ಸಾಧನಾವೃದ್ಧಿ ಸತ್ಸಂಗ (8)

ಸಾಧನಾ ಸತ್ಸಂಗದ ಮೂಲಕ ನಮಗೆ ಸಾಧನೆಯ ಬೇರೆ ಬೇರೆ ಮಜಲುಗಳು ಕಲಿಯಲು ಸಿಗುತ್ತಿವೆ. ನಮ್ಮ ಸಾಧನೆಗೆ ದಿಶೆ ಹಾಗೂ ವೇಗ ಸಿಗುತ್ತಿದೆ. ಈ ಎಲ್ಲ ಜ್ಞಾನವನ್ನು ನಮಗೆ ಯಾರು ನೀಡುತ್ತಿದ್ದಾರೆ? ಈ ಜ್ಞಾನವನ್ನೆಲ್ಲ ನಮಗೆ ಸಾಕ್ಷಾತ್ ವಿಷ್ಣುಸ್ವರೂಪ ಶ್ರೀಗುರುಗಳೇ ನೀಡುತ್ತಿದ್ದಾರೆ.

ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರ ಜ್ಞಾನಶಕ್ತಿಯು ಈ ಸತ್ಸಂಗದ ಮೂಲಕ ಕಾರ್ಯನಿರತವಾಗಿದೆ. ಮೋಹಮಾಯೆಯ ಭ್ರಮೆಯ ಜಾಲದಲ್ಲಿ ಶ್ರೀಗುರುತತ್ತ್ವವೇ ನಮಗೆ ಚಿರಂತನ ಆನಂದಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತಿದೆ. ಸಾಧನೆಯನ್ನು ಮಾಡುವ ಜೀವಗಳ ದೃಷ್ಟಿಯಿಂದ ‘ಗುರುಪೂರ್ಣಿಮೆ’ಯು ಒಂದು ಅತ್ಯಂತ ಮಹತ್ವದ ದಿನವಾಗಿದೆ. ಗುರುಪೂರ್ಣಿಮೆ ಎಂದರೆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ! ಇಂದು ನಾವು ಗುರುಪೂರ್ಣಿಮೆಯ ನಿಮಿತ್ತ ಜೀವನದಲ್ಲಿ ಗುರುಗಳ ಮಹತ್ವ, ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗದ ಶ್ರೇಷ್ಠತೆ, ಹಾಗೂ ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ ಎಂಬಂತಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

ನಾವೆಲ್ಲರೂ ಅತ್ಯಂತ ಭಾಗ್ಯವಂತರಾಗಿದ್ದೇವೆ. ಏಕೆಂದರೆ ಜಗತ್ತಿನಲ್ಲಿರುವ ೭೦೦ ಕೋಟಿ ಜನರಲ್ಲಿ ದೇವರು ನಮ್ಮನ್ನು ಯೋಗ್ಯ ಮಾರ್ಗದಲ್ಲಿ ತಂದಿದ್ದಾರೆ ಹಾಗೂ ಚಿರಂತನ ಆನಂದಪ್ರಾಪ್ತಿಯ ಮಾರ್ಗವನ್ನು ತೋರಿಸಿದ್ದಾರೆ. ಶ್ರೀಗುರುಗಳ ಪ್ರತ್ಯಕ್ಷ ದರ್ಶನವು ನಮಗೆ ಆಗಿರಬಹುದು ಅಥವಾ ಆಗಿಲ್ಲದಿರಬಹುದು; ಶ್ರೀಗುರುಗಳ ಪ್ರತ್ಯಕ್ಷ ಸಹವಾಸವು ನಮಗೆ ಸಿಕ್ಕಿರಬಹುದು, ಅಥವಾ ಸಿಕ್ಕಿಲ್ಲದಿರಬಹುದು. ಆದರೆ ತತ್ತ್ವರೂಪದಿಂದ ಶ್ರೀಗುರುಗಳು ಶಾಶ್ವತವಾಗಿ ನಮ್ಮೊಂದಿಗಿದ್ದಾರೆ. ನಮಗೆ ನಮ್ಮ ಸಾಧನೆಯನ್ನು ಹೆಚ್ಚಿಸಿ ಈ ಗುರುತತ್ತ್ವವನ್ನು ಅನುಭವಿಸಬೇಕಾಗಿದೆ. ಅಧ್ಯಾತ್ಮದಲ್ಲಿ ಶಾಬ್ದಿಕ ಜ್ಞಾನಕ್ಕಿಂತಲೂ ಅನುಭೂತಿಯಿಂದ ತಿಳಿಯುವ ಜ್ಞಾನಕ್ಕೆ ವಿಶೇಷ ಮಹತ್ವವಿದೆ.

ನಿಜವಾದ ಕೃತಜ್ಞತೆ ಯಾವುದು?

ಆಷಾಢ ಹುಣ್ಣಿಮೆಗೆ ಗುರುಪೂರ್ಣಿಮೆ ಎನ್ನುತ್ತಾರೆ. ಗುರುಪೂರ್ಣಿಮೆ ಎಂದರೆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ! ಗುರು ಮತ್ತು ಈಶ್ವರನಲ್ಲಿ ವ್ಯತ್ಯಾಸವಿಲ್ಲ. ಗುರು ಎಂದರೆ ಈಶ್ವರನ ಸಗುಣ ಸಾಕಾರ ರೂಪ! ಸಾಧನೆಯನ್ನು ಮಾಡುವ ಪ್ರತಿಯೊಂದು ಜೀವಕ್ಕಾಗಿ ಗುರುಗಳು ತತ್ತ್ವರೂಪದಲ್ಲಿ ಅಖಂಡವಾಗಿ ಕಾರ್ಯನಿರತರಾಗಿರುತ್ತಾರೆ. ನಮಗೆ ಅನಿಸುತ್ತದೆ, ಇಂತಿಂತಹ ವರ್ಷದಲ್ಲಿ ನನಗೆ ಶ್ರೀಗುರುಗಳ ದರ್ಶನವಾಯಿತು ಅಥವಾ ಅವರ ಪ್ರಚೀತಿಯು ಬಂತು ಆದರೆ ಪ್ರತ್ಯಕ್ಷದಲ್ಲಿ ಶ್ರೀಗುರುತತ್ತ್ವವು ಶಾಶ್ವತವಾಗಿ ನಮ್ಮೊಂದಿಗಿರುತ್ತದೆ. ನಾವು ಕೇವಲ ಯಾವುದಾದರೊಂದು ಪ್ರಸಂಗದಲ್ಲಿ ಆ ಕ್ಷಣಗಳಲ್ಲಿ ಆ ತತ್ತ್ವವನ್ನು ಅನುಭವಿಸಲು ಆಗುತ್ತದೆ ಇಷ್ಟೇ. ಶ್ರೀಗುರುಗಳು ಜನ್ಮಜನ್ಮಾಂತರದಿಂದ ನಮ್ಮೊಂದಿಗಿದ್ದಾರೆ ಮತ್ತು ಮುಂದೆಯೂ ಇರಲಿದ್ದಾರೆ. ಅನೇಕ ಪ್ರಸಂಗಗಳಲ್ಲಿ ಭಗವಂತನು ನಮ್ಮ ರಕ್ಷಣೆಯನ್ನು ಮಾಡಿದ್ದಾರೆ ಅಥವಾ ನಮಗಾಗಿ ಮಾರ್ಗವನ್ನು ಸುಗಮಗೊಳಿಸಿದ್ದಾರೆ. ಭಗವಂತನು ಅನಂತ ಹಸ್ತಗಳಿಂದ ನಮಗೆ ನೀಡುತ್ತಲೇ ಇದ್ದಾರೆ. ಆದರೆ ನಮ್ಮ ಅಲ್ಪಬುದ್ಧಿಗೆ ಅದರ ಅರಿವು ಇರುವುದಿಲ್ಲ. ಅಲ್ಲದೇ ಅವರು ನಮಗಾಗಿ ಏನೆಲ್ಲ ಮಾಡಿದ್ದಾರೆಯೋ ಅದರ ವಿಷಯದಲ್ಲಿ ನಾವು ಕೇವಲ ಕೃತಜ್ಞತಾಭಾವದಲ್ಲಿ ಇರಬಹುದಷ್ಟೇ. ನಿಜವಾದ ಕೃತಜ್ಞತೆ ಎಂದರೆ ಗುರುಗಳು ಹೇಳಿದ ಸಾಧನೆಯನ್ನು ಭಾವಪೂರ್ಣ, ಅಖಂಡ ಮತ್ತು ತಳಮಳದಿಂದ ಮಾಡುತ್ತಿರುವುದು.

ಗುರು ಶಬ್ದದ ಉತ್ಪತ್ತಿ

ನಾವು ಅನೇಕ ಸಲ ಗುರು ಎಂಬ ಶಬ್ದವನ್ನು ಉಪಯೋಗಿಸುತ್ತೇವೆ. ಆದರೆ ನಿರ್ದಿಷ್ಠವಾಗಿ ಈ ಶಬ್ದದ ಅರ್ಥವೇನು?

ಅರ್ಥ : ‘ಗು’ ಎಂಬ ಶಬ್ದದ ಅರ್ಥ ಅಂಧಕಾರ, ಅಜ್ಞಾನ ಅಥವಾ ಮಾಯೆ ಎಂದಾಗಿದೆ ಮತ್ತು ‘ರೂ’ ಎಂಬ ಶಬ್ದದ ಅರ್ಥ ಪ್ರಕಾಶ ಅಥವಾ ಜ್ಞಾನ ಎಂದಾಗಿದೆ. ಯಾರು ಶಿಷ್ಯನ ಜೀವನದ ಮಾಯೆಯೆಂಬ ಅಂಧಕಾರವನ್ನು ದೂರಗೊಳಿಸಿ ‘ಜ್ಞಾನ’ ರೂಪದ ಪ್ರಕಾಶವನ್ನು ಪಸರಿಸುತ್ತಾರೆಯೋ ಅವರೇ ಗುರುಗಳಾಗಿದ್ದಾರೆ.

ಗುರು ಎಂದರೆ ಅಜ್ಞಾನ ರೂಪೀ ಅಂಧಕಾರದಿಂದ ಜ್ಞಾನರೂಪೀ ಪ್ರಕಾಶದೆಡೆಗೆ ಕೊಂಡೊಯ್ಯುವವರು. ಅಂದರೆ ಶಿಷ್ಯನ ಜೀವನದಲ್ಲಿನ ಮಾಯೆಯೆಂಬ ಅಂಧಕಾರವನ್ನು ದೂರಗೊಳಿಸಿ ‘ಜ್ಞಾನ’ ರೂಪೀ ಪ್ರಕಾಶವನ್ನು ಪಸರಿಸುವ ತತ್ತ್ವ. ಶಿಷ್ಯನ ಅಜ್ಞಾನವನ್ನು ದೂರಗೊಳಿಸಿ ಅವರ ಆಧ್ಯಾತ್ಮಿಕ ಉನ್ನತಿಯಾಗಬೇಕು ಎಂದು ಅದಕ್ಕಾಗಿ ಅವನಿಗೆ ಆ ಸಾಧನೆಯನ್ನು ತಿಳಿಸಿ ಅದನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿಯನ್ನು ನೀಡುತ್ತಾರೆ. ಅವರಿಗೆ ಗುರು ಎನ್ನುತ್ತಾರೆ.

ಗುರುಗಳ ಮಹತ್ವ

ಗುರುಕೃಪಾ ಹೀ ಕೇವಲಂ ಶಿಷ್ಯಪರಮಮಂಗಲಮ್ | ಎಂದು ಹೇಳಲಾಗಿದೆ. ಇದರ ಅರ್ಥ ಶಿಷ್ಯನ ಪರಮ ಮಂಗಲ ಎಂದರೆ ಮೋಕ್ಷಪ್ರಾಪ್ತಿ ಅದು ಅವನಿಗೆ ಗುರುಕೃಪೆಯಿಂದಲೇ ಸಿಗಬಲ್ಲದು. ಗುರುಗಳಿಂದಲೇ ಶಿಷ್ಯನು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗುವುದರಿಂದ ಶಿಷ್ಯನ ಜೀವನದಲ್ಲಿ ಗುರುಗಳಿಗೆ ಅಸಾಧಾರಣ ಮಹತ್ವವಿದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಅತ್ಯಂತ ಚಿಕ್ಕಪುಟ್ಟ ವಿಷಯಗಳಿಗೂ ಯಾರಾದರೊಬ್ಬರ ಮಾರ್ಗದರ್ಶನ ಪಡೆಯುತ್ತಿರು‌ತ್ತೇವೆ. ಉದಾ: ರಸ್ತೆಯು ಅಪರಿಚಿತವಾಗಿದ್ದಲ್ಲಿ ನಾವು ದಾರಿಯಲ್ಲಿ ಭೇಟಿಯಾದವರ ಬಳಿ ಯೋಗ್ಯ ಮಾರ್ಗ ಯಾವುದು ಎಂದು ವಿಚಾರಿಸುತ್ತೇವೆ. ಅನಾರೋಗ್ಯಪೀಡಿತರಾದಾಗ ಡಾಕ್ಟರರ ಸಲಹೆಯನ್ನು ಪಡೆಯುತ್ತೇವೆ. ಯಾವುದಾದರೊಂದು ಪ್ರಶ್ನೆಗೆ ಉತ್ತರ ಸಿಗದಿದ್ದರೆ ಶಿಕ್ಷಕರ ಬಳಿ ವಿಚಾರಿಸಿಕೊಳ್ಳುತ್ತೇವೆ. ಹೀಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಮಾರ್ಗದರ್ಶನ ಮಾಡುವವರ ಬಗ್ಗೆ ನಮಗೆ ಮಹತ್ವ ಅನಿಸುತ್ತದೆ, ಆದರೆ ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಗೊಳಿಸುವ ಗುರುಗಳ ಮಹತ್ವ ಎಷ್ಟಿರಬಹುದು ಎಂದು ನಾವು ಕಲ್ಪನೆಯನ್ನು ಸಹ ಮಾಡಲು ಸಾಧ್ಯವಿಲ್ಲ.

ಶ್ರೀಗುರುಗಳ ಮಹಿಮೆಯನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯವೇ ಆಗಿದೆ. ಶ್ರೀಗುರುಗಳು ಶಿಲ್ಪಿಯಂತೆ! ಶಿಲೆಯನ್ನು ಕೆತ್ತಿ ಶಿಲ್ಪವನ್ನು ತಯಾರಿಸಲಾಗುತ್ತದೆ. ಆದರೆ ಆ ಶಿಲೆಯಲ್ಲಿ ಯಾರಿಗೆ ಮೂರ್ತಿಯು ಕಾಣಿಸುತ್ತದೆಯೋ ಅವನೇ ಅದರಲ್ಲಿರುವ ಅನಾವಶ್ಯಕ ಭಾಗಗಳನ್ನು ತೆಗೆದು ಅದಕ್ಕೆ ಆಕಾರವನ್ನು ನೀಡಬಲ್ಲನು ಮತ್ತು ಮೂರ್ತಿಯನ್ನು ಕೆತ್ತಬಲ್ಲನು. ಗುರುಗಳು ಅದೇ ರೀತಿಯಿರುತ್ತಾರೆ. ಗುರುಗಳು ಶಿಷ್ಯನ ಜೀವನದ ದೋಷ, ಅಹಂ ಮತ್ತು ಮಾಯೆಯ ಆವರಣವನ್ನು ದೂರಗೊಳಿಸಿ ಶಿಷ್ಯನ ಆಂತರ್ಯದಲ್ಲಿರುವ ಈಶ್ವರೀ ತತ್ತ್ವವನ್ನು ಜಾಗೃತಗೊಳಿಸುತ್ತಾರೆ ಮತ್ತು ಶಿಷ್ಯನನ್ನು ಗುರುಗಳ ಸಮಾನ ಮಾಡಿಬಿಡುತ್ತಾರೆ. ಹೀಗೆ ಬೇರೆ ಎಲ್ಲಿಯೂ ಕಾಣಲು ಸಿಗುವುದಿಲ್ಲ. ಸ್ಪರ್ಶಮಣಿಯು ಕಬ್ಬಿಣವನ್ನು ಚಿನ್ನವನ್ನಾಗಿ ರೂಪಾಂತರಿಸುತ್ತದೆ. ಆದರೆ ಇನ್ನೊಂದು ಸ್ಪರ್ಶಮಣಿಯನ್ನು ತಯಾರಿಸಲಾರದು. ಕಲ್ಪತರುವು ನಮಗೆ ಏನು ಬೇಕೋ ಅದೆಲ್ಲವನ್ನೂ ನೀಡಬಲ್ಲದು. ಆದರೆ ಅದಕ್ಕಾಗಿ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ಅನಂತರ ಅದು ನೀಡುತ್ತದೆ. ಗುರುಗಳು ಮಾತ್ರ ಶಿಷ್ಯನನ್ನು ಗುರುಸಮಾನರಾಗಿ ಮಾಡಿಬಿಡುತ್ತಾರೆ. ತಂದೆತಾಯಿ ಜೀವಕ್ಕೆ ಜನ್ಮ ನೀಡುತ್ತಾರೆ; ಆದರೆ ಗುರುಗಳು ಅವನನ್ನು ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ. ಗುರುಗಳೇ ಶಿಷ್ಯನ ಪ್ರಚಂಡ ಶಕ್ತಿಯಾಗಿದ್ದಾರೆ. ಗುರು ಎಂದರೆ ಕೇವಲ ದೇಹಧಾರಿ ವ್ಯಕ್ತಿಯಲ್ಲ ಅವರು ಸರ್ವವ್ಯಾಪೀ ತತ್ತ್ವವಾಗಿದ್ದಾರೆ.

ಗುರುತತ್ತ್ವ ಒಂದೇ !

ಎಲ್ಲ ಗುರುಗಳು ಬಾಹ್ಯತಃ (ಹೊರಗಿನಿಂದ) ಸ್ಥೂಲದೇಹದಿಂದ ಬೇರೆಬೇರೆ ಅನಿಸಿದರೂ ಆಂತರ್ಯದಿಂದ (ಒಳಗಿನಿಂದ) ಒಂದೇ ಆಗಿರುತ್ತಾರೆ. ಕೆಲವರಿಗೆ ನಾನು ಮೊದಲು ಒಬ್ಬ ಗುರುಗಳು ಹೇಳಿದ ಉಪಾಸನೆಯನ್ನು ಮಾಡುತ್ತಿದ್ದೆ. ಈಗ ಇದನ್ನು ಮಾಡುತ್ತಿದ್ದೇನೆ ಇದು ಯೋಗ್ಯವಿದೆಯೇನು ? ಇದರಿಂದ ಮೊದಲಿನ ಗುರುಗಳು ಕೋಪಗೊಳ್ಳುವರೇನು ಎಂದು ಅನಿಸುವ ಸಾಧ್ಯತೆಯಿದೆ. ಇಲ್ಲಿ ನಾವು ಗಮನದಲ್ಲಿಡಬೇಕಾದ ವಿಷಯವೇನೆಂದರೆ ಗುರುತತ್ತ್ವವು ಒಂದೇ ಆಗಿರುತ್ತದೆ. ಹೇಗೆ ದನದ ಕೆಚ್ಚಲಿನಿಂದ ಒಂದೇ ರೀತಿಯಲ್ಲಿ ಶುದ್ಧ, ನಿರ್ಮಲ ಹಾಲು ಬರುತ್ತದೆಯೋ ಅದೇ ರೀತಿ ಪ್ರತಿಯೊಬ್ಬ ಗುರುವಿನಲ್ಲಿರುವ ಗುರುತತ್ತ್ವವು ಒಂದೇ ಆಗಿರುವುದರಿಂದ ಅವರಿಂದ ಬರುವ ಆನಂದ ಲಹರಿಗಳು ಸಹ ಸಮಾನವಾಗಿರುತ್ತದೆ.

ನಾವೆಲ್ಲರೂ ನಿಜವಾಗಿಯೂ ಬಹಳ ಭಾಗ್ಯಶಾಲಿಗಳಾಗಿದ್ದೇವೆ. ಈ ಗುರುತತ್ತ್ವವೇ ನಮ್ಮನ್ನು ‘ಗುರುಕೃಪಾಯೋಗ’ದ ಸಾಧನಾಮಾರ್ಗದಲ್ಲಿ ತಂದಿದೆ. ಹಿಂದೂ ಧರ್ಮದಲ್ಲಿ ಅನೇಕ ಸಾಧನಾಮಾರ್ಗಗಳನ್ನು ಹೇಳಲಾಗಿದೆ. ಉದಾ: ಜ್ಞಾನಮಾರ್ಗ, ಕರ್ಮಮಾರ್ಗ, ಭಕ್ತಿಮಾರ್ಗ ಇತ್ಯಾದಿ. ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ ಒಂದು ನಿರ್ದಿಷ್ಠ ಹಂತದ ತನಕ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದರೆ ಸಾಧನೆಯ ಪೂರ್ಣತ್ವವು ಕೇವಲ ಗುರುಕೃಪೆಯಿಂದಲೇ ಸಾಧ್ಯವಾಗುತ್ತದೆ. ಹಾಗಾಗಿ ಗುರುಗಳನ್ನು ಬಿಟ್ಟು ಬೇರೆ ತಾರಕರಿಲ್ಲ ಅಂದರೆ ಗುರುಗಳಿಲ್ಲದೇ ಮುಂದಿನ ಪ್ರಗತಿಯಾಗುವುದಿಲ್ಲ ಎಂದು ಹೇಳಲಾಗಿದೆ.

ಗುರುಗಳ ಸಾಮರ್ಥ್ಯ

ಬ್ರಹ್ಮಾಂಡದ ಯಾವುದೆ ವಿಷಯವು ಗುರುಗಳಿಗೆ ಅಸಾಧ್ಯ ಎಂದಿಲ್ಲ. ಶ್ರೀಗುರುಗಳು ತಮ್ಮ ಶಿಷ್ಯನಿಗೆ ಏನೂ ಕಮ್ಮಿಯಾಗದಂತೆ ನೋಡಿಕೊಳ್ಳುತ್ತಾರೆ. ಅವರು ಯಾವಾಗಲೂ ಅವನ ಕಲ್ಯಾಣವನ್ನೇ ಮಾಡುತ್ತಿರುತ್ತಾರೆ. ಒಂದು ವೇಳೆ ಸಂಕಟ ಎದುರಾದರೂ ಆ ಸಂಕಟಗಳಲ್ಲಿ ನಮ್ಮನ್ನು ಸಂಭಾಳಿಸುವವರು ಅಥವಾ ಆ ಅಡಚಣೆಗಳನ್ನು ಎದುರಿಸುವ ಬಲವನ್ನು ನೀಡುವವರು ಯಾರು? ಅದು ಕೇವಲ ಗುರುತತ್ತ್ವವೇ ಆಗಿರುತ್ತದೆ. ಬಹಳಷ್ಟು ಬಾರಿ ಅಡಚಣೆಗಳು ಅಥವಾ ಸಂಕಟಗಳಿಗೆ ನಾವು ದೇವರನ್ನು ದೂಷಿಸುತ್ತೇವೆ. ಆದರೆ ಇಲ್ಲಿ ನಾವು ಒಂದು ಶಾಸ್ತ್ರವನ್ನು ಗಮನದಲ್ಲಿಡಬೇಕು, ಏನೆಂದರೆ ಅಡಚಣೆಗಳು ಅಥವಾ ಸಂಕಟಗಳು ದೇವರಿಂದ ಬರುವುದಿಲ್ಲ. ಅವೆಲ್ಲ ನಮ್ಮಿಂದಾದ ಕರ್ಮಗಳ ಫಲವೇ ಆಗಿರುತ್ತವೆ. ಹಿಂದೂ ಧರ್ಮದಲ್ಲಿ ಕರ್ಮಫಲಸಿದ್ಧಾಂತವನ್ನು ಹೇಳಲಾಗಿದೆ. ಮಾಡಿದ ಪ್ರತಿಯೊಂದು ಕರ್ಮದ ಫಲವನ್ನು ವ್ಯಕ್ತಿಯು ಭೋಗಿಸಬೇಕಾಗುತ್ತದೆ. ಶ್ರೀಗುರುಗಳು ಆ ಪ್ರಾರಬ್ಧವನ್ನು ಭೋಗಿಸುವ ಶಕ್ತಿಯನ್ನು ನೀಡಿ ಅದನ್ನು ಸಹ್ಯಗೊಳಿಸುತ್ತಾರೆ.

ಗುರುಗಳಲ್ಲಿ ಏನನ್ನು ಬೇಡಬೇಕು ?

ಸಾಮರ್ಥ್ಯಶಾಲಿ, ಸರ್ವಶಕ್ತಿಶಾಲಿ, ಸರ್ವಜ್ಞಾನಿ, ಸರ್ವವ್ಯಾಪಿ ಶ್ರೀಗುರುತತ್ತ್ವದ ಬಳಿ ಏನನ್ನು ಬೇಡಬೇಕು? ನಮ್ಮ ಮನಸ್ಸಿನ ಪ್ರತಿಯೊಂದು ವಿಚಾರವು ಶ್ರೀಗುರುತತ್ತ್ವಕ್ಕೆ ತಲುಪುತ್ತಿರುತ್ತದೆ’ ನಮ್ಮ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲವು ಸಹ ಶ್ರೀಗುರುಗಳಿಗೆ ತಿಳಿದಿರುತ್ತದೆ. ನಮ್ಮಲ್ಲಿ ಅರ್ಹತೆಯಿಲ್ಲದಿರುವಾಗಲೂ ನಾವು ಶ್ರೀಗುರುಗಳಲ್ಲಿ ಏನಾದರೂ ಬೇಡಿದರೆ ಅವರು ಅದನ್ನು ನೀಡಲಾರರು ಮತ್ತು ನಮ್ಮಲ್ಲಿ ಯೋಗ್ಯತೆಯಿದ್ದಲ್ಲಿ ಮತ್ತು ನಾವು ಏನನ್ನು ಕೇಳದಿದ್ದರೂ ಅದನ್ನು ಅವರು ಖಂಡಿತವಾಗಿಯೂ ನೀಡುತ್ತಾರೆ. ನಮಗೆ ಯಾವುದರ ಅವಶ್ಯಕತೆಯಿದೆ ಮತ್ತು ಉಪಯುಕ್ತವಾಗಿದೆ ಎಂದು ನಮಗಿಂತ ಶ್ರೀಗುರುಗಳಿಗೆ ಹೆಚ್ಚು ತಿಳಿದಿರುತ್ತದೆ. ಅವರು ನಿರಂತರವಾಗಿ ನಮ್ಮ ಹಿತಕ್ಕಾಗಿಯೇ ಚಡಪಡಿಸುತ್ತಿರುತ್ತಾರೆ. ಆದರೂ ನಮಗೆ ಶ್ರೀಗುರುಗಳ ಬಳಿ ಏನಾದರೂ ಬೇಡಲು ಇದ್ದಲ್ಲಿ ಭಗವಂತನೊಂದಿಗಿನ ಅಖಂಡ ಅನುಸಂಧಾನ. ಶ್ರೀಗುರುಗಳ ಅಖಂಡ ಸ್ಮರಣೆ, ಹಾಗೂ ಗುರುಸೇವೆಯ ಧ್ಯಾಸ ಹೀಗೆ ಆಧ್ಯಾತ್ಮಿಕವಾಗಿ ಬೇಡಬೇಕು. ಶಾಶ್ವತ ಆನಂದವನ್ನು ದೊರಕಿಸಿಕೊಡುವುದು ಇದುವೇ ಗುರುಗಳ ನಿಜವಾದ ಕಾರ್ಯವಾಗಿರುತ್ತದೆ. ಪ್ರಾರಬ್ಧದಿಂದ ದುಃಖವನ್ನು ಭೋಗಿಸಬೇಕಾಗಿದ್ದಲ್ಲಿ ಆ ದುಃಖದಾಯಕ ಪ್ರಸಂಗಗಳಲ್ಲಾಗುವ ದುಃಖವನ್ನು ಸಹಿಸುವ ಶಕ್ತಿಯನ್ನು ಮಾತ್ರ ಶ್ರೀಗುರುಗಳು ಖಂಡಿತವಾಗಿಯೂ ನೀಡುತ್ತಾರೆ; ಹಾಗಾಗಿ ಅದನ್ನು ಬೇಡಬಹುದು.

ಗುರುಕೃಪೆಯು ಹೇಗೆ ಕಾರ್ಯವನ್ನು ಮಾಡುತ್ತದೆ?

ನಮಗೇನು ಅನಿಸುತ್ತದೆಯೆಂದರೆ ಇಂತಹ ಒಂದು ವಿಷಯವನ್ನು ನಾನು ಚೆನ್ನಾಗಿ ಮಾಡಿದೆ ಅಥವಾ ಇಂತಹ ಒಂದು ವಿಷಯ ನನಗೆ ಚೆನ್ನಾಗಿ ಬರುತ್ತದೆ; ಆದರೆ ಇದೆಲ್ಲ ನಮ್ಮ ಭ್ರಮೆಯಾಗಿದೆ. ಶ್ರೀಗುರುಗಳೇ ನಮ್ಮಿಂದ ಆ ಕಾರ್ಯವನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಗುರುಗಳ ಕೃಪೆಯಿಂದಲೇ ಶಿಷ್ಯನ ಪ್ರಗತಿ ಆಗುತ್ತಿರುತ್ತದೆ. ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ? ಅದು ಸಂಕಲ್ಪ ಮತ್ತು ಅಸ್ತಿತ್ವ ಈ ಎರಡು ವಿಧಗಳಿಂದ ಕಾರ್ಯ ಮಾಡುತ್ತದೆ.

೧. ಸಂಕಲ್ಪ ಎಂದರೇನು? ಇಂತಿಂತಹ ಒಂದು ವಿಷಯ ನಡೆಯಲಿ ಎಂದು ವಿಚಾರವು ಉನ್ನತರ ಮನಸ್ಸಿಲ್ಲಿ ಬಂದ ತಕ್ಷಣ ಆ ಸಂಗತಿಯು ತನ್ನಿಂದತಾನೇ ಘಟಿಸುತ್ತದೆ. ಇದನ್ನು ಬಿಟ್ಟು ಬೇರೆ ಏನೂ ಮಾಡಬೇಕಾಗಿರುವುದಿಲ್ಲ. ೮೦% ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಉನ್ನತರ ಸಂದರ್ಭದಲ್ಲಿ ಅದು ಸಾಧ್ಯವಿರುತ್ತದೆ. ಶಿಷ್ಯನ ಆಧ್ಯಾತ್ಮಿಕ ಉನ್ನತಿಯಾಗಲಿ ಎಂಬ ಸಂಕಲ್ಪವು ಗುರುಗಳ ಮನಸ್ಸಿಗೆ ಬಂದೊಡನೆ ಶಿಷ್ಯನ ನಿಜವಾದ ಉನ್ನತಿಯಾಗುತ್ತದೆ. ಇದನ್ನೇ ಗುರುಕೃಪೆ ಎನ್ನುತ್ತಾರೆ.

೨. ಅಸ್ತಿತ್ವ (ಸೂಕ್ಷ್ಮಾತಿಸೂಕ್ಷ್ಮ) : ಅಸ್ತಿತ್ವದ ಹಂತದಲ್ಲಿ ಮನಸ್ಸಿನಲ್ಲಿ ಸಂಕಲ್ಪವನ್ನು ಸಹ ಮಾಡಬೇಕಾಗಿರುವುದಿಲ್ಲ. ಗುರುಗಳು ಕೇವಲ ಅಸ್ತಿತ್ವದಿಂದ, ಸಾನಿಧ್ಯದಿಂದ, ಅಥವಾ ಸತ್ಸಂಗದಿಂದ ಶಿಷ್ಯನ ಸಾಧನೆ ಮತ್ತು ಉನ್ನತಿಯು ತನ್ನಿಂದತಾನೆ ಆಗುತ್ತದೆ.

ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?

ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ನಾವು ಏನೇನು ಮಾಡಬೇಕು? ಉತ್ತಮ ಶಿಷ್ಯನಾಗಲು ಪ್ರಯತ್ನಿಸಬೇಕು. ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳವುದಲ್ಲ, ಗುರುಗಳು ಶಿಷ್ಯನೆಂದು ನಮ್ಮನ್ನು ಸ್ವೀಕರಿಸುವುದಿರುತ್ತದೆ. ಉತ್ತಮ ಶಿಷ್ಯನಾಗಲು ಗುರುಗಳಿಗೆ ಏನು ಇಷ್ಟವಾಗುತ್ತದೆ ಅದನ್ನು ನಾವು ಮಾಡಬೇಕು, ಅಂದರೆ ತಳಮಳದಿಂದ ಸಾಧನೆಯನ್ನು ಮಾಡಬೇಕು. ಗುರುಗಳ ಅಥವಾ ಸಂತರ ಕಾರ್ಯವೇನೆಂದರೆ ಸಂಪೂರ್ಣ ಸಮಾಜಕ್ಕೆ ಅಧ್ಯಾತ್ಮದ ಮಾಧುರ್ಯವನ್ನು ನೀಡಿ ಸಾಧನೆಯನ್ನು ಮಾಡಲು ಉದ್ಯುಕ್ತಗೊಳಿಸುವುದು ಅಂದರೆ ಅಧ್ಯಾತ್ಮಪ್ರಸಾರ ಮಾಡುವುದು. ನಾವು ಅಧ್ಯಾತ್ಮ ಪ್ರಸಾರದ ಕಾರ್ಯದಲ್ಲಿ ನಮ್ಮದೇ ರೀತಿಯಲ್ಲಿ ಜೀವ ತೇದು ಭಾಗವಹಿಸಿದ್ದಲ್ಲಿ ಗುರುಗಳಿಗೆ, ‘ಇವನು ತನ್ನವನು’ ಅನಿಸುತ್ತದೆ ಮತ್ತು ಗುರುಗಳ ಕೃಪೆಯಾಗುತ್ತದೆ.

ಶಿಷ್ಯನು ಯಾವ ಕೃತಿಯನ್ನು ಮಾಡಿದರೆ ಅವನಿಗೆ ಎಷ್ಟು ಶೇ. ಗುರುಕೃಪೆಯಾಗುತ್ತದೆ ?

ಶ್ರೀಗುರುಗಳ ದರ್ಶನದಿಂದ ೨ ಶೇ.
ಅಧ್ಯಾತ್ಮದ ಪ್ರಶ್ನೆಗಳನ್ನು ವಿಚಾರಿಸುವುದಕ್ಕೆ ೧೦ ಶೇ.
ಆಶ್ರಮದ ಸೇವೆಯನ್ನು ಮಾಡುವುದಕ್ಕೆ ೪೦ ಶೇ.
ಹಾಗೂ ಪೂರ್ಣವೇಳೆ ಪರಿಣಾಮಕಾರಿಯಾಗಿ ಪ್ರಸಾರ ಮಾಡುವುದರಿಂದ ೧೦೦ ಶೇ. ಗುರುಕೃಪೆಯು ಕಾರ್ಯನಿರತವಾಗುತ್ತದೆ.

ಗುರುಗಳು ಮತ್ತು ಶಿಕ್ಷಕರ ನಡುವಿನ ವ್ಯತ್ಯಾಸವೇನೆಂದರೆ ‘ಫೀಸ್’ ಅನ್ನು ನೀಡಿದೊಡನೆ ವಿದ್ಯಾರ್ಥಿ ಮತ್ತು ಶಿಕ್ಷಕರ ಲೆಕ್ಕಾಚಾರ ಪೂರ್ಣವಾಗುತ್ತದೆ. ಆದರೆ ಗುರುಗಳು ಆತ್ಮಜ್ಞಾನವನ್ನೇ ನೀಡುತ್ತಿರುವುದರಿಂದ ಗುರುಗಳಿಗಾಗಿ ಏನೇ ಮಾಡಿದರೂ ಅದು ಸ್ವಲ್ಪವೇ ಇರುತ್ತದೆ. ನಾವು ಈ ಮೊದಲಿನ ಸತ್ಸಂಗಗಳಲ್ಲಿ ಸತ್ಸೇವೆ ಅಂದರೆ ಅಧ್ಯಾತ್ಮಪ್ರಸಾರದ ಬೇರೆಬೇರೆ ಮಾಧ್ಯಮಗಳ ಬಗ್ಗೆ ತಿಳಿದುಕೊಂಡಿದ್ದೇವು. ತಮ್ಮಲ್ಲಿ ಕೆಲವರು ಸತ್ಸೇವೆಯನ್ನು ಪ್ರಾರಂಭಿಸಿರಬಹುದು. ಸತ್ಸೇವೆಯನ್ನು ನಿಯಮಿತವಾಗಿ ಹಾಗೂ ಜೀವ ಸವೆಸಿ ಮಾಡಲು ಪ್ರಯತ್ನಿಸೋಣ. ನಾವು ನಮ್ಮ ದೈನಂದಿನಿಯ ಕಾರ್ಯಗಳಿಂದ ಸಮಯವನ್ನು ತೆಗೆದು ಸತ್ಸೇವೆಯನ್ನು ಮಾಡಲು ಪ್ರಯತ್ನಿಸೋಣ. ಅದರಲ್ಲಿನ ಆನಂದವನ್ನು ಅನುಭವಿಸೋಣ. ಯಾರಿಗಾದರೂ ಹೆಚ್ಚು ಸಮಯ ಲಭ್ಯವಿದ್ದಲ್ಲಿ ಮತ್ತು ಆ ಸಮಯದಲ್ಲಿ ತಮಗೆ ಸತ್ಸೇವೆಯ ಆಯೋಜನೆ ಮಾಡಬೇಕಾಗಿದ್ದಲ್ಲಿ ಸನಾತನದ ಸಾಧಕರನ್ನು ಸಂಪರ್ಕಿಸಿ.

Leave a Comment