ನಮ್ಮ ಪ್ರೇರಣಾಸ್ಥಾನ – ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ

ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಪರಿಚಯ

೧. ಅಂತರರಾಷ್ಟ್ರೀಯ ಖ್ಯಾತಿಯ ಸಮ್ಮೋಹನೋಪಚಾರತಜ್ಞರು

ಪ.ಪೂ. ಡಾ. ಆಠವಲೆಯವರು ವೈದ್ಯಕೀಯ ಶಿಕ್ಷಣದ ನಂತರ ೧೯೭೧ ರಿಂದ ೧೯೭೮ ರ ವರೆಗೆ ಬ್ರಿಟನ್‌ನಲ್ಲಿ ಉಚ್ಚ ಶಿಕ್ಷಣವನ್ನು ಪಡೆದು ಸಮ್ಮೋಹನ ಉಪಚಾರಪದ್ಧತಿಯ ಮೇಲೆ ಸಂಶೋಧನೆ ಮಾಡಿದರು. ೧೯೬೭ ರಿಂದ ೧೯೮೩ ರ ವರೆಗೆ ಒಟ್ಟು ೧೫ ವರ್ಷಗಳಲ್ಲಿ ಅವರು ೫೦೦ ಕ್ಕಿಂತಲೂ ಹೆಚ್ಚು ಡಾಕ್ಟರರಿಗೆ ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನೋಪಚಾರ ಇವುಗಳ ಸಿದ್ಧಾಂತ ಮತ್ತು ಪ್ರಾತ್ಯಕ್ಷಿಕೆಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡಿದರು

೨. ಸಮ್ಮೋಹನೋಪಚಾರದಲ್ಲಿನ ನಾವೀನ್ಯಪೂರ್ಣ ಸಂಶೋಧನೆ

ಪ.ಪೂ. ಡಾ. ಆಠವಲೆಯವರು ಅಯೋಗ್ಯ ಕೃತಿಯ ಅರಿವು ಮತ್ತು ಅದರ ಮೇಲೆ ನಿಯಂತ್ರಣ, ಅಯೋಗ್ಯ ಪ್ರತಿಕ್ರಿಯೆಗಳ ಬದಲು ಯೋಗ್ಯ ಪ್ರತಿಕ್ರಿಯೆ ನಿರ್ಮಾಣ ಮಾಡುವುದು, ಮನಸ್ಸಿನಲ್ಲಿ ಪ್ರಸಂಗಗಳ ಪೂರ್ವಾಭ್ಯಾಸ ಮಾಡುವುದು ಇತ್ಯಾದಿ ಸಮ್ಮೋಹನೋಪಚಾರಗಳ ಹೊಸ ಪದ್ಧತಿಯನ್ನು ನಿರ್ಮಿಸಿದರು. ಅವರು ಇಯೋಸಿನೊಫಿಲಿಯಾ ಎಂಬ ರೋಗವು ಮಾನಸಿಕ ಒತ್ತಡದಿಂದಲೂ ಬರುತ್ತದೆ ಎಂದು ಸಂಶೋಧಿಸಿದರು.

೩. ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನೋಪಚಾರಗಳ ಮೇಲಿನ ಗ್ರಂಥಸಂಪತ್ತು!

ಪ.ಪೂ.ಡಾ.ಆಠವಲೆಯವರ ದಿ ಇಂಡಿಯನ್ ಜರ್ನಲ್ ಆಫ್ ಕ್ಲಿನಿಕಲ್ ಹಿಪ್ನೊಸಿಸ್ ಆ್ಯಂಡ್ ರಿಸರ್ಚ್‌ನ ೧ ರಿಂದ ೫ ಭಾಗ (೧೯೮೩-೮೭), ಹಿಪ್ನೋಥೆರಪಿ ಅಕಾರ್ಡಿಂಗ್ ಟು ದಿ ಪರ್ಸನಾಲಿಟಿ ಡಿಫೆಕ್ಟ್ ಮಾಡೆಲ್ ಆಫ್ ಸೈಕೋಥೆರಪಿ, ಸಮ್ಮೋಹನಶಾಸ್ತ್ರ, ಸುಖೀ ಜೀವನಕ್ಕಾಗಿ ಸಮ್ಮೋಹನ ಉಪಚಾರ, ಶಾರೀರಿಕ ರೋಗಗಳಿಗೆ ಸ್ವಸಮ್ಮೋಹನ ಉಪಚಾರ, ಲೈಂಗಿಕ ಸಮಸ್ಯೆಗಳಿಗೆ ಸ್ವಸಮ್ಮೋಹನ ಉಪಚಾರ, ಮಾನಸಿಕ ರೋಗಗಳಿಗೆ ಸ್ವಸಮ್ಮೋಹನ ಉಪಚಾರ (೨ ಭಾಗಗಳು), ಸ್ವಭಾವದೋಷ ನಿರ್ಮೂಲನೆ ಮತ್ತು ಗುಣವೃದ್ಧಿ ಪ್ರಕ್ರಿಯೆ (೩ ಭಾಗಗಳು), ಈ ಗ್ರಂಥಗಳು; ಪ್ರಸಿದ್ಧ ವರ್ತಮಾನಪತ್ರಿಕೆಗಳ ಮೂಲಕ ಪ್ರಕಟಿತವಾದ ೧೦೦ಕ್ಕೂ ಹೆಚ್ಚು ಲೇಖನಗಳು; ವಿದೇಶದಲ್ಲಿ ಪ್ರಶಂಸಿಸಲ್ಪಟ್ಟ ಶೋಧ-ಪ್ರಬಂಧಗಳು… ಇವು ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಯಶಸ್ವಿ ಕಾಲಘಟ್ಟದ, ಹಾಗೆಯೇ ವ್ಯಾಸಂಗಪೂರ್ಣ ಮತ್ತು ಅದ್ವಿತೀಯ ಸಂಶೋಧನೆಯ ಫಲಶ್ರುತಿಯಾಗಿದೆ.

೪. ಗುರುಗಳ ಆಶೀರ್ವಾದ ಮತ್ತು ಸನಾತನ ಸಂಸ್ಥೆಯ ಸ್ಥಾಪನೆ

ಪ.ಪೂ. ಡಾ. ಆಠವಲೆಯವರಿಗೆ ಅಧ್ಯಾತ್ಮದ ಶ್ರೇಷ್ಠತೆಯು ಗಮನಕ್ಕೆ ಬಂದ ನಂತರ ಅಧ್ಯಾತ್ಮಪ್ರಸಾರಕ್ಕಾಗಿ ತಮ್ಮ ಸದ್ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದ ದಿಂದ ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಗುರುಗಳ ಆಶೀರ್ವಾದದಿಂದ ಪ.ಪೂ. ಡಾಕ್ಟರರ ಸಾಧನೆ, ರಾಷ್ಟ್ರ ಮತ್ತು ಧರ್ಮ ಈ ವಿಷಯಗಳ ಮೇಲೆ ಸೆಪ್ಟೆಂಬರ್‌ ೨೦೧೬ ರ ವರೆಗೆ ೨೯೪ ಗ್ರಂಥಗಳು ಪ್ರಕಾಶಿತವಾಗಿದ್ದು ಇನ್ನೂ ೪೦೦೦ ಗ್ರಂಥಗಳು ಪ್ರಕಾಶಿತವಾಗುವಷ್ಟು ಜ್ಞಾನವು ಸಂಗ್ರಹವಾಗಿದೆ.

೫. ಜಗತ್ತಿನ ಉದ್ಧಾರಕ್ಕಾಗಿ ಸಂತರನ್ನು ನಿರ್ಮಿಸುವ ಪರಾತ್ಪರ ಗುರುಗಳು  !

ಜಿಜ್ಞಾಸುಗಳಿಗೆ ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗಬೇಕೆಂದು, ಪ.ಪೂ. ಡಾಕ್ಟರರು ಕರ್ಮ, ಜ್ಞಾನ ಮತ್ತು ಭಕ್ತಿ ಈ ಯೋಗಮಾರ್ಗಗಳ ಸಂಗಮವಿರುವ ಗುರುಕೃಪಾಯೋಗವನ್ನು ಹೇಳಿದರು. ಸೆಪ್ಟೆಂಬರ್‌ ೨೦೧೬ ರ ವರೆಗೆ ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ೬೮ ಸಾಧಕರು ಸಂತರಾಗಿದ್ದಾರೆ. ಈ ಸಾಧನಾಮಾರ್ಗದ ಆಚರಣೆಯನ್ನು ಮಾಡಿ ವಿದೇಶಗಳಲ್ಲಿನ ಜಿಜ್ಞಾಸುಗಳೂ ತಮ್ಮ ಜೀವನದ ಉದ್ಧಾರ ಮಾಡಿಕೊಳ್ಳುತ್ತಿದ್ದಾರೆ.

೬. ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರೇರಣಾಸ್ರೋತ !

ಪ.ಪೂ.ಡಾಕ್ಟರರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸನಾತನ ಪ್ರಭಾತ ಎಂಬ ನಿಯತಕಾಲಿಕೆಗಳನ್ನು ಪ್ರಾರಂಭಿಸಿದರು. ಅವರ ಮಾರ್ಗದರ್ಶನದಿಂದಾಗಿ ಅನೇಕರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಘಟಿತರಾಗಿ ಕಾರ್ಯನಿರತರಾಗಿದ್ದಾರೆ. ಹಿಂದುತ್ವವಾದಿ ಸಂಘಟನೆಗಳಿಗೂ ಅವರು ಆಧಾರವೆನಿಸುತ್ತಾರೆ.

೭. ಹಿಂದೂ ಧರ್ಮದ ಶ್ರೇಷ್ಠತೆಯನ್ನು ದೃಢಪಡಿಸುವ ಆಧ್ಯಾತ್ಮಿಕ ಸಂಶೋಧನೆ !

ಪ.ಪೂ. ಡಾಕ್ಟರರು ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಆಧ್ಯಾತ್ಮಿಕ ಉಪಾಯ, ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ಹಿಂದೂ ಆಹಾರ, ವೇಷಭೂಷಣ, ಧಾರ್ಮಿಕ ಕೃತಿ ಮುಂತಾದವುಗಳಿಂದ ವ್ಯಕ್ತಿಯ ಮೇಲಾಗುವ ಒಳ್ಳೆಯ ಪರಿಣಾಮ ಇತ್ಯಾದಿಗಳ ಬಗ್ಗೆ ವಿಫುಲ ಸಂಶೋಧನಾ ಕಾರ್ಯ ಮಾಡುತ್ತಿದ್ದಾರೆ.

೮. ಸಂಕಲ್ಪ ಮಾಡಿದ ಯೋಜನೆ : ’ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸ್ಥಾಪನೆ !

ಹಿಂದೆ ತಕ್ಷಶಿಲೆ, ಮಿಥಿಲಾ ಮುಂತಾದ ವಿದ್ಯಾಪೀಠಗಳಿಂದ ಹಿಂದೂಧರ್ಮದ ಪ್ರಸಾರವಾಗುತ್ತಿತ್ತು. ಇಂದು ಕೂಡ ಈ ಧರ್ಮಜ್ಞಾನದ ಪ್ರಸಾರವಾಗಲು ಪ.ಪೂ. ಡಾಕ್ಟರರ ಮಾರ್ಗದರ್ಶನದಡಿಯಲ್ಲಿ ಅಧ್ಯಾತ್ಮ ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿದೆ.

೯. ಪರಾತ್ಪರ ಗುರು ಡಾ. ಆಠವಲೆಯವರ ರಾಷ್ಟ್ರ-ಧರ್ಮ ಕಾರ್ಯದಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯ
ಅ.    ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’
ಆ.    ‘ಸನಾತನ ಪುರೋಹಿತ ಪಾಠಶಾಲೆ
ಇ.    ಧರ್ಮಪ್ರೇಮಿ ನ್ಯಾಯವಾದಿಗಳ ಸಂಘಟನೆ ‘ಹಿಂದೂ ವಿಧಿಜ್ಞ ಪರಿಷತ್ತು’
ಉ.    ಅಹಿಂದೂಗಳ ಐಚ್ಛಿಕ ಹಿಂದೂಕರಣಕ್ಕಾಗಿ ‘ಸನಾತನ ಹಿಂದೂ ಧರ್ಮದೀಕ್ಷಾ ಕೇಂದ್ರ’
ಊ.    ವಿಶ್ವಾದ್ಯಂತ ಅಧ್ಯಾತ್ಮಪ್ರಸಾರಕ್ಕಾಗಿ ‘ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಸ್ಥಾಪನೆ

ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ಕಾರ್ಯದ ಸಂಕ್ಷಿಪ್ತ ಪರಿಚಯ !

೧. ಸಾಧನೆ ಮತ್ತು ಹಿಂದೂ ಧರ್ಮವನ್ನು ಕಲಿಸುವ ಧ್ವನಿಮುದ್ರಿಕೆಗಳು (ಆಡಿಯೋ ಸಿಡಿ) ಮತ್ತು ಧ್ವನಿಚಿತ್ರಮುದ್ರಿಕೆಗಳ (ವೀಡಿಯೋ ಸಿಡಿ) ನಿರ್ಮಿತಿ
೨. ಸಾಧನೆಯ ದೃಷ್ಟಿಯಿಂದ ೧೪ ವಿದ್ಯೆ ಮತ್ತು ೬೪ ಕಲೆಗಳ ಶಿಕ್ಷಣಕ್ಕಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸ್ಥಾಪನೆ
೩. ಕೆಟ್ಟ ಶಕ್ತಿಗಳ ತೊಂದರೆಗಳ ಮೇಲಿನ ಉಪಾಯಪದ್ಧತಿಗಳ ಸಂಶೋಧನೆ
೪. ತಮ್ಮ ಶರೀರ, ಹಾಗೆಯೇ ಬಳಕೆಯಲ್ಲಿನ ವಸ್ತುಗಳ ದೈವೀ ಬದಲಾವಣೆಗಳ ಬಗ್ಗೆ ಸಂಶೋಧನೆ ಮತ್ತು ತಮ್ಮ ಮಹಾಮೃತ್ಯುಯೋಗದ ಬಗ್ಗೆ ಸಂಶೋಧನಾತ್ಮಕ ಅಧ್ಯಯನ
೫. ಕಲೆಯ ಸಾತ್ತ್ವಿಕ ಸಾದರೀಕರಣಕ್ಕಾಗಿ ಸಂಶೋಧನೆ
೬. ಧಾರ್ಮಿಕ ಕೃತಿ ಮತ್ತು ಬುದ್ಧಿಅಗಮ್ಯ ಘಟನೆಗಳ ಅಧ್ಯಯನ, ಹಾಗೆಯೇ ವೈಜ್ಞಾನಿಕ ಉಪಕರಣಗಳಿಂದ ಸಂಶೋಧನೆ
೭. ಆಧ್ಯಾತ್ಮಿಕ ಸಂಗ್ರಹಾಲಯಕ್ಕಾಗಿ ಆಧ್ಯಾತ್ಮಿಕ ವಸ್ತುಗಳ ಜತನಕಾರ್ಯ
೮. ಸಾತ್ತ್ವಿಕತೆಯ ದೃಷ್ಟಿಯಿಂದ ಪ್ರಾಣಿಗಳ ಮತ್ತು ವನಸ್ಪತಿಗಳ ಅಧ್ಯಯನ
೯. ದೈವೀ (ಸಾತ್ತ್ವಿಕ) ಬಾಲಕರ ಪರಿಚಯ ಮತ್ತು ಆ ಬಗ್ಗೆ ಸಂಶೋಧನೆ
೧೦. ಜ್ಯೋತಿಷ್ಯಶಾಸ್ತ್ರ ಮತ್ತು ನಾಡಿಜ್ಯೋತಿಷ್ಯದ ಮೂಲಕ ಸಂಶೋಧನೆ
೧೧. ಸ್ವಭಾಷಾರಕ್ಷಣೆಗೆ ದಿಶಾದರ್ಶನ ಮತ್ತು ಭಾಷೆಯ ಆಯಾಮಗಳ ಬಗ್ಗೆ ಸಂಶೋಧನೆ
೧೨. ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಪತ್ರಿಕೋದ್ಯಮದ ಕಾರ್ಯ
೧೩. ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದಿಶಾದರ್ಶನ

(ಸಂಪೂರ್ಣ ಪರಿಚಯಕ್ಕಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಸಂಕ್ಷಿಪ್ತ ಪರಿಚಯ ಮತ್ತು ಸಂತರು ಸಲ್ಲಿಸಿದ ಗೌರವ’)

Leave a Comment