧ್ಯಯನ, ‘ಪಾಶ್ಚಾತ್ಯ ಸಂಗೀತ ಮತ್ತು ‘ಭಾರತೀಯ ಸಂಗೀತದ ಸಾತ್ವೀಕತೆಯ ದೃಷ್ಟಿಯಿಂದ ತುಲನಾತ್ಮಕ ಅಧ್ಯಯನ, ಅದೇರೀತಿ ಸಂಗೀತದಿಂದ ವ್ಯಕ್ತಿ, ಪ್ರಾಣಿ ಮತ್ತು ವನಸ್ಪತಿಯ ಮೇಲಾಗುವಂತಹ ಪರಿಣಾಮದ ಅಧ್ಯಯನವನ್ನು ಮಾಡಲಾಗುತ್ತಿದೆ. ಇದರೊಂದಿಗೆ ‘ಸಂಗೀತ-ಉಪಾಯದಿಂದ ಮನುಷ್ಯನ ಶಾರೀರಿಕ, ಮಾನಸಿಕ ಹಾಗೂ ಅಧ್ಯಾತ್ಮಿಕ ತೊಂದರೆಯ ಮೇಲಾಗುವಂತಹ ಪರಿಣಾಮ ಬಗ್ಗೆ ಸಂಶೋಧನೆ ನಡೆಯುತ್ತಿದೆ.

16 ಊ 2. ವಾದ್ಯ ವಾದನ : ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ಪಾಶ್ಚಾತ್ಯ ವಾದ್ಯ ಉಪಕರಣದಿಂದ ಸಾತ್ತ್ವಿಕ ಸಂಗೀತವನ್ನು ನಿರ್ಮಿಸುವುದು, ಅದೇ ರೀತಿ ಪಾಶ್ಚಾತ್ಯ ವಾದ್ಯ ಮತ್ತು ಭಾರತೀಯ ವಾದ್ಯ, ಸಂತರು ವಾದ್ಯ (ಉದಾ. ವೀಣೆ) ನುಡಿಸುವುದು ಮತ್ತು ಇತರ ವ್ಯಕ್ತಿಯು ವಾದ್ಯ (ಉದಾ. ವೀಣೆ) ನುಡಿಸುವುದು ಇತ್ಯಾದಿಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಗುತ್ತಿದೆ.

16 ಎ. ನೃತ್ಯ : ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ‘ಭಾರತೀಯ ನೃತ್ಯದ ವಿಧ’ ಮತ್ತು ‘ಪಾಶ್ಚಾತ್ಯ ನೃತ್ಯದ ವಿಧದ’ ಸಾತ್ತ್ವಿಕತೆಯ ದೃಷ್ಟಿಯಿಂದ ತುಲನಾತ್ಮಕ ಅಧ್ಯಯನ, ಅದೇ ರೀತಿ ನೃತ್ಯದಲ್ಲಿಯ ವಿವಿಧ ಶಾರೀರಿಕ ಸ್ಥಿತಿ ಮತ್ತು ಮುದ್ರೆಯ ಅಧ್ಯಾತ್ಮಿಕ ದೃಷ್ಟಿಯಿಂದ ಸಂಶೋಧನೆ ನಡೆಯುತ್ತಿದೆ.

17. ಉಚ್ಚ ಸ್ವರ್ಗಲೋಕ, ಮಹರ್ಲೋಕ ಮತ್ತು ಜನಲೋಕದಿಂದ ಪಥ್ವಿಯಲ್ಲಿ ಜನ್ಮತಾಳಿದ ದೈವಿ (ಸಾತ್ತ್ವಿಕ) ಬಾಲಕರನ್ನು ಗುರುತಿಸುವುದು ಮತ್ತು ಅದರ ಬಗೆಗಿನ ಸಂಶೋಧನೆ

18. ಜ್ಯೋತಿಷ್ಯಾಸ್ತ್ರ (ಫಲಜ್ಯೋತಿಷಿ, ಹಸ್ತಮುದ್ರೆ ಮತ್ತು ಪಾದಮುದ್ರೆ) ಹಾಗೂ ನಾಡಿ ಭವಿಷ್ಯ (ನಾಡಿಪಟ್ಟಿಯ ಮೇಲೆ ಬರೆದಿಟ್ಟಿದ್ದ ಭವಿಷ್ಯ) ಈ ಮೂಲಕ ಮಾಡಿದ ವಿವಿಧ ಸಂಶೋಧನೆ

19. ಸ್ವಭಾಷಾರಕ್ಷಣೆಗಾಗಿ ಮಾರ್ಗದರ್ಶನ, ಭಾಷೆಯ ಸೂಕ್ಷ್ಮ ಅಂಶಗಳ ಬಗ್ಗೆ
ಸಂಶೋಧನೆ ಮತ್ತು ಭಾಷೆಯ ವೈಶಿಷ್ಟ್ಯದ ಸಂಗ್ರಹ

ಅ. ಮರಾಠಿ ಬರಹದಲ್ಲಿ ಪರಕೀಯ ಭಾಷೆಯ ಶಬ್ದದ ಉಪಯೋಗವನ್ನು ತಡೆಯುವುದು ಮತ್ತು ಲೇಖನ ವ್ಯಾಕರಣಬದ್ಧವಾಗಿ ಶುದ್ಧವಾಗಿರುವುದು, ಇದರ ಕಡೆ ಪರಾತ್ಪರ ಗುರು ಡಾಕ್ಟರರ ವಿಶೇಷ ಗಮನಹರಿಸುತ್ತಾರೆ.
ಆ. ಪರಾತ್ಪರ ಗುರು ಡಾಕ್ಟರರು ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡಿ ಎಲ್ಲ ಭಾಷೆಗಳಿಗಿಂತ ಸಂಸ್ಕೃತವು ಎಲ್ಲಕ್ಕಿಂತ ಹೆಚ್ಚು ಸಾತ್ತ್ವಿಕ ಭಾಷೆಯಾಗಿದೆ, ಎಂಬುದನ್ನು ತೋರಿಸಿಕೊಟ್ಟರು.
ಇ. ಮರಾಠಿ ಭಾಷೆಯಲ್ಲಿನ ಅನೇಕ ಅರ್ಥ ಇರುವಂತಹ ಶಬ್ದ ಮತ್ತು ವಾಕ್ಯ ಇವುಗಳ ಸಂಗ್ರಹವನ್ನು ಮಾಡಲು ವಿವಿಧ ಕ್ರಮಗಳನ್ನೂ ಕೈಗೊಂಡರು, ಉದಾ . ‘ಪೂಜ್ಯ’ ಈ ಶಬ್ದದ ‘ಶೂನ್ಯ’ ಮತ್ತು ‘ಪೂಜನೀಯ’ ಎಂದು 2 ಬೇರೆ ಬೇರೆ ಅರ್ಥ ಆಗುತ್ತದೆ. ‘ಚಿತ್ರ ಬಿಡಿಸಿದರು’ ಈ ವಾಕ್ಯದ ‘ಲೇಖನಿಯು ಚಿತ್ರ ಬಿಡಿಸಿತು’ ಮತ್ತು ‘ಚಿತ್ರ ಗೋಡೆಯ ಮೇಲೆ ಬಿಡಿಸಿದರು’, ಹೀಗೆ 2 ಅರ್ಥ ಆಗುತ್ತದೆ. ಈ ರೀತಿಯ ಶಬ್ದ ಮತ್ತು ವಾಕ್ಯಗಳ ಸಂಗ್ರಹವು ಮುಂದೆ ಗ್ರಂಥದ ರೂಪದಲ್ಲಿ ಪ್ರಕಾಶನ ಮಾಡಲಾಗುವುದು.

20. ಸಾತ್ತ್ವಿಕತೆಯ ದೃಷ್ಟಿಯಿಂದ ಗಿಡ-ಮರ ಮತ್ತು ಪ್ರಾಣಿಗಳ ಅಧ್ಯಯನ

21. ಸಾಧನೆ ಹಾಗೂ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಜಾಗೃತಿಯನ್ನು ಮೂಡಿಸುವ ಸನಾತನ ಪಂಚಾಂಗ, ಸಂಸ್ಕಾರ ವಹಿಗಳು, ಧರ್ಮಶಿಕ್ಷಣ ಫಲಕ ಇತ್ಯಾದಿ ಪ್ರಸಾರ ಸಾಹಿತ್ಯಗಳ ನಿರ್ಮಿತಿ

22. ಪೂಜೆಯಲ್ಲಿ ಉಪಯೋಗಿಸುವಂತಹ ಸಾತ್ತ್ವಿಕ ಉತ್ಪನ್ನಗಳು (ಉದಾ. ಕುಂಕುಮ, ಅಷ್ಟಗಂಧ, ಸುಗಂಧದ್ರವ್ಯ, ಕರ್ಪೂರ, ಊದುಬತ್ತಿ) ಮತ್ತು ನಿತ್ಯೋಪಯೋಗಿ (ಉದಾ. ದಂತಮಂಜನ, ಉಟಣೆ, ಶಿಕಾಕಾಯಿ ಪುಡಿ, ಸ್ನಾನದ ಸಾಬೂನು, ಕೂದಲಿನ ಎಣ್ಣೆ) ಉತ್ಪನ್ನಗಳ ನಿರ್ಮಿತಿಗಾಗಿ ಮಾರ್ಗದರ್ಶನ

23. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆಗಾಗಿ ಕಟಿಬದ್ಧವಾಗಿರುವ ನಿಯತಕಾಲಿಕೆ ‘ಸನಾತನ ಪ್ರಭಾತ’ದ ಸಂಸ್ಥಾಪಕರು ಮತ್ತು ಮೊದಲ ಸಂಪಾದಕರು (ಆರಂಭ 4.4.1998)

23 ಅ. ‘ಸನಾತನ ಪ್ರಭಾತ’ ನಿಯತಕಾಲಿಕೆ ಸಮೂಹ

ದಿನಪತ್ರಿಕೆ – ಮರಾಠಿ (4 ಆವತ್ತಿಗಳು)
ಸಾಪ್ತಾಹಿಕ – ಕನ್ನಡ ಮತ್ತು ಮರಾಠಿ
ಪಾಕ್ಷಿಕ – ಹಿಂದಿ ಮತ್ತು ಆಂಗ್ಲ
ಮಾಸಿಕ – ಗುಜರಾತಿ
ಜಾಲತಾಣ – www.SanatanPrabhat.org
(ಕನ್ನಡ, ಮರಾಠಿ, ಹಿಂದಿ, ಗುಜರಾತಿ ಮತ್ತು ಆಂಗ್ಲ ಈ ಭಾಷೆಗಳಲ್ಲಿ)

 

23 ಆ. ವೈಶಿಷ್ಟ್ಯಗಳು
1. ಇಂದಿನ ವರೆಗೆ ಯಾವುದೇ ಸಂಪ್ರದಾಯದವರು ಅಥವಾ ಧಾರ್ಮಿಕ ಸಂಸ್ಥೆಯು ರಾಷ್ಟ್ರ ಮತ್ತು ಧರ್ಮ ಇವುಗಳ ಜಾಗೃತಿಗಾಗಿ ದಿನಪತ್ರಿಕೆ, ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ ನಿಯತಕಾಲಿಕೆಗಳನ್ನು ವಿವಿಧ ಭಾಷೆಗಳಲ್ಲಿ ಪ್ರಾರಂಭಿಸಲಿಲ್ಲ.
2. ವಾರ್ತೆಯನ್ನು ನೀಡುವಾಗ ‘ರಾಷ್ಟ್ರಾಭಿಮಾನಿ ಮತ್ತು ಧರ್ಮಾಭಿಮಾನಿ ವಾಚಕರ ದೃಷ್ಟಿಕೋನ ಹೇಗಿರಬೇಕು’, ಎಂಬುದು ತಿಳಿಯಬೇಕೆಂದು ವಾರ್ತೆಯೊಂದಿಗೆ ದೃಷ್ಟಿಕೋನವನ್ನು ಬರೆಯಲು ಆರಂಭಿಸಿದರು. ಹೀಗೆ ಮಾಡುವ ಏಕೈಕ ನಿಯತಕಾಲಿಕೆ ಎಂದರೆ ‘ಸನಾತನ ಪ್ರಭಾತ’ !

23 ಇ. ಇಂಟರ್ನೆಟ್ (ಅಂತರ್ಜಾಲ) ವಾರ್ತಾವಾಹಿನಿ ‘ಹಿಂದೂ ವಾರ್ತಾ’ದ ಸಂಕಲ್ಪನೆ ಮಾಡಿದವರು : 29.12.2014 ರಿಂದ 29.1.2016 ಕಾಲಾವಧಿಯಲ್ಲಿ ‘ಹಿಂದೂ ವಾರ್ತಾ’ ಈ ಉಪಕ್ರಮದ ಮೂಲಕ ಹಿಂದೂಗಳಿಗೆ ಸ್ವಂತದ ವಾರ್ತಾವಾಹಿನಿಯ ಅಡಿಪಾಯ ಹಾಕಲಾಯಿತು.

24. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆಗಾಗಿ ಕಾರ್ಯ

24 ಅ. ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಕಾನೂನುಮಾರ್ಗ ದಿಂದಲೇ ಕಾರ್ಯ
24 ಆ. ಹಿಂದೂ ರಾಷ್ಟ್ರ-ಸ್ಥಾಪನೆಯ ಬಗ್ಗೆ ಗ್ರಂಥಮಾಲಿಕೆಯ ನಿರ್ಮಿತಿ ಮತ್ತು ನಿಯತಕಾಲಿಕೆ ಮತ್ತು ಜಾಲತಾಣಗಳ ಮಾಧ್ಯಮದಿಂದ ಮಾರ್ಗದರ್ಶನ
24 ಇ. ಸಂತರು, ಸಂಪ್ರದಾಯ, ಹಿಂದುತ್ವವಾದಿ, ದೇಶಭಕ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘಟನೆ ಮತ್ತು ಅವರಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಮಾರ್ಗದರ್ಶನ.
24 ಈ. ಆಧ್ಯಾತ್ಮಿಕ ಮಟ್ಟದಲ್ಲಿ ಕಾರ್ಯ
24 ಈ 1. ಪರಾತ್ಪರ ಗುರು ಡಾಕ್ಟರರ ಅಸ್ತಿತ್ವದಿಂದ ಕಾರ್ಯಗಳು ಜರುಗುವುದು: ಅತ್ಯುಚ್ಚ ಕೋಟಿಯ ಸಂತರ ಕೇವಲ ಅಸ್ತಿತ್ವದಿಂದಲೇ ಕಾರ್ಯಗಳಾಗುತ್ತಿರುತ್ತವೆ. ಇದಕ್ಕೊಂದು ಉದಾಹರಣೆ ಎಂದರೆ 2007ರಿಂದ ಪರಾತ್ಪರ ಗುರು ಡಾಕ್ಟರರ ಅರೋಗ್ಯ ಸರಿ ಇಲ್ಲದೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗದಿದ್ದರೂ, ಅವರ ಅಸ್ತಿತ್ವದಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ವದ್ಧಿಯಾಗುತ್ತಿದೆ. ಉದಾ: ಅನೇಕ ಸಂತರ ಆಶೀರ್ವಾದ ಲಭಿಸುತ್ತಿದೆ. ಅನೇಕ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಕ್ರಿಯರಾಗಿ ಸಂಘಟಿತರಾಗುತ್ತಿದ್ದಾರೆ.
24 ಈ 2. ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ 100 ಸಂತರನ್ನು ಸಿದ್ಧ ಗೊಳಿಸುತ್ತಿರುವುದು : ಈಗ ಪಥ್ವಿಯ ಮೇಲೆ ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಪ್ರಾರಂಭವಾಗಿರುವ ಸೂಕ್ಷ್ಮದ ಯುದ್ಧದಲ್ಲಿ ದೇವತೆಗಳು ಮತ್ತು ಸಂತರಿಂದಾಗಿ ಭುವರ್ಲೋಕದಿಂದ 6ನೇ ಪಾತಾಳದ ವರೆಗಿನ ಅಸುರಿ ಶಕ್ತಿಗಳು ಸೋಲನ್ನು ಅನುಭವಿಸಿವೆ. ಈಗ 7ನೇ ಪಾತಾಳದ ಅಸುರಿ ಶಕ್ತಿಗಳನ್ನು ಸೋಲಿಸುವಷ್ಟು ಬ್ರಾಹ್ಮತೇಜ(ಆಧ್ಯಾತ್ಮಿಕ ಬಲ) ಇರುವ 100 ಸಂತರ ಅವಶ್ಯಕತೆಯಿದೆ. ಇಂತಹ ಸಂತರನ್ನು ಸಿದ್ಧಗೊಳಿಸಲು ಪರಾತ್ಪರ ಗುರು ಡಾಕ್ಟರರು ಸ್ವತಃ ಕಾರ್ಯನಿರತರಾಗಿದ್ದಾರೆ. ಅಗಸ್ಟ 2018ರ ವರೆಗೆ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಡಿಯಲ್ಲಿ ಇಂತಹ 85 ಸಂತರು ಸಿದ್ಧಗೊಂಡಿದ್ದಾರೆ. ಮುಂಬರುವ 1-2 ವರ್ಷಗಳಲ್ಲಿ ಈ ಸಂಖ್ಯೆ 100 ತಲುಪಲಿದೆ. ಈ 100 ಸಂತರ ಮಾಧ್ಯಮದಿಂದ 7ನೇ ಪಾತಾಳದ ಅಸುರಿ ಶಕ್ತಿಗಳನ್ನು ಸೋಲಿಸಿದ ಬಳಿಕ ಅದರ ಸ್ಥೂಲ ಪರಿಣಾಮ ಕಂಡು ಬರಲಿದೆ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ.

25. ಪರಾತ್ಪರ ಗುರು ಡಾ. ಆಠವಲೆಯವರ ರಾಷ್ಟ್ರ ಮತ್ತು ಧರ್ಮ ಕಾರ್ಯಗಳಿಂದ
ಪ್ರೇರಣೆ ಪಡೆದು ಪ್ರಾರಂಭವಾಗಿರುವ ಕಾರ್ಯ (ಸಂಘಟನೆ ಮತ್ತು ಉಪಕ್ರಮ)

25 ಅ .ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ (ಸ್ಥಾಪನೆ 7.10.2002)

25 ಅ 1.’ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ
ಅ.ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು: ಇದಕ್ಕಾಗಿ ಜುಲೈ 2018ರಲ್ಲಿ ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ 446 ಉಚಿತ ಧರ್ಮಶಿಕ್ಷಣ ವರ್ಗಗಳನ್ನ ನಡೆಸಲಾಗುತ್ತಿದೆ.
ಆ.’ಹಿಂದೂ ಧರ್ಮಜಾಗೃತಿ ಸಭೆಗಳ ಆಯೋಜನೆ : ಜುಲೈ 2018ರ ವರೆಗೆ ಆಯೋಜಿಸಿರುವ 1,425ಕ್ಕಿಂತ ಅಧಿಕ ‘ಹಿಂದೂ ಧರ್ಮಜಾಗೃತಿ ಸಭೆಗಳಿಂದ ಸುಮಾರು 17 ಲಕ್ಷ 60 ಸಾವಿರಕ್ಕೂ ಮೀರಿ ಹಿಂದೂಗಳಲ್ಲಿ ರಾಷ್ಟ್ರ ಮತ್ತು ಧರ್ಮಜಾಗೃತಿಯನ್ನು ಮೂಡಿಸಲಾಗಿದೆ.
ಇ.’ಅಖಿಲ’ ಭಾರತೀಯ ಹಿಂದೂ ಅಧಿವೇಶನಗಳು ಮತ್ತು ಇತರ ಹಿಂದೂ ಅಧಿವೇಶನಗಳ ಆಯೋಜನೆ : ಈ ಅಧಿವೇಶನಗಳ ಮೂಲಕ ವಿವಿಧ ರಾಜ್ಯಗಳಲ್ಲಿ 250 ಕ್ಕಿಂತ ಹೆಚ್ಚು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳ ಸಂಘಟನೆ ಮಾಡಲಾಗಿದೆ.
ಈ. ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ವ್ಯಕ್ತಿಗಳಿಗೆ ಕಾನೂನಿನ ಸಹಾಯ ನೀಡುವ ಕುರಿತು ಧರ್ಮಪ್ರೇಮಿ ವಕೀಲರ ಸಂಘಟನೆ ‘ ಹಿಂದೂ ವಿಧಿಜ್ಞ ಪರಿಷತ್ತು ಸ್ಥಾಪಿಸಲಾಯಿತು. (ಸ್ಥಾಪನೆ 14.6.2018)
ಉ.ಉದ್ಯೋಗಪತಿಗಳ ಪರಿಷತ್ತು (ಸ್ಥಾಪನೆ 4.6.2018)
ಊ. ಆರೋಗ್ಯ ಸಹಾಯತಾ ಸಮಿತಿ (ಸ್ಥಾಪನೆ 4.6.2018)
ಎ.ಉಚಿತ ಪ್ರಥಮೋಪಚಾರ ಮತ್ತು ಸ್ವಸಂರಕ್ಷಣೆ ಪ್ರಶಿಕ್ಷಣವರ್ಗಗಳು
ಏ.ಮಹಿಳಾ ಶಾಖೆ- ರಣರಾಗಿಣಿ (ಸ್ಥಾಪನೆ 3.6.2009)

25 ಅ 2. ಜಾಲತಾಣ – HinduJagruti.org : ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು, ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವುದು, ಅವರಿಗೆ ಹಿಂದೂ ರಾಷ್ಟ್ರ-ಸ್ಥಾಪನೆಯ ಕುರಿತು ಮಾರ್ಗದರ್ಶನ ಮಾಡುವುದು ಮುಂತಾದವುಗಳಿಗಾಗಿ ಈ ಜಾಲತಾಣ ಕಾರ್ಯನಿರತವಾಗಿದೆ. ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿರುವ ಈ ಜಾಲತಾಣಕ್ಕೆ ಪ್ರತಿ ತಿಂಗಳು 2 ಲಕ್ಷಕ್ಕಿಂತ ಹೆಚ್ಚು ಓದುಗರು ಭೇಟಿ ನೀಡುತ್ತಿದ್ದಾರೆ. ಈ ಜಾಲತಾಣವನ್ನು 180ಕ್ಕಿಂತ ಅಧಿಕ ದೇಶಗಳಲ್ಲಿ ವೀಕ್ಷಿಸಲಾಗುತ್ತಿದೆ.

25 ಆ.ಆದರ್ಶ ಮತ್ತು ಸುಸಂಸ್ಕಾರಯುತ ಪೀಳಿಗೆಯ ನಿರ್ಮಾಣಕ್ಕಾಗಿ Balsanskar.com

25 ಇ. ಪ್ರಸಾರ ಮಾಧ್ಯಮಗಳಲ್ಲಿ ಹಿಂದೂ ಧರ್ಮದ ಪರವಾಗಿ ವಾದಿಸಲು ವಕ್ತಾರರನ್ನು ಸಿದ್ಧಗೊಳಿಸಲು ‘ಸನಾತನ ಅಧ್ಯಯನ ಕೇಂದ್ರದ ಸ್ಥಾಪನೆ

25 ಈ. ಸಾತ್ವಿಕ ಪುರೋಹಿತರನ್ನು ಸಿದ್ಧಗೊಳಿಸಲು ‘ಸನಾತನ ಪುರೋಹಿತ ಪಾಠಶಾಲೆ’

25 ಉ. ಅಖಿಲ ಮಾನವಜಾತಿಗೆ ಆಧ್ಯಾತ್ಮದ ಶಿಕ್ಷಣ ನೀಡಲು ‘ಸ್ಪಿರಿಚ್ಯುಯಲ್ ಸಾಯನ್ಸ ರಿಸರ್ಚ ಫೌಂಡೇಶನ (ಎಸ್.ಎಸ್.ಆರ್.ಎಫ್) (ಸ್ಥಾಪನೆ 15.12.2005 (ಆಸ್ಟ್ರೇಲಿಯಾ))
25 ಉ 1. ಉದ್ದೇಶ
ಅ. ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿನಾದ್ಯಂತ ಆಧ್ಯಾತ್ಮದ ಪ್ರಸಾರ
ಆ. ಆಧ್ಯಾತ್ಮಿಕ ಸಂಶೋಧನೆ
ಇ. ವಿವಿಧ ಪಂಥಗಳ ಅನುಸಾರ ಮತ್ತು ಯೋಗ ಮಾರ್ಗಕ್ಕನುಸಾರ ಸಾಧನೆಯನ್ನು ಮಾಡುವವರಿಗೆ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು.
ಈ. ಮಾನವನ ಜೀವನದಲ್ಲಿ ಎದುರಾಗುವ ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಆಧ್ಯಾತ್ಮಿಕ ಉಪಾಯಗಳ ಪ್ರಸಾರ ಮಾಡುವುದು.

25 ಉ 2. ‘ಎಸ್.ಎಸ್.ಆರ್.ಎಫ್’ ನ ಸಾಧಕರು ಮಾಡಿದ ಆಧ್ಯಾತ್ಮಿಕ ಪ್ರಗತಿ : ಅಗಸ್ಟ 2018ರ ವರೆಗೆ ‘ಎಸ್.ಎಸ್.ಆರ್.ಎಫ್ ನ 4 ಸಾಧಕರು ಸಂತ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಶೇ. 60 ರಷ್ಟು ಮತ್ತು ಅದಕ್ಕಿಂತಲೂ ಅಧಿಕ ಆಧ್ಯಾತ್ಮಿಕ ಮಟ್ಟವಿರುವ 20 ಸಾಧಕರು ಸಂತರಾಗುವ ಮಾರ್ಗದಲ್ಲಿ ಮುಂದುವರಿಯುತ್ತಿದ್ದಾರೆ.

25 ಉ 3. ‘ಎಸ್.ಎಸ್.ಆರ್.ಎಫ್. ನ ಜಾಲತಾಣ – ssrf.org (ಆರಂಭ 14.1.2006)
ಈ ಜಾಲತಾಣದಲ್ಲಿ ವಿವಿಧ ಆಧ್ಯಾತ್ಮಿಕ ಸಂಶೋಧನೆಗಳು (ಉದಾ: ವಿದೇಶದ ಆಚಾರಗಳು ತಾಮಸಿಕವಾಗಿದ್ದು, ಹಿಂದೂ ಆಚಾರಗಳು ಸಾತ್ವಿಕವಾಗಿರುವುದು ಈ ಕುರಿತು ಸಂಶೋಧನೆ) ಕಾಲಾನುಸಾರ ಆವಶ್ಯಕವಿರುವ ಸಾಧನೆ, ವ್ಯಕ್ತಿತ್ವ ವಿಕಾಸಕ್ಕಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಮಹತ್ವ, ಕೆಟ್ಟ ಶಕ್ತಿಗಳ ತೊಂದರೆಯ ಮೇಲೆ ಉಪಾಯ ಇತ್ಯಾದಿ ವಿಷಯಗಳ ಮಾಹಿತಿ ಮತ್ತು ಲೇಖನಗಳನ್ನು ನೀಡಲಾಗಿದೆ. ಈ ಜಾಲತಾಣ 22 ಭಾಷೆಗಳಲ್ಲಿ (ಆಂಗ್ಲ, ಚೈನೀಸ್, ಫ್ರೆಂಚ, ಜರ್ಮನಿ, ಸ್ಪಾನಿಷ್, ಇತ್ಯಾದಿ) ಉಪಲಬ್ಧವಿದೆ. ಸುಮಾರು 5 ಲಕ್ಷ ವೀಕ್ಷಕರನ್ನು ಹೊಂದಿರುವ ಈ ಜಾಲತಾಣ ಜಗತ್ತಿನ 196 ದೇಶಗಳಲ್ಲಿ ವೀಕ್ಷಿಸಲಾಗುತ್ತಿದೆ.

ಪರಾತ್ಪರ ಗುರು ಡಾಕ್ಟರರು ಧರ್ಮಪ್ರಸಾರದ ವ್ಯಾಪ್ತಿಯನ್ನು ಹಂತ ಹಂತವಾಗಿ ಹೆಚ್ಚಿಸುವುದು
ಪ್ರಾರಂಭದಲ್ಲಿ ಪರಾತ್ಪರ ಗುರು ಡಾಕ್ಟರರು ಜಿಜ್ಞಾಸು ಮತ್ತು ಸಾಧಕರಿಗೆ ಸಾಧನೆಯನ್ನು ಕಲಿಸಲು ಸ್ವತಃ ಸತ್ಸಂಗ ಮತ್ತು ಅಧ್ಯಯನವರ್ಗಗಳನ್ನು ತೆಗೆದುಕೊಂಡರು. ಹಾಗೆಯೇ ‘ಸಾಧನೆಯ ಬಗ್ಗೆ ಬಹಿರಂಗ ಸಭೆಗಳನ್ನೂ ನಡೆಸಿದರು. ಮುಂದೆ ರಾಷ್ಟ್ರರಕ್ಷಣೆಗಾಗಿ ಎಲ್ಲ ಧರ್ಮದವರ ಸಹಕಾರ ಪಡೆಯಲು’ ಸರ್ವಧರ್ಮ ಸತ್ಸಂಗ, ಹಾಗೂ ಧರ್ಮರಕ್ಷಣೆಗಾಗಿ ‘ಸರ್ವಸಂಪ್ರದಾಯ ಸತ್ಸಂಗ ಆಯೋಜಿಸಿದರು. ತದನಂತರ ಅವರ ಪ್ರೇರಣೆಯಿಂದ ಸ್ಥಾಪನೆಗೊಂಡ ‘ಹಿಂದೂ ಜನಜಾಗೃತಿ ಸಮಿತಿ ‘ಧರ್ಮಶಿಕ್ಷಣವರ್ಗ, ‘ಹಿಂದೂ ಧರ್ಮಜಾಗೃತಿ ಸಭೆ ಮುಂತಾದವುಗಳ ಮಾಧ್ಯಮದಿಂದ ಭಾರತದಾದ್ಯಂತ ವ್ಯಾಪಕ ಧರ್ಮಪ್ರಸಾರ ಮಾಡುತ್ತಿದೆ. ಅವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ‘ಸ್ಪಿರಿಚ್ಯುಯಲ್ ಸಾಯನ್ಸ ರಿಸರ್ಚ ಫೌಂಡೇಶನ (ಎಸ್.ಎಸ್.ಆರ್.ಎಫ್) ಸಂಸ್ಥೆಯ ಜಾಲತಾಣ ‘ಆನ್ ಲೈನ ಸತ್ಸಂಗ ಇತ್ಯಾದಿಗಳ ಮಾಧ್ಯಮದಿಂದ ಜಗತ್ತಿನಾದ್ಯಂತ ಧರ್ಮಪ್ರಸಾರ ಮಾಡುತ್ತಿದೆ.

26. ಮುಂಬರಲಿರುವ ಭೀಷಣ ಆಪತ್ಕಾಲದ ದೃಷ್ಟಿಕೋನದಿಂದ ಕಾರ್ಯ

26 ಅ. ಮುಂಬರಲಿರುವ ಭೀಷಣ ಆಪತ್ಕಾಲದ ದೂರದೃಷ್ಟಿ ಯಿಂದ ಅನೇಕ ವರ್ಷಗಳ ಮೊದಲೇ ವಿಚಾರ ಮಾಡಿ ಸಂಕಟ ಕಾಲದಲ್ಲಿ ಆಧುನಿಕ ವೈದ್ಯರು(ಡಾಕ್ಟರರು) ವೈದ್ಯರು, ಔಷಧಿ ಮುಂತಾದವುಗಳು ಉಪಲಬ್ಧವಾಗದೇ ಇರುವುದರಿಂದ ಜೀವ ರಕ್ಷಣೆಗಾಗಿ ಉಪಯುಕ್ತವಾಗಿರುವ ವಿವಿಧ ಉಪಚಾರ ಪದ್ಧತಿಗಳ ಕುರಿತು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿಡುವುದು ಮತ್ತು ಮುಂದೆ ಆ ಕುರಿತು ಗ್ರಂಥಗಳನ್ನು ಮುದ್ರಿಸುವುದು.

26 ಆ. ಪ್ರಥಮೋಪಚಾರ ಪ್ರಶಿಕ್ಷಣ : ಆಪತ್ಕಾಲದಲ್ಲಿ ಸಹಾಯ ಕುರಿತು ಪ್ರಶಿಕ್ಷಣ ಮತ್ತು ಅಗ್ನಿಶಮನ ಪ್ರಶಿಕ್ಷಣ ವಿಷಯಗಳ ಕುರಿತು ಜನಜಾಗೃತಿ ಮೂಡಿಸುವುದು.

26 ಇ. ಭಾವಿ ಭೀಷಣ ಆಪತ್ಕಾಲದಲ್ಲಿ ಜೀವ ರಕ್ಷಣೆಗಾಗಿ ಈಗಿನಿಂದಲೇ ಸಾಧನೆ ಮಾಡದೇ ಪರ್ಯಾಯವಿಲ್ಲ, ಎಂದು ಸಮಾಜದ ಮನಸ್ಸಿನಲ್ಲಿ ಬಿಂಬಿಸುವುದು.

27. ‘ಪರಾತ್ಪರ ಗುರು ಡಾಕ್ಟರರ ಕಾರ್ಯ ಜಗತ್ತಿನಾದ್ಯಂತ ಹರಡಲಿದೆ
ಎಂದು ಗೌರವೋದ್ಗಾರವನ್ನು ನಾಡಿಪಟ್ಟಿ-ವಾಚಕರು ಮತ್ತು ಜ್ಯೋತಿಷಿಗಳು ಮಾಡುವುದು

ಅ. ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್, ಪುಣೆಯ ಶ್ರೀ ಮೊದಲಿಯಾರ ಗುರೂಜಿ ಮತ್ತು ಇತರ 5-6 ನಾಡಿಪಟ್ಟಿ (ತಾಳೆಗರಿ) ವಾಚಕರು ‘ಪರಾತ್ಪರ ಗುರು ಡಾ. ಆಠವಲೆಯವರು ರಾಷ್ಟ್ರ ಮತ್ತು ಧರ್ಮದ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಮತ್ತು ಈ ಕಾರ್ಯ ಮುಂದೆ ವದ್ಧಿಯಾಗಿ ಜಗತ್ತಿನಾದ್ಯಂತ ಹರಡಲಿದೆ ಎನ್ನುವ ಆಶಯದ ಉದ್ಗಾರವನ್ನು ತೆಗೆದಿದ್ದಾರೆ.
ಆ. ಪರಾತ್ಪರ ಗುರು ಡಾಕ್ಟರರ ಜನ್ಮಪತ್ರಿಕೆ ಮತ್ತು ಕೈ-ಕಾಲುಗಳ ಮುದ್ರೆ (ಅಚ್ಚು) ‘ಯಾರದಾಗಿದೆಯೆಂದು ತಿಳಿಯದೇ ಇರುವಾಗಲೂ’ ಅದನ್ನು ನೋಡಿ ಕಲ್ಯಾಣದ ಸೌ. ಇಂದಿರಾ ಸೋನವಣೆ, ಡೊಂಬಿವಿಲಿಯ ಡಾ. ಉದಯಕುಮಾರ ಪಾಧ್ಯೆ ಮುಂತಾದ 7-8 ಜ್ಯೋತಿಷಿಗಳು ಮೇಲಿನಂತೆಯೇ ಗೌರವೋದ್ಗಾರವನ್ನು ತೆಗೆದಿದ್ದಾರೆ.

28. ಪರಾತ್ಪರ ಗುರು ಡಾಕ್ಟರರ ಮಹಾಮತ್ಯುಯೋಗ ದೂರ ವಾಗಬೇಕು ಮತ್ತು ಅವರ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಎದುರಾಗಿರುವ ಅಡಚಣೆಗಳು ದೂರವಾಗಬೇಕೆಂದು ಕೆಲವು ಸಂತರು, ನಾಡಿಪಟ್ಟಿ- ವಾಚಕರು ಮತ್ತು ಜ್ಯೋತಿಷಿಗಳು ತಾವಾಗಿಯೇ ಅನುಷ್ಠಾನ, ಧಾರ್ಮಿಕ ವಿಧಿ ಇತ್ಯಾದಿಗಳ ಮಾಧ್ಯಮದಿಂದ ಸಹಾಯ ಮಾಡುತ್ತಿದ್ದಾರೆ.

29. ಭಾವಿ ಹಿಂದೂ ರಾಷ್ಟ್ರದ ಜವಾಬ್ದಾರಿ ಹಾಗೆಯೇ ಧರ್ಮಾಡಳಿತದ ಸ್ತಂಭವನ್ನು ಕಾಪಾಡಲು
ಮುಂದಿನ ಪೀಳಿಗೆಯನ್ನು ಸಕ್ಷಮಗೊಳಿಸುವುದು.

29 ಅ. ಸಾಧನೆಯ ಸಂಸ್ಕಾರ ದಢಗೊಂಡ ನೂರಾರು ಧರ್ಮಪ್ರಸಾರಕರು ಮತ್ತು ಧರ್ಮರಕ್ಷಕ ಸಾಧಕರನ್ನು ಸಿದ್ಧಗೊಳಿಸುವುದು.
29 ಆ. ವಿವಿಧ ಸೇವಾಕ್ಷೇತ್ರಗಳಲ್ಲಿ (ಆಧ್ಯಾತ್ಮಿಕ ಸಂಶೋಧನೆ, ಗ್ರಂಥ ನಿರ್ಮಾಣ, ಕಲೆ, ಧ್ವನಿ ಚಿತ್ರೀಕರಣ ಇತ್ಯಾದಿ ಕ್ಷೇತ್ರ ಗಳ) ಅನೇಕ ಸಾಧಕರಿಗೆ ಆಯಾ ಕಾರ್ಯವನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ಸಕ್ಷಮಗೊಳಿಸುವುದು.
29 ಇ. ಗೋಪಿಭಾವ (ಕಷ್ಣಭಕ್ತಿಯಲ್ಲಿ ತಲ್ಲೀನರಾಗುವುದು) ಇರುವ ಸಾಧಕಿಯರಿಗೆ ಸಮಷ್ಟಿ ಸಾಧನೆ ಮಾಡಲು ತಿಳಿಸಿ ಅವರ ಮುಂದಿನ ಪ್ರಗತಿಯನ್ನು ಮಾಡಿಸಿಕೊಳ್ಳುವುದು.
29 ಈ. ದೈವಿ (ಸಾತ್ವಿಕ) ಬಾಲಕರನ್ನು ಭಾವಿ ಹಿಂದೂ ರಾಷ್ಟ್ರವನ್ನು ಮುಂದುವರೆಸುವ ದೃಷ್ಟಿಯಿಂದ ಸಕ್ಷಮಗೊಳಿಸುವುದು : ಈಶ್ವರನು ಕಳೆದ ಕೆಲವು ವರ್ಷಗಳಲ್ಲಿ ಉಚ್ಚ ಲೋಕದಿಂದ ನೂರಾರು ಜೀವಗಳನ್ನು ಪಥ್ವಿಯ ಮೇಲಿನ ಅನೇಕ ದೇಶಗಳಲ್ಲಿ ಜನಿಸುವಂತೆ ಮಾಡಿದ್ದಾನೆ. ಜನ್ಮತಃ ಆಧ್ಯಾತ್ಮಿಕ ಮಟ್ಟವು ಉತ್ತಮವಾಗಿರುವ ಈ ಮಕ್ಕಳು ‘ದೈವೀ ಬಾಲಕರಾಗಿದ್ದಾರೆ. ‘ಅವರಲ್ಲಿರುವ ಸುಪ್ತ ಗುಣಗಳನ್ನು ಗುರುತಿಸಿ ಅವರಿಗೆ ವಿವಿಧ ಸೇವೆಗಳನ್ನು ಕಲಿಸುವುದು ಮತ್ತು ಮುಂದಿನ ಹಂತದ ಸಾಧನೆಯನ್ನು ತಿಳಿಸಿ ಅವರನ್ನು ಸಂತಪದವಿಯ ವರೆಗೆ ಕೊಂಡೊಯ್ಯುವುದು ಈ ರೀತಿ ಅವರನ್ನು ಹಿಂದೂ ರಾಷ್ಟ್ರವನ್ನು ಮುನ್ನಡೆಸುವ ದೃಷ್ಟಿಯಿಂದ ಸಕ್ಷಮಗೊಳಿಸುವುದು ಮುಂದುವರಿದಿದೆ.

ಪರಾತ್ಪರ ಗುರು ಡಾಕ್ಟರರು ‘ತಮ್ಮ ಕಾರ್ಯ ಮತ್ತು ವೈಶಿಷ್ಟ್ಯಗಳು ಈ ವಿಷಯದ ಪರಿಚಯ’ ಓದಿದ ನಂತರ
ಅವರ ಮನಸ್ಸಿನಲ್ಲಿ ಈಶ್ವರನ ಬಗ್ಗೆ ನಿರ್ಮಾಣವಾದ ಕತಜ್ಞತಾಭಾವ !

‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅದ್ವಿತೀಯ ಕಾರ್ಯ ಮತ್ತು ವೈಶಿಷ್ಟ್ಯಗಳ ಸಂಕ್ಷಿಪ್ತ ಪರಿಚಯ !’ ನನ್ನ ಬಗೆಗಿನ ಈ ಲೇಖನವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ, ‘ಇಷ್ಟು ಕಡಿಮೆ ಕಾಲಾವಧಿಯಲ್ಲಿ ಇಷ್ಟೆಲ್ಲ ವಿವಿಧ ಅಂಗಗಳ ಕಾರ್ಯ ನನ್ನಿಂದ ಹೇಗಾಯಿತು ? ಗ್ರಂಥಲೇಖನ, ಚಿತ್ರಕಲೆ, ಸಂಗೀತ ಮುಂತಾದ ಕಲೆಗಳು; ಆಶ್ರಮದ ವಾಸ್ತುವಿನ ನಿರ್ಮಾಣ ಕಾರ್ಯ ಇವುಗಳಂತಹ ಅನೇಕ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ಪಡೆಯದಿದ್ದರೂ ನಾನು ಆಯಾ ಕ್ಷೇತ್ರದಲ್ಲಿನ ಸಾಧಕ ರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಹೇಗೆ ಮಾಡಲು ಸಾಧ್ಯವಿದೆ ?

ಅನಾರೋಗ್ಯದಿಂದಾಗಿ ನನಗೆ ಕೋಣೆಯ ಹೊರಗೆ ಹೋಗುವುದು ಕಠಿಣ ವಿರುವಾಗಲೂ ರಾಷ್ಟ್ರ ಮತ್ತು ಧರ್ಮ ಇವುಗಳ ವಿಷಯದಲ್ಲಿನ ಕಾರ್ಯದ ಹೊಸ ಕಲ್ಪನೆ ನನಗೆ ಹೇಗೆ ಹೊಳೆಯುತ್ತದೆ ? ಎಷ್ಟೋ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳು ನನ್ನನ್ನು ನೋಡದಿದ್ದರೂ ಅವರ ಮನಸ್ಸಿನಲ್ಲಿ ನನ್ನ ಬಗ್ಗೆ ಪೂಜ್ಯ ಭಾವ ಹೇಗೆ ನಿರ್ಮಾಣವಾಗುತ್ತದೆ ಮತ್ತು ಅವರು ಸನಾತನದ ಕಾರ್ಯದೊಂದಿಗೆ ಹೇಗೆ ಜೋಡಿಸಲ್ಪಡುತ್ತಾರೆ ?’ ಎಂದು ವಿಚಾರ ಬಂದಿತು. ಇವುಗಳಿಗೆಲ್ಲ ಒಂದೇ ಉತ್ತರವಿದೆ ಮತ್ತು ಅದೆಂದರೆ ‘ಸಾಧನೆ’ ! ನಾನು ಸಾಧನೆ ಮಾಡುತ್ತಿರುವುದರಿಂದ ದೇವರೇ ನನಗೆ ಆಯಾ ಸಮಯದಲ್ಲಿ ಯೋಗ್ಯವಾದುದ್ದನ್ನು ಸೂಚಿಸುತ್ತಿರುತ್ತಾನೆ. ‘ಚಾಲವಿಸಿ ಹಾತಿ ಧರೋನಿಯಾ|’, (ಕೈ ಹಿಡಿದು ನಡೆಸುತಿಹೆನು) (ಮರಾಠಿ) ಇದಕ್ಕನುಸಾರ ದೇವರೇ ನನ್ನ ಕೈಹಿಡಿದು ನನ್ನನ್ನು ಮುಂದೆ ಕರೆದುಕೊಂಡು ಹೋಗುತ್ತಿದ್ದಾರೆ. ಹಿಂದೆ ಸಾಧಕರು ಪ್ರಶ್ನೆ ಕೇಳಿದಾಗ ನನ್ನಿಂದ ತನ್ನಷ್ಟಕ್ಕೆ ಉತ್ತರಗಳು ನೀಡಲ್ಪಡುತ್ತಿತ್ತು. ಮುಂದೆ ಮುಂದೆ ನನ್ನ ಮನಸ್ಸಿನಲ್ಲಿ ಏನಾದರೊಂದು ಪ್ರಶ್ನೆ ನಿರ್ಮಾಣವಾದ ತಕ್ಷಣ, ದೇವರೇ ನನಗೆ ಆ ಪ್ರಶ್ನೆಯ ಉತ್ತರವನ್ನೂ ಸೂಚಿಸುತ್ತಿದ್ದರು. ಈಗ ಮನಸ್ಸಿನಲ್ಲಿ ಪ್ರಶ್ನೆಯು ನಿರ್ಮಾಣವಾಗದೇ ತನ್ನಿಂದ ತಾನೆ ಯೋಗ್ಯವಿರುವುದು ಹೊಳೆಯುತ್ತಾ ಹೋಗುತ್ತದೆ ಮತ್ತು ಅದಕ್ಕನುಸಾರ ಕೃತಿ ಮಾಡಿದಾಗ ಕಾರ್ಯವು ಉತ್ತಮವಾಗಿ ಆಗುತ್ತದೆ. ಸ್ವಲ್ಪದರಲ್ಲಿ ‘ಇದಂ ನ ಮಮ |’ (ಭಾವಾರ್ಥ : ಇದು ನನ್ನಿಂದಾಗಿ ಆಗಿಲ್ಲ.) ದೇವರು ಇದರ ಬಗ್ಗೆ ನನಗೆ ಆಗಾಗ ಅನುಭವಕ್ಕೆ ತಂದುಕೊಡುತ್ತಿದ್ದಾನೆ. ಇದರಿಂದಾಗಿ ‘ನಾನು ಬಹಳ ಕಾರ್ಯ ಮಾಡುತ್ತೇನೆ. ನನ್ನ ಬಹಳಷ್ಟು ಪ್ರಸಿದ್ಧಿಯಾಗಬೇಕು’, ಎಂಬಂತಹ ಅಹಂ ಕೂಡ ನನ್ನಲ್ಲಿ ನಿರ್ಮಾಣವಾಗಬಾರದು, ಎಂದು ದೇವರೇ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕಾಗಿ ನಾನು ದೇವರ ಚರಣಗಳಲ್ಲಿ ಅನಂತ ಕೋಟಿ ಕತಜ್ಞನಿದ್ದೇನೆ.’
– (ಪರಾತ್ಪರ ಗುರು) ಡಾ. ಆಠವಲೆ

ಸಂತ ರಹೀಮ ಇವರ ಸುವಚನವನ್ನು ಅನುಭವಿಸುವ (ಪರಾತ್ಪರ ಗುರು) ಡಾ. ಆಠವಲೆ !
‘ಸಂತ ರಹೀಮರ ‘ಏಕೈ ಸಾಧೆ ಸಬ ಸಧೈ |’, ಎಂದರೆ ‘ಒಂದನ್ನು ಸಾಧಿಸಿದರೆ ಎಲ್ಲವೂ ಸಾಧಿಸಲ್ಪಡುತ್ತದೆ’, ಈ ಸುವಚನವನ್ನು ನಾನು ಪ್ರತಿದಿನ ಅನುಭವಿಸುತ್ತಿದ್ದೇನೆ. ನನ್ನ ವಿಷಯದಲ್ಲಿ ‘ಒಂದು ಸಾಧ್ಯ’, ಎಂದರೆ ‘ಈಶ್ವರನ ಆಶೀರ್ವಾದ’ ಮತ್ತು ‘ಎಲ್ಲವೂ ಸಾಧ್ಯ’, ಎಂದರೆ ವಿವಿಧ ವಿಷಯಗಳ ಅಂತರ್ಗತ ಸೇವೆಯನ್ನು ಮಾಡಲು ಬರುವುದು, ಉದಾ. ಚಿತ್ರಕಲೆ, ಸಂಗೀತ, ಮೂರ್ತಿಕಲೆ, ಶಾಸ್ತ್ರೀಯ ಸಂಶೋಧನೆ ಮುಂತಾದ ಅನೇಕ ವಿಷಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವಾಗಲೂ ಆ ಬಗ್ಗೆ ನಾನು ಸಾಧಕರಿಗೆ ಮಾರ್ಗದರ್ಶನ ಮಾಡಬಹುದು.’
– (ಪರಾತ್ಪರ ಗುರು) ಡಾ. ಆಠವಲೆ

(ಸಂಪೂರ್ಣ ಪರಿಚಯಕ್ಕಾಗಿ ಓದಿರಿ – ಸನಾತನದ ಗ್ರಂಥ ‘ಪರಾತ್ಪರ ಗುರು ಡಾ. ಆಠವಲೆಯವರ ಸರ್ವಾಂಗೀಣ ಕಾರ್ಯದ ಸಂಕ್ಷಿಪ್ತ ಪರಿಚಯ ಮತ್ತು ಭೇಟಿ ನೀಡಿ – ಸನಾತನದ ಸಂಕೇತಸ್ಥಳ sanatan.org)

Leave a Comment