ಮಹಾಯುದ್ಧದ ಬಗ್ಗೆ ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾರವರ ಭವಿಷ್ಯವಾಣಿ ಮತ್ತು ಕ್ರೈಸ್ತ-ಮುಸ್ಲಿಂ ಸಂಘರ್ಷ

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ನಿಜವಾಗುವ ಹಾದಿಯಲ್ಲಿ

ನಾಸ್ಟ್ರಾಡಾಮಸ್

ಫ್ರಾನ್ಸ್‌ನ ವಿಷಯದಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ಧೋರಣೆಯು ಹೊಸ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ. ಇಸ್ಲಾಮಿನ ಮೂಲಭೂತವಾದಿಗಳಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ವಿಶ್ವದ ಗಮನ ಸೆಳೆದಾಗ, ವಿಶ್ವದಾದ್ಯಂತ ಮುಸ್ಲಿಮರು ಒಗ್ಗಟ್ಟಿನಿಂದ ಮ್ಯಾಕ್ರನ್‌ರನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಭಾರತದಲ್ಲಿಯೂ ಸಹ, ರಝಾ ಅಕಾಡೆಮಿಯಂತಹ ಮತಾಂಧ ಸಂಘಟನೆಗಳು ಮ್ಯಾಕ್ರನ್ ವಿರುದ್ಧ ಫತ್ವಾಗಳನ್ನು ಹೊರಡಿಸಿವೆ.

ಪ್ರಪಂಚದಾದ್ಯಂತದ ಧಾರ್ಮಿಕ ಮೂಲಭೂತವಾದಿಗಳು ತಮ್ಮ ದುಷ್ಕೃತ್ಯಗಳನ್ನು ಮರೆಮಾಚಿ ಮ್ಯಾಕ್ರನ್ ವಿರುದ್ಧ ಪ್ರಚಾರ ಮಾಡುತ್ತಿರುವ ರೀತಿ, ಕ್ರೈಸ್ತರ ಮತ್ತು ಇಸ್ಲಾಮಿನ ನಡುವೆ 8 ನೇ ಯುದ್ಧವು ಭವಿಷ್ಯದಲ್ಲಿ ಪುನರಾರಂಭಗೊಳ್ಳುವ ಸಾಧ್ಯತೆಯನ್ನು ಸೂಚಿಸುತ್ತದೆ. ಪ್ರಸಿದ್ಧ ಕಾಲಜ್ಞಾನಿ ನಾಸ್ಟ್ರಾಡಾಮಸ್ ಕೆಲವು ಶತಮಾನಗಳ ಹಿಂದೆಯೇ ಈ ಬಗ್ಗೆ ಭವಿಷ್ಯ ನುಡಿದಿದ್ದು, ಅದೀಗ ನಿಜವಾಗುವ ಹಾದಿಯಲ್ಲಿದೆ.

ನಾಸ್ಟ್ರಾಡಾಮಸ್ ಮಾಡಿರುವ ಭವಿಷ್ಯವಾಣಿ

ಪ್ರಸಿದ್ಧ ಕಾಲಜ್ಞಾನಿ ನಾಸ್ಟ್ರಾಡಾಮಸ್, ತನ್ನ ‘ಸೆಂಚುರೀಸ್’ (ಶತಮಾನಗಳು) ಪುಸ್ತಕದಲ್ಲಿ, ಮೂರನೇ ಮಹಾಯುದ್ಧ ಪ್ರಾರಂಭವಾಗುವ ಸಂಕೇತಗಳ ಬಗ್ಗೆ – ಅದರಂತೆ, ‘ಒಂಟೆಯು ರೈನ್ (Rhine) ಮತ್ತು ಡಾನ್ಯೂಬ್ (Danube) ನದಿಗಳ ನೀರನ್ನು ಕುಡಿದೂ ಕೂಡ ಪರಿತಪಿಸದಾಗ ಮಹಾಯುದ್ಧವು ಪ್ರರಂಭವಾಗುವುದು. ರೋನ್ (Rhone) ಮತ್ತು ಲ್ವಾರ್ (Loire) ತತ್ತರಿಸಿ ಹೋಗುವೆವು. ಆಗ ಅಲ್ಪ್ಸ ಪರ್ವತಗಳಲ್ಲಿ ಹುಂಜವೊಂದು ಅದಕ್ಕೆ ಕಡಿವಾಣ ಹಾಕುವುದು’ ಎಂದು ಬರೆದಿಟ್ಟಿದ್ದಾರೆ. ‘ಒಂಟೆ ಮುಸ್ಲಿಂ ರಾಷ್ಟ್ರಗಳನ್ನು ಪ್ರತಿನಿಧಿಸುತ್ತದೆ, ಅದು ಯುರೋಪಿಯನ್ ದೇಶಗಳಲ್ಲಿ ತಾಂಡವವನ್ನೇ ನಡೆಸಲಿದೆ. ಆರಂಭದಲ್ಲಿ ಕ್ರೈಸ್ತ ರಾಷ್ಟ್ರಗಳು ಸೋಲುತ್ತವೆ; ಆದರೆ ನಂತರ ಇಸ್ಲಾಮಿಕ್ ಸೈನ್ಯದ ನಾಶವಾಗಲಿದೆ’ ಎಂದು ನಾಸ್ಟ್ರಾಡಾಮಸ್ ಭವಿಷ್ಯವಾಣಿಯನ್ನು ಹಲವಾರು ಪುಸ್ತಕಗಳಲ್ಲಿ ವಿಶ್ಲೇಷಿಸಲಾಗಿದೆ. ‘ನಾಸ್ಟ್ರಾಡಾಮಸ್ ಮತ್ತು ಯುರೋಪಿನ ಮೇಲೆ ಇಸ್ಲಾಮಿಕ್ ಆಕ್ರಮಣ’ ಎಂಬುವುದು ಅತಿ ಹೆಚ್ಚು ಮಾರಾಟವಾದ ಪುಸ್ತಕ. ನಾಸ್ಟ್ರಾಡಾಮಸ್ ಭವಿಷ್ಯವಾಣಿಯನ್ನು ಈ ಪುಸ್ತಕದಲ್ಲಿ ವಿವರವಾಗಿ ನೀಡಲಾಗಿದೆ.

ಯುರೋಪಿಯನ್ ದೇಶಗಳ ಮೇಲೆ ಹಿಡಿತ ಸಾಧಿಸಲು ಮತಾಂಧರ ಪಿತೂರಿ

ಇಂದು ಯುರೋಪಿಯನ್ ರಾಷ್ಟ್ರಗಳು ಮತಾಂಧರ ನಿರ್ದಯ ದಾಳಿಯ ಬಲಿಪಶುಗಳಾಗಿವೆ. ಯುರೋಪಿನಲ್ಲಿ ಇಸ್ಲಾಮಿಕ್ ಆಕ್ರಮಣವು ಆಕ್ರಮಣಕಾರಿ ರೀತಿಯಲ್ಲಿ ಆಗುತ್ತಿಲ್ಲ, ಅತ್ಯಂತ ಸಂಯಮ ಮತ್ತು ಬುದ್ಧಿವಂತ ರೀತಿಯಲ್ಲಿ ನಡೆಯುತ್ತಿದೆ. ಮತಾಂಧರು ನಿರಾಶ್ರಿತರಾಗಿ ಯುರೋಪಿಯನ್ ದೇಶಗಳನ್ನು ಪ್ರವೇಶಿಸುತ್ತಿದ್ದಾರೆ. ನಂತರ ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತು, ಅಲ್ಲಿ ಅವರ ಜನಸಂಖ್ಯೆಯನ್ನು ಹೆಚ್ಚಿಸಿ, ಶರಿಯಾ ಪ್ರಕಾರ ಇಡೀ ದೇಶವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಯುರೋಪಿಯನ್ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಅವರ ಪಿತೂರಿ ಇದು.

ಧರ್ಮಾಂಧತೆಯಿಂದ ಮುಕ್ತಿಯ ಭರವಸೆ ಕೊಡುವ ನಾಯಕರನ್ನು ಆಯ್ಕೆ ಮಾಡುವತ್ತ ಯುರೋಪಿಯನ್ ಜನರ ಒಲವು !

ಯುರೋಪಿನಲ್ಲಿ ಫ್ರಾನ್ಸ್ ಅತಿ ಹೆಚ್ಚು, ಅಂದರೆ 65 ಲಕ್ಷ, ಮುಸ್ಲಿಮರನ್ನು ಹೊಂದಿದೆ, ಇದು ಅವರ ಒಟ್ಟು ಜನಸಂಖ್ಯೆಯ ಶೇಕಡಾ 7.5 ರಷ್ಟಿದೆ. ಜರ್ಮನಿಯಲ್ಲಿ ಮುಸ್ಲಿಮರ ಜನಸಂಖ್ಯೆ 52 ಲಕ್ಷವಿದ್ದು, ಒಟ್ಟು ಜನಸಂಖ್ಯೆಯ ಶೇಕಡಾ 5 ರಷ್ಟಿದೆ. ಬ್ರಿಟನ್ ನಲ್ಲಿ ಮುಸ್ಲಿಮರ ಜನಸಂಖ್ಯೆ 38 ಲಕ್ಷವಿದ್ದು, ಇದು ಜನಸಂಖ್ಯೆಯ ಶೇಕಡಾ 5 ರಷ್ಟಿದೆ. ಇದಲ್ಲದೆ, ಯುರೋಪಿಯನ್ ದೇಶಗಳಾದ ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರಿಯಾದಲ್ಲಿ ನಿರಾಶ್ರಿತರ ವೇಷದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ದರಿಂದ ಅಲ್ಲಿಯೂ ಉದ್ವಿಗ್ನತೆ ಹೆಚ್ಚುತ್ತಿದೆ. ಈ ದೇಶಗಳಲ್ಲಿ ಜನರು ‘ಧರ್ಮಾಂಧತೆಯಿಂದ ಮುಕ್ತಿಯ ಭರವಸೆ’ ನೀಡುವ ನಾಯಕರನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ.

ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯಿಂದಾಗಿ ಫ್ರಾನ್ಸ್ ತೊಂದರೆಯಲ್ಲಿದೆ

ಯುರೋಪಿನಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಫ್ರಾನ್ಸ್ ಹೊಂದಿದೆ, ಇದರಿಂದ ಅವರ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಕಳೆದ ಹಲವಾರು ದಶಕಗಳಲ್ಲಿ ಫ್ರಾನ್ಸ್‌ನಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿವೆ. ಜಿಹಾದಿ ಭಯೋತ್ಪಾದಕರು ಪ್ಯಾರಿಸ್ ಮಾತ್ರವಲ್ಲ ನೈಸ್, ಲೆಸ್ ಲಿಸ್, ಲಾ ಡಿಫೆನ್ಸ್, ಜೊಜೊ ಲೆ ಟೂರ್ಸ್, ಸೇಂಟ್ ಕ್ವೆಂಟಿನ್ ಫ್ಲೇವಿಯರ್, ಥೇಲ್ಸ್, ವೇಲೆನ್ಸ್, ಮಗನ್ವಿಲ್ಲೆ, ಲೆವಾಲೆ ಪೆರೆ, ​​ಮರ್ಸಿಯರ್, ಕಾರ್ಕಾಸ್ಸೊನ್ನೆ, ಸ್ಟ್ರಾಸ್‌ಬರ್ಗ್ ಮತ್ತು ಲಿಯಾನ್ ನಗರಗಳನ್ನು ಪದೇ ಪದೇ ಗುರಿಯಾಗಿಸಿಕೊಂಡಿದ್ದಾರೆ. ಇತ್ತೀಚಿಗೆ ನೈಸ್ ನಗರದ ಚರ್ಚ್‌ನ ಹೊರಗೆ ಮತ್ತೆ ಚಾಕುವಿನಿಂದ ದಾಳಿ ನಡೆಸಲಾಯಿತು, ಅದರಲ್ಲಿ ಮೂರು ಜನರು ಸಾವನ್ನಪ್ಪಿದರೆ ಹಲವಾರು ಜನರು ಗಾಯಗೊಂಡರು.

ಮತಾಂಧರ ಭಯದಿಂದ ಫ್ರಾನ್ಸ್‌ನಿಂದ ಇತರ ದೇಶಗಳಿಗೆ ಯಹೂದಿಗಳ ವಲಸೆ

ಫ್ರಾನ್ಸ್ನಲ್ಲಿ ನಿರಾಶ್ರಿತರು ಮೊಟ್ಟಮೊದಲು ಹಿಂಸಾಚಾರವನ್ನು ಯಹೂದಿ ಸಮುದಾಯದ ವಿರುದ್ಧ ನಡೆಸಿದ್ದರು. ಪ್ಯಾರಿಸ್ನ ಬಡ ಉಪನಗರಗಳಲ್ಲಿ ಯಹೂದಿಗಳು ಮತ್ತು ಮುಸ್ಲಿಮರು ಒಟ್ಟಿಗೆ ಬಾಳುತ್ತಿದ್ದರು. ಅಲ್ಲಿ ಯಹೂದಿಗಳ ಸೇರಿದಂತೆ ಇತರ ಅನೇಕ ಪೂಜಾ ಸ್ಥಳಗಳ ಮೇಲೆ ಹಲವಾರು ದಾಳಿಗಳು ನಡೆದವು. ಮತಾಂಧರು ಅನೇಕ ಯಹೂದಿಗಳನ್ನು ಕೊಂದರು. ನಂತರ ತಮ್ಮ ಪ್ರಾಣ ಉಳಿಸಲು ಇಸ್ರೇಲ್ ಮತ್ತು ಇತರ ದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಹೂದಿಗಳು ವಲಸೆ ಹೋಗಲು ಪ್ರಾರಂಭಿಸಿದರು.

ಮತಾಂಧರಿಂದ ‘ಚಾರ್ಲಿ ಹೆಬ್ಡೊ’ ನಿಯತಕಾಲಿಕೆಯ ಒಂದು ಡಜನ್ ವ್ಯಂಗ್ಯಚಿತ್ರಕಾರರ ಕೊಲೆ

ಯಹೂದಿಗಳನ್ನು ಭಯಭೀತಗೊಳಿಸಿದ ನಂತರ, ಮತಾಂಧರು ಫ್ರಾನ್ಸ್ನಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡರು. 2015 ರಲ್ಲಿ ಅವರು ಚಾರ್ಲಿ ಹೆಬ್ಡೊ ನಿಯತಕಾಲಿಕೆಗಾಗಿ ಕೆಲಸ ಮಾಡುವ ಒಂದು ಡಜನ್ ವ್ಯಂಗ್ಯಚಿತ್ರಕಾರರನ್ನು ಹತ್ಯೆಗೈದರು. ಇತ್ತೀಚಿಗೆ ಕೆಲವು ದಿನಗಳ ಹಿಂದೆ, ಚಿತ್ರವನ್ನು ತೋರಿಸಿದ್ದಕ್ಕಾಗಿ ಶಿಕ್ಷಕನೊಬ್ಬನನ್ನು ಕೊಲ್ಲಲಾಯಿತು. ಸ್ವಲ್ಪ ಸಮಯದ ನಂತರ, ಚರ್ಚ್ ಮೇಲೆ ದಾಳಿ ಮಾಡಲಾಯಿತು. ಅಂತಹ ಪರಿಸ್ಥಿತಿಯಲ್ಲಿ ಹೋರಾಟ ಕಟ್ಟಿಟ್ಟ ಬುತ್ತಿ.

ಜಿಹಾದಿಗಳ ವಿರುದ್ಧ ಕಠೋರ ಕಾನೂನು ರೂಪಿಸಲು ಫ್ರಾನ್ಸ್ ಸಿದ್ಧತೆ

ಇಂತಹ ಘಟನೆಗಳಿಂದ ಫ್ರಾನ್ಸ್‌ ಸಂಯಮ ಕಳೆದುಕೊಂಡಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಫ್ರಾನ್ಸ್ ಕಠಿಣ ಕಾನೂನು ರೂಪಿಸಲು ಸಿದ್ಧತೆ ನಡೆಸಿದೆ. ಫ್ರಾನ್ಸ್‌ನಲ್ಲಿ ‘ಇಸ್ಲಾಮಿಕ್ ಪ್ರತ್ಯೇಕತಾವಾದ’ವನ್ನು ಕೊನೆಗೊಳಿಸಲು ಕಠಿಣ ಕಾನೂನನ್ನು ಅಧ್ಯಕ್ಷ ಮ್ಯಾಕ್ರನ್ ಅವರು ಘೋಷಿಸಿದ್ದಾರೆ. ಫ್ರಾನ್ಸ್, ಮತಾಂಧರ ಮುಂದೆ ತಲೆಬಾಗಲು ನಿರಾಕರಿಸಿ, ಎಲ್ಲಾ ವಿವಾದಾತ್ಮಕ ವ್ಯಂಗ್ಯಚಿತ್ರಗಳನ್ನು ಸಾರ್ವಜನಿಕವಾಗಿ ತೋರಿಸುತ್ತಲೇ ಬಂದಿದೆ. ಅಷ್ಟೇ ಅಲ್ಲ, ಇತರ ದೇಶಗಳು ಫ್ರಾನ್ಸ್‌ನ ಪರವಾಗಿ ನಿಂತು ಚಾರ್ಲಿ ಹೆಬ್ಡೊ ತಯಾರಿಸಿದ ವ್ಯಂಗ್ಯಚಿತ್ರಗಳ ಸಾರ್ವಜನಿಕ ಪ್ರದರ್ಶನವನ್ನು ಸಹ ಪ್ರಾರಂಭಿಸಿದ್ದಾರೆ. ಇದನ್ನು ಮತಾಂಧರು ವಿರೋಧಿಸುತ್ತಾರೆ. ಫ್ರೆಂಚ್ ಜನರಲ್ಲಿ ಮತಾಂಧರ ಬಗ್ಗೆ ತೀವ್ರ ಆಕ್ರೋಶವಿದೆ. ಆದ್ದರಿಂದ ಫ್ರಾನ್ಸ್ ಅಧ್ಯಕ್ಷರು ಸಾರ್ವಜನಿಕ ಭಾವನೆಗಳನ್ನು ಹೆಚ್ಚು ಕಾಲ ನಿಯಂತ್ರಿಸಲು ಸಾಧ್ಯವಿಲ್ಲ.

ಪ್ರಬಲ ಫ್ರಾನ್ಸ್‌ಗೆ ಭಾರತದ ಬೆಂಬಲ

ಫ್ರಾನ್ಸ್ ವಿಶ್ವದ 5 ನೇ ಶಕ್ತಿಶಾಲಿ ದೇಶವಾಗಿದೆ. ಅವರು ರಾಫೆಲ್ ನಂತಹ ಅತ್ಯಾಧುನಿಕ ಫೈಟರ್ ಜೆಟ್ಗಳನ್ನು ನಿರ್ಮಿಸುತ್ತಾರೆ. ಅವರು 2 ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಸೈನಿಕರನ್ನು ಹೊಂದಿದ್ದಾರೆ. ಯಾವುದೇ ಮುಸ್ಲಿಂ ರಾಷ್ಟ್ರವು ಒಬ್ಬಂಟಿಯಾಗಿ ಫ್ರಾನ್ಸ್‌ನೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಇದಲ್ಲದೆ, ನೈತಿಕವಾಗಿ, ಫ್ರಾನ್ಸ್ ಯಾರ ಮೇಲೂ ದಾಳಿ ಮಾಡಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಕ್ರಮ ಕೈಗೊಂಡಿದೆಯಷ್ಟೇ. ಆದ್ದರಿಂದ ಭಾರತ ಕೂಡ ಫ್ರಾನ್ಸ್ ಅಧ್ಯಕ್ಷರನ್ನು ಬೆಂಬಲಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯವು, “ಕ್ರೂರ ಜಿಹಾದಿ ರೀತಿಯಲ್ಲಿ ಫ್ರೆಂಚ್ ಶಿಕ್ಷಕನೊಬ್ಬನನ್ನು ಕೊಲ್ಲಲಾಯಿತು. ಆದ್ದರಿಂದ ನಾವು ಶಿಕ್ಷಕರ ಕುಟುಂಬಕ್ಕೆ ಮತ್ತು ಫ್ರೆಂಚ್ ಸಾರ್ವಜನಿಕರಿಗೆ ನಮ್ಮ ಸಂತಾಪ ಸೂಚಿಸುತ್ತೇವೆ. ಯಾವುದೇ ಕಾರಣಕ್ಕಾಗಿ ಅಥವಾ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.

ಫ್ರಾನ್ಸ್‌ ಬೆಂಬಲಕ್ಕಿರುವ ಯುರೋಪ್, ಅಮೆರಿಕ ಮತ್ತು ಸುಸಂಸ್ಕೃತ ಜಗತ್ತು !

ಯುರೋಪಿಯನ್ ಯೂನಿಯನ್ ಮತ್ತು ಅಮೇರಿಕಾ ಮಾತ್ರವಲ್ಲ ವಿಶ್ವದ ಎಲ್ಲಾ ಸುಸಂಸ್ಕೃತ ರಾಷ್ಟ್ರಗಳು ಫ್ರಾನ್ಸ್‌ನ ಪರವಾಗಿವೆ. ಮತಾಂಧರು ಎಲ್ಲಾ ಸುಸಂಸ್ಕೃತ ರಾಷ್ಟ್ರಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಿದ್ದಾರೆ. ವಿಶೇಷವೆಂದರೆ ಯಾವುದೇ ಮುಸ್ಲಿಂ ರಾಷ್ಟ್ರವು ಯಾವುದೇ ರೀತಿಯ ನಿರಾಶ್ರಿತರನ್ನು ಸ್ವಾಗತಿಸುವುದಿಲ್ಲ. ಮುಸ್ಲಿಂ ರಾಷ್ಟ್ರಗಳಾದ ಸಿರಿಯಾ, ಘಾನಾ, ಲೆಬನಾನ್, ಇರಾಕ್‌ನ ನಿರಾಶ್ರಿತರು ಆಶ್ರಯ ಪಡೆಯಲು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಯುರೋಪಿಯನ್ ದೇಶಗಳಿಗೆ ಹೋಗುತ್ತಾರೆ; ಆದರೆ ಅವರು ಹತ್ತಿರದ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿಯಂತಹ ದೇಶಗಳತ್ತ  ನೋಡುವುದಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ಸಿಗದ ಆಶ್ರಯ ಅವರಿಗೆ ಮಾನವೀಯತೆಯನ್ನು ಮೆರೆಯಲು ಬದ್ಧವಾಗಿರುವ ಯುರೋಪಿಯನ್ ದೇಶಗಳಲ್ಲಿ ದೊರೆಯುತ್ತದೆ ಎಂದು ಅವರಿಗೆ ತಿಳಿದಿದೆ. ನಿರಾಶ್ರಿತರ ವೇಷದಲ್ಲಿ, ಮತಾಂಧರು ಮತ್ತು ಜಿಹಾದಿಗಳು ಯುರೋಪಿಯನ್ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದು, ಅನೇಕ ಸಮಸ್ಯೆಗಳನ್ನು ಉಂಟುಮಾಡಿದೆ.

ಬಾಬಾ ವಂಗಾ ಕೂಡ ನೀಡಿದ ಮಹಾ ಯುದ್ಧದ ಮುನ್ಸೂಚನೆ

ನಾಸ್ಟ್ರಾಡಾಮಸ್‌ನಂತೆ, ಬಲ್ಗೇರಿಯಾದ ಬಾಬಾ ವಂಗಾ ಕೂಡ ಮಹಾಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಭವಿಷ್ಯ ಹೇಳುವ ಬಲ್ಗೇರಿಯಾದ ಬಾಬಾ ವಂಗಾಗೆ ಕಣ್ಣಿಲ್ಲದಿದ್ದರೂ ಯುರೋಪಿನಲ್ಲಿ ಮುಸ್ಲಿಂ-ಕ್ರೈಸ್ತ ಸಂಘರ್ಷದ ಬಗ್ಗೆ ಸ್ಪಷ್ಟವಾದ ಮುನ್ಸೂಚನೆ ನೀಡಿದ್ದಾರೆ. “ಮಹಾ ಮುಸ್ಲಿಂ ಯುದ್ಧವು ಪ್ರಪಂಚದಾದ್ಯಂತ ಪ್ರಾರಂಭವಾಗಲಿದೆ. ಈ ಯುದ್ಧವು ಅರೇಬಿಯಾದ ಭೂಮಿಯಿಂದ ಪ್ರಾರಂಭವಾಗಲಿದೆ. ಈ ಯುದ್ಧವು ಸಿರಿಯಾದಲ್ಲಿ ಮತ್ತು ನಂತರ ಯುರೋಪಿನಲ್ಲಿ 2043 ರ ಅಂತ್ಯದವರೆಗೆ ನಡೆಯುವುದು”. ಬಾಬಾ ವಂಗಾ 1996 ರಲ್ಲಿ 85 ನೇ ವಯಸ್ಸಿನಲ್ಲಿ ನಿಧನರಾದರು. ಅಮೇರಿಕಾದ ಮೇಲಿನ 9/11 ದಾಳಿಯನ್ನು ಮತ್ತು 2004 ರ ಸುನಾಮಿಯ ಬಗ್ಗೆ ಅವಳು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಯುರೋಪಿಯನ್ ದೇಶಗಳು ಸೇರಿದಂತೆ ವಿಶ್ವದಾದ್ಯಂತ ಇಸ್ಲಾಂ ಮತ್ತು ಇತರ ಪಂಥಗಳ ನಡುವಿನ ಸಂಘರ್ಷವನ್ನು ನೋಡಿದಾಗ, ಈ ಭವಿಷ್ಯವಾಣಿಗಳು ನಿಜವಾಗುವ ಸಮಯ ಬಂದಿದೆ ಎಂದು ತೋರುತ್ತದೆ; ಏಕೆಂದರೆ ಇಡೀ ಜಗತ್ತು ಇಂದು ಮುಸ್ಲಿಮರು ಮತ್ತು ಮುಸ್ಲಿಮೇತರರು ಎಂದು ಎರಡು ಗುಂಪುಗಳಾಗಿ ವಿಂಗಡಿಸಲ್ಪಡುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ಭಾರತದ ಉಜ್ವಲ ಭವಿಷ್ಯದ ಬಗ್ಗೆ ಮುನ್ಸೂಚನೆ

ಅ. ‘ಸಮುದ್ರದ ಹೆಸರುಳ್ಳ ಧರ್ಮವು ವೇಗವಾಗಿ ಬೆಳೆಯುತ್ತದೆ ಮತ್ತು ಚಂದ್ರನನ್ನು ಅವಲಂಬಿಸಿರುವವರನ್ನು ಹೆದರಿಸುತ್ತದೆ’ – ನಾಸ್ಟ್ರಾಡಾಮಸ್

ಆ. ‘ಪೂರ್ವದಿಂದ ಬರುವ ಆ ನಾಯಕನು ತನ್ನ ದೇಶವನ್ನು ಬಿಟ್ಟು ಇಟಲಿ ಮತ್ತು ಫ್ರಾನ್ಸ್‌ನ ಬೆಟ್ಟಗಳನ್ನು ನೋಡುವನು. ಅವನು ಗಾಳಿ, ನೀರು ಮತ್ತು ಮಂಜನ್ನು ಮೀರಿ ಎಲ್ಲರನ್ನೂ ತನ್ನ ದಂಡದಿಂದ ಹೊಡೆಯುತವನು’.

(ಆಧಾರ – ಝೀ ನ್ಯೂಸ್ ಹಿಂದಿ ಜಾಲತಾಣ)

Leave a Comment